Tag: ಕಾವೇರಿ ಬ್ಯಾಂಕ್

  • ಹಾಸನ ಕಾವೇರಿ ಗ್ರಾಮೀಣ ಬ್ಯಾಂಕ್‍ನಲ್ಲಿ ಕೆಲಸ ಮಾಡುತ್ತಿರುವ ಕೆಲವರು ಲೋ.. ನನ್ಮಕ್ಕಳು – ಹೆಚ್.ಡಿ.ರೇವಣ್ಣ

    ಹಾಸನ ಕಾವೇರಿ ಗ್ರಾಮೀಣ ಬ್ಯಾಂಕ್‍ನಲ್ಲಿ ಕೆಲಸ ಮಾಡುತ್ತಿರುವ ಕೆಲವರು ಲೋ.. ನನ್ಮಕ್ಕಳು – ಹೆಚ್.ಡಿ.ರೇವಣ್ಣ

    – ಜಿಲ್ಲಾಪಂಚಾಯತ್ ಪ್ರಗತಿ ಪರಿಶೀಲನಾ ಸಭೆಯಲ್ಲಿ ರೇವಣ್ಣ ಆಕ್ರೋಶ

    ಹಾಸನ: ಕಾವೇರಿ ಗ್ರಾಮೀಣ ಬ್ಯಾಂಕ್ ಕಾರ್ಯನಿರ್ವಹಣೆ ಬಗ್ಗೆ ಮಾಜಿ ಸಚಿವ ರೇವಣ್ಣ ಬಹಳ ಖಾರವಾಗಿ ಆಕ್ರೋಶ ವ್ಯಕ್ತಪಡಿಸಿದ್ದು, ಇಲ್ಲಿ ಕೆಲಸ ಮಾಡುತ್ತಿರುವ ಕೆಲವರು ಲೋ.. ನನ್ಮಕ್ಕಳು ಎಂದು ಅಶ್ಲೀಲ ಪದ ಬಳಕೆ ಮಾಡಿದ್ದಾರೆ.

    ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ರೇವಣ್ಣ ಅವರು, ಕಾವೇರಿ ಗ್ರಾಮೀಣ ಬ್ಯಾಂಕ್ ರೈತರ ಮನೆ ಹಾಳು ಮಾಡುತ್ತಿದೆ. ಜನರ ಹಣವನ್ನು ಲೂಟಿ ಮಾಡಿಕೊಂಡು ಜನರಿಗೆ ಅನ್ಯಾಯ ಮಾಡುತ್ತಿದೆ ನನ್ನ ಜೀವನದಲ್ಲಿ ಒಂದೇ ಗುರಿ ಕಾವೇರಿ ಗ್ರಾಮೀಣ ಬ್ಯಾಂಕ್ ಮುಚ್ಚಿಸುತ್ತೇನೆ. ಎಂದು ಅಲ್ಲಿನ ಕಾರ್ಯವೈಖರಿಯ ಬಗ್ಗೆ ಕೆಲ ಅಧಿಕಾರಿಗಳ ವಿರುದ್ಧ ಅಶ್ಲೀಲ ಪದಗಳನ್ನು ಬಳಸಿ ಏರುಧ್ವನಿಯ ಮೂಲಕ ಏಕವಚನದಲ್ಲಿಯೇ ರೇಗಾಡಿ ಬ್ಯಾಂಕ್ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.

    ಸಭೆಯಲ್ಲಿ ತಾಳ್ಮೆ ಕಳೆದುಕೊಂಡ ರೇವಣ್ಣ, ಬ್ಯಾಂಕಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆಲವರು ಲೋ.. ನನ್ನ ಮಕ್ಕಳು. ನಾನೇ ಜಾಮೀನು ಹಾಕಿದರು ಕೂಡ ಸಾಲ ಕೊಡಲ್ಲ ಅಂತಾರೆ. ಓರ್ವ ಮಾಜಿ ಪ್ರಧಾನಿ ತವರೂರಲ್ಲಿ ಇಂತಹ ಪರಿಸ್ಥಿತಿ ಇದೆ ಎಂದರೆ ಬೇರೆ ಕಡೆ ಯಾವ ರೀತಿ ಪರಿಸ್ಥಿತಿ ಇರಬಹುದು ಎಂದು ಬ್ಯಾಂಕ್ ನೌಕರರ ವಿರುದ್ಧ ಅವ್ಯಾಚ ಶಬ್ದಗಳ ಬಳಕೆ ಮಾಡಿ ತುಂಬಿದ ಸಭೆಯಲ್ಲಿಯೇ ರೇಗಾಡಿದರು.