Tag: ಕಾವೇರಿ ತೀರ್ಪು

  • ಕಾವೇರಿ ತೀರ್ಪಿನಿಂದ ನಮಗೆ ಲಾಭ, ಹೋರಾಟಕ್ಕೆ ನ್ಯಾಯ ಸಿಕ್ಕಿದೆ: ತಮಿಳುನಾಡು ರೈತರು

    ಕಾವೇರಿ ತೀರ್ಪಿನಿಂದ ನಮಗೆ ಲಾಭ, ಹೋರಾಟಕ್ಕೆ ನ್ಯಾಯ ಸಿಕ್ಕಿದೆ: ತಮಿಳುನಾಡು ರೈತರು

    ಚೆನ್ನೈ: ಕಾವೇರಿ ನದಿ ನೀರಿನ ಹಂಚಿಕೆ ವಿಚಾರದಲ್ಲಿ ತಮಿಳುನಾಡಿಗೆ ಕರ್ನಾಟಕ ಬಿಡಬೇಕಿದ್ದ ನೀರಿನ ಪ್ರಮಾಣವನ್ನು ಸುಪ್ರೀಂ ಕೋರ್ಟ್ ಕಡಿಮೆ ಮಾಡಿದರೂ ಅಲ್ಲಿನ ರೈತರು ತೀರ್ಪಿನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ತಮಿಳುನಾಡಿನ ರಾಜಕೀಯ ಮುಖಂಡರಾದ ಡಿಎಂಕೆಯ ಕಾರ್ಯಧ್ಯಕ್ಷ ಎಂಕೆ ಸ್ಟಾಲಿನ್ ಆರ್‍ಕೆ ನಗರ ಕ್ಷೇತ್ರದ ಶಾಸಕ ಟಿಟಿವಿ ದಿನಕರನ್ ತೀರ್ಪಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರೆ ಅಲ್ಲಿನ ರೈತರು ತೀರ್ಪನ್ನು ಸ್ವಾಗತಿಸಿದ್ದಾರೆ.

    ಮಾಧ್ಯಮವೊಂದು ರೈತ ಮುಖಂಡ ಅಯ್ಯಾಕನ್ನು ಅವರನ್ನು ಮಾತನಾಡಿಸಿದಾಗ, ಕಾವೇರಿ ನ್ಯಾಯಾಧಿಕರಣ 192 ಟಿಎಂಸಿ ನೀರನ್ನು ಬಿಡುಗಡೆ ಮಾಡಬೇಕು ಎಂದು ಆದೇಶಿಸಿತ್ತು. ಆದರೆ ಇದು ಪೇಪರ್ ನಲ್ಲಿ ಮಾತ್ರವಿದ್ದು ಕಾರ್ಯ ರೂಪಕ್ಕೆ ಬರಲೇ ಇಲ್ಲ. ಪ್ರತಿವರ್ಷ ತಮಿಳುನಾಡು 100 ಟಿಎಂಸಿ ನೀರು ಪಡೆದುಕೊಂಡಿದೆ. ಆದರೆ ಈಗ 177 ಟಿಎಂಸಿ ನೀರನ್ನು ಬಿಡಲೇಬೇಕಿದೆ. ಹೀಗಾಗಿ ನೀರು ನಮಗೆ ಬರುತ್ತದೆ ಎಂದು ತಿಳಿಸಿದ್ದಾರೆ.

    ಕರ್ನಾಟಕ ಇದೂವರೆಗೂ ಕಾವೇರಿ ನಮ್ಮವಳು ಎಂದು ವಾದಿಸಿಕೊಂಡು ಬರುತಿತ್ತು. ಆದರೆ ಈಗ ಕೋರ್ಟ್ ಕಾವೇರಿ ಕರ್ನಾಟಕದ ಆಸ್ತಿಯಲ್ಲ. ಎಲ್ಲರ ಆಸ್ತಿ ಮತ್ತು ರಾಷ್ಟ್ರೀಯ ಸಂಪತ್ತು ಎಂದು ತೀರ್ಪು ನೀಡಿದ್ದು ನಮಗೆ ಸಂತಸ ನೀಡಿದೆ ಎಂದಿದ್ದಾರೆ. ಇದನ್ನೂ ಓದಿ: ಕರ್ನಾಟಕಕ್ಕೆ ಹೆಚ್ಚುವರಿ ನೀರು, 15 ವರ್ಷಕ್ಕೆ ನ್ಯಾಯಾಧಿಕರಣ ತೀರ್ಪು ಅನ್ವಯ: ಸುಪ್ರೀಂ ಕೋರ್ಟ್

    ಕಾವೇರಿ ನಿರ್ವಹಣಾ ಮಂಡಳಿಯನ್ನು ಸ್ಥಾಪಿಸಬೇಕು ಎಂದು ನಾವು ಬೇಡಿಕೆಯನ್ನು ಇರಿಸಿದ್ದು ಕೇಂದ್ರ ಸರ್ಕಾರ ಪರಿಗಣಿಸಲೇ ಇಲ್ಲ. ಕೇಂದ್ರ ಸರ್ಕಾರ 2013 ಫೆ.19ರಂದು ಗೆಜೆಟ್ ಅಧಿಸೂಚನೆ ಹೊರಡಿಸಿದ್ದರೂ ಸರ್ಕಾರ ಸ್ಥಾಪಿಸಿಲ್ಲ. ಆದರೆ ಈಗ ಕೋರ್ಟ್ ಈ ತೀರ್ಪು ಪ್ರಕಟವಾದ 6 ವಾರಗಳ ಒಳಗಡೆ ಸ್ಥಾಪಿಸಬೇಕು ಎಂದು ಹೇಳಿದೆ. ಹೀಗಾಗಿ ನಮ್ಮ ಬೇಡಿಕೆ ಕೋರ್ಟ್ ಮೂಲಕವೇ ಈಡೇರಿಕೆಯಾಗಿದೆ. ಕೋರ್ಟ್ ಸೂಚನೆಯನ್ನು ಕೇಂದ್ರ ಧಿಕ್ಕರಿಸಿದರೆ ಮತ್ತೆ ನಾವು ಸಂಸತ್ತಿನ ಮುಂದೆ ಪ್ರತಿಭಟಿಸುತ್ತೇವೆ ಎಂದು ಅಯ್ಯುಕನ್ನು ತಿಳಿಸಿದ್ದಾರೆ.ಇದನ್ನೂ ಓದಿ: ಕಾವೇರಿ ನೀರು ಹಂಚಿಕೆ ಸುಪ್ರೀಂ ತೀರ್ಪಿನಲ್ಲಿ ಏನಿದೆ? ಇಲ್ಲಿದೆ 14 ಪ್ರಮುಖ ಅಂಶಗಳು

    ಐತೀರ್ಪಿನ ಆದೇಶದ ಅನ್ವಯ ಕೇಂದ್ರ ಸರ್ಕಾರ ಕಾವೇರಿ ನಿರ್ವಹಣಾ ಮಂಡಳಿಯನ್ನು ರಚಿಸಬೇಕಿತ್ತು. ಆದರೆ ತೀರ್ಪು ಬಂದು 5 ವರ್ಷ ಕಳೆದರೂ ನಿರ್ವಹಣಾ ಮಂಡಳಿಯನ್ನು ರಚಿಸದ್ದಕ್ಕೆ ಕೇಂದ್ರವನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್ 2013ರ ಫೆ.20ರ ಒಳಗಡೆ ಅಂತಿಮ ಆದೇಶವನ್ನು ಜಾರಿಗೊಳಿಸಿ ಅಧಿಸೂಚನೆ ಹೊರಡಿಸಬೇಕೆಂದು 2013ರ ಫೆ.4ರಂದು ಖಡಕ್ ಆದೇಶವನ್ನು ನೀಡಿತ್ತು. ಈ ಆದೇಶದ ಅನ್ವಯ ಅಂತಿಮವಾಗಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿತ್ತು.  ಇದನ್ನೂ ಓದಿ: ಕಾವೇರಿ ನಿರ್ವಹಣಾ ಮಂಡಳಿಯ ಕೆಲಸ ಏನು? ನಿರ್ವಹಣಾ ಮಂಡಳಿಯ ಸ್ವರೂಪ ಏನು?

  • ಕಾವೇರಿ ತೀರ್ಪಿನ ಬಗ್ಗೆ ತಮಿಳುನಾಡು ಪರ ವಕೀಲ ಎ. ನವನೀತ್ ಕೃಷ್ಣನ್ ಪ್ರತಿಕ್ರಿಯೆ

    ಕಾವೇರಿ ತೀರ್ಪಿನ ಬಗ್ಗೆ ತಮಿಳುನಾಡು ಪರ ವಕೀಲ ಎ. ನವನೀತ್ ಕೃಷ್ಣನ್ ಪ್ರತಿಕ್ರಿಯೆ

    ನವದೆಹಲಿ: ಕಾವೇರಿ ತೀರ್ಪಿನ ಬಗ್ಗೆ ತಮಿಳುನಾಡು ಪರ ವಕೀಲ ಎ ನವನೀತ್ ಕೃಷ್ಣನ್ ಸುದ್ದಿ ಸಂಸ್ಥೆಗೆ ಪತ್ರಿಕ್ರಿಯೆ ನೀಡಿದ್ದಾರೆ.

    ಮೊದಲಿಗೆ ತಮಿಳುನಾಡಿಗೆ ನೀಡಲಾಗಿದ್ದ 192 ಟಿಎಂಸಿ ನೀರು ಸುಪ್ರೀಂ ಕೋರ್ಟ್ ಆದೇಶದಂತೆ ಇಳಿಕೆಯಾಗಿದೆ. ಬೆಂಗಳೂರಿಗೆ ನೀರು ಒದಗಿಸಲು 14.75 ಟಿಎಂಸಿಯಷ್ಟು ಹೆಚ್ಚುವರಿ ನೀರು ಕರ್ನಾಟಕ್ಕೆ ನೀಡಲಾಗಿದೆ. ತಮಿಳುನಾಡು ಸರ್ಕಾರ ಈ ಬಗ್ಗೆ ಸಮರ್ಪಕ ನಿರ್ಧಾರಗಳನ್ನ ತೆಗೆದುಕೊಳ್ಳುತ್ತದೆ ಎಂದು ಭಾವಿಸುತ್ತೇವೆ ಎಂದು ನವನೀತ್ ಕೃಷ್ಣನ್ ಹೇಳಿದ್ದಾರೆ.

    ನ್ಯಾಯಾಲಯದ ತೀರ್ಪಿನ ಬಗ್ಗೆ ನಮಗೆ ನಂಬಿಕೆ ಇದೆ ಹಾಗೂ ಅದನ್ನು ಗೌರವಿಸುತ್ತೇವೆ. ಖಂಡಿತವಾಗಿಯೂ ಇದು ಸಾಕಾಗುವುದಿಲ್ಲ. ನೀರಿನ ಕೊರತೆ ಬಗ್ಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಬಳಿ ಹೇಳಿದ್ದೇವೆ. ಇದರ ಪರಿಹಾರಕ್ಕೆ ಅವರು ಎರಡು ಯೋಜನೆಗಳನ್ನ ಹೊಂದಿದ್ದಾರೆ. ಅದರಲ್ಲಿ ಒಂದು ಗೋದಾವರಿ ಮತ್ತು ಕಳ್ಳಾನೈ ನದಿಗಳನ್ನ ಜೋಡಣೆ ಮಾಡುವುದು ಎಂದು ಅವರು ಹೇಳಿದ್ರು.