Tag: ಕಾಲೇಜ್ ಕ್ಯಾಂಪಸ್

  • ಮಗಳನ್ನು ಕಾಲೇಜಿಗೆ ಬಿಡಲು ಗಳಗಳನೇ ಅತ್ತ ತಂದೆ – ಹೃದಯಸ್ಪರ್ಶಿ ವೀಡಿಯೋ ವೈರಲ್

    ಮಗಳನ್ನು ಕಾಲೇಜಿಗೆ ಬಿಡಲು ಗಳಗಳನೇ ಅತ್ತ ತಂದೆ – ಹೃದಯಸ್ಪರ್ಶಿ ವೀಡಿಯೋ ವೈರಲ್

    ನವದೆಹಲಿ: ತಂದೆ-ಮಗಳ ಬಾಂಧವ್ಯ ಮಧುರವಾದದ್ದು, ಆಕೆ ಕೇಳಿದನ್ನೆಲ್ಲಾ ಕೊಡಿಸುವ, ಆಕೆಯ ಆಸೆ, ಕನಸುಗಳನ್ನು ಈಡೇರಿಸುವ, ಅವಳ ಭವಿಷ್ಯಕ್ಕಾಗಿ ಹಗಲಿರುಳು ದುಡಿಯುವ ಶ್ರಮ ಜೀವಿ ಎಂದರೆ ಅದು ಅಪ್ಪ. ಸದಾ ಅವಳ ಬೆನ್ನುಲುಬಾಗಿ ನಿಂತು, ಬೆಂಬಲ ಹಾಗೂ ಪ್ರೋತ್ಸಾಹ ನೀಡುವ ತಂದೆಯೇ ಮಗಳಿಗೆ ಮೊದಲ ಹೀರೋ. ತಂದೆ-ಮಗಳ ಬಾಂಧವ್ಯ ಗಟ್ಟಿಯಾದರೆ, ಅದು ಮಗಳ ಭವಿಷ್ಯಕ್ಕೆ ಭದ್ರವಾದ ಬುನಾದಿ ಹಾಕಿದಂತೆ. ಆಕೆಯ ಬದುಕಿನಲ್ಲಿ ಇದರಿಂದ ಹೆಚ್ಚುವರಿ ಲಾಭಗಳಾದರೆ, ತಂದೆಯೂ ಸವಿನೆನಪಿನ ಬುತ್ತಿ ಹೊತ್ತು ಸಾಗಬಹುದು. ಸದ್ಯ ತಂದೆ ಮಗಳ ಬಾಂಧವ್ಯ ಎಷ್ಟು ಗಾಢವಾಗಿರುತ್ತದೆ ಎಂಬುವುದಕ್ಕೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ವೀಡಿಯೋ ಮತ್ತೊಂದು ಸಾಕ್ಷಿ ಎಂದೇ ಹೇಳಬಹುದು.

    ಹೌದು, ಮೊದಲ ಬಾರಿಗೆ ಮಗಳನ್ನು ಕಾಲೇಜಿಗೆ ಬಿಡಲು ಹೋಗುವಾಗ ತಂದೆಯೊಬ್ಬ ದಾರಿಯುದ್ದಕ್ಕೂ ಗಳಗಳನೇ ಅಳುತ್ತಿರುವ ಭಾವನಾತ್ಮಕ ವೀಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ವೀಡಿಯೋವನ್ನು ಪ್ರೇಕ್ಷ ಅವರು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ಬಹಳ ದಿನದಿಂದ ನಾನು ಕನಸ್ಸು ಹೊಂದಿದ್ದ ಮಿರಾಂಡಾ ಹೌಸ್ ಕಾಲೇಜ್ (Miranda House College), ದೆಹಲಿ ವಿಶ್ವವಿದ್ಯಾಲಯಕ್ಕೆ (Delhi University) ನನ್ನನ್ನು ಬಿಡಲು ಪೋಷಕರು ಬಂದಿದ್ದರು. ಮೊದಲ ಬಾರಿಗೆ ಕಾಲೇಜಿಗೆ ಹೋಗುತ್ತಿದ್ದರಿಂದ ಕಾಲೇಜಿನ ಕ್ಯಾಂಪಸ್ ನೋಡಲು ನನ್ನ ಜೊತೆಯಲ್ಲೇ ಬರುತ್ತಿದ್ದ ವೇಳೆ, ಇದ್ದಕ್ಕಿದ್ದಂತೆ ನನ್ನ ತಂದೆಯ ಕಣ್ಣುಗಳಲ್ಲು ಕಣ್ಣೀರು ಬರುತ್ತಿರುವುದನ್ನು ಗಮನಿಸಿದೆ.

     

    View this post on Instagram

     

    A post shared by Preksha (@pre.xsha)

    ಅವರು ಸಂತಸದ ಅಲೆಯಲ್ಲಿ ಮುಗಿದ್ದರು. ಅವರ ಭಾವನೆಗಳು ಹೇಳ ತೀರದ್ದು. ನಾನು ಮಾಡಿದ ಎಲ್ಲಾ ತ್ಯಾಗ, ಶ್ರಮದಿಂದ ಇಂದು ಇಂದು ಕನಸು ನನಸಾಗುತ್ತಿದೆ. ಕೊನೆಗೂ ಪ್ರತಿಯೊಂದು ಇಂದಿಗೆ ಸಾರ್ಥಕವಾಯಿತು ಎಂಬುವುದು ಅವರ ಕಣ್ಣಿನಲ್ಲಿ ಕಾಣಿಸುತ್ತಿತ್ತು. ನಿಮ್ಮ ನಗು ಮುಖ ಮತ್ತು ಕಾಂತಿಯ ಕಣ್ಣುಗಳನ್ನು ನೋಡಲು ನಾನು ಏನು ಬೇಕಾದರೂ ಮಾಡುತ್ತೇನೆ ಅಂತ ಮಾತ್ರ ನಾನು ಹೇಳಬಲ್ಲೇ. ಧನ್ಯವಾದಗಳು ಅಪ್ಪ, ಅಪ್ಪ. ಐ ಲವ್ ಯೂ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಔಷಧ ಬೆರೆಸಿದ ಸೇಬು ನೀಡಿ ಮಕ್ಕಳ ಮೇಲೆ ರೇಪ್- ಮುರುಘಾಶ್ರೀ ವಿರುದ್ಧ 694 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ

    ಸದ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಎಂಟು ಮಿಲಿಯನ್‍ಗಿಂತಲೂ ಹೆಚ್ಚು ಮಂದಿ ವೀಕ್ಷಿಸಿದ್ದು, 958,000ಕ್ಕೂ ಹೆಚ್ಚು ಲೈಕ್ಸ್ ಬಂದಿದೆ. ಜೊತೆಗೆ ತಂದೆ, ಮಗಳ ಬಾಂಧವ್ಯಕ್ಕೆ ಮನಸೋತ ನೆಟ್ಟಿಗರಿಂದ ಕಾಮೆಂಟ್‍ಗಳ ಸುರಿಮಳೆಯೇ ಹರಿದುಬರುತ್ತಿದೆ. ಇದನ್ನೂ ಓದಿ: ಮೇಲ್ವರ್ಗದ ಬಡವರಿಗೆ ಶೇ.10 ಮೀಸಲಾತಿ ಅಳಿವು-ಉಳಿವು- ಇಂದು ಸುಪ್ರೀಂನಲ್ಲಿ ನಿರ್ಧಾರ

    Live Tv
    [brid partner=56869869 player=32851 video=960834 autoplay=true]

  • ಕಾಲೇಜ್ ಕ್ಯಾಂಪಸ್‍ನಲ್ಲಿ ನಮಾಜ್ ಮಾಡಿದ ಶಿಕ್ಷಕ-  ಕ್ರಮಕ್ಕೆ ಯುವ ಬಿಜೆಪಿ ಆಗ್ರಹ

    ಕಾಲೇಜ್ ಕ್ಯಾಂಪಸ್‍ನಲ್ಲಿ ನಮಾಜ್ ಮಾಡಿದ ಶಿಕ್ಷಕ- ಕ್ರಮಕ್ಕೆ ಯುವ ಬಿಜೆಪಿ ಆಗ್ರಹ

    ಲಕ್ನೋ: ಅಲಿಗಢದ ಕಾಲೇಜು ಕ್ಯಾಂಪಸ್‍ನಲ್ಲಿ ಶಿಕ್ಷಕರೊಬ್ಬರು ನಮಾಜ್ ಮಾಡುತ್ತಿರುವ ವೀಡಿಯೋ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಈ ಹಿನ್ನೆಲೆ ಯುವ ಬಿಜೆಪಿ ಮುಖಂಡರು ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

    ಅಲಿಗಢದ ಶ್ರೀವರ್ಷಿಣಿ ಕಾಲೇಜಿನಲ್ಲಿ ಶಿಕ್ಷಕರೊಬ್ಬರು ನಮಾಜ್ ಮಾಡುತ್ತಿರುವ ವೀಡಿಯೋ ಎಲ್ಲಕಡೆ ಹರಿದಾಡುತ್ತಿದೆ. ವೀಡಿಯೋ ನೋಡಿದ ಬಿಜೆಪಿ ಯುವ ಮೋರ್ಚಾ ಮುಖಂಡರು ಇದಕ್ಕೆ ಆಕ್ಷೀಪ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆ ಮೋರ್ಚಾದ ಮಹಾನಗರ ಘಟಕದ ಉಪಾಧ್ಯಕ್ಷ ಅಮಿತ್ ಗೋಸ್ವಾಮಿ ನೇತೃತ್ವದಲ್ಲಿ ಶುಕ್ರವಾರ ಮೇ 27 ರಂದು ಅಲಿಗಢದ ಶ್ರೀವರ್ಷಿಣಿ ಕಾಲೇಜಿಗೆ ಆಗಮಿಸಿ, ಈ ಕುರಿತು ವಿಚಾರಣೆ ನಡೆಸಿದ್ದಾರೆ. ಅದಕ್ಕೆ ಕಾಲೇಜು ಪ್ರಾಂಶುಪಾಲರು, ಸಮಿತಿ ರಚಿಸಿ ವಿಚಾರಣೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯರ ಮುಖ ಮಾತ್ರ ರಾಮನದ್ದು, ಬುದ್ಧಿ ರಾವಣನದು: ಕಟೀಲ್

    ಈ ಕುರಿತು ಮಾತನಾಡಿದ ಅಮಿತ್ ಗೋಸ್ವಾಮಿ, ಇದು ನಮಾಜ್ ಓದಲು ಧಾರ್ಮಿಕ ಸ್ಥಳವಲ್ಲ. ಪ್ರಾಧ್ಯಾಪಕರು ಮಕ್ಕಳಿಗೆ ತರಗತಿ ಮಾಡುವುದನ್ನು ಬಿಟ್ಟು, ಶಿಕ್ಷಣ ಸಂಸ್ಥೆಯಲ್ಲಿ ಪ್ರಾರ್ಥನೆ ಸಲ್ಲಿಸುವುದು ಹೇಗೆ? ಹಿಂದೂಗಳು, ಮುಸ್ಲಿಮರು, ಸಿಖ್ಖರು ಸೇರಿದಂತೆ ಎಲ್ಲ ಧರ್ಮೀಯರು ಶಿಕ್ಷಣ ಸಂಸ್ಥೆಗಳಿಗೆ ಬರುವುದರಿಂದ ಅವರನ್ನೂ ಸಮಾನವಾಗಿ ಪರಿಗಣಿಸಬೇಕು. ಅದಕ್ಕೆ ನಮಾಜ್ ಮಾಡಿದ ಪ್ರಾಧ್ಯಾಪಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಕ್ರೋಶ ವ್ಯಕ್ತಪಡಿಸದರು.

    ಪರಿಸ್ಥಿತಿಯ ಬಗ್ಗೆ ವಿವರಿಸಿದ ಕಾಲೇಜಿನ ಪ್ರಾಂಶುಪಾಲ ಪ್ರೊ.ಅನಿಲ್ ಕುಮಾರ್ ಗುಪ್ತಾ, ಈ ವಿಷಯಕ್ಕೆ ಸಂಬಂಧಿಸಿದಂತೆ, ನಾನು 28 ರಂದು ಬೆಳಗ್ಗೆ ಪ್ರಯಾಗ್‍ರಾಜ್‍ನಿಂದ ಹಿಂತಿರುಗಿದ್ದೇನೆ. ನಾನು ನನ್ನ ಹಾಲಿ ಪ್ರಾಂಶುಪಾಲರನ್ನು ಕರೆದು ವಿಷಯದ ಬಗ್ಗೆ ವಿಚಾರಿಸುತ್ತೇನೆ. ಈ ನಿಟ್ಟಿನಲ್ಲಿ ಸಮಿತಿಯನ್ನು ರಚಿಸಿ ಅದರ ವರದಿಯ ಆಧಾರದ ಮೇಲೆ ಮುಂದಿನ ಕ್ರಮ ಜರುಗಿಸಲಾಗುವುದು. ಮುಂದೆ ಇಂತಹ ಧಾರ್ಮಿಕ ವಿವಾದ ಸೃಷ್ಟಿಯಾಗುವುದಕ್ಕೆ ಅವಕಾಶ ನೀಡುವುದಿಲ್ಲ ಎಂದು ಭರವಸೆ ನೀಡುತ್ತೇನೆ ಎಂದರು. ಇದನ್ನೂ ಓದಿ:  29 ಹೂಡಿಕೆದಾರರಿಗೆ 1.82 ಕೋಟಿ ರೂ. ವಂಚಿಸಿದ ಮಹಿಳೆ ಅರೆಸ್ಟ್ 

  • ದೇಶ ವಿದೇಶಗಳಿಂದ ಬಂದ ಲಕ್ಷಾಂತರ ವಿದ್ಯಾರ್ಥಿಗಳಿಂದ ಕಾಲೇಜ್ ಕ್ಯಾಂಪಸ್‍ ನಲ್ಲೇ ದೀಪಾವಳಿ ಆಚರಣೆ

    ದೇಶ ವಿದೇಶಗಳಿಂದ ಬಂದ ಲಕ್ಷಾಂತರ ವಿದ್ಯಾರ್ಥಿಗಳಿಂದ ಕಾಲೇಜ್ ಕ್ಯಾಂಪಸ್‍ ನಲ್ಲೇ ದೀಪಾವಳಿ ಆಚರಣೆ

    ಮಂಗಳೂರು: ಜಿಲ್ಲೆಗೆ ದೇಶ ವಿದೇಶಗಳಿಂದ ಲಕ್ಷಾಂತರ ಮಂದಿ ವಿದ್ಯಾಭ್ಯಾಸಕ್ಕಾಗಿ ಬರುತ್ತಾರೆ. ಇವರೆಲ್ಲರಿಗೂ ದೀಪಾವಳಿಯ ಸಂಭ್ರಮ ಮನೆಯವರ ಜೊತೆ ಇರಲ್ಲ. ಅದಕ್ಕೆ ಶಿಕ್ಷಣ ಸಂಸ್ಥೆಗಳು ಕಾಲೇಜು ಕ್ಯಾಂಪಸ್‍ ನಲ್ಲೇ ದೀಪಾವಳಿ ಆಚರಣೆ ಮಾಡುತ್ತಾರೆ.

    ನೋಡಿ, ನಿಜವಾದ ದೀಪಾವಳಿ ಅಂದರೆ ಇದಲ್ವಾ. ಈ ದೃಶ್ಯ ಕಂಡುಬಂದಿದ್ದು ಮಂಗಳೂರಿನ ಕೊಟ್ಟಾರದ ಕರಾವಳಿ ಗ್ರೂಪ್ ಆಫ್ ಕಾಲೇಜ್‍ ನಲ್ಲಿ. ದೀಪಾವಳಿ ರಜೆಯಲ್ಲಿ ಊರಿಗೆ ಹೋಗಲಾಗದ ವಿದ್ಯಾರ್ಥಿಗಳು ವ್ಯಥೆ ಪಡಬಾರದೆಂದು ಕಾಲೇಜಿನ ಆವರಣದಲ್ಲೇ ಅದ್ಧೂರಿಯಾಗಿ ದೀಪಾವಳಿ ಆಚರಣೆ ಮಾಡಿದ್ರು. ದೀಪ ಹಚ್ಚೋದ್ರ ಜೊತೆ ಭರ್ಜರಿಯಾಗಿ ಡ್ಯಾನ್ಸ್ ಕೂಡ ಮಾಡಿದ್ರು.

    ಕೆಲವರು ಜಾನಪದ ಹಾಡಿಗೆ ಹೆಜ್ಜೆ ಹಾಕಿದ್ರೆ, ಇನ್ನೂ ಕೆಲವರು ಸಿನಿಮಾ ಹಾಡಿಗೆ ಮೈ-ಕೈ ಕುಣಿಸಿದ್ರು, ಡ್ರಾಮಾ ಮಾಡಿದ್ರು. ಜಾತಿ-ಮತದ ಬೇಧ ಮರೆತು ದೀಪ ಉರಿಸಿ, ಪಟಾಕಿ ಸಿಡಿಸಿ ಸಂಭ್ರಮಿಸಿದ್ರು. ಪರಿಸರ ಮಾಲಿನ್ಯ ಆಗಬಾರದು ಅಂತ ಸಣ್ಣ ಪ್ರಮಾಣದಲ್ಲಿ ಪಟಾಕಿ ಸಿಡಿಸಿ ಖುಷಿಪಟ್ರು.