Tag: ಕಾಳಿಂಗ ಸರ್ಪ

  • ಕೇರಳ: 6 ನಿಮಿಷದಲ್ಲಿ 16 ಅಡಿ ಉದ್ದದ ಕಾಳಿಂಗ ಸರ್ಪ ಸೆರೆಹಿಡಿದ ಮಹಿಳಾ ಅರಣ್ಯಾಧಿಕಾರಿ

    ಕೇರಳ: 6 ನಿಮಿಷದಲ್ಲಿ 16 ಅಡಿ ಉದ್ದದ ಕಾಳಿಂಗ ಸರ್ಪ ಸೆರೆಹಿಡಿದ ಮಹಿಳಾ ಅರಣ್ಯಾಧಿಕಾರಿ

    – ಹಾವು ಹಿಡಿಯುವುದರಲ್ಲಿ 8 ವರ್ಷಗಳ ಅನುಭವ ಹೊಂದಿರುವ ರೋಶ್ನಿ
    – ಈವರೆಗೆ 800ಕ್ಕೂ ಹೆಚ್ಚು ಹಾವುಗಳು ಸೆರೆ

    ತಿರುವನಂತಪುರಂ: ಮಹಿಳಾ ಅರಣ್ಯಾಧಿಕಾರಿಯೊಬ್ಬರು 16 ಅಡಿ ಉದ್ದದ ಕಾಳಿಂಗ ಸರ್ಪವನ್ನು 6 ನಿಮಿಷದಲ್ಲಿ ಸೆರೆ ಹಿಡಿದಿರುವ ರೋಚಕ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಹೌದು, ಜು.6ರಂದು ಪರುತಿಪಲ್ಲಿ ಅರಣ್ಯ ಶ್ರೇಣಿಯ ಬೀಟ್ ಅರಣ್ಯ ಅಧಿಕಾರಿ ರೋಶ್ನಿ, ತಿರುವನಂತಪುರದ (Thiruvananthapuram) ಮೂಡಿಲ್ ಪ್ರದೇಶದಲ್ಲಿ ಕಾಳಿಂಗ ಸರ್ಪವನ್ನು ಸೆರೆಹಿಡಿದ್ದಾರೆ. ಈ ವೇಳೆ 20 ಕೆಜಿಯ ಕಾಳಿಂಗ ಸರ್ಪವು 3 ಬಾರಿ ಕಚ್ಚಲು ಪ್ರಯತ್ನಿಸಿರುವುದು ವೈರಲ್ ವಿಡಿಯೋದಲ್ಲಿ ಕಂಡಿದೆ.ಇದನ್ನೂ ಓದಿ: ಏಕಾಏಕಿ ಕಾಣಿಸಿಕೊಂಡ ಎದೆನೋವು – ಚಿಕಿತ್ಸೆ ಸಿಗದೆ ನರಳಾಡಿ ಪ್ರಾಣಬಿಟ್ಟ ವ್ಯಕ್ತಿ

    ಮೊದಲಿಗೆ ಕಟ್ಟಿಗೆಗೆ ಒಂದು ಚೀಲ ಕಟ್ಟಿ ಅದರೊಳಗೆ ಹಾವು ಒಳನುಸುಳುವಂತೆ ಮಾಡುತ್ತಾರೆ. ಬಳಿಕ ಹಾವಿನ ಬಾಲ ಹಿಡಿದು ಅದನ್ನು ನಿಧಾನವಾಗಿ ಚೀಲಕ್ಕೆ ತುಂಬುತ್ತಾರೆ. ನಂತರ ಹಾವನ್ನು ಸುರಕ್ಷಿತವಾಗಿ ಕಾಡಿಗೆ ಬಿಡಲಾಗಿದೆ.

    ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೇರಳದ ಕೆಲವು ಪ್ರದೇಶಗಳಲ್ಲಿ ಕಾಳಿಂಗ ಸರ್ಪಗಳು ಕಾಣಸಿಗುವುದು ಬಹುಅಪರೂಪ, ಆದರೆ ಮೊದಲ ಬಾರಿಗೆ ನಾನು ಕಾಳಿಂಗ ಸರ್ಪವನ್ನು ಸೆರೆಹಿಡಿದಿದ್ದೇನೆ. ಈವರೆಗೆ ನಾನು ವಿಷಕಾರಿ ಮತ್ತು ವಿಷಕಾರಿಯಲ್ಲದ 800ಕ್ಕೂ ಹೆಚ್ಚು ಹಾವುಗಳನ್ನು ಸೆರೆಹಿಡಿದಿದ್ದೇನೆ ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ಎಲ್ಲಾ ಶಾಲೆಗಳಲ್ಲಿ ಕಡ್ಡಾಯವಾಗಿ 6 ದಿನ ಮೊಟ್ಟೆ ವಿತರಿಸಬೇಕು: ಶಿಕ್ಷಣ ಇಲಾಖೆ ಆದೇಶ

  • ಕಾಳಿಂಗ ಸರ್ಪದೊಂದಿಗೆ ಕಾದಾಟ – ಮನೆ ಮಾಲೀಕರ ಜೀವ ಉಳಿಸಿ ಪ್ರಾಣ ಬಿಟ್ಟ ಶ್ವಾನ

    ಕಾಳಿಂಗ ಸರ್ಪದೊಂದಿಗೆ ಕಾದಾಟ – ಮನೆ ಮಾಲೀಕರ ಜೀವ ಉಳಿಸಿ ಪ್ರಾಣ ಬಿಟ್ಟ ಶ್ವಾನ

    ಹಾಸನ: ಮನೆ ಮಾಲೀಕರು ಹಾಗೂ ಕೆಲಸಗಾರರ ಜೀವ ಉಳಿಸಲು ತನ್ನ ಪ್ರಾಣವನ್ನೇ ಪಣಕಿಟ್ಟು ಶ್ವಾನವೊಂದು ಕಾಳಿಂಗ ಸರ್ಪವನ್ನು ಕೊಂದು, ಕೊನೆಯುಸಿರೆಳೆದಿರುವ ಮನಕಲುಕುವ ಘಟನೆ ಹಾಸನ (Hassan) ತಾಲೂಕಿನ ಕಟ್ಟಾಯ (Kattaya) ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ಶಮಂತ್ ಎಂಬುವವರು ತಮ್ಮ ತೋಟದಲ್ಲಿ ಪಿಟ್‌ಬುಲ್ ಹಾಗೂ ಡಾಬರ್‌ಮನ್ ಜಾತಿಯ ನಾಯಿಗಳನ್ನು ಸಾಕಿದ್ದರು. ತೋಟದಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದಾಗ ಬಿಳಿ ಬಣ್ಣದ ಸುಮಾರು ಹನ್ನೆರಡು ಅಡಿ ಉದ್ದದ ಕಾಳಿಂಗ ಸರ್ಪವೊಂದು ಮನೆಯ ಕಡೆಗೆ ಬಂದಿದೆ.ಇದನ್ನು ಓದಿ: ‘ಕಿಸ್ಸಿಕ್’ ಬೆಡಗಿಗೆ ಬೇಡಿಕೆ- ಬಹುಭಾಷೆಗಳಲ್ಲಿ ಶ್ರೀಲೀಲಾ ಬ್ಯುಸಿ

    ಮನೆಯ ಮುಂದೆ ಮಕ್ಕಳು ಆಟವಾಡುತ್ತಿದ್ದಾಗ ಬಂದ ಹಾವು ತೆಂಗಿನ ಗರಿಯ ಕೆಳಗೆ ಹೋಗಿದೆ. ಇದನ್ನು ಕಂಡ ಪಿಟ್‌ಬುಲ್ ಹಾಗೂ ಡಾಬರ್‌ಮನ್ ನಾಯಿಗಳು ಗರಿಯ ಕೆಳಗಿದ್ದ ಹಾವನ್ನು ಎಳೆದು ಅದರೊಂದಿಗೆ ಸೆಣಸಾಡಿದೆ.

    ಈ ವೇಳೆ ಪಿಟ್‌ಬುಲ್ ನಾಯಿಯ ಮುಖಕ್ಕೆ ಹಾವು ಕಚ್ಚಿದ್ದು, ಆದರೂ ಹಾವಿನೊಂದಿಗೆ ಸುಮಾರು ಹದಿನೈದು ನಿಮಿಷಕ್ಕೂ ಹೆಚ್ಚು ಕಾಲ ಕಾದಾಟ ನಡೆಸಿದೆ. ಸರ್ಪವನ್ನು ಹತ್ತು ಪೀಸ್ ಮಾಡಿ ಕೊಂದು ತಾನು ಪ್ರಾಣಬಿಟ್ಟಿದೆ. ಶ್ವಾನಗಳು ಹಾಗೂ ಹಾವಿನ ನಡುವಿನ ಸೆಣಸಾಟ ಮೊಬೈಲ್‌ನಲ್ಲಿ ಸೆರೆಯಾಗಿದ್ದು, ಭೀಮಾ ಹೆಸರಿನ ಪಿಟ್‌ಬುಲ್ ಶ್ವಾನ ಹಲವೆಡೆ ನಡೆದಿದ್ದ ಡಾಗ್ ಶೋನಲ್ಲಿ ಭಾಗವಹಿಸಿ ಬಹುಮಾನಗಳನ್ನು ಪಡೆದಿತ್ತು. ನೆಚ್ಚಿನ ಸಾಕು ನಾಯಿ ಕಳೆದುಕೊಂಡ ಶಮಂತ್ ಹಾಗೂ ಕುಟುಂಬಸ್ಥರು ಕಣ್ಣೀರಿಟ್ಟಿದ್ದಾರೆ.ಇದನ್ನು ಓದಿ: ಬಾಹ್ಯಾಕಾಶದಲ್ಲಿ ವಿಶ್ವದಾಖಲೆ ನಿರ್ಮಿಸಿ ಭೂಮಿಗೆ ಮರಳಿದ ಸುನಿತಾ

     

  • ಅಡುಗೆ ಮನೆಯಲ್ಲಿ ಬುಸುಗುಟ್ಟಿದ 8 ಅಡಿ ಉದ್ದದ ಕಾಳಿಂಗ ಸರ್ಪ – ಮನೆಯವರು ಕಂಗಾಲು

    ಅಡುಗೆ ಮನೆಯಲ್ಲಿ ಬುಸುಗುಟ್ಟಿದ 8 ಅಡಿ ಉದ್ದದ ಕಾಳಿಂಗ ಸರ್ಪ – ಮನೆಯವರು ಕಂಗಾಲು

    ಶಿವಮೊಗ್ಗ: ಕಾಡಿನಿಂದ ನಾಡಿಗೆ ಬಂದ ಕಾಳಿಂಗ ಸರ್ಪ ಮನೆಯೊಂದರ ಅಡುಗೆ ಮನೆಯಲ್ಲಿ ಅವಿತುಕೊಂಡು ಮನೆಯವರು ಕಂಗಾಲು ಆಗುವಂತೆ ಮಾಡಿದ ಘಟನೆ ಜಿಲ್ಲೆಯ ಹೊಸನಗರ ತಾಲೂಕಿನ ಕೆಸರೆ ಸಮೀಪ ನಡೆದಿದೆ.

    ಕೆಸರೆ ಸಮೀಪದ ಕೂಡ್ಲುಕೊಪ್ಪ ಮಂಜಪ್ಪ ಎಂಬುವವರ ಮನೆಯಲ್ಲಿ ಈ ಘಟನೆ ನಡೆದಿದೆ. ಮುಂಜಾನೆ ಎದ್ದು ಎಂದಿನಂತೆ ಅಡುಗೆ ಮನೆಗೆ ಹೋದ ಮನೆಯವರಿಗೆ ಕಾಳಿಂಗ ಸರ್ಪ ನೋಡಿ ಒಮ್ಮೆಲೆ ಹೌಹಾರುವಂತಾಗಿತ್ತು. ಅಡುಗೆ ಮನೆಯ ಮೂಲೆಯಲ್ಲಿ ಸುಮಾರು 8 ಅಡಿ ಉದ್ದ ಕಾಳಿಂಗ ಸರ್ಪ ವಿರಾಜಮಾನವಾಗಿತ್ತು. ಆತಂಕಗೊಂಡ ಮನೆಯವರು ಉರಗ ತಜ್ಞ ಅಜಯಗಿರಿಗೆ ಮಾಹಿತಿ ನೀಡಿದರು. ಇದನ್ನೂ ಓದಿ: ಎರಡು ಬಸ್ ಮುಖಾಮುಖಿ ಡಿಕ್ಕಿ – 5 ಮಂದಿಗೆ ಗಂಭೀರ ಗಾಯ

    ಕೂಡಲೇ ಸ್ಥಳಕ್ಕೆ ಧಾವಿಸಿದ ಅಜಯಗಿರಿ ಕಾರ್ಯಾಚರಣೆ ನಡೆಸಿ, ಕಾಳಿಂಗ ಸರ್ಪವನ್ನು ಸುರಕ್ಷಿತವಾಗಿ ಸೆರೆಹಿಡಿದು ಅರಣ್ಯ ಇಲಾಖೆಯ ಸಹಕಾರದೊಂದಿಗೆ ಮರಳಿ ಕಾಡಿಗೆ ಬಿಟ್ಟರು. ಕಾಳಿಂಗ ಸರ್ಪ ಮನೆಯಿಂದ ತೆರವುಗೊಳ್ಳುತ್ತಿದ್ದಂತೆ ಮನೆಯವರು ನಿಟ್ಟುಸಿರು ಬಿಟ್ಟಿದ್ದಾರೆ. ಇದನ್ನೂ ಓದಿ: ಸಿಲಿಂಡರ್ ಸ್ಪೋಟ – ಬೆಂಗಳೂರಿನ ಮಸೀದಿ ಕಾಂಪ್ಲೆಕ್ಸ್‌ನಲ್ಲಿ ಬೆಂಕಿ

  • ಹೆಬ್ಬಾವನ್ನೇ ನುಂಗಿದ ಕಾಳಿಂಗ ಸರ್ಪ – ಬೆಳ್ತಂಗಡಿಯಲ್ಲೊಂದು ಅಪರೂಪದ ಅಚ್ಚರಿ

    ಹೆಬ್ಬಾವನ್ನೇ ನುಂಗಿದ ಕಾಳಿಂಗ ಸರ್ಪ – ಬೆಳ್ತಂಗಡಿಯಲ್ಲೊಂದು ಅಪರೂಪದ ಅಚ್ಚರಿ

    ಮಂಗಳೂರು: ಬೃಹತ್ ಗಾತ್ರದ ಹೆಬ್ಬಾವನ್ನೇ ಕಾಳಿಂಗ ಸರ್ಪವೊಂದು ನುಂಗಿದ ಅಪರೂಪದ ಹಾಗೂ ಅಚ್ಚರಿಯ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ನಡೆದಿದೆ.

    ಬೆಳ್ತಂಗಡಿಯ ಸೋಮಂತಡ್ಕ ಎಂಬಲ್ಲಿನ ಮನೆಯೊಂದರ ತೋಟದಲ್ಲಿ ಎರಡು ದಿನದಿಂದ ಸುಮಾರು 14 ಅಡಿ ಉದ್ದದ ಕಾಳಿಂಗ ಸರ್ಪವೊಂದು ಇದ್ದಲ್ಲೇ ಇತ್ತು. ಇದನ್ನು ಗಮನಿಸಿದ ಮನೆಯವರು ಬೆಳ್ತಂಗಡಿಯ ಉರಗ ತಜ್ಞ ಸ್ನೇಕ್ ಅಶೋಕ್‍ಗೆ ಮಾಹಿತಿ ನೀಡಿ ಕರೆಸಿಕೊಂಡಿದ್ದರು. ಈ ವೇಳೆ ಕಾಳಿಂಗ ಸರ್ಪವನ್ನು ಗಮನಿಸಿದ ಉರಗ ತಜ್ಞ ಅಶೋಕ್ ಕಾಳಿಂಗ ಸರ್ಪದ ಹೊಟ್ಟೆಯಲ್ಲಿ ಏನೋ ಇದೆ ಎಂದು ಅದನ್ನು ಹೊರ ತೆಗೆಯಲು ಯತ್ನಿಸಿದರು.

    ಈ ವೇಳೆ ಕಾಳಿಂಗ ಸರ್ಪದ ಹೊಟ್ಟೆಯಿಂದ ಬೃಹತ್ ಆಕಾರದ ಹೆಬ್ಬಾವನ್ನೇ ಹೊರತೆಗೆಯಲಾಗಿದೆ. ಎರಡು ದಿನದ ಮೊದಲೇ ಕಾಳಿಂಗ ಸರ್ಪ ಹೆಬ್ಬಾವನ್ನು ನುಂಗಿರುವುದರಿಂದ ಹೆಬ್ಬಾವು ಕಾಳಿಂಗ ಸರ್ಪದ ಹೊಟ್ಟೆಯೊಳಗೇ ಉಸಿರುಗಟ್ಟಿ ಮೃತಪಟ್ಟಿದೆ. ಇದೀಗ ಸ್ನೇಕ್ ಅಶೋಕ್ ಕಾಳಿಂಗ ಸರ್ಪವನ್ನು ರಕ್ಷಣೆ ಮಾಡಿ ಕಾಡಿಗೆ ಬಿಟ್ಟಿದ್ದಾರೆ.

    ಹೆಬ್ಬಾವು ಹಾವು, ನಾಯಿ, ಬೆಕ್ಕು, ಕೋಳಿ, ಮೊಲ ಸೇರಿದಂತೆ ಇತರೆ ಪ್ರಾಣಿ ಪಕ್ಷಿಗಳನ್ನು ನುಂಗುತ್ತಿತ್ತು. ಆದರೆ ಇಲ್ಲಿ ಮಾತ್ರ ಹೆಬ್ಬಾವನ್ನೇ ಕಾಳಿಂಗ ಸರ್ಪ ನುಂಗಿ ಅಚ್ಚರಿ ಮೂಡಿಸಿದೆ.

  • 12 ಅಡಿ ಉದ್ದದ ಕಾಳಿಂಗ ಸರ್ಪ ರಕ್ಷಣೆ

    12 ಅಡಿ ಉದ್ದದ ಕಾಳಿಂಗ ಸರ್ಪ ರಕ್ಷಣೆ

    ಶಿವಮೊಗ್ಗ: 12 ಅಡಿ ಉದ್ದದ ಕಾಳಿಂಗ ಸರ್ಪವನ್ನು ರಕ್ಷಣೆ ಮಾಡಿರುವ ಘಟನೆ ಶಿವಮೊಗ್ಗ ಹೊಸನಗರ ಪಟ್ಟಣದಲ್ಲಿ ನಡೆದಿದೆ.

    ಹೊಸನಗರದ ಸಾಗರ ರಸ್ತೆಯ ರಮಾನಂದ್ ಎಂಬವರ ಮನೆಯಲ್ಲಿ ಶುಕ್ರವಾರ ಮಧ್ಯಾಹ್ನ ಹಾವು ಪ್ರತ್ಯಕ್ಷವಾಗಿದ್ದು, ಮನೆಯ ಹೊರಗಡೆ ಇದ್ದ ನಾಯಿ ಹಾವನ್ನು ಕಂಡು ಬೊಗಳಲು ಆರಂಭಿಸಿದೆ. ಅಲ್ಲದೇ ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದ ಮಕ್ಕಳು ಸಹ ಹಾವನ್ನು ಕಂಡು ಹಾವು ಹಾವು ಎಂದು ಕೂಗಿದ್ದಾರೆ. ಮನೆಯವರು ತಕ್ಷಣ ಅರಣ್ಯ ಇಲಾಖೆಗೆ ದೂರವಾಣಿ ಮೂಲಕ ವಿಷಯ ತಿಳಿಸಿದ್ದಾರೆ.

    ಸ್ಥಳಕ್ಕೆ ಧಾವಿಸಿದ ಅರಣ್ಯ ಸಿಬ್ಬಂದಿ ಉರಗ ತಜ್ಞ ಸ್ನೇಕ್ ಕಿರಣ್ ನನ್ನು ಕರೆಯಿಸಿ ಸುಮಾರು 12 ಅಡಿ ಉದ್ದದ್ದ ಕಾಳಿಂಗ ಸರ್ಪವನ್ನು ಸುರಕ್ಷಿತವಾಗಿ ರಕ್ಷಿಸಿ ಅರಣ್ಯಕ್ಕೆ ಬಿಟ್ಟಿದ್ದಾರೆ. ನಾಗಪಂಚಮಿಯ ದಿನದಂದೇ ಕಾಳಿಂಗ ಸರ್ಪ ಪ್ರತ್ಯಕ್ಷವಾಗಿದ್ದು ಕಾಕತಾಳೀಯ ಎನಿಸಿದೆ. ನಾಗಪಂಚಮಿ ದಿನವೇ ಹಾವು ಪ್ರತ್ಯಕ್ಷವಾಗಿದ್ದಕ್ಕೆ ನಾಗರೀಕರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕುತೂಹಲದಿಂದ ಕಾಳಿಂಗ ಸರ್ಪವನ್ನು ವೀಕ್ಷಿಸಿದರು.

  • ಬೃಹತ್ ಕಾಳಿಂಗ ಸರ್ಪ ಸೆರೆ – ನಿಟ್ಟುಸಿರು ಬಿಟ್ಟ ಕೂಲಿ ಕಾರ್ಮಿಕರು

    ಬೃಹತ್ ಕಾಳಿಂಗ ಸರ್ಪ ಸೆರೆ – ನಿಟ್ಟುಸಿರು ಬಿಟ್ಟ ಕೂಲಿ ಕಾರ್ಮಿಕರು

    ಚಿಕ್ಕಮಗಳೂರು: ಹದಿನೈದು ದಿನಗಳಿಂದ ನಿರಂತರವಾಗಿ ಕೂಲಿ ಕಾರ್ಮಿಕರಿಗೆ ಕಾಣಿಸಿಕೊಳ್ಳುವ ಮೂಲಕ ಭಯ ಹುಟ್ಟಿಸಿದ್ದ ಕಾಳಿಂಗ ಸರ್ಪವನ್ನು ಕೊನೆಗೂ ಕಾಫಿನಾಡಿನಲ್ಲಿ ಸೆರೆ ಹಿಡಿಯಲಾಗಿದೆ.

    ಜಿಲ್ಲೆಯ ಶೃಂಗೇರಿ ತಾಲೂಕಿನ ತೆಕ್ಕೂರು ಗ್ರಾಮದ ಮಹೇಶ್ ಕಾಫಿ ತೋಟದಲ್ಲಿ ಕಾಳಿಂಗ ಸರ್ಪವೊಂದು ಹದಿನೈದು ದಿನಗಳಿಂದ ನಿರಂತರವಾಗಿ ಕಾಣಿಸಿಕೊಳ್ಳುತಿತ್ತು. ಕಾಳಿಂಗನನ್ನ ಕಂಡ ಕೂಲಿ ಕಾರ್ಮಿಕರು ಕೆಲಸ ಮಾಡುವುದಕ್ಕೂ ಹಿಂದೇಟು ಹಾಕುತ್ತಿದ್ದರು. ಹೀಗಾಗಿ ತೋಟದ ಮಾಲೀಕ ಮಹೇಶ್ ಸ್ನೇಕ್ ಅರ್ಜುನ್ ಅವರಿಗೆ ಫೋನ್ ಮಾಡಿ ವಿಚಾರ ತಿಳಿಸಿದ್ದಾರೆ.

    ವಿಷಯ ತಿಳಿದು ಸ್ಥಳಕ್ಕೆ ಬಂದ ಅರ್ಜುನ್ ಸುಮಾರು ಒಂದು ಗಂಟೆಯ ಕಾರ್ಯಚರಣೆ ನಡೆಸಿ ಕಾಳಿಂಗನನ್ನ ಸೆರೆ ಹಿಡಿದಿದ್ದಾರೆ. ಜೊತೆಗೆ ಸೆರೆಯಾದ ಕಾಳಿಂಗನನ್ನ ಕಂಡು ಕೂಲಿ ಕಾರ್ಮಿಕರು ನಿಟ್ಟುಸಿರು ಬಿಟ್ಟಿದ್ದಾರೆ. ಕಾಳಿಂಗನನ್ನ ಸೆರೆ ಹಿಡಿದ ಅರ್ಜುನ್ ಕಾಳಿಂಗನ ಪಕ್ಕದಲ್ಲೇ ಕೂತು ನೀರು ಕುಡಿಸಿದ್ದಾರೆ.

    ಕಾಳಿಂಗ ಸರ್ಪ ಬಾಯಿ ಬಿಡುವುದನ್ನು ನೋಡಿ ಕೂಲಿ ಕಾರ್ಮಿಕರು ಭಯಪಟ್ಟಿದ್ದಾರೆ. ಆದರೆ ಅರ್ಜುನ್ ಧೈರ್ಯಕ್ಕೆ ಕಾರ್ಮಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಂತರ ಸೆರೆ ಹಿಡಿದಿದ್ದ ಕಾಳಿಂಗನನ್ನ ಅರ್ಜುನ್ ಸ್ಥಳಿಯ ಅರಣ್ಯಕ್ಕೆ ಬಿಟ್ಟಿದ್ದಾರೆ.

  • ಕೊಟ್ಟಿಗೆಯಲ್ಲಿ ಅವಿತು ಕುಳಿತಿದ್ದ 12 ಅಡಿ ಉದ್ದದ ಕಾಳಿಂಗ ಸರ್ಪ ಸೆರೆ

    ಕೊಟ್ಟಿಗೆಯಲ್ಲಿ ಅವಿತು ಕುಳಿತಿದ್ದ 12 ಅಡಿ ಉದ್ದದ ಕಾಳಿಂಗ ಸರ್ಪ ಸೆರೆ

    ಚಿಕ್ಕಮಗಳೂರು: ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಕುದುರೆಗುಂಡಿ ಸಮೀಪದಲ್ಲಿ ಸುಮಾರು 12 ಅಡಿ ಉದ್ದದ ಬೃಹತ್ ಕಾಳಿಂಗ ಸರ್ಪವನ್ನ ಸೆರೆ ಹಿಡಿಯಲಾಗಿದೆ.

    ಕುದುರೆಗುಂಡಿ ಸಮೀಪದ ಚೇತನ್ ಜೈನ್ ಅವರ ಮನೆಯಲ್ಲಿ ಈ ಕಾಳಿಂಗ ಸರ್ಪವನ್ನ ಸೆರೆ ಹಿಡಿಯಲಾಗಿದೆ. ಮನೆಯ ಹಿಂಭಾಗದ ಕೊಟ್ಟಿಗೆಯಲ್ಲಿದ್ದ ಹಸುಗಳನ್ನ ಹೊರಗಡೆ ಕಟ್ಟಲು ಹೋದಾಗ ಸುಮಾರು 12 ಅಡಿ ಉದ್ದದ ಕಾಳಿಂಗ ಸರ್ಪವನ್ನ ನೋಡಿ ಮನೆಯವರು ಬೆಚ್ಚಿ ಬಿದ್ದಿದ್ದರು. ತಕ್ಷಣ ಚೇತನ್ ಉರಗ ತಜ್ಞ ಹರೀಂದ್ರಗೆ ಫೋನ್ ಮಾಡಿ ವಿಷಯ ತಿಳಿಸಿ ಸ್ಥಳಕ್ಕೆ ಬರುವಂತೆ ಹೇಳಿದ್ದರು.

    ಸ್ಥಳಕ್ಕೆ ಬಂದ ಹರೀಂದ್ರ ಕೊಟ್ಟಿಗೆಯಲ್ಲಿ ಅವಿತು ಕುಳಿತಿದ್ದ ಕಾಳಿಂಗ ಸರ್ಪವನ್ನ ಹುಡುಕಿದ್ದಾರೆ. ಕೊಟ್ಟಿಗೆಯ ತೊಲೆಯ ಮೇಲೆ ಕಾಳಿಂಗ ಸರ್ಪ ಮಲಗಿತ್ತು. ನಂತರ ಕೆಳಗಿಳಿದ ಕಾಳಿಂಗ ಕೊಟ್ಟಿಗೆಯಲ್ಲಿ ಜೋಡಿಸಿದ್ದ ಕೃಷಿ ಸಾಮಾನುಗಳ ಮಧ್ಯೆ ಅವಿತುಕೊಂಡಿತು. ಅರಣ್ಯ ಅಧಿಕಾರಿಗಳ ಸಹಕಾರದೊಂದಿಗೆ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿದ ಹರೀಂದ್ರ ಕಾಳಿಂಗ ಸರ್ಪವನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

    ಸದ್ಯ ಸೆರೆ ಹಿಡಿದ ಕಾಳಿಂಗ ಸರ್ಪವನ್ನ ಅರಣ್ಯ ಅಧಿಕಾರಿಗಳೊಂದಿಗೆ ತೆರಳಿ ಸ್ಥಳೀಯ ಅರಣ್ಯಕ್ಕೆ ಬಿಟ್ಟಿದ್ದಾರೆ. ಹಾವನ್ನು ಸೆರೆ ಹಿಡಿದ ಬಳಿಕ ಸ್ಥಳೀಯರಿಗೆ ಹಾವಿನ ಬಗ್ಗೆ ಮಾಹಿತಿ ನೀಡಿದ್ದು, ಕಾಳಿಂಗ ಸರ್ಪವನ್ನ ಸೆರೆ ಹಿಡಿದಿದ್ದನ್ನು ಕಂಡು ಸ್ಥಳೀಯರು ನಿಟ್ಟುಸಿರು ಬಿಟ್ಟಿದ್ದಾರೆ.

  • ಭಾರೀ ಗಾತ್ರದ ಕಾಳಿಂಗ ಸರ್ಪ ಸೆರೆ

    ಭಾರೀ ಗಾತ್ರದ ಕಾಳಿಂಗ ಸರ್ಪ ಸೆರೆ

    ಮಡಿಕೇರಿ: ಭಾರೀ ಗಾತ್ರದ ಕಾಳಿಂಗ ಸರ್ಪವೊಂದು ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ಬಾಳೆಲೆ ಸಮೀಪದ ಸುಳುಗೋಡು ಗ್ರಾಮದಲ್ಲಿ ಸೆರೆಯಾಗಿದೆ.

    ಗ್ರಾಮದ ಜಯ ಎಂಬವರ ತೋಟದ ತಾಳೆ ಮರದಲ್ಲಿ ಬಂದು 12 ಅಡಿ ಉದ್ದ 17 ಕೆ.ಜಿ ತೂಕದ ಭಾರೀ ಗಾತ್ರದ ಕಾಳಿಂಗ ಸರ್ಪ ಸೇರಿಕೊಂಡಿತ್ತು. ಈ ಬಗ್ಗೆ ಮಾಹಿತಿ ತಿಳಿದು ಉರಗ ತಜ್ಞ ಶರತ್ ಹಾಗೂ ಅವರ ತಂಡದವರು ಕಾರ್ಯಾಚರಣೆ ಮಾಡಿ ರಕ್ಷಣೆ ಮಾಡಿ ಕಾಡಿಗೆ ಬಿಟ್ಟಿದ್ದಾರೆ.

    ಭಾನುವಾರ ಸಂಜೆ ಕಾಳಿಂಗ ಸರ್ಪ ಮರದಲ್ಲಿರುವ ಬಗ್ಗೆ ಮಾಹಿತಿ ತಿಳಿದು ಶರತ್ ಮತ್ತು ಅವರ ತಂಡ ಸ್ಥಳಕ್ಕೆ ಹೋಗಿದ್ದಾರೆ. ನಂತರ ಸತತ ಒಂದು ಗಂಟೆ ಪ್ರಯತ್ನಪಟ್ಟು ಹಾವನ್ನು ಸೆರೆಹಿಡಿದಿದ್ದಾರೆ. ಸೆರೆ ಹಿಡಿದ ಅಪರೂಪದ ಕಾಳಿಂಗ ಸರ್ಪವನ್ನು ಇಂದು ಮಡಿಕೇರಿಯ ಗಾಂಧಿಮೈದಾನಕ್ಕೆ ತಂದು ಸಾರ್ವಜನಿಕವಾಗಿ ಪ್ರದರ್ಶನ ಮಾಡಲಾಗಿದೆ. ಶರತ್ ಹಾವುಗಳ ಬಗ್ಗೆ ಜಾಗೃತಿ ಮೂಡಿಸಿದ್ದಾರೆ.

    ಹಾವು, ಅವುಗಳ ಅಳಿವಿನ ಬಗ್ಗೆ ಜನರಿಗೆ ಇರುವ ಕೆಲ ತಪ್ಪು ತಿಳುವಳಿಕೆಗಳ ಬಗ್ಗೆ ಜಾಗೃತಿ ಮೂಡಿಸಿದ್ದಾರೆ. ಅಲ್ಲದೇ ಹಾವು ಕಂಡರೆ ಕೊಲ್ಲಬೇಡಿ, ನಮಗೆ ಮಾಹಿತಿ ನೀಡಿ. ನಾವು ಹಾವನ್ನು ರಕ್ಷಿಸಿ ತೆಗೆದುಕೊಂಡು ಹೋಗಿ ಜೀವ ಉಳಿಸುತ್ತೇವೆ ಎಂದು ಮನವಿ ಮಾಡಿಕೊಂಡಿದ್ದಾರೆ. ಕಳೆದ ಹಲವು ವರ್ಷಗಳಿಂದ ಹಾವುಗಳನ್ನ ರಕ್ಷಣೆಯ ಕೆಲಸಮಾಡುತ್ತಿರೋ ಶರತ್ ಈವರೆಗೆ 3 ಸಾವಿರಕ್ಕೂ ಹೆಚ್ಚು ಹಾವುಗಳನ್ನ ರಕ್ಷಿಸಿ ಕಾಡಿಗೆ ಮರಳಿಸಿದ್ದಾರೆ. ಇವುಗಳ ಪೈಕಿ 23ಕ್ಕೂ ಹೆಚ್ಚು ಕಾಳಿಂಗ ಸರ್ಪಗಳು ಸೇರಿವೆ.

    ಸಾಮಾನ್ಯವಾಗಿ ಶೀತ ಪ್ರದೇಶಗಳಲ್ಲಿ ವಾಸಮಾಡುವ ಕಾಳಿಂಗ ಸರ್ಪ ಆಕಶ್ಮಿಕವಾಗಿ ನೀರಿನ ಸಮೀಪ ಇರುವ ತಾಳೆ ಮರಕ್ಕೆ ಬಂದು ಸೇರಿಕೊಂಡಿತ್ತು. ಹಾವನ್ನು ಸುರಕ್ಷಿತವಾಗಿ ಸೆರೆಹಿಡಿದ ಶರತ್ ವಿರಾಜಪೇಟೆ ಸಮೀಪದ ಮಾಕುಟ್ಟ ಮೀಸಲು ಅರಣ್ಯಕ್ಕೆ ಬಿಟ್ಟಿದ್ದಾರೆ.

  • ಮಂಚದ ಕೆಳಗಿತ್ತು 10 ಅಡಿ ಉದ್ದದ ಕಾಳಿಂಗ ಸರ್ಪ

    ಮಂಚದ ಕೆಳಗಿತ್ತು 10 ಅಡಿ ಉದ್ದದ ಕಾಳಿಂಗ ಸರ್ಪ

    ಚಿಕ್ಕಮಗಳೂರು: ಆಹಾರ ಅರಸಿ ಬಂದ 10 ಅಡಿ ಉದ್ದದ ಕಾಳಿಂಗ ಸರ್ಪವೊಂದು ಮನೆಯೊಳಗೆ ಬಂದು ಮಂಚದ ಕೆಳಗೆ ಆಶ್ರಯ ಪಡೆದುಕೊಂಡಿದ್ದ ಘಟನೆ ಮೂಡಿಗೆರೆ ತಾಲೂಕಿನಲ್ಲಿ ನಡೆದಿದೆ.

    ಮೂಡಿಗೆರೆ ತಾಲೂಕಿನ ಸತ್ತಿಗನಹಳ್ಳಿಯ ಲಕ್ಷ್ಮಣ ಗೌಡ ಎಂಬವರ ಮನೆಯಲ್ಲಿ ಮಂಚದ ಅಡಿ ಕಾಳಿಂಗ ಸರ್ಪ ಅವಿತು ಕುಳಿತಿತ್ತು. ಕುಟುಂಬಸ್ಥರು ಮನೆಯ ಕಸ ಗುಡಿಸಲು ಮುಂದಾದಾಗ ಮಂಚದ ಕೆಳಗಿದ್ದ ಕಾಳಿಂಗನನ್ನ ಕಂಡು ಗಾಬರಿಗೊಂಡು, ಎಲ್ಲರೂ ಓಡಿ ಮನೆಯಿಂದ  ಹೊರ ಬಂದಿದ್ದರು. ಮನೆ ಮಾಲೀಕ ಲಕ್ಷ್ಮಣ ಗೌಡ ಅವರು ಕಾಳಿಂಗ ಸರ್ಪವನ್ನು ಕಂಡು ಉರಜ ತಜ್ಞ ಮಹ್ಮದ್ ಅವರಿಗೆ ಕರೆ ಮಾಡಿದರು. ಇದನ್ನೂ ಓದಿ: ಮೇಲೆ ಬರಲಾಗದೆ ಇಡೀ ರಾತ್ರಿ ಬಾವಿಯಲ್ಲೇ ಈಜಿದ ಹಾವು

    ತಕ್ಷಣವೇ ಸ್ಥಳಕ್ಕೆ ಬಂದ ಮಹ್ಮದ್ ಅವರು ಸುಮಾರು ಒಂದು ಗಂಟೆಗೂ ಹೆಚ್ಚು ಹೊತ್ತು ಕಾರ್ಯಚರಣೆ ನಡೆಸಿ ಹಾವನ್ನು ಸೆರೆ ಹಿಡಿದಿದ್ದಾರೆ. ಮಂಚದ ಕೆಳಗಿದ್ದ ಸರ್ಪವನ್ನು ಬೆದರಿಸಿದಾಗ ಅದು ಒಂದು ಬದಿಯಿಂದ ಮತ್ತೊಂದು ಬದಿಗೆ ಹೋಗುತ್ತಾ ಸುಮಾರು ಒಂದು ಗಂಟೆಗಳ ಕಾಲ ಆಟವಾಡಿಸಿದೆ. ಬಳಿಕ ಮಹ್ಮದ್ ವರು ಅರಣ್ಯ ಅಧಿಕಾರಿಗಳ ಸಹಕಾರದೊಂದಿಗೆ ಕಾಳಿಂಗ ಸರ್ಪನನ್ನು ಸೆರೆ ಹಿಡಿದು ಅಧಿಕಾರಿಗಳೊಂದಿಗೆ ಹೋಗಿ ಚಾರ್ಮಾಡಿ ಅರಣ್ಯಕ್ಕೆ ಬಿಟ್ಟಿದ್ದಾರೆ. ಕಾಳಿಂಗನನ್ನ ಸೆರೆ ಹಿಡಿದು ಹೊರತಂದಾಗ ಮನೆಯವರು ಸರ್ಪವನ್ನ ನೋಡಿ ಲಕ್ಷ್ಮಣ ಗೌಡ ಅವರ ಕುಟುಂಬಸ್ಥರು ನಿಟ್ಟುಸಿರು ಬಿಟ್ಟಿದ್ದರು.

  • 15 ಅಡಿ ಉದ್ದದ ಕಾಳಿಂಗ ಸರ್ಪ ರಕ್ಷಣೆ- ಅಚ್ಚರಿಯಿಂದ ನೋಡಿದ ಸ್ಥಳೀಯರು

    15 ಅಡಿ ಉದ್ದದ ಕಾಳಿಂಗ ಸರ್ಪ ರಕ್ಷಣೆ- ಅಚ್ಚರಿಯಿಂದ ನೋಡಿದ ಸ್ಥಳೀಯರು

    ಮಡಿಕೇರಿ: ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನಲ್ಲಿ ಸುಮಾರು 15 ಅಡಿ ಉದ್ದದ ಕಾಳಿಂಗ ಸರ್ಪವವೊಂದನ್ನು ಸೆರೆ ಹಿಡಿಯಲಾಗಿದೆ.

    ವಿರಾಜಪೇಟೆ ತಾಲೂಕಿನ ಬಿ.ಶೆಟ್ಟಿಗೇರಿ ಗ್ರಾಮದ ನಾಮೇರ ಬೋಸು ಎಂಬವರ ಮನೆಯ ಬಳಿ ಕಾಳಿಂಗ ಸರ್ಪ ಕಾಣಿಸಿಕೊಂಡಿತ್ತು. ಇದನ್ನು ಕಂಡು ಗಾಬರಿಗೊಂಡ ನಾಮೇರ ಅವರ ಕುಟುಂಬಸ್ಥರು ಹಾಗೂ ಸ್ಥಳೀಯರು ಉರಗ ತಜ್ಞ ಅಲೆಮಾಡ ನವೀನ್ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ತಕ್ಷಣವೇ ಸ್ಥಳಕ್ಕೆ ಬಂದ ನವೀನ್ ಅವರನ್ನು ಕಾಳಿಂಗ ಸರ್ಪವನ್ನು ಹಿಡಿದು, ಸುರಕ್ಷಿತವಾಗಿ ಅರಣ್ಯ ಪ್ರದೇಶದಲ್ಲಿ ಬಿಟ್ಟಿದ್ದಾರೆ. ಇದನ್ನೂ ಓದಿ: 1 ಗಂಟೆ ಕಾರ್ಯಚರಣೆ ನಡೆಸಿ 14 ಅಡಿ ಉದ್ದದ ಕಾಳಿಂಗ ಸರ್ಪ ರಕ್ಷಣೆ

    ಅರಣ್ಯ ಪ್ರದೇಶಕ್ಕೆ ಬಿಡುವುದಕ್ಕೂ ಮುನ್ನ ಗ್ರಾಮದ ಮೈದಾನದಲ್ಲಿ ಕೆಲ ಹೊತ್ತು ಕಾಳಿಂಗ ಸರ್ಪವನ್ನು ನೋಡಲು ಜನರಿಗೆ ಅವಕಾಶ ಮಾಡಿಕೊಟ್ಟಿದ್ದರು. ಈ ವೇಳೆ 15 ಅಡಿ ಉದ್ದ ಕಾಳಿಂಗ ಸರ್ಪವನ್ನು ಜನರು ಆತಂಕ ಹಾಗೂ ಅಚ್ಚರಿಯಿಂದ ವೀಕ್ಷಿಸಿದರು. ಹಾವನ್ನು ಸೆರೆ ಹಿಡಿದಿದ್ದರಿಂದ ಬಿ.ಶೆಟ್ಟಿಗೇರಿ ಗ್ರಾಮಸ್ಥರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಇದನ್ನೂ ಓದಿ: ಶೌಚಾಲಯದಲ್ಲಿ ಕಾಳಿಂಗ ಸರ್ಪ: ಕಕ್ಕಾಬಿಕ್ಕಿಯಾದ ಮನೆ ಮಾಲೀಕ