Tag: ಕಾವೇರಿ ಜಲಾನಯನ ಪ್ರದೇಶ

  • ಕೈಕೊಟ್ಟ ವರುಣ – ಮಳೆಗಾಗಿ ನಾಳೆ KRSನಲ್ಲಿ ವಿಶೇಷ ಹೋಮ

    ಕೈಕೊಟ್ಟ ವರುಣ – ಮಳೆಗಾಗಿ ನಾಳೆ KRSನಲ್ಲಿ ವಿಶೇಷ ಹೋಮ

    ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ (Cauvery Basin) ಇನ್ನೂ ಮುಂಗಾರು ಮಳೆಯ ಸೂಚನೆಯೇ ಇಲ್ಲದ ಕಾರಣ ಮಂಗಳವಾರ (ಜೂನ್ 13) ಕೆಆರ್‌ಎಸ್ ಜಲಾಶಯ (KRS Dam) ಬಳಿಯ ಕಾವೇರಿ ಮಾತೆಯ ಪ್ರತಿಮೆ ಮುಂದೆ ವರುಣನಿಗಾಗಿ ಹೋಮ ಹಾಗೂ ವಿಶೇಷ ಪೂಜೆ (Speical Pooja) ನೆರವೇರಿಸಲಾಗುತ್ತದೆ.

    ಕಾವೇರಿ ಒಡಲು ಭರ್ತಿಗಾಗಿ ಕಾವೇರಿ ನೀರಾವರಿ ನಿಗಮ ವಿಶೇಷ ಪೂಜೆಯ ಮೊರೆ ಹೋಗಿದೆ. ಮಂಗಳವಾರ ಬೆಳಗ್ಗೆ ಪ್ರಸಿದ್ಧ ವೈದಿಕ ಭಾನುಪ್ರಕಾಶ್ ಶರ್ಮಾ ಅವರ ನೇತೃತ್ವದಲ್ಲಿ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ KRS ಜಲಾಶಯ ಭರ್ತಿಗೆ 12 ಮಂದಿ ವೈದಿಕ ತಂಡದಿಂದ ವಿಶೇಷ ಪೂಜೆ ನಡೆಯಲಿದೆ. ಇದನ್ನೂ ಓದಿ: ʼಶಕ್ತಿʼ ಯೋಜನೆ ಘೋಷಣೆಯಾದ 2ನೇ ದಿನವೇ ಮಹಿಳೆಯರ ಪರದಾಟ – ಬಸ್ ಫುಲ್ ರಶ್

    ವರುಣನಿಗಾಗಿ ಹೋಮ-ಹವನ, ಗಂಗಾಪೂಜೆ ಸೇರಿದಂತೆ ಹಲವು ವಿಶೇಷ ಪೂಜಾ ಕೈಂಕರ್ಯಗಳು ನೆರವೇರಲಿವೆ. ಎರಡು ವರ್ಷಗಳ ಹಿಂದೆಯೂ ಮಳೆ ಕೈಕೊಟ್ಟಿದ್ದ ಕಾರಣ ಭಾನುಪ್ರಕಾಶ ಶರ್ಮಾ ಅವರ ನೇತೃತ್ವದಲ್ಲಿ ಅಂದು ಸಿಎಂ ಆಗಿದ್ದ ಬಸವರಾಜ ಬೊಮ್ಮಾಯಿ (Basavaraj Bommai) ಅವರು ವಿಶೇಷ ಪೂಜೆ ಸಲ್ಲಿಸಿದ್ದರು. ಆ ನಂತರ ಉತ್ತಮ ಮಳೆಯಾಗಿ ಕಾವೇರಿ ಒಡಲು ಭರ್ತಿಯಾಗಿತ್ತು. ಅಕ್ಟೋಬರ್ ನಲ್ಲಿ ಜಲಾಶಯ ಭರ್ತಿಯಾಗಿ ನವೆಂಬರ್‌ನಲ್ಲಿ ಭಾಗಿನ ಅರ್ಪಿಸಲಾಗಿತ್ತು. ಇದನ್ನೂ ಓದಿ: ʼಶಕ್ತಿʼ ಯೋಜನೆ ಉದ್ಘಾಟನೆ ಜೋಶ್‌ನಲ್ಲಿ ಸರ್ಕಾರಿ ಬಸ್ ಚಲಾಯಿಸಿ ಸ್ವಾಮೀಜಿ ಅಚಾತುರ್ಯ

    ಈ ಬಾರಿ ಆರಂಭದಲ್ಲೇ ಮಳೆ ಕೈಕೊಟ್ಟಿದ್ದು, 5 ವರ್ಷದ ಬಳಿಕ ಅತಿ ಕಡಿಮೆ ನೀರಿನ ಮಟ್ಟವನ್ನು ಕೆಆರ್‌ಎಸ್ ಜಲಾಶಯ ತಲುಪಿದೆ. ಇದರಿಂದ ಬೆಂಗಳೂರು, ಮೈಸೂರು ಸೇರಿದಂತೆ ಹಲವು ನಗರಗಳಿಗೆ ಕುಡಿಯುವ ನೀರಿಗೆ ಅಭಾವ ಶುರುವಾಗುವ ಸಾಧ್ಯತೆಯಿದೆ. ಅಲ್ಲದೇ ಕಾವೇರಿ ಅಚ್ಚುಕಟ್ಟು ಪ್ರದೇಶದ ರೈತರಲ್ಲೂ ಆತಂಕ ಎದುರರಾಗಿದೆ. 124.80 ಅಡಿ ಗರಿಷ್ಠ ಮಟ್ಟದ ಕೆಆರ್‌ಎಸ್ ಜಲಾಶಯದಲ್ಲಿ ಸದ್ಯ 83 ಅಡಿ ನೀರು ಮಾತ್ರ ಸಂಗ್ರಹವಾಗಿದ್ದು, 12.152 ಟಿಎಂಸಿ ನೀರು ಮಾತ್ರ ಸಂಗ್ರಹವಾಗಿದೆ.

    ಕಳೆದ ವಾರ 79 ಅಡಿಗೆ ನೀರಿನ ಮಟ್ಟ ಕುಸಿದಿತ್ತು, ಹೇಮಾವತಿ ಜಲಾಶಯದಿಂದ ನೀರು ಬಿಟ್ಟಿದ್ದ ಹಿನ್ನೆಲೆಯಲ್ಲಿ 83 ಅಡಿಗೆ ನೀರಿನ ಮಟ್ಟ ಏರಿಕೆಯಾಯಿತು. ಹೀಗಾಗಿ ಮಂಗಳವಾರ ಕಾವೇರಿ ಮಾತೆಯ ಎದುರು ವರುಣನಿಗಾಗಿ ವಿಶೇಷ ಹೋಮ ಹಾಗೂ ಪೂಜೆಯನ್ನು ನೆರವೇರಿಸಲಾಗುತ್ತದೆ.

  • KRS, ಕಬಿನಿ ಜಲಾಶಯಕ್ಕೆ ಬಾಗಿನ – ದಾಖಲೆ ಬರೆದ ಸಿಎಂ ಬೊಮ್ಮಾಯಿ

    KRS, ಕಬಿನಿ ಜಲಾಶಯಕ್ಕೆ ಬಾಗಿನ – ದಾಖಲೆ ಬರೆದ ಸಿಎಂ ಬೊಮ್ಮಾಯಿ

    ಮಂಡ್ಯ: ಹಳೆ ಮೈಸೂರು ಭಾಗದ ಜೀವನಾಡಿಯಾಗಿರುವ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಜಲಾಶಯಕ್ಕಿಂದು ವೃಶ್ಚಿಕ ಲಗ್ನದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಬಾಗಿನ ಅರ್ಪಿಸಿದ್ದಾರೆ. ಇದಕ್ಕೂ ಮುನ್ನ ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ ತಾಲ್ಲೂಕಿನ ಬಿದಿರಳ್ಳಿಯಲ್ಲಿರುವ ಕಬಿನಿ ಜಲಾಶಕ್ಕೂ ಬಾಗಿನ ಕೊಟ್ಟಿದ್ದಾರೆ.

    8 ತಿಂಗಳ ಅವಧಿಯಲ್ಲೇ ಬೊಮ್ಮಾಯಿ ಅವರು 2ನೇ ಬಾರಿಗೆ ಬಾಗಿನ ಅರ್ಪಿಸಿದ್ದಾರೆ. ಕೆಆರ್‌ಎಸ್ ಜಲಾಶಯ ಸಾಮಾನ್ಯವಾಗಿ ಆಗಸ್ಟ್ ನಲ್ಲಿ ಭರ್ತಿಯಾಗುತ್ತಿದ್ದರಿಂದ ಒಂದು ವರ್ಷ ಕಾಯಬೇಕಿತ್ತು. ಆದರೆ ಈ ಬಾರಿ ಮೂರು ತಿಂಗಳ ಮುಂಚೆಯೇ ಭರ್ತಿಯಾಗಿದ್ದು, 8 ತಿಂಗಳಲ್ಲೇ 2 ಬಾರಿ ಬಾಗಿನ ಅರ್ಪಿಸುವ ಅವಕಾಶ ಒದಗಿಬಂದಿದೆ. ಇದನ್ನೂ ಓದಿ: ದಕ್ಷಿಣ ಆಫ್ರಿಕಾ ಟಿ 20 ಲೀಗ್‌ – ಎಲ್ಲಾ 6 ತಂಡಗಳು ಐಪಿಎಲ್‌ ಫ್ರಾಂಚೈಸಿ ಪಾಲು

    ಸಿಎಂ ಆಗಮನದ ಹಿನ್ನೆಲೆಯಲ್ಲಿ ಹೂವು, ತಳಿರು ತೋರಣಗಳಿಂದ ಅಲಂಕರಿಸಿ ಕೆಆರ್‌ಎಸ್ ಹಾಗೂ ಕಬಿನಿ ಜಲಾಶಯದ ಹೊರಾಂಗಣವನ್ನು ಮದುವಣಗಿತ್ತಿಯಂತೆ ಸಿಂಗರಿಸಲಾಗಿತ್ತು. ವೃಶ್ಚಿಕ ಶುಭಲಗ್ನದಲ್ಲಿ ಸೀರೆ, ಬೆಲ್ಲ, ಅಕ್ಕಿ, ನವ ಧಾನ್ಯಗಳನ್ನು ಸಮರ್ಪಿಸುವ ಮೂಲಕ ಸಿಎಂ ಬಾಗಿನಕೊಟ್ಟರು. ಇದನ್ನೂ ಓದಿ: DSP‌ ಮಾದರಿಯಲ್ಲೇ ಮಹಿಳಾ PSI ಹತ್ಯೆ?- ತಪಾಸಣೆಗೆ ಮುಂದಾದ ಅಧಿಕಾರಿಗೆ ವಾಹನ ಡಿಕ್ಕಿ ಹೊಡೆದು ಸಾವು

    ಕಾರ್ಯಕ್ರಮದಲ್ಲಿ ಸಚಿವರಾದ ಗೋವಿಂದ ಕಾರಜೋಳ, ಕೆ.ಗೋಪಾಲಯ್ಯ, ಕೆ.ಸಿ.ನಾರಾಯಣ ಗೌಡ, ಎಸ್.ಟಿ.ಸೋಮಶೇಖರ್ ಸೇರಿದಂತೆ ಹಲವರು ಭಾಗಿಯಾಗಿದ್ದರು.

    ಈ ಹಿಂದೆ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು 6 ಬಾರಿ ಬಾಗಿನ ಬಿಟ್ಟು ಅತಿ ಹೆಚ್ಚು ಬಾರಿ ಬಾಗಿನ ಅರ್ಪಿಸಿದ ಸಿಎಂ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಇದೀಗ ಅತ್ಯಂತ ಕಡಿಮೆ ಅವಧಿಯಲ್ಲೇ 2 ಬಾರಿ ಬಾಗಿನ ಅರ್ಪಿಸಿದ ಹೆಗ್ಗಳಿಕೆಗೆ ಸಿಎಂ ಬೊಮ್ಮಾಯಿ ಪಾತ್ರರಾಗಿದ್ದಾರೆ.

    124.80 ಅಡಿ ಗರಿಷ್ಠ ಮಟ್ಟ ಹೊಂದಿರುವ ಕೆಆರ್‌ಎಸ್ ಜಲಾಶಯ ತುಂಬಿರುವುದರಿಂದ ಹಳೆ ಮೈಸೂರು ಭಾಗದ ಜನರಲ್ಲಿ ಸಂತಸ ಮನೆ ಮಾಡಿದೆ. ಹಾಗೆಯೇ 2,284 ಗರಿಷ್ಠಮಟ್ಟ ಹೊಂದಿರುವ ಕಬಿನಿ ಜಲಾಶಯ ತುಂಬಿರುವುದೂ ಜನರಲ್ಲಿ ಸಂತಹ ಹೆಚ್ಚಿಸಿದೆ. ಅದರೆ ಜಲಾನಯನ ಪ್ರದೇಶದಲ್ಲಿರುವ ಜನರಿಗೆ ಪ್ರವಾಹದ ಭೀತಿ ಉಂಟುಮಾಡಿದೆ. ಇದನ್ನೂ ಓದಿ: ‘ಪುಟ್ಟಪರ್ತಿ ಸಾಯಿಬಾಬಾ’ ಸಿನಿಮಾ ಮಾಡುವುದಾಗಿ ಘೋಷಿಸಿದ ಸಾಯಿ ಪ್ರಕಾಶ್ : ನಿರ್ದೇಶಕರ 100ನೇ ಸಿನಿಮಾವಿದು

    ಕೆಆರ್‌ಎಸ್ ಜಲಾಶಯ ಕಳೆದ ವರ್ಷ ಅಕ್ಟೋಬರ್ ತಿಂಗಳ ಕೊನೆಯ ವಾರದಲ್ಲಿ ಭರ್ತಿಯಾಗಿತ್ತು. ಆದರೆ ಈ ಬಾರಿ ಜುಲೈ ತಿಂಗಳ 2ನೇ ವಾರದಲ್ಲೇ ಭರ್ತಿಯಾಗಿದೆ. ಕೆಆರ್‌ಎಸ್‌ನ ಇತಿಹಾಸದಲ್ಲೇ ಜುಲೈ ತಿಂಗಳಲ್ಲಿ 6ನೇ ಬಾರಿಗೆ ಭರ್ತಿಯಾಗಿದೆ. ಈ ಹಿಂದೆ 1980, 2006, 2007, 2009, 2018ರಲ್ಲಿ ಭರ್ತಿಯಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಮೂರು ತಿಂಗಳ ಮೊದಲೇ KRS ಡ್ಯಾಂ ಸಂಪೂರ್ಣ ಭರ್ತಿ

    ಮೂರು ತಿಂಗಳ ಮೊದಲೇ KRS ಡ್ಯಾಂ ಸಂಪೂರ್ಣ ಭರ್ತಿ

    ಮಂಡ್ಯ: ಹಳೆ ಮೈಸೂರು ಭಾಗದ ಜೀವನಾಡಿಯಾಗಿರುವ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಡ್ಯಾಂ ಅವಧಿಗೂ ಮುನ್ನವೇ ಭರ್ತಿಯಾಗಿದೆ.

    124.80 ಅಡಿ ಗರಿಷ್ಠ ಮಟ್ಟವನ್ನು ಹೊಂದಿರುವ ಜಲಾಶಯ ತುಂಬಿರುವುದರಿಂದ ಹಳೆ ಮೈಸೂರು ಭಾಗದ ಜನರಲ್ಲಿ ಸಂತಸ ಮನೆ ಮಾಡಿದ್ರೆ ಕಾವೇರಿ ಕೊಳ್ಳದ ಜನರಿಗೆ ಪ್ರವಾಹದ ಭೀತಿ ಉಂಟುಮಾಡಿದೆ. ಕೆಆರ್‌ಎಸ್ ಜಲಾಶಯ ಕಳೆದ ವರ್ಷ ಅಕ್ಟೋಬರ್ ತಿಂಗಳ ಕೊನೆಯ ವಾರದಲ್ಲಿ ಭರ್ತಿಯಾಗಿತ್ತು. ಆದರೆ ಈ ಬಾರಿ ಜುಲೈ ತಿಂಗಳ 2ನೇ ವಾರದಲ್ಲೇ ಭರ್ತಿಯಾಗಿದೆ. ಇದನ್ನೂ ಓದಿ: ಮಾಲ್‌ನಲ್ಲಿ ನಮಾಜ್ – ಮಾಲ್ ಬಹಿಷ್ಕರಿಸುವಂತೆ ಹಿಂದೂ ಸಂಘಟನೆಗಳಿಂದ ಕರೆ

    ಕೆಆರ್‌ಎಸ್‌ನ ಇತಿಹಾಸದಲ್ಲೇ ಜುಲೈ ತಿಂಗಳಲ್ಲಿ 6ನೇ ಬಾರಿಗೆ ಭರ್ತಿಯಾಗಿದೆ. ಈ ಹಿಂದೆ 1980, 2006, 2007, 2009, 2018ರಲ್ಲಿ ಭರ್ತಿಯಾಗಿತ್ತು. ಇದನ್ನೂ ಓದಿ: ಆರ್ಯನ್ ಖಾನ್ ಡ್ರಗ್ಸ್ ಕೇಸ್‌ನಲ್ಲಿ ಮೌನ ಮುರಿದ ಶಾರುಖ್ ಖಾನ್ ಪತ್ನಿ

    ಕಾವೇರಿ ಜಲಾನಯನ ಪ್ರದೇಶದಲ್ಲಿ ಮತ್ತೆ ಮಳೆ ಆರ್ಭಟ ಹೆಚ್ಚಾಗಿದ್ದು, ಕಾವೇರಿ ನದಿ ತೀರದಲ್ಲಿ ನೆರೆ ಭೀತಿ ಉಂಟಾಗಿದೆ. ಕೆಆರ್‌ಎಸ್ ಡ್ಯಾಂನಿಂದ 75,000 ದಿಂದ 1,50,000 ಲಕ್ಷ ಕ್ಯೂಸೆಸ್ ನೀರು ಬಿಡುವ ಸಾಧ್ಯತೆಯಿದೆ. ಆದ್ದರಿಂದ ನದಿಪಾತ್ರದ ಜನರು ಆಸ್ತಿ ಪಾಸ್ತಿ, ಜಾನುವಾರು ರಕ್ಷಣೆಗೆ ಮುಂಜಾಗ್ರತ ಕ್ರಮ ವಹಿಸಬೇಕು ಎಂದು ಕಾವೇರಿ ನೀರಾವರಿ ನಿಗಮ ಕೆಆರ್‌ಎಸ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಎಚ್ಚರಿಕೆ ನೀಡಿದ್ದಾರೆ.

    1,50,000 ಕ್ಯೂಸೆಕ್ ನೀರು ಬಿಟ್ಟರೆ ಕೆಲ ಗ್ರಾಮಗಳಿಗೆ ನೀರು ನುಗ್ಗುವ ಭೀತಿಯಿದ್ದು, ನೂರಾರು ಎಕರೆ ಜಮೀನು ಜಲಾವೃತ ಸಾಧ್ಯತೆ ಎಂದು ಹೇಳಲಾಗಿದೆ.

    Live Tv
    [brid partner=56869869 player=32851 video=960834 autoplay=true]