Tag: ಕಾವೇರಿ ನದಿ

  • ನಮ್ಮ ಸಹನೆಯನ್ನು ದೌರ್ಬಲ್ಯವೆಂದು ಪರಿಗಣಿಸಬೇಡಿ – ಕೇಂದ್ರದ ವಿರುದ್ಧ ಗುಡುಗಿದ ಸಿಎಂ

    ನಮ್ಮ ಸಹನೆಯನ್ನು ದೌರ್ಬಲ್ಯವೆಂದು ಪರಿಗಣಿಸಬೇಡಿ – ಕೇಂದ್ರದ ವಿರುದ್ಧ ಗುಡುಗಿದ ಸಿಎಂ

    ಬೆಂಗಳೂರು: ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ರಾಜ್ಯದ ಪ್ರತಿನಿಧಿ ನೇಮಕ ವಿಷಯದಲ್ಲಿ ಕೇಂದ್ರ ಸರ್ಕಾರ ಏಕ ಪಕ್ಷೀಯ ನಿರ್ಧಾರ ಕೈಗೊಳ್ಳಲಾಗಿದೆ. ಆದರೆ ಕೋರ್ಟ್ ನಿಯಮ ಜಾರಿ ವೇಳೆ ಕೆಲ ನಿರ್ಣಯಗಳನ್ನು ತಿರುಚಲಾಗಿದೆ. ಅದನ್ನು ಸರಿಪಡಿಸಲು ಈಗಾಗಲೇ ಕೇಂದ್ರಕ್ಕಾಗಿ ಈ ಕುರಿತು ಮನವಿ ಮಾಡಿದ್ದಾಗಿ ಹೇಳಿದ್ದಾರೆ.

    ಕಾವೇರಿ ಸ್ಕೀಂ ರಚನೆ ಎಂಬುವುದು ನ್ಯಾಯಾಲಯದ ತೀರ್ಮಾನವಾಗಿದ್ದು ಇದಕ್ಕೆ ಕರ್ನಾಟಕ ಸಂಪೂರ್ಣ ಬೆಂಬಲ ನೀಡಿದೆ. ಆದರೆ ನ್ಯಾಯಾಲಯದ ನಿಯಮಗಳನ್ನು ಜಾರಿಗೆ ತರುವ ವೇಳೆ ಸ್ಕೀಂ ಕರಡು ಪ್ರತಿಯಲ್ಲಿ ಕೆಲ ಲೋಪದೋಷಗಳು ಉಂಟಾಗಿದೆ. ಈ ಕುರಿತು ಲೋಕಸಭೆಯಲ್ಲಿ ಚರ್ಚೆ ನಡೆಸುವಂತೆ ಮನವಿ ಮಾಡಿದ್ದೇನೆ. ಆದರೆ ಕೇಂದ್ರ ಸರ್ಕಾರ ಇದನ್ನು ಪರಿಗಣಿಸಿಲ್ಲ. ನಮ್ಮ ಸಹನೆಯನ್ನು ದೌರ್ಬಲ್ಯವೆಂದು ಪರಿಗಣಿಸಬೇಡಿ. ಈಗ ಕೈಗೊಂಡಿರುವ ನಿರ್ಧಾರವನ್ನು ಮರು ಪರಿಶೀಲನೆ ಮಾಡುವಂತೆ ಮತ್ತೊಮ್ಮೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡುತ್ತೇನೆ ಎಂದರು.

    ಕೇಂದ್ರದ ಪ್ರಾಧಿಕಾರ ರಚನೆ ನಿರ್ಧಾರ ಮರುಪರಿಶೀಲಿಸುವಂತೆ ಕೇಂದ್ರಕ್ಕೆ ಮತ್ತೊಮ್ಮೆ ಪತ್ರ ಬರೆಯತ್ತೇವೆ. ಈ ಕುರಿತು ಸಲಹೆ ನೀಡಲು ತಜ್ಞರನ್ನು ನೇಮಕ ಮಾಡಿಕೊಂಡಿದ್ದೇವೆ. ಆದರೆ ಕಾನೂನಾತ್ಮಾಕವಾಗಿ ಇದು ಮುಗಿದ ಅಧ್ಯಯವಾದರೂ ಸ್ಕೀಂ ರಚನೆಯಲ್ಲಿ ಈ ಸಂಬಂಧ ಅಡ್ವೊಕೇಟ್ ಜನರಲ್ ಅವರ ಸಲಹೆ ಪಡೆದು ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ. ಕೇಂದ್ರ ಜಲಸಂಪನ್ಮೂಲ ಸಚಿವರನ್ನು ಭೇಟಿ ಮಾಡಿ ನಮ್ಮ ರಾಜ್ಯದ ಅಹವಾಲು ತಲುಪಿಸುತ್ತೇನೆ. ಪ್ರಾಧಿಕಾರ ರಚನೆ ವಿಚಾರದಲ್ಲಿ ನಾವು ಕೆಲವು ಸಲಹೆ ಕೊಟ್ಟಿದ್ದೆವು ಆದರೆ ಕೇಂದ್ರ ಸರ್ಕಾರ ಏಕಪಕ್ಷೀಯ ತೀರ್ಮಾನ ಕೈಗೊಂಡಿದೆ ಎಂದು ಗುಡುಗಿದರು.

    https://www.youtube.com/watch?v=L1fxbS09L8Y

  • ಕೆಆರ್ ಎಸ್ ಜಲಾಶಯದಲ್ಲಿ 100 ಅಡಿ ನೀರು ಸಂಗ್ರಹ- ರೈತರು ಫುಲ್ ಖುಷ್

    ಕೆಆರ್ ಎಸ್ ಜಲಾಶಯದಲ್ಲಿ 100 ಅಡಿ ನೀರು ಸಂಗ್ರಹ- ರೈತರು ಫುಲ್ ಖುಷ್

    ಮಂಡ್ಯ: ಕೆಆರ್ ಎಸ್ ಜಲಾಶಯದಲ್ಲಿ  ನೂರು ಅಡಿ ನೀರು ಸಂಗ್ರವಾಗಿದೆ. ಇದರಿಂದ ಇನ್ಮುಂದೆ ಕೃಷಿಗೆ ನೀರು ಲಭ್ಯವಾಗುತ್ತದೆ ಎನ್ನುವುದನ್ನು ಅರಿತ ರೈತರು ಸಂತಸ ವ್ಯಕ್ತಪಡಿಸಿದ್ದಾರೆ.

    ಕಾವೇರಿ ನದಿ ಸಮೀಪದಲ್ಲಿ ಭಾರೀ ಮಳೆಯಾಗಿದೆ. ಹೀಗಾಗಿ ಕೆಆರ್ ಎಸ್ ಅಣೆಕಟ್ಟು 124.80 ಅಡಿ ಗರಿಷ್ಠ ನೀರು ಸಂಗ್ರಹ ಸಾಮರ್ಥ್ಯದ ಹೊಂದಿದ್ದು, ಅದರಲ್ಲಿ ಈಗಾಗಲೇ 100 ಅಡಿ ಸಂಗ್ರಹವಾಗಿದೆ. ಅಣೆಕಟ್ಟಿನಲ್ಲಿ ನೀರು ತುಂಬಿರುವುದರಿಂದ ಸದ್ಯ ಜಿಲ್ಲೆ ಹಾಗೂ ನೆರೆ ಜಿಲ್ಲೆಯ ರೈತರ ಸಂತಸಕ್ಕೆ ಕಾರಣವಾಗಿದೆ.

    2017ರಲ್ಲಿ ಇದೇ ಸಮಯದಲ್ಲಿ ಅಣೆಕಟ್ಟೆಯಲ್ಲಿ ಕೇವಲ 68 ಅಡಿಗಳಷ್ಟು ನೀರು ಸಂಗ್ರಹವಾಗಿತ್ತು. ಆದರೆ ಈ ಬಾರಿ ನೀರಿನ ಸಂಗ್ರಹದಲ್ಲಿ ಒಂದಷ್ಟು ಏರಿಕೆಯಾಗಿದೆ. ಕಳೆದ ವರ್ಷ ಕೇವಲ 114 ಅಡಿಗಳಷ್ಟು ಮಾತ್ರ ಗರಿಷ್ಠವಾಗಿ ನೀರು ಸಂಗ್ರಹವಾಗಿತ್ತು. ಅಷ್ಟೇ ಅಲ್ಲದೆ ಸತತ ಮೂರು ವರ್ಷಗಳಿಂದ ಅಣೆಕಟ್ಟು ಭರ್ತಿಯಾಗದೇ ರೈತರು ಸಂಕಷ್ಟ ಅನುಭವಿಸಿದ್ದರು.

    ಕ್ಯೂಸೆಕ್ ಮತ್ತು ಟಿಎಂಸಿ ಎಂದರೆ ಎಷ್ಟು?
    ಕ್ಯೂಸೆಕ್ ಎಂಬುದು Cubic feet per Second ಹ್ರಸ್ವರೂಪ. ಪ್ರತಿ ಸೆಕೆಂಡಿಗೆ ಒಂದು ಘನ ಅಡಿ ನೀರು ಹರಿದರೆ ಅದು ಒಂದು ಕ್ಯೂಸೆಕ್ ನೀರು ಎಂದು ಕರೆಯಲ್ಪಡುತ್ತದೆ. ಒಂದು ಘನ ಅಡಿ ನೀರನ್ನು ಲೀಟರುಗಳಿಗೆ ಪರಿವರ್ತಿಸಿದರೆ ಸುಮಾರು 28.317 ಲೀಟರುಗಳಾಗುತ್ತವೆ. 11,524 ಕ್ಯೂಸೆಕ್ ನೀರು 24 ಗಂಟೆಯ ಕಾಲ ನಿರಂತರ ಹರಿದರೆ ಒಂದು ಟಿಎಂಸಿ ಎಂದು ಕರೆಯಲಾಗುತ್ತದೆ. 10 ಸಾವಿರ ಕ್ಯೂಸೆಕ್ ನೀರು 24 ಗಂಟೆ ನಿರಂತರ ಹರಿದರೆ 0.864 ಟಿಎಂಸಿ ಅಡಿ ಆಗುತ್ತದೆ. 35.87 ಅಡಿ ಅಳದಷ್ಟು ನೀರನ್ನು ಒಂದು ಚದರ ಮೈಲಿ ಪ್ರದೇಶದಲ್ಲಿ ಸಂಗ್ರಹಿಸಿದರೆ ಒಂದು ಟಿಎಂಸಿ ಅಡಿ ಆಗುತ್ತದೆ.

  • ಅಧಿಕಾರಿಗಳಿಗೆ ದುಡ್ಡು ಕೊಟ್ರೆ ತಲಕಾಡಿನ ಕಾವೇರಿ ನದಿ ದಂಡೆಯಲ್ಲೇ ಮೃತದೇಹ ಅಂತ್ಯಕ್ರಿಯೆ!

    ಅಧಿಕಾರಿಗಳಿಗೆ ದುಡ್ಡು ಕೊಟ್ರೆ ತಲಕಾಡಿನ ಕಾವೇರಿ ನದಿ ದಂಡೆಯಲ್ಲೇ ಮೃತದೇಹ ಅಂತ್ಯಕ್ರಿಯೆ!

    ಬೆಂಗಳೂರು: ಚಾಮರಾಜನಗರದ ತಲಕಾಡು ಅರಣ್ಯ ಪ್ರದೇಶದಲ್ಲಿ ಅರಣ್ಯಾಧಿಕಾರಿಗಳ ಅಂಧಾ ದರ್ಬಾರ್ ನಡೆಸುತ್ತಿದ್ದಾರಾ ಎನ್ನುವ ಪ್ರಶ್ನೆಯೊಂದು ಈಗ ಹುಟ್ಟಿಕೊಂಡಿದೆ.

    ತಲಕಾಡಿನ ಕಾವೇರಿ ನಂದಿ ದಂಡೆಯಲ್ಲೇ ಮೃತದೇಹ ಸುಡುವುದಕ್ಕೆ ಅವಕಾಶ ಮಾಡಿಕೊಟ್ಟಿರುವುದರಿಂದ ಈಗ ಹಲವು ಅನುಮಾನ ಎದ್ದಿದೆ. ರಕ್ಷಿತಾರಣ್ಯ ಪ್ರದೇಶದಲ್ಲಿ ಮೃತದೇಹ ಸುಡುವುದಕ್ಕೆ ಅವಕಾಶ ನೀಡಿದ್ದು ಹೇಗೆ ಎನ್ನುವ ಪ್ರಶ್ನೆಗಳು ಹುಟ್ಟಿಕೊಂಡಿವೆ.

     

    ಕಾವೇರಿ ನದಿ ದಂಡೆಯಲ್ಲಿ ಒಂದು ಹೆಣ ಸುಡುವುದಕ್ಕೆ 3 ರಿಂದ 4 ಸಾವಿರ ಪಡೆದು ಅವಕಾಶ ಕೊಟ್ಟಿದ್ದಾರೆ ಎನ್ನುವ ಆರೋಪ ಈಗ ಅರಣ್ಯಾಧಿಕಾರಿಗಳ ಮೇಲೆ ಕೇಳಿ ಬಂದಿದೆ.

    ಕಾವೇರಿ ನದಿ ಮಲೀನವಾಗುತ್ತಿದೆ ಎಂದು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ತರಾಟೆ ತೆಗೆದುಕೊಂಡಿತ್ತು. ಹೀಗಿದ್ದಾಗ ನದಿ ಪಕ್ಕದಲ್ಲೇ ಮೃತದೇಹ ಸುಡುವುದಕ್ಕೆ ಅರಣ್ಯಾಧಿಕಾರಿಗಳು ಅವಕಾಶ ನೀಡಿದ್ದು ಹೇಗೆ ಎಂದು ವೈಲ್ಡ್ ಲೈಫ್ ಕ್ರೈಂ ಕಂಟ್ರೋಲ್ ಬ್ಯುರೋದ ಸ್ವಯಂಸೇವಕ ಅರ್ಜುನ್ ಪ್ರಶ್ನೆ ಮಾಡಿದ್ದಾರೆ. ಈಗ ದಂಡೆಯಲ್ಲಿ ನಡೆದ ಅಂತ್ಯ ಸಂಸ್ಕಾರದ ವಿಡಿಯೋ ಸೆರೆ ಹಿಡಿದಿರುವ ಅರ್ಜುನ್ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗೆ ದೂರು ನೀಡಿದ್ದಾರೆ.

  • ವಿಡಿಯೋ: ಹರಿಯುವ ಕಾವೇರಿ ನದಿಯಲ್ಲಿ ಸಿಲುಕಿ ಪರದಾಡಿದ ಒಂಟಿ ಸಲಗ

    ವಿಡಿಯೋ: ಹರಿಯುವ ಕಾವೇರಿ ನದಿಯಲ್ಲಿ ಸಿಲುಕಿ ಪರದಾಡಿದ ಒಂಟಿ ಸಲಗ

    ಚಾಮರಾಜನಗರ: ಆಹಾರ ಅರಸಿ ನಾಡಿನತ್ತ ಬಂದಿದ್ದ ಒಂಟಿ ಸಲಗವೊಂದು ಹರಿಯುತ್ತಿರುವ ನದಿಯಲ್ಲಿ ಸಿಲುಕಿಕೊಂಡು ಕೆಲ ಕಾಲ ಪರದಾಡಿದ ಘಟನೆ ಜಿಲ್ಲೆಯ ಮುಳ್ಳೂರು ಗ್ರಾಮದ ಬಳಿ ಜರುಗಿದೆ.

    ಗ್ರಾಮದ ಬಳಿ ಹರಿಯುವ ಕಾವೇರಿ ನದಿಯ ಮಧ್ಯ ಭಾಗದಲ್ಲಿ ಒಂಟಿ ಸಲಗ ಬೆಳಗಿನ ಜಾವ 4 ಗಂಟೆ ವೇಳೆಗೆ ಸಿಲುಕಿಕೊಂಡು ಗಾಬರಿಗೊಂಡಿದೆ. ಆಹಾರವನ್ನು ಅರಸಿಕೊಂಡು ನಾಡಿಗೆ ಬಂದಿದ್ದ ಈ ಆನೆ ನೀರು ಕುಡಿಯಲು ಹೋದ ವೇಳೆ ನದಿಯ ಮಧ್ಯ ಭಾಗದಲ್ಲಿ ಸಿಲುಕಿಕೊಂಡಿದೆ. ಈ ವೇಳೆ ಗ್ರಾಮಸ್ಥರು ನದಿಯ ಎರಡು ಭಾಗದಲ್ಲಿ ಕಿರುಚಿ ಕುಚೇಷ್ಟೆ ಮಾಡಿದ್ದರಿಂದ ಆನೆ ಮತ್ತಷ್ಟು ಗಾಬರಿಗೊಂಡಿತ್ತು.

    ಗ್ರಾಮಸ್ಥರನ್ನು ನೋಡಿ ಗಾಬರಿಗೊಂಡ ಆನೆ ರಭಸವಾಗಿ ಹರಿಯುತ್ತಿದ್ದ ನದಿಯಿಂದ ಹೊರಬರಲಾಗದೆ ಗಾಬರಿಗೊಂಡು ಕಿರುಚಾಡಿದೆ. ಸತತ 4 ಗಂಟೆಗಳ ಕಾಲ ಕಾವೇರಿ ನದಿ ಭಾಗದಲ್ಲಿ ಸಿಲುಕಿದ್ದ ಒಂಟಿ ಸಲಗ, ನದಿಯ ಒಂದು ಮೂಲೆಯ ಮೂಲಕ ಹೊರ ಬಂದು ಕಾಡಿನೊಳಗೆ ಹೊರಟು ಹೋಗಿದೆ.

    https://youtu.be/3aFkUnG6_Dc

  • ಏನಿದು ಕಾವೇರಿ ಪುಷ್ಕರ? ಸ್ನಾನ ಮಾಡೋ ಹಿಂದಿನ ನಂಬಿಕೆ ಏನು?

    ಏನಿದು ಕಾವೇರಿ ಪುಷ್ಕರ? ಸ್ನಾನ ಮಾಡೋ ಹಿಂದಿನ ನಂಬಿಕೆ ಏನು?

    ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣದ ಕಾವೇರಿ ನದಿ ದಂಡೆಯಲ್ಲಿ ಮಂಗಳವಾರದಿಂದ 12 ವರ್ಷಗಳಿಗೊಮ್ಮೆ ನಡೆಯುವ ಕಾವೇರಿ ಪುಷ್ಕರ ಮಹಾಸ್ನಾನ ನಡೆಯಲಿದ್ದು, ಪೂಜೆಯ ಸಿದ್ದತೆಗಳು ಭರದಿಂದ ಸಾಗುತ್ತಿವೆ.

    12 ರಾಶಿಗಳಲ್ಲಿ ಗುರುವು ಯಾವ ದಿನ ಯಾವ ರಾಶಿಗಳಿಗೆ ಪ್ರವೇಶ ಮಾಡುತ್ತಾನೋ ಆ ದಿನದಿಂದ 12 ದಿನಗಳನ್ನು ಮಹಾ ಪುಷ್ಕರ ಪರ್ವಕಾಲ ಎನ್ನುತ್ತಾರೆ.

    ಯಾವ ರಾಶಿಗೆ ಯಾವ ನದಿ?
    ಗುರುವು ಮೇಷ ರಾಶಿಗೆ ಪ್ರವೇಶ ಮಾಡಿದಾಗ ಗಂಗಾನದಿ, ವೃಷಭದಲ್ಲಿ ನರ್ಮದಾ ನದಿ, ಮಿಥುನದಲ್ಲಿ ಸರಸ್ವತಿ ನದಿ, ಕರ್ಕಾಟಕದಲ್ಲಿ ಯಮುನಾ ನದಿ, ಸಿಂಹದಲ್ಲಿ ಗೋದಾವರಿ ನದಿ, ಕನ್ಯಾದಲ್ಲಿ ಕೃಷ್ಣಾನದಿ, ತುಲಾದಲ್ಲಿ ಕಾವೇರಿನದಿ, ವೃಶ್ಚಿಕದಲ್ಲಿ ಭೀಮಾ ನದಿ, ಧನುಸ್ಸುವಿನಲ್ಲಿ ತಪತಿ ನದಿ, ಮಕರದಲ್ಲಿ ತುಂಗಭದ್ರಾ ನದಿ, ಕುಂಭದಲ್ಲಿ ಸಿಂಧು ನದಿ, ಮೀನಾದಲ್ಲಿ ಪ್ರಣಹಿತ ನದಿ ಹೀಗೆ ಗುರುವು 12 ರಾಶಿಗಳನ್ನು ವರ್ಷಕ್ಕೊಂದರಂತೆ ಪ್ರವೇಶ ಮಾಡಿದಾಗ, ಆ ರಾಶಿಗೆ ಸಂಬಂಧಿಸಿದ ನದಿಗೆ ವಿಶೇಷ ಶಕ್ತಿ ಇರುತ್ತದೆ.

    ಈ ವರ್ಷ ಗುರುವು ತುಲಾ ರಾಶಿಗೆ ಪ್ರವೇಶ ಮಾಡಲಿದ್ದಾನೆ. ಗುರುವು ಮಂಗಳವಾರ ಬೆಳಗ್ಗೆ 6-45ಕ್ಕೆ ಕನ್ಯಾರಾಶಿಯಿಂದ ತುಲಾರಾಶಿಗೆ ಪ್ರವೇಶ ಮಾಡುತ್ತಿದ್ದು ಈ ಅವಧಿಯಲ್ಲಿ ದಕ್ಷಿಣ ಭಾರತದ ಜೀವನದಿ ಎಂದೇ ಕರೆಸಿಕೊಂಡಿರುವ ಕಾವೇರಿ ನದಿಯಲ್ಲಿ ಮಹಾ ಪುಷ್ಕರ ಆಗಲಿದೆ.

    ಪೌರಾಣಿಕ ಹಿನ್ನೆಲೆ ಏನು?
    ತುಂದಿಲನೆಂಬ ಋಷಿಯು ಶಿವನ ತಪಸ್ಸು ಮಾಡಿ ಶಿವನ ಅಂಶಗಳಲ್ಲಿ ಸೇರಿ ನೀರೇ ಆಗಿ ಪುಷ್ಕರ(ಜಲದೇವತೆ) ಆಗಿ ಬಿಟ್ಟನು. ಬ್ರಹ್ಮನು ಈ ಜಗತ್ತನ್ನು ಸೃಷ್ಟಿಸಿದಾಗ ಜಲದೇವತೆ ಹಾಗೂ ಬೃಹಸ್ಪತಿ ದೇವತೆಗಳ ಸಹಾಯ ಪಡೆದಿದ್ದ ಎನ್ನುವುದನ್ನು ಪುರಾಣ ಕೋಶಗಳು ಹೇಳುತ್ತವೆ.

    ಪುಷ್ಕರದಿಂದಾಗಿ ಕಾವೇರಿ ನದಿಗೆ ಈ ವರ್ಷ ವಿಶೇಷ ಶಕ್ತಿ ದೊರಕುತ್ತದೆ ಎನ್ನುವ ನಂಬಿಕೆ ಇದೆ. ಆದ್ದರಿಂದ ಶ್ರೀರಂಗಪಟ್ಟಣದ ಕಾವೇರಿ ನದಿ ದಂಡೆಯಲ್ಲಿ ಸೆಪ್ಟೆಂಬರ್ 12 ರಿಂದ 24ರವರೆಗೆ ಕಾವೇರಿ ಮಹಾಪುಷ್ಕರ ಸ್ನಾನ ಯಜ್ಞ ನಡೆಯಲಿದೆ.

    64 ಕೋಟಿ ತೀರ್ಥಗಳು ಭೂಲೋಕಕ್ಕೆ ಪುಷ್ಕರದ ವೇಳೆ ಇಳಿದು ಬಂದು ಕಾವೇರಿ ನದಿಗೆ ವಿಶೇಷ ಶಕ್ತಿ ಸಿಗುತ್ತದೆ. ಈ ವೇಳೆ ದೇವಾನುದೇವತೆಗಳು, ಸಪ್ತ ಋಷಿಗಳು, ನವಕಾಂಡ ಋಷಿಗಳು, ಎಲ್ಲ ಮಹರ್ಷಿಗಳು ನದಿಯಲ್ಲಿ ಸ್ನಾನ ಮಾಡಲು ಭೂಲೋಕಕ್ಕೆ ಇಳಿದು ಬರುತ್ತಾರೆ ಹೀಗಾಗಿ ಪುಷ್ಕರವಾದಿ ನದಿ ಹನ್ನೆರಡು ದಿನಗಳವರೆಗೆ ದೈವೀಶಕ್ತಿ ಹೊಂದಿರುತ್ತದೆ ಎನ್ನುವ ನಂಬಿಕೆ ಇದೆ.

    ಪುಷ್ಕರದ ಸಂದರ್ಭದಲ್ಲಿ ಕಾವೇರಿ ನದಿಯಲ್ಲಿ ಸ್ನಾನ ಮಾಡುವ ಎಲ್ಲ ಜೀವಿಗಳನ್ನು ಮನುಷ್ಯರನ್ನು ಕಾವೇರಿ ಪವಿತ್ರಗೊಳಿಸುತ್ತಾಳೆ. ಈ ವೇಳೆ ದಾನ ಧರ್ಮ ಮಾಡಿದವರಿಗೂ ವಿಶೇಷ ಪುಣ್ಯ ಲಭಿಸುತ್ತದೆ. ಗುರು ಬಲ ಇಲ್ಲದವರು ಪುಷ್ಕರ ಸ್ನಾನ ಮಾಡಿದರೆ ಗುರುಬಲ ಸಿಗುತ್ತದೆ ಎನ್ನುವ ನಂಬಿಕೆಯೂ ಇದೆ.

    ಈಗಾಗಲೇ ಭಕ್ತರು ಶ್ರೀರಂಗಪಟ್ಟಣಕ್ಕೆ ಆಗಮಿಸುತ್ತಿದ್ದು, ಕಾವೇರಿ ನದಿ ದಂಡೆಯಲ್ಲಿ ಪುಷ್ಕರ ಸ್ನಾನಕ್ಕಾಗಿ ಸಿದ್ಧತೆಗಳು ನಡೆಯುತ್ತಿವೆ.

    https://youtu.be/n8hvzN8Qoos

  • ಹುಟ್ಟುಹಬ್ಬದಂದೇ ಕಾವೇರಿ ನದಿಯಲ್ಲಿ ಮುಳುಗಿ ಮಂಡ್ಯ ಯುವಕನ ದುರ್ಮರಣ

    ಹುಟ್ಟುಹಬ್ಬದಂದೇ ಕಾವೇರಿ ನದಿಯಲ್ಲಿ ಮುಳುಗಿ ಮಂಡ್ಯ ಯುವಕನ ದುರ್ಮರಣ

    ಮಂಡ್ಯ: ತನ್ನ ಹುಟ್ಟುಹಬ್ಬದಂದೇ ಯುವಕನೊಬ್ಬ ಕಾವೇರಿ ನದಿಯಲ್ಲಿ ಮುಳುಗಿ ಸಾವನ್ನಪ್ಪಿರುವ ಮನಕಲಕುವ ಘಟನೆ ಮಂಡ್ಯ ಜಿಲ್ಲೆ, ಮಳವಳ್ಳಿ ತಾಲೂಕಿನ ಮುತ್ತತ್ತಿಯಲ್ಲಿ ನಡೆದಿದೆ.

    ರಾಮನಗರ ಮೂಲದ 20 ವರ್ಷದ ಯುವಕ ಮಹೇಶ್ ಮೃತ ದುರ್ದೈವಿ. ಬೆಂಗಳೂರಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದ ಮಹೇಶ್ ತನ್ನ ಹುಟ್ಟುಹಬ್ಬ ಆಚರಿಸಲು 12 ಜನ ಗೆಳೆಯರೊಂದಿಗೆ ಶುಕ್ರವಾರದಂದು ಮುತ್ತತ್ತಿಗೆ ಬಂದಿದ್ದರು. ಮೊದಲು ಮಹೇಶ್ ತನ್ನ ಗೆಳೆಯರೊಂದಿಗೆ ಸೇರಿ ಕಾವೇರಿ ನದಿ ದಂಡೆಯಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಆನಂತರ ಗೆಳೆಯರೆಲ್ಲ ಈಜಲು ಕಾವೇರಿ ನದಿಗೆ ಇಳಿದಿದ್ದಾರೆ. ಆದರೆ ಈಜಲು ನದಿಗೆ ಇಳಿದ ಮಹೇಶ್ ತನ್ನ ಹುಟ್ಟುಹಬ್ಬದ ದಿನದಂದೇ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

    ವಿಧಿಯಾಟಕ್ಕೆ ಮಹೇಶ್ ಪೋಷಕರು ಮತ್ತು ಗೆಳೆಯರ ಆಕ್ರಂದನ ಮುಗಿಲು ಮುಟ್ಟಿದೆ. ಘಟನೆ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕಾವೇರಿ ಉಗಮಸ್ಥಾನ ಭಾಗಮಂಡಲದಲ್ಲೂ ಮೂಡಿದ ಬರದ ಛಾಯೆ

    ಕಾವೇರಿ ಉಗಮಸ್ಥಾನ ಭಾಗಮಂಡಲದಲ್ಲೂ ಮೂಡಿದ ಬರದ ಛಾಯೆ

    ಕೊಡಗು: ಕಳೆದ 44 ವರ್ಷಗಳಿಂದ ಬರವೇ ಬಾರದ ಕೊಡಗಿನಲ್ಲೂ ಈಗ ಕ್ಷಾಮದ ಬಿಸಿ ತಟ್ಟಿದೆ. ದಕ್ಷಿಣ ಕಾಶ್ಮೀರ ಖ್ಯಾತಿಯ ಮಂಜಿನ ನಾಡಲ್ಲೂ ಕೆಂಡದಂಥ ಬಿಸಿಲ ಛಾಯೆ ತಾಂಡವವಾಡುತ್ತಿದೆ. ತಲಕಾವೇರಿಯ ತವರಲ್ಲೀಗ ಕುಡಿಯುವ ನೀರಿಗೆ ಹಾಹಾಕಾರ ಶುರುವಾಗಿದೆ. ಕಾವೇರಿ ಹುಟ್ಟುವ ತಲಕಾವೇರಿಯ ಭಾಂಗಮಂಡಲದ ತ್ರೀವೇಣಿ ಸಂಗಮದಲ್ಲಿ ನೀರಿಲ್ಲದೇ ಅಲ್ಪ ಪ್ರಮಾಣದ ನೀರಿಗೆ ತಡೆಗೋಡೆಯನ್ನು ಕಟ್ಟಿ ನೀರನ್ನು ಶೇಖರಣೆ ಮಾಡಲಾಗುತ್ತಿದೆ. ಇದರಿಂದ ಬರುವ ಭಕ್ತದಿಗಳಿಗೂ ನೀರಿನ ಸಮಸ್ಯೆ ಎದುರಾಗಿದೆ.

    ಕಾವೇರಿ ನದಿ ಉಗಮಸ್ಥಾನ ತಲಕಾವೇರಿಯಲ್ಲೇ ನೀರು ಬತ್ತುತ್ತಿದೆ. ಇಲ್ಲಿನ ಕುಂಡಿಕೆ ಎದುರಿನ ಕೊಳದಲ್ಲಿ ಹಲವು ವರ್ಷಗಳ ಬಳಿಕ ನೀರು ಖಾಲಿಯಾಗಿದೆ. ಹೊಸ ನೀರು ಹರಿಯದ ಕಾರಣ ಕೊಳದಲ್ಲಿನ ನೀರು ವಾಸನೆ ಬರುತ್ತಿದ್ದು, ಭಕ್ತರಿಗೆ ಸ್ನಾನ ಮಾಡಲು ಸಾಧ್ಯವಾಗುತ್ತಿಲ್ಲ. ಇಲ್ಲಿಗೆ ಬರುವ ಪ್ರವಾಸಿಗರಿಗೆ ಶೌಚಾಲಯಕ್ಕೆ ಹೋಗಲೂ ನೀರಿನ ಕೊರತೆಯಾಗಿದೆ.

    ಕಾವೇರಿ, ಕನ್ನಿಕೆ ಹಾಗೂ ಸುಜ್ಯೋತಿ ನದಿ ಸೇರುವ ಭಾಗಮಂಡಲದ ಪವಿತ್ರ ಸಂಗಮದಲ್ಲಿಯೂ ನೀರಿಲ್ಲದಂತಾಗಿದೆ. ಹಲವಾರು ವರ್ಷಗಳಿಂದ ಸಂಗಮದಲ್ಲಿ ಹರಿಯುವ ನೀರಿಗೆ ತಡೆಯೊಡ್ಡಿರಲಿಲ್ಲ. ಇದೀಗ ಇಲ್ಲಿನ ಕಟ್ಟೆಯ ಗೇಟ್ ಮುಚ್ಚಿ ನಿಲ್ಲಿಸಿದ ನೀರಿನಲ್ಲೇ ಭಕ್ತರು ಸ್ನಾನ ಮಾಡುತ್ತಿದ್ದಾರೆ. ಡಿಸೆಂಬರ್ ಬಳಿಕ ತಲಕಾವೇರಿಗೆ ತಿಂಗಳಿಗೆ ಎರಡು ಬಾರಿಯಾದರೂ ಮಳೆ ಬರುತ್ತಿತ್ತು. ಆದರೆ ಡಿಸೆಂಬರ್‍ನಿಂದ ಏಪ್ರಿಲ್ ಆದ್ರೂ ನಿರೀಕ್ಷೆಯಂತೆ ಮಳೆಯಾಗಿಲ್ಲ. ತಲಕಾವೇರಿ ಭಾಂಗಮಂಡಲಕ್ಕೆ ತಂಪಾದ ಪ್ರದೇಶ ಎಂಬ ಕಾರಣಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಿದ್ದರು. ಆದರೀಗ ಬಂದರೂ ಇಲ್ಲಿನ ಬಿಸಿಲಿನ ಬೇಗೆ ತಾಳಲಾರದೆ ಹಿಂತಿರುಗುತ್ತಿದ್ದಾರೆ. ಇದರಿಂದಾಗಿ ಪ್ರವಾಸೋದ್ಯಮದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ.

    1972ರ ಬಳಿಕ ಮೊದಲ ಬಾರಿಗೆ ಇಲ್ಲಿನ ಪ್ರಕೃತಿ ಬದಲಾಗಿದೆ. ಸಾಕಷ್ಟು ಮಳೆ ಬೀಳುವ ಮಡಿಕೇರಿ ತಾಲೂಕನ್ನೂ ಬೇಸಿಗೆ ಹಾಗೂ ಬರ ಆವರಿಸಿಕೊಳ್ಳಿತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಕೊಡಗಿನ ಪರಿಸರದ ಮೇಲೆ ಅಭಿವೃದ್ಧಿಯ ದೃಷ್ಟಿಯಿಂದ ಮಾರಕ ಯೋಜನೆಗಳನ್ನು ಜಾರಿಗೆ ತರುವುದರಿಂದ ಜಿಲ್ಲೆ ಹವಾಮಾನದಲ್ಲಿ ವೈಪರೀತ್ಯ ಕಂಡುಬರುತ್ತಿದೆ. ದಕ್ಷಿಣ ಭಾರತಕ್ಕೆ ನೀರುಣಿಸೋ ಕಾವೇರಿ ಹುಟ್ಟುವ ಜಿಲ್ಲೆಯಲ್ಲೇ ಬರದ ತಾಂಡವ ಹನಿ ನೀರಿಗೂ ಹಾಹಾಕಾರವನ್ನು ತಂದಿದೆ.