ಶಿವಮೊಗ್ಗ: ಸ್ವಾಮೀಜಿ ಜೊತೆ ರಾಸಲೀಲೆ ಪ್ರಕರಣದಿಂದ ಸುದ್ದಿಯಾಗಿದ್ದ ನಟಿ ಕಾವ್ಯಾ ಆಚಾರ್ಯ ಸಹೋದರ ಕೃಷ್ಣ ಆಚಾರ್ಯ ಮೇಲೆ ಕೊಲೆ ಯತ್ನ ಹಾಗೂ ಅಮ್ಮ ನಾಗರತ್ನ ಅವರಿಗೆ ಅಪರಿಚಿತರು ಜೀವ ಬೆದರಿಕೆ ಹಾಕಿರೋ ಘಟನೆಯೊಂದು ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ.
ಇವರಿಬ್ಬರೂ ಗುರುವಾರ ರಾತ್ರಿ ಮಂಗಳೂರಿನಿಂದ ತೀರ್ಥಹಳ್ಳಿಗೆ ಕಾರಿನಲ್ಲಿ ಹಿಂದಿರುಗುತ್ತಿದ್ದರು. ಈ ವೇಳೆ ತೀರ್ಥಹಳ್ಳಿ ಸಮೀಪ ಶಿವರಾಜಪುರದ ಬಳಿ ಓಮ್ನಿಯಲ್ಲಿ ಬಂದಿದ್ದ ಐದು ಜನ ಅಪರಿಚಿತ ವ್ಯಕ್ತಿಗಳು ಇವರ ಕಾರು ಅಡ್ಡ ಹಾಕಿ ಕಾವ್ಯಾ ಆಚಾರ್ಯ ಎಲ್ಲಿ ಎಂದು ಪ್ರಶ್ನಿಸಿದ್ದಾರೆ.
ಬಳಿಕ ಈ ಕುರಿತು ಕೇಸು, ಕಂಪ್ಲೇಂಟ್ ಎಂದು ಹೋದಲ್ಲಿ ಇಡೀ ಕುಟುಂಬದ ಎಲ್ಲರನ್ನೂ ಕೊಲೆ ಮಾಡುವ ಬೆದರಿಕೆ ಹಾಕಿದ್ದಾರೆ. ಅಲ್ಲದೇ ಕೃಷ್ಣ ಅವರಿಗೆ ಚೂರಿಯಿಂದ ಇರಿದು ಕೊಲೆಗೆ ಕೂಡ ಯತ್ನಿಸಿದ್ದಾರೆ. ಈ ವೇಳೆ ಕೃಷ್ಣ ಅವರ ತಾಯಿ ಕೂಗಿಕೊಂಡಿದ್ದರಿಂದ ಬೆದರಿಕೆ ಹಾಕಿ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಸದ್ಯ ಗಾಯಾಳು ಕೃಷ್ಣ ತೀರ್ಥಹಳ್ಳಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಶಿವಮೊಗ್ಗ: ರಾಜ್ಯದ ಪ್ರತಿಷ್ಠಿತ ಮಠಗಳಲ್ಲೊಂದಾದ ಹುಣಸಮಾರನಹಳ್ಳಿಯ ಜಂಗಮ ಮಠದ ದಯಾನಂದ ಸ್ವಾಮಿ ರಾಸಲೀಲೆಯಲ್ಲಿ ಭಾಗಿಯಾಗಿದ್ದ ನಟಿ ಕಾವ್ಯ ಆಚಾರ್ಯ ಇದೇ ಮೊದಲ ಬಾರಿಗೆ ತನ್ನ ಹೇಳಿಕೆಯ ವಿಡಿಯೋ ಬಿಡುಗಡೆ ಮಾಡಿದ್ದಾರೆ.
ಈ ವಿಡಿಯೋ ಇದೀಗ ಪಬ್ಲಿಕ್ ಟಿವಿಗೆ ಲಭಿಸಿದ್ದು, ವಿಡಿಯೋದಲ್ಲಿ ಕಾವ್ಯಾ ಆಚಾರ್ಯ ರಾಸಲೀಲೆ ರಹಸ್ಯ ಬಿಚ್ಚಿಟ್ಟಿದ್ದಾರೆ. ಮೊದಲು ಮೀಡಿಯಾದವರಲ್ಲಿ ಕ್ಷಮೆ ಕೇಳಲು ಇಷ್ಟ ಪಡ್ತೀನಿ. ನನಗೆ ಹುಷಾರಿರಲಿಲ್ಲ. ಅಲ್ಲದೇ ನನಗೆ ಬೆದರಿಕೆ ಕೂಡ ಬಂದಿತ್ತು. ಹೀಗಾಗಿ ಘಟನೆಯ ಬಳಿಕ ಮಾಧ್ಯಮದ ಮುಂದೆ ಬರಲು ಆಗಲಿಲ್ಲ ಅಂತ ಹೇಳಿದ್ದಾರೆ.
ಇನ್ನು 2-3 ದಿನಗಳಲ್ಲೆ ಕೆಲವರ ಮುಖಾಂತರ ಬಂದು ನಾನು ಪ್ರಕರಣದ ಬಗ್ಗೆ ಬೆಂಗಳೂರಿನಲ್ಲಿ ಪೊಲೀಸರ ಬಳಿ ದೂರು ದಾಖಲಿಸುತ್ತೇನೆ. ಅದರಲ್ಲಿ 10 ಮಂದಿಯ ಹೆಸರು ಬರೆದಿದ್ದೀನಿ. ದೂರು ಕೊಟ್ಟ ಬಳಿಕ ನಾನು ಮಾಧ್ಯಮದ ಮುಂದೆ ಬಂದು ಯಾರ್ಯಾರು ಏನೇನು ಮಾಡಿದ್ದಾರೆ? ಬಲತ್ಕಾರವಾಗಿ ನನ್ನನ್ನು ಬಳಸಿಕೊಂಡಿದ್ದಾರೆ. ಇವುಗಳನ್ನೆಲ್ಲಾ ಬಹಿರಂಗಪಡಿಸುತ್ತೇನೆ ಅಂತ ಹೇಳಿದ್ರು.
ಇಂದು ನನ್ನ ಕುಟುಂಬವನ್ನು ಹೊರಗಡೆ ಓಡಾಡದ ಹಾಗೆ ಮಾಡಿಬಿಟ್ಟಿದ್ದಾರೆ. ಆದ್ರೆ ನಾನು ಸಾಯೋ ಸಮಯದಲ್ಲಿ ನನ್ನ ಅಣ್ಣ ಹಾಗೂ ದೊಡ್ಡಮ್ಮ ನನ್ನನ್ನು ಉಳಿಸಿ, ಧೈರ್ಯ ತುಂಬಿದ್ದಾರೆ. ನೀನು ಸಾಯಬಾರದು. ಈ ರೀತಿ ಮಾಡಿದವರ ವಿರುದ್ಧ ಪೊಲೀಸರಿಗೆ ದೂರು ನೀಡಲೇಬೇಕು ಅಂತ ಧೈರ್ಯ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಇದೀಗ ನಾನು ಧೈರ್ಯವಾಗಿದ್ದೀನಿ. ಈ ರೀತಿ ಯಾವ ಹೆಣ್ಣುಮಕ್ಕಳಿಗೂ ಆಗಬಾರದು ಅಂತ ಕಣ್ಣೀರು ಹಾಕಿದ್ದಾರೆ.
ಜಂಗಮ ಮಠದ ಪೀಠಾಧ್ಯಕ್ಷನಾಗಲು ಮುಂದಾಗಿದ್ದ ದಯಾನಂದ್ ಮಹಿಳೆಯ ಜೊತೆ ರಾಸಲೀಲೆಯಲ್ಲಿ ತೊಡಗಿರೋ ದೃಶ್ಯ ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು. ಈ ಸ್ವಾಮೀಜಿಯ ಜೊತೆ ರಾಸಲೀಲೆಯಲ್ಲಿ ತೊಡಗಿರುವುದು ನಟಿ ಕಾವ್ಯಾ ಆಚಾರ್ಯ ಎಂದು ಹೇಳಲಾಗಿತ್ತು.
ಈ ಹಿನ್ನೆಲೆಯಲ್ಲಿ ಪಬ್ಲಿಕ್ ಟಿವಿ ನಟಿ ಕಾವ್ಯಾರನ್ನು ಸಂಪರ್ಕಿಸಿದಾಗ, ನಾನು ಈಗ ತಾನೇ ಈ ಸುದ್ದಿ ಕೇಳಿದೆ. ಆದರೆ ಅದು ನಾನಲ್ಲ. ನಿಮಗೆ ಗೊತ್ತಿದೆ ಯಾರು ಬೇಕಾದರೂ ಹೀಗೆ ಮಾಡ್ತಾರೆ. ಯಾರೋ ಬೇಕಂತಾನೇ ನನ್ನ ಹೆಸರು ಪ್ರಸ್ತಾಪಿಸಿದ್ದಾರೆ. ಈ ರೀತಿ ಮಾಡುವವರು ಇರುತ್ತಾರೆ. ನನಗೆ ಯಾವ ಸ್ವಾಮೀಜಿಯೂ ಗೊತ್ತಿಲ್ಲ. ನನಗೂ ಇದಕ್ಕೂ ಏನು ಸಂಬಂಧ ಇಲ್ಲ ಎಂದು ಹೇಳಿದ್ದರು.
ದಯಾನಂದ ಹೇಳಿದ್ದೇನು?: ರಾಸಲೀಲೆ ರಹಸ್ಯ ವಿಡಿಯೋ ಮಾಡಿದ್ದು 2014 ಜನವರಿ 4 ರಂದು. ಇದಾದ ಬಳಿಕ 2014 ಜನವರಿ 6 ರಂದು ನನ್ನ ಬಳಿ ಡೀಲ್‍ಗೆ ಬಂದ್ರು. ನನ್ನ ಬಳಿ 5 ಕೋಟಿ ಕೊಡುವಂತೆ ಡಿಮ್ಯಾಂಡ್ ಮಾಡಿದ್ರು. ಆ ರೀತಿಯ ವಿಡಿಯೋ ಏನು ಇಲ್ಲ ಅಂದಾಗ ಮೊಬೈಲ್‍ನಲ್ಲಿ ವಿಡಿಯೋ ತೋರಿಸಿದ್ರು. ಬಸವರಾಜ್, ಮಹೇಶ್, ಹಿಮಾಚಲಪತಿ, ಸೂರ್ಯ, ಧರ್ಮೇಂದ್ರ ಅಲಿಯಾಸ್ ಶಂಕರ್ ಈ ಐವರೇ ನನ್ನ ಬಳಿ ದುಡ್ಡು ತೆಗೆದುಕೊಂಡಿದ್ದಾರೆ ಅಂತ ಸ್ವಾಮೀಜಿ ಹೇಳಿದ್ದ.
ಬೆಂಗಳೂರು: ದಯಾಯನಂದ ಸ್ವಾಮೀಜಿಯ ಜೊತೆ ರಾಸಲೀಲೆಯಲ್ಲಿ ತೊಡಗಿರೋದು ಸ್ಯಾಂಡಲ್ ವುಡ್ ನಟಿ ಕಾವ್ಯ ಆಚಾರ್ಯ ಎಂಬ ವದಂತಿ ವೀಡಿಯೋ ರಿಲೀಸ್ ಆದ ಹೊತ್ತಿನಿಂದಲೂ ಹರಿದಾಡ್ತಿತ್ತು.
ಆದರೆ ಈ ಬಗ್ಗೆ ನಟಿ ಕಾವ್ಯಾ ಆಚಾರ್ಯ ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದಾರೆ. ನಾನು ಈಗ ತಾನೇ ಈ ಸುದ್ದಿ ಕೇಳಿದೆ. ಆದರೆ ಅದು ನಾನಲ್ಲ. ನಿಮಗೆ ಗೊತ್ತಿದೆ ಯಾರು ಬೇಕಾದರೂ ಹೀಗೆ ಮಾಡ್ತಾರೆ. ಯಾರೋ ಬೇಕಂತಾನೇ ನನ್ನ ಹೆಸರು ಪ್ರಸ್ತಾಪಿಸಿದ್ದಾರೆ. ಈ ರೀತಿ ಮಾಡುವವರು ಇರುತ್ತಾರೆ. ನನಗೆ ಯಾವ ಸ್ವಾಮೀಜಿಯೂ ಗೊತ್ತಿಲ್ಲ. ನನಗೂ ಇದಕ್ಕೂ ಏನು ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ರಾಜ್ಯದ ಪ್ರತಿಷ್ಠಿತ ಮಠಗಳಲ್ಲಿ ಒಂದಾದ ಹುಣಸಮಾರನಹಳ್ಳಿಯ ಜಂಗಮ ಮಠದ ಪೀಠಾಧ್ಯಕ್ಷನಾಗಲು ಮುಂದಾಗಿದ್ದ ದಯಾನಂದ್ ಮಹಿಳೆಯ ಜೊತೆ ರಾಸಲೀಲೆಯಲ್ಲಿ ತೊಡಗಿರೋ ದೃಶ್ಯ ಇಂದು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ. ಈ ಸ್ವಾಮೀಜಿಯ ಜೊತೆ ರಾಸಲೀಲೆಯಲ್ಲಿ ತೊಡಗಿರುವುದು ನಟಿ ಕಾವ್ಯಾ ಆಚಾರ್ಯ ಎಂಬ ವದಂತಿ ಹರಡಿತ್ತು.