Tag: ಕಾಳುಮೆಣಸು

  • ಹಳ್ಳಿ ಶೈಲಿ ‘ಕಾಯಿ ಹಾಲು ಕಾಳುಮೆಣಸಿನ ಸಾರು’ ಮಾಡುವ ವಿಧಾನ

    ಹಳ್ಳಿ ಶೈಲಿ ‘ಕಾಯಿ ಹಾಲು ಕಾಳುಮೆಣಸಿನ ಸಾರು’ ಮಾಡುವ ವಿಧಾನ

    ಯಾವಾಗಲೂ ಒಂದೇ ರೀತಿಯ ಸಾರು ತಿಂದು ನಿಮ್ಮ ನಾಲಿಗೆಗೆ ಬೋರ್ ಆಗಿರುತ್ತೆ. ಅದಕ್ಕೆ ಇಂದು ನಿಮ್ಮ ನಾಲಿಗೆಗೆ ಹಳ್ಳಿ ರುಚಿಯನ್ನು ತೋರಿಸಿ. ಇದನ್ನು ಮಾಡುವುದು ತುಂಬಾ ಸರಳ. ಹೆಚ್ಚು ಮಸಾಲೆ ಏನು ಬೇಡ. ಸಿಂಪಲ್ ಆಗಿ ಮಾಡುವ ಈ ರೆಸಿಪಿಯನ್ನು 20 ನಿಮಿಷದಲ್ಲಿಯೇ ಮಾಡಬಹುದು. ಹಾಗಾದರೆ ಯಾವುದು ಆ ರೆಸಿಪಿ ಎಂದು ಯೋಚನೆ ಮಾಡುತ್ತಿದ್ದೀರಾ ಅದೇ ‘ಕಾಯಿ ಹಾಲು ಕಾಳುಮೆಣಸಿನ ಸಾರು’. ಈ ಸಾರನ್ನು ನೀವು ಮನೆಯಲ್ಲಿಯೇ ಟ್ರೈ ಮಾಡಿ.

    ಬೇಕಾಗುವ ಸಾಮಾಗ್ರಿಗಳು:
    * ಕಾಳು ಮೆಣಸು – 1 ಟೀಸ್ಪೂನ್
    * ಜೀರಿಗೆ – 1/2 ಟೀಸ್ಪೂನ್
    * ಬೆಳ್ಳುಳ್ಳಿ – 7 ಎಸಳು
    * ಹಸಿ ಶುಂಠಿ – 1/2 ಇಂಚು
    * ಅರಿಶಿನ ಪುಡಿ – 1/4 ಟೀಸ್ಪೂನ್
    * ಉಪ್ಪು – 1 ಟೀಸ್ಪೂನ್
    * ಬೆಲ್ಲ – 1/2 ಟೀಸ್ಪೂನ್


    * ತೆಂಗಿನಕಾಯಿ ಹಾಲು – 1 ಕಪ್
    * ಕೊತ್ತಂಬರಿ ಸೊಪ್ಪು – ಅರ್ಧ ಕಪ್
    * ನಿಂಬೆ ರಸ – 2 ಟೀಸ್ಪೂನ್
    * ಎಣ್ಣೆ – 2 ಟೀಸ್ಪೂನ್
    * ಸಾಸಿವೆ – 1/2 ಟೀಸ್ಪೂನ್
    * ಒಣ ಮೆಣಸಿನಕಾಯಿ – 2
    * ಕರಿಬೇವು – 10

    ಮಾಡುವ ವಿಧಾನ:
    * ಒಂದು ಕುಟ್ಟಾಣಿಗೆ ಕಾಳು ಮೆಣಸು, ಜೀರಿಗೆ ಹಾಕಿ, ಕುಟ್ಟಿ ಪುಡಿಮಾಡಿ. ಇದಕ್ಕೆ 6 ರಿಂದ 7 ಬೆಳ್ಳುಳ್ಳಿ ಎಸಳು, ಅರ್ಧ ಇಂಚು ಹಸಿ ಶುಂಠಿ ಹಾಕಿ ತರಿ ತರಿಯಾಗಿ ಕುಟ್ಟಿ.
    * ಒಂದು ಪಾತ್ರೆಗೆ 2 ಕಪ್ ನೀರು ಹಾಕಿ, ಅದಕ್ಕೆ ಕುಟ್ಟಿದ ಪೇಸ್ಟ್ ಹಾಕಿ ಕಲಕಿ, 6 ರಿಂದ 7 ನಿಮಿಷ ಮಧ್ಯಮ ಉರಿಯಲ್ಲಿ ಕುದಿಸಿ.
    * ನಂತರ ಕಾಲು ಅರಿಶಿಣ ಪುಡಿ, ಉಪ್ಪು ಹಾಕಿ ಕಲಕಿ. ಇದಕ್ಕೆ ಅರ್ಧ ಚಮಚ ಬೆಲ್ಲ, ಕಾಯಿ ಹಾಲು ಹಾಕಿ, ಚೆನ್ನಾಗಿ ಕಲಕಿ 3 ನಿಮಿಷ ಮಧ್ಯಮ ಉರಿಯಲ್ಲಿ ಕುದಿಸಿ.
    * ಕೊನೆಯಲ್ಲಿ ಸ್ವಲ್ಪ ಕೊತ್ತಂಬರಿ ಸೊಪ್ಪು, ನಿಂಬೆ ರಸ ಹಾಕಿ ಕಲಕಿ.
    * ಒಗ್ಗರಣೆಗೆ ಒಂದು ಚಿಕ್ಕ ಬಾಣಲೆಗೆ ಎಣ್ಣೆ ಹಾಕಿ. ಎಣ್ಣೆ ಬಿಸಿಯಾದ ಬಳಿಕ ಸಾಸಿವೆ ಹಾಕಿ. ಸಾಸಿವೆ ಸಿಡಿದ ನಂತರ ಒಣ ಮೆಣಸಿನಕಾಯಿ ಮುರಿದು ಹಾಕಿ. ಇದಕ್ಕೆ ಕರಿಬೇವು ಹಾಕಿ ಹುರಿಯಿರಿ. ನಂತರ ಈ ಒಗ್ಗರಣೆಯನ್ನು ಸಾರಿಗೆ ಹಾಕಿ, ಚೆನ್ನಾಗಿ ಕಲಸಿದರೆ ರುಚಿಯಾದ ತಿಳಿ ಸಾರು ಸಿದ್ಧ.

    Live Tv
    [brid partner=56869869 player=32851 video=960834 autoplay=true]

  • ಕೊಡಗಿನ ಹೈ ಕ್ವಾಲಿಟಿ ಕಾಳುಮೆಣಸಿನ ಜೊತೆ ವಿಯೇಟ್ನಾಂ ಮೆಣಸು ಕಲಬೆರಕೆ- ಜಿಲ್ಲಾ ರೈತ ಸಂಘದ ಪ್ರತಿಭಟನೆ

    ಕೊಡಗಿನ ಹೈ ಕ್ವಾಲಿಟಿ ಕಾಳುಮೆಣಸಿನ ಜೊತೆ ವಿಯೇಟ್ನಾಂ ಮೆಣಸು ಕಲಬೆರಕೆ- ಜಿಲ್ಲಾ ರೈತ ಸಂಘದ ಪ್ರತಿಭಟನೆ

    ಮಡಿಕೇರಿ: ವಿಯೇಟ್ನಾಂನಿಂದ ಅತ್ಯಂತ ಕಳಪೆ ಗುಣಮಟ್ಟದ ಮೆಣಸು ಆಮದಾಗುತ್ತಿದ್ದು, ಉತ್ತಮ ಗುಣಮಟ್ಟದ ಕೊಡಗಿನ ಕಾಳುಮೆಣಸಿನೊಂದಿಗೆ ಕಲಬೆರಕೆಯಾಗಿ ಮಾರಾಟವಾಗುತ್ತಿದ್ದೆ. ಇದರಿಂದ ಕೊಡಗಿನ ಹೈ ಕ್ವಾಲಿಟಿ ಪೆಪ್ಪರ್ ತನ್ನ ಕ್ವಾಲಿಟಿ ಕಳೆದುಕೊಳ್ಳುತ್ತಿರೋದರಿಂದ ಮೆಣಸಿನ ಬೆಲೆ ಗಣನೀಯವಾಗಿ ಕುಸಿತ ಕಂಡಿದೆ.

    ಕಲಬೆರಕೆ ಮಾಡೋ ಕಾರ್ಯ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಗೋಣಿಕೊಪ್ಪ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ನಡೆಯುತ್ತಿದೆ. ಇದಕ್ಕೆ ಪೂರಕ ಎಂಬಂತೆ ರೋಸ್‍ಮೇರಿ ಇಂಟರ್ ನ್ಯಾಷನಲ್ ಕಂಪೆನಿಗೆ ನೀಡುತ್ತಿರೋ ಗೋಣಿಕೊಪ್ಪ ಎಪಿಎಂಸಿ ಗೋಡೌನ್‍ ನಲ್ಲಿ ಕಲಬೆರಕೆ ಹುಡಿಗಳು, ಯಂತ್ರಗಳು ಹಾಗೂ ವಿಯೆಟ್ನಾಂ ಪೆಪ್ಪರ್ ಪತ್ತೆಯಾಗಿದೆ.

    ಎಪಿಎಂಸಿಗೆ ಸೇರಿದ ಗೋಡೌನ್ ಒಳಗೆ ಕಲಬೆರಕೆ ನಡೆಯುತ್ತಿರೋದ್ರಲ್ಲಿ ಆಡಳಿತ ಮಂಡಳಿ ಕೈವಾಡವಿದೆ ಎಂಬ ಆರೋಪ ಕೇಳಿಬಂದಿದ್ದು, ಇದನ್ನು ಖಂಡಿಸಿ ಕೊಡಗು ಜಿಲ್ಲಾ ರೈತ ಸಂಘ ಬೃಹತ್ ಟ್ರ್ಯಾಕ್ಟರ್ ಜಾಥಾ ನಡೆಸಿ ವಿಯೆಟ್ನಾಂ ಪೆಪ್ಪರ್ ಆಮದು ನಿಷೇಧಕ್ಕೆ ಆಗ್ರಹಿಸಿದ್ರು.

    ಇದಕ್ಕೆಲ್ಲಾ ಎಪಿಎಂಸಿಯ ಬಿಜೆಪಿ ಹಿಡಿತದ ಆಡಳಿತ ಮಂಡಳಿಯೇ ಕಾರಣ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಇದೇ ವಿಚಾರವಾಗಿ ಕೊಡಗು ಜಿಲ್ಲಾ ಪಂಚಾಯಿತಿ ಸಭೆಯಲ್ಲೂ ಪ್ರಸ್ತಾಪವಾಗಿ ಕೋಲಾಹಲಕ್ಕೆ ಕಾರಣವಾಯಿತು. ಎಪಿಎಂಸಿ ವಿಯೆಟ್ನಾಂ ಕಾಳುಮೆಣಸು ಹಗರಣವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಆಗ್ರಹಿಸಿ ಕಾಂಗ್ರೆಸ್ ಸದಸ್ಯರು ಸಭೆಯಲ್ಲಿ ಪ್ರತಿಭಟನೆ ನಡೆಸಿದರು.

    ಒಟ್ಟಿನಲ್ಲಿ ವಿಯೇಟ್ನಾಂ ಕಾಳುಮೆಣಸು ಈಗ ಕೊಡಗಿನ ರೈತರನ್ನು ಕಂಗೆಡುವಂತೆ ಮಾಡಿದೆ.