Tag: ಕಾಲು

  • ಚಲಿಸುತ್ತಿದ್ದ ರೈಲು ಹತ್ತಲು ಹೋಗಿ ಎರಡೂ ಕಾಲು ಕಳೆದುಕೊಂಡ!

    ಚಲಿಸುತ್ತಿದ್ದ ರೈಲು ಹತ್ತಲು ಹೋಗಿ ಎರಡೂ ಕಾಲು ಕಳೆದುಕೊಂಡ!

    ಗದಗ: ಚಲಿಸುತ್ತಿದ್ದ ರೈಲು ಹತ್ತಲು ಹೋಗಿ ಯುವಕನೋರ್ವ ತನ್ನ ಎರಡೂ ಕಾಲುಗಳನ್ನ ಕಳೆದುಕೊಂಡಿರುವ ಘಟನೆ ಗದಗ ಜಿಲ್ಲೆ ರೋಣ ತಾಲೂಕಿನ ಹೊಳೆ ಆಲೂರು ರೈಲು ನಿಲ್ದಾಣದಲ್ಲಿ ನಡೆದಿದೆ.

    ರಾಜಸ್ಥಾನ ಮೂಲದ 30 ವರ್ಷದ ಸುಲ್ತಾನ್ ರಾಮ್ ಚಂಪಾ ಎರಡು ಕಾಲು ಕಳೆದುಕೊಂಡ ದುರ್ದೈವಿ. ಹೊಳೆ ಆಲೂರು ನಿಲ್ದಾಣದಲ್ಲಿ ರೈಲು ಇಳಿದು ವಾಟರ್ ಬಾಟಲ್ ತೆಗೆದುಕೊಂಡು ಹೋಗುವಾಗ ರೈಲು ಮುಂದಕ್ಕೆ ಚಲಿಸಿದೆ. ಈ ವೇಳೆ ಓಡಿ ಹೋಗಿ ಹತ್ತುವ ವೇಳೆ ಕಾಲು ಜಾರಿ ಕೆಳಗೆ ಬಿದ್ದು ಹಳಿಗೆ ಸಿಲುಕಿ ಕಾಲು ಕಳೆದುಕೊಂಡಿದ್ದಾರೆ.

    ತನ್ನ ಎರಡು ಕಾಲುಗಳು ಕಟ್ ಆದ ಬಳಿಕ ಸುಲ್ತಾನ್ ತಾನೇ ಕಾಲನ್ನು ಮರಳಿ ಜೊಡಿಸಿಕೊಳ್ಳಲು ಯತ್ನಿಸುತ್ತಿದ್ದ ದೃಶ್ಯ ಹೃದಯ ಕಲಕುವಂತಿತ್ತು. ಪ್ರತ್ಯಕ್ಷದರ್ಶಿಗಳು ಇದನ್ನ ಮೊಬೈಲ್‍ನಲ್ಲಿ ಸೆರೆಹಿಡಿದಿದ್ದಾರೆ.

    ಕೂಡಲೇ ಸ್ಥಳೀಯರು 108 ಅಂಬುಲೆನ್ಸ್ ಮೂಲಕ ಸುಲ್ತಾನ್‍ನನ್ನು ರೋಣ ಆಸ್ಪತ್ರೆಗೆ ಸಾಗಿಸಿದ್ರು. ಬಳಿಕ ವೈದ್ಯರ ಸಲಹೆಯಂತೆ ಗದಗ ಜಿಲ್ಲಾ ಆಸ್ಪತ್ರೆಗೆ ರವಾನಿಸಿದ್ದು, ಜಿಮ್ಸ್ ಆಸ್ಪತ್ರೆಯಲ್ಲಿ ಸುಲ್ತಾನ್ ಗೆ ಚಿಕಿತ್ಸೆ ನೀಡಲಾಗ್ತಿದೆ.

    ಈ ಬಗ್ಗೆ ಗದಗ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ರೈಲು ಹತ್ತಲು ಹೋಗಿ ಆಯತಪ್ಪಿ ಬಿದ್ದು ಮಹಿಳೆ ಸಾವು

    ರೈಲು ಹತ್ತಲು ಹೋಗಿ ಆಯತಪ್ಪಿ ಬಿದ್ದು ಮಹಿಳೆ ಸಾವು

    ಕೊಪ್ಪಳ: ಯಲಬುರ್ಗಾ ತಾಲೂಕಿನ ಭಾನಾಪುರ ರೈಲ್ವೆ ನಿಲ್ದಾಣದಲ್ಲಿ ರೈಲು ಹತ್ತಲು ಹೋಗಿ ಆಯಾತಪ್ಪಿ ಬಿದ್ದು ಆಸ್ಪತ್ರೆ ಸೇರಿದ್ದ ಮಹಿಳೆ ಮೃತಪಟ್ಟಿದ್ದಾರೆ.

    ಮೃತ ದುರ್ದೈವಿ ಮಹಿಳೆಯನ್ನು ಯಲಬುರ್ಗಾ ತಾಲೂಕಿನ ಸೋಂಪುರ ಗ್ರಾಮದ ನಿವಾಸಿಯಾದ ಕಲ್ಲಮ್ಮ(55) ಎಂದು ಗುರುತಿಸಲಾಗಿದೆ.

    ನಡೆದಿದ್ದೇನು?: ಕೂಲಿ ಕೆಲಸಕ್ಕಾಗಿ ಬೆಂಗಳೂರಿಗೆ ತೇರಳಲು ರೈಲು ಹತ್ತಿದ ವೇಳೆ ಕಲ್ಲಮ್ಮ ಆಯತಪ್ಪಿ ಬಿದ್ದಿದ್ದಾರೆ. ಪರಿಣಾಮ ಎರಡೂ ಕಾಲುಗಳಿಗೆ ಗಂಭೀರ ಗಾಯಳಾಗಿತ್ತು. ತಕ್ಷಣವೇ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಆದ್ರೆ ಎರಡೂ ಕಾಲುಗಳಲ್ಲಿ ತೀವ್ರ ರಕ್ತಸ್ರಾವವಾಗಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಕಲ್ಲಮ್ಮ ಮೃತಪಟ್ಟಿದ್ದಾರೆ.

    ಗದಗ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ವೀಡಿಯೋ: 3 ದಿನದ ಹಸುಗೂಸಿನ ಕಾಲು ಮುರಿದ ವಾರ್ಡ್ ಬಾಯ್

    ಡೆಹ್ರಾಡೂನ್: 3 ದಿನದ ಮಗುವಿನ ಅಳು ಕೇಳಿ ಕೋಪಗೊಂಡು ಅಟೆಂಡರ್‍ವೊಬ್ಬ ಮಗುವಿನ ಕಾಲನ್ನ ಮುರಿದಿರೋ ಘಟನೆ ಉತ್ತರಾಖಂಡ್‍ನ ರೂರ್ಕಿಯಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ.

    ಜನವರಿ 25ರಂದು ಜನಿಸಿದ್ದ ಮಗುವಿಗೆ ಉಸಿರಾಟದ ಸಮಸ್ಯೆ ಇದ್ದಿದ್ದರಿಂದ ಜನವರಿ 28ರಂದು ಮಗುವನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಗುವನ್ನ ಐಸಿಯುನಲ್ಲಿ ಇರಿಸಲಾಗಿತ್ತು. ಅಲ್ಲೇ ನಿದ್ದೆಗೆ ಜಾರಿದ್ದ ಅಟೆಂಡರ್‍ಗೆ ಮಗುವಿನ ಅಳು ಕಿರಿಕಿರಿ ಮಾಡಿದೆ. ಅಷ್ಟಕ್ಕೆ ಸಿಟ್ಟಿಗೆದ್ದ ಆತ ಹಾಸಿಗೆ ಬಳಿ ಬಂದು ಮಗುವಿನ ಕಾಲನ್ನು ಜೋರಾಗಿ ಎಳೆದು ಡೈಪರ್ ಬದಲಿಸಿದ್ದಾನೆ. ನಂತರ ಮಗು ಅಳುತ್ತಿದ್ದರೂ ಈತ ಮಾತ್ರ ಎಂದಿನಂತೆ ತನ್ನ ಕೆಲಸ ಮುಂದುವರೆಸಿದ್ದಾನೆ. ಈ ಎಲ್ಲಾ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಮಗುವನ್ನ ಡೆಹ್ರಾಡೂನ್ ಆಸ್ಪತ್ರೆಗೆ ದಾಖಲಿಸಿದಾಗ ಅದರ ಕಾಲಿನ ಮೂಳೆ ಮುರಿದಿದೆ ಎಂದು ವೈದ್ಯರು ಹೇಳಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಸದ್ಯಕ್ಕೆ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು ತನಿಖೆ ನಡೆಸುತ್ತಿದ್ದಾರೆ.

    ಅಟೆಂಡರ್ ಇಡೀ ರತ್ರಿ ನನ್ನ ಮಗುವಿಗೆ ಕಿರುಕುಳ ನೀಡಿದ್ದಾನೆ, ಕಾಲನ್ನೂ ಮುರಿದಿದ್ದಾನೆ ಎಂದು ಮಗುವಿನ ತಂದೆ ಅಳಲು ತೋಡಿಕೊಂಡಿದ್ದಾರೆ. ಆರೋಪಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ.