Tag: ಕಾಲುಂಗುರ

  • ಸಂಪ್ರದಾಯದ ಜೊತೆ ಫ್ಯಾಷನ್- ಈಗೇನಿದ್ರೂ ಟ್ರೆಂಡಿ ‘ಕಾಲುಂಗುರ’ದ ಕಾಲ

    ಸಂಪ್ರದಾಯದ ಜೊತೆ ಫ್ಯಾಷನ್- ಈಗೇನಿದ್ರೂ ಟ್ರೆಂಡಿ ‘ಕಾಲುಂಗುರ’ದ ಕಾಲ

    ಕಾಲಿನ ಅಂದ ಹೆಚ್ಚಿಸುವ ಚೆಂದದ ಕಾಲುಂಗುರ

    ಹಿಂದೂ ಧರ್ಮದಲ್ಲಿ ಕುತ್ತಿಗೆಗೆ ಮಂಗಳಸೂತ್ರ ಮತ್ತು ಪಾದಗಳಿಗೆ ಕಾಲುಂಗರ (Teo Rings) ಧರಿಸುವುದು ವಿವಾಹಿತ ಮಹಿಳೆಯ ಸಂಕೇತ. ಸಂಪ್ರದಾಯದ ಜೊತೆ ಫ್ಯಾಷನಬಲ್ ಆಗಿಯೂ ಕಾಲುಂಗುರ ಧರಿಸಬಹುದಾಗಿದೆ. ಚೆಂದದ ಕಾಲುಂಗುರ ಧರಿಸಿ ಫ್ಯಾಷನ್ ಮಾಡಬಹುದು. ಇದಕ್ಕೆ ಸಂಬಂಧಿಸಿದ ಕೆಲವು ಟ್ರೆಂಡಿ ಫ್ಯಾಷನ್ (Fashion) ಕಾಲುಂಗುರಗಳ ಬಗ್ಗೆ ಇಲ್ಲಿದೆ ವಿವರ.

    Toe Rings

    ನವಿಲು ವಿನ್ಯಾಸದ ಕಾಲುಂಗುರ:

    ಈಗಾಗಲೇ ನವಿಲಿನ ಬಣ್ಣದ ಡ್ರೆಸ್, ನವಿಲಿನ ವಿನ್ಯಾಸವಿರುವ ಬಟ್ಟೆಗಳು ಮಾರುಕಟ್ಟೆಗೆ ಬಂದು ಹಲ್‌ಚಲ್ ಏಬ್ಬಿಸಿದೆ. ಆದರೀಗ ಕಾಲುಂಗುರದ ಜಮಾನ. ನವಿಲು ವಿನ್ಯಾಸದ ಕಾಲುಂಗುರದ ಟ್ರೆಂಡ್ ಶುರುವಾಗಿದೆ. ಇದನ್ನೂ ಓದಿ:ಭಾರತ-ಪಾಕ್ ಕದನ ವಿರಾಮಕ್ಕೆ ಸಲ್ಮಾನ್ ಖಾನ್ ಖುಷಿ; ಟೀಕೆ ಬೆನ್ನಲ್ಲೇ ಪೋಸ್ಟ್ ಡಿಲೀಟ್

    ಗುಲಾಬಿ ವಿನ್ಯಾಸದ ಕಾಲುಂಗುರ:

    ಗುಲಾಬಿ ಬಣ್ಣವಾಗಲಿ, ಹೂವಾಗಲಿ ಮಹಿಳೆಯರಿಗೆ ಪ್ರಿಯವಾದದ್ದು. ಅದರಂತೆ ಗುಲಾಬಿ ವಿನ್ಯಾಸದ ಕಾಲುಂಗುರಕ್ಕೂ ಬೇಡಿಕೆ ಹೆಚ್ಚಾಗಿದೆ. ಸೀರೆ ಅಥವಾ ಲೆಹೆಂಗಾಗೆ ಇದು ಧರಿಸಲು ಸೂಕ್ತವಾಗಿದೆ. ಮದುವೆಯಲ್ಲಿ ವಧುವಿಗೂ ಇದನ್ನು ಉಡುಗೊರೆಯಾಗಿ ನೀಡಬಹುದು. ಇದನ್ನೂ ಓದಿ: ಫೈರ್ ಬ್ರ್ಯಾಂಡ್‌ ಚೈತ್ರಾ ಮನೆಗೆ ಮಂಜು ಭೇಟಿ- ನವಜೋಡಿಗೆ ವಿಶೇಷ ಉಡುಗೊರೆ ಕೊಟ್ಟ ನಟ

    ಹೂವು, ಎಲೆ ಕಾಲುಂಗುರದ ಡಿಸೈನ್:

    ಈ ಕಾಲುಂಗುರ ಸದ್ಯ ಟ್ರೆಂಡ್‌ನಲ್ಲಿದೆ. ಸಂಪ್ರದಾಯಿಕ ಲುಕ್ ಜೊತೆ ಫ್ಯಾಷನಬಲ್ ಆಗಿ ಕಾಣಿಸುತ್ತದೆ. ಅದರಲ್ಲೂ ನಾರಿಮಣಿಯರ ಕಾಲಿನ ಬೆರಳಿನ ಅಂದ ಹೆಚ್ಚಿಸುತ್ತದೆ.

    ಪಕ್ಷಿ ಗೆಜ್ಜೆಯ ವಿನ್ಯಾಸದ ಕಾಲುಂಗುರ:

    ಪಕ್ಷಿ ಗೆಜ್ಜೆಯ ವಿನ್ಯಾಸದ ಕಾಲುಂಗುರವು ಎಲ್ಲಾ ಬಗೆಯ ಬಟ್ಟೆಗೂ ಒಪ್ಪುತ್ತದೆ. ಸೀರೆ, ಚೂಡಿದಾರ್ ಎಲ್ಲದ್ದಕ್ಕೂ ಸರಿಹೊಂದುವಂತಹ ಕಾಲುಂಗುರವಾಗಿದೆ. ಈಗೀನ ಕಾಲಕ್ಕೂ ಇದು ಟ್ರೆಂಡಿಯಾಗಿದೆ.

    Toe Rings

    ಬಣ್ಣದ ಹರಳಿನ ಕಾಲುಂಗುರ:

    ಬಣ್ಣ ಬಣ್ಣದ ಉದ್ದನೆಯ ಕಾಲುಂಗುರದಿಂದ ನಿಮ್ಮ ಕಾಲಿನ ಸೌಂದರ್ಯ ಹೆಚ್ಚಿಸುತ್ತದೆ. ಇದು ಸದ್ಯ ಟ್ರೆಂಡ್‌ನಲ್ಲಿದೆ.

    ಬಿಳಿ ಮುತ್ತುಗಳ ಕಾಲುಂಗುರ:

    ಬೆಳ್ಳಿ ಬಿಳಿ ಮುತ್ತುಗಳ ಡಿಸೈನ್‌ಗೆ ನಾರಿಮಣಿಯರು ಫಿದಾ ಆಗಿದ್ದಾರೆ. ನೋಡಲು ಸ್ಟೆöÊಲೀಶ್ ಆಗಿ ಹೈಲೆಟ್ ಆಗಿ ಕಾಣುತ್ತದೆ. ಎಲ್ಲಾ ಬಗೆಯ ಬಟ್ಟೆಗಳಿಗೂ ಇದು ಸೂಟ್ ಆಗುತ್ತದೆ.

  • ಕೆಪಿಎಸ್‌ಸಿ ಪರೀಕ್ಷೆಯಲ್ಲಿ ತಾಳಿ, ಕಾಲುಂಗುರ ತೆಗೆಸಿದ್ದು ಅಕ್ಷಮ್ಯ: ಜೆಡಿಎಸ್ ಆಕ್ರೋಶ

    ಕೆಪಿಎಸ್‌ಸಿ ಪರೀಕ್ಷೆಯಲ್ಲಿ ತಾಳಿ, ಕಾಲುಂಗುರ ತೆಗೆಸಿದ್ದು ಅಕ್ಷಮ್ಯ: ಜೆಡಿಎಸ್ ಆಕ್ರೋಶ

    ಬೆಂಗಳೂರು: ಕೆಪಿಎಸ್‌ಸಿ ಪರೀಕ್ಷೆ (KPSC Exam) ವೇಳೆ ಮಹಿಳೆಯರ ತಾಳಿ, ಕಾಲುಂಗುರ ತೆಗೆಸಿರುವ ಪರೀಕ್ಷೆ ವ್ಯವಸ್ಥೆ ಮತ್ತು ಸರ್ಕಾರದ ವಿರುದ್ಧ ಜೆಡಿಎಸ್ ವಾಗ್ದಾಳಿ ನಡೆಸಿದೆ. ಈ ಬಗ್ಗೆ ಎಕ್ಸ್‌ನಲ್ಲಿ ಸರಣಿ ಪೋಸ್ಟ್‌ಗಳನ್ನು ಮಾಡಿರುವ ಜೆಡಿಎಸ್ (JDS) ಇಂತಹ ಕೃತ್ಯ ಮಾಡಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯ ಮಾಡಿದೆ.

    ಪೋಸ್ಟ್‌ನಲ್ಲೇನಿದೆ?
    ಗ್ರೂಪ್ ಸಿ ಹುದ್ದೆಗಳ ಪ್ರವೇಶ ಪರೀಕ್ಷೆಯ ವೇಳೆ ಮಹಿಳೆಯರ ಮಂಗಳಸೂತ್ರ (Mangalasutra), ಕಾಲುಂಗುರ ತೆಗೆಸಿರುವ ಘಟನೆ ಅಕ್ಷಮ್ಯ. ಇದು ಸ್ತ್ರೀಯರ ಹಕ್ಕುಗಳನ್ನು ಹತ್ತಿಕ್ಕುವ ಪ್ರಯತ್ನ. ನಾವು ಕರ್ನಾಟಕದಲ್ಲಿ ಇದ್ದೇವೆಯೋ? ಅಥವಾ ಇನ್ನೆಲ್ಲಾದರೂ ಇದ್ದೇವೆಯೋ?

    ಕಲಬುರಗಿಯಲ್ಲಿ (Kalaburagi) ಭಾನುವಾರ ನಡೆದ ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಸ್ತ್ರೀಯರಿಗೆ ಘೋರ ಅಪಮಾನ ಎಸಗಿದ್ದು ಅತ್ಯಂತ ಖಂಡನೀಯ. ಇಂಡಿಯಾ ಎಂದು ಜಪಿಸುವ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಭಾರತದ ಸಂಸ್ಕೃತಿಗೆ ಸಿಕ್ಕ ಗೌರವ ಇದು. ನಮ್ಮ ಸಂಸ್ಕೃತಿ, ಪರಂಪರೆಯನ್ನು ನಿರ್ನಾಮ ಮಾಡುವ ಕುಕೃತ್ಯ ಅವರಿಂದ ಎಗ್ಗಿಲ್ಲದೆ ನಡೆಯುತ್ತಿದೆ. ಒಂದೆಡೆ ಗೃಹಲಕ್ಷ್ಮಿ ಎನ್ನುವ ರಾಜ್ಯ ಸರ್ಕಾರ, ಇನ್ನೊಂದೆಡೆ ಅದೇ ಗೃಹಲಕ್ಷ್ಮಿಯರ ಸೌಭಾಗ್ಯ ಮತ್ತು ಸಾಂಸ್ಕೃತಿಕ, ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ಉಂಟು ಮಾಡುತ್ತಿದೆ. ಕರ್ನಾಟಕ ಮಾದರಿ ಎಂದರೆ ತಾಯಂದಿರ ಮುತ್ತೈದೆತನಕ್ಕೇ ಕುತ್ತು ತರುವುದಾ? ಇದನ್ನೂ ಓದಿ: ಪೇಜಾವರ ಶ್ರೀಗಳಿಗೆ ಪಿತೃ ವಿಯೋಗ

    ಇಷ್ಟಕ್ಕೂ ಪರೀಕ್ಷಾ ಸಿಬ್ಬಂದಿಗೆ ಮಹಿಳಾ ಅಭ್ಯರ್ಥಿಗಳ ತಾಳಿ, ಕಾಲುಂಗುರ ತೆಗೆಸುವಂತೆ ಆದೇಶ ಕೊಟ್ಟವರು ಯಾರು? ಅವರಿಗೆ ಅಷ್ಟೊಂದು ಸೂಕ್ಷ್ಮಪ್ರಜ್ಞೆಯ ಕೊರತೆಯೇ? ಪರೀಕ್ಷೆಗೆ ಮೊದಲೇ ಆ ಮಹಿಳೆಯರಿಗೆ ಅದೆಷ್ಟು ಮಾನಸಿಕ ಆಘಾತ ಉಂಟಾಗುತ್ತದೆ ಎಂಬ ಅರಿವು ಬೇಡವೇ? ಪರೀಕ್ಷಾ ನಿಯಮಗಳ ಪಟ್ಟಿಯಲ್ಲಿ ಕಾಲುಂಗುರ, ಮಂಗಳಸೂತ್ರ ತೆಗೆಯಬೇಕು ಎನ್ನುವ ಸೂಚನೆಯೇ ಇರಲಿಲ್ಲ ಎನ್ನುತ್ತಾರೆ ಪರೀಕ್ಷಾರ್ಥಿಗಳು. ಹಾಗಾದರೆ ಪರೀಕ್ಷಾ ಕೇಂದ್ರಕ್ಕೆ ಬಂದ ವಿವಾಹಿತ ಮಹಿಳಾ ಅಭ್ಯರ್ಥಿಗಳ ಮಂಗಳಸೂತ್ರ, ಕಾಲುಂಗುರವನ್ನು ಬಲವಂತವಾಗಿ ತೆಗೆಸಿದ್ದು ದುರ್ನಡತೆಯ ಪರಮಾವಧಿ.

    ಕೆಪಿಎಸ್‌ಸಿ ಹಾಗೂ ರಾಜ್ಯ ಸರ್ಕಾರ ಕೂಡಲೇ ನೊಂದ ಮಹಿಳೆಯರಿಗೆ ಕ್ಷಮೆ ಯಾಚಿಸಬೇಕು ಹಾಗೂ ಇಂತಹ ಆಘಾತಕಾರಿ ಘಟನೆಗೆ ಕಾರಣರಾದ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡಬೇಕು. ಮತ್ತೆಂದೂ ಈ ರೀತಿಯ ಘಟನೆ ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು ಎಂದು ಜೆಡಿಎಸ್ ಸರ್ಕಾರವನ್ನು ಆಗ್ರಹಿಸಿದೆ. ಇದನ್ನೂ ಓದಿ: ಬಾಗಿಲಿಲ್ಲದ ದೇವಾಲಯಕ್ಕೆ ನುಗ್ಗಿ ಕಾಣಿಕೆ ಡಬ್ಬಿ, 100 ಘಂಟೆಗಳನ್ನು ದೋಚಿದ ಕಳ್ಳರು

  • ದಿನನಿತ್ಯ ಧರಿಸಬಹುದಾದ ಕಾಲುಂಗುರದ ಲೇಟೆಸ್ಟ್ ಡಿಸೈನ್‍ಗಳು

    ದಿನನಿತ್ಯ ಧರಿಸಬಹುದಾದ ಕಾಲುಂಗುರದ ಲೇಟೆಸ್ಟ್ ಡಿಸೈನ್‍ಗಳು

    ತಾಳಿ ಜೊತೆಗೆ ಕಾಲುಂಗುರ ಕೂಡ ಭಾರತೀಯ ವಿವಾಹಿತ ಮಹಿಳೆಯ ಸಂಕೇತವಾಗಿದೆ. ಸಾಮಾನ್ಯವಾಗಿ ಬೆಳ್ಳಿ ಕಾಲುಂಗುರವನ್ನು ಮದುವೆಯ ಸಮಯದಲ್ಲಿ ಗಂಡನ ಕೈಯಿಂದ ಹೆಂಡತಿಯ ಕಾಲಿನ ಎರಡನೇ ಬೆರಳಿಗೆ ಹಾಕಿಸುತ್ತಾರೆ. ಅಂದಿನಿಂದ ಮಹಿಳೆಯರು ಕಾಲುಂಗುರವನ್ನು ಬಿಚ್ಚುವಂತಿಲ್ಲ. ಕಾಲಿನ ಎರಡನೇ ಬೆರಳು, ನಾಡಿ ಗರ್ಭಕೋಶಕ್ಕೆ ಸಂಬಂಧಪಟ್ಟಿರುವುದರಿಂದ ನಿರ್ದಿಷ್ಟ ಪ್ರಮಾಣದ ಶಾಖ ಅಥವಾ ಉಷ್ಣದ ನಾಡಿಯನ್ನು ನಿಯಂತ್ರಣದಲ್ಲಿಡಲು ಕಾಲುಂಗುರ ಸಹಾಯಕವಾಗಿದೆ ಎನ್ನಲಾಗುತ್ತೆ. ಕಾಲುಂಗುರ ಋತು ಚಕ್ರ ಸಮಸ್ಯೆಯನ್ನು ಪರಿಹರಿಸುವಲ್ಲಿ, ಸಂತಾನ ಸಮಸ್ಯೆಯನ್ನು ದೂರಮಾಡುವಲ್ಲಿ ಕಾಲುಂಗುರ ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ. ಕಾಲುಂಗುರ ನರಕ್ಕೆ ತಾಗುವುದರಿಂದ ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ. ಅಲ್ಲದೇ ಒತ್ತಡದ ಜೀವನ ಶೈಲಿಯನ್ನು ಹೊಂದಿರುವ ಮಹಿಳೆಯರಿಗೆ ಕಾಲುಂಗುರ ಅತ್ಯುತ್ತಮವಾಗಿದೆ.

     Toe Rings

    ಇಷ್ಟೇಲ್ಲಾ ಪ್ರಾಮುಖ್ಯತೆ ಇರುವ ಕಾಲುಂಗುರದಲ್ಲಿ ಇದೀಗ ಹಲವಾರು ರೀತಿಯ ಡಿಸೈನ್‍ಗಳಿದ್ದು, ಅವುಗಳಲ್ಲಿ ನಿಮಗೆ ಸೂಟ್ ಆಗುವಂತಹ ಕೆಲವೊಂದು ಕಾಲುಂಗುರ ಡಿಸೈನ್‍ಗಳ ಕುರಿತ ಮಾಹಿತಿ ಈ ಕೆಳಗಿನಂತಿದೆ.

     Toe Rings

    ಪ್ಲೇನ್ ಬೆಳ್ಳಿ ಕಾಲುಂಗುರ:
    ಸಿಂಪಲ್ ಪ್ಲೇನ್ ಬೆಳ್ಳಿ ಕಾಲುಂಗುರವನ್ನು ನೀವು ಪ್ರತಿನಿತ್ಯ ಧರಿಸಬಹುದಾಗಿದೆ. ಇದನ್ನು ಸ್ಟರ್ಲಿಂಗ್ ಸಿಲ್ವರ್‍ನಿಂದ ತಯಾರಿಸಲಾಗಿರುವುದರಿಂದ ಕಪ್ಪಾಗುತ್ತದೆ ಎಂದು ಭಯಪಡುವ ಅಗತ್ಯವಿರುವುದಿಲ್ಲ. ಈ ಕಾಲುಂಗುರಗಳು ತುಂಬಾ ದಪ್ಪಗಿರುವುದಿಲ್ಲ, ಹಾಗೆತೇ ತುಂಬಾ ತೆಳ್ಳಗು ಸಹ ಇರುವುದಿಲ್ಲ. ಕಾಲ್ಬೆರಳನ್ನು ಸಂಪೂರ್ಣವಾಗಿ ಮುಚ್ಚುವುದಿಲ್ಲ. ಇದು ನೋಡಲು ಬಹಳ ಸಿಂಪಲ್ ಆಗಿದ್ದು, ರೌಂಡ್ ಶೇಪ್‍ನಲ್ಲಿ ವಿನ್ಯಾಸಗೊಳಿಸಲಾಗಿರುತ್ತದೆ. ಇದನ್ನೂ ಓದಿ: ಚಿನ್ನಾಭರಣ ಕಳವು ಮಾಡಿರುವುದಾಗಿ ಮಗಳ ವಿರುದ್ಧವೇ ದೂರು ಕೊಟ್ಟ ತಾಯಿ

     Toe Rings

    ಅಡ್ಜಸ್ಟೇಬಲ್ ಬೆಳ್ಳಿ ಕಾಲುಂಗುರ:
    ಬೆಳ್ಳಿ ಕಾಲುಂಗುರಗಳಲ್ಲಿ ಅಡ್ಜ್‍ಸ್ಟೇಬಲ್ ಕಾಲುಂಗುರ ಕೂಡ ಒಂದಾಗಿದೆ. ಕಾಲ್ಬೆರಳ ಗಾತ್ರಕ್ಕೆ ಅನುಗುಣವಾಗಿ ಯಾರು ಬೇಕಾದರೂ ಇದನ್ನು ಧರಿಸಬಹುದು. ಇದು ಕೂಡ ಸ್ಟಲಿರ್ಂಗ್ ಬೆಳ್ಳಿಯಲ್ಲಿ ದೊರೆಯುತ್ತದೆ ಮತ್ತು ನೋಡಲು ಸಖತ್ ಫ್ಯಾನ್ಸಿಯಾಗಿ ಕಾಣಿಸುತ್ತದೆ. ದೈನಂದಿನ ಉಡುಗೆಗಳಿಗೆ ಸೂಟ್ ಆಗುವಂತಹ ಈ ಕಾಲುಂಗುರವನ್ನು ಯುವ ನವವಿವಾಹಿತ ಮಹಿಳೆಯರು ಹೆಚ್ಚಾಗಿ ಬಳಸುತ್ತಾರೆ.

     Toe Rings

    ಸ್ಟೋನ್ ಬೆಳ್ಳಿ ಕಾಲುಂಗುರ:
    ಬೆಳ್ಳಿಯ ಈ ಕಾಲ್ಬೆರಳ ಉಂಗುರವನ್ನು ಮದುವೆಯ ಸಮಯದಲ್ಲಿ ವಧುವಿಗೆ ನೀಡಲಾಗುತ್ತದೆ. ಈ ಕಾಲುಂಗುರವನ್ನು ಹಲವಾರು ಬಣ್ಣದ ಸ್ಟೋನ್‍ಗಳಿಂದ ತಯಾರಿಸಲಾಗಿರುತ್ತದೆ. ಇದರ ಸ್ಟೋನ್‍ಗಳು ಚಿಕ್ಕದಾಗಿರುವುದಿಲ್ಲ. ಸಾಕಷ್ಟು ದೊಡ್ಡದಾಗಿರುತ್ತವೆ ಮತ್ತು ಸಾಮಾನ್ಯವಾಗಿ ರೌಂಡ್ ಶೇಪ್‍ನಲ್ಲಿ ಇದನ್ನು ವಿನ್ಯಾಸಗೊಳಿಸಲಾಗಿರುತ್ತದೆ. ಇದು ದಪ್ಪಗಿರುವುದರಿಂದ ನೋಡಲು ಬಹಳ ಸುಂದರವಾಗಿ ಕಾಣಿಸುತ್ತದೆ. ಬೆಳ್ಳಿಯಿಂದ ತಯಾರಿಸಲಾದ ಈ ಸಾಂಪ್ರದಾಯಿಕ ಕಾಲುಂಗುರ ಎಲ್ಲರ ಮಧ್ಯೆ ಎದ್ದು ಕಾಣುತ್ತದೆ.

     Toe Rings

    ಫೇದರ್ ಬೆಳ್ಳಿ ಕಾಲುಂಗುರ:
    ಈ ಕಾಲುಂಗುರವನ್ನು ಪಕ್ಷಿಗಳ ಗರಿಯಂತೆ ವಿನ್ಯಾಸಗೊಳಿಸಲಾಗಿರುತ್ತದೆ. ಈ ಕಾಲುಂಗುರ ಸ್ಟೈಲಿಶ್ ಲುಕ್ ನೀಡುವುದರ ಜೊತೆಗೆ ಕೆಲಸ ಮಾಡುವ ವೇಳೆ ಧರಿಸಲು ಉತ್ತಮವಾಗಿದೆ.  ಇದನ್ನೂ ಓದಿ: ಅನುಮಾನ ವ್ಯಕ್ತಪಡಿಸಿದ ಭಾವಿ ಪತಿ- ಯುವತಿ ಆತ್ಮಹತ್ಯೆಗೆ ಶರಣು

     Toe Rings

    ಡಬಲ್ ಬ್ಯಾಂಡೆಡ್ ಬೆಳ್ಳಿ ಕಾಲುಂಗುರ
    ಡಬಲ್ ಬ್ಯಾಂಡೆಡ್ ಬೆಳ್ಳಿ ಕಾಲುಂಗುರಗಳು ನೋಡಲು ವಿಭಿನ್ನವಾಗಿ ಕಾಣುತ್ತವೆ. ಸಾಮಾನ್ಯವಾಗಿ ಈ ಕಾಲುಂಗುರವನ್ನು ಸ್ಟೋನ್ ಹಾಗೂ ಹೂವಿನ ಡಿಸೈನ್ ಮಾದರಿ ವಿನ್ಯಾಸಗೊಳಿಸಲಾಗಿರುತ್ತದೆ. ಕಾಲುಂಗುರದ ಮಧ್ಯದಲ್ಲಿ ವಿನ್ಯಾಸಗೊಳಿಸಿರುವ ಸ್ಟೋನ್ ಸಖತ್ ಹೈಲೈಟ್ ಆಗಿ ಕಾಣಿಸುತ್ತದೆ. ಸ್ಟರ್ಲಿಂಗ್ ಸಿಲ್ವರ್‌ನಿಂದ ತಯಾರಿಸಲಾಗಿರುವ ಡಬಲ್ ಬ್ಯಾಂಡೆಡ್ ಬೆಳ್ಳಿ ಕಾಲುಂಗುರ ನಿಮ್ಮ ಸೌಂದರ್ಯವನ್ನು ಹೆಚ್ಚಿಸುತ್ತದೆ.