Tag: ಕಾವಲಬೈರಸಂದ್ರ

  • ಬೆಂಕಿ ಹಚ್ಚೋದು ನಮ್ಮ ಸಂಸ್ಕೃತಿಯಲ್ಲ, ನೆಲದ ಕಾನೂನೇ ಅಂತಿಮ: ಖಾದರ್

    ಬೆಂಕಿ ಹಚ್ಚೋದು ನಮ್ಮ ಸಂಸ್ಕೃತಿಯಲ್ಲ, ನೆಲದ ಕಾನೂನೇ ಅಂತಿಮ: ಖಾದರ್

    ಬೆಂಗಳೂರು: ಬೆಂಕಿ ಹಚ್ಚುವುದು ನಮ್ಮ ಸಂಸ್ಕೃತಿಯಲ್ಲ. ಏನೇ ಇದ್ದರೂ ಈ ನೆಲದ ಕಾನೂನೇ ಅಂತಿಮ, ಶಾಂತಿ ಕಾಪಾಡಿ ಎಂದು ಮಾಜಿ ಸಚಿವ ಯು.ಟಿ ಖಾದರ್ ತಿಳಿಸಿದ್ದಾರೆ.

    ಕೆ.ಜಿ ಹಳ್ಳಿಯಲ್ಲಿ ಗಲಭೆಕೋರರ ದಾಂಧಲೆ ಸಂಬಂಧ ಸರಣಿ ಟ್ವೀಟ್ ಮಾಡಿರುವ ಅವರು, ಶಾಂತಿ ಕಾಪಾಡಿಕೊಂಡು ಕಾನೂನು ಹೋರಾಟದಲ್ಲಿ ನಂಬಿಕೆ ಇಟ್ಟುಕೊಳ್ಳಿ ಎಂದು ಮನವಿ ಮಾಡಿಕೊಂಡಿದ್ದಾರೆ.

    ಟ್ವೀಟ್‍ನಲ್ಲೇನಿದೆ?
    ಲೋಕಕ್ಕೆ ಸೌಹಾರ್ದತೆ, ಸಮಾನತೆ ಹಾಗೂ ಮಾನವೀಯತೆ ಸಾರಿದ ವಿಶ್ವ ಪ್ರವಾದಿ ಮೊಹಮ್ಮದ್ (ಸ.ಅ) ರವರನ್ನು ನಿಂದನೆ ಮಾಡಿದವರ ವಿರುದ್ಧ ಗರಿಷ್ಠ ಕ್ರಮ ಕೈಗೊಳ್ಳಲೇಬೇಕು. ಆದರೆ ಇದೇ ನೆಪದಲ್ಲಿ ಕಾನೂನು ಕೈಗೆತ್ತಿಕೊಂಡು ಸಾರ್ವಜನಿಕ ಆಸ್ತಿಪಾಸ್ತಿ ನಷ್ಟಮಾಡುವುದನ್ನ ಒಪ್ಪುವುದು ಸಾಧ್ಯವೇ ಇಲ್ಲ.  ಇದನ್ನೂ ಓದಿ: ದುಷ್ಕರ್ಮಿಗಳ ದುಷ್ಕೃತ್ಯ ಸಿಸಿಟಿವಿಯಲ್ಲಿ ಸೆರೆ – ಭಯದಿಂದ ಬಾತ್‍ರೂಮಿನಲ್ಲಿ 3 ಗಂಟೆ ಬಚ್ಚಿಟ್ಟುಕೊಂಡಿದ್ದ ಕುಟುಂಬ

    ಬೆಂಕಿ ಹಚ್ಚುವುದು ನಮ್ಮ ಸಂಸ್ಕೃತಿಯಲ್ಲ. ಏನೇ ಇದ್ದರೂ ಈ ನೆಲದ ಕಾನೂನೇ ಅಂತಿಮ. ಎಲ್ಲರೂ ಶಾಂತಿ ಕಾಪಾಡಿ, ಕಾನೂನು ಹೋರಾಟದಲ್ಲಿ ನಂಬಿಕೆ ಇಟ್ಟುಕೊಳ್ಳಿ. ಕೇವಲ ಬೆಂಗಳೂರಷ್ಟೇ ಅಲ್ಲ ರಾಜ್ಯದ ಯಾವುದೇ ಹಳ್ಳಿಯಲ್ಲೂ ಇಂತಹ ಘಟನೆಗೆ ಅವಕಾಶ ನೀಡಬಾರದು.

    ಪೊಲೀಸ್ ಇಲಾಖೆ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಧಾರ್ಮಿಕ ನಿಂದನೆಯಂತಹ ಪ್ರಕರಣವನ್ನ ಆರಂಭಿಕ ಹಂತದಲ್ಲೇ ಇತ್ಯರ್ಥಗೊಳಿಸಿದ್ರೆ, ಪರಿಸ್ಥಿತಿ ಕೈ ಮೀರಿ ಹೋಗುವುದಿಲ್ಲ. ಎಲ್ಲರೂ ಅವರವರ ಜವಾಬ್ದಾರಿ ಅರಿತು ಕೆಲಸ ಮಾಡಬೇಕಿದೆ ಅಷ್ಟೆ ಎಂದು ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಕೆ.ಜಿ.ಹಳ್ಳಿ ಗಲಭೆ ಪ್ರಕರಣ – ಪೊಲೀಸರ ಗೋಲಿಬಾರ್‌ಗೆ ಮೂವರು ಬಲಿ, 110 ಮಂದಿ ಅರೆಸ್ಟ್

    ನಡೆದಿದ್ದೇನು?
    ಶಾಸಕರ ಆಪ್ತ ನವೀನ್ ಎಂಬವರು ಫೇಸ್ ಬುಕ್ ನಲ್ಲಿ ಸಮುದಾಯವನ್ನು ಅವಹೇಳನ ಮಾಡಿದ್ದಾರೆ ಎಂದು ಆರೋಪಿಸಿ ಗುಂಪೊಂದು ದಿಢೀರ್ ಆಗಿ ರಾತ್ರಿ ಕಾವಲ್ ಭೈರಸಂದ್ರದಲ್ಲಿರುವ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಮನೆ ಮುಂದೆ ಜಮಾಯಿಸಿ ಬೆಂಕಿ ಹಚ್ಚಿದೆ. 100ಕ್ಕೂ ಹೆಚ್ಚು ಪುಂಡರು ಕಲ್ಲು ತೂರಾಟ ನಡೆಸಿ ದೊಣ್ಣೆ ಹಿಡಿದು ಕಚೇರಿಯನ್ನು ಒಡೆದು ಹಾಕಲು ಯತ್ನಿಸಿದ್ದರು. ಈ ವೇಳೆ ವಿಡಿಯೋ ಮಾಡುತ್ತಿದ್ದವರ ಮೇಲೆ ಹಲ್ಲೆ ನಡೆಸಿ ಮೊಬೈಲ್ ಕಿತ್ತುಕೊಳ್ಳಲು ಯತ್ನಿಸಿದ್ದರು. ಘಟನೆಯಲ್ಲಿ ಶಾಸಕರ ಮನೆ ಕಿಟಕಿ ಗಾಜುಗಳು ಪುಡಿ ಪುಡಿಯಾಗಿದ್ದು, ಆಫೀಸ್ ಬಳಿ ನಿಂತಿದ್ದ ಕಾರುಗಳ ಮೇಲೆ ಬೆಂಕಿ ಹಚ್ಚಿದ್ದಾರೆ. ಬೆಂಕಿಯನ್ನು ನೋಡಿ ಅಲ್ಲಿದ್ದ ಜನ ಓಡಿ ಹೋಗಿ ಸುರಕ್ಷಿತ ಸ್ಥಳಗಳಿಗೆ ತೆರಳಿದ್ದಾರೆ. ಇತ್ತ ಗಲಭೆಗೂ ಮುನ್ನ ಶಾಸಕರು ಮನೆ ಖಾಲಿ ಮಾಡಿದ್ದರಿಂದ ಭಾರೀ ಅನಾಹುತ ತಪ್ಪಿದಂತಾಗಿದೆ. ಇದನ್ನೂ ಓದಿ: ಕೆಜಿ ಹಳ್ಳಿ ಗಲಭೆ ಪ್ರಕರಣ – ಎಸ್‍ಡಿಪಿಐ ಮುಖಂಡ ಅರೆಸ್ಟ್