Tag: ಕಾವೇರಿ ನದಿ ನೀರು

  • ಕಾವೇರಿ ನದಿ ನೀರು ವಿವಾದ – ಶಾಶ್ವತ ಪರಿಹಾರಕ್ಕೆ ʻಕಾವೇರಿ ರಕ್ಷಣಾ ಸಮಿತಿʼ ರಚನೆ

    ಕಾವೇರಿ ನದಿ ನೀರು ವಿವಾದ – ಶಾಶ್ವತ ಪರಿಹಾರಕ್ಕೆ ʻಕಾವೇರಿ ರಕ್ಷಣಾ ಸಮಿತಿʼ ರಚನೆ

    – ಸ್ವಾಮೀಜಿ, ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ ರಚನೆ
    – ತಲಕಾವೇರಿಯಲ್ಲಿ ಪೂಜೆ ಸಲ್ಲಿಸಿದ ಸಮಿತಿ ಸದಸ್ಯರು

    ಮಡಿಕೇರಿ: ಕಾವೇರಿ ನದಿ (Cauvery River) ರಾಜ್ಯಕ್ಕೆ ಅಷ್ಟೇ ಅಲ್ಲ, ಪಕ್ಕದ ತಮಿಳುನಾಡು (TamilNadu), ಪುದುಚೇರಿಗೂ ಜೀವನದಿಯೇ ಆಗಿದೆ. ಉತ್ತರದಲ್ಲಿ ಗಂಗೆ ಎಷ್ಟು ಪವಿತ್ರಳೋ ದಕ್ಷಿಣದಲ್ಲಿ ಕಾವೇರಿ ನದಿಯೂ ಅಷ್ಟೇ ಪವಿತ್ರಳು ಎನ್ನುವ ಮಾತಿದೆ. ಈ ಕಾವೇರಿಯನ್ನು ಎರಡು ರಾಜ್ಯದ ಜನರು ಪೂಜ್ಯ ಭಾವನೆಯಿಂದ ನೋಡುತ್ತಾರೆ. ಆದ್ರೆ ನೀರಿನ ಸಮಸ್ಯೆ ಬಂದ್ರೆ ಸಾಕು ಎರಡು ರಾಜ್ಯದ ಜನರು ನೀರಿಗಾಗಿ ಹೋರಾಟ ಮಾಡುತ್ತಾರೆ. ಈ ಹಿನ್ನೆಲೆಯಲ್ಲಿ ರಾಜ್ಯದ ನಾನಾ ಭಾಗದ ಸ್ವಾಮೀಜಿಗಳು ನಿವೃತ್ತ ನ್ಯಾಯಾಧೀಶರು ಸೇರಿ ಪಕ್ಷ ಭೇದ ಮರೆತು ʻಕಾವೇರಿ ರಕ್ಷಣಾ ಸಮಿತಿʼಯೊಂದನ್ನ ರಚಿಸಿದ್ದಾರೆ. ಈ ಮೂಲಕ ಕಾವೇರಿ ನದಿ ನೀರಿನ ಸಮಸ್ಯೆಗೆ (Cauvery River water Dispute) ಶಾಶ್ವತ ಪರಿಹಾರ ಕಂಡುಕೊಳ್ಳಲು ರಾಜ್ಯದ ಸ್ವಾಮೀಜಿಗಳು ಮುಂದಾಗಿದ್ದಾರೆ.

    ಹೌದು. ಕಾವೇರಿ ನದಿಯು ಕೊಡಗಿನಲ್ಲಿ ರಾಜ್ಯದ ನಾನಾ ಭಾಗಗಳಿಗೆ ಅನ್ನದಾತೆಯಾಗಿದ್ದಾಳೆ. ಅಲ್ಲದೇ ತಮಿಳುನಾಡಿನ ಜನರು ಕಾವೇರಿ ನದಿಯ ನೀರನ್ನೇ ಅವಲಂಬಿಸಿದ್ದಾರೆ. ಹೀಗಾಗಿ ಕಾವೇರಿ ನದಿಯನ್ನು ಎರಡೂ ರಾಜ್ಯದ ಜನರು ಪೂಜ್ಯ ಭಾವನೆಯಿಂದ ಕಾಣುತ್ತಾರೆ. ಆದ್ರೆ ಹಲವು ವರ್ಷಗಳಿಂದ ಕಾವೇರಿ ನದಿ ನೀರು ಹಂಚಿಕೆ ವಿಚಾರ ಕರ್ನಾಟಕ ಮತ್ತು ತಮಿಳುನಾಡಿನ ನಡುವೆ ಜ್ವಲಂತ ಸಮಸ್ಯೆಯಾಗಿಯೇ ಉಳಿದಿದೆ. ಅದರಲ್ಲೂ ಮಳೆ ಅಭಾವ ಸಂದರ್ಭದಲ್ಲಿ ಎರಡು ರಾಜ್ಯದ ಜನರ ಕಷ್ಟ ಹೇಳತ್ತೀರದಾಗಿದೆ. ಇದನ್ನೂ ಓದಿ: ಪ್ಯಾನ್‌ ಇಂಡಿಯಾ ರೇಡ್‌ – 4 ರಾಜ್ಯಗಳಲ್ಲಿ ಬಿಷ್ಣೋಯ್‌ ಗ್ಯಾಂಗ್‌ನ 7 ಶೂಟರ್ಸ್‌ ಅರೆಸ್ಟ್‌

    ಇದೆಲ್ಲ ಸಮಸ್ಯೆಗಳಿಗೆ ಮುಕ್ತಿ ನೀಡಬೇಕೆಂಬ ಉದ್ದೇಶದಿಂದ ಕಾವೇರಿ ನದಿ ಪಾತ್ರದ ಸ್ವಾಮೀಜಿಗಳು, ನಿವೃತ್ತ ನ್ಯಾಯಾಧೀಶರು, ವಿಧಾನಪರಿಷತ್‌ ಮಾಜಿ ಸದಸ್ಯರು ʻಕಾವೇರಿ ರಕ್ಷಣಾ ಸಮಿತಿʼ ರಚಿಸಿದ್ದಾರೆ. ಈ ಮೂಲಕ ಎರಡೂ ರಾಜ್ಯಗಳ ಸಮಸ್ಯೆಯನ್ನು ಹೇಗೆ ಬರಿಸುವುದು ಅನ್ನೋ ಬಗ್ಗೆ ಚಿಂತನ-ಮಂಥನ ನಡೆಸಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಶುಕ್ರವಾರ ಎಲ್ಲರೂ ಒಟ್ಟಾಗಿ ಕಾವೇರಿ ನದಿ ಪಾತ್ರದ ಜನರು ತಲಕಾವೇರಿಯಲ್ಲಿ ಪೂಜೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ನಿಖಿಲ್ ಸ್ಪರ್ಧೆ ಮಾಡದೆ ಇದ್ದಿದ್ದರೆ ಕುಮಾರಸ್ವಾಮಿ ಮಗ ಹೆದರಿ‌ ಓಡಿ ಹೋದ ಅಂತಿದ್ದರು: ಹೆಚ್.ಡಿ.ರೇವಣ್ಣ

    ನಿರ್ಮಲಾನಂದನಾಥ ಸ್ವಾಮೀಜಿ, ಕಾವೇರಿ ನದಿ ಭಾಗದ ಎಲ್ಲಾ ಸ್ವಾಮೀಜಿಗಳು, ನಿವೃತ್ತ ಸಿಜೆಐ ಗೋಪಾಲ ಗೌಡ್ರು, ಹೈಕೋರ್ಟ್‌ ನಿವೃತ್ತ ನ್ಯಾಯಾಧೀಶರಾದ ನಾಗಮೋಹನ್ ದಾಸ್, ಕಾವೇರಿ ನ್ಯಾಯಾಧಿಕರಣ ವಾದ ಮಂಡಿಸಿರುವ ಹಿರಿಯ ವಕೀಲರು ಹಾಗೂ ನೀರಾವರಿ ತಜ್ಞರನ್ನು ಒಗ್ಗೂಡಿಸಿ ಚಿಂತನ-ಮಂಥನ ನಡೆಸಲಾಗುತ್ತದೆ. ಬಳಿಕ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಮನವಿ ಸಲ್ಲಿಸಿ ಶಾಶ್ವತ ಪರಿಹಾರ ಕಂಡುಕೊಳ್ಳಲು ಉದ್ದೇಶಿಸಲಾಗಿದೆ. ಅದಕ್ಕಾಗಿ ʻಕಾವೇರಿ ರಕ್ಷಣಾ ಸಮಿತಿʼಯನ್ನು ರಚಿಸಲಾಗಿದೆ. ಪಕ್ಷಾತೀತ, ಜಾತ್ಯತೀತ, ಧರ್ಮಾತೀತ ಹೊರತಾಗಿ ಎಲ್ಲರನ್ನೂ, ಸಾಮಾಜಿಕ ನ್ಯಾಯದಡಿ ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗುತ್ತದೆ ಎಂದು ಕಾವೇರಿ ನದಿ ರಕ್ಷಣಾ ಸಮಿತಿ ಅದ್ಯಕ್ಷ ರಾಮು ತಿಳಿಸಿದ್ದಾರೆ.

  • ಒಬ್ಬ ರೈತನ ಮಗನಾಗಿ ನನಗೆ ನೋವಿದೆ: ಹೆಚ್‌ಡಿಡಿ

    ಒಬ್ಬ ರೈತನ ಮಗನಾಗಿ ನನಗೆ ನೋವಿದೆ: ಹೆಚ್‌ಡಿಡಿ

    ಹಾಸನ: ಒಬ್ಬ ರೈತನ ಮಗನಾಗಿ ನನಗೆ ನೋವಿದೆ ಎಂದು ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುವ ವಿಚಾರವಾಗಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ (H.D.Deve Gowda) ಪ್ರತಿಕ್ರಿಯೆ ನೀಡಿದರು.

    ಹಾಸನದಲ್ಲಿ (Hassan) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ನಾಲ್ಕು ದಿನಗಳ ಹಿಂದೆ ಪ್ರಧಾನ ಮಂತ್ರಿಗಳಿಗೆ ಪತ್ರ ಬರೆದಿದ್ದೇನೆ. ಸರ್ಕಾರ ಇನ್ನೂ ಒಂದು, ಎರಡು ಗಂಟೆಗಳಲ್ಲಿ ತನ್ನ ನಿಲುವನ್ನು ಹೇಳಬಹುದು. ನಾನು ಬರೆದಿರುವ ಪತ್ರದಲ್ಲಿ ನಮ್ಮ ಸ್ಟ್ಯಾಂಡಿಂಗ್ ಕ್ರಾಪ್‌ಗೆ 70 ಟಿಎಂಸಿ ಬೇಕು ಎಂದು ಸ್ಪಷ್ಟವಾಗಿ ಉಲ್ಲೇಖಿಸಿದ್ದೇನೆ. ಆದರೆ ತಮಿಳರು ಕೊಡುವ ಅಂಕಿ ಅಂಶಗಳೇ ಬೇರೆ. ಸ್ಥಳ ಪರಿಶೀಲನೆ ಮಾಡದೆ ಕೆರೆ ತುಂಬಿಸಿಕೊಂಡಿದ್ದೇವೆ. ಅದನ್ನು ಬಂದು ನೋಡಿದ್ರೆ ಎಲ್ಲಾ ಮುಳುಗಿ ಹೋಗುತ್ತೆ ಅನ್ನೋದು ನಮ್ಮ ರಾಜ್ಯದ ಅಧಿಕಾರಿಗಳ ಭಾವನೆ. ನಾನು ನೀರಾವರಿ ಮಂತ್ರಿಯಾಗಿ ಕೆಲಸ ಮಾಡಿದ್ದೇನೆ. ಒಬ್ಬ ಸಣ್ಣ ಇಂಜಿನಿಯರಿಂಗ್ ಆಗಿ, ದೇಶದ ಪ್ರಧಾನ ಮಂತ್ರಿಯಾಗಿಯೂ ಕೆಲಸ ಮಾಡಿದ್ದೇನೆ. ಒಬ್ಬ ರೈತನ ಮಗನಾಗಿ ನನಗೆ ನೋವಿದೆ ಎಂದು ತಿಳಿಸಿದರು. ಇದನ್ನೂ ಓದಿ: ರಾಜ್ಯ ಸರ್ಕಾರಕ್ಕೆ ಕಾವೇರಿ ಬಗ್ಗೆ ಕಾಳಜಿಯಿಲ್ಲ: ಜಿ.ಟಿ.ದೇವೇಗೌಡ

    ಕಾವೇರಿ ವಿಷಯದಲ್ಲಿ ಜೆಡಿಎಸ್-ಬಿಜೆಪಿ ರಾಜಕೀಯ ಮಾಡುತ್ತಿದೆ ಎಂಬ ಸಿದ್ದರಾಮಯ್ಯ ಆರೋಪ ಕುರಿತು ಮಾತನಾಡಿ, ನಾನು ಪತ್ರ ಬರೆದಿದ್ದನ್ನು ಸಿದ್ದರಾಮಯ್ಯ ಅವರೇ ವೆಲ್‌ಕಮ್ ಮಾಡಿದ್ದಾರೆ. ಸರ್ಕಾರ ಏನು ತೀರ್ಮಾನ ಮಾಡುತ್ತೋ ಮಾಡಲಿ. ಹಿಂದೆ ಸಂಕಷ್ಟ ಬಂದಾಗ ಸಿದ್ದರಾಮಯ್ಯ, ವಕೀಲರು ನಮ್ಮ ಮನೆಗೆ ಬಂದಿದ್ದರು. ನಾನು ಗಾಂಧಿ ಪ್ರತಿಮೆ ಬಳಿ ಧರಣಿ ಕುಳಿತೆ. ಅನಂತ್‌ಕುಮಾರ್ ದೆಹಲಿಯಿಂದ ಬಂದರು. ಇದೇ ಪ್ರಧಾನಮಂತ್ರಿ ಇದ್ದರು. ದೇವೇಗೌಡರು ಏನು ಹೇಳಿದ್ದಾರೆ, ಅದರಂತೆ ಮಾಡುತ್ತೇನೆ ಎಂದಿದ್ದರು. ಈಗ ಆ ಶಕ್ತಿ ನನ್ನಲ್ಲಿ ಇಲ್ಲ. ನೀವು ಕರುಣೆ ತೋರಿಸಬೇಕು. ಈಗ 93 ವರ್ಷ ನನಗೆ ಎಂದು ಹೇಳಿದರು.

    1962 ರಲ್ಲಿ ಅಸೆಂಬ್ಲಿಗೆ ಎಂಟ್ರಿಯಾದೆ. ನನ್ನ ಹೋರಾಟ ಅಲ್ಲಿಂದ ಪ್ರಾರಂಭವಾಯ್ತು. 1964 ರಲ್ಲಿ ನಿಜಲಿಂಗಪ್ಪ ಅವರು ಇದ್ದಾಗ ಅಸೆಂಬ್ಲಿಯಲ್ಲಿ ನಿರ್ಣಯ ಆಗಿದೆ. ಕಮಿಟಿ ವರದಿ ಕೊಟ್ಟಂತೆ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಕೆಲವರು ಶುಕ್ರವಾರ ಬಂದ್ ಮಾಡ್ತರಂತೆ. ಕೆಲವರು ಇವತ್ತು ಮಾಡಿದ್ದಾರೆ. ಕೆಲವರು ವಿಧಾನಸೌಧ ಮುತ್ತಿಗೆ ಹಾಕ್ತಾರಂತೆ. ಇದು ಕರ್ನಾಟಕ ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ರಷ್ಯಾ-ಉಕ್ರೇನ್ ಯುದ್ಧ ನಿಲ್ಲಿಸುವ ಮೋದಿಗೆ ಕಾವೇರಿ ವಿವಾದ ಬಗೆಹರಿಸಲು ಸಾಧ್ಯವಿಲ್ವಾ?: ಪ್ರಿಯಾಂಕ್ ಖರ್ಗೆ

    ಕುಮಾರಸ್ವಾಮಿ ಅವರು ಡ್ಯಾಂನ ಸ್ಥಳ ಪರಿಶೀಲನೆ ಮಾಡಿ, ಅಲ್ಲಿ ನೀರು ಎಷ್ಟಿದೆ ಎಂದು ವಿವರ ತೆಗೆದುಕೊಂಡು ಬಂದ ಮೇಲೆ ನಾನು ಪತ್ರ ಬರೆದಿದ್ದೇನೆ. ನಿಷ್ಪಕ್ಷಪಾತವಾಗಿ ಎರಡು ರಾಜ್ಯಗಳ ಸ್ಥಿತಿಯನ್ನು ಪರಿಶೀಲನೆ ಮಾಡಲಿ. ಒಂದು ಟೀಂ ಕಳುಹಿಸಲಿ, ವಾಸ್ತವ ಸ್ಥಿತಿ ತಿಳಿಯಲಿ. ನಾನು ಬರೆದ ಪತ್ರದ ಸಾರಾಂಶ ಇದೆ. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಸಿಎಂಗಳಾದ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಎಲ್ಲರೂ ಅದನ್ನು ಸ್ವಾಗತಿಸಿದ್ದಾರೆ. ಇವತ್ತು ಸಿಡಬ್ಯುಆರ್‌ಸಿ ಸಭೆ ಇತ್ತು. ಅವರು ಕುಳಿತು ನಿರ್ಣಯ ಮಾಡಿದ್ದಾರೆ. ಸಿಡಬ್ಯುಆರ್‌ಸಿ ಆದೇಶದಂತೆ 63 ಸಾವಿರ ಕ್ಯೂಸೆಕ್ ನೀರು ಬಿಡಬೇಕು. ಆರು ಟಿಎಂಸಿ ನೀರು ಬಿಡಬೇಕು. ನಮ್ಮ ಸರ್ಕಾರ ಕೊಟ್ಟಿರುವ ಲೆಕ್ಕ 56 ಟಿಎಂಸಿ. ನಮ್ಮ ಸ್ಟ್ಯಾಂಡ್ 70 ಟಿಎಂಸಿ ಬೇಕು, ಅದನ್ನು ಒದಗಿಸಲು ಇವರ ಕೈಯಲ್ಲಿ ಆಗಲ್ಲ. ಏನು ಮಾಡುತ್ತಾರೋ ಗೊತ್ತಿಲ್ಲ ಎಂದರು.

    ಸರ್ಕಾರದ ನಿಲುವನ್ನು ಇನ್ನೂ ಹೇಳಿಲ್ಲ. ಈಗ ವೈಯುಕ್ತಿಕ ಅಭಿಪ್ರಾಯ ಕೊಡುವುದು ಸೂಕ್ತವಲ್ಲ. ಈ ವಿಷಯದಲ್ಲಿ ಒಬ್ಬ ಹಿರಿಯ ರಾಜಕಾರಣಿ ಆಗಿ ಮೊದಲಿನಿಂದಲೂ ಕಾವೇರಿ ಬಗ್ಗೆ ಐಕ್ಯತೆ ಇಲ್ಲಾ ಎಂದು ಹಲವಾರು ಬಾರಿ ಹೇಳಿದ್ದಾರೆ. ತಮಿಳುನಾಡಿನಲ್ಲಿ ಐಕ್ಯತೆ ಇದೆ. ಸರ್ಕಾರದ ನಿಲುವು ಬಂದ ಮೇಲೆ ನಾನು ನನ್ನ ಅಭಿಪ್ರಾಯ ಹೇಳುತ್ತೇನೆ. ಸರ್ಕಾರದ ತೀರ್ಮಾನಕ್ಕೆ ನಾನು, ಕುಮಾರಸ್ವಾಮಿ ಸಹಕರಿಸಬೇಕಾಗುತ್ತದೆ ಎಂದು ತಿಳಿಸಿದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಟ-ನಟಿಯರನ್ನ ಆರತಿ ಎತ್ತಿ ಕಾವೇರಿ ಹೋರಾಟಕ್ಕೆ ಕರೆಯಬೇಕಾ? – ಶಾಸಕ ಯತ್ನಾಳ್‌ ವಾಗ್ದಾಳಿ

    ನಟ-ನಟಿಯರನ್ನ ಆರತಿ ಎತ್ತಿ ಕಾವೇರಿ ಹೋರಾಟಕ್ಕೆ ಕರೆಯಬೇಕಾ? – ಶಾಸಕ ಯತ್ನಾಳ್‌ ವಾಗ್ದಾಳಿ

    ವಿಜಯಪುರ: ಕನ್ನಡ ಚಿತ್ರರಂಗದ ನಟ-ನಟಿಯರನ್ನ (Cinema Actress) ಆರತಿ ಎತ್ತಿ ಕಾವೇರಿ ಹೋರಾಟಕ್ಕೆ ಬನ್ನಿ ಅಂತಾ ಕರೆಯಬೇಕಾ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ (Basanagouda Patil Yatnal) ವಾಗ್ದಾಳಿ ನಡೆಸಿದ್ದಾರೆ.

    ಕನ್ನಡ ಚಿತ್ರರಂಗದ ನಟ ನಟಿಯರು ಕಾವೇರಿ ಹೋರಾಟದಲ್ಲಿ (Cauvery Protest) ಭಾಗಿಯಾಗುತ್ತಿಲ್ಲ ಎನ್ನುವ ವಿಚಾರಕ್ಕೆ ಪ್ರತಿಕ್ರಿಯಿಸಿ ನಗರದಲ್ಲಿ ಮಾತನಾಡಿದ ಅವರು, ಕನ್ನಡ ಚಿತ್ರರಂಗದ ನಟ, ನಟಿಯರು ಈಗಲಾದರೂ ಹೊರಬರಲಿ. ಚಿತ್ರರಂಗದ ಮೂಲಕ ಹಣ ಮಾಡಿಕೊಂಡಿದ್ದಾರಲ್ಲ ಈಗಲಾದರೂ ಹೊರಬರಲಿ, ಹೋರಾಟಕ್ಕೆ ಕೈಜೋಡಿಸಲಿ. ಇಲ್ಲದಿದ್ದರೆ ಯಾರು ಕಾವೇರಿ ಹೋರಾಟದಲ್ಲಿ ಭಾಗಿಯಾಗುವುದಿಲ್ಲವೋ ಅವರ ಚಿತ್ರಗಳನ್ನ ಜನರು ಬಹಿಷ್ಕರಿಸಬೇಕು ಎಂದು ಕರೆ ನೀಡಿದ್ದಾರೆ. ಇದನ್ನೂ ಓದಿ: ಕರ್ನಾಟಕಕ್ಕೆ ಅನ್ಯಾಯವಾದ್ರೆ ಸಹಿಸಲ್ಲ – ʻಕರ್ನಾಟಕ ಬಂದ್‌ʼಗೆ ತಮಿಳು ಸಂಘದಿಂದ ಬೆಂಬಲ

    ನಾನೂ ಸಿನಿಮಾದಲ್ಲಿ ಸಿಎಂ ಪಾತ್ರ ಮಾಡಿದ್ದೆ: ಕಾವೇರಿ ಹೋರಾಟದಲ್ಲಿ ಭಾಗಿಯಾಗಬೇಕು ಅಂತ ಚಿತ್ರ ನಟ, ನಟಿಯರ ಮನೆಗೆ ಹೋಗಿ ಆರತಿ ಎತ್ತಿ ಕರೆಯಬೇಕಾ? ಕಾವೇರಿ ನದಿ ನೀರಿನ ವಿಚಾರದಲ್ಲಿ ಸ್ವಯಂ ಪ್ರೇರಿತವಾಗಿ ಹೋರಾಟದಲ್ಲಿ ಭಾಗಿಯಾಗಬೇಕು. ಇಲ್ಲಿಯ ನಟ-ನಟಿಯರ ಚಿತ್ರಗಳನ್ನ ಕನ್ನಡದವರೇ ವೀಕ್ಷಣೆ ಮಾಡೋದು. ಕಾವೇರಿ ತೀರದ ಭಾಗದವರೇ ಹೆಚ್ಚಿನವರು ಚಿತ್ರರಂಗದಲ್ಲಿದ್ದಾರೆ. ಉತ್ತರ ಕರ್ನಾಟಕ ಭಾಗದವರು ಯಾರೂ ಹೀರೋಗಳಿಲ್ಲ. ಉತ್ತರ ಕರ್ನಾಟಕ ಭಾಗದವರಿಗೆ ಕೇವಲ ಹಾಸ್ಯ ಪಾತ್ರಗಳನ್ನ ಮಾತ್ರ ಕೊಡುತ್ತಾರೆ. ನಾನು ಕೂಡ ಒಂದು ಸಿನಿಮಾದಲ್ಲಿ ಸಿಎಂ ಪಾತ್ರ ಮಾಡಿದ್ದೆ ಎಂದು ಯತ್ನಾಳ್‌ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಕಾವೇರಿ ಸಮಸ್ಯೆ ಬಗೆಹರಿಸಲು ಪ್ರಧಾನಿ ಮಧ್ಯಸ್ಥಿಕೆ ವಹಿಸುವಂತೆ ದೇವೇಗೌಡರಿಂದ ಪತ್ರ; ಸಿದ್ದರಾಮಯ್ಯ ಶ್ಲಾಘನೆ

    ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಕೇಂದ್ರಕ್ಕೆ ಕೇಳಿ ತಮಿಳುನಾಡಿಗೆ ನೀರು ಬಿಟ್ರಾ? ತಮಿಳುನಾಡಿನ‌ ಮುಖ್ಯಮಂತ್ರಿಯನ್ನ ಖುಷಿಪಡಿಸಲು ರಾತ್ರೋ ರಾತ್ರಿ ನೀರು ಬಿಟ್ಟಿದ್ದಾರೆ. ಈ ವಿಚಾರದಲ್ಲಿ ಕೇಂದ್ರ ಈಗ ಏಕೆ ಹಸ್ತಕ್ಷೇಪ ಮಾಡಬೇಕು? ಕಾಂಗ್ರೆಸ್ ಸರ್ಕಾರ ಅಧಿಕಾರ ಬಂದ್ಮೇಲೆ ಒಂದುಬಾರಿಯೂ ಸಂಸದರ ಸಭೆ ಮಾಡಿಲ್ಲ. ಕಾವೇರಿ‌ ನದಿ ನೀರಿನ ವಿಚಾರ ಉಲ್ಬಣಗೊಂಡ ಬಳಿಕ ಕಾಟಾಚಾರಕ್ಕೆ ಸಭೆ ಮಾಡಿದ್ದಾರೆ ಎಂದು ದೂರಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕರ್ನಾಟಕಕ್ಕೆ ಕುಡಿಯುವ ನೀರಿನ ಚಿಂತೆ; ತಮಿಳುನಾಡಿಗೆ ಬೆಳೆ ಬಾಡುವ ಚಿಂತೆ – 15 ದಿನ 5,000 ಕ್ಯೂಸೆಕ್ ಹರಿಸಲು CWRC ಸೂಚನೆ

    ಕರ್ನಾಟಕಕ್ಕೆ ಕುಡಿಯುವ ನೀರಿನ ಚಿಂತೆ; ತಮಿಳುನಾಡಿಗೆ ಬೆಳೆ ಬಾಡುವ ಚಿಂತೆ – 15 ದಿನ 5,000 ಕ್ಯೂಸೆಕ್ ಹರಿಸಲು CWRC ಸೂಚನೆ

    ನವದೆಹಲಿ: ಕಾವೇರಿ (Cauvery Water Dispute) ಅಚ್ಚುಕಟ್ಟು ಪ್ರದೇಶದಲ್ಲಿ ಬರದ ಛಾಯೇ ಆವರಿಸುತ್ತಿರುವ ಹೊತ್ತಲ್ಲಿ ತಮಿಳುನಾಡಿಗೆ (Tamil Nadu) ನೀರು ಹರಿಸಲು ಕಾವೇರಿ ನೀರು ನಿಯಂತ್ರಣ ಸಮಿತಿ ಕರ್ನಾಟಕಕ್ಕೆ ನಿರಂತರ ಆದೇಶ ನೀಡುತ್ತಿದೆ. ಇಂದು (ಮಂಗಳವಾರ) ಸಭೆ ನಡೆಸಿರುವ ಸಮಿತಿ ನಿತ್ಯ ಐದು ಸಾವಿರ ಕ್ಯೂಸೆಕ್‌ನಂತೆ ಹದಿನೈದು‌ ದಿನಗಳ ಕಾಲ ನೀರು ಹರಿಸಲು ಶಿಫಾರಸು ಮಾಡಿದೆ.

    ಆಗಸ್ಟ್ 29 ರ ಆದೇಶ ಅಂತ್ಯವಾದ ಹಿನ್ನೆಲೆ ಇಂದು ವೀಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ ಕಾವೇರಿ ನೀರು ನಿಯಂತ್ರಣ ಸಮಿತಿ ತನ್ನ ಹಳೆ ಆದೇಶವನ್ನು ಮುಂದಿನ ಹದಿನೈದು ದಿನ ಮುಂದುವರಿಸಲು ಸೂಚನೆ ನೀಡಿದೆ. ಸಮಿತಿಯ ಈ ಆದೇಶದಿಂದ ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿ ಕುಡಿಯುವ ನೀರಿಗೆ ತತ್ವಾರ ಎದುರಿಸುವ ಸಾಧ್ಯತೆಗಳಿದೆ. ಇದನ್ನೂ ಓದಿ: ಸನಾತನ ಧರ್ಮದ ವಿರುದ್ಧ ಮಾತನಾಡುವವರ ನಾಲಿಗೆ, ಕಣ್ಣು ಕಿತ್ತುಹಾಕಬೇಕು: ಗಜೇಂದ್ರ ಸಿಂಗ್‌ ಶೇಖಾವತ್‌

    ಇಂದು ಸಭೆಯಲ್ಲಿ ಭಾಗಿಯಾಗಿದ್ದ ತಮಿಳುನಾಡು ಪರ ಅಧಿಕಾರಿಗಳು ಕೃಷಿ ಬಗ್ಗೆ ತಮಿಳುನಾಡು ಪ್ರಸ್ತಾಪಿಸಿದ್ದಾರೆ. ಕಳೆದ ಆದೇಶದಲ್ಲಿ ನಿತ್ಯ 5 ಸಾವಿರ ಕ್ಯೂಸೆಕ್ ನೀರು ಹದಿನೈದು ದಿನ ಹರಿಸಲು ಸೂಚಿಸಿತ್ತು. ಆದರೆ ಕರ್ನಾಟಕ ನಿತ್ಯ 3,000-3,400 ಕ್ಯೂಸೆಕ್ ನೀರು ಮಾತ್ರ ಬಿಡುಗಡೆ ಮಾಡಿದೆ. ನೀರು ಬಿಡುಗಡೆ ವಿಳಂಬವಾಗುತ್ತಿರುವ ಹಿನ್ನೆಲೆ ಬೆಳೆಗಳು ನಾಶವಾಗುತ್ತಿದೆ ಎಂದು ಆರೋಪಿಸಿದ್ದು, 36.76 ಟಿಎಂಸಿ ಬಾಕಿ ನೀರು ಕೂಡಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದೆ.

    ಮಳೆಯ ಪ್ರಮಾಣ ಕಡಿಮೆ ಇರುವ ಹಿನ್ನೆಲೆ ಜಲಾಶಯಗಳಲ್ಲಿ ನೀರಿನ ಕೊರತೆಯಾಗಿದೆ. ತಮಿಳುನಾಡಿಗೆ ನೀರು ಹರಿಸಿದರೆ ಕುಡಿಯುವ ನೀರಿಗೆ ತತ್ವಾರ ಎದುರಿಸಬೇಕಾಗುತ್ತದೆ. ಹೀಗಾಗಿ ನೀರು ಬಿಡಲು ಸಾಧ್ಯವಿಲ್ಲ ಎಂದು ಪ್ರತಿಭಟಿಸಿದರು. ಅಂತಿಮವಾಗಿ ಸಭೆಯಲ್ಲಿ ನೀರು ಹರಿಸಲು ಸಮಿತಿ ಸೂಚನೆ ನೀಡಿದೆ. ಈ ಹಿಂದೆ ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದ್ದ ಕರ್ನಾಟಕ ಸೆ.12 ರ ಬಳಿಕ ನೀರು ಹರಿಸಲು ಕಷ್ಟವಾಗಲಿದೆ ಎಂದು‌ ಹೇಳಿತ್ತು. ಈ ಬೆನ್ನಲ್ಲೇ ಸಮಿತಿ ಈಗ ನೀರು ಹರಿಸಲು ಸೂಚನೆ ನೀಡಿದ್ದು, ಈ ಆದೇಶವನ್ನು ಕರ್ನಾಟಕ ಪಾಲಿಸಲಿದ್ಯಾ ಎಂದು ಕಾದು ನೋಡಬೇಕಿದೆ. ಇದನ್ನೂ ಓದಿ: ಕೇರಳದಲ್ಲಿ ಇಬ್ಬರು ಅಸಹಜ ಸಾವು – ನಿಫಾ ಸೋಂಕು ಶಂಕೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]