Tag: ಕಾವ್ಯಾ ಮಾರಾನ್

  • ವಾರ್ನರ್ ಬಿಂದಾಸ್ ಬ್ಯಾಟಿಂಗ್ – ಟ್ರೋಲ್ ಕ್ವೀನ್ ಆದ ಕಾವ್ಯಾ ಮಾರನ್

    ವಾರ್ನರ್ ಬಿಂದಾಸ್ ಬ್ಯಾಟಿಂಗ್ – ಟ್ರೋಲ್ ಕ್ವೀನ್ ಆದ ಕಾವ್ಯಾ ಮಾರನ್

    ಮುಂಬೈ: ಹೈದರಾಬಾದ್ ಮತ್ತು ಡೆಲ್ಲಿ ನಡುವಿನ ಪಂದ್ಯದಲ್ಲಿ ಡೇವಿಡ್ ವಾರ್ನರ್ ಭರ್ಜರಿ ಬ್ಯಾಟಿಂಗ್ ಬಳಿಕ ಹೈದರಾಬಾದ್ ತಂಡದ ಒಡತಿ ಕಾವ್ಯಾ ಮಾರನ್ ನೆಟ್ಟಿಗರಗೆ ಆಹಾರವಾಗಿದ್ದಾರೆ.

    ಹೌದು ನಿನ್ನೆ ನಡೆದ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಡೆಲ್ಲಿಯ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಬ್ಯಾಟಿಂಗ್ ಬಿರುಗಾಳಿ ಎಬ್ಬಿಸಿದರು. ಹೈದರಾಬಾದ್ ಬೌಲರ್‌ಗಳನ್ನು ಹೈರಾಣಾಗಿಸಿದ ವಾರ್ನರ್ ತಮ್ಮ ಈ ಹಿಂದಿನ ಫ್ರಾಂಚೈಸ್ ವಿರುದ್ಧ ಸೇಡಿಗೆ ಬಿದ್ದಂತೆ ಬ್ಯಾಟಿಂಗ್ ನಡೆಸಿದರು. ಇದನ್ನೂ ಓದಿ: ವಾರ್ನರ್, ಪೊವೆಲ್ ಪರಾಕ್ರಮ – ಹೈದರಾಬಾದ್ ಹೈರಾಣ

    ವಾರ್ನರ್ ಬೌಂಡರಿ, ಸಿಕ್ಸರ್ ಸಿಡಿಸುತ್ತ ಹಾರಿ, ಚೀರಿ ಅಜೇಯ 92 ರನ್ (58 ಎಸೆತ, 12 ಬೌಂಡರಿ, 3 ಸಿಕ್ಸ್) ಚಚ್ಚಿ ಆರಂಭದಿಂದ ಕೊನೆಯ ಎಸೆತದವರೆಗೆ ಕಾಡಿದರು. ಈ ಪ್ರದರ್ಶನದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಸನ್ ರೈಸರ್ಸ್ ಹೈದರಾಬಾದ್ ಒಡತಿ ಕಾವ್ಯಾ ಮಾರನ್ ವಿರುದ್ಧ ನೆಟ್ಟಿಗರು ಕಿಡಿಕಾರಿದ್ದಾರೆ. ಇದನ್ನೂ ಓದಿ: ಆರ್‌ಸಿಬಿ ಅಭಿಮಾನಿಗೆ ಪ್ರಪೋಸ್ ಮಾಡಿ ಮನಗೆದ್ದ ಹುಡುಗಿ – ನೆಟ್ಟಿಗರು ಫುಲ್ ಆಕ್ಟಿವ್

    14ನೇ ಆವೃತ್ತಿ ಐಪಿಎಲ್‍ನಲ್ಲಿ ವಾರ್ನರ್ ಕಳಪೆ ಪ್ರದರ್ಶನ ತೋರಿದ ಬಳಿಕ ನಾಯಕತ್ವದಿಂದ ಕೆಳಗಿಳಿಸಿ ಕೆಲ ಪಂದ್ಯಗಳಿಂದ ವಾರ್ನರ್‌ಗೆ ಕೊಕ್ ನೀಡಲಾಗಿತ್ತು. ಆ ಬಳಿಕ 15ನೇ ಆವೃತ್ತಿ ಐಪಿಎಲ್ ಮೆಗಾ ಹರಾಜಿನಲ್ಲಿ ಹೈದರಾಬಾದ್ ತಂಡ ವಾರ್ನರ್‌ರನ್ನು ರಿಟೈನ್ ಮಾಡಿಕೊಳ್ಳದೆ ಹರಾಜಿಗೆ ಬಿಟ್ಟು ಕೊಟ್ಟಿತು. ಹರಾಜಿನಲ್ಲಿ ಡೆಲ್ಲಿ ತಂಡ ವಾರ್ನರ್‌ರನ್ನು ಖರೀದಿಸಿತು. ಇದೀಗ ವಾರ್ನರ್ ಡೆಲ್ಲಿ ಪರ ಅಬ್ಬರಿಸುತ್ತಿದ್ದಾರೆ. ಇದನ್ನೂ ಓದಿ: 10 ವಿಕೆಟ್ ಕಿತ್ತು ಇತಿಹಾಸ ಬರೆದ ಪಂದ್ಯದ ಜೆರ್ಸಿಯನ್ನು ಹರಾಜಿಗಿಟ್ಟ ಅಜಾಜ್ ಪಟೇಲ್

    ಕರ್ಮ ರೀಟರ್ನ್ ಹೊಡೆದಿದೆ. ಹೈದರಾಬಾದ್ ತಂಡ ವಾರ್ನರ್‌ಗೆ ಮಾಡಿದ ಅವಮಾನಕ್ಕೆ ಇದೀಗ ಸರಿಯಾದ ಶಿಕ್ಷೆ ಸಿಕ್ಕಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ವಿವಿಧ ಕಾಮೆಂಟ್‍ಗಳ ಮೂಲಕ ಹೈದರಾಬಾದ್ ತಂಡದ ಕಾಲೆಳೆದಿದ್ದಾರೆ.