Tag: ಕಾವ್ಯ ಗೌಡ

  • ಗೃಹ ಪ್ರವೇಶದ ಸಂಭ್ರಮದಲ್ಲಿ ‘ರಾಧಾ ರಮಣ’ ನಟಿ ಕಾವ್ಯ ಗೌಡ

    ಗೃಹ ಪ್ರವೇಶದ ಸಂಭ್ರಮದಲ್ಲಿ ‘ರಾಧಾ ರಮಣ’ ನಟಿ ಕಾವ್ಯ ಗೌಡ

    ರಾಧಾ ರಮಣ (Radha Ramana), ಮೀರಾ ಮಾಧವ, ಶುಭವಿವಾಹ ಸೀರಿಯಲ್‌ಗಳ ಮೂಲಕ ಮನೆ ಮಾತಾದ ನಟಿ ಕಾವ್ಯ ಗೌಡ (Kavya Gowda) ನೂತನ ಮನೆಗೆ ಕಾಲಿಟ್ಟಿದ್ದಾರೆ. ಗೃಹ ಪ್ರವೇಶದ (House Warming) ಸಂಭ್ರಮದಲ್ಲಿದ್ದಾರೆ ನಟಿ. ಈ ಕುರಿತ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.

    ‘ಬಕಾಸುರ’ ಚಿತ್ರ ಖ್ಯಾತಿಯ ನಟಿ ಕಾವ್ಯ ಅವರು ಉದ್ಯಮಿ ಸೋಮಶೇಖರ್ (Somashekar) ಜೊತೆ 2021ರಲ್ಲಿ ಮೇ 13ರಂದು ಹೊಸ ಬಾಳಿಗೆ ಕಾಲಿಟ್ಟಿದ್ದರು. ಗುರು ಹಿರಿಯರು ನಿಶ್ಚಯಿಸಿದ ಮದುವೆ ಇದಾಗಿದೆ. ಮದುವೆಯ ನಂತರ ನಟನೆಯಿಂದ ಬ್ರೇಕ್ ತೆಗೆದುಕೊಂಡು ಜ್ಯುವೆಲ್ಲರಿ ಡಿಸೈನರ್ ಆಗಿ ಕಾವ್ಯ ಗುರುತಿಸಿಕೊಂಡಿದ್ದಾರೆ. ಇದನ್ನೂ ಓದಿ:ತಪ್ಪೆಲ್ಲ ನನ್ನದೇ ಎಂದು ಮಾಜಿ ಪ್ರೇಯಸಿಯರ ಬಗ್ಗೆ ಮೌನ ಮುರಿದ ಸಲ್ಮಾನ್ ಖಾನ್

    ಮದುವೆಯಾಗಿ ಒಂದು ವರ್ಷವಾಗುವ ಮುಂಚೆಯೇ ಇದೀಗ ಹೊಸ ಮನೆಗೆ ಕಾವ್ಯ ಗೌಡ ದಂಪತಿ ಪಾದಾರ್ಪಣೆ ಮಾಡಿದ್ದಾರೆ. ಅದ್ದೂರಿಯಾಗಿ ಗೃಹ ಪ್ರವೇಶ ಮಾಡಿ ಮಿಂಚಿದ್ದಾರೆ. ನಟಿ ಕಾವ್ಯ ಕೂಡ ಮಸ್ತ್ ಆಗಿ ಫೋಟೋಶೂಟ್ ಮಾಡಿಸಿದ್ದಾರೆ. ಸವ್ಯಸಾಚಿ ಸೀರೆಯಲ್ಲಿ ನಟಿ ಕಾವ್ಯ ಮಿಂಚಿದ್ದಾರೆ.

    ಕಾವ್ಯ ದಂಪತಿ ಅವರ ಮನೆ ನೋಡುಗರ ಗಮನ ಸೆಳೆಯುತ್ತಿದೆ. ಮನೆಯಲ್ಲಿ ಎಲ್ಲಾ ಕಡೆ ಮರದ ತುಂಡಿನಿಂದ ವಿನ್ಯಾಸ ಮಾಡಿದ ಹಾಗೇ ಕಾಣುತ್ತಿದೆ. ಮನೆ ಕಟ್ಟಿಸಿದ ರೀತಿ ವಿಭಿನ್ನವಾಗಿದೆ. ನಟಿಯ ಹೊಸ ಮನೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇನ್ನೂ ನೆಚ್ಚಿನ ನಟಿಗೆ ಅಭಿಮಾನಿಗಳು ಶುಭಹಾರೈಸುತ್ತಿದ್ದಾರೆ.

  • ವೈವಾಹಿಕ ಜೀವನಕ್ಕೆ ಕಾಲಿಟ್ಟ ಕಿರುತೆರೆ ನಟಿ ಕಾವ್ಯ ಗೌಡ

    ವೈವಾಹಿಕ ಜೀವನಕ್ಕೆ ಕಾಲಿಟ್ಟ ಕಿರುತೆರೆ ನಟಿ ಕಾವ್ಯ ಗೌಡ

    ಬೆಂಗಳೂರು: ಕಿರುತೆರೆ ನಟಿ ಕಾವ್ಯ ಗೌಡ, ಉದ್ಯಮಿ ಸೋಮಶೇಖರ್ ಜೊತೆ ಸಪ್ತಪದಿ ತುಳಿದ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

    ಡಿಸೆಂಬರ್ 1ರಂದು ಸೋಮಶೇಖರ್, ಕಾವ್ಯ ಮದುವೆ ಬೆಂಗಳೂರಿನ ತಾಜ್ ವೆಸ್ಟೆಂಡ್ ಹೋಟೆಲ್‍ನಲ್ಲಿ ಅದ್ದೂರಿಯಾಗಿ ನಡೆದಿದೆ. ಈ ಕಾರ್ಯಕ್ರಮಕ್ಕೆ ಎರಡೂ ಕುಟುಂಬದವರು, ಆತ್ಮೀಯರು, ಸ್ನೇಹಿತರು, ರಾಜಕೀಯ ಗಣ್ಯರು, ಚಿತ್ರರಂಗದವರು ಪಾಲ್ಗೊಂಡಿದ್ದರು. ಇದನ್ನೂ ಓದಿ: ನಟಿ ಕಾವ್ಯಾ ಗೌಡ ಬ್ಯಾಚುಲರ್ ಪಾರ್ಟಿ

    ಬೆಂಗಳೂರಿನ ತಾಜ್ ವೆಸ್ಟೆಂಡ್ ಹೋಟೆಲ್‍ನಲ್ಲಿ ಕಾವ್ಯ ಗೌಡ ಆರತಕ್ಷತೆ ಕಾರ್ಯಕ್ರಮ ನಡೆದಿತ್ತು. ಸ್ಯಾಂಡಲ್‍ವುಡ್ ಮತ್ತು ಕಿರುತೆರೆ ಅನೇಕ ಕಲಾವಿದರು ಆಗಮಿಸಿನಿ ಕಾವ್ಯಾ, ಸೋಮಶೇಖರ್ ಜೋಡಿಗೆ ಶುಭ ಹಾರೈಸಿದ್ದಾರೆ. ಸಂಗೀತ್ ಮೆಹೆಂದಿ, ಅರಿಶಿಣ ಶಾಸ್ತ್ರ ಕೂಡ ಅದ್ದೂರಿಯಾಗಿ ನಡೆದಿದೆ. ಅವರ ಕನಸಿನಂತೆ ಕಾವ್ಯ ಗೌಡ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆಗೆ ಸಂಬಂಧಪಟ್ಟ ಎಲ್ಲ ಶಾಸ್ತ್ರಗಳಿಗೂ ಕೂಡ ಕಾವ್ಯ ಗೌಡ ತುಂಬ ವಿಭಿನ್ನವಾಗಿ ವಸ್ತ್ರ ವಿನ್ಯಾಸ ಮಾಡಿದ್ದಾರೆ. ಮದುವೆ ಶಾಸ್ತ್ರದ ಪ್ರತಿಯೊಂದು ಫೋಟೋವನ್ನು ಕಾವ್ಯ ಅವರು ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅಭಿಮಾನಿಗಳು ಶುಭಹಾರೈಸಿ ಕಾಮೆಂಟ್ ಮಾಡಿದ್ದಾರೆ. ಇದನ್ನೂ ಓದಿ:  ಪ್ರಿಯತಮನನ್ನು ಪರಿಚಯಿಸಿದ ನಟಿ ಕಾವ್ಯ ಗೌಡ

    ಮಿಸ್ಟರ್ ಎಸ್ ನೀವು ನನ್ನ ಉತ್ತಮ ಸ್ನೇಹಿತ ಮತ್ತು ನನ್ನ ಪ್ರೇಮಿಯಾಗಿದ್ದೀರಿ. ನಾನು ನಿನ್ನನ್ನು ಪ್ರೀತಿಸುತ್ತೇನೆ ಮಾ… ಎಂದು ಬರೆದುಕೊಂಡು ಇನ್‍ಸ್ಟಾಗ್ರಾಮ್‍ನಲ್ಲಿ ಬ್ಯಾಚುಲರ್ ಪಾರ್ಟಿಯ ಕಲರ್ ಕಲರ್ ಫೋಟೋವನ್ನು ಶೇರ್ ಮಾಡಿಕೊಂಡಿದ್ದರು. ಇದೀಗ ಮದುವೆಯ ಸಂತೋಷದ ಕ್ಷಣಗಳನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

  • ಮದ್ವೆಗೂ ಮುನ್ನ ಡೇಟಿಂಗ್ ಮಾಡೋದು ಸರಿ, ಆದ್ರೆ ಮಂಚಕ್ಕೆ ಹೋಗೋದು ಸರಿಯಿಲ್ಲ: ರಾಧಾರಮಣ ಖ್ಯಾತಿಯ ನಟಿ

    ಮದ್ವೆಗೂ ಮುನ್ನ ಡೇಟಿಂಗ್ ಮಾಡೋದು ಸರಿ, ಆದ್ರೆ ಮಂಚಕ್ಕೆ ಹೋಗೋದು ಸರಿಯಿಲ್ಲ: ರಾಧಾರಮಣ ಖ್ಯಾತಿಯ ನಟಿ

    – ನಿಮ್ಮ ಪ್ರೀತಿಯನ್ನ ಸಾಬೀತು ಪಡಿಸಲು ನೀವು ಬಟ್ಟೆ ಬಿಚ್ಚಬೇಕಿಲ್ಲ

    ಬೆಂಗಳೂರು: ನಿಮಗಾಗಿ ಸೇಫ್ಟಿ ಪ್ಯಾಡ್ ಖರೀದಿಸಬಹುದಾದ ಹುಡುಗನನ್ನು ಪಡೆಯಿರಿ, ಆದರೆ ಕಾಂಡೋಮ್ ಕೊಳ್ಳುವವನಲ್ಲ ಎಂದು ‘ರಾಧಾರಮಣ’ ಸೀರಿಯಲ್ ಖ್ಯಾತಿಯ ನಟಿ ಕಾವ್ಯ ಗೌಡ ಹೇಳಿದ್ದಾರೆ.

    ನಟಿ ಕಾವ್ಯ ಗೌಡ ಇತ್ತೀಚೆಗೆ ಮಹಿಳೆಯರ ಮೇಲಿನ ದೌರ್ಜನ್ಯ ಕುರಿತು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಸುದೀರ್ಘವಾಗಿ ಬರೆದುಕೊಂಡಿದ್ದಾರೆ. “ಆತ್ಮೀಯ ಹುಡುಗಿಯರೇ, ನಿಮ್ಮ ಪ್ರೀತಿಯನ್ನು ಸಾಬೀತುಪಡಿಸಲು ನಿಮ್ಮ ಬಟ್ಟೆಗಳನ್ನು ಎಂದಿಗೂ ಬಿಚ್ಚಬೇಕಾಗಿಲ್ಲ. ಅದೇ ರೀತಿ ಮದುವೆಗೂ ಮುನ್ನ ಡೇಟಿಂಗ್ ಹೋಗುವುದು ಸರಿ. ಆದರೆ ಮಂಚಕ್ಕೆ ಹೋಗುವುದು ಸರಿಯಿಲ್ಲ. ನಿಮಗಾಗಿ ಸೇಫ್ಟಿ ಪ್ಯಾಡ್‍ಗಳನ್ನು ಖರೀದಿಸಬಹುದಾದ ಹುಡುಗನನ್ನು ಪಡೆಯಿರಿ, ಕಾಂಡೋಮ್ ಕೊಳ್ಳುವವನಲ್ಲ” ಎಂದು ಕಾವ್ಯಗೌಡ ಹೇಳಿದ್ದಾರೆ.

    ಅಷ್ಟೇ ಅಲ್ಲದೇ “ನಿಮ್ಮನ್ನು ಹೋಟೆಲ್‍ಗಳಿಗೆ ಕರೆದುಕೊಂಡು ಹೋಗದೆ ತನ್ನ ಮನೆಗೆ ಕರೆದುಕೊಂಡು ಹೋಗುವ ಹುಡುಗನನ್ನು ಪಡೆಯಿರಿ. ನಿಮ್ಮ ಮುಟ್ಟಿನ ನೋವಿನ ಬಗ್ಗೆ ಕೇಳುವ ಹುಡುಗನನ್ನು ಪಡೆಯಿರಿ. ನಿಮ್ಮ ಬೆತ್ತಲೆಯನ್ನು ಕೇಳುವವನಲ್ಲ. ನಿಮ್ಮ ಮನಸ್ಸು ಮತ್ತು ಹೃದಯವನ್ನು ಅರ್ಥ ಮಾಡಿಕೊಳ್ಳುವ ಹುಡುಗನನ್ನು ಪಡೆಯಿರಿ. ನಿಮ್ಮ ದೇಹವನ್ನು ಬಯಸುವವನಲ್ಲ” ಎಂದು ಕಾವ್ಯ ಬರೆದುಕೊಂಡಿದ್ದಾರೆ.

    “ಗೌರವವು ಪ್ರೀತಿಯ ಅತ್ಯುತ್ತಮ ಅಭಿವ್ಯಕ್ತಿಗಳಲ್ಲಿ ಒಂದಾಗಿದೆ. ಒಬ್ಬ ನಿಜವಾದ ವ್ಯಕ್ತಿ ಎಂದಿಗೂ ಮಹಿಳೆಯನ್ನು ನೋಯಿಸುವುದಿಲ್ಲ. ಮಹಿಳೆ ಎಂದರೆ ಕೇವಲ ನಿಮಗೆ ಅಡುಗೆ ಮಾಡುವ, ನಿಮ್ಮ ಬಟ್ಟೆ ತೊಳೆಯುವ ಗೃಹಿಣಿ ಮಾತ್ರವಲ್ಲ. ಅವಳು ಗೃಹಿಣಿಯಾಗಿದ್ದು, ನಿಮ್ಮ ಮನೆಗೆ ಬಂದಮೇಲೆ ಇಡೀ ಕುಟುಂಬವನ್ನು ನೋಡಿಕೊಳ್ಳುತ್ತಾ, ಎಲ್ಲ ಜವಾಬ್ದಾರಿಯನ್ನು ನಿಭಾಯಿಸುತ್ತಾಳೆ. ಅಂತಹ ಮಹಿಳೆಯರಿಗೆ ಗೌರವ ತೋರಿಸುವುದು ದೊಡ್ಡ ಉಡುಗೊರೆಗಳಲ್ಲಿ ಒಂದಾಗಿದೆ” ಎಂದು ನಟಿ ಕಾವ್ಯ ಗೌಡ ಮಹಿಳೆಯರ ಬಗ್ಗೆ ಹೇಳಿದ್ದಾರೆ.

    ನಟಿ ಕಾವ್ಯ ಗೌಡ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ರಾಧಾರಮಣ’ ಸೀರಿಯಲ್‍ನಲ್ಲಿ ರಾಧಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಧಾರಾವಾಹಿಯಲ್ಲಿ ಕಾವ್ಯ ಗೌಡ ರಾಧಾ ಮಿಸ್ ಎಂತಲೇ ಖ್ಯಾತಿ ಪಡೆದುಕೊಂಡಿದ್ದಾರೆ. ಕಾವ್ಯಗೌಡ ಸೀರಿಯಲ್ ಮಾತ್ರವಲ್ಲದೇ ಕೆಲವು ಸಿನಿಮಾಗಳಲ್ಲೂ ನಟಿಸಿದ್ದಾರೆ.

    https://www.instagram.com/p/CE8KB0snzdp/?utm_source=ig_embed

  • ರಾಧಾ ಮಿಸ್ ಪಾತ್ರಕ್ಕೆ ಎಂಟ್ರಿ ಕೊಟ್ಟ ನಟಿ ಕಾವ್ಯ ಗೌಡ

    ರಾಧಾ ಮಿಸ್ ಪಾತ್ರಕ್ಕೆ ಎಂಟ್ರಿ ಕೊಟ್ಟ ನಟಿ ಕಾವ್ಯ ಗೌಡ

    ಬೆಂಗಳೂರು: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ರಾಧಾ ರಮಣ’ ಧಾರಾವಾಹಿಗೆ ಕಿರುತೆರೆ ನಟಿ ಕಾವ್ಯ ಗೌಡ ಅವರು ರಾಧಾ ಮಿಸ್ ಆಗಿ ಎಂಟ್ರಿ ಕೊಡುತ್ತಿದ್ದಾರೆ.

    ರಾಧಾ ಪಾತ್ರಧಾರಿಯ ನಟಿ ಶ್ವೇತಾ ಪ್ರಸಾದ್ ಧಾರಾವಾಹಿಯಿಂದ ಹೊರ ನಡೆದಿದ್ದಾರೆ. ಈಗ ಅವರ ಪಾತ್ರವನ್ನು ಕಿರುತೆರೆ ನಟಿ ಕಾವ್ಯ ಗೌಡ ನಿರ್ವಹಿಸಲಿದ್ದಾರೆ. ಮುಂದಿನ ಸಂಚಿಕೆಗಳಲ್ಲಿ ಧಾರಾವಾಹಿಯಲ್ಲಿ ಶ್ವೇತಾ ಅವರ ಬದಲು ಕಾವ್ಯ ಪ್ರೇಕ್ಷಕರ ಮುಂದೆ ಬರಲಿದ್ದಾರೆ.

    ಕಾವ್ಯ ಗೌಡ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಪ್ಯಾಟೆ ಮಂದಿ ಕಾಡಿಗೆ ಬಂದ್ರು’ ರಿಯಾಲಿಟಿ ಶೋ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದರು. ನಂತರ ‘ಶುಭ ವಿವಾಹ’, ‘ಮೀರಾ ಮಾಧವ’ ಹಾಗೂ ‘ಗಾಂಧಾರಿ’ ಧಾರಾವಾಹಿಯಲ್ಲಿ ನಟಿಸಿದ್ದರು.

    ಧಾರಾವಾಹಿಗಾಗಿ ನಟಿ ಶ್ವೇತಾ ಅವರು ಒಂದು ವರ್ಷಗಳ ಕಾಲ ಒಪ್ಪಂದಕ್ಕೆ ಸಹಿ ಹಾಕಿದ್ದರು. ಆದರೆ ಆ ಒಪ್ಪಂದ ಮುಗಿದು ವರ್ಷವೇ ಆಗಿತ್ತು. ಹೀಗಾಗಿ ಅವರು ಸೀರಿಯಲ್‍ನಿಂದ ಹೊರಬಂದಿದ್ದಾರೆ. ಶ್ವೇತಾ ಧಾರಾವಾಹಿ ಮಾತ್ರವಲ್ಲದೇ ಕೆಲವು ಸಿನಿಮಾಗಳಲ್ಲೂ ಅಭಿನಯಿಸಿದ್ದಾರೆ.

    ರಮಣ ಪಾತ್ರಧಾರಿಗೆ ಪತ್ನಿಯಾಗಿ ಶಾಂತ ಸ್ವಭಾವದ ಗೃಹಿಣಿಯಾಗಿ ನಟಿಸಿದ್ದರು. ಇದರಿಂದ ಅಪಾರ ಪ್ರೇಕ್ಷಕರು ಇವರನ್ನು ಮೆಚ್ಚಿಕೊಂಡಿದ್ದರು. ಸದ್ಯಕ್ಕೆ ನಟಿ ಶ್ವೇತಾ ಪ್ರಸಾದ್ ಅವರು ನಟನೆಯಿಂದ ಸ್ವಲ್ಪ ದಿನದವರೆಗೂ ಬ್ರೇಕ್ ತೆಗೆದುಕೊಂಡು ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.