Tag: ಕಾವೇರಿ ನೀರಾವರಿ ನಿಗಮ

  • KRSನಲ್ಲಿ ಚಿರತೆ ಕಣ್ಣಾಮುಚ್ಚಾಲೆ – ಕಾವೇರಿ ನೀರಾವರಿ ನಿಗಮ, ಅರಣ್ಯ ಇಲಾಖೆ ಜಂಟಿ ಕಾರ್ಯಾಚರಣೆ

    KRSನಲ್ಲಿ ಚಿರತೆ ಕಣ್ಣಾಮುಚ್ಚಾಲೆ – ಕಾವೇರಿ ನೀರಾವರಿ ನಿಗಮ, ಅರಣ್ಯ ಇಲಾಖೆ ಜಂಟಿ ಕಾರ್ಯಾಚರಣೆ

    ಮಂಡ್ಯ: ಸಕ್ಕರೆನಾಡಿನ ಜೀವನಾಡಿ ಕೆಆರ್‌ಎಸ್‌ನ (KRS) ಬೃಂದಾವನದಲ್ಲಿ ಚಿರತೆಗಳು ಅಲ್ಲಿನ ಸಿಬ್ಬಂದಿಯ ನಿದ್ದೆಗಡೆಸಿವೆ. ಪದೇ-ಪದೇ ಕೆಆರ್‌ಎಸ್ ಸುತ್ತಮುತ್ತ ಚಿರತೆ (Leopard) ಕಾಣಿಸಿಕೊಳ್ಳುತ್ತಿದ್ದು, ಸ್ಥಳೀಯರಲ್ಲೂ ಆತಂಕ ಮೂಡಿಸಿವೆ. ಇದೀಗ ಅಧಿಕಾರಿಗಳು ಫುಲ್ ಆಕ್ಟೀವ್ ಆಗಿದ್ದು, ಅರಣ್ಯ ಇಲಾಖೆ (Forest Department) ಹಾಗೂ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಜಂಟಿ ಕಾರ್ಯಾರಚಣೆಗೆ ಇಳಿದಿದ್ದಾರೆ.

    ಸಕ್ಕರೆ ನಾಡು ಮಂಡ್ಯ (Mandya) ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಡ್ಯಾಂ ಹಾಗೂ ಬೃಂದಾವನ ಗಾರ್ಡನ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಜನಮನ್ನಣೆ ಪಡೆದಿರುವಂತಹ ಪ್ರವಾಸಿ ಸ್ಥಳ. ಇದೀಗ ಈ ವಿಶ್ವ ವಿಖ್ಯಾತಿ ಪಡೆದಿರುವ ಸ್ಥಳದಲ್ಲಿ ಕಳೆದ 20 ದಿನಗಳಿಂದ ಚಿರತೆ ಕಣ್ಣಾಮುಚ್ಚಾಲೆ ಆಡುತ್ತಿದೆ. ಕೆಆರ್‌ಎಸ್ ಡ್ಯಾಂ (KRS Dam) ಹಾಗೂ ಬೃಂದಾವನದಲ್ಲಿ ಚಿರತೆಗಳು ಪ್ರತ್ಯಕ್ಷವಾಗುತ್ತಿರುವ ಹಿನ್ನೆಲೆ ಇಲ್ಲಿನ ಸಿಬ್ಬಂದಿ ಹಾಗೂ ಜನರಲ್ಲಿ ಸಾಕಷ್ಟು ಆತಂಕ ಎಡೆ ಮಾಡಿದೆ. ಇದರಿಂದ ಗಾಬರಿಗೊಂಡಿರುವ ಕಾವೇರಿ ನೀರಾವರಿ ನಿಗಮ ಪ್ರವಾಸಿಗರ ಸುರಕ್ಷತೆ ದೃಷ್ಟಿಯಿಂದ ಬೃಂದಾವನಕ್ಕೆ ಪ್ರವಾಸಿಗರ ನಿರ್ಬಂಧ ಮುಂದುವರಿಸಿದೆ. ಇದನ್ನೂ ಓದಿ: ಅನಾರೋಗ್ಯದಿಂದ ಬಳಲುತ್ತಿದ್ದಕ್ಕೆ ಹೆತ್ತತಾಯಿಯಿಂದಲೇ ಮಗುವಿನ ಕೊಲೆ

    ಕಳೆದ 20 ದಿನಗಳಿಂದ ಐದಾರು ಬಾರಿ ಸಿಸಿಟಿವಿ ಕ್ಯಾಮೆರಾದಲ್ಲಿ (CCTV Camera) ಚಿರತೆ ಸೆರೆಯಾಗಿದೆ, ಸಿಬ್ಬಂದಿ ಕಣ್ಣಿಗೆ ಬಿದ್ದಿದೆ. ಆದರೆ ಈ ಭಾಗದಲ್ಲಿ ಎರಡು ಚಿರತೆಗಳಿದ್ದು, ಒಂದು ಚಿರತೆ ಬೀದಿ ನಾಯಿಗಳ ಮೇಲೆ ದಾಳಿ ಮಾಡುತ್ತಿದ್ರೆ, ಇನ್ನೊಂದು ಚಿರತೆ ಅಪರೂಪದ ಪ್ರಾಣಿಯಾದ ನೀರು ನಾಯಿಗಳನ್ನು ಬೇಟೆಯಾಡುತ್ತಿದೆ ಎಂದು ಹೇಳಲಾಗಿದೆ. ಇದನ್ನೂ ಓದಿ: ಹೆಣ್ಣುಮಕ್ಕಳು ಸ್ವಾಮಿಗಳ ಬಳಿ ಹೋಗಲಾರದಂತ ಸ್ಥಿತಿ ನಿರ್ಮಾಣ: ಶಾಮನೂರು ಶಿವಶಂಕರಪ್ಪ

    ಕೆಆರ್‌ಎಸ್ ಹಾಗೂ ಬೃಂದಾವನದಲ್ಲಿ ಚಿರತೆ ಹಾವಳಿ ಹೆಚ್ಚಾಗಿರುವ ಹಿನ್ನೆಲೆ ಕಾವೇರಿ ನೀರಾವರಿ ನಿಗಮ ಮತ್ತು ಅರಣ್ಯ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸುತ್ತಿದೆ. ಒಂದು ಕಡೆ ಕಾವೇರಿ ನೀರಾವರಿ ನಿಗಮ ಇಲ್ಲಿ ಬೆಳೆದಿರುವ ಬೇಲಿಗಳನ್ನು ಕ್ಲೀನ್ ಮಾಡಿ ಕಾರ್ಯಾಚರಣೆಗೆ ಅನುಕೂಲ ಮಾಡುತ್ತಿದೆ. ಮತ್ತೊಂದು ಕಡೆ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆ ಕಾಣಿಸಿಕೊಂಡಿರುವ ಸ್ಥಳದಲ್ಲಿ ಟ್ರ‍್ಯಾಪ್ ಕ್ಯಾಮರಾಗಳನ್ನು ಹಾಕಿದೆ. ಈ ಟ್ರ‍್ಯಾಪ್ ಕ್ಯಾಮರಾ ಚಿರತೆಯ ಚಲನವಲನಗಳ ಚಿತ್ರಗಳನ್ನು ಸೆರೆಹಿಡಿಯಲಿದೆ. ಇದರಿಂದ ಅರಣ್ಯ ಇಲಾಖೆಗೂ ಅನುಕೂಲವಾಗಲಿದೆ. ಒಟ್ಟು ಮೂರು ಬೋನ್‌ಗಳಿರಿಸಿ ಕಾರ್ಯಾಚರಣೆ ಮಾಡಲಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಹಕ್ಕಿಗಳ ಹಿಕ್ಕೆ ವಾಸನೆ ಬರುತ್ತದೆಂದು 500 ಕ್ಕೂ ಹೆಚ್ಚು ಹಕ್ಕಿ ಮರಿಗಳ ಮಾರಣಹೋಮ ಮಾಡಿದ್ರು

    ಹಕ್ಕಿಗಳ ಹಿಕ್ಕೆ ವಾಸನೆ ಬರುತ್ತದೆಂದು 500 ಕ್ಕೂ ಹೆಚ್ಚು ಹಕ್ಕಿ ಮರಿಗಳ ಮಾರಣಹೋಮ ಮಾಡಿದ್ರು

    ಮಂಡ್ಯ: ಹಕ್ಕಿಗಳ ಹಿಕ್ಕೆ ವಾಸನೆ ಬರುತ್ತದೆಂದು ಮರದ ರೆಂಬೆಗಳನ್ನು ಕಡಿದು ಹಾಕಿದ ಪರಿಣಾಮ ಐನೂರಕ್ಕೂ ಹೆಚ್ಚು ಹಕ್ಕಿ ಮರಿಗಳು ನೆಲಕ್ಕೆ ಬಿದ್ದು ನರಳಾಡುತ್ತಿರುವ ಮನಕಲಕುವ ಘಟನೆ ಜಿಲ್ಲೆಯ ಕೆ.ಆರ್.ಪೇಟೆ ಪಟ್ಟಣದಲ್ಲಿ ನಡೆದಿದೆ.

    ಪಟ್ಟಣದ ಕಾವೇರಿ ನೀರಾವರಿ ನಿಗಮ ಕಚೇರಿ ಆವರಣದಲ್ಲಿ ಹತ್ತಿ ಮರವಿದ್ದು ಅದರಲ್ಲಿ ಸಾವಿರಾರು ಪಕ್ಷಿಗಳು ಗೂಡು ಕಟ್ಟಿಕೊಂಡು ವಾಸವಾಗಿದ್ದವು. ಪಕ್ಷಿಗಳು ಗೂಡಿನಲ್ಲಿ ಮೊಟ್ಟೆಯಿಟ್ಟು ಮರಿ ಮಾಡಿದ್ದವು. ಹಕ್ಕಿಗಳ ಹಿಕ್ಕೆ ವಾಸನೆ ಬರುತ್ತದೆಂದು ಮೃಗೀಯರಾದ ಕಾವೇರಿ ನೀರಾವರಿ ನಿಗಮ ಕಚೇರಿಯ ಕೆಲವು ಅಧಿಕಾರಿಗಳು ಮರದ ರೆಂಬೆಗಳನ್ನು ಸಂಪೂರ್ಣವಾಗಿ ಕತ್ತರಿಸಿ ಹಾಕಿಸಿದ್ದಾರೆ. ಪರಿಣಾಮ ಗೂಡಿನಲ್ಲಿದ್ದ 500 ಕ್ಕೂ ಹೆಚ್ಚು ಮರಿಗಳು ನೆಲಕ್ಕೆ ಬಿದ್ದು ನರಳಾಡುತ್ತಿವೆ. ಅದರಲ್ಲಿ ಬಹುತೇಕ ಹಕ್ಕಿ ಮರಿಗಳು ಸಾವನ್ನಪ್ಪಿವೆ.

    ತಮ್ಮ ಕಣ್ಣ ಮುಂದೆಯೇ ಸಾವನ್ನಪ್ಪುತ್ತಿರುವ ಮರಿಗಳನ್ನು ನೋಡಿ ತಾಯಿ ಹಕ್ಕಿಗಳು, ಅಕ್ಕಪಕ್ಕದ ಮರದಲ್ಲಿ ಕುಳಿತು ಮೂಕರೋಧನೆ ಅನುಭವಿಸುತ್ತಿವೆ. ಹಕ್ಕಿ ಮರಿಗಳ ಮಾರಣ ಹೋಮ ನೋಡಿ ಪುಟಾಣಿ ಮಕ್ಕಳು ಕಣ್ಣೀರು ಹಾಕುತ್ತಿದ್ದಾರೆ. ಸಾರ್ವಜನಿಕರು ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದು, ರೆಂಬೆ ಕತ್ತರಿಸುವ ಮುನ್ನ ಪಕ್ಷಿ ತಜ್ಞರ ಸಲಹೆ ಪಡೆದು ಮೊಟ್ಟೆಯಿಡುವ ಮುಂಚೆ ಕತ್ತರಿಸಬೇಕಿತ್ತು. ಯಾವುದೇ ಮುಂದಾಲೋಚನೆಯಿಲ್ಲದೇ ನೂರಾರು ಹಕ್ಕಿಮರಿಗಳ ಮಾರಣಹೋಮಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಸಾರ್ವಜನಿಕರು ಆಗ್ರಹಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅರಣ್ಯಾಧಿಕಾರಿಗಳು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.