Tag: ಕಾವ್ಯ ಶಾ

  • ಹೊಸ ಫೋಟೋ ಶೂಟ್ ನಲ್ಲಿ ಮಿರಮಿರ ಮಿಂಚಿದ ಕಾವ್ಯ ಶಾ

    ಹೊಸ ಫೋಟೋ ಶೂಟ್ ನಲ್ಲಿ ಮಿರಮಿರ ಮಿಂಚಿದ ಕಾವ್ಯ ಶಾ

    ನ್ನಡ ಕಿರುತೆರೆ ಮತ್ತು ಹಿರಿತೆರೆಯಲ್ಲಿ ಸಾಕಷ್ಟು ಹೆಸರು ಮಾಡಿರುವ ನಟಿ ಕಾವ್ಯ ಶಾ (Kavya Shah) ತುಂಬಾ ದಿನಗಳ ನಂತರ ಹೊಸ ಫೋಟೋ ಶೂಟ್ (Photoshoot) ಮಾಡಿಸಿಕೊಂಡಿದ್ದಾರೆ. ಮದುವೆಯ ನಂತರದ ಮೊದಲ ಫೋಟೋ ಶೂಟ್ ಇದಾಗಿದ್ದು, ಆ ಫೋಟೋಗಳಲ್ಲಿ ಅವರು ಮಿರಿ ಮಿರಿ ಮಿಂಚಿದ್ದಾರೆ.

    ಕನ್ನಡ, ತಮಿಳು ಚಿತ್ರರಂಗದಲ್ಲಿ ಹಲವಾರು ಸಿನಿಮಾಗಳನ್ನು ಮಾಡಿರುವ ಕಾವ್ಯ ಶಾ ಬಂಗಾರ, ಚಿ.ಸೌ ಸಾವಿತ್ರಿ ಸೇರಿದಂತೆ ಹಲವಾರು ಧಾರಾವಾಹಿಗಳಲ್ಲಿ ಇವರು ನಟಿಸಿದ್ದಾರೆ. ಅಲ್ಲದೇ ಹಲವು ಮನರಂಜನೆ ವಾಹಿನಿಗಳಲ್ಲಿ ನಿರೂಪಕಿಯಾಗಿಯೂ ಕೆಲಸ ಮಾಡಿದ್ದಾರೆ.

    ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ, ಹಾಸ್ಯ ಸಂತಾನಂ. ಮುಗಿಲ್ ಪೇಟೆ ಸೇರಿದಂತೆ ಸಾಕಷ್ಟು ಚಿತ್ರಗಳಲ್ಲಿ ಕಾವ್ಯ ಶಾ ನಟಿಸಿದ್ದಾರೆ. ಹೆಸರಾಂತ ನಿರ್ದೇಶಕರ ಬಳಿ ಕೆಲಸ ಮಾಡಿದ ಹೆಮ್ಮೆ ಅವರದ್ದು. ಇದನ್ನೂ ಓದಿ:ಎಂಗೇಜ್‌ಮೆಂಟ್‌ ಸಂಭ್ರಮದಲ್ಲಿ ‘ಅಣ್ಣ- ತಂಗಿ’ ಸೀರಿಯಲ್‌ ನಟಿ ಅಖಿಲಾ ಪ್ರಕಾಶ್

    ಕಳೆದ ವರ್ಷವಷ್ಟೇ ಕಾವ್ಯ ಶಾ ಮದುವೆಯಾಗಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲೇ ಹಲವು ವರ್ಷಗಳಿಂದ ಕೆಲಸ ಮಾಡುತ್ತಿರುವ ವರುಣ್ ಜೊತೆ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ವರುಣ್ ಅವರಿಗೆ ಕನ್ನಡದ ಬಹುತೇಕ ಸ್ಟಾರ್ ನಟರ ಜತೆ ಒಡನಾಟವಿದೆ. ಜೀ ಕನ್ನಡ ವಾಹಿನಿ ಸೇರಿದಂತೆ ಕನ್ನಡದ ನಾನಾ ವಾಹಿನಿಗಳ ರಿಯಾಲಿಟಿ ಶೋಗಳಲ್ಲಿ ಕೆಲಸ ಮಾಡಿದ್ದಾರೆ ವರುಣ್.

    ಕಾವ್ಯ ಶಾ ಮತ್ತು ವರುಣ್ (Varun) ಭೇಟಿಯಾಗಿದ್ದು ಹತ್ತು ವರ್ಷಗಳ ಹಿಂದೆ ನಡೆದ ಫ್ಯಾಶನ್ ಶೋನಲ್ಲಿ. ಆಗ ಕಾವ್ಯ ಆ ಶೋ ಸ್ಪರ್ಧಿ. ಅಲ್ಲಿಂದ ಶುರುವಾದ ಇಬ್ಬರ ಸ್ನೇಹ, ಆನಂತರ ಪ್ರೇಮಕ್ಕೆ ತಿರುಗಿದೆ. ಆನಂತರ ಎರಡು ಕುಟುಂಬಗಳು ಒಂದಾಗಿ ಮದುವೆ ಮಾಡಿವೆ.

    ಮದುವೆ ಸಂದರ್ಭದಲ್ಲಿ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ್ದ ಕಾವ್ಯ ಶಾ, “ಹಲವು ವರ್ಷಗಳಿಂದ ನಾವಿಬ್ಬರೂ ಗೆಳೆಯರು. ಒಬ್ಬರಿಗೊಬ್ಬರನ್ನು ಅರ್ಥ ಮಾಡಿಕೊಂಡಿದ್ದೇವೆ. ಕುಟುಂಬದ ಒಪ್ಪಿಗೆ ಪಡೆದುಕೊಂಡು ಮದುವೆ ಆಗುತ್ತಿದ್ದೇವೆ. ಇದೊಂದು ರೀತಿಯಲ್ಲಿ ಲವ್ ಕಂ ಅರೇಂಜ್ಡ್ ಮದುವೆ’ ಎಂದಿದ್ದರು.

     

    ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ, ಮೂಕಜ್ಜಿಯ ಕನಸು, ತಮಿಳಿನ ತಾರೈ ತಪ್ಪಟ್ಟೈ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿರುವ ಕಾವ್ಯ, ಫಿಟ್ ನೆಸ್ ಬಗ್ಗೆ ತಮ್ಮದೇ ಆದ ಸ್ಟುಡಿಯೋ ಹೊಂದಿದ್ದಾರೆ. ಈ ಮೂಲಕ ಫಿಟ್ನೆಸ್ ಮಂತ್ರವನ್ನೂ ಅವರು ಅಭಿಮಾನಿಗಳ ಜತೆ ಸದಾ ಹಂಚಿಕೊಳ್ಳುತ್ತಲೇ ಇರುತ್ತಾರೆ.

  • ಕಾವ್ಯ ಶಾ- ನಿರ್ಮಾಪಕ ವರುಣ್ ಮದುವೆಯಲ್ಲಿ ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ

    ಕಾವ್ಯ ಶಾ- ನಿರ್ಮಾಪಕ ವರುಣ್ ಮದುವೆಯಲ್ಲಿ ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ

    ಸ್ಯಾಂಡಲ್‌ವುಡ್ ನಟಿ ಕಾವ್ಯ ಶಾ ಕೊನೆಗೂ ಹಸೆಮಣೆ ಏರಿದ್ದಾರೆ. ಇಂದು ಗುರುಹಿರಿಯರ ಸಮ್ಮುಖದಲ್ಲಿ ಕಾವ್ಯ ಶಾ ಮತ್ತು ವರುಣ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಭಾವಿ ಪತಿ ತಂದೆಯ ಅಕಾಲಿಕ ಮರಣದಿಂದ ಮದುವೆಯನ್ನು ಮುಂದೂಡಲಾಗಿತ್ತು. ಇದೀಗ ಈ ಜೋಡಿ ಹಸೆಮಣೆ ಏರಿದ್ದಾರೆ. ಈ ಸಂಭ್ರಮಕ್ಕೆ ಮೋಹಕತಾರೆ ರಮ್ಯಾ ಸಾಕ್ಷಿಯಾಗಿದ್ದಾರೆ.

    ಕಿರುತೆರೆ ಮತ್ತು ಹಿರಿತೆರೆಯಲ್ಲಿ ಗುರುತಿಸಿಕೊಂಡಿದ್ದ ಕಾವ್ಯ ಶಾ ಮತ್ತು ಸ್ಯಾಂಡಲ್‌ವುಡ್ ನಿರ್ಮಾಪಕ ವರುಣ್ ಇಂದು ಹಸೆಮಣೆ ಏರಿದ್ದಾರೆ. ವರುಣ್ ತಂದೆ ಅಕಾಲಿಕ ನಿಧನದಿಂದ ಮದುವೆ ಮುಂದೂಡಲಾಗಿತ್ತು. ಇಂದು ಗುರು ಹಿರಿಯರ ಸಮ್ಮುಖದಲ್ಲಿ ಹೊಸ ಬಾಳಿಗೆ ಈ ಜೋಡಿ ಕಾಲಿಟ್ಟಿದ್ದಾರೆ. ಈ ಜೋಡಿ ಶುಭಹಾರೈಸಲು ರಮ್ಯಾ ಕೂಡ ಬಂದಿದ್ದಾರೆ. ನವಜೋಡಿ ಶುಭ ಹಾರೈಸಿ ಬಂದಿದ್ದಾರೆ. ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಕಾವ್ಯ ಶಾ-ನಿರ್ಮಾಪಕ ವರುಣ್

    ಕಾವ್ಯ ಶಾ ಮತ್ತು ನಿರ್ಮಾಪಕ ವರುಣ್ ಇಂದು (ಜೂ.9) ಬೆಂಗಳೂರಿನ ನಂದಿ ಗ್ರೌಂಡ್ಸ್‌ನಲ್ಲಿ ಆಪ್ತರ ಸಮ್ಮುಖದಲ್ಲಿ ಸರಳವಾಗಿ ಮದುವೆ ಆಗಿದ್ದಾರೆ. ಮದುವೆಗೆ ಲೂಸ್ ಮಾದ ಯೋಗಿ ಮತ್ತು ನಿರ್ದೇಶಕ ಸಂತೋಷ್‌ ಆನಂದ್‌ ರಾಮ್ ಕೂಡ ಬಂದು ಶುಭ ಹಾರೈಸಿದ್ದಾರೆ. ವರುಣ್ ಮತ್ತು ರಮ್ಯಾ ಸಾಕಷ್ಟು ವರ್ಷಗಳಿಂದ ಪರಿಚಿಯವಿದ್ದು, ಸ್ನೇಹಿತನ ಮದುವೆಗೆ ಬಂದು ರಮ್ಯಾ ಶುಭ ಹಾರೈಸಿದ್ದರೆ. ಈ ವೇಳೆ ಸಾಕಷ್ಟು ಅಭಿಮಾನಿಗಳು ರಮ್ಯಾ ಜತೆ ಸೆಲ್ಫಿಗಾಗಿ ಮುಗಿಬಿದ್ದಿದ್ದಾರೆ.

  • ಎಪ್ರಿಲ್ 2ನೇ ವಾರದಲ್ಲಿ ನಟಿ ಕಾವ್ಯ ಶಾ ಮದ್ವೆ : ಮಾಧ್ಯಮ ಲೋಕದ ಹುಡುಗನ ಜತೆ ಸಪ್ತಪದಿ

    ಎಪ್ರಿಲ್ 2ನೇ ವಾರದಲ್ಲಿ ನಟಿ ಕಾವ್ಯ ಶಾ ಮದ್ವೆ : ಮಾಧ್ಯಮ ಲೋಕದ ಹುಡುಗನ ಜತೆ ಸಪ್ತಪದಿ

    ನ್ನಡ, ತಮಿಳು ಸೇರಿದಂತೆ ಹಲವು ಭಾಷೆಗಳ ಚಿತ್ರಗಳಲ್ಲಿ ನಟಿಸಿರುವ ಕಾವ್ಯ ಶಾ ಸದ್ಯದಲ್ಲೇ ಸಪ್ತಪದಿ ತುಳಿಯಲಿದ್ದಾರೆ. ಹತ್ತು ವರ್ಷಗಳಿಂದ ಪ್ರೀತಿಸುತ್ತಿದ್ದ ಗೆಳೆಯನನ್ನೇ ಅವರು ಬಾಳ ಸಂಗಾತಿಯನ್ನಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಏಪ್ರಿಲ್ ಎರಡನೇ ವಾರದಲ್ಲಿ ಬೆಂಗಳೂರಿನಲ್ಲಿ ವಿವಾಹ ಮಹೋತ್ಸವ ನಡೆಯಲಿದೆ. ಇದನ್ನೂ ಓದಿ : ಬೆಳಗಾವಿ ಭಾಗದ ದಿಟ್ಟ ಅಧಿಕಾರಿಯ ಪಾತ್ರದಲ್ಲಿ ಧನಂಜಯ್

    ಕಾವ್ಯ ಶಾ ಮದುವೆ ಆಗುತ್ತಿರುವ ಹುಡುಗ ವರುಣ್. ಮಾಧ್ಯಮ ಕ್ಷೇತ್ರದಲ್ಲೇ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಜತೆಗೆ ಕನ್ನಡದ ಬಹುತೇಕ ಸ್ಟಾರ್ ನಟರ ಜತೆ ಇವರಿಗೆ ಒಡನಾಟವಿದೆ. ಜೀ ಕನ್ನಡ ವಾಹಿನಿ ಸೇರಿದಂತೆ ಕನ್ನಡದ ನಾನಾ ವಾಹಿನಿಗಳ ರಿಯಾಲಿಟಿ ಶೋಗಳಲ್ಲಿ ಕೆಲಸ ಮಾಡಿದ್ದಾರೆ ವರುಣ್. ಇದನ್ನೂ ಓದಿ : Exclusive – ಸಿನಿಮಾವಾಗ್ತಿದೆ ಮಾಜಿ ಡಾನ್, ಹಾಲಿ ಕನ್ನಡಪರ ಹೋರಾಟಗಾರನ ಜೀವನ ಕಥೆ

    ಕಾವ್ಯ ಶಾ ಮತ್ತು ವರುಣ್ ಭೇಟಿಯಾಗಿದ್ದು ಹತ್ತು ವರ್ಷಗಳ ಹಿಂದೆ ನಡೆದ ಫ್ಯಾಶನ್ ಶೋನಲ್ಲಿ. ಆಗ ಕಾವ್ಯ ಆ ಶೋ ಸ್ಪರ್ಧಿ. ಅಲ್ಲಿಂದ ಶುರುವಾದ ಇಬ್ಬರ ಸ್ನೇಹ, ಆನಂತರ ಪ್ರೇಮಕ್ಕೆ ತಿರುಗಿದೆ. ಈಗ ಜತೆಯಾಗಿ ಬದುಕು ನಡೆಸಲು ಹೊರಟಿದೆ ಜೋಡಿ. ಇದನ್ನೂ ಓದಿ : ನನ್ನ ಮುಗಿಸ್ಬಿಡ್ತೀನಿ ಅಂತಾನೆ: ಗಂಭೀರ ಆರೋಪ ಮಾಡಿದ ನಟಿ ಸಂಜನಾ

    ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಕಾವ್ಯ ಶಾ, “ಹಲವು ವರ್ಷಗಳಿಂದ ನಾವಿಬ್ಬರೂ ಗೆಳೆಯರು. ಒಬ್ಬರಿಗೊಬ್ಬರನ್ನು ಅರ್ಥ ಮಾಡಿಕೊಂಡಿದ್ದೇವೆ. ಕುಟುಂಬದ ಒಪ್ಪಿಗೆ ಪಡೆದುಕೊಂಡು ಮದುವೆ ಆಗುತ್ತಿದ್ದೇವೆ. ಇದೊಂದು ರೀತಿಯಲ್ಲಿ ಲವ್ ಕಂ ಅರೇಂಜ್ಡ್ ಮದುವೆ’ ಎಂದರು. ಇದನ್ನೂ ನೋಡಿ : ನಟ ಚೇತನ್‌ಗೆ ನೀಡಿದ್ದ ಗನ್ ಮ್ಯಾನ್ ಹಿಂಪಡೆದ ಸರ್ಕಾರ

    ಈಗಾಗಲೇ ಮದುವೆಗೆ ಬೇಕಾದ ಎಲ್ಲ ಸಿದ್ಧತೆಯನ್ನು ಮಾಡಿಕೊಂಡಿದ್ದಾರಂತೆ ಕಾವ್ಯ. ಸದ್ಯದಲ್ಲಿಯೇ ಸ್ಯಾಂಡಲ್ ವುಡ್ ಮತ್ತು ಟಾಲಿವುಡ್  ಸಿಲಿಬ್ರಿಟಿಗಳ ಕೈಗೆ ಇವರ ಮದುವೆ ಆಹ್ವಾನ ಪತ್ರಿಕೆ ಕೈ ಸೇರಲಿದೆ. ಇದನ್ನೂ ಓದಿ : ಪ್ರಭಾಸ್‍ಗೆ ಮಿರ್ಚಿ ಪ್ರಶ್ನೆ ಕೇಳಿದ ದೀಪಿಕಾ ಪಡುಕೋಣೆ!

    ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ, ಮೂಕಜ್ಜಿಯ ಕನಸು, ತಮಿಳಿನ ತಾರೈ ತಪ್ಪಟ್ಟೈ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿರುವ ಕಾವ್ಯ, ಫಿಟ್ ನೆಸ್ ಬಗ್ಗೆ ತಮ್ಮದೇ ಆದ ಸ್ಟುಡಿಯೋ ಹೊಂದಿದ್ದಾರೆ. ಈ ಮೂಲಕ ಫಿಟ್ನೆಸ್ ಮಂತ್ರವನ್ನೂ ಅವರು ಅಭಿಮಾನಿಗಳ ಜತೆ ಸದಾ ಹಂಚಿಕೊಳ್ಳುತ್ತಲೇ ಇರುತ್ತಾರೆ.