Tag: ಕಾಳಿ ಸ್ವಾಮೀಜಿ

  • ಇಟ್ಟಿಗೆಯನ್ನು ಯಾರು ಯೂಸ್ ಮಾಡ್ತಾರೆ ಅನ್ನೋದು ರಾಜ್ಯಕ್ಕೆ ಗೊತ್ತಿದೆ: ಕಾಳಿ ಸ್ವಾಮೀಜಿ

    ಇಟ್ಟಿಗೆಯನ್ನು ಯಾರು ಯೂಸ್ ಮಾಡ್ತಾರೆ ಅನ್ನೋದು ರಾಜ್ಯಕ್ಕೆ ಗೊತ್ತಿದೆ: ಕಾಳಿ ಸ್ವಾಮೀಜಿ

    ಚಿಕ್ಕಮಗಳೂರು: ನಮಗೆ ಇಟ್ಟಿಗೆ ಬೇಡ, ಇಟ್ಟಿಗೆ ಬೇಕಾಗಿರೋದು ನಿಮಗೆ. ಇಟ್ಟಿಗೆಯನ್ನು ಯಾರು ಯೂಸ್ ಮಾಡ್ತಾರೆ ಅನ್ನೋದು ರಾಜ್ಯಕ್ಕೆ ಗೊತ್ತಿದೆ ಎಂದು ಕಾಳಿಮಠದ ಋಷಿಕುಮಾರ ಸ್ವಾಮೀಜಿ ವಾಗ್ದಾಳಿ ನಡೆಸಿದ್ದಾರೆ.

    ಮಳಲಿಯಿಂದ ಒಂದು ಇಟ್ಟಿಗೆಯನ್ನು ತೆಗೆದುಕೊಂಡು ಹೋಗಲು ಬಿಡುವುದಿಲ್ಲ ಎಂಬ ಎಸ್‍ಡಿಪಿಐ ಮುಖಂಡನ ಹೇಳಿಕೆಗೆ ಕಡೂರಿನ ಕಾಳಿಮಠದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ನೀವು ಇಟ್ಟಿಗೆಯನ್ನು ಯೂಸ್ ಮಾಡಿಕೊಳ್ಳಿ. ನಾವು ಕಲ್ಲಿನಲ್ಲಿಯೇ ದೇವಸ್ಥಾನ ಕಟ್ಟಿಕೊಳ್ಳುತ್ತೇವೆ ಎಂದರು. ಇದನ್ನೂ ಓದಿ: ತಾಂಬೂಲ ಪ್ರಶ್ನೆ ಅಂತಾ ಬರೋರನ್ನು ಒದ್ದು ಒಳಗೆ ಹಾಕ್ಬೇಕು: ಅಬ್ದುಲ್ ವಾಜೀದ್ ವಿವಾದಾತ್ಮಕ ಹೇಳಿಕೆ

    ಮಳಲಿಯಲ್ಲಿ ತಾಂಬೂಲ ಪ್ರಶ್ನೆ ಕೇಳುವ ಅವಶ್ಯಕತೆ ಇತ್ತು. ಆದರೆ ಶ್ರೀರಂಗಪಟ್ಟಣದಲ್ಲಿ ತಾಂಬೂಲ ಪ್ರಶ್ನೆ ಕೇಳುವ ಅವಶ್ಯಕತೆ ಇಲ್ಲ. ಅಲ್ಲಿ ಕಂಬಗಳೇ ಇದ್ದಾವೆ, ಅದೇ ಎಲ್ಲದನ್ನು ಹೇಳುತ್ತದೆ. ಅಲ್ಲಿ ಕಲ್ಯಾಣಿ, ಗರ್ಭಗುಡಿ, ಪ್ರಾರಂಗಣ ಎಲ್ಲವೂ ಇದೆ. ಮಳಲಿಯ ದೇವಸ್ಥಾನ ಆಗುತ್ತೆ, ಶ್ರೀರಂಗಪಟ್ಟಣದಲ್ಲೂ ದೇವಸ್ಥಾನ ಆಗುತ್ತೆ ಎಂದು ತಿಳಿಸಿದರು. ಇದನ್ನೂ ಓದಿ: ಮಡಿ, ಮೈಲಿಗೆ ಹೆಸರಲ್ಲಿ ಬ್ರಾಹ್ಮಣ್ಯ ನಮ್ಮನ್ನು ಕೀಳಾಗಿ ಮಾಡಿದೆ: ನಟ ಚೇತನ್‌

  • ಕಾಳಿ ಸ್ವಾಮಿಗೆ ಮಸಿ ಬಳೆದಿದ್ದು ಅಕ್ಷಮ್ಯ ಅಪರಾಧ: ಮುತಾಲಿಕ್

    ಕಾಳಿ ಸ್ವಾಮಿಗೆ ಮಸಿ ಬಳೆದಿದ್ದು ಅಕ್ಷಮ್ಯ ಅಪರಾಧ: ಮುತಾಲಿಕ್

    ಧಾರವಾಡ: ಕಾಳಿ ಸ್ವಾಮೀಜಿ ಕನ್ನಡ ವಿರೋಧಿಯಾಗಿ ಮಾತನಾಡಿಲ್ಲ. ನಾನು ಅವರ ಜೊತೆ ಮಾತನಾಡಿದ್ದೇನೆ, ಕಾಳಿ ಸ್ವಾಮೀಜಿ ಕೆಂಪೇಗೌಡರಿಗೆ ಹಾಗೂ ಕುವೆಂಪು ಅವರಿಗೆ ಬೈದಿದ್ದಾರೆ ಎನ್ನಲಾಗಿದೆ, ಆದರೆ ಅವರು ಯಾವ ಸಂದರ್ಭದಲ್ಲೂ ಬೈದಿಲ್ಲ, ಈ ಸಂಬಂಧ ಏನಾದರೂ ದಾಖಲೆಗಳಿದ್ದರೆ ಬಿಡುಗಡೆ ಮಾಡಬೇಕಿತ್ತು ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

    ಧಾರವಾಡದಲ್ಲಿ ಮಾತನಾಡಿದ ಅವರು, ಕಾಳಿ ಸ್ವಾಮೀಜಿಗೆ ಮಸಿ ಬಳೆದು ಅವರ ಮೇಲೆ ದಾಳಿ ಮಾಡಿದವರ ದಾಖಲೆಗಳಿದ್ದರೆ ಬಿಡುಗಡೆ ಮಾಡಬೇಕಿತ್ತು. ಅದನ್ನು ಬಿಟ್ಟು ಈ ರೀತಿ ಸನ್ಯಾಸಿಗಳ ಮೇಲೆ ಹಲ್ಲೆ ಮಾಡುವುದು ಅಕ್ಷಮ್ಯ ಅಪರಾಧ ಎಂದಿದ್ದಾರೆ. ಇದನ್ನೂ ಓದಿ: ರಮ್ಯಾಗೆ ಕೋಪ ಇದ್ರೆ ಬೈಯಲಿ ಆದ್ರೆ ಟ್ವೀಟ್‍ನಲ್ಲಿ ಬೇಡ: ನಲಪಾಡ್

    ಕಾಳಿ ಸ್ವಾಮೀಜಿ ಏನಾದರೂ ತಪ್ಪು ಮಾಡಿದ್ದರೆ ಕೇಸ್ ಹಾಕಬೇಕಿತ್ತು. ಅದನ್ನು ಬಿಟ್ಟು ಈ ರೀತಿ ಖಾವಿಧಾರಿಗಳಿಗೆ ಮಸಿ ಬಳೆಯುವುದು ಸರಿಯಲ್ಲ. ಇದನ್ನು ಶ್ರೀರಾಮ ಸೇನೆ ಖಂಡಿಸುತ್ತದೆ. ಸ್ವಾಮೀಜಿ ಮೇಲೆ ದಾಳಿ ಮಾಡಿದವರು ಕೂಡಲೇ ಕ್ಷಮೆ ಕೇಳಬೇಕು. ಸರ್ಕಾರ ಅವರ ಮೇಲೆ ಕ್ರಮ ಕೈಗೊಳ್ಳಬೇಕು. ಇವತ್ತು ಕಾಳಿ ಸ್ವಾಮೀಜಿ ಮೇಲೆ ಈ ರೀತಿ ಹಲ್ಲೆ ನಡೆಯುತ್ತದೆ. ನಾಳೆ ಮತ್ತೊಬ್ಬರ ಮೇಲೆ ನಡೆಯುತ್ತದೆ. ಇದನ್ನು ಸರ್ಕಾರ ಹದ್ದು ಬಸ್ತಿನಲ್ಲಿಡಬೇಕು ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಮಸಿ ಬಳಿದವರ ವಿರುದ್ಧ ಕಾನೂನು ಹೋರಾಟ ಮಾಡುತ್ತೇನೆ: ಕಾಳಿಸ್ವಾಮಿ

  • ಆಜಾನ್ ವಿರುದ್ಧ ಮಂತ್ರಪಠಣೆ ಅಭಿಯಾನ ಶುರು

    ಆಜಾನ್ ವಿರುದ್ಧ ಮಂತ್ರಪಠಣೆ ಅಭಿಯಾನ ಶುರು

    ಹಾಸನ: ಮುಸ್ಲಿಮರ ಆಜಾನ್‌ ವಿರುದ್ಧ ಮಂತ್ರ ಪಠಣೆ ಅಭಿಯಾನಕ್ಕೆ ಚಾಲನೆ ಸಿಕ್ಕಿದೆ.

    ಹಾಸನದ ಅರಸೀಕೆರೆ ಕಾಳಿಕಾಂಬ ದೇಗುಲದಲ್ಲಿ ಕಾಳಿ ಮಂತ್ರವನ್ನು ಕಾಳಿ ಸ್ವಾಮೀಜಿ ಪಠಿಸಿದ್ದಾರೆ. ಇದನ್ನೂ ಓದಿ: ಮುಸ್ಲಿಮನೊಬ್ಬ ಪ್ರಧಾನಿಯಾದರೆ ಶೇ.50ರಷ್ಟು ಹಿಂದೂಗಳು ಮತಾಂತರಗೊಳ್ಳುತ್ತಾರೆ: ಯತಿ ನರಸಿಂಹಾನಂದ್

    ಅಧಿಕೃತ ಮಸೀದಿಗಳಲ್ಲಿ ಮಾತ್ರ ಆಜಾನ್‌ ಕೂಗಲು ಅನುಮತಿ ಇದೆ. ಆದರೆ ಎಲ್ಲ ಮಸೀದಿಗಳಲ್ಲಿ ಆಜಾನ್‌ ಕೂಗಲಾಗುತ್ತದೆ. ಅಷ್ಟೇ ಅಲ್ಲದೇ ಆಜಾನ್‌ ಕೂಗಲು‌ ಸ್ಪಷ್ಟವಾದ ಕೋರ್ಟ್‌ ನಿಯಮವಿದೆ. ಆದರೆ ಈ ನಿಯಮವನ್ನು ಉಲ್ಲಂಘಿಸಿ ಆಜಾನ್‌ ಕೂಗಲಾಗುತ್ತದೆ.  ಈ ರೀತಿ ಆಜಾನ್‌ ಕೂಗುವುದನ್ನು ಕೂಡಲೇ ನಿಲ್ಲಿಸಬೇಕು. ಇಲ್ಲದೇ ಇದ್ದರೆ ಹಿಂದೂ ದೇವಾಲಯಗಳಲ್ಲೂ ಭಜನೆ, ಮಂತ್ರವನ್ನು ಪಠಿಸಲಾಗುವುದು ಎಂದು ಹಿಂದೂ ಸಂಘಟನೆಗಳ ಮುಖಂಡರು ಸೋಮವಾರ ಎಚ್ಚರಿಕೆ ನೀಡಿದ್ದರು.

    ಈ ಎಚ್ಚರಿಕೆ ಬೆನ್ನಲ್ಲೇ ಇಂದು ಮುಂಜಾನೆ 5:30ಕ್ಕೆ ಧ್ವನಿವರ್ಧಕದ ಮೂಲಕ ಕಾಳಿ ಸ್ವಾಮೀಜಿ ಮಂತ್ರಪಠಣ ಮಾಡಿ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಇದನ್ನೂ ಓದಿ:  ಮೈಕ್ ತೆಗೆಸದಿದ್ದರೆ, ನಾವೂ ಬೆಳಗ್ಗೆ 5ಕ್ಕೆ ಮಂದಿರಗಳಲ್ಲಿ ಈಶ್ವರನ ಭಜನೆ, ಓಂಕಾರ ಹಾಕಿಸುತ್ತೇವೆ: ಮುತಾಲಿಕ್

  • ಜಟ್ಕಾ ಮೀಟ್ ಅಂಗಡಿ ತೆರೆದು ಹಿಂದೂ ಧರ್ಮದ ಯುವಕರು ಆರ್ಥಿಕವಾಗಿ ಬಲಿಷ್ಠರಾಗಿ: ಕಾಳಿ ಸ್ವಾಮಿ

    ಜಟ್ಕಾ ಮೀಟ್ ಅಂಗಡಿ ತೆರೆದು ಹಿಂದೂ ಧರ್ಮದ ಯುವಕರು ಆರ್ಥಿಕವಾಗಿ ಬಲಿಷ್ಠರಾಗಿ: ಕಾಳಿ ಸ್ವಾಮಿ

    ತುಮಕೂರು: ಹಿಂದೂ ಧರ್ಮದ ಯುವಕರು ಜಟ್ಕಾ ಮೀಟ್ ಅಂಗಡಿಗಳನ್ನು ತೆರೆಯುವ ಮೂಲಕ ಆರ್ಥಿಕವಾಗಿ ಬಲಿಷ್ಠರಾಗಿ ತಮ್ಮ ಕುಟುಂಬ ಹಾಗೂ ಹಿಂದೂ ಧರ್ಮವನ್ನು ಬಲಿಷ್ಠಗೊಳಿಸಬೇಕು ಎಂದು ಕಾಳಿ ಸ್ವಾಮೀಜಿ ಕರೆ ನೀಡಿದರು.

    ತುಮಕೂರಿನ ಟೌನ್‍ಹಾಲ್ ವೃತ್ತದಲ್ಲಿರುವ ನಾಗರಕಟ್ಟೆ ದೇವಾಲಯಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಏಕತೆಯ ಹಿಂದುತ್ವ ಎಲ್ಲರನ್ನು ಒಟ್ಟುಗೂಡಿಸಬೇಕು ಈ ಮೂಲಕ ಆರ್ಥಿಕವಾಗಿ ಹಿಂದೂ ಧರ್ಮದವರು ಬಲಿಷ್ಠರಾಗಬೇಕು. ಹಿಂದೂ ಧರ್ಮದ ಯುವಕರು ಜಿಲ್ಲೆಯಾದ್ಯಂತ ಹಿಂದೂ ಜಟ್ಕಾ ಮೀಟ್ ಅಂಗಡಿಯನ್ನು ತೆರೆಯಬೇಕು ಎಂದರು. ಇದನ್ನೂ ಓದಿ: ಮಸೀದಿ ಸಮೀಪ ಹನುಮಾನ್ ಚಾಲೀಸಾ ಹಾಕಿದ ಎಂಎನ್‌ಎಸ್

    ತುಮಕೂರು ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಹಿಂದೂ ಜಟ್ಕಾ ಮೀಟ್ ಅಂಗಡಿಗಳನ್ನು ತೆರೆದು ಹಿಂದೂ ಧರ್ಮವನ್ನು ಜಾಗೃತಗೊಳಿಸಬೇಕಾಗಿದೆ. ಹಿಂದೂ ಧರ್ಮದ ಯುವಕರು ಅಂಗಡಿಗಳನ್ನು ತೆರೆಯಲು ಮುಂದಾದರೆ ಅಂತಹ ಯುವಕರನ್ನು ಗುರುತಿಸಿ ತರಬೇತಿಗಳನ್ನು ನೀಡಿ ಅಂಗಡಿಗಳನ್ನು ತೆರೆಯಲು ಬೇಕಾದ ಸಹಕಾರವನ್ನು ತುಮಕೂರಿನ ಹಿಂದೂಪರ ಸಂಘಟನೆಗಳು ಮಾಡಲಿವೆ. ಈ ಮೂಲಕ ಹಿಂದೂ ಧರ್ಮದ ಯುವಕರ ಉದ್ಯೋಗವನ್ನು ತಾವೇ ಸೃಷ್ಟಿ ಮಾಡುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: ಕಾಶ್ಮೀರಿ ಪಂಡಿತರನ್ನು ಇನ್ನು ಯಾರಿಂದಲೂ ಓಡಿಸಲು ಸಾಧ್ಯವಿಲ್ಲ: ಮೋಹನ್ ಭಾಗವತ್

  • ಮಸೀದಿಯನ್ನು ಒಡೆದು ಹಾಕಿ ಎಂದ ಕಾಳಿ ಸ್ವಾಮೀಜಿಗೆ ಷರತ್ತು ಬದ್ಧ ಜಾಮೀನು

    ಮಸೀದಿಯನ್ನು ಒಡೆದು ಹಾಕಿ ಎಂದ ಕಾಳಿ ಸ್ವಾಮೀಜಿಗೆ ಷರತ್ತು ಬದ್ಧ ಜಾಮೀನು

    ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣದ ಜಾಮೀಯಾ ಮಸೀದಿಯನ್ನು ಒಡೆಯಬೇಕೆಂದು ವಿವಾದಾತ್ಮಕ ಹೇಳಿಕೆ ನೀಡಿರುವ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದ ಕಾಳಿ ಮಠದ ಋಷಿಕುಮಾರ ಸ್ವಾಮೀಜಿಗೆ ಶ್ರೀರಂಗಪಟ್ಟಣದ JMFC ನ್ಯಾಯಾಲಯ ಷರತ್ತು ಬದ್ಧ ಜಾಮೀನು ನೀಡಿದೆ.

    ಹಲವು ದಿನಗಳ ಹಿಂದೆ ಋಷಿಕುಮಾರ ಸ್ವಾಮೀಜಿ ಶ್ರೀರಂಗಪಟ್ಟಣಕ್ಕೆ ಬಂದ ವೇಳೆ ಜಾಮೀಯಾ ಮಸೀದಿ ಬಳಿ ತೆರಳಿ ವೀಡಿಯೋವನ್ನು ಮಾಡಿದ್ದಾರೆ. ಆ ವೀಡಿಯೋದಲ್ಲಿ ಈ ಮಸೀದಿ ಮೊದಲು ದೇವಸ್ಥಾನವಾಗಿದೆ, ಇಲ್ಲಿನ ಶಿಲ್ಪಕಲೆಗಳನ್ನು ನೋಡಿದರೆ ಇದು ಹಿಂದೂ ದೇವಸ್ಥಾನವೆಂದು ತಿಳಿಯುತ್ತದೆ. ಬಾಬ್ರಿ ಮಸೀದಿ ರೀತಿ ಈ ಮಸೀದಿಯನ್ನು ಒಡೆದು ಹಾಕಿ ಹಿಂದೂ ದೇವಸ್ಥಾನವನ್ನು ಕಟ್ಟಬೇಕೆಂದು ಹೇಳಿ ಆ ವೀಡಿಯೋವನ್ನು ಸಾಮಾಜಿಕ ಜಾಲಣದಲ್ಲಿ ಹಾಕಿದ್ದರು. ಇದನ್ನೂ ಓದಿ: ಶ್ರೀರಂಗಪಟ್ಟಣದ ಜಾಮೀಯಾ ಮಸೀದಿಯನ್ನು ಒಡೆಯಬೇಕು ಎಂದಿದ್ದ ಕಾಳಿಸ್ವಾಮಿ ಅರೆಸ್ಟ್

    ಈ ಹಿನ್ನೆಲೆ ಶ್ರೀರಂಗಪಟ್ಟಣದ ಪಟ್ಟಣ ಪೊಲೀಸ್ ಠಾಣೆಯಲ್ಲಿ ಕೋಮು ಸೌಹಾರ್ದ ಕದಡುವ ಕೆಲಸ ಎಂದು ಋಷಿಕುಮಾರ ಸ್ವಾಮೀಜಿ ಮೇಲೆ ಪ್ರಕರಣ ದಾಖಲಾಗಿತ್ತು. ಬಳಿಕ ಶ್ರೀರಂಗಪಟ್ಟಣದ ಪೊಲೀಸರು ಕಡೂರಿನ ಕಾಳಿ ಮಠಕ್ಕೆ ತೆರಳಿ ಋಷಿಕುಮಾರ ಸ್ವಾಮೀಜಿಯನ್ನು ಬಂದಿಸಿದ್ದರು. ಬಳಿಕ ಸ್ವಾಮೀಜಿಯನ್ನು ವಿಚಾರಣೆಗೆ ಒಳಪಡಿಸಿ ಪೊಲೀಸರು ಶ್ರೀರಂಗಪಟ್ಟಣದ JMFC ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ಇದನ್ನೂ ಓದಿ: UP Election- 30 ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ

    ಈ ವೇಳೆ ಋಷಿಕುಮಾರ ಸ್ವಾಮೀಜಿಯ ವಕೀಲರು ಜಾಮೀನಿಗೆ ಅರ್ಜಿ ಸಲ್ಲಿಸಿದರು. ನಿನ್ನೆ ಜಾಮೀನು ಅರ್ಜಿಯನ್ನು ಪರಿಶೀಲನೆ ಮಾಡಿದ ನ್ಯಾಯಾಧೀಶರು ಒಂದು ದಿನ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿ ಇಂದು ತೀರ್ಪು ನೀಡುವುದಾಗಿ ತಿಳಿಸಿತ್ತು. ಅದರಂತೆ ನಿನ್ನೆ ಋಷಿಕುಮಾರ ಸ್ವಾಮೀಜಿಯನ್ನು ಮಂಡ್ಯ ಕಾರಾಗೃಹದಲ್ಲಿ ಇಡಲಾಗಿತ್ತು. ಇಂದು ಶ್ರೀರಂಗಪಟ್ಟಣ JMFC ನ್ಯಾಯಾಲಯ ಕಾಳಿ ಸ್ವಾಮೀಜಿ ಪ್ರತಿ ಭಾನುವಾರ ಶ್ರೀರಂಗಪಟ್ಟಣ ಪಟ್ಟಣ ಪೊಲೀಸ್ ಠಾಣೆಗೆ ಬಂದು ಸಹಿ ಹಾಕಿ ತನಿಖೆಗೆ ಸಹಕಾರ ನೀಡಬೇಕೆಂದು ಷರತ್ತು ವಿಧಿಸಿ ಜಾಮೀನು ನೀಡಿದೆ.