Tag: ಕಾಲೇಜು ವಿದ್ಯಾರ್ಥಿ

  • ಕಾಲೇಜಿಗೆ ತೆರಳಿದ ಬಾಲಕ ಕಣ್ಮರೆ – ಫೋಟೋ ಹಿಡಿದು ಬೀದಿ ಬೀದಿಯಲ್ಲಿ ತಾಯಿ ಅಲೆದಾಟ!

    ಕಾಲೇಜಿಗೆ ತೆರಳಿದ ಬಾಲಕ ಕಣ್ಮರೆ – ಫೋಟೋ ಹಿಡಿದು ಬೀದಿ ಬೀದಿಯಲ್ಲಿ ತಾಯಿ ಅಲೆದಾಟ!

    ಮಡಿಕೇರಿ: ಆ ಬಾಲಕ ಸದಾ ಓದಿನಲ್ಲಿ ಮುಂದೆ ಇದ್ದ. ಎಲ್ಲಾ ಗೆಳೆಯರೊಂದಿಗೆ ಆಟ ಪಾಠ ಕ್ರೀಡೆ ಸೇರಿದಂತೆ ಎಲ್ಲದರಲ್ಲೂ ಚಟುವಟಿಕೆಗಳಿಂದ ಇರುತ್ತಿದ್ದ. ಅಂದು ದೀಪಾವಳಿ ಹಬ್ಬ ಇರುವುದರಿಂದ ಹಾಸ್ಟೆಲ್ ನಿಂದ ನೇರವಾಗಿ ತನ್ನ ಮನೆಗೆ ಬಂದು ಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡು ಹಬ್ಬ ರಜೆ ಮುಗಿಸಿಕೊಂಡು ಹೊರಟಿದ್ದ. ಇದೀಗ ನಿಗೂಢವಾಗಿ ಕಣ್ಮರೆಯಾಗಿದ್ದಾನೆ.

    ಇತ್ತ ಮಗ ಕಾಣೆಯಾಗಿ ಒಂದು ತಿಂಗಳು ಕಳೆದರೂ ಸುಳಿವು ಇಲ್ಲ ಎಂದು ಬಾಲಕನ ತಾಯಿ ತನ್ನ ಮಗನ ಫೋಟೋ ಇಡಿದುಕೊಂಡು ಊರು ಊರು, ಬೀದಿ ಬೀದಿ ಅಲೆಯುತ್ತಾ ಮಗನಿಗಾಗಿ ಹುಡುಕಾಟ ನಡೆಸುತ್ತಿದ್ದಾಳೆ.

    ಮಗನಿಗೆ ಗುಣಮಟ್ಟದ ಶಿಕ್ಷಣ ಕೊಡಿಸಬೇಕೆಂಬ ಮನದಾಸೆಯಿಂದ ಕೊಡಗಿನ ಗೋಣಿಕೋಪ್ಪದಿಂದ ದೂರದ ದಕ್ಷಿಣ ಕನ್ನಡ ಕಾಲೇಜೊಂದರಲ್ಲಿ ವಿದ್ಯಾಭ್ಯಾಸಕ್ಕಾಗಿ ಸೇರಿಸಿದ್ದಋು ತಾಯಿ. ಆತನ ಮುಂದಿನ ಭವಿಷ್ಯವನ್ನು ಉತ್ತಮಗೊಳಿಸಲು ಹತ್ತಾರು ಕನಸುಗಳನ್ನು ಕಂಡಿದ್ದಳು. ತನ್ನ ಒಬ್ಬನೇ ಮಗನನ್ನು ಜೋಪಾನವಾಗಿ ನೋಡಿಕೊಳ್ಳುತ್ತಿದ್ದ ತಾಯಿ ಪ್ರತಿನಿತ್ಯ ಮಗನೊಂದಿಗೆ ಮಾತನಾಡುತ್ತಾ ತನ್ನ ಜೀವನವನ್ನು ಕಳೆಯುತ್ತಿದ್ದಳು.

    ಕಳೆದ ದೀಪಾವಳಿ ರಜೆಯಂದು ಕಾಲೇಜಿನಿಂದ ಆಗಮಿಸಿದ್ದ. ಮಗ ತಾಯಿಯೊಂದಿಗೆ ದೀಪಾವಳಿ ಹಬ್ಬ ಖುಷಿ ಖುಷಿಯಿಂದಲೇ ಆಚರಿಸಿ ಸಂಭ್ರಮಿಸಿದ್ದ. ದೀಪಾವಳಿ ರಜೆ ಮುಗಿಯುತ್ತಿದ್ದಂತೆಯೇ ಎಂದಿನಂತೆ ಕಾಲೇಜಿನ ಹಾಸ್ಟೆಲ್‌ಗೆ ತೆರಳಲು ಮಗ ಅಣಿಯಾಗಿದ್ದ ಹೆತ್ತ ತಾಯಿ ತನ್ನ ಮಗನಿಗೆ ಬೇಕಾದ ಎಲ್ಲಾ ಅಗತ್ಯ ವಸ್ತುಗಳನ್ನು ಬ್ಯಾಗಿಗೆ ತುಂಬಿ ಮಗನೊಂದಿಗೆ ಬಸ್ ನಿಲ್ದಾಣಕ್ಕೆ ಬಂದಿ ಬಸ್‌ ಹತ್ತಿಸಿದ್ದಳು ಅಷ್ಟೇ.. ಮಗ ಬಸ್ಸಿನಲ್ಲಿ ಹೋದವನು 2-3 ದಿನ ಕಳೆದ್ರು ಹಾಸ್ಟೆಲ್‌ಗೂ ತಲುಪದೇ ಎಲ್ಲಿ ಹೋಗಿದನ್ನೋ ಗೋತ್ತಿಲ್ಲದೇ ಬಾಲಕ ನಿಗೂಢವಾಗಿ ಕಣ್ಮರೆಯಾಗಿದ್ದಾನೆ. ಹೀಗಾಗಿ ದೀಕ್ಷಿತ್ (17) ತಾಯಿ ಗೋಣಿಕೋಪ್ಪ ಪೊಲೀಸರಿಗೆ ದೂರು ನೀಡಿದ್ದಾರೆ. ಅಲ್ಲದೇ ಪ್ರತಿನಿತ್ಯ ಒಂದಲ್ಲ ಒಂದು ಊರಿಗೆ ತೆರಳಿ ಮಗನಿಗಾಗಿ ನಿತ್ಯ ಹುಡುಕಾಟ ನಡೆಸುತ್ತಿದ್ದಾರೆ.

    ಇನ್ನೂ ಕಾಲೇಜು ವಿದ್ಯಾರ್ಥಿ ದೀಕ್ಷಿತ್ ಕಾಣೆಯಾದ ಬಗ್ಗೆ ಕೊಡಗು ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಯುವಕನ ಶೋಧ ಕಾರ್ಯಕ್ಕೆ ಪೋಲಿಸರ 3 ವಿಶೇಷ ತಂಡಗಳನ್ನು ರಚಿಸಿದ್ದಾರೆ. ಪೊಲೀಸರ ತಂಡವು ಈಗಾಗಲೇ ಮಂಗಳೂರಿನ ಕಾಲೇಜು ಸೇರಿದಂತೆ ಸುತ್ತಮುತ್ತಲಿನ ಪ್ರದೇಶದ ಹೊಟೇಲ್, ಲಾಡ್ಜ್, ಬೀಚ್ ಸೇರಿದಂತೆ ಇನ್ನಿತರ ಸ್ಥಳಗಳಲ್ಲಿ ಶೋಧ ಕಾರ್ಯ ಮುಂದುವರೆಸಿದೆ.

  • ಕಾಲೇಜಿನ ಆರನೇ ಮಹಡಿಯಿಂದ ಜಿಗಿದು ಬಿಬಿಎ ವಿದ್ಯಾರ್ಥಿ ಸಾವು

    ಕಾಲೇಜಿನ ಆರನೇ ಮಹಡಿಯಿಂದ ಜಿಗಿದು ಬಿಬಿಎ ವಿದ್ಯಾರ್ಥಿ ಸಾವು

    ಆನೇಕಲ್: ಖಾಸಗಿ ಕಾಲೇಜಿನ (Private College) ಆರನೇ ಮಹಡಿಯಿಂದ ಬಿಬಿಎ (BBA) ವಿದ್ಯಾರ್ಥಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆನೇಕಲ್‌ನಲ್ಲಿ  (Anekal) ಮಂಗಳವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಹೊಂಗಸಂದ್ರದ ರಾಘವೇಂದ್ರ ಲೇಔಟ್ ನಿವಾಸಿ ವಿಘ್ನೇಶ್.ಕೆ (19) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ. ವಿಘ್ನೇಶ್ ಖಾಸಗಿ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಬಿಎ ವ್ಯಾಸಂಗ ಮಾಡುತ್ತಿದ್ದನು. ಮಂಗಳವಾರ ಕಾಲೇಜಿನ ಇಂಜಿನಿಯರಿಂಗ್ ವಿಭಾಗದ ಆರನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದನ್ನೂ ಓದಿ:ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕನಿಂದ ಬಾಂಬ್‌ ಬೆದರಿಕೆ – ಆಸಾಮಿ ಅಂದರ್‌!

    ಸದ್ಯ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಘಟನೆ ಕುರಿತು ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ:ಮಣಿಪುರದಲ್ಲಿ ಮತ್ತೆ ಗುಂಡಿನ ಸುರಿಮಳೆ – ಇಬ್ಬರು ಸಾವು, ಓರ್ವ BJP ಮುಖಂಡನಿಗೆ ಗಂಭೀರ ಗಾಯ

  • ವಿದ್ಯಾರ್ಥಿ ಮೇಲೆ ಆವಾಹನೆಯಾಯ್ತು ಪಂಜುರ್ಲಿ ದೈವ!

    ವಿದ್ಯಾರ್ಥಿ ಮೇಲೆ ಆವಾಹನೆಯಾಯ್ತು ಪಂಜುರ್ಲಿ ದೈವ!

    ಬೆಂಗಳೂರು: ಕಾಲೇಜು ವಾರ್ಷಿಕೋತ್ಸವ ಕಾರ್ಯಕ್ರಮದ ವೇಳೆ ವಿದ್ಯಾರ್ಥಿಯೋರ್ವನ (College Student) ಮೇಲೆ ಪಂಜುರ್ಲಿ ದೈವ (Panjurli Daiva) ಆವಾಹನೆಯಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ.

    ಕಾಲೇಜು ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿ (PUC Student) ಕಾಂತಾರ ಸಿನಿಮಾ ಹಾಡಿಗೆ ನೃತ್ಯ ಮಾಡುತ್ತಿದ್ದಾಗ ದೈವ ಆವಾಹನೆಯಾಗಿದೆ ಎನ್ನಲಾಗಿದೆ. ಇದನ್ನೂ ಓದಿ: ಮತ್ತೆ ಕರೆಂಟ್ ಶಾಕ್‍ಗೆ ಸಜ್ಜು- ಹೋಟೆಲ್ ಉದ್ಯಮದಿಂದ ವ್ಯಾಪಕ ಆಕ್ರೋಶ

    ಬೆಂಗಳೂರಿನ ಹೊಂಬೇಗೌಡ ಪಿಯು ಕಾಲೇಜು (Hombegowda PU College) ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ವಿಶಾಲ್ ಕಾಂತಾರ ಸಿನಿಮಾದ (Kantara Cinema) `ವರಾಹ ರೂಪಂ’ ಹಾಡಿಗೆ ನೃತ್ಯ ಮಾಡುತ್ತಿದ್ದನು. ಈ ವೇಳೆ ವಿದ್ಯಾರ್ಥಿ ಪಂಜುರ್ಲಿ ದೈವದ ವೇಷ ಧರಿಸಿದ್ದ. ಕೆಲ ನಿಮಿಷಗಳ ಬಳಿಕ ವೇದಿಕೆಯಿಂದ ಕೆಳಗೆ ಬಂದು ನರ್ತಿಸುತ್ತಿದ್ದಂತೆ ದೈವ ಆವಾಹನೆಯಾಗಿದೆ. ಬಳಿಕ ಸಹಪಾಠಿಗಳು ಹಾಗೂ ಶಿಕ್ಷಕರು ವಿದ್ಯಾರ್ಥಿಯನ್ನು ಸಮಾಧಾನಪಡಿಸಿದ್ದಾರೆ. ಕಾರ್ಯಕ್ರಮ ಆಯೋಜಕರು ತಕ್ಷಣವೇ ಹಾಡು ನಿಲ್ಲಿಸಿದ್ದಾರೆ.

    ಸದ್ಯ ಈ ದೃಶ್ಯಕಂಡು ವಿದ್ಯಾರ್ಥಿ ಪೋಷಕರು ಶಾಖ್ ಆಗಿದ್ದಾರೆ. ಇದನ್ನೂ ಓದಿ: ಪತಿಯನ್ನ ಅರೆಸ್ಟ್ ಮಾಡ್ತಾರೆ ಅಂತಾ ಹೆದರಿ ನವ ವಿವಾಹಿತೆ ಆತ್ಮಹತ್ಯೆ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k