Tag: ಕಾಳಿ ನದಿ

  • ಕಾಳಿ ನದಿಯಲ್ಲಿ ಕಾಲುಜಾರಿ ಬಿದ್ದು ಯುವಕ ನಾಪತ್ತೆ

    ಕಾಳಿ ನದಿಯಲ್ಲಿ ಕಾಲುಜಾರಿ ಬಿದ್ದು ಯುವಕ ನಾಪತ್ತೆ

    ಕಾರವಾರ: ಮೀನು ಹಿಡಿಯಲು ಹೋಗಿ ಕಾಳಿ ನದಿಯಲ್ಲಿ(Kali River) ಕಾಲುಜಾರಿ ನದಿಗೆ ಬಿದ್ದ ಯುವಕ ನಾಪತ್ತೆಯಾದ ಘಟನೆ ಕಾರವಾರ(Karwar) ತಾಲೂಕಿನ ಸುಂಕೇರಿ ಬಳಿ ನಡೆದಿದೆ.

    ಕಡವಾಡ(Kadavada) ಗ್ರಾಮದ ಮಾಡಿಭಾಗದ ಸಂತೋಷ್ ರಾಯ್ಕರ್ (35) ಕಾಳಿ ನದಿಯಲ್ಲಿ ನಾಪತ್ತೆಯಾದ ಯುವಕ. ಇದನ್ನೂ ಓದಿ: ಸಕಲೇಶಪುರ | ಭಾರೀ ಗಾಳಿ ಮಳೆಗೆ ಹೋಟೆಲ್ ಗೋಡೆ ಕುಸಿತ – ನಾಲ್ವರಿಗೆ ಗಾಯ

    ಶನಿವಾರ ರಾತ್ರಿ ಸುಂಕೇರಿ(Sunkeri) ಸೇತುವೆ ಬಳಿ ಮೀನು ಹಿಡಿಯಲು ಹೋಗಿ ಕಾಲುಜಾರಿ ಬಿದ್ದಿದ್ದ ಸಂತೋಷ್ ಕೊಚ್ಚಿಹೋಗಿದ್ದಾನೆ. ಅಗ್ನಿಶಾಮಕ ದಳ ಮತ್ತು ಪೊಲೀಸರು ನದಿ ಹಿನ್ನೀರಿನಲ್ಲಿ ಸಂತೋಷ್ ಶವಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ. ಕಾರವಾರ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಕೊರೊನಾ ರೀ ಎಂಟ್ರಿ – ನಿತ್ಯ 150 ರಿಂದ 200 ಸ್ಯಾಂಪಲ್ ಟೆಸ್ಟಿಂಗ್‌ಗೆ ಟಾರ್ಗೆಟ್

  • ಕರಾವಳಿಯಲ್ಲಿ ಅಚ್ಚರಿ – ಬೇಸಿಗೆಯಲ್ಲಿ ಏಕಾಏಕಿ ಗ್ರಾಮಕ್ಕೆ ನುಗ್ಗಿದ ಕಾಳಿ ನದಿಯ ನೀರು!

    ಕರಾವಳಿಯಲ್ಲಿ ಅಚ್ಚರಿ – ಬೇಸಿಗೆಯಲ್ಲಿ ಏಕಾಏಕಿ ಗ್ರಾಮಕ್ಕೆ ನುಗ್ಗಿದ ಕಾಳಿ ನದಿಯ ನೀರು!

    – ಕರಾವಳಿ ಗ್ರಾಮದ ಗದ್ದೆಗಳಲ್ಲಿ ಉಪ್ಪು ಮಿಶ್ರಿತ ನೀರು
    – ಸಾವಿರಾರು ಎಕ್ರೆ ರೈತರ ಭೂಮಿ ಜಲಾವೃತ

    ಕಾರವಾರ:  ಕರಾವಳಿ ಭಾಗದಲ್ಲಿ ತಾಪಮಾನ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು ಬಿಸಿ ಗಾಳಿ ಬೀಸತೊಡಗಿದೆ. ಈ ಮಧ್ಯೆ ಕಳೆದ ಮೂರು ದಿನದಿಂದ ಕಾರವಾರದ(Karawara) ಕಿನ್ನರ ಗ್ರಾಮದ ಗದ್ದೆಗಳಿಗೆ ಏಕಾಏಕಿ ಕಾಳಿ ನದಿಯ (Kali River) ಉಪ್ಪು ಮಿಶ್ರಿತ ನೀರು ಬಂದು ಸೇರುತ್ತಿದ್ದು ಕೃತಕ ಪ್ರವಾಹವನ್ನೇ ಸೃಷ್ಟಿಸಿದೆ.

    ಸಾವಿರಾರು ಎಕರೆ ಕೃಷಿ ಭೂಮಿ ಇದೀಗ ಕಾಳಿ ನದಿಯ ಉಪ್ಪು ಮಿಶ್ರಿತ ನೀರಿನಿಂದ ಹಾನಿಯಾಗಿದ್ದು ರೈತ ಬೆಳೆದ ತರಕಾರಿ, ಭತ್ತಗಳು ನೀರುಪಾಲಾಗಿದ್ದರೆ ಕುಡಿಯಲು ಬಳಸುವ ಬಾವಿ ನೀರು ಸಹ ಉಪ್ಪು ಮಿಶ್ರಿತವಾಗಿ ಕುಡಿಯಲು ಈಗ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

    ಕಾಳಿ ನದಿಯ ನೀರು ಏಕಾಏಕಿ ಜನವಸತಿ ಪ್ರದೇಶಕ್ಕೆ ನುಗ್ಗಿದ್ದರಿಂದ ಜನ ಭಯಭೀತರಾದರೆ ವಿಜ್ಞಾನಿಗಳು ಇದೊಂದು ನೈಸರ್ಗಿಕ ಪ್ರಕ್ರಿಯೆ ಎಂದಿದ್ದಾರೆ. ಇದನ್ನೂ ಓದಿ:  ಬೆಂಗಳೂರು| ನೇಣು ಬಿಗಿದುಕೊಂಡು ಮಂಗಳೂರು ಮೂಲದ ನವವಿವಾಹಿತೆ ಆತ್ಮಹತ್ಯೆ

    ಪಬ್ಲಿಕ್‌ ಟಿವಿಗೆ ಕಾರವಾರದ ಕಡಲ ಜೀವಶಾಸ್ತ್ರಜ್ಞ ಜಗನ್ನಾಥ್ ರಾಥೋಡ್ ಪ್ರತಿಕ್ರಿಯಿಸಿ, ಪ್ರತಿ ಬಾರಿ ಸಮುದ್ರದಲ್ಲಿ ಭರತ-ಇಳಿತ ಎಂಬ ನೈಸರ್ಗಿಕ ಕ್ರಿಯೆ ನಡೆಯುತ್ತದೆ. ಅಮಾವಾಸ್ಯೆ, ಹುಣ್ಣಿಮೆ ಸಂದರ್ಭದಲ್ಲಿ ಭೂಮಿಗೆ ಚಂದ್ರ ಹತ್ತಿರವಾಗುತ್ತಾನೆ. ಆಗ ಗುರುತ್ವಾಕರ್ಷಣೆ ಹೆಚ್ಚಿರುತ್ತದೆ. ಈ ಸಂದರ್ಭದಲ್ಲಿ ಭರತ – ಇಳಿತ ಎಂಬ ನೈಸರ್ಗಿಕ ಪ್ರಕ್ರಿಯೆ ಸಮುದ್ರದಲ್ಲಿ ನಡೆಯುತ್ತದೆ. ಮೊನ್ನೆ ಶಿವರಾತ್ರಿ ಸಂದರ್ಭದಲ್ಲಿ ಅಮವ್ಯಾಸೆ ಬಂದಿತ್ತು. ಅಂದಿನಿಂದ ಭರತದ ಪ್ರಮಾಣ ಗಣನೀಯ ಏರಿಕೆ ಕಂಡಿದೆ. ಮಾರ್ಚ್‌ 1 ಮತ್ತು 2 ರಂದು ಸಮುದ್ರದ ಅಲೆಯ ಪ್ರಮಾಣ 3 ಮೀಟರ್‌ಗಿಂತಲೂ ಹೆಚ್ಚಾಗಿತ್ತು. ಇದರಿಂದ ಸಮುದ್ರದ ನೀರು ನದಿ ನೀರಿಗೆ ಹೆಚ್ಚಿನ ಪ್ರಮಾಣದಲ್ಲಿ ಸೇರಿ ತಗ್ಗು ಪ್ರದೇಶಕ್ಕೆ ನೀರು ನುಗ್ಗಿದೆ ಎಂದು ತಿಳಿಸಿದರು.

    ಏಕಾಏಕಿ ಕೃಷಿ ಭೂಮಿಗೆ ನೀರು ನುಗ್ಗಿದ್ದರಿಂದ ಸಣ್ಣನೀರಾವರಿ ಇಲಾಖೆ ಅಧಿಕಾರಿಗಳು ಸಹ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಸಮುದ್ರದ ನೀರು ಹೆಚ್ಚಾಗಿ ಕಾಳಿ ನದಿಗೆ ಸೇರಿದ್ದರಿಂದ ನದಿ ಪಾತ್ರದ ಸುತ್ತಮುತ್ತ ಪ್ರದೇಶಕ್ಕೆ ನೀರು ನುಗ್ಗಿದ್ದು ಯಾವುದೇ ಸಮಸ್ಯೆಯಾಗದು ಎಂದು ಸಣ್ಣ ನೀರಾವರಿ ಇಲಾಖೆ ಅಧಿಕಾರಿ ಪೂರ್ಣಿಮಾ ಹೇಳಿದ್ದಾರೆ.

     

    ಎಲ್ಲೆಲ್ಲಿ ನೀರು ನುಗ್ಗಿದೆ?
    ಕೇವಲ ಕಿನ್ನರ ಗ್ರಾಮದಲ್ಲಿ ಅಲ್ಲದೇ ಸಮುದ್ರ ತೀರಭಾಗದ ಚಂಡಿಯಾ, ಚಿತ್ತಾಕುಲ, ಅಮದಳ್ಳಿಯಲ್ಲಿ ಅಲ್ಲದೇ ಕುಮಟ, ಅಂಕೋಲ ತಾಲೂಕಿನ ಭಾಗದಲ್ಲೂ ಇದೇ ಪರಿಸ್ಥಿತಿ ನಿರ್ಮಾಣವಾಗಿದೆ.

    ಒಟ್ಟಿನಲ್ಲಿ ಬಿಸಿಲ ಬೇಗೆಯಲ್ಲಿ ಕರಾವಳಿಯ ಜನ ಬೆಂದಿರುವಾಗಲೇ ಮಳೆ, ಗಾಳಿ ಇಲ್ಲದೇ ಕಾಳಿ ನದಿ ಪ್ರವಾಹ ಜನರನ್ನು ಬೆಚ್ಚು ಬೀಳಿಸಿದೆ. ಆರು ವರ್ಷಗಳ ನಂತರ ಇದೀಗ ಸಮುದ್ರದ ನೈಸರ್ಗಿಕ ಪ್ರಕ್ರಿಯೆಯ ಪರಿಣಾಮ ಕರಾವಳಿ ಗ್ರಾಮದಲ್ಲಿ ರೈತರು ಬೆಳೆದ ಬೆಳೆ ನದಿಪಾಲಾಗಿದೆ.

     

  • 8 ದಿನದ ಬಳಿಕ ಕಾಳಿ ನದಿಯಿಂದ ದಡ ಸೇರಿದ ಲಾರಿ – ಹೇಗಿತ್ತು ಕಾರ್ಯಾಚರಣೆ?

    8 ದಿನದ ಬಳಿಕ ಕಾಳಿ ನದಿಯಿಂದ ದಡ ಸೇರಿದ ಲಾರಿ – ಹೇಗಿತ್ತು ಕಾರ್ಯಾಚರಣೆ?

    ಕಾರವಾರ: ಆ.7ರಂದು ಕಾರವಾರ (Karwar) ನಗರದ ರಾಷ್ಟ್ರೀಯ ಹೆದ್ದಾರಿ 66ರ ಗೋವಾ- ಕಾರವಾರ ಸಂಪರ್ಕಿಸುವ ಕೋಡಿಬಾಗ್‌ನ ಕಾಳಿ ಬ್ರಿಡ್ಜ್‌ನಲ್ಲಿ (Kali Bridge) ಲಾರಿ ಚಾಲಕನ ಸಮೇತ ಬಿದ್ದಿದ್ದ ತಮಿಳುನಾಡು (Tamil Nadu) ಮೂಲದ ಲಾರಿಯನ್ನು ಎಂಟು ದಿನದ ನಂತರ ಕಾರ್ಯಾಚರಣೆ ನಡೆಸಿ ಇಂದು ಹೊರತೆಗೆಯಲಾಯಿತು.

    ಗುರವಾರ ಬೆಳಗ್ಗೆ ಕಾರ್ಯಾಚರಣೆಗೆ ಐಆರ್‌ಬಿ ಕಂಪನಿಯು ಮೂರು ಕ್ರೇನ್ ಹಾಗೂ ಎರಡು ಬೋಟ್ ಬಳಸಿ ಕಾರ್ಯಾಚರಣೆಗೆ ಇಳಿದಿತ್ತು. ಆದರೆ ಲಾರಿ ಹೆಸ್ಕಾಂನ ತಂತಿಯ ಮೇಲೆ ತೇಲುತ್ತಿತ್ತು. ತಂತಿ ಕಟ್ ಮಾಡಿದಲ್ಲಿ ಲಾರಿ ಇನ್ನೂ ಕೆಳಕ್ಕೆ ಹೋಗುವ ಆತಂಕವಿತ್ತು. ಆದರೆ ಯಲ್ಲಾಪುರದ ಸನ್ನಿಸಿದ್ದಿ ಎಂಬುವರು ಯಾವುದೇ ಸಾಧನ ಬಳಸದೇ ನೀರಿನಾಳಕ್ಕೆ ಹೋಗಿ ರೋಪ್ ಕಟ್ಟಿ ಬಂದಿದ್ದರು. ಇದನ್ನೂ ಓದಿ: ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ – ಪತಿ, ಮಕ್ಕಳ ವಿರುದ್ಧ ಕೊಲೆ ಆರೋಪ

    ಇದರ ನಂತರ ಈಶ್ವರ್ ಮಲ್ಪೆ ತಂಡ ಮೂರು ರೋಪ್ ಕಟ್ಟಿ ಕೇಬಲ್ ತುಂಡರಿಸಿ ರೋಪ್ ಅನ್ನು ಟೋಯಿಂಗ್ ಮೂಲಕ ಎಳೆಸಿದ್ದರು. ದಡಕ್ಕೆ ನೂರು ಮೀಟರ್ ಇರುವಾಗ ಕಲ್ಲಿನ ಭಾಗದಲ್ಲಿಲಾರಿ ಸಿಲುಕಿಕೊಂಡಿತ್ತು. ಆದರೂ ಶತ ಪ್ರಯತ್ನ ನಡೆಸಿ ಸುಮಾರು 7.5 ಟನ್‌ಗೂ ಹೆಚ್ಚು ತೂಕದ ಲಾರಿಯನ್ನು ದಡಕ್ಕೆ ತಂದು ಯಶಸ್ವಿಯಾಗಿ ಕಾರ್ಯಾಚರಣೆ ನಡೆಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ 50ಕ್ಕೂ ಹೆಚ್ಚು ಜನ ಭಾಗಿಯಾಗಿದ್ದರು. ಇದನ್ನೂ ಓದಿ: ಗ್ಯಾರಂಟಿಗಳ ಭಾರದಿಂದ ಕಂಗೆಟ್ಟ ಸರ್ಕಾರ – ಶೀ‍ಘ್ರವೇ ಆಪರೇಷನ್ ಬಿಪಿಎಲ್ ಕಾರ್ಡ್‌

  • ಕಾಳಿ ನದಿಗೆ ಅಡ್ಡಲಾಗಿ ಕಟ್ಟಿದ್ದ ಸೇತುವೆ ಕುಸಿತ – ನೀರಿಗೆ ಬಿದ್ದ ಲಾರಿ, ಚಾಲಕನ ರಕ್ಷಣೆ

    ಕಾಳಿ ನದಿಗೆ ಅಡ್ಡಲಾಗಿ ಕಟ್ಟಿದ್ದ ಸೇತುವೆ ಕುಸಿತ – ನೀರಿಗೆ ಬಿದ್ದ ಲಾರಿ, ಚಾಲಕನ ರಕ್ಷಣೆ

    ಕಾರವಾರ: ಕಾಳಿ ನದಿ (Kali River) ಸೇತುವೆಗೆ ಅಡ್ಡಲಾಗಿ 40 ವರ್ಷದ ಹಿಂದೆ ಕಟ್ಟಿದ್ದ ಸೇತುವೆ (Bridge) ಕುಸಿದು ಬಿದ್ದ ಪರಿಣಾಮ ತಮಿಳುನಾಡು ಮೂಲದ ಲಾರಿಯೊಂದು ನದಿಗೆ ಬಿದ್ದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ (Karwar) ನಗರದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ.

    ಮಧ್ಯರಾತ್ರಿ 1 ಗಂಟೆಯ ಸುಮಾರಿಗೆ ಸೇತುವೆ ಕುಸಿದಿದ್ದು, ಘಟನೆಯಲ್ಲಿ ಲಾರಿ ಚಾಲಕ ಬಾಲಮುರುಗನ್ ಅವರನ್ನು ರಕ್ಷಣೆ ಮಾಡಲಾಗಿದೆ. ಗೋವಾದಿಂದ ಹುಬ್ಬಳ್ಳಿಗೆ ತೆರಳುತಿದ್ದ ಖಾಲಿ ಲಾರಿ ಕಾಳಿನದಿಯ ಸೇತುವೆಮೇಲೆ ವೇಗವಾಗಿ ಹೋಗುತ್ತಿದ್ದ ವೇಳೆ ಸೇತುವೆ ಕುಸಿದಿದೆ. ಈ ವೇಳೆ ಚಾಲಕ ಲಾರಿಯ ಕ್ಯಾಬಿನ್ ಮೇಲೆ ನಿಂತು ಕೂಗಿದ್ದಾರೆ. ಇದನ್ನು ಗಮನಿಸಿದ ಸ್ಥಳೀಯ ಮೀನುಗಾರರು ಕರಾವಳಿ ಕಾವಲು ಪಡೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಆಗಮಿಸಿದ ಕರಾವಳಿ ಕಾವಲುಪಡೆ ಸಿಬ್ಬಂದಿ ಹಾಗೂ ಸ್ಥಳೀಯ ಮೀನುಗಾರರ ಸಹಾಯದೊಂದಿಗೆ ಅವರ ರಕ್ಷಣೆ ಮಾಡಲಾಗಿದೆ. ಇದನ್ನೂ ಓದಿ: ಲಿಫ್ಟ್‌ನಲ್ಲಿ ಶಾರ್ಟ್ ಸರ್ಕ್ಯೂಟ್ – ಹೊತ್ತಿ ಉರಿದ ಕಾರ್ಖಾನೆ

    ಕಾಳಿ ನದಿಯ ಸೇತುವೆ ಮೂರು ಕಡೆ ಕುಸಿದಿದೆ. ಕಾರವಾರದಿಂದ ಗೋವಾ ಕಡೆಗೆ ತೆರಳುವ ಮೊದಲ ಭಾಗ, ನಂತರ ಮಧ್ಯ ಭಾಗ, ಅದರ ನಂತರ ಗೋವಾದಿಂದ ಕಾರವಾರದ ಕಡೆ ಬರುವ ಪ್ರಾರಂಭದಲ್ಲಿ ಸೇತುವೆಯ ಮೇಲ್ಛಾವಣಿ ಹಾಸು ಕುಸಿದು ಘಟನೆ ನಡೆದಿದೆ. ಇದನ್ನೂ ಓದಿ: ವಿನೇಶ್‌ ಫೋಗಟ್‌ ಫೈನಲ್‌ಗೆ ಲಗ್ಗೆ – ಒಲಿಂಪಿಕ್ಸ್‌ ಫೈನಲ್‌ ಪ್ರವೇಶಿಸಿದ ಮೊದಲ ಭಾರತೀಯ ಮಹಿಳಾ ಕುಸ್ತಿಪಟು

    ಘಟನೆ ನಡೆದ ನಂತರ ಗೋವಾ-ಕಾರವಾರ ಮಾರ್ಗದ ಎರಡು ಭಾಗದ ಸಂಚಾರವನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ. ಜಿಲ್ಲಾಧಿಕಾರಿ, ಕಾರವಾರದ ಶಾಸಕ ಸತೀಶ್ ಸೈಲ್ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ನಂತರ ಆಸ್ಪತ್ರೆಗೆ ತೆರಳಿ ಗಾಯಾಳುವನ್ನು ಭೇಟಿಯಾಗಿ ಮಾಹಿತಿ ಪಡೆದರು. ಇದನ್ನೂ ಓದಿ: ಮಂಗಳೂರು ಹೋಂ ಸ್ಟೇ ದಾಳಿ ಪ್ರಕರಣ – 12 ವರ್ಷಗಳ ಬಳಿಕ 40 ಆರೋಪಿಗಳು ದೋಷಮುಕ್ತ

    ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಅಗ್ನಿಶಾಮಕ ದಳದ ಸಿಬ್ಬಂದಿ, ಕರಾವಳಿ ಕಾವಲು ಪಡೆ ಮೊಕ್ಕಾಂ ಹೂಡಿದೆ. ಇದನ್ನೂ ಓದಿ: ಮನೆ, ಬಾಡಿಗೆ ಮನೆ ಬದಲಿಸುವವರಿಗೆ ಗೃಹಜ್ಯೋತಿ; ಡಿ-ಲಿಂಕ್ ಮಾಡುವುದು ಹೇಗೆ?

  • ದಾಂಡೇಲಿಯಲ್ಲಿ ಹುಬ್ಬಳ್ಳಿಯ ಒಂದೇ ಕುಟುಂಬದ ಆರು ಮಂದಿ ನೀರು ಪಾಲು

    ದಾಂಡೇಲಿಯಲ್ಲಿ ಹುಬ್ಬಳ್ಳಿಯ ಒಂದೇ ಕುಟುಂಬದ ಆರು ಮಂದಿ ನೀರು ಪಾಲು

    ಕಾರವಾರ: ನೀರಿನಲ್ಲಿ ಮುಳುಗಿ ಒಂದೇ ಕುಟುಂಬದ 6 ಮಂದಿ ನೀರುಪಾಲಾದ ಘಟನೆ ದಾಂಡೇಲಿ (Dandeli) ತಾಲೂಕಿನ ಅಕ್ವಾಡ ಗ್ರಾಮದ ಕಾಳಿ ನದಿಯಲ್ಲಿ (Kali River) ನಡೆದಿದೆ.

    ಹುಬ್ಬಳ್ಳಿಯ (Hubballi) ಈಶ್ವರ ನಗರದ ನಿವಾಸಿಗಳಾದ ನಜೀರ್ ಅಹ್ಮದ್ (40),ಅಲ್ಛೀಯಾ ಅಹ್ಮದ್ (10),ಮೋಹಿನ್ ಅಹ್ಮದ್ (6),ರೇಷಾ ಉನ್ನಿಸಾ (38),ಇಫ್ರಾ‌ಅಹ್ಮದ್ (15),ಅಬೀದ್ ಅಹ್ಮದ್ (12) ಮೃತಪಟ್ಟಿದ್ದು ದಡದಲ್ಲಿದ್ದ ಇಬ್ಬರು ಸುರಕ್ಷಿತರಾಗಿದ್ದಾರೆ. ಇದನ್ನೂ ಓದಿ: ಈ ದೇಶಕ್ಕೆ ಹಿಡಿದಿರುವ ಶನಿ ಅಂದ್ರೆ ಅದು ಮೋದಿ: ರಮೇಶ್ ಕುಮಾರ್ ಆಕ್ಷೇಪಾರ್ಹ ಹೇಳಿಕೆ

     

    ಮೃತರು ಒಂದೇ ಕುಟುಂಬದವರಾಗಿದ್ದು ಎಂಟು ಜನರು ವಾಹನ ಮಾಡಿಕೊಂಡು ದಾಂಡೇಲಿ ಭಾಗಕ್ಕೆ ಪ್ರವಾಸ ಬಂದಿದ್ದರು. ಈಜುವ ವೇಳೆ ಮುಳುಗಿ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ರಾಹುಲ್‌ ಗಾಂಧಿಗೆ ಅನಾರೋಗ್ಯ – ಇಂಡಿಯಾ ಒಕ್ಕೂಟದ ರ‍್ಯಾಲಿಗೆ ಗೈರು

    ದಾಂಡೇಲಿ ಪೊಲೀಸರು ಆರು ಜನರ ದೇಹಗಳನ್ನು ಹೊರತೆಗೆದಿದ್ದಾರೆ. ಮೃತ ದೇಹಗಳನ್ನು ದಾಂಡೇಲಿ ಆಸ್ಪತ್ರೆಗೆ ರವಾನಿಸಿದ್ದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ‌. ಘಟನೆ ಸಂಬಂಧ ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

  • ಈಜಲು ಹೋದ ವ್ಯಕ್ತಿ ಮೇಲೆ ಮೊಸಳೆ ದಾಳಿ

    ಈಜಲು ಹೋದ ವ್ಯಕ್ತಿ ಮೇಲೆ ಮೊಸಳೆ ದಾಳಿ

    ಕಾರವಾರ: ಕಾಳಿ ನದಿಯಲ್ಲಿ ಈಜಲು ಹೋದ ವ್ಯಕ್ತಿಯನ್ನು ಮೊಸಳೆಗಳು (Crocodile) ಎಳೆದೊಯ್ದ ಘಟನೆ ಉತ್ತರ ಕನ್ನಡ (Uttara Kannada) ಜಿಲ್ಲೆಯ ದಾಂಡೇಲಿಯ (Dandeli) ಕುಳಗಿ ರಸ್ತೆಯ ಈಶ್ವರ ದೇವಸ್ಥಾನದ ಬಳಿ ಇಂದು ಬೆಳಗ್ಗೆ ನಡೆದಿದೆ.

    ಗುಜರಾತ್ ಮೂಲದ ದಾಂಡೇಲಿ ನಿವಾಸಿ ಪೀತಾಂಬರಿ ದಾಸ್ ಎಂಬಾತ ಬೆಳಗ್ಗೆ ಕಾಳಿ ನದಿಯಲ್ಲಿ (Kali River) ಈಜಲು ತೆರಳಿದ್ದ. ದಂಡೆಯ ಮೇಲೆ ಚಪ್ಪಲಿ, ಬಟ್ಟೆಯನ್ನು ಇಟ್ಟು ನದಿಯಲ್ಲಿ ಇಳಿದಿದ್ದಾನೆ. ಈ ವೇಳೆ 2 ಮೊಸಳೆಗಳು ಈತನ ಮೇಲೆ ದಾಳಿ ನಡೆಸಿ ಹೊತ್ತೊಯ್ದಿದೆ. ಇದನ್ನೂ ಓದಿ: ಅಕ್ರಮವಾಗಿ ಕಟ್ಟಡ ನಿರ್ಮಿಸಿದ್ದ ಗಂಭೀರ್‌ಗೆ ಕೋರ್ಟ್‍ನಿಂದ ಸಮನ್ಸ್

    ಇದನ್ನು ಸ್ಥಳೀಯ ಜನರು ನೋಡಿ ಘಟನೆಗೆ ಸಂಬಂಧಿಸಿ ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ವ್ಯಕ್ತಿಯ ಶವಕ್ಕಾಗಿ ಹುಡುಕಾಟ ನಡೆಸಿದ್ದಾರೆ. ಇದನ್ನೂ ಓದಿ: ಕೊಬ್ಬರಿ ಗೋಡಾನ್‍ಗೆ ಆಕಸ್ಮಿಕ ಬೆಂಕಿ – ಲಕ್ಷಾಂತರ ರೂ. ಮೌಲ್ಯದ ಕೊಬ್ಬರಿಗಳು ಭಸ್ಮ

    Live Tv
    [brid partner=56869869 player=32851 video=960834 autoplay=true]

  • ಕಾರವಾರದಲ್ಲಿ ಶೀಘ್ರ ಮರಳುಗಾರಿಕೆ ಅನುಮತಿ: ರೂಪಾಲಿ ನಾಯ್ಕ್

    ಕಾರವಾರದಲ್ಲಿ ಶೀಘ್ರ ಮರಳುಗಾರಿಕೆ ಅನುಮತಿ: ರೂಪಾಲಿ ನಾಯ್ಕ್

    ಕಾರವಾರ: ಕಾಳಿ ನದಿ ಪ್ರದೇಶದಲ್ಲಿ ಮರಳುಗಾರಿಕೆಗೆ ಶೀಘ್ರದಲ್ಲಿ ಅನುವು ಮಾಡಿಕೊಡಲಾಗುವುದು ಎಂದು ಕಾರವಾರದ ಶಾಸಕಿ ರೂಪಾಲಿ ನಾಯ್ಕ್ ತಿಳಿಸಿದ್ದಾರೆ.

    ಮರಳುಗಾರಿಕೆ ಸಂಬಂಧಿಸಿದಂತೆ ಕಾರವಾರದ ಸಕ್ರ್ಯೂಟ್ ಹೌಸ್‍ನಲ್ಲಿ ಮರಳು ಗುತ್ತಿಗೆದಾರರು ಹಾಗೂ ವಿವಿಧ ಸಂಘಟನೆಗಳೊಂದಿಗೆ ಸಭೆ ನಡೆಸಿದ ಅವರು, ಮರಳು ಗಣಿಗಾರಿಕೆ ತೊಡಕುಗಳನ್ನು ನಿವಾರಿಸಿ ಮರಳು ಗಣಿಗಾರಿಕೆಗೆ ಅನುಮತಿ ನೀಡುವಂತೆ ಗಣಿ ಸಚಿವ ಹಾಲಪ್ಪ ಆಚಾರ್ ಅವರಿಗೆ ಸ್ಥಳದಲ್ಲೇ ದೂರವಾಣಿ ಕರೆ ಮಾಡಿ ಸಮಸ್ಯೆ ತಿಳಿಸಿದರು. ಈ ಸಂದರ್ಭದಲ್ಲಿ ಶೀಘ್ರದಲ್ಲಿ ಅನುಮತಿ ನೀಡುವುದಾಗಿ ಸಚಿವರು ಭರವಸೆ ನೀಡಿದರು. ಇದನ್ನೂ ಓದಿ: ಬಿಟ್ ಕಾಯಿನ್ ಹಗರಣದಲ್ಲಿ ಬಿಜೆಪಿ ಪಕ್ಷದ ಪ್ರಭಾವಿಯೊಬ್ಬರಿದ್ದಾರೆ: ರಾಮಲಿಂಗಾರೆಡ್ಡಿ

    ಕ್ಷೇತ್ರದಲ್ಲಿ ಮರಳು ಗಣಿಗಾರಿಕೆ ನಿಂತಿರುವುದರಿಂದ ಮನೆಗಳ ನಿರ್ಮಾಣ, ಸರ್ಕಾರಿ ಕಾಮಗಾರಿಗಳ ನಿರ್ಮಾಣಕ್ಕೆ ತೊಡಕಾಗುತ್ತಿರುವ ಬಗ್ಗೆ ಸಚಿವರ ಗಮನಕ್ಕೆ ತರಲಾಗಿದೆ. ಅದಕ್ಕೆ ಸ್ಪಂದಿಸಿದ ಸಚಿವರು ಅಧಿಕಾರಿಗಳೊಂದಿಗೆ ಮಾತನಾಡಿ ಶೀಘ್ರದಲ್ಲಿ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ ಎಂದು ಮಾಧ್ಯಮಗಳಿಗೆ ತಿಳಿಸಿದರು. ಇದನ್ನೂ ಓದಿ: ಶಿಕ್ಷಣದಿಂದ ಜೀವನ ಕಟ್ಟುವ ಕೆಲಸವಾಗುತ್ತಿದೆ: ಬಿ.ವೈ ರಾಘವೇಂದ್ರ

    ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷರಾದ ನಿತಿನ್ ಪಿಕಳೆ, ಭಾರತೀಯ ಜನತಾ ಪಕ್ಷ ಕಾರವಾರ ನಗರ ಮಂಡಲದ ಅಧ್ಯಕ್ಷರಾದ ನಾಗೇಶ್ ಕುರ್ಡೇಕರ, ಮೀನುಗಾರ ಪ್ರಕೋಷ್ಟಕದ ರಾಜ್ಯ ಸಹಸಂಚಾಲಕರಾದ ಗಣಪತಿ ಉಳ್ವೇಕರ, ಮರಳು ಗುತ್ತಿಗೆದಾರ ಸಂಘದ ಪದಾಧಿಕಾರಿಗಳು, ಬೋಟ್ ಅಸೋಸಿಯೇಷನ್, ಇಂಜಿನಿಯರ್ ಅಸೋಸಿಯೇಷನ್ ಹಾಗೂ ವಿವಿಧ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

  • ಕಾಳಿ ನದಿಯಲ್ಲಿ ಗಾಳಹಾಕಿ ಮೀನು ಹಿಡಿಯಲು ಹೋದ ಬಾಲಕನನ್ನು ಎಳೆದೊಯ್ದ ಮೊಸಳೆ

    ಕಾಳಿ ನದಿಯಲ್ಲಿ ಗಾಳಹಾಕಿ ಮೀನು ಹಿಡಿಯಲು ಹೋದ ಬಾಲಕನನ್ನು ಎಳೆದೊಯ್ದ ಮೊಸಳೆ

    ಕಾರವಾರ: ನದಿ ದಂಡೆಯ ಮೇಲೆ ಮೀನು ಹಿಡಿಯಲು ಗಾಳಹಾಕಿ ಕುಳಿತಿದ್ದ ಬಾಲಕನನ್ನು ಮೊಸಳೆ ಎಳೆದೊಯ್ದ ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ ಕಾಳಿ ನದಿ ದಡದಲ್ಲಿ ಇಂದು ಸಂಜೆ ನಡೆದಿದೆ.

    ಮೋಹಿನ್ ಮೆಹಬೂಬ್ (15) ಮೊಸಳೆ ಪಾಲಾದ ಬಾಲಕನಾಗಿದ್ದು, ಈತ ಮೀನು ಹಿಡಿಯಲು ದಾಂಡೇಲಿ-ಹಳಿಯಾಳ ರಸ್ತೆಯ ಕಾಳಿ ನದಿ ದಡದಲ್ಲಿ ಕುಳಿತಿದ್ದ. ಈ ವೇಳೆ ಮೊಸಳೆ ದಾಳಿಮಾಡಿದ್ದು ಈತನನ್ನು ಹೊತ್ತೊಯ್ದಿದೆ. ಇದನ್ನೂ ಓದಿ: ಕಾಳಿ ನದಿಯಿಂದ ಗ್ರಾಮಕ್ಕೆ ಬಂತು ಮೊಸಳೆ – ಆತಂಕದಲ್ಲಿ ಗ್ರಾಮಸ್ಥರು

    ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು, ಅಗ್ನಿಶಾಮಕ ಸಿಬ್ಬಂದಿಗಳು ಆಗಮಿಸಿ ಶೋಧ ಕಾರ್ಯ ಮುಂದುವರೆಸಿದ್ದು, ಸೂಪಾ ಜಲಶಾಯದಿಂದ ಹರಿದುಬರುತ್ತಿರುವ ನೀರನ್ನು ಸಹ ಬಂದ್ ಮಾಡಲಾಗಿದೆ. ಇದನ್ನೂ ಓದಿ: ಮೆಡಿಕಲ್‍ನಲ್ಲಿ ಗ್ರೈಪ್ ವಾಟರ್ ಬದಲು ಪಾಯಿಸನ್ ಕೊಟ್ರು

  • ಕಾರವಾರದಲ್ಲಿ ಪ್ರವಾಹ ಹಾನಿ ವೀಕ್ಷಿಸಿ ಅಧಿಕಾರಿಗಳಿಗೆ ಸಿದ್ದರಾಮಯ್ಯ ಕ್ಲಾಸ್

    ಕಾರವಾರದಲ್ಲಿ ಪ್ರವಾಹ ಹಾನಿ ವೀಕ್ಷಿಸಿ ಅಧಿಕಾರಿಗಳಿಗೆ ಸಿದ್ದರಾಮಯ್ಯ ಕ್ಲಾಸ್

    ಕಾರವಾರ: ಕಾಳಿ ನದಿ ಪ್ರವಾಹದಿಂದ ಹಾನಿಗೊಳಗಾಗಿದ್ದ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಪ್ರದೇಶಗಳಿಗೆ ಇಂದು ವಿಪಕ್ಷ ನಾಯಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಜನರಿಗೆ ಮಾಹಿತಿ ನೀಡದೇ ಕೆ.ಪಿ.ಸಿ.ಎಲ್ ಅಧಿಕಾರಿಗಳು ನೀರನ್ನು ಬಿಟ್ಟಿರುವುದಕ್ಕೆ ತರಾಟೆಗೆ ತೆಗೆದುಕೊಂಡಿದ್ದಾರೆ.

    ಜುಲೈ 23 ರಂದು ಉತ್ತರ ಕನ್ನಡ ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆಯಿಂದ ಹಲವೆಡೆ ನೆರೆ ಸೃಷ್ಟಿಯಾಗಿ ಅನಾಹುತ ಮಾಡಿತ್ತು. ಕಾಳಿ ನದಿ ಉಕ್ಕಿ ಹರಿದ ಪರಿಣಾಮ ಕದ್ರಾ ಜಲಾಶಯದಿಂದ ಅಪಾರ ಪ್ರಮಾಣದಲ್ಲಿ ನೀರು ಹೊರಬಿಟ್ಟಿದ್ದರಿಂದ ಕಾರವಾರ ತಾಲೂಕಿನ ಹಲವಾರು ಗ್ರಾಮಗಳು ಮುಳುಗಡೆಯಾಗಿದ್ದವು. ಅದರಲ್ಲೂ ಜಲಾಶಯದ ಸಮೀಪದಲ್ಲೇ ಇರುವ ಮಲ್ಲಾಪುರ, ಕುರ್ನಿಪೇಟೆ, ಗಾಂಧಿನಗರ ಗ್ರಾಮಗಳಲ್ಲಿ ಮನೆಗಳೇ ಪ್ರವಾಹದಿಂದ ಕೊಚ್ಚಿ ಹೋಗಿದ್ದವು. ತಾಲೂಕಿನ ಕದ್ರಾ ಜಲಾಶಯದ ಸುತ್ತಮುತ್ತಲಿನ ಗ್ರಾಮಕ್ಕೆ ವಿಪಕ್ಷ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಸೋಮವಾರ ಭೇಟಿ ನೀಡಿದರು. ಮಲ್ಲಾಪುರ, ಕುರ್ನಿಪೇಟೆ, ಗಾಂಧಿನಗರ ಸೇರಿದಂತೆ ಹಲವು ಗ್ರಾಮಗಳಿಗೆ ಭೇಟಿ ನೀಡಿ ಪ್ರವಾಹದಿಂದ ಆದ ಹಾನಿ ಕುರಿತು ವೀಕ್ಷಣೆ ಮಾಡಿದರು.

    ಇದಾದ ನಂತರ ಕೆಪಿಸಿ ಅಧಿಕಾರಿಗಳ ಸಭೆಯನ್ನ ನಡೆಸಿದ ಸಿದ್ದರಾಮಯ್ಯ ಯಾವುದೇ ಮುನ್ಸೂಚನೆ ನೀಡದೆ ಜಲಾಶಯದಿಂದ ಅಪಾರ ಪ್ರಮಾಣದ ನೀರು ಬಿಟ್ಟು ಜನರನ್ನ ಸಮಸ್ಯೆಗೆ ಸಿಲುಕಿಸಿದ್ದೀರಿ ಎಂದು ಗರಂ ಆದರು. ಅಲ್ಲದೇ ನಿರಾಶ್ರಿತರಾದವರಿಗೆ ಕೆಪಿಸಿ ಕಾಲೋನಿಯಲ್ಲಿಯೇ ಉಳಿದುಕೊಳ್ಳಲು ಸೂರು ನೀಡುವಂತೆ ವಾರ್ನಿಂಗ್ ನೀಡಿದ್ದು ಕಾಯಂ ಬದಲಿ ವ್ಯವಸ್ಥೆ ಕಲ್ಪಿಸುವಂತೆ ತಿಳಿಸಿದರು.

    ಪ್ರವಾಹದಿಂದ ಹಾನಿಗೊಳಗಾದ ಗ್ರಾಮಗಳ ಜನರ ಜೊತೆ ಸಿದ್ದರಾಮಯ್ಯ ಸಭೆ ನಡೆಸಿ ಅಹವಾಲನ್ನ ಸ್ವೀಕರಿಸಿದರು. ಹಲವು ಗ್ರಾಮಸ್ಥರು ಸಿದ್ದರಾಮಯ್ಯನವರ ಮುಂದೆ ತಮ್ಮ ನೋವನ್ನ ಹೇಳಿಕೊಂಡಿದ್ದು, ತಮಗೆ ಪದೇ ಪದೇ ಪ್ರವಾಹದಿಂದ ಕಷ್ಟಕ್ಕೆ ಸಿಲುಕುವಂತಾಗಿದ್ದು, ಶಾಶ್ವತ ಪರಿಹಾರ ಕಲ್ಪಿಸುವಂತೆ ಮನವಿ ಮಾಡಿಕೊಂಡರು.

    ಸಿದ್ದರಾಮಯ್ಯ ಕೆಪಿಸಿ ಅಧಿಕಾರಿಗಳ ಜೊತೆ ಕಂದಾಯ ಇಲಾಖೆ, ಅರಣ್ಯ ಇಲಾಖೆ ಅಧಿಕಾರಿಗಳಿಗೂ ಕ್ಲಾಸ್ ತೆಗೆದುಕೊಂಡರು. ಸಿದ್ದರಾಮಯ್ಯನವರ ಜೊತೆ ಮಾಜಿ ಸಚಿವ ಆರ್.ವಿ ದೇಶಪಾಂಡೆ, ಮಾಜಿ ಶಾಸಕರಾದ ಸತೀಶ್ ಸೈಲ್, ಮಂಕಾಳು ವೈದ್ಯ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಸಾಥ್ ನೀಡಿದರು. ಈ ಸಂಧರ್ಭದಲ್ಲಿ ಮಾತನಾಡಿದ ಆರ್.ವಿ ದೇಶಪಾಂಡೆ, ಕೆಪಿಸಿ ಅಧಿಕಾರಿಗಳು ನೋಟಿಸ್ ನೀಡದೆ ನೀರು ಬಿಟ್ಟು ಅನಾಹುತಕ್ಕೆ ಕಾರಣವಾಗಿದ್ದಾರೆ. ಸೂಕ್ತ ಪರಿಹಾರ ಹಾನಿಗೊಳಗಾದವರಿಗೆ ಸರ್ಕಾರ ಕೊಡಬೇಕು ಎಂದು ಆಗ್ರಹಿಸಿದರು. ಇದಲ್ಲದೇ ವಿಧಾನಸೌದದಲ್ಲಿ ಈ ವಿಷಯ ಪ್ರಸ್ತಾಪಿಸುವುದಾಗಿ ತಿಳಿಸಿದರು.

    ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಕಾರವಾರ ನಂತರ ಅಂಕೋಲಾ ತಾಲೂಕಿನಲ್ಲಿ ಗಂಗಾವಳಿ ನದಿ ಪ್ರವಾಹದಿಂದ ಹಾನಿಗೊಳಗಾದ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದಲ್ಲದೇ ಅಂಕೋಲಾ ಪಟ್ಟಣದಲ್ಲೂ ನಿರಾಶ್ರಿತರ ಅಹವಾಲು ಸಭೆಯನ್ನ ನಡೆಸಿದರು. ಇದಾದ ನಂತರ ಯಲ್ಲಾಪುರಕ್ಕೆ ತೆರಳಿ ಅಲ್ಲೂ ಪ್ರವಾಹದಿಂದ ಹಾನಿಗೊಳಗಾದ ಪ್ರದೇಶಕ್ಕೆ ಭೇಟಿ ನೀಡಿ ವೀಕ್ಷಣೆ ನಡೆಸಿದರು. ಇದನ್ನೂ ಓದಿ: ನೆಟ್ ಇಲ್ಲದೇ ಮೊಬೈಲಿನಿಂದ ಹಣ ಪಾವತಿಸಿ – ಏನಿದು ಇ-ರುಪೀ?

    ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಉತ್ತರ ಕನ್ನಡ ಜಿಲ್ಲೆಗೆ ಭೇಟಿ ನೀಡಿದ ಬೆನ್ನಲ್ಲೇ ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿ ಪ್ರವಾಹದಿಂದ ಹಾನಿಗೊಳಗಾದ ಪ್ರದೇಶದ ಜನರಿಗೆ ಸಾಂತ್ವಾನ ಹೇಳಲು ಮುಂದಾಗಿರುವುದು ಜಿಲ್ಲೆಯ ರಾಜಕೀಯ ವಲಯದಲ್ಲೂ ಸಾಕಷ್ಟು ಸಂಚಲನ ಮೂಡಿಸಿದೆ.

  • ಸೆಲ್ಫಿ ತೆಗೆದುಕೊಳ್ಳಲು ಹೋಗಿ ಕಾಳಿ ನದಿಯಲ್ಲಿ ತೇಲಿಹೋದ ಜೋಡಿ

    ಸೆಲ್ಫಿ ತೆಗೆದುಕೊಳ್ಳಲು ಹೋಗಿ ಕಾಳಿ ನದಿಯಲ್ಲಿ ತೇಲಿಹೋದ ಜೋಡಿ

    ಕಾರವಾರ: ಕಾಳಿ ನದಿಯಲ್ಲಿ ಸೆಲ್ಫಿ ತೆಗೆಯಲು ಹೋಗಿ ಕಾಲುಜಾರಿ ಸೇತುವೆ ಕೆಳಗೆ ಪ್ರೇಮಿಗಳು ಬಿದ್ದು ನಾಪತ್ತೆಯಾಗಿದ್ದಾರೆ. ಈ ಘಟನೆ ಜೋಯಿಡಾ ತಾಲೂಕಿನ ಗಣೇಶಗುಡಿ ಬಳಿಯ ಸೂಪಾ ಡ್ಯಾಂ ಬಳಿ ಇರುವ ಕಾಳಿ ಸೇತುವೆ ಬಳಿ ಇಂದು ಸಂಜೆ ನಡೆದಿದೆ.

    ಇಂದು ಸಂಜೆ ಗಣೇಶಗುಡಿಯ ಡ್ಯಾಂ ಭಾಗದಲ್ಲಿ ದಾಂಡೇಲಿಯಿಂದ ಆಟೋದಲ್ಲಿ ಬಂದು ಗಣೇಶಗುಡಿಯ ಸೂಫಾ ಡ್ಯಾಮ್ ಗೆ ಭೇಟಿ ನೀಡಿದ್ದ ಪ್ರೇಮಿಗಳು, ಡ್ಯಾಮ್ ಎದುರು ಭಾಗದಲ್ಲಿ ಇರುವ ಸೇತುವೆಯ ಕಟ್ಟೆಯ ಮೇಲೆ ನಿಂತು ಸೆಲ್ಫಿ ಕ್ಲಿಕ್ಕಿಸಿದ್ದಾರೆ.

    ಈ ವೇಳೆ ಇಬ್ಬರೂ ಕಾಲುಜಾರಿ ಕಾಳಿ ನದಿಗೆ ಬಿದ್ದಿದ್ದು ತೇಲಿ ಹೋಗಿದ್ದಾರೆ. ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿ ಇವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಸದ್ಯ ಯುವತಿಯನ್ನು ಬೀದರ್ ಮೂಲದ ರಕ್ಷಿತಾ ಎಂದು ಗುರುತಿಸಲಾಗಿದ್ದು ಯುವಕನ ಬಗ್ಗೆ ತಿಳಿದು ಬರಬೇಕಿದೆ.

    ರಾಮನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.