Tag: ಕಾಲು ನೋವು

  • ಚುನಾವಣಾ ಸಂದರ್ಭದಲ್ಲಿ ದೇವೇಗೌಡರಿಗೆ ಸಂಕಷ್ಟ!

    ಚುನಾವಣಾ ಸಂದರ್ಭದಲ್ಲಿ ದೇವೇಗೌಡರಿಗೆ ಸಂಕಷ್ಟ!

    ಬೆಂಗಳೂರು: ಲೋಕಸಭಾ ಚುನಾವಣೆ ಸಂದರ್ಭದಲ್ಲೆಯೇ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರಿಗೆ ಸಂಕಷ್ಟ ಎದುರಾಗಿದ್ದು, ಕಾಲ ಮೇಲೆ ಬಿಸಿ ನೀರು ಬಿದ್ದ ಪರಿಣಾಮ ನಡೆಯದಾಗದ ಸ್ಥಿತಿಯಲ್ಲಿ  ಇದ್ದಾರೆ.

    ಲೋಕಸಮರಕ್ಕೆ ದೇವೇಗೌಡರು ತುಮಕೂರು ಕ್ಷೇತ್ರದಿಂದ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಪ್ರಚಾರದಲ್ಲಿ ತೊಡಗಬೇಕಾದ ದೇವೇಗೌಡರು ಕಾಲು ನೋವಿನಿಂದ ಆಸ್ಪತ್ರೆಯತ್ತ ಮುಖ ಮಾಡಿದ್ದಾರೆ.

    ಕಾಲು ಊರುವುದು ಸಹ ಕಷ್ಟವೆಂಬ ಸ್ಥಿತಿಯಲ್ಲಿ ಎಚ್‍ಡಿಡಿ ಇದ್ದಾರೆ. ಇತ್ತೀಚಿಗಷ್ಟೆ ದೇವೇಗೌಡರು ತಮ್ಮ ಬಲಗಾಲನ್ನು ಉಳುಕಿಸಿಕೊಂಡಿದ್ದರು. ಈಗ ಅದೇ ಕಾಲಿನ ಪಾದಕ್ಕೆ ಸಮಸ್ಯೆ ಉಂಟಾಗಿದೆ. ಸೋಮವಾರದಂದು ದೇವಸ್ಥಾನಕ್ಕೆ ಹೋಗುವಾಗ ಬರಿಗಾಲಿನಲ್ಲಿ ಹೋಗಿ ದೇವರಿಗೆ ಪೂಜೆ ಸಲ್ಲಿಸಿದ್ದರು. ಬಳಿಕ ನಾಮಪತ್ರ ಸಲ್ಲಿಕೆ ವೇಳೆಯು ಪಾದರಕ್ಷೆ ಹಾಕದೇ ಬರಿಗಾಲಿನಲ್ಲಿ ನಡೆದ ಪರಿಣಾಮ ಪಾದದಲ್ಲಿ ಗುಳ್ಳೆಗಳು ಆಗಿದ್ದವು. ಉರಿ ಬಿಸಿಲಿನ ಝಳಕ್ಕೆ ಕಾದಿದ್ದ ನೆಲದ ಮೇಲೆ ನಡೆದ ಪರಿಣಾಮ ಎಚ್‍ಡಿಡಿ ಅವರ ಪಾದದಲ್ಲಿ ಎರಡು ಮೂರು ಗುಳ್ಳೆ ಎದ್ದಿದ್ದು, ನಡೆಯಲಾಗದ ಸ್ಥಿತಿಯಲ್ಲಿ ದೇವೇಗೌಡರು ಇದ್ದಾರೆ.

    ಇದೇ ಸಂದರ್ಭದಲ್ಲಿ ಮೊದಲೇ ಗುಳ್ಳೆಗಳು ಆಗಿ ನೋವು ಕಾಣಿಸಿಕೊಂಡಿರುವ ಪಾದಕ್ಕೆ ಆಕಸ್ಮಿಕವಾಗಿ ಬಿಸಿ ನೀರು ಬಿದ್ದು ಮತ್ತಷ್ಟು ನೋವಾಗಿದೆ. ಇಂದು ಮನೆಯಲ್ಲಿ ಕಾಲು ತೊಳೆಯುವಾಗ ಈ ಅಚಾತುರ್ಯ ಸಂಭವಿಸಿದೆ. ತಣ್ಣೀರಿನ ಬದಲು ಬಿಸಿನೀರಿನ ಟ್ಯಾಪ್ ಓಪನ್ ಮಾಡಿದ ಪರಿಣಾಮ ಪಾದಕ್ಕೆ ಬಿಸಿನೀರು ಬಿದ್ದು ಗುಳ್ಳೆ ಒಡೆದಿದೆ. ಸದ್ಯ ವೈದ್ಯರು ಔಷಧ ನೀಡಿದ್ದಾರೆ, ಆದರೇ ಕಳೆದ ಎರಡು ದಿನಗಳಿಂದ ಕಾಲು ನೋವಿನಿಂದ ಬಳಲುತ್ತಿದ್ದ ದೇವೇಗೌಡರಿಗೆ ಮತ್ತಷ್ಟು ನೋವು ಕಾಣಿಸಿಕೊಂಡಿದೆ. ಆದರಿಂದ ಇಂದು ಮನೆಯಲ್ಲೇ ವಿಶ್ರಾಂತಿ ಪಡೆಯುವಂತೆ ವೈದ್ಯರು ಸೂಚಿಸಿದ್ದಾರೆ.

  • ದೊಡ್ಡ ಗೌಡರಿಗೆ ಸ್ನಾಯು ಸೆಳೆತ- ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆ

    ದೊಡ್ಡ ಗೌಡರಿಗೆ ಸ್ನಾಯು ಸೆಳೆತ- ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆ

    ಬೆಂಗಳೂರು: ದೆಹಲಿಯಿಂದ ಶುಕ್ರವಾರವಷ್ಟೇ ವಾಪಾಸ್ಸಾಗಿರುವ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ದೇವೇಗೌಡರಿಗೆ ಇಂದು ಸ್ನಾಯು ಸೆಳೆತವಾಗಿ ಕಾಲು ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಚಿಕಿತ್ಸೆಗೆಂದು ಖಾಸಗಿ ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆಯಿದೆ.

    ದೆಹಲಿಯಿಂದ ತಮ್ಮ ನಿವಾಸಕ್ಕೆ ನಿನ್ನೆ ರಾತ್ರಿ ಮಾಜಿ ಪ್ರಧಾನಿ ದೇವೇಗೌಡರು ವಾಪಾಸ್ಸಾಗಿದ್ದರು. ಇಂದು ಬೆಳಗ್ಗೆ ಕೊಠಡಿ ಬಳಿ ದೇವೇಗೌಡರು ಹೋಗುತ್ತಿದ್ದ ವೇಳೆ ಕಾಲು ಎಡವಿದ್ದರಿಂದ ಅವರ ಕಾಲಿಗೆ ಏಟಾಗಿದ್ದು, ಕಾಲು ಊದಿಕೊಂಡಿದೆ. ಅಲ್ಲದೆ ಸ್ನಾಯು ನೋವು ಕಾಣಿಸಿಕೊಂಡಿದ್ದು, ಮಧ್ಯಾಹ್ನದ ವೇಳೆಗೆ ಖಾಸಗಿ ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆಯಿದೆ ಎಂಬುದಾಗಿ ತಿಳಿದುಬಂದಿದೆ.

    ಕಾಲು ನೋವಿನ ನಡುವೆಯೂ ಜನರಿಗೆ ಬೇಸರ ಆಗಬಾರದೆಂದು ತಮ್ಮ ನಿವಾಸಕ್ಕೆ ಬಂದಿರುವ ಜನರ ಸಮಸ್ಯೆಯನ್ನು ಆಲಿಸುತ್ತಿದ್ದಾರೆ. ಜನರ ಬಳಿ ಮಾತನಾಡಿದ ಬಳಿಕ ದೇವೇಗೌಡರು ಮಧ್ಯಾಹ್ನ ಸುಮಾರು 12 ಗಂಟೆ ಬಳಿಕ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆಂದು ತೆರಳಲಿದ್ದಾರೆ ಎನ್ನಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv