Tag: ಕಾವೇರಿ ಪ್ರತಿಮೆ

  • ಕಾವೇರಿ ಪ್ರತಿಮೆ ನಿರ್ಮಾಣದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ: ಸಚಿವ ಪುಟ್ಟರಾಜು

    ಕಾವೇರಿ ಪ್ರತಿಮೆ ನಿರ್ಮಾಣದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ: ಸಚಿವ ಪುಟ್ಟರಾಜು

    ಮಂಡ್ಯ: ಕಾವೇರಿ ಪ್ರತಿಮೆ ನಿರ್ಮಾಣದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಸಣ್ಣ ನೀರಾವರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ಹೇಳಿದ್ದಾರೆ.

    ಪಾಂಡವಪುರ ತಾಲೂಕಿನ ಸುಂಕಾತಣ್ಣೂರು ಗ್ರಾಮದಲ್ಲಿ ಮಾತನಾಡಿದ ಸಚಿವರು, ಇಂತಹ ಪ್ರತಿಭಟನೆಯಿಂದಾಗಿಯೇ ಜಿಲ್ಲೆಗೆ ಯಾವುದೇ ಐಟಿ ಕಂಪನಿ, ದೊಡ್ಡ ಕೈಗಾರಿಕೆಗಳು ಬರುತ್ತಿಲ್ಲ. ಇದು ನಮ್ಮ ಜಿಲ್ಲೆಗೆ ತಟ್ಟಿರುವ ಶಾಪವಾಗಿದೆ ಎಂದು ಕಿಡಿಕಾರಿದರು. ಇದನ್ನು ಓದಿ: ಕಾವೇರಿ ಪ್ರತಿಮೆ ನಿರ್ಮಾಣದಿಂದ ಕೆಆರ್‌ಎಸ್ ಗೆ ಕಂಟಕ – ಸರ್ಕಾರದ ನಿರ್ಧಾರಕ್ಕೆ ಎಂಜಿನಿಯರ್ಸ್ ವಿರೋಧ

    ಆಣೆಕಟ್ಟು ನಿರ್ಮಾಣವಾದ ಬಳಿಕವೂ ಡ್ಯಾಂ ಸಮೀಪದ ಪ್ರದೇಶದಲ್ಲಿ ಬ್ಲಾಸ್ಟ್ ಮಾಡಿ ಕಾಲುವೆ, ವಿವಿಧ ಕಾಮಗಾರಿಗಳನ್ನು ಮಾಡಲಾಗಿದೆ. ದೊಡ್ಡ ಸುರಂಗವನ್ನೇ ನಿರ್ಮಾಣ ಮಾಡಿರುವಾಗ 30 ಅಡಿ ಗುಂಡಿ ತೋಡಿ ಪ್ರತಿಮೆ ನಿಲ್ಲಿಸುವುದು ದೊಡ್ಡ ವಿಷಯವೇ? ಪರಿಣಿತ ಎಂಜಿನಿಯರ್ ಗಳನ್ನು ಕರೆಸಿಕೊಂಡು, ಚರ್ಚೆ ಮಾಡಿಯೇ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಖಡಕ್ ಆಗಿ ಪ್ರತಿಕ್ರಿಯಿಸಿದರು.

    ಪ್ರತಿಭಟನಾಕಾರರು ಹೇಳುವ ರಾಜ್ಯ, ದೇಶ ಯಾವುದಾದರೂ ಸರಿ ಅಲ್ಲಿಂದ ತಜ್ಞರ ತಂಡವನ್ನು ಕರೆಸುತ್ತೇವೆ. ಅವರಿಂದಲೇ ಕಾವೇರಿ ಪ್ರತಿಮೆ ನಿರ್ಮಾಣ ಮಾಡಿಸಲಾಗುತ್ತದೆ. ಇಂದು ಜಗತ್ತಿನಲ್ಲಿ ಅನೇಕ ತಜ್ಞರ ತಂಡಗಳಿವೆ ಎಂದ ಸಚಿವರು, ಕಾವೇರಿ ಪ್ರತಿಮೆ ನಿರ್ಮಾಣದಲ್ಲಿ ರೈತರ ಜಮೀನು ವಶಪಡಿಸಿಕೊಳ್ಳುವ ಪ್ರಶ್ನೆಯೇ ಇಲ್ಲ. ಸರ್ಕಾರದ ಜಾಗವೇ 400 ಎಕರೆಯಿದೆ. ಡ್ಯಾಂ ಸಮೀಪದಲ್ಲಿ ನನ್ನದೂ 10 ಎಕರೆ ಜಾಗವಿದೆ. ಒಂದು ವೇಳೆ ಸರ್ಕಾರ ಕೇಳಿದರೆ ನಾನೂ ಕೂಡ ಕೊಡಬೇಕಾಗುತ್ತದೆ. ನಾವು ಪುಕ್ಸಟ್ಟೆ ಕೊಡುತ್ತೇವಾ ಎಂದು ಸಚಿವರು ಪ್ರಶ್ನಿಸಿದರು.

    ರಾಜ್ಯ ಸರ್ಕಾರ ರೈತ ಪರವಾದ ಸರ್ಕಾರ. ರೈತರ ಮನಸ್ಸಿಗೆ ಎಳ್ಳಷ್ಟೂ ನೋವಾಗದ ರೀತಿ ಕೆಲಸ ಮಾಡುತ್ತಿದೆ. ಕೆಆರ್‌ಎಸ್ ನಿರ್ಮಾಣಕ್ಕೆ ವಿರೋಧವಿತ್ತು. ಅದರಂತೆ ಈಗಲೂ ವಿರೋಧ ಇರುವುದು ಸಾಮಾನ್ಯ ಎಂದು ಹೇಳುವ ಮೂಲಕ ಸಚಿವರು, ಹೋರಾಟಗಾರಿಗೆ ಟಾಂಗ್ ಕೊಟ್ಟರು.

    ಏನಿದು ಯೋಜನೆ?:
    ಏಕತಾ ಪ್ರತಿಮೆ ಮಾದರಿಯಲ್ಲಿ ಕಾವೇರಿ ಮಾತೆಯ ಬೃಹತ್ ಪ್ರತಿಮೆ ನಿರ್ಮಾಣಕ್ಕೆ ಸಮ್ಮಿಶ್ರ ಸರ್ಕಾರ ಕೈ ಹಾಕಿದೆ. ಮೂಲಸ್ವರೂಪಕ್ಕೆ ಧಕ್ಕೆಯಾಗದಂತೆ ಜಾಗತಿಕ ಮಟ್ಟದ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲು ಮಂಡ್ಯ ಜಿಲ್ಲೆಯ ಕೆಆರ್‍ಎಸ್ ಉದ್ಯಾನದಲ್ಲಿ 125 ಅಡಿ ಎತ್ತರದ ಕಾವೇರಿ ಮಾತೆಯ ಪ್ರತಿಮೆ, 360 ಅಡಿ ಎತ್ತರದ ಮ್ಯೂಸಿಯಂ ನಿರ್ಮಿಸಲು ಯೋಜನೆ ರೂಪಿಸಿದೆ.

    ಕೆಆರ್‌ಎಸ್ ಉದ್ಯಾನ `ಬೃಂದಾವನ’ವನ್ನು 1,200 ಕೋಟಿ ರೂ. ವೆಚ್ಚದಲ್ಲಿ ಅಮೆರಿಕದ ಡಿಸ್ನಿಲ್ಯಾಂಡ್ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿದೆ. ಥೇಮ್ಸ್ ನದಿಯ ತಟದಲ್ಲಿ ಇರುವಂತೆ ರೀತಿ ಪಾರ್ಕ್ ನಿರ್ಮಾಣವಾಗಲಿದ್ದು, ಇದಕ್ಕೆ 400 ಎಕರೆ ಪ್ರದೇಶ ಬಳಕೆಯಾಗಲಿದೆ. 1200 ಕೋಟಿ ರೂ. ವೆಚ್ಚದಲ್ಲಿ ಈ ಯೋಜನೆಯ ಕಾಮಗಾರಿಯನ್ನು 2 ವರ್ಷದಲ್ಲಿ ಪೂರ್ಣಗೊಳಿಸಲು ಯೋಜನೆ ರೂಪಿಸಲಾಗಿದೆ. ವಾರ್ಷಿಕ 300 ಕೋಟಿ ರೂ. ಆದಾಯ, ಸರ್ಕಾರಕ್ಕೆ 30 ಕೋಟಿ ರೂ. ವರಮಾನ ಬರುವ ನಿರೀಕ್ಷೆಯಿದೆ.

    ಹೇಗಿರಲಿದೆ ಪ್ರತಿಮೆ?:
    ಉದ್ದೇಶಿತ ಮಾದರಿಯಂತೆ ಸದ್ಯದ ದೋಣಿ ವಿಹಾರ ಸರೋವರದ ಪಕ್ಕದಲ್ಲಿ ಮತ್ತೊಂದು ಸರೋವರ ನಿರ್ಮಿಸಿ ಅದರ ಮಧ್ಯ ಭಾಗದಲ್ಲಿ 360 ಅಡಿ ಎತ್ತರದ ಮ್ಯೂಸಿಯಂ ಸಮುಚ್ಛಯ ನಿರ್ಮಾಣವಾಗಲಿದೆ. ಈ ಸಮುಚ್ಛಯದ ಮೇಲ್ಭಾಗದಲ್ಲಿ ಕಾವೇರಿ ಮಾತೆಯ 125 ಅಡಿ ಎತ್ತರದ ಪ್ರತಿಮೆ ಇರಲಿದ್ದು, ಕಾವೇರಿ ಮಾತೆ ಪದತಲದಲ್ಲಿ ಮ್ಯೂಸಿಯಂ ಕಟ್ಟಡ ಇರಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಕಾವೇರಿ ಪ್ರತಿಮೆ ನಿರ್ಮಾಣದಿಂದ ಕೆಆರ್‌ಎಸ್ ಗೆ ಕಂಟಕ – ಸರ್ಕಾರದ ನಿರ್ಧಾರಕ್ಕೆ ಎಂಜಿನಿಯರ್ಸ್ ವಿರೋಧ

    ಕಾವೇರಿ ಪ್ರತಿಮೆ ನಿರ್ಮಾಣದಿಂದ ಕೆಆರ್‌ಎಸ್ ಗೆ ಕಂಟಕ – ಸರ್ಕಾರದ ನಿರ್ಧಾರಕ್ಕೆ ಎಂಜಿನಿಯರ್ಸ್ ವಿರೋಧ

    ಮೈಸೂರು: ಕೆ.ಆರ್. ಎಸ್ ಜಲಾಶಯದ ಮುಂಭಾಗದಲ್ಲಿ 120 ಅಡಿ ಎತ್ತರ ಕಾವೇರಿ ಮಾತೆಯ ಪ್ರತಿಮೆ ನಿರ್ಮಾಣ ಮುಂದಾಗಿರುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಆರಂಭದಲ್ಲೆ ವಿರೋಧ ವ್ಯಕ್ತವಾಗಿದೆ.

    ಮೈಸೂರಿನ ಇನ್ ಸ್ಟಿಟ್ಯೂಟ್ ಆಫ್ ಇಂಜಿನಿಯರ್ ನಲ್ಲಿ ನಡೆದ ಸಭೆಯಲ್ಲಿ ನಿವೃತ್ತ ಎಂಜಿನಿಯರ್ ಗಳು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕಾವೇರಿ ಪ್ರತಿಮೆ ಹಾಗೂ ಡಿಸ್ನಿಲ್ಯಾಂಡ್ ಮಾದರಿಯಲ್ಲಿ ಬೃಂದಾವನವನ್ನು ಅಭಿವೃದ್ಧಿ ಪಡಿಸಲು ಮುಂದಾದ್ರೆ ಇದು ಕೆ.ಆರ್. ಅಣೆಕಟ್ಟೆಗೆ ಕಂಟಕವಾಗಲಿದೆ ಎಂದು ಎಚ್ವರಿಕೆ ನೀಡಿದ್ರು.

    ಸುಮಾರು 20ಕ್ಕೂ ಹೆಚ್ಚು ನುರಿತ ಹಿರಿಯ ಎಂಜಿನಿಯರ್ ಗಳು ಸಭೆ ನಡೆಸಿ ಸರ್ಕಾರಕ್ಕೆ ಮನವಿ ಮಾಡಲು ಮುಂದಾಗಿದ್ದಾರೆ. ಇದೊಂದು ಅವೈಜ್ಞಾನಿಕ ಯೋಜನೆಯಾಗಿದ್ದು, 120 ಅಡಿ ಎತ್ತರ ನಿರ್ಮಾಣ ಮಾಡಬೇಕಾದರೆ ಸುಮಾರು 40 ಅಡಿ ಆಳದಿಂದ ಅಡಿಪಾಯ ತೆಗೆಯಬೇಕಾಗುತ್ತೆ. ಅಷ್ಟೇ ಅಲ್ಲದೆ ಡ್ಯಾಂ ಭೂಕಂಪನ ವಲಯದಲ್ಲಿ ನಿರ್ಮಿಸಿರುವುದರಿಂದ ಡ್ಯಾಂ ಬಿರುಕು ಬಿಡುತ್ತದೆ ಎಂಬ ಅಭಿಪ್ರಾಯ ಪಟ್ಟರು.

    ಡ್ಯಾಂ ಬಳಿ ಡಿಸ್ನಿಲ್ಯಾಂಡ್ ಮಾದರಿ ನಿರ್ಮಾಣ ಮಾಡಲು ಸುಮಾರು 400 ಎಕ್ಕರೆ ಪ್ರದೇಶ ಬೇಕಾಗುತ್ತೆ. ಇದರಿಂದ ಡ್ಯಾಂ ಸುತ್ತಮುತ್ತಲು ಕೃಷಿ ಪ್ರದೇಶ ಇರುವ ಕಾರಣ ರೈತರ ಜಮೀನನ್ನು ವಶಕ್ಕೆ ಪಡೆಯಬೇಕಾಗುತ್ತೆ ಇದು ಸರಿಯಾದ ನಿರ್ಧಾರವಲ್ಲ ಅಂತಾ ರೈತ ಮುಖಂಡರು ಅಭಿಪ್ರಾಯ ವ್ಯಕ್ತಪಡಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ದೇಶದಲ್ಲಿ ಈಗ ಪ್ರತಿಮೆ ಪಾಲಿಟಿಕ್ಸ್- ರಾಜ್ಯದಲ್ಲಿ ಕಾವೇರಿ ಪ್ರತಿಮೆ ಸ್ಥಾಪನೆ: ಏನಿದು ಯೋಜನೆ? ವೆಚ್ಚ ಎಷ್ಟು?

    ದೇಶದಲ್ಲಿ ಈಗ ಪ್ರತಿಮೆ ಪಾಲಿಟಿಕ್ಸ್- ರಾಜ್ಯದಲ್ಲಿ ಕಾವೇರಿ ಪ್ರತಿಮೆ ಸ್ಥಾಪನೆ: ಏನಿದು ಯೋಜನೆ? ವೆಚ್ಚ ಎಷ್ಟು?

    ಬೆಂಗಳೂರು: ದೇಶದಲ್ಲಿ ಈಗ ಪ್ರತಿಮೆ ಪಾಲಿಟಿಕ್ಸ್ ಆರಂಭವಾಗಿದ್ದು, ಗುಜರಾತ್ ಸರ್ಕಾರ ಸರ್ದಾರ್ ಪಟೇಲ್ ಅವರ 182 ಮೀಟರ್ ಎತ್ತರದ ಪ್ರತಿಮೆಯನ್ನು ಲೋಕಾರ್ಪಣೆ ಮಾಡಿದ್ದೇ ತಡ ರಾಜ್ಯದಲ್ಲಿ ಕಾವೇರಿ ಪ್ರತಿಮೆಯನ್ನು ಸ್ಥಾಪಿಸಲು ರಾಜ್ಯ ಸರ್ಕಾರ ಮುಂದಾಗಿದೆ.

    ಹೌದು. ಪಟೇಲ್ ಮಾದರಿಯಲ್ಲಿ ಕಾವೇರಿ ಮಾತೆಯ ಬೃಹತ್ ಪ್ರತಿಮೆ ನಿರ್ಮಾಣಕ್ಕೆ ಸಮ್ಮಿಶ್ರ ಸರ್ಕಾರ ಕೈ ಹಾಕಿದೆ. ಮೂಲಸ್ವರೂಪಕ್ಕೆ ಧಕ್ಕೆಯಾಗದಂತೆ ಜಾಗತಿಕ ಮಟ್ಟದ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲು ಮಂಡ್ಯ ಜಿಲ್ಲೆಯ ಕೆಆರ್ಎಸ್  ಉದ್ಯಾನದಲ್ಲಿ 125 ಅಡಿ ಎತ್ತರದ ಕಾವೇರಿ ಮಾತೆಯ ಪ್ರತಿಮೆ, 360 ಅಡಿ ಎತ್ತರದ ಮ್ಯೂಸಿಯಂ ನಿರ್ಮಿಸಲು ಯೋಜನೆ ರೂಪಿಸಿದೆ.

    ಕೆಆರ್ಎಸ್ ಉದ್ಯಾನ ‘ಬೃಂದಾವನ’ವನ್ನು 1,200 ಕೋಟಿ ರೂ. ವೆಚ್ಚದಲ್ಲಿ ಅಮೆರಿಕದ ಡಿಸ್ನಿಲ್ಯಾಂಡ್ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿದೆ. ಥೇಮ್ಸ್ ನದಿಯ ತಟದಲ್ಲಿ ಇರುವಂತೆ ರೀತಿ ಪಾರ್ಕ್ ನಿರ್ಮಾಣವಾಗಲಿದ್ದು, ಇದಕ್ಕೆ 400 ಎಕರೆ ಪ್ರದೇಶ ಬಳಕೆಯಾಗಲಿದೆ. 1200 ಕೋಟಿ ರೂ. ವೆಚ್ಚದಲ್ಲಿ ಈ ಯೋಜನೆಯ ಕಾಮಗಾರಿಯನ್ನು 2 ವರ್ಷದಲ್ಲಿ ಪೂರ್ಣಗೊಳಿಸಲು ಯೋಜನೆ ರೂಪಿಸಲಾಗಿದೆ. ವಾರ್ಷಿಕ 300 ಕೋಟಿ ರೂ. ಆದಾಯ, ಸರ್ಕಾರಕ್ಕೆ 30 ಕೋಟಿ ರೂ. ವರಮಾನ ಬರುವ ನಿರೀಕ್ಷೆಯಿದೆ.

    ಹೇಗಿರಲಿದೆ ಪ್ರತಿಮೆ?
    ಉದ್ದೇಶಿತ ಮಾದರಿಯಂತೆ ಸದ್ಯದ ದೋಣಿ ವಿಹಾರ ಸರೋವರದ ಪಕ್ಕದಲ್ಲಿ ಮತ್ತೊಂದು ಸರೋವರ ನಿರ್ಮಿಸಿ ಅದರ ಮಧ್ಯ ಭಾಗದಲ್ಲಿ 360 ಅಡಿ ಎತ್ತರದ ಮ್ಯೂಸಿಯಂ ಸಮುಚ್ಛಯ ನಿರ್ಮಾಣವಾಗಲಿದೆ. ಈ ಸಮುಚ್ಛಯದ ಮೇಲ್ಭಾಗದಲ್ಲಿ ಕಾವೇರಿ ಮಾತೆಯ 125 ಅಡಿ ಎತ್ತರದ ಪ್ರತಿಮೆ ಇರಲಿದ್ದು, ಕಾವೇರಿ ಮಾತೆ ಪದತಲದಲ್ಲಿ ಮ್ಯೂಸಿಯಂ ಕಟ್ಟಡ ಇರಲಿದೆ.

    ಅದೇ ರೀತಿ ಗೋಪುರವುಳ್ಳ ಗಾಜಿನಮನೆ ನಿರ್ಮಾಣವಾಗಲಿದ್ದು, ಈ ಎರಡೂ ಕಟ್ಟಡಗಳಿಂದ ಅಣೆಕಟ್ಟೆಯ ವಿಹಂಗಮ ನೋಟ ಗೋಚರವಾಗಲಿದೆ. ಮ್ಯೂಸಿಯಂನಲ್ಲಿ ಕೆ.ಆರ್.ಎಸ್, ಮೈಸೂರು, ಕರ್ನಾಟಕದ ಐತಿಹ್ಯ ಸಾರುವ ಕಲಾತ್ಮಕ, ಪ್ರಾಚ್ಯವಸ್ತುಗಳು ಇರಲಿವೆ. ಸಮುಚ್ಛಯ, ಗೋಪುರಯುಕ್ತ ವೀಕ್ಷಣಾ ಗೋಪುರ, ಬ್ಯಾಂಡ್ ಸ್ಟ್ಯಾಂಡ್, ಗಾಜಿನ ಮನೆ, ಒಳಾಂಗಣ ಕ್ರೀಡಾಂಗಣ ಮತ್ತಿತರ ಐತಿಹ್ಯ ಸಾರುವ ಕಟ್ಟಡಗಳನ್ನು ಈ ಡಿಸ್ನಿಲ್ಯಾಂಡ್ ಮಾದರಿ ಹೊಂದಿರಲಿದೆ.

    ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಯೋಜನೆ ರೂಪುರೇಷೆ ಬಗ್ಗೆ ಚರ್ಚೆ ನಡೆದಿದೆ.

    ಡಿ.ಕೆ.ಶಿವಕುಮಾರ್ ಮಾತನಾಡಿ, ಯೋಜನೆಗೆ 1,200 ಕೋಟಿ ರೂ. ಅಂದಾಜು ಮಾಡಲಾಗಿದ್ದು, ಜಾಗತಿಕ ಟೆಂಡರ್ ಕರೆದು ವಿಶ್ವಮಟ್ಟದ ಸಂಸ್ಥೆಗೆ ಯೋಜನೆ ಗುತ್ತಿಗೆ ನೀಡಲಾಗುವುದು. ಸರ್ಕಾರ ಜಾಗ ಮಾತ್ರ ನೀಡುತ್ತದೆ ಹೊರತು ಯೋಜನೆಗೆ ಸರ್ಕಾರ ವೆಚ್ಚ ಮಾಡುವುದಿಲ್ಲ. ಕಲಾತ್ಮಕ ವಿನ್ಯಾಸದಲ್ಲಿ ಜಾಗತಿಕ ಮಟ್ಟದ ನೈಪುಣ್ಯತೆ ಇರುವ ಸಂಸ್ಥೆಗಳಿಗೆ ಟೆಂಡರ್‍ನಲ್ಲಿ ಭಾಗವಹಿಸಬಹುದು ಎಂದು ಯೋಜನೆಗೆಯ ಬಗ್ಗೆ ಮಾಹಿತಿ ನೀಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews