Tag: ಕಾವ್ಯಾ ಗೌಡಾ

  • ನಟಿ ಕಾವ್ಯಾ ಗೌಡ ಬ್ಯಾಚುಲರ್ ಪಾರ್ಟಿ

    ನಟಿ ಕಾವ್ಯಾ ಗೌಡ ಬ್ಯಾಚುಲರ್ ಪಾರ್ಟಿ

    ಬೆಂಗಳೂರು: ಕಿರುತೆರೆ ನಟಿ ಕಾವ್ಯಾ ಗೌಡ ಅವರು ಡಿಸೆಂಬರ್ 2ಕ್ಕೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದು, ಇದೀಗ ಬ್ಯಾಚುಲರ್ ಪಾರ್ಟಿಯಲ್ಲಿ ಎಂಜಾಯ್ ಮಾಡಿರುವ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ಮಿಸ್ಟರ್ ಎಸ್ ನೀವು ನನ್ನ ಉತ್ತಮ ಸ್ನೇಹಿತ ಮತ್ತು ನನ್ನ ಪ್ರೇಮಿಯಾಗಿದ್ದೀರಿ. ನಾನು ನಿನ್ನನ್ನು ಪ್ರೀತಿಸುತ್ತೇನೆ ಮಾ… ಎಂದು ಬರೆದುಕೊಂಡು ಇನ್‍ಸ್ಟಾಗ್ರಾಮ್‍ನಲ್ಲಿ ಬ್ಯಾಚುಲರ್ ಪಾರ್ಟಿಯ ಕಲರ್ ಕಲರ್ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ.

    ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಕಾವ್ಯಾ ಮಾತನಾಡಿ ಮದುವೆಯ ಕುರಿತು ಕೆಲವು ಇಂಟ್ರೆಸ್ಟಿಂಗ್ ಮಾಹಿತಿ ಹಂಚಿಕೊಂಡಿದ್ದಾರೆ. ಡೆಸ್ಟಿನಿಯನ್ನು ನಾನು ನಂಬುತ್ತೇನೆ, ನಾನು ಏನು ಅಂದುಕೊಳ್ಳುವೆನೋ ಅದೇ ರೀತಿ ಆಗುತ್ತೆ. ಹಾಗೆಯೇ ಬ್ಯಾಚುಲರ್ ಪಾರ್ಟಿ ನಡೆದಿದ್ದು, ನನ್ನ ಹುಡುಗ, ಅಕ್ಕ ಆಯೋಜಿಸಿದ್ದರು ಎಂದಿದ್ದಾರೆ. ಇದನ್ನೂ ಓದಿ:   ಚಿಕ್ಕವಯಸ್ಸಿನ ಹುಡುಗನ ಜೊತೆ ಡೇಟಿಂಗ್ ಮಾಡುವ ಬಗ್ಗೆ ರಶ್ಮಿಕಾ ಉತ್ತರ ಏನು ಗೊತ್ತಾ?

    ನವೆಂಬರ್ 29ರಂದು ಬೆಂಗಳೂರಿನ ಜೆ ಡಬ್ಲ್ಯು ಮ್ಯಾರಿಯೇಟ್‍ನಲ್ಲಿ ಸಂಗೀತ್ ಮೆಹೆಂದಿ ನಡೆಯಲಿದೆ. ಡಿಸೆಂಬರ್ 1ರಂದು ಆರತಕ್ಷತೆ, ಡಿಸೆಂಬರ್ 2ರಂದು ತಾಜ್ ವೆಸ್ಟೆಂಡ್‍ನಲ್ಲಿ ಮದುವೆ ನಡೆಯಲಿದೆ. ಸೋಮಶೇಖರ್‍ರಂತಹ ಹುಡುಗನನ್ನು ಪಡೆಯಲು ನಾನು ಪುಣ್ಯ ಮಾಡಿದ್ದೇನೆ. ನಿಜಕ್ಕೂ ಅವರ ಗುಣ, ಸ್ವಭಾವ ನನಗೆ ತುಂಬ ಇಷ್ಟ. ನಾನು ಸಾಯಿಬಾಬಾ ಅವರನ್ನು ತುಂಬ ನಂಬುತ್ತೇನೆ. ನನ್ನ ಜೊತೆಗೆ ಎಲ್ಲರಿಗೂ ಒಳ್ಳೆಯದನ್ನು ಮಾಡು ಅಂತ ಕೇಳಿಕೊಳ್ಳುತ್ತೇನೆ, ಅಂತೆಯೇ ಒಳ್ಳೆಯದಾಗುತ್ತಿದೆ ಎಂದು ಭಾವಿಸುವೆ ಎಂದಿದ್ದಾರೆ. ಇದನ್ನೂ ಓದಿ:  ಪ್ರಿಯತಮನನ್ನು ಪರಿಚಯಿಸಿದ ನಟಿ ಕಾವ್ಯ ಗೌಡ

    ಕಳೆದ ಮೇ ತಿಂಗಳಿನಲ್ಲಿಯೇ ಮದುವೆ ನಡೆಯಬೇಕಿತ್ತು, ಕೊರೊನಾ ಎರಡನೇ ಅಲೆ ಇರೋದಕ್ಕೆ ಮದುವೆ ಮುಂದೂಡಲಾಗಿತ್ತು. ಕೊರೊನಾ ವೈರಸ್ ನಿಯಮಗಳನ್ನು ಪಾಲಿಸಿ ನಾವು ಮದುವೆಯಾಗುತ್ತಿದ್ದೇವೆ. ಸ್ಯಾಂಡಲ್‍ವುಡ್‍ನ ಕೆಲ ಕಲಾವಿದರು, ತಂತ್ರಜ್ಞರು, ಸ್ನೇಹಿತರನ್ನು ಆಹ್ವಾನಿಸಿದ್ದೇವೆ. ನಮ್ಮ ಎರಡು ಕುಟುಂಬದ ಸದಸ್ಯರು, ಆತ್ಮೀಯರು ಈ ಮದುವೆಯಲ್ಲಿ ಭಾಗಿಯಾಗಲಿದ್ದಾರೆ ಎಂದು ಮದುವೆಯ ಕುರಿತಾಗಿ ಕೆಲವು ಮಾಹಿತಿ ಹಂಚಿಕೊಂಡಿದ್ದಾರೆ.

  • ಪ್ರಿಯತಮನನ್ನು ಪರಿಚಯಿಸಿದ  ನಟಿ  ಕಾವ್ಯ ಗೌಡ

    ಪ್ರಿಯತಮನನ್ನು ಪರಿಚಯಿಸಿದ ನಟಿ ಕಾವ್ಯ ಗೌಡ

    ಬೆಂಗಳೂರು: ಕಿರುತೆರೆಯಲ್ಲಿ ನಟಿಸಿ ಎಲ್ಲರ ಮನೆಮಾತಾಗಿರುವ ಕಾವ್ಯ ಗೌಡ ತಮ್ಮದೆ ಆಗಿರುವ ವಿಶಿಷ್ಟವಾದ ಅಭಿನಯದ ಮೂಲಕವಾಗಿ ಎಲ್ಲರ ಗಮನವನ್ನು ಸೆಳೆದಿದ್ದರು. ಇದೀಗ ಮದುವೆಯಾಗುವ ಹುಡುಗನ ಫೋಟೋವನ್ನು ರಿವೀಲ್ ಮಾಡಿದ್ದಾರೆ.

    ತಾವು ಮದುವೆಯಾಗುತ್ತಿರುವ ಹುಡುಗನ ಕುರಿತಾಗಿ ತುಂಬಾ ಪ್ರಿತಿಯಿಂದ ಬರೆದುಕೊಂಡಿದ್ದಾರೆ. ಹಾಗೇ ದುಬೈನಲ್ಲಿ ಪ್ರಿಯಕರನೊಂದಿಗೆ ತಗೆದಿರುವ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಹುಡುಗನ ಕುರಿತಾಗಿ ಹೆಚ್ಚಿ ಮಾಹಿತಿ ಇಲ್ಲ. ಕಾವ್ಯಾ ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಶುಭಾಶಯಗಳ ಸುರಿಮಳೆಗೈದಿದ್ದಾರೆ.

    ನಿನ್ನೊಂದಿಗೆ ನನ್ನ ಹೊಸ ಜೀವನ ಶುರು ಮಾಡಲು ನಾನು ಕಾಯುತ್ತಿದ್ದೇನೆ. ನಿನ್ನ ಜೊತೆಗೆ ಕಳೆದ ಕ್ಷಣಗಳು ನನ್ನ ಜೀವನದ ಸುಂದರ ಕ್ಷಣಗಳಾಗಿವೆ. ನಿನ್ನಂತಹ ಉತ್ತಮ ವ್ಯಕ್ತಿಯನ್ನು ನಾನು ನನ್ನ ಜೀವನದಲ್ಲಿ ನೋಡಿಲ್ಲ. ನಿನ್ನ ಮುಗ್ಧತೆ, ತಾಳ್ಮೆ, ಪ್ರೀತಿ, ಕಾಳಜಿ ಎಲ್ಲ ನೋಡಿದರೆ ನಾನು ವಿಶ್ವದ ತುತ್ತತುದಿಯಲ್ಲಿದ್ದೇನೆ ಅಂತ ಅನಿಸತ್ತೆ. ನೀನು ಉತ್ತಮ ವ್ಯಕ್ತಿ. ನಾನು ಕಣ್ಣು ಮುಚ್ಚಿಯೂ ನಿನ್ನ ಜೊತೆಗೆ ಜೀವನ ಕಳೆಯುತ್ತೇನೆ ಅಂತ ನಂಬಿಕೆಯಿದೆ. ನನ್ನ ಜೀವನವನ್ನು ಇನ್ನಷ್ಟು ಸುಂದರ ಮಾಡಿರೋದಕ್ಕೆ, ವರ್ಣಮಯ ಮಾಡಿರೋದಕ್ಕೆ ಧನ್ಯವಾದಗಳು.

    ನಿನ್ನ ಜೊತೆಗೆ ಪ್ರತಿಕ್ಷಣ ಇರುತ್ತೇನೆ ಅಂತ ವಚನ ನೀಡುತ್ತೇನೆ. ನಿನ್ನ ಕನಸಿಗಾಗಿ ನಾನು ಕೂಡ ಹೋರಾಡುವೆ. ನಿನ್ನ ಹಾದಿಯಲ್ಲಿ ಏನು ಬರತ್ತೆ ಅನ್ನೋದು ಮುಖ್ಯವಲ್ಲ, ನಾನು ನಿನ್ನ ಪರ ನಿಂತುಕೊಳ್ಳುವೆ. ನಾನು ಸಾಯಿ ಬಾಬಾರನ್ನು ನಂಬುತ್ತೇನೆ, ಅವರು ಎಂದಿಗೂ ನನ್ನನ್ನು ಕೆಳಗೆ ಬೀಳಲು ಬಿಡಲ್ಲ.

    ಜೀವನದಲ್ಲಿ ಏನಾದರೂ ಉತ್ತಮವಾಗಿರೋದು ಸಿಗೋಕೆ ಕಾಯಬೇಕಂತೆ ಅಂತ ಹೇಳ್ತಾರೆ. ನೀನು ಸಿಗುವ ತನಕ ನಾನು ಕಾದಿರುವುದಕ್ಕೆ ಖುಷಿಯಿದೆ. ಇಂತಹ ಅದ್ಭುತ ವ್ಯಕ್ತಿ ಭೇಟಿ ಮಾಡೋಕೆ ಅವಕಾಶ ನೀಡಿದ ಜಗತ್ತಿಗೆ ಧನ್ಯವಾದಗಳು. ಜಗತ್ತು ನೀಡಿದ ದೊಡ್ಡ ಉಡುಗೊರೆ ನೀನು. ನಿನ್ನ ಜೊತೆ ಜೀವನ ಕಳೆಯಲು ಅವಕಾಶ ಮಾಡಿಕೊಟ್ಟಿದ್ದಕ್ಕೆ ಸಾಯಿಬಾಬಾಗೆ ಯಾವಾಗಲೂ ನಾನು ಋಣಿಯಾಗಿರುವೆ ಎಂದು ಬರೆದುಕೊಂಡು ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ.