Tag: ಕಾವಲುಗಾರ

  • ಕೇವಲ 485 ರೂ.ಗೆ ಇಬ್ಬರ ಕೊಲೆ ಮಾಡಿದ ಭೂಪ

    ಕೇವಲ 485 ರೂ.ಗೆ ಇಬ್ಬರ ಕೊಲೆ ಮಾಡಿದ ಭೂಪ

    ಮೈಸೂರು: ಕೇವಲ 485 ರೂ. ಹಣದ ಆಸೆಗಾಗಿ ವ್ಯಕ್ತಿಯೋರ್ವ ಇಬ್ಬರು ಕಾವಲುಗಾರರನ್ನು (Watchmen) ಕೊಲೆ ಮಾಡಿದ ಘಟನೆ ಮೈಸೂರಿನ (Mysuru) ಹುಣಸೂರಿನಲ್ಲಿ(Hunsur) ನಡೆದಿದೆ.

    ಹುಣಸೂರಿನ ಮಿಸ್ಬಾ ಸಾಮಿಲ್‌ನಲ್ಲಿ ಕೊಲೆ ನಡೆದಿದ್ದು, ಪ್ರಕರಣವನ್ನು ಬೇಧಿಸಿದ ಪೊಲೀಸರು ಆರೋಪಿ ಅಭಿಷೇಕ್ (26) ಎಂಬಾತನನ್ನು ಬಂಧಿಸಿದ್ದಾರೆ. ಈತ ಕೊಲೆ ನಡೆದ ಪಕ್ಕದ ಬೀದಿಯಲ್ಲಿ ವಾಸಿಸುತ್ತಿದ್ದು, ಹಣಕ್ಕಾಗಿ (Money) ವೆಂಕಟೇಶ್ (75) ಮತ್ತು ಷಣ್ಮುಖ (65) ಎಂಬ ಇಬ್ಬರು ಕಾವಲುಗಾರರಿಗೆ ರಾಡ್‌ನಿಂದ ತಲೆಗೆ ಹೊಡೆದು ಹತ್ಯೆ (Murder) ಮಾಡಿದ್ದಾನೆ. ಇದನ್ನೂ ಓದಿ: ಬೆಳಗಾವಿಯಲ್ಲಿ ಬತ್ತಿದ ಘಟಪ್ರಭಾ – ಲಕ್ಷಾಂತರ ಮೀನುಗಳ ಸಾವು

    ಹತ್ಯೆಯ ಬಳಿಕ ಅವರ ಬಳಿಯಿದ್ದ 485 ರೂ.ಗಳನ್ನು ತೆಗೆದುಕೊಂಡು ಅಲ್ಲಿಂದ ಪರಾರಿಯಾಗಿದ್ದಾನೆ. ಕೊಲೆ ಮಾಡಿದ ಕೃತ್ಯ ಸಾಮಿಲ್ ಸಿಸಿಟಿವಿಯಲ್ಲಿ (CCTV) ಸೆರೆಯಾಗಿತ್ತು. ಆರೋಪಿ ಪತ್ತೆಗೆ ಬಂದಿದ್ದ ಪೊಲೀಸ್ ಶ್ವಾನ ಸಹಾ ಸಾಮಿಲ್‌ನಲ್ಲಿ ಸುತ್ತಾಡಿ ಅಭಿಷೇಕ್ ಮನೆ ಬಳಿ ನಿಂತ ಕಾರಣ ಆರೋಪಿಯನ್ನು ಪತ್ತೆಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: ವ್ಹೀಲಿಂಗ್ ಮಾಡಿ ಶಾಲಾ – ಕಾಲೇಜು ವಿದ್ಯಾರ್ಥಿನಿಯರನ್ನು ಚುಡಾಯಿಸುತ್ತಿದ್ದ ಮೂವರ ಬಂಧನ

    ಆರೋಪಿ ಅಭಿಷೇಕ್ ಈ ಹಿಂದೆಯೂ ಹಲವು ಅಪರಾಧಗಳಲ್ಲಿ ಭಾಗಿಯಾಗಿದ್ದ. ಈತ ಹಲವು ಕಳ್ಳತನ ಹಾಗೂ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದು, ದಿನನಿತ್ಯ ಗಾಂಜಾ, ಸೆಲ್ಯೂಷನ್ ಸೇದಿ ಜನರಿಗೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಇದನ್ನೂ ಓದಿ: ಅನುಮಾನಾಸ್ಪದ ರೀತಿಯಲ್ಲಿ ನವವಿವಾಹಿತೆ ಸಾವು – ಮುಗಿಲು ಮುಟ್ಟಿದ ಆಕ್ರಂದನ

  • ಅರಣ್ಯ ಇಲಾಖೆಯ ಕಚೇರಿಯಲ್ಲಿದ್ದ 25 ಕೆಜಿ ಶ್ರೀಗಂಧ ಕಳವು – ಕಾವಲುಗಾರನ ಶವ ಪತ್ತೆ

    ಅರಣ್ಯ ಇಲಾಖೆಯ ಕಚೇರಿಯಲ್ಲಿದ್ದ 25 ಕೆಜಿ ಶ್ರೀಗಂಧ ಕಳವು – ಕಾವಲುಗಾರನ ಶವ ಪತ್ತೆ

    ಶಿವಮೊಗ್ಗ: ಅರಣ್ಯ ಇಲಾಖೆ ಕಚೇರಿಯ ಬೀಗ ಒಡೆದು ಕಳ್ಳತನ ನಡೆದಿರುವ ಘಟನೆ ಜಿಲ್ಲೆಯ ಸಾಗರದ ಅರಣ್ಯ ಇಲಾಖೆ ಕಚೇರಿಯಲ್ಲಿ ನಡೆದಿದೆ.

    ಕಚೇರಿಯ ಉಗ್ರಾಣದಲ್ಲಿ ಸಂಗ್ರಹಿಸಿಟ್ಟಿದ್ದ ಸುಮಾರು 25 ಕೆ.ಜಿ. ಶ್ರೀಗಂಧ ನಾಪತ್ತೆಯಾಗಿದೆ. ನಿನ್ನೆ ಮಧ್ಯರಾತ್ರಿ ಈ ಘಟನೆ ನಡೆದಿದ್ದು, ಘಟನೆ ಬಳಿಕ ಕಚೇರಿಯ ಕಾವಲುಗಾರ ನಾಗರಾಜ್ ನಾಪತ್ತೆಯಾಗಿದ್ದ. ಹೀಗಾಗಿ ಪೊಲೀಸರು ಅರಣ್ಯ ಸಿಬ್ಬಂದಿ ಮೇಲೆಯೇ ಅನುಮಾನ ವ್ಯಕ್ತಪಡಿಸಿದ್ದರು. ಆದರೆ ಇದೀಗ ಕಾವಲುಗಾರ ನಾಗರಾಜ್ ಶವ ಸಾಗರ ತಾಲೂಕಿನ ಐಗಿನ್ ಬೈಲ್‍ನ ನೆದರವಳ್ಳಿ ಬಸ್ ನಿಲ್ದಾಣದ ಬಳಿ ಪತ್ತೆಯಾಗಿದೆ.

    ಇದೀಗ ಈ ಪ್ರಕರಣ ಮತ್ತಷ್ಟು ತಿರುವು ಪಡೆದುಕೊಂಡಿದ್ದು ಅರಣ್ಯ ಇಲಾಖೆಯಲ್ಲಿ ಶ್ರೀಗಂಧ ಕಳ್ಳತನ ನಡೆಸಿರುವ ಕಳ್ಳರು, ಶ್ರೀಗಂಧ ಕಳವು ಮಾಡಿ ಕಾವಲುಗಾರನನ್ನು ಕೊಲೆ ಮಾಡಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ. ಘಟನೆ ಕುರಿತು ಸಾಗರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಲ್ಲದೇ ಮೃತನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.