Tag: ಕಾಲು

  • ಕಲಬುರಗಿಯಲ್ಲಿ ಯುಗಾದಿಯಂದೇ ದುರಂತ – ರಥದ ಚಕ್ರಕ್ಕೆ ಸಿಲುಕಿ ವ್ಯಕ್ತಿ ಸಾವು

    ಕಲಬುರಗಿಯಲ್ಲಿ ಯುಗಾದಿಯಂದೇ ದುರಂತ – ರಥದ ಚಕ್ರಕ್ಕೆ ಸಿಲುಕಿ ವ್ಯಕ್ತಿ ಸಾವು

    ಕಲಬುರಗಿ/ಗದಗ: ಯುಗಾದಿ ಹಬ್ಬದಂದೇ ಕಲಬುರಗಿಯ ಶಿವಲಿಂಗೇಶ್ವರ ಜಾತ್ರೆಯ ರಥೋತ್ಸವದಲ್ಲಿ ಘನಘೋರ ದುರಂತ ಸಂಭವಿಸಿದೆ. ರಥದ ಚಕ್ರಕ್ಕೆ ಸಿಲುಕಿ ವ್ಯಕ್ತಿಯೊಬ್ಬರು ದಾರುಣವಾಗಿ ಸಾವನ್ನಪ್ಪಿದ್ದಾರೆ.

    ಇಲ್ಲಿನ ಶಹಬಾದ್ ತಾಲೂಕಿನ ದೇವನ ತೇಗನೂರು ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಕಿಶನ್ ಮೃತ ದುರ್ದೈವಿಯಾಗಿದ್ದು, ಇವರು ಶಹಬಾದ್ ತಾಲೂಕಿನ ತರಿ ತಾಂಡಾದ ನಿವಾಸಿ ಎಂದು ತಿಳಿದುಬಂದಿದೆ. ಯುಗಾದಿ ಹಬ್ಬದಂದು ಪ್ರತಿವರ್ಷ ಶಿವಲಿಂಗೇಶ್ವರ ರಥೋತ್ಸವ ನಡೆಯುತ್ತೆ. ಈ ಜಾತ್ರೆಯಲ್ಲಿ ಅವಘಡ ಸಂಭವಿಸಿದ್ದು, ಕಿಶನ್ ಮೃತಪಟ್ಟಿದ್ದಾರೆ.

    ಅತ್ತ ಗದಗ ಜಿಲ್ಲೆ ರೋಣ ತಾಲೂಕಿನ ಗಾಡಗೋಳಿ ಗ್ರಾಮದಲ್ಲಿ ರಥವನ್ನು ಎಳೆಯುವ ವೇಳೆ ನೂಕುನುಗ್ಗಲಿನಿಂದಾಗಿ ರಥದ ಗಾಲಿಗೆ ಭಕ್ತರೊಬ್ಬರು ಸಿಲುಕಿ ಕಾಲು ಕಳೆದುಕೊಂಡಿರುವ ಘಟನೆ ನಡೆದಿದೆ. ಗ್ರಾಮದ ಶ್ರೀ ಯಚ್ಚರೇಶ್ವರ ಜಾತ್ರೆಯ ರಥ ಎಳೆಯುವ ವೇಳೆ ಈ ದುರ್ಘಟನೆ ನಡೆದಿದೆ. ಸ್ಥಳೀಯರಾದ ಮುದಿಯಪ್ಪ ಬದಾಮಿ ಎಂಬ 48 ವರ್ಷದ ವ್ಯಕ್ತಿಯ ಎರಡೂ ಕಾಲಗಳ ಮೇಲೆ ರಥದ ಗಾಲಿ ಹರಿದಿದೆ. ಪರಿಣಾಮ ಮುದಿಯಪ್ಪ ಅವರ ಎರಡೂ ಕಾಲುಗಳು ನುಜ್ಜುಗುಜ್ಜಾಗಿದ್ದು, ಗಾಯಾಳುವನ್ನ ಹುಬ್ಬಳ್ಳಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ಗದಗ ಜಿಲ್ಲೆಯ ರೋಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಇದರಿಂದ ಭಕ್ತರು ಸಾಕಷ್ಟು ಆತಂಕಕ್ಕಿಡಾಗಿದ್ದರು.

  • ರಸ್ತೆ ದಾಟುತ್ತಿದ್ದ ವೇಳೆ ಮಹಿಳೆಯ ಕಾಲಿನ ಮೇಲೆ ಹರಿದ ಲಾರಿ

    ರಸ್ತೆ ದಾಟುತ್ತಿದ್ದ ವೇಳೆ ಮಹಿಳೆಯ ಕಾಲಿನ ಮೇಲೆ ಹರಿದ ಲಾರಿ

    ಬೆಂಗಳೂರು: ರಸ್ತೆ ದಾಟುತ್ತಿದ್ದ ವೇಳೆ ಲಾರಿಯೊಂದು ಪಾದಚಾರಿ ಮಹಿಳೆಯ ಕಾಲಿನ ಮೇಲೆ ಹರಿದಿರುವ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಡಾಬಸ್‍ಪೇಟೆಯಲ್ಲಿ ನಡೆದಿದೆ.

    ಅತೀ ವೇಗವಾಗಿ ಬಂದ ಮಹಾರಾಷ್ಟ್ರ ಮೂಲದ ಲಾರಿ ನೆಲಮಂಗಲ ತಾಲೂಕಿನ ಮಾದೇನಹಳ್ಳಿ ಗ್ರಾಮದ ಸುವರ್ಣಮ್ಮ (44) ಅವರ ಕಾಲಿನ ಮೇಲೆ ಹರಿದಿದೆ. ಇನ್ನೂ ಘಟನೆಯ ವೇಳೆ ಮಹಿಳೆ ಕೆಲಕಾಲ ತೀವ್ರ ರಕ್ತಸ್ತ್ರಾವದಿಂದ ನಡು ರಸ್ತೆಯಲ್ಲಿ ಸಹಾಯಕ್ಕಾಗಿ ಒದಾಡ್ಡಿದ್ದಾರೆ.

    ಈ ಘಟನೆ ವೇಳೆ ಸುತ್ತ ಮುತ್ತ ಇದ್ದ ಜನರು ಸಹಾಯಕ್ಕೆ ಬಾರದೇ ಮಾನವಿಯತೆ ಮರೆತವರಂತೆ ವರ್ತಿಸುತ್ತಿದ್ದಾರೆ. ತಡವಾಗಿ ಬಂದ 108 ಅಂಬುಲೆನ್ಸ್ ಮೂಲಕ ಸುವರ್ಣಮ್ಮ ಅವರನ್ನು ತುಮಕೂರು ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ.

    ನೆಲಮಂಗಲ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದ್ದು, ಲಾರಿ ಮತ್ತು ಚಾಲಕನನ್ನು ಪೊಲೀಸರು ವಶಕ್ಕೆ ಪಡೆದುದ್ದಾರೆ.

  • ಕಾಲಲ್ಲಿ ಗಾಯವಾದ್ರೆ ರಕ್ತದ ಬದಲು ತ್ರಾಮದ ಮೊಳೆಗಳು ಹೊರಬಂದ್ವು- ಚಾಮರಾಜನಗರದಲ್ಲೊಂದು ಅಚ್ಚರಿ!

    ಕಾಲಲ್ಲಿ ಗಾಯವಾದ್ರೆ ರಕ್ತದ ಬದಲು ತ್ರಾಮದ ಮೊಳೆಗಳು ಹೊರಬಂದ್ವು- ಚಾಮರಾಜನಗರದಲ್ಲೊಂದು ಅಚ್ಚರಿ!

    ಚಾಮರಾಜನಗರ: ಕಾಲಿಗೆ ಗಾಯವಾದರೆ ರಕ್ತ ಬರುವುದನ್ನು ನೋಡಿದ್ದೀರ. ಆದರೆ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ದೊಡ್ಡತಪ್ಪೂರು ಗ್ರಾಮದಲ್ಲಿ ವ್ಯಕ್ತಿಯೊಬ್ಬರಿಗೆ ಕಾಲಿಗೆ ಗಾಯವಾಗಿದ್ದು, ತಾಮ್ರದ ಮೊಳೆಗಳು ಹೊರಬಂದಿವೆ.

    ಗ್ರಾಮದ ಮಾದಪ್ಪ ಎಂಬವರ ಕಾಲಿನಲ್ಲಿ ಗಾಯವಾದ ಜಾಗದಲ್ಲಿ ರಕ್ತದ ಬದಲು ತಾಮ್ರದ ಮೊಳೆಗಳು ಬರುತ್ತಿವೆ. ಕಳೆದ ಪೂರ್ಣಿಮೆಯಂದು ಜಮೀನಿನಿಂದ ಮನೆಗೆ ಬರುವ ವೇಳೆ ಮಾಟ ಮಾಡಿದ ಜಾಗದಲ್ಲಿ ಮಾದಪ್ಪ ಕಾಲಿಟ್ಟಿದ್ದಾರೆ. ಮಾದಪ್ಪ ಅವರಿಗೆ ಮಾಟಮಂತ್ರದ ಬಗ್ಗೆ ಹೆಚ್ಚು ನಂಬಿಕೆ ಇಲ್ಲದ ಕಾರಣ ಇದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿರಲಿಲ್ಲ. ಆದ್ರೆ ಒಂದು ದಿನದ ನಂತರ ಪಾದದಲ್ಲಿ ದೊಡ್ಡ ಗುಳ್ಳೆಯೊಂದು ಆಗಿದೆ.

    ಇದನ್ನು ಗುಣಪಡಿಸಿಕೊಳ್ಳಲು ವೈದ್ಯರ ಬಳಿ ಹೋದ ಸಂದರ್ಭದಲ್ಲಿ ಗುಳ್ಳೆಯನ್ನು ಒಡೆದು, ಔಷಧಿಯನ್ನು ನೀಡಿದ್ದಾರೆ. ಆದರೂ ಸಹ ಗಾಯ ಮಾತ್ರ ವಾಸಿಯಾಗಿರಲಿಲ್ಲ. ಮಂಗಳವಾರ ಅಮವಾಸ್ಯೆಯಾದ್ದರಿಂದ ಪತ್ನಿಯ ಒತ್ತಾಯಕ್ಕೆ ಮಣಿದು ಗುಂಡ್ಲುಪೇಟೆ ತಾಲೂಕಿನ ತವರೆಕಟ್ಟೆಯಲ್ಲಿರುವ ಮಹದೇಶ್ವರ ಸನ್ನಿಧಿಗೆ ಹೋಗಿದ್ದಾರೆ. ಅಲ್ಲಿನ ಅರ್ಚಕರು ಗಾಯದ ಮೇಲೆ ನಿಂಬೆ ರಸವನ್ನು ಬಿಟ್ಟ ಸಂದರ್ಭದಲ್ಲಿ ಎಲ್ಲರಿಗೂ ಆಶ್ಚರ್ಯವಾಗುವ ರೀತಿಯಲ್ಲಿ ಕಾಲಿನಿಂದ ಸುಮಾರು 30 ರಿಂದ 40 ತಾಮ್ರದ ಮೊಳೆಗಳು ಹೊರಬಂದಿವೆ.

  • ವಿಡಿಯೋ: ಸಮುದ್ರ ದಂಡೆಯ ಕಲ್ಲಿನ ಮೇಲೆ ಪೋಸು ನೀಡಲು ಹೋಗಿ ಕಾಲು ಮುರಿದುಕೊಂಡ ನವವಧು

    ವಿಡಿಯೋ: ಸಮುದ್ರ ದಂಡೆಯ ಕಲ್ಲಿನ ಮೇಲೆ ಪೋಸು ನೀಡಲು ಹೋಗಿ ಕಾಲು ಮುರಿದುಕೊಂಡ ನವವಧು

    ಕೇಪ್‍ಟೌನ್: ಸಾಮನ್ಯವಾಗಿ ನವದಂಪತಿ ತಮ್ಮ ಫೋಟೋಗಳು ಸುಂದರವಾಗಿ ಬರಬೇಕೆಂದು ಇಷ್ಟಪಡ್ತಾರೆ. ಮದುವೆಯ ನಂತರ ಸುಂದರ ಸ್ಥಳಗಳಿಗೆ ತೆರಳುವ ದಂಪತಿ ಫೋಟೋಗಳನ್ನು ವಿವಿಧ ಭಂಗಿಗಳಲ್ಲಿ, ಸುಂದರವಾದ ಸ್ಥಳಗಳಲ್ಲಿ ತೆಗೆದುಕೊಳ್ಳಲು ಇಚ್ಚಿಸುತ್ತಾರೆ. ಅದೇ ರೀತಿ ನವಜೋಡಿಯೊಂದು ಸಮುದ್ರ ದಂಡೆಯಲ್ಲಿನ ಕಲ್ಲುಗಳ ಮೇಲೆ ಫೋಟೋ ಕ್ಲಿಕ್ಕಿಸಿಕೊಳ್ಳಲು ಹೋಗಿ ನವ ವಧು ತನ್ನ ಕಾಲನ್ನೇ ಮುರಿದುಕೊಂಡಿದ್ದಾಳೆ.

    ಮರೆಲಿಜ್ (35) ಕಾಲು ಮುರಿದುಕೊಂಡ ನವವಧು. ಮರೆಲಿಜ್ ತನ್ನ ಪತಿ ರಿಯಾನ್ ಡ್ರೆಯರ್ ಜೊತೆ ಫೋಟೋ ತೆಗೆದುಕೊಳ್ಳುವಕ್ಕಾಗಿ ಹರ್ಮ್ಯಾನಸ್ ಬೀಚ್‍ನ ಸಮುದ್ರ ದಂಡೆಯಲ್ಲಿರುವ ಕಲ್ಲುಗಳ ಮೇಲೆ ಕುಳಿತಿದ್ದರು. ಇನ್ನೇನು ಫೋಟೋಗಾಗಿ ಮುಂದೆ ಪೋಸು ನೀಡುವಾಗ ಹಿಂದಿನಿಂದ ಬಂದ ದೊಡ್ಡ ಅಲೆ ಇಬ್ಬರನ್ನು ಕೆಳಗೆ ಬೀಳಿಸಿದೆ. ಅಲೆಯ ಹೊಡೆತದಿಂದ ಜಾರಿಬಿದ್ದ ಮರೆಲಿಜ್ ಎರಡು ಕಲ್ಲುಗಳ ಮಧ್ಯೆ ಸಿಲುಕಿಕೊಂಡಿದ್ದರಿಂದ ಮೊಳಕಾಲಿನ ಮೂಳೆ ಮುರಿತಕ್ಕೊಳಗಾಗಿದೆ.

    ಅಲೆಗಳು ಹಿಂದೆ ಸರಿದಾಗ ಮೆರಿಲಿಜ್ ಎಡಗಾಲು ಕಲ್ಲುಗಳ ಮಧ್ಯೆ ಸಿಲುಕಿರುವುದು ಕೂಡಲೇ ರಿಯಾನ್ ಕೂಗಿಕೊಂಡಿದ್ದಾರೆ. ಸ್ಥಳದಲ್ಲಿ ಫೋಟೋ ತೆಗೆಯುತ್ತಿದ್ದ ಮೆರೆಲಿಜ್ ಸಹೋದರಿ ಜೊತೆ ಸೇರಿಕೊಂಡು ರಿಯಾನ್ ತನ್ನ ಪತ್ನಿಯನ್ನು ರಕ್ಷಿಸಿದ್ದಾರೆ. ಫಿಸಿಯೋಥೆರಪಿ ಆಗಿರುವ ಮೆರೆಲಿಜ್ ನೋವಿನಲ್ಲಿದ್ದರೂ ತನ್ನ ಕಾಲಿನ ಮೂಳೆ ಮುರಿತವಾಗಿರುವುದು ಗೊತ್ತಾಗಿದೆ. ಕೂಡಲೇ ತನ್ನ ಕಾಲಿಗೆ ಆಧಾರ ಮಾಡಿಕೊಳ್ಳಲು ಎರಡು ಫ್ಲಿಪ್ ಫ್ಲಾಪ್ ಮಾಡಿಸಿಕೊಂಡಿದ್ದಾರೆ.

    ನಾವಿಬ್ಬರು ಫೋಟೋಗಾಗಿ ಸಮುದ್ರ ದಂಡೆಯಲ್ಲಿರುವ ಕಲ್ಲುಗಳ ಮೇಲೆ ಕುಳಿತುಕೊಳ್ಳಲು ಹೋದೆವು. ಅಲೆಗಳು ನಮ್ಮ ಸಮೀಪ ಬಂದಾಗ ಫೋಟೋ ಚೆನ್ನಾಗಿ ಬರುತ್ತದೆ ಎಂದು ಅಲ್ಲಿಯೇ ಕೂರುವಷ್ಟರಲ್ಲಿ ಒಂದು ಅಲೆ ಬಂದು ಹೋಯಿತು. ಹಿಂದೆ ಮತ್ತೊಂದು ಅಲೆ ಬರುತ್ತಿದ್ದನ್ನು ಕಂಡ ನಾವು ಕ್ಯಾಮೆರಾದತ್ತ ಮುಖ ಮಾಡಿದೆವು. ಆದ್ರೆ ನಾವಿಬ್ಬರೂ ಸರಿಯಾದ ಸ್ಥಳದಲ್ಲಿ ಕುಳಿತಿರಲಿಲ್ಲ ಎಂದು ರಿಯಾನ್ ಡ್ರೆಯರ್ ತಿಳಿಸಿದ್ದಾರೆ.

    ಕ್ಯಾಮೆರಾ ಅತ್ತ ನೋಡುತ್ತಿದ್ದಂತೆ ಹಿಂದಿನಿಂದ ಬಂದ ಅಲೆಯಲ್ಲಿ ನಾವಿಬ್ಬರು ಮುಳುಗಿದೆವು. ಅಲೆಯ ಹೊಡೆತಕ್ಕೆ ನಾವಿಬ್ಬರೂ ಜಾರಿ ಕೆಳಗೆ ಬಂದೆವು, ನನ್ನ ಕಾಲಿಗೆ ಸಣ್ಣ ಗಾಯಗಳಾದ್ರೆ, ಪತ್ನಿಯ ಎಡಗಾಲು ಎರಡು ಕಲ್ಲುಗಳ ಮಧ್ಯೆಯೇ ಸಿಲುಕಿಕೊಂಡಿತ್ತು. ಕೂಡಲೇ ಆಕೆಯನ್ನು ಮೇಲೆಕ್ಕೆತ್ತಿ ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಲಾಯಿತು ಅಂತಾ ರಿಯಾನ್ ಹೇಳಿದ್ದಾರೆ.

  • ಏಳನೇ ತರಗತಿ ಓದಿತ್ತಿರೋ ಪುಟ್ಟ ಬಾಲಕಿ ಕಾಲು ಆಪರೇಷನ್ ಗೆ ಬೇಕಿದೆ ಸಹಾಯ

    ಏಳನೇ ತರಗತಿ ಓದಿತ್ತಿರೋ ಪುಟ್ಟ ಬಾಲಕಿ ಕಾಲು ಆಪರೇಷನ್ ಗೆ ಬೇಕಿದೆ ಸಹಾಯ

    ವಿಜಯಪುರ: ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಮನೆಯನ್ನು ಬೆಳಗಬೇಕಿದ್ದ ಬಾಲಕಿ ಪೋಲೀಯೋದಿಂದ ನರಳುವಂತಾಗಿದೆ. ಇತ್ತ ಶಾಲೆಗೂ ಹೋಗಲು ಆಗದೆ, ಅತ್ತ ಎಲ್ಲರಂತೆ ಆಟವಾಡಲು ಆಗದಂತೆ ಬಾಲಕಿ ನೋವು ಅನುಭವಿಸುತ್ತಿದ್ದಾಳೆ. ಇನ್ನು ಮಗಳ ನೋವು ನೋಡಿಯು ಕೈಯಿಂದ ಏನು ಮಾಡಲು ಆಗದ ಕುಟುಂಬಸ್ಥರು ಪ್ರತಿನಿತ್ಯ ಕಣ್ಣಿರಿನಲ್ಲೆ ಕೈ ತೊಳೆಯುವಂತಾಗಿದೆ.

    ಹೌದು. ಲತ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಬಿಕೆ ಗ್ರಾಮದ ಪ್ರಕಾಶ್ ಮತ್ತು ಶ್ರೀದೇವಿ ದಂಪತಿಯ ಪುತ್ರಿ ಅಪೂರ್ವ ಇದೀಗ ಏಳನೇ ತರಗತಿ ಓದುತ್ತಿದ್ದಾಳೆ. ಅಪೂರ್ವ ಹುಟ್ಟಿದಾಗ ಚೆನ್ನಾಗಿಯೇ ಇದ್ದಳಂತೆ. ಆದ್ರೆ ಅಂಗನಾವಾಡಿಗೆ ಹೋಗುವಾಗ ಯಾವುದೋ ಒಂದು ಚುಚ್ಚು ಮದ್ದು ನೀಡಿದ್ದರ ಪರಿಣಾಮ ಆಕೆಯ ಎಡಗಾಲಿನಲ್ಲಿ ಒಂದು ಗಂಟಾಗಿದೆ. ಬಳಿಕ ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಿ ಕುಟುಂಬಸ್ಥರು ಸುಮ್ಮನಾಗಿದ್ದಾರೆ. ಆದ್ರೆ ಅಪೂರ್ವ 5 ನೇ ತರಗತಿಗೆ ಬರುವಷ್ಟರಲ್ಲಿ ಎಡಗಾಲಿನ ಗಂಟು ಹೆಚ್ಚಾಗಿ ಒಳಗಡೆಯೇ ಕೊಳೆಯಲು ಆರಂಭವಾಯಿತು. ಇದರಿಂದ ಆಕೆಗೆ ಕುಳಿತಲ್ಲಿಂದ ಏಳಲು, ನಿಂತ್ರೆ ಕೂರಲು ಸಾಧ್ಯವಿಲ್ಲದಂತಾಯಿತು.


    ಈ ವೇಳೆ ಕುಟುಂಬಸ್ಥರು ಹಲವೆಡೆ ಚಿಕಿತ್ಸೆ ಕೊಡಿಸಿದ್ರೂ ಯಾವುದೇ ಪ್ರಯೋಜನವಾಗಿಲ್ಲ. ತದನಂತರ ಮೀರಜ್ ನ ಪ್ರತಿಷ್ಠಿತ ವೈದ್ಯ ಜಿ.ಎಸ್.ಕುಲಕರ್ಣಿ ಅವರ ಹತ್ತಿರ ಅಪೂರ್ವಗೆ ಚಿಕಿತ್ಸೆ ಕೊಡಿಸಿ ಒಂದು ಆಪರೇಷನ್ ಮಾಡಿಸಿದ್ದಾರೆ. ಈ ಆಪರೇಷನ್ ಆದ 6 ತಿಂಗಳ ನಂತರ ಮರಳಿ ಬಂದು ಇನ್ನೊಂದು ಆಪರೇಷನ್ ಮಾಡಿಸಿ. ಹೀಗೆ ಮಾಡಿದ್ದಲ್ಲಿ ಮಾತ್ರ ಆಕೆಯ ಕಾಲು ಸರಿ ಹೋಗುತ್ತೆ. ಅಲ್ಲದೇ ನಡೆದಾಡಲು ಬರುತ್ತೆ ಅಂತಾ ಹೇಳಿದ್ದರು. ಆದ್ರೆ ಅಪೂರ್ವಳದ್ದು ಬಡ ಕುಟುಂಬವಾದುದರಿಂದ ಮೊದಲನೇ ಆಪರೇಷನ್ ಆಗಿ 7 ತಿಂಗಳು ಕಳೆದ್ರೂ ಹಣವಿಲ್ಲದ ಕಾರಣ ಮತ್ತೊಮ್ಮೆ ಆಪರೇಷನ್ ಮಾಡಿಸದೆ ಕುಟುಂಬಸ್ಥರು ಸುಮ್ಮನಾಗಿ ಬಿಟ್ಟಿದ್ದಾರೆ.

    ಮೊದಲನೆ ಆಪರೇಷನ್ ಗೆ 65 ಸಾವಿರ ಹಣವನ್ನು ಕುಟುಂಬಸ್ಥರು ಹಾಕಿದ್ದು, ಈಗ 2ನೇ ಆಪರೇಷನ್ ಗೆ ಮತ್ತೆ 65 ಸಾವಿರ ಹಣ ಬೇಕಾಗಿದೆ. ಇಷ್ಟೊಂದು ಹಣವಿಲ್ಲದ ಕಾರಣ ಆಪರೇಷನ್ ಮಾಡದೆ ಕುಟುಂಬಸ್ಥರು ಚಿಕಿತ್ಸೆಯ ಹಣಕ್ಕಾಗಿ ಅಲ್ಲಿಲ್ಲಿ ಪರದಾಡುತ್ತಿದ್ದಾರೆ. ಸದ್ಯ ಅಪೂರ್ವ ಕುಟುಂಬ ಸಹಾಯ ಹಸ್ತ ಚಾಚಿ ಪಬ್ಲಿಕ್ ಟಿವಿಯ ಮೊರೆ ಬಂದಿದೆ.

    https://www.youtube.com/watch?v=UxkfpFSgYPo

  • ವಿಡಿಯೋ: ಮೊಬೈಲ್ ನೋಡ್ತಾ ಲಿಫ್ಟ್ ಬಾಗಿಲಲ್ಲಿ ಮುಗ್ಗರಿಸಿ ಬಿದ್ದ ಮಹಿಳೆಯ ಕಾಲು ಕಟ್

    ವಿಡಿಯೋ: ಮೊಬೈಲ್ ನೋಡ್ತಾ ಲಿಫ್ಟ್ ಬಾಗಿಲಲ್ಲಿ ಮುಗ್ಗರಿಸಿ ಬಿದ್ದ ಮಹಿಳೆಯ ಕಾಲು ಕಟ್

    ಬೀಜಿಂಗ್: ಲಿಫ್ಟ್ ನೊಳಗೆ ಹೋಗುವಾಗ ಅಥವಾ ಹೊರಬರುವಾಗ ತುಂಬಾ ಹುಷಾರಾಗಿರಬೇಕು. ಸ್ವಲ್ಪ ಹೆಚ್ಚುಕಡಿಮೆಯಾದ್ರೂ ಅಪಾಯ ಕಟ್ಟಿಟ್ಟ ಬುತ್ತಿ. ಇದಕ್ಕೆ ಸಾಕ್ಷಿ ಚೀನಾದಲ್ಲಿ ನಡೆದಿರೋ ಈ ಘಟನೆ.

    ಮಹಿಳೆಯೊಬ್ಬರು ಮೊಬೈಲ್ ನೋಡುತ್ತಲೇ ಲಿಫ್ಟ್ ನೊಳಗೆ ಹೋಗಲು ಮುಂದಾಗಿದ್ದಾರೆ. ಈ ವೇಳೆ ಮುಗ್ಗರಿಸಿ ಕೆಳಗೆ ಬಿದ್ದಿದ್ದು, ಆಕೆಯ ಕಾಲು ಲಿಫ್ಟ್ ಬಾಗಿಲ ನಡುವೆ ಸಿಲುಕಿಕೊಂಡಿದೆ. ಆದ್ರೆ ಇದ್ದಕ್ಕಿದ್ದಂತೆ ಲಿಫ್ಟ್ ಮೇಲೆ ಹೋಗಲು ಶುರು ಮಾಡಿದೆ.

    ಸುಮಾರು ಮೂರು ಮಹಡಿಗಳಷ್ಟು ಮೇಲೆ ಹೋದ ಲಿಫ್ಟ್ ನಂತರವಷ್ಟೇ ನಿಂತಿದೆ. ಈ ವೇಳೆ ಮಹಿಳೆ ನೆಲದ ಮೇಲೆಯೇ ಬಿದ್ದು, ಸಹಾಯಕ್ಕಾಗಿ ಕಾಯುತ್ತಿರೋದನ್ನ ವಿಡಿಯೋದಲ್ಲಿ ಕಾಣಬಹುದು. ಆಕೆ ತನ್ನ ಕಾಲನ್ನ ಎಳೆದುಕೊಳ್ಳಲು ಯತ್ನಿಸಿದ್ದು, ಬಲಗಾಲಿನ ಕೆಳಭಾಗ ಕಟ್ ಆಗಿರೋದು ಕಾಣುತ್ತದೆ.

    2017ರ ಜೂನ್ 21ರಂದು ಈ ಘಟನೆ ನಡೆದಿದ್ದರೂ ಇತ್ತೀಚೆಗಷ್ಟೇ ಇದರ ವಿಡಿಯೋ ಬಿಡುಗಡೆಯಾಗಿದೆ. ಶಾಂಘೈನ ಝೋಂಗ್ಶಾನ್ ವೆಸ್ಟ್ ರೋಡ್‍ನ ಕೋಂಚ್ ಕಟ್ಟಡದಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಈ ಅಪಘಾತದ ನಂತರ ಮಹಿಳೆ ಬದುಕಿದ್ದಾರಾ ಇಲ್ಲವಾ ಎಂಬ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ.

    ಮಹಿಳೆ ಮೊಬೈಲ್ ನೋಡುತ್ತಿದ್ದರಿಂದ ಲಿಫ್ಟ್ ಅದಾಗಲೇ ಸ್ಟಾರ್ಟ್ ಆಗಿ ಮೇಲೆ ಹೋಗಲು ಆರಂಭಿಸಿದ್ದನ್ನು ಆಕೆ ಗಮನಿಸಿರಲಿಲ್ಲ ಎಂದು ಇಲ್ಲಿನ ಪತ್ರಿಕೆಯೊಂದು ವರದಿ ಮಾಡಿದೆ. ಮಹಿಳೆಯ ಹಿಂದೆ ನಿಂತಿದ್ದ ಮತ್ತೊಬ್ಬ ಮಹಿಳೆ ಲಿಫ್ಟ್ ನೊಳಗೆ ಇನ್ನೂ ಬಂದಿರಲಿಲ್ಲ. ಹೀಗಾಗಿ ಅದೃಷ್ಟವಶಾತ್ ಈ ಅವಘಡದಿಂದ ಆಕೆ ಪಾರಾಗಿದ್ದಾರೆ.

  • ರೈಲಿನ ಮುಂದೆ ಬಿದ್ದು ಯುವಕ ಆತ್ಮಹತ್ಯೆಗೆ ಯತ್ನ- 2 ಕಾಲುಗಳು ಕಟ್

    ರೈಲಿನ ಮುಂದೆ ಬಿದ್ದು ಯುವಕ ಆತ್ಮಹತ್ಯೆಗೆ ಯತ್ನ- 2 ಕಾಲುಗಳು ಕಟ್

    ವಿಜಯಪುರ: ರೈಲಿನ ಮುಂದೆ ಬಿದ್ದು ಯುವಕನೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಘಟನೆ ವಿಜಯಪುರದ ರೈಲು ನಿಲ್ದಾಣದಲ್ಲಿ ನಡೆದಿದೆ.

    ಕೆ. ರಾಠೋಡ್(39) ಆತ್ಮಹತ್ಯೆಗೆ ಯತ್ನಿಸಿದ ಯುವಕ. ಕಾಲುಗಳ ಮೇಲೆ ರೈಲು ಹರಿದು ಯುವಕನ ಎರಡೂ ಕಾಲು ಕಟ್ ಆಗಿವೆ. ಅದೃಷ್ಟವಶಾತ್ ಜೀವಕ್ಕೆ ಯಾವುದೇ ಅಪಾಯ ಆಗಿಲ್ಲ. ರಾಠೋಡ್ ರೈಲ್ವೆ ಹಳಿಯ ಮೇಲೆ ಒದ್ದಾಡುತ್ತಿದ್ದುದನ್ನು ನೋಡಿ ತಕ್ಷಣ ಸಾರ್ವಜನಿಕರು ಹಾಗೂ ರೈಲು ಸಿಬ್ಬಂದಿ ಆಸ್ಪತ್ರೆಗೆ ಸಾಗಿಸಿದ್ದಾರೆ.

    ಆತ್ಮಹತ್ಯೆ ಯತ್ನಕ್ಕೆ ಕಾರಣ ಏನೆಂಬುದು ಸದ್ಯಕ್ಕೆ ತಿಳಿದುಬಂದಿಲ್ಲ. ಈ ಬಗ್ಗೆ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಚಲಿಸುತ್ತಿದ್ದ ರೈಲಿಗೆ ಸಿಲುಕಿ ಟೀ ವ್ಯಾಪಾರಿಯ ಬಲಗಾಲು ಕಟ್

    ಚಲಿಸುತ್ತಿದ್ದ ರೈಲಿಗೆ ಸಿಲುಕಿ ಟೀ ವ್ಯಾಪಾರಿಯ ಬಲಗಾಲು ಕಟ್

    ತುಮಕೂರು: ಚಲಿಸುತ್ತಿದ್ದ ರೈಲಿಗೆ ಸಿಲುಕಿ ರೈಲಿನಲ್ಲಿ ಚಹಾ ವ್ಯಾಪಾರ ಮಾಡ್ತಿದ್ದ ಯುವಕನ ಕಾಲು ತುಂಡಾದ ಘಟನೆ ತುಮಕೂರಿನ ತಿಪಟೂರು ತಾಲೂಕಿನ ಹೊನ್ನವಳ್ಳಿ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.

    ಕಾಲು ಕಳೆದುಕೊಂಡ ಯುವಕ 20 ವರ್ಷದ ನರಸಿಂಹ ಎಂದು ತಿಳಿದುಬಂದಿದೆ. ಹುಬ್ಬಳಿಯಿಂದ ಬೆಂಗಳೂರಿಗೆ ಹೋಗ್ತಿದ್ದ ಮಹಾಲಕ್ಷ್ಮಿ ರೈಲಿಗೆ ಸಿಲುಕಿದ ಪರಿಣಾಮ ನರಸಿಂಹ ಅವರ ಬಲಗಾಲು ಮೊಣಕಾಲಿನವರೆಗೆ ಸಂಪೂರ್ಣ ತುಂಡಾಗಿದೆ. ಎಡಗಾಲು ಕೂಡ ಗಾಯಗೊಂಡಿದೆ.

    ಗಾಯಾಳು ನರಸಿಂಹರನ್ನು ತಕ್ಷಣ ಸ್ಥಳೀಯ ಆಸ್ಪತ್ರೆಗೆ ಕೊಂಡೊಯ್ದು ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ನಿಮ್ಹಾನ್ಸ್ ಗೆ ರವಾನಿಸಲಾಗಿದೆ.

  • ಬೇರ್ಪಟ್ಟಿದ್ದ 2 ಕಾಲುಗಳ ಮರು ಜೋಡಣೆ – ಮಂಗ್ಳೂರಿನ ಎಜೆ ಆಸ್ಪತ್ರೆ ವೈದ್ಯರಿಂದ ದೇಶದಲ್ಲೇ ಮೊದಲ ಶಸ್ತ್ರಚಿಕಿತ್ಸೆ ಯಶಸ್ವಿ

    ಬೇರ್ಪಟ್ಟಿದ್ದ 2 ಕಾಲುಗಳ ಮರು ಜೋಡಣೆ – ಮಂಗ್ಳೂರಿನ ಎಜೆ ಆಸ್ಪತ್ರೆ ವೈದ್ಯರಿಂದ ದೇಶದಲ್ಲೇ ಮೊದಲ ಶಸ್ತ್ರಚಿಕಿತ್ಸೆ ಯಶಸ್ವಿ

    ಮಂಗಳೂರು: ಭೀಕರ ರೈಲ್ವೇ ಅಪಘಾತದಲ್ಲಿ ಎರಡೂವರೆ ವರ್ಷದ ಮಗುವಿನಿಂದ ಬೇರ್ಪಟ್ಟಿದ್ದ ಎರಡೂ ಕಾಲುಗಳನ್ನು ಮಂಗಳೂರಿನ ಎಜೆ ಆಸ್ಪತ್ರೆಯ ವೈದ್ಯರು ಮರುಜೋಡಿಸಿ ಪುನರ್ಜನ್ಮ ನೀಡಿದಿದ್ದಾರೆ.

    ಕಳೆದ ಎಪ್ರಿಲ್ 29 ರಂದು ಕೇರಳದ ಪಯ್ಯನೂರಿನಲ್ಲಿ ಭೀಕರ ರೈಲ್ವೇ ಅಪಘಾತ ನಡೆದಿದ್ದು, ಎರಡೂವರೆ ವರ್ಷದ ಮಗು ಮಹಮ್ಮದ್ ಸಾಲೆಯ ಕಾಲುಗಳೆರಡೂ ತುಂಡಾಗಿ ಬೇರ್ಪಟ್ಟಿತ್ತು. ಮಗುವಿನ ತಾಯಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದರು. ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದ ಮಗುವನ್ನು ರೈಲ್ವೇ ಪೊಲೀಸರು ಕೂಡಲೇ ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದರು.

    ಬಳಿಕ ಪಯ್ಯನೂರಿನ ಆಸ್ಪತ್ರೆಯಿಂದ ಮಂಗಳೂರಿನ ಎಜೆ ಆಸ್ಪತ್ರೆಗೆ ಮಗುವಿನ ಜೊತೆಗೆ ಬೇರ್ಪಟ್ಟ ಎರಡೂ ಕಾಲುಗಳನ್ನೂ ಥರ್ಮಾಕೋಲ್ ನ ಐಸ್ ಬಾಕ್ಸ್ ನಲ್ಲಿ ಸಾಗಿಸಿದ್ದಾರೆ. ಎಜೆ ಆಸ್ಪತ್ರೆಯ ಪ್ಲಾಸ್ಟಿಕ್ ಸರ್ಜರಿ ಡೀನ್ ಡಾ.ದಿನೇಶ್ ಕದಂ ನೇತೃತ್ವದಲ್ಲಿ ತಜ್ಞ ವೈದ್ಯರ ತಂಡ ಸತತ 7 ಗಂಟೆಗಳ ಕಾಲ ಮಗುವಿನ ಕಾಲು ಜೋಡಣೆಯ ಮೈಕ್ರೋ ವ್ಯಾಸ್ಕ್ಯುಲರ್ ಪ್ಲಾಸ್ಟಿಕ್ ಸರ್ಜರಿ ಶಸ್ತ್ರ ಚಿಕಿತ್ಸೆ ನಡೆಸಿದ್ದು, ಇದೀಗ ಮಗುವಿನ ಕಾಲುಗಳ ಜೋಡಣೆಯಲ್ಲಿ ಯಶಸ್ವಿಯಾಗಿದ್ದಾರೆ.

    ಸಂಪೂರ್ಣವಾಗಿ ಬೇರ್ಪಟ್ಟ ಕಾಲುಗಳು ಮತ್ತು ಮಂಡಿ ಮೇಲ್ಭಾಗದಲ್ಲಿ ಕತ್ತರಿಸಿದ ಕಾಲಿನ ಮರು ಜೋಡಣೆ ಯಶಸ್ವಿಯಾಗಿ ನಡೆಸಿದ್ದಾರೆ. ಮೊದಲ ಬಾರಿಗೆ ದೇಶದಲ್ಲಿ ಈ ರೀತಿಯ ಶಸ್ತ್ರ ಚಿಕಿತ್ಸೆ ನಡೆದಿದೆ. ಶಸ್ತ್ರ ಚಿಕಿತ್ಸೆ ನಡೆದು ಏಳು ತಿಂಗಳು ಕಳೆದಿದ್ದು, ಸದ್ಯ ಮಗು ನಡೆಯಲು ಶಕ್ತವಾಗಿದೆ.

    ತಾಯಿಯನ್ನು ಕಳೆದುಕೊಂಡ ಮಗುವಿನ ಸಮಗ್ರ ಆರೈಕೆಯನ್ನು ಆಸ್ಪತ್ರೆಯ ನರ್ಸಿಂಗ್ ಸಿಬ್ಬಂದಿ ವಿಶೇಷವಾಗಿ ಕಾಳಜಿ ವಹಿಸಿ ಮಾಡಿದ್ದಾರೆ. ಮಗುವಿನ ಪೂರ್ವಾಪರವೂ ವಿಚಾರಿಸದೇ ಆಸ್ಪತ್ರೆಯಲ್ಲಿ ದಾಖಲಿಸಿ, ಸ್ವ ಮುತುವರ್ಜಿ ವಹಿಸಿ ಪುನರ್ಜನ್ಮ ನೀಡಿದ ವೈದ್ಯರ ಸೇವಾ ಮನೋಭಾವವಕ್ಕೆ ಜನರ ಮೆಚ್ಚುಗೆ ವ್ಯಕ್ತವಾಗಿದೆ.

     

  • ವಿಡಿಯೋ: ಶೂಟಿಂಗ್ ವೇಳೆ ಬಂಡೆಕಲ್ಲಿನ ಮೇಲೆ ಕಾಲುಜಾರಿ ಬಿದ್ದು ನಟಿಗೆ ಗಾಯ

    ವಿಡಿಯೋ: ಶೂಟಿಂಗ್ ವೇಳೆ ಬಂಡೆಕಲ್ಲಿನ ಮೇಲೆ ಕಾಲುಜಾರಿ ಬಿದ್ದು ನಟಿಗೆ ಗಾಯ

    ತಿರುವನಂತಪುರ: ಇಲ್ಲಿನ ಕೊಝಿಕೋಡ್ ನಲ್ಲಿ ಚಿತ್ರವೊಂದರ ಶೂಟಿಂಗ್ ವೇಳೆ ಬಂಡೆ ಕಲ್ಲಿನ ಮೇಲೆ ಬಿದ್ದು ನಟಿಯೊಬ್ಬರು ಗಾಯಗೊಂಡ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಸಿದ್ದಿಕ್ ಚೆಂಡಮಂಗಲ್ಲೂರ್ ಎಂಬವರ ನಿರ್ದೇಶನದ ಕುಂಜೀರಾಮಂತ ಕುಪ್ಪಯಂ ಚಿತ್ರದ ಡ್ಯಾನ್ಸ್ ವೇಳೆ ಈ ಅವಘಡ ಸಂಭವಿಸಿದೆ. ನಟಿ ಲಿಂಡಾ ಕುಮಾರ್ ಬಂಡೆ ಕಲ್ಲಿನ ಮೇಲೆ ಬಿದ್ದು ಕೈ ಹಾಗೂ ಕಾಲುಗಳಿಗೆ ಗಾಯಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

    ಡ್ಯಾನ್ಸ್ ಮಾಡುತ್ತಿದ್ದಂತೆಯೇ ನಟಿ ಏಕಾಏಕಿ ಬಂಡೆಕ್ಲಲಿನ ಮೇಲೆ ಬಿದ್ದಿದ್ದು, ಕೂಡಲೇ ಚಿತ್ರತಂಡ ಆಕೆಯನ್ನು ರಕ್ಷಿಸಿದ್ದಾರೆ. ಘಟನೆಯಿಂದ ನಟಿ ಕೈ ಹಾಗೂ ಕಾಲುಗಳಿಗೆ ಗಾಯಗಳಾಗಿವೆ. ಹೀಗಾಗಿ 10 ದಿನಗಳ ಕಾಲ ವಿಶ್ರಾಂತಿ ತೆಗೆದುಕೊಳ್ಳುವಂತೆ ನಟಿಗೆ ವೈದ್ಯರು ಸೂಚಿಸಿರುವುದಾಗಿ ವರದಿಯಾಗಿದೆ.

    ಮೊದಲು ತೆಲುಗು ನಟಿ ಕೀರ್ತಿ ಸುರೇಶ್ `ಸಾವಿತ್ರಿ’ ಚಿತ್ರದ ಶೂಟಿಂಗ್ ವೇಳೆ ಬಿದ್ದಿರುವುದಾಗಿ ಹೇಳಿ ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ವಿಚಾರ ತಿಳಿಯುತ್ತಿದ್ದಂತೆಯೇ ನಟಿ ಕೀರ್ತಿ ಸುರೇಶ್, ತನಗೇನೂ ಆಗಿಲ್ಲ. ನಾನು ಚೆನ್ನಾಗಿಯೇ ಇದ್ದೇನೆ. ಈ ವಿಡಿಯೋ ಹಾಗೂ ನನಗೆ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಹೀಗಾಗಿ ಈ ವಿಡಿಯೋದಲ್ಲಿರುವುದು ಕೀರ್ತಿ ಅಲ್ಲ. ಅವರು ತೆಲುಗು ಚಿತ್ರವೊಂದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.