Tag: ಕಾವ್ಯಶ್ರೀ ಗೌಡ

  • ಬಿಗ್ ಬಾಸ್ ಮನೆಗೆ ನಾನು ಲವ್ ಮಾಡೋಕೆ ಬಂದಿಲ್ಲ: ಗೊಬ್ಬರಗಾಲಗೆ ಕಾವ್ಯಶ್ರೀ ವಾರ್ನಿಂಗ್

    ಬಿಗ್ ಬಾಸ್ ಮನೆಗೆ ನಾನು ಲವ್ ಮಾಡೋಕೆ ಬಂದಿಲ್ಲ: ಗೊಬ್ಬರಗಾಲಗೆ ಕಾವ್ಯಶ್ರೀ ವಾರ್ನಿಂಗ್

    ದೊಡ್ಮನೆ ಇದೀಗ ಒಂಭತ್ತು ದಿನಗಳನ್ನ ಪೂರೈಸಿ 10ನೇ ದಿನದತ್ತ ಕಾಲಿಟ್ಟಿದೆ. ದಿನದಿಂದ ದಿನಕ್ಕೆ ಬಿಗ್ ಬಾಸ್(Bigg Boss House) ಮನೆಯ ಆಟ ಹಲವು ತಿರುವುಗಳನ್ನ ಪಡೆದುಕೊಳ್ಳುತ್ತಿದೆ. ಪ್ರೀತಿ ,ಕೋಪ,ಜಗಳ ಎಲ್ಲವೂ ಹೈಲೆಟ್ ಆಗುತ್ತಿದೆ. ಇದೀಗ ವಿನೋದ್ ಗೊಬ್ಬರಗಾಲ(Vinod Gobbaragala) ಮಾತಿಗೆ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಜೊತೆಗೆ ಬಿಗ್ ಬಾಸ್ ಮನೆಗೆ ನಾನು ಲವ್ ಮಾಡೋಕೆ ಬಂದಿಲ್ಲ ಎಂಬ ಖಡಕ್ ವಾರ್ನಿಂಗ್ ಕೂಡ ಕೊಟ್ಟಿದ್ದಾರೆ.

    ಬಿಗ್ ಬಾಸ್ ಮನೆಯಲ್ಲಿ(Bigg Boss) ಕಳೆದಿರುವ ಒಂದೇ ವಾರಕ್ಕೆ ಅಸಮಾಧಾನದ ಹೊಗೆಯಾಡುತ್ತಿದೆ. ಅದರಲ್ಲೂ ಕಾವ್ಯಶ್ರೀ ಗೌಡ, ವಿನೋದ್ ಗೊಬ್ಬರಗಾಲಾ ತಮಾಷೆ ಮಾಡಲು ಹೋಗಿ, ಹೋಗಿ ಜಗಳ ಆಡ್ತಾ ಇದ್ದಾರೆ. ಕಾವ್ಯಶ್ರೀ(Kavyashree) ಕಣ್ಣೀರು ಹಾಕಿದ್ದಾರೆ. ಮನೆಮಂದಿಗೆ ರಂಜಿಸಲು ನಾಟಕ ಮಾಡುವಾಗ ಮುಸರೆ ತಿಕ್ಕುವವಳು, ಕಸ ಗುಡಿಸುವವಳನ್ನು ಯಾಕೆ ರಾಣಿ ಮಾಡಿದ್ದೀರಾ ಎಂದು ಗೊಬ್ಬರ ಹೇಳಿರುವ ಮಾತು ಕಾವ್ಯಶ್ರೀಗೆ ಬೇಸರವಾಗಿದೆ.

    ಬಳಿಕ ಊಟ ಮಾಡುವಾಗ ಕೂಡ ಈ ಜಟಾಪಟಿ ಮುಂದುವರೆದಿದೆ. ಬಾ ಅನ್ನ ಹಾಕು ಎಂದು ಗೊಬ್ಬರಗಾಲ ಆಡಿರುವ ಮಾತು ಕಾವ್ಯಶ್ರೀ ಕಣ್ಣೀರಿಗೆ ಕಾರಣವಾಗಿದೆ. ಗೌರವ ಕೊಡದೇ ಗೊಬ್ಬರಗಾಲ ಮಾತನಾಡುತ್ತಾರೆ. ನಾನು ಅವರಿಗೆ ಅಷ್ಟು ಸಲುಗೆ ಕೊಟ್ಟಿಲ್ಲ ಎಂದು ಮನೆಯವರ ಮುಂದೆ ಕಾವ್ಯಶ್ರೀ ಅಳಲು ತೋಗಿಕೊಂಡಿದ್ದಾರೆ. ಇದನ್ನೂ ಓದಿ:ಮಣಿರತ್ನಂ ನಿರ್ದೇಶನದ ‘ಪೊನ್ನಿಯಿನ್ ಸೆಲ್ವನ್’ ಮೂರು ದಿನದ ಗಳಿಕೆ 230 ಕೋಟಿಗೂ ಅಧಿಕ

    ಬಳಿಕ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳು ದುಷ್ಟ ಗುಣ ಬಗ್ಗೆ ಟ್ಯಾಗ್ ಲೈನ್ ವಿವರಣೆ ಕೊಡುವ ಟಾಸ್ಕ್ ಇತ್ತು. ಈ ವೇಳೆ ಕಾವ್ಯ ಕೋಪ ಮತ್ತು ಅಹಂಕಾರದ ಬೋರ್ಡ್ ಅನ್ನು ಗೊಬ್ಬರಗಾಲಗೆ ಕೊಟ್ಟು ವಿವರಿಸಿದ್ದರು. ಒಬ್ಬ ವ್ಯಕ್ತಿಗೆ ಮರ್ಯಾದೆ ಕೊಟ್ಟು ಮಾತನಾಡುವ ಗುಣವಿಲ್ಲ. ಕೇಳುವ ಪರಿಜ್ಞಾನವೂ ಇಲ್ಲ. ಬಿಗ್ ಬಾಸ್ ಮನೆಗೆ ನಾನು ಲವ್ ಮಾಡೋಕೆ ಬಂದಿಲ್ಲ. ಬದುಕು ಕಟ್ಟಿಕೊಳ್ಳಲು ಬಂದಿದ್ದೇನೆ. ನನಗೆ ಬದಕಲು ಬಿಡಿ ಎಂದು ವಿನೋದ್‌ಗೆ ಕಾವ್ಯಶ್ರೀ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಆಂಟಿ ಎಂದು ಕರೆದ ಗೊಬ್ಬರಗಾಲ ಮೇಲೆ ʻಮಂಗಳಗೌರಿʼ ಗರಂ

    ಆಂಟಿ ಎಂದು ಕರೆದ ಗೊಬ್ಬರಗಾಲ ಮೇಲೆ ʻಮಂಗಳಗೌರಿʼ ಗರಂ

    ಬಿಗ್ ಬಾಸ್ (Bigg Boss) ಮನೆಯ ಆಟ ಶುರುವಾಗಿ ಒಂದು ವಾರ ಕಳೆದಿದೆ. ಮನರಂಜನೆಗೆ ಯಾವುದೇ ಕೊರತೆ ಇಲ್ಲದ ಜಾಗ ಅಂದ್ರೆ ಅದು ಬಿಗ್ ಬಾಸ್ ಮನೆ ಎಂದೇ ಹೇಳಬಹುದು. ಹೀಗಿರುವಾಗ ರಂಜಿಸಲು ಹೋಗಿ ಕಾವ್ಯಶ್ರೀ(Kavyashree) ಜತೆ ಗೊಬ್ಬರಗಾಲ(Gobbaragala) ಎಡವಟ್ಟು ಮಾಡಿಕೊಂಡಿದ್ದಾರೆ.

    ವಿನೋದ್ ದೊಡ್ಮನೆಗೆ ಎಂಟ್ರಿ ಕೊಟ್ಟ ದಿನದಿಂದ ಕಾವ್ಯಶ್ರೀ(Kavyashree) ಅವರಿಗೆ ರೇಗಿಸುತ್ತಿದ್ರು. ಅದು ತಮಾಷೆಗಾಗಿ. ಅದಕ್ಕೆ ಕಾವ್ಯ ಸಹ ಟಾಂಗ್ ಕೊಡ್ತಾ ಇದ್ರು. ಅಂದಿನಿಂದಲೂ ತಮಾಷೆಗಾಗಿ ಎಲ್ಲ ನಡೆಯುತ್ತಿತ್ತು. ಗೊಬ್ಬರಗಾಲಾ ಮತ್ತು ಕಾವ್ಯಶ್ರೀ ಪ್ರಾಸ ಪದಗಳ ಮೂಲಕ ತಮಾಷೆ ಮಾಡಿಕೊಳ್ತಿದ್ರು. ಅದನ್ನು ನೋಡಿ ಮನೆಯವರೆಲ್ಲಾ ಎಂಜಾಯ್ ಮಾಡ್ತಾ ಇದ್ದರು. ಇದನ್ನೂ ಓದಿ:‘ಕಾಂತಾರ’ ಸಿನಿಮಾದ ಮೊದಲ ದಿನದ ಗಳಿಕೆ: ಸಿನಿ ಪಂಡಿತರ ಲೆಕ್ಕಾಚಾರ

     

    View this post on Instagram

     

    A post shared by BUD Pictures (@bud.picturess)

    ಮಂಗಳಗೌರಿ ಕಾವ್ಯ ಕೂಡ ವಿಕ್ರಾಂತ್ ರೋಣದಲ್ಲಿ(Vikantrona Film) ಇದ್ದಾರೆ ಗುಮ್ಮ. ವಿನೋದ್ ಗೊಬ್ಬರಗಾಲ ನನ್ನ ತಮ್ಮ ಎನ್ನುತ್ತಾಳೆ. ಮನೆಯವರೆಲ್ಲಾ ನಗುತ್ತಾರೆ. ಅವನು ಅದನ್ನು ತಮಾಷೆ ಆಗಿ ತೆಗೆದುಕೊಳ್ತಾನೆ.ನಂತರ ವಿನೋದ್ ಗೊಬ್ಬರಗಾಲಾ, ತಮ್ಮ ಎಂದಿದ್ದಕ್ಕೆ ಬೇಸರಗೊಂಡು ಇದು ಯಾರು ಇದು ಆಂಟಿ ಎಂದು ಹೇಳುತ್ತಾನೆ. ಅದಕ್ಕೆ ಕಾವ್ಯಶ್ರೀ ಕೋಪಗೊಂಡಿದ್ದಾರೆ. ಗೊಬ್ಬರಗಾಲ ಮಾತಿನಿಂದ ಕೋಪಮಾಡಿಕೊಂಡ ಕಾವ್ಯಶ್ರೀ ನಿನ್ಯಾಕೆ ನನ್ನ ಸುದ್ದಿ ಬರುತ್ತಿ. ನಿನ್ನ ಲಿಮಿಟ್ ಕ್ರಾಸ್ ಮಾಡಬೇಡಿ ಎನ್ನುತ್ತಾಳೆ.

    ಬಳಿಕ ಇವರಿಬ್ಬರ ಮಾತಿನ ಚಕಮಕಿ ಮಧ್ಯೆ ಅರುಣ್ ಸಾಗರ್ ಎಂಟ್ರಿ ಕೊಟ್ಟು ಇಬ್ಬರನ್ನು ಸಮಾಧಾನಿಸಿದ್ದಾರೆ. ಇನ್ನೂ ಮೊದಲ ವಾರದ ಕ್ಯಾಪ್ಟನ್ ಆಗಿ ವಿನೋದ್ ಆಯ್ಕೆ ಆಗಿದ್ದಾರೆ. ದಿವ್ಯಾ ಉರುಡುಗ ಅವರಿಗೆ ಟಫ್ ಕಾಂಪಿಟೇಷನ್ ಕೊಟ್ಟು ಗೊಬ್ಬರಗಾಲ ಗೆದ್ದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕಾವ್ಯಶ್ರೀ ರೂಪೇಶ್‌ಗೆ ಪ್ರಪೋಸ್ ಮಾಡಿದ್ರೆ ಸಾನ್ಯಗ್ಯಾಕೆ ಸಿಟ್ಟು?

    ಕಾವ್ಯಶ್ರೀ ರೂಪೇಶ್‌ಗೆ ಪ್ರಪೋಸ್ ಮಾಡಿದ್ರೆ ಸಾನ್ಯಗ್ಯಾಕೆ ಸಿಟ್ಟು?

    ಟಿವಿ ಬಿಗ್ ಬಾಸ್ (Bigg Boss) ಇದೀಗ ವೀಕ್ಷಕರ ಅಚ್ಚುಮೆಚ್ಚಿನ ಶೋಗಳಲ್ಲಿ ಒಂದಾಗಿದೆ. ಮನೆಯ ಜಗಳ ಕೂಡ ಅದೆಷ್ಟರ ಮಟ್ಟಿಗೆ ಹೈಲೆಟ್ ಆಗಿದೆಯೋ ಹಾಗೆಯೇ ಲವ್ ಸ್ಟೋರಿ ಕೂಡ ಸಖತ್ ಸದ್ದು ಮಾಡುತ್ತಿದೆ. ಕಾವ್ಯಶ್ರೀ (Kavyashree) ಜತೆಗಿನ ರೂಪೇಶ್ (Roopesh Shetty) ಫ್ರೆಂಡ್‌ಶಿಪ್ ಸಾನ್ಯಗೆ (Sanya) ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

    ಕಳೆದ ಓಟಿಟಿ ಸೀಸನ್‌ನಲ್ಲಿ ಸಾನ್ಯ ಮತ್ತು ರೂಪೇಶ್ ಜೋಡಿ ಹೈಲೆಟ್ ಆಗಿತ್ತು. ನಮ್ಮ ನಡುವೆ ಫ್ರೆಂಡ್‌ಶಿಪ್ ಅಷ್ಟೇ ಇದೆ ಎಂದು ಸಾರಿ ಸಾರಿ ಹೇಳಿದ್ದರು. ಆದರೆ ಕಾವ್ಯಶ್ರೀ ಎಂಟ್ರಿಯಿಂದ ಸಾನ್ಯ ಸ್ವಲ್ಪ ಬದಲಾಗಿದ್ದಾರೆ. ಈ ವಿಚಾರ ಮನೆ ಮಂದಿಯ ಗಮನಕ್ಕೂ ಬಂದಿದೆ.

    ಪ್ರೇಕ್ಷಕರಿಗೆ ಮನರಂಜನೆ ನೀಡಲು ಗುರೂಜಿ, ರೂಪೇಶ್ ಮತ್ತು ಕಾವ್ಯಶ್ರೀಗೆ ಪ್ರಪೋಸ್ ಮಾಡುವ ಟಾಸ್ಕ್ ನೀಡಿದ್ದರು. ಅದರಂತೆ ಕಾವ್ಯ ಸಖತ್ ಫನ್ನಿಯಾಗಿ ರೂಪೇಶ್‌ಗೆ ಪ್ರಪೋಸ್ ಮಾಡಿದ್ದಾರೆ. ಆಸ್ತಿ ಇದೆ ನನ್ನ ಒಪ್ಪಿಕೊಳ್ಳಿ ಎಂದು ಕಾವ್ಯಶ್ರೀ ಹೇಳಿದರೆ, ಹಾಗಾದ್ರೆ ನೋಡಬಹುದು ಎಂದು ರೂಪೇಶ್ ಪ್ರತಿಯುತ್ತರ ನೀಡಿದ್ದಾರೆ. ನನ್ನ ನಂಬರ್ ಫೀಡ್ ಮಾಡಿಕೊಳ್ಳಿ ಎಂದ ಕಾವ್ಯಗೆ, ನನ್ನ ಹಾರ್ಟ್ನಲ್ಲಿ ಫೀಡ್ ಮಾಡಿಕೊಳ್ಳುತ್ತೀನಿ ಎಂದಿದ್ದಾರೆ. ನನಗೆ ನಾಚಿಕೆ ಆಗುತ್ತಿದೆ ಎಂದು ಕಾವ್ಯಶ್ರೀ ನಾಚಿ ನೀರಾಗಿದ್ದಾರೆ. ಇದನ್ನೆಲ್ಲ ದೂರದಿಂದಲೇ ಸಾನ್ಯ ಗಮನಿಸುತ್ತಿದ್ದರು. ಇದನ್ನೂ ಓದಿ:ಯುವ ದಸರಾದಲ್ಲಿ ಅಪ್ಪು ನಮನ- ಗಂಧದ ಗುಡಿ ಟೀಸರ್ ನೋಡಿ ಕಣ್ಣೀರಿಟ್ಟ ಅಶ್ವಿನಿ

    ರೂಪೇಶ್ ಶೆಟ್ಟಿ ಮತ್ತು ಕಾವ್ಯ ಜೊತೆಗಿರುವುದು ಸಾನ್ಯಗೆ ಸಹಿಸಲಾಗುತ್ತಿಲ್ಲ ಎಂದು ಗುರೂಜಿ ಕೂಡ ಸಾಕಷ್ಟು ಬಾರಿ ಬಿಗ್ ಬಾಸ್ ಮನೆಯಲ್ಲಿ ಈಗಾಗಲೇ ಹೇಳಿದ್ದಾರೆ. ರೂಪೇಶ್ ಮೇಲಿರುವ ಈ ಪೊಸೆಸಿವ್ ಫಿಲ್ ಮುಂದಿನ ದಿನಗಳಲ್ಲಿ ಹೊಸ ಕಥೆಗೆ ಮುನ್ನುಡಿಯಾಗುತ್ತಾ ಎಂಬುದನ್ನ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • Bigg Boss Special- ಈ ಬಾರಿ ಬಿಗ್ ಬಾಸ್ 9 ಮನೆ ಪ್ರವೇಶ ಮಾಡಿರುವ ಖ್ಯಾತ ಕಿರುತೆರೆ ನಟಿಯರಿವರು

    Bigg Boss Special- ಈ ಬಾರಿ ಬಿಗ್ ಬಾಸ್ 9 ಮನೆ ಪ್ರವೇಶ ಮಾಡಿರುವ ಖ್ಯಾತ ಕಿರುತೆರೆ ನಟಿಯರಿವರು

    ಪ್ರತಿ ವರ್ಷವೂ ಬಿಗ್ ಬಾಸ್ (Bigg Boss Season 9) ಮನೆಯಲ್ಲಿರುವ ಸದಸ್ಯರಲ್ಲಿ ಅತೀ ಹೆಚ್ಚು ಕಿರುತೆರೆಯ ಲೋಕದವರೇ ಇರುತ್ತಾರೆ. ಈ ಬಾರಿಯೂ ಅದಕ್ಕೆ ಹೊರತಾಗಿಲ್ಲ. ಕಲರ್ಸ್ ಕನ್ನಡ ವಾಹಿನಿಯಲ್ಲೇ ಪ್ರಸಾರವಾದ ನಾನಾ ಧಾರಾವಾಹಿಗಳ ಫೇಮಸ್ ಕಲಾವಿದರು ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ಇರಲಿದ್ದಾರೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಈ ತಾರೆಯರು ಬಿಗ್ ಬಾಸ್ ಮನೆ ಪ್ರವೇಶ ಮಾಡಿದ್ದಾರೆ ಎಂದೂ ಹೇಳಲಾಗಿತ್ತು. ಯಾರೆಲ್ಲ ಕಲಾವಿದರು ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ಇರಲಿದ್ದಾರೆ ಎನ್ನುವುದು ಇವತ್ತಷ್ಟೇ ಗೊತ್ತಾಗಲಿದೆ. ಅದಕ್ಕೂ ಮುನ್ನ ಕೆಲವು ಹೆಸರುಗಳು ಹರಿದಾಡುತ್ತಿವೆ.

    ನೇಹಾ ಗೌಡ (ಲಕ್ಷ್ಮಿ ಬಾರಮ್ಮ)

    ಆರು ವರ್ಷಗಳ ಅಧಿಕ ಕಾಲ ಪ್ರಸಾರವಾದ ಲಕ್ಷ್ಮಿ ಬಾರಮ್ಮ (Lakshmi Baramma) ಧಾರಾವಾಹಿಯಲ್ಲಿ ಗೊಂಬೆ ಅಂತಾನೇ ಫೇಮಸ್ ಆಗಿರುವ ನಟಿ ನೇಹಾ ಗೌಡ (Neha Gowda). ಈ ಬಾರಿ ಅವರು ಬಿಗ್ ಬಾಸ್ ಮನೆ ಪ್ರವೇಶ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಕನ್ನಡದ ಹೆಸರಾಂತ ನಟಿ ಸೋನು ಗೌಡ ಅವರ ಸಹೋದರಿ ಕೂಡ ಇವರಾಗಿದ್ದಾರೆ. ನಾಲ್ಕು ವರ್ಷಗಳ ಹಿಂದೆಯೇ ಮದುವೆ ಆಗಿರುವ ನೇಹಾ ಗೌಡ, ಇದೀಗ ಧಾರಾವಾಹಿ ಲೋಕದಲ್ಲಿ ಅಷ್ಟೇನೂ ಸಕ್ರಿಯರಾಗಿಲ್ಲವಾದರೂ, ಹಲವಾರು ಧಾರಾವಾಹಿಗಳಲ್ಲಿ ನಟಿಸಿದ್ದರಿಂದ, ಅವರ ಅಭಿಮಾನಿಗಳ ಸಂಖ್ಯೆ ಕಡಿಮೆಯೇನೂ ಇಲ್ಲ. ಇದನ್ನೂ ಓದಿ : ಈ ಬಾರಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿರುವ ಎಕ್ಸ್‌ಕ್ಲೂಸಿವ್ ಸೆಲೆಬ್ರಿಟಿಗಳು

    ರಮೋಲಾ (ಕನ್ನಡತಿ)

    ಕಲರ್ಸ್ ಕನ್ನಡದಲ್ಲೇ ಪ್ರಸಾರವಾಗುತ್ತಿರುವ ಕನ್ನಡತಿ (Kannadathi)ಧಾರಾವಾಹಿಯ ಸಾನಿಯಾ ಪಾತ್ರದ ಮೂಲಕ ಫೇಮಸ್ ಆದವರು ರಮೋಲಾ. ಈ ಧಾರಾವಾಹಿಯು ಇವರಿಗೆ ಸಾಕಷ್ಟು ಹೆಸರು ತಂದು ಕೊಟ್ಟಿದೆ. ಅದೊಂದು ನೆಗೆಟಿವ್ ಪಾತ್ರವಾದರೂ, ರಮೋಲಾ (Ramola) ಒಪ್ಪಿಕೊಂಡು ಪಾತ್ರ ನಿರ್ವಹಿಸಿದ ರೀತಿ ಮೆಚ್ಚುವಂಥದ್ದು. ಈಗಾಗಲೇ ಮೂರ್ನಾಲ್ಕು ಸಿನಿಮಾಗಳಲ್ಲಿ ಅವರು ನಟಿಸಿದ್ದರೂ, ಈವರೆಗೂ ಒಂದೂ ಸಿನಿಮಾ ಬಿಡುಗಡೆ ಆಗಿಲ್ಲ. ಮೊನ್ನೆಯಷ್ಟೇ ಕನ್ನಡತಿ ಧಾರಾವಾಹಿಯಿಂದ ಈ ನಟಿ ಹೊರ ನಡೆದಿದ್ದರು. ಇದು ಬಿಗ್ ಬಾಸ್ ಮನೆಗೆ ಹೋಗುವ ಕಾರಣಕ್ಕಾಗಿಯೇ ಆದ ಘಟನೆ ಎಂದು ಹೇಳಲಾಗಿತ್ತು. ಅದೀಗ ನಿಜವಾಗಿದೆ. ಸದ್ಯ ಫ್ಯಾಷನ್ ಡಿಸೈನ್ ಕೋರ್ಸ್ ಕೂಡ ಮಾಡುತ್ತಿದ್ದಾರೆ ರಮೋಲಾ.

    ಕಾವ್ಯಶ್ರೀ ಗೌಡ (ಮಂಗಳಗೌರಿ ಮದುವೆ)

    ಮಂಗಳಗೌರಿ ಮದುವೆ ಧಾರಾವಾಹಿಯಲ್ಲಿ ಮಂಗಳಗೌರಿಯಾಗಿ ನಟಿಸಿದವರು ಕಾವ್ಯಶ್ರೀ ಗೌಡ (Kavyashree Gowda). ಕಥಾನಾಯಕಿಯ ಪಾತ್ರವೇ ಅದಾಗಿದ್ದರಿಂದ ಅತೀ ಬೇಗ ಜನರಿಗೆ ಹತ್ತಿರವಾದರು. ನಿರೂಪಕಿಯಾಗಿಯೂ ಕೆಲಸ ಮಾಡಿರುವ ಕಾವ್ಯಶ್ರೀ, ಮೂಲತಃ ಚನ್ನಪಟ್ಟಣದವರು. ಮನೆಯೇ ಮಂತ್ರಾಲಯ ಧಾರಾವಾಹಿ ಮೂಲಕ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟ ಕಾವ್ಯಶ್ರೀ, ಇದೀಗ ಬಿಗ್ ಬಾಸ್ ಮನೆಯನ್ನೂ ಪ್ರವೇಶ ಮಾಡಿದ್ದಾರೆ. ಈ ಹಿಂದೆ ಪುನೀತ್ ರಾಜ್ ಕುಮಾರ್ ಜೊತೆ ನಟಿಸುವ ಆಸೆಯನ್ನೂ ಅವರು ವ್ಯಕ್ತಪಡಿಸಿದ್ದರು. ಆದರೆ ಅದು ಕನಸಾಗಿಯೇ ಉಳಿಯಿತು.

    ಅಮೂಲ್ಯ ಗೌಡ (ಕಮಲಿ)

    ಕನ್ನಡ ಮತ್ತು ತೆಲುಗು ಧಾರಾವಾಹಿಯಲ್ಲಿ ಚಿರಪರಿಚಿತ ಹೆಸರು ಅಮೂಲ್ಯ ಗೌಡ (Amulya Gowda) ಅವರದ್ದು. ಕನ್ನಡದ ಪ್ರೇಕ್ಷಕರಿಗೆ ಕಮಲಿ (Kamali) ಆಗಿಯೇ ಪರಿಚಯವಾದವರು. ಅದೊಂದು ಸಾಂಪ್ರದಾಯಿಕ ಹುಡುಗಿಯ ಪಾತ್ರವಾಗಿದ್ದರಿಂದ ನೋಡುಗರಿಗೆ ಬೇಗನೇ ಹತ್ತಿರವಾದ ನಟಿ. ಸ್ವಾತಿ ಮುತ್ತು, ಪುನರ್ ವಿವಾಹ, ಅರಮನೆ ಸೇರಿದಂತೆ ಹಲವು ಕನ್ನಡ ಧಾರಾವಾಹಿಗಳಲ್ಲಿ ಇವರು ನಟಿಸಿದ್ದಾರೆ. ತೆಲುಗಿನ ಕಾರ್ತಿಕ ದೀಪಂ ಧಾರಾವಾಹಿಯಲ್ಲೂ ನಟಿಸಿದ್ದಾರೆ. ಇವರ ಪೂರ್ತಿ ಹೆಸರು ಅಮೂಲ್ಯ ಓಂಕಾರ ಗೌಡ. ಇದೀಗ ಅಮೂಲ್ಯ ಬಿಗ್ ಬಾಸ್ ಮನೆ ಪ್ರವೇಶ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]