Tag: ಕಾಲರಾ

  • ಸಿಎಂ ತವರಿನಲ್ಲಿ ಮೂವರಲ್ಲಿ ಕಾಲರಾ ಪತ್ತೆ

    ಸಿಎಂ ತವರಿನಲ್ಲಿ ಮೂವರಲ್ಲಿ ಕಾಲರಾ ಪತ್ತೆ

    – 4 ಬೋರ್‌ವೆಲ್ ತಾತ್ಕಾಲಿಕ ಸ್ಥಗಿತ

    ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರ ತವರು ಜಿಲ್ಲೆಯಲ್ಲಿ ಕಾಲರಾ (Cholera) ರೋಗ ಪತ್ತೆಯಾಗಿದೆ.

    ಒಂದೇ ಗ್ರಾಮದ ಮೂವರಲ್ಲಿ ಕಾಣಿಸಿಕೊಂಡಿದೆ. ಸಿಎಂ ಸಿದ್ದರಾಮಯ್ಯ ಪ್ರತಿನಿಧಿಸುವ ವರುಣ ಕ್ಷೇತ್ರದ ತಗಡೂರು ಗ್ರಾಮದಲ್ಲಿ ಕೆಲವರಲ್ಲಿ ವಾಂತಿ-ಭೇದಿ ಆರಂಭವಾಗಿದೆ. ಈ ಹಿನ್ನೆಲೆ ಮುಂಜಾಗೃತಾ ಕ್ರಮವಾಗಿ ಆರೋಗ್ಯ ಇಲಾಖೆ ಪರೀಕ್ಷೆ ನಡೆಸಿದೆ.

    ಕಳೆದ ಒಂದು ವಾರದಿಂದ ಇಲಾಖೆ ಸತತ 114 ಜನರನ್ನ ಪರೀಕ್ಷೆಗೊಳಪಡಿಸಿತ್ತು. ಈ ವೇಳೆ ಮೂವರಲ್ಲಿ ಕಾಲರಾ ಕಾಣಿಸಿಕೊಂಡಿದೆ. ಗ್ರಾಮಕ್ಕೆ ಡಿಎಚ್‍ಓ ಶಿವಕುಮಾರ್ ಸ್ವಾಮಿ ಸೆರಿದಂತೆ ಹಿರಿಯ ಆರೋಗ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: PublicTV Explainer: ಆಧುನಿಕ ಭಾರತದ ಮೊದಲ ಸಾಂಕ್ರಾಮಿಕ ರೋಗ ಯಾವುದು ಗೊತ್ತಾ?

    ಬೋರ್ ವೆಲ್ ನೀರಿನಿಂದ ಕಾಲರ ಬಂದಿರುವ ಶಂಕೆ ವ್ಯಕ್ತವಾಗುತ್ತಿದೆ. ಇದರಿಂದ ಗ್ರಾಮದ ನಾಲ್ಕು ಬೋರ್‍ವೆಲ್ ತಾತ್ಕಾಲಿಕ ಸ್ಥಗಿತಗೊಳಿಸಲಾಗಿದೆ. ಅಲ್ಲದೇ ಆರೋಗ್ಯ ಅಧಿಕಾರಿಗಳು ನೀರಿನ ಸ್ಯಾಂಪಲ್ ಪರೀಕ್ಷೆಗೆ ಕಳುಹಿಸಿದ್ದಾರೆ. ಗ್ರಾಮದ ಸಮುದಾಯ ಆಸ್ಪತ್ರೆಯಲ್ಲಿ ಮುಂಜಾಗೃತ ಕ್ರಮವಾಗಿ 6 ಜನ ವೈದ್ಯರು, ಅಂಬುಲೆನ್ಸ್ ವಾಹನ ನಿಯೋಜನೆ ಮಾಡಲಾಗಿದೆ.

  • ಬೆಂಗ್ಳೂರಲ್ಲಿ ಕಾಲರಾ ಪತ್ತೆ ಬೆನ್ನಲ್ಲೇ ಪಿಜಿ ಅಸೋಸಿಯೇಷನ್‍ನಿಂದ ಪ್ರತ್ಯೇಕ ಗೈಡ್‍ಲೈನ್ಸ್

    ಬೆಂಗ್ಳೂರಲ್ಲಿ ಕಾಲರಾ ಪತ್ತೆ ಬೆನ್ನಲ್ಲೇ ಪಿಜಿ ಅಸೋಸಿಯೇಷನ್‍ನಿಂದ ಪ್ರತ್ಯೇಕ ಗೈಡ್‍ಲೈನ್ಸ್

    ಬೆಂಗಳೂರು: ಸಿಲಿಕಾನ್ ಸಿಟಿಯ ಸರ್ಕಾರಿ ಕಾಲೇಜಿನ ಹಾಸ್ಟೆಲ್ ನಲ್ಲಿ ಕಾಲರಾ  (Cholera) ಸೋಂಕು  ಪತ್ತೆಯಾದ ಬೆನ್ನಲ್ಲೆ ಪಿಜಿಗಳ ಮಾಲೀಕರು ಮತ್ತು ವಾಸಿಗಳಿಗೆ ಆತಂಕ ಹೆಚ್ಚಾಗಿದೆ.

    ಸೋಂಕು ತಡೆಗಟ್ಟುವ ಹಿನ್ನೆಲೆ ಅಲರ್ಟ್ ಆಗಿರೋ ಪಿಜಿ ಮಾಲೀಕರ ಸಂಘ (PG Association) ನಗರದ ಎಲ್ಲಾ ಪಿಜಿಗಳಿಗೂ ಮುನ್ನೆಚ್ಚರಿಕೆ ವಹಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮದ ಜೊತೆಗೆ ಗೈಡ್ ಲೈನ್ಸ್ ಹೊರಡಿಸಲು ಮುಂದಾಗಿದೆ. ಸದ್ಯ ಈ ವಿಚಾರಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಎಲ್ಲಾ ಮಾಲೀಕರು ಮಾಹಿತಿ ನೀಡಿರುವ ಅಸೋಸಿಯೇಷನ್, ಮುಂದಿನ ಎರಡು ಮೂರು ವಾರದಲ್ಲಿ ತುರ್ತು ಸಭೆ ಮಾಡಿ ಗೈಡ್ ಲೈನ್ಸ್ ಹೊರಡಿಸಲಿದೆ.

    ಗೈಡ್ ಲೈನ್ಸ್ ಹೇಗಿರಲಿದೆ…?
    – ಪಿಜಿಗಳಲ್ಲಿ ಔಟ್ ಸೈಡ್ ಫುಡ್ ನಾಟ್ ಅಲೌಡ್.
    – ಕಡ್ಡಾಯ ಆರ್ ಓ. ವಾಟರ್ ಗಳ ಬಳಕೆಗೆ ಸೂಚನೆ.
    – ಮೂರು ಹೊತ್ತೂ ಬಿಸಿ ಆಹಾರ ಸಿದ್ಧ ಮಾಡಿಯೇ ವಾಸಿಗಳಿಗೆ ನೀಡುವುದು.
    – ಪಿಜಿ ವಾಸಿಗಳ ಆರೋಗ್ಯದ ಮೇಲೆ ಮಾಲೀಕರೇ ನಿಗಾ ವಹಿಸಬೇಕು.
    – ಯಾವುದೇ ರೀತಿಯ ಆರೋಗ್ಯ ಏರುಪೇರಾದಲ್ಲಿ ಕೂಡಲೇ ಮಾಲೀಕರ ಗಮನಕ್ಕೆ ತರಬೇಕು.
    – ಗಮನಕ್ಕೆ ಬಂದ ಕೂಡಲೇ ಮಾಲೀಕರು ಕುಟುಂಬಸ್ಥರ ಮೂಲಕ ಅಥವಾ ಮಾಲೀಕರೇ ಆಸ್ಪತ್ರೆಗೆ ಕಳುಹಿಸುವ ಕೆಲಸ ಮಾಡಬೇಕು.
    – ಪಿಜಿಯನ್ನ ನಿತ್ಯ ಸ್ವಚ್ಛವಾಗಿಡುವುದು.
    – ವಾಸಿಗಳು ಕೂಡ ಕಡ್ಡಾಯ ನಿಯಮ ಪಾಲನೆ ಮಾಡಲೇಬೇಕು.

  • ಪೋಷಕರೇ ಎಚ್ಚರ ಶುರುವಾಗ್ತಿದೆ ಕಾಲರಾ- ಮಕ್ಕಳ ಆರೋಗ್ಯದ ಕಡೆ ಇರಲಿ ಗಮನ

    ಪೋಷಕರೇ ಎಚ್ಚರ ಶುರುವಾಗ್ತಿದೆ ಕಾಲರಾ- ಮಕ್ಕಳ ಆರೋಗ್ಯದ ಕಡೆ ಇರಲಿ ಗಮನ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಅಕ್ಷರಶಃ ಜಲಕ್ಷಾಮ ಶುರುವಾಗಿದೆ. ಸರ್ಕಾರ ಕೂಡ ನೀರು ಸರಬರಾಜು ಮಾಡೋದಕ್ಕೆ ನಾನಾ ಪ್ರಯತ್ನ ಮಾಡ್ತಿದೆ. ಮತ್ತೊಂದೆಡೆ ಸುಡುಸುಡು ಬಿಸಿಲಿನ ವಾತಾವರಣ. ನೀರಿಲ್ಲದೇ ಜನ ಬೇಸಿಗೆಯಲ್ಲಿ ಜನ ಪರದಾಟ ಮಾಡ್ತಿದ್ರೇ ಈಗ ಆರೋಗ್ಯದ ಸಮಸ್ಯೆ ಕೂಡ ಶುರುವಾಗಿದ್ದು, ಕಾಲರಾ ಕಾಟ ಕೊಡಲು ಸಜ್ಜಾಗಿದೆ.

    ಬಿರು ಬಿಸಿಲನ ವಾತಾವರಣ, ವಾಡಿಕೆಗಿಂತ ತಾಪಮಾನ ಹೆಚ್ಚಾಗಿ ಜನ ತತ್ತರಿಸ್ತಿದ್ದಾರೆ. ನೀರೇ ಇಲ್ಲದೇ ಕರೆ-ಕುಂಟೆ ಬಾವಿ, ನದಿಗಳು ಬತ್ತಿವೆ. ನೀರಿನಿಂದಲೇ ಕಾಲರಾ ಬರ್ತಿದ್ದು, ಈಗಾಗಲೇ 6 ಕ್ಕೂ ಹೆಚ್ಚು ಕೇಸ್ ಸಿಲಿಕಾನ್ ಸಿಟಿಯಲ್ಲಿ ದಾಖಲಾಗಿದೆ. ಹಾಗಾದ್ರೆ ಕಾಲರಾದಿಂದ  (Cholera Disease) ದೂರ ಇರೋದು ಹೇಗೆ, ನಾವು ನಮ್ಮ ಮಕ್ಕಳು ಹಿರಿಯರನ್ನ ರಕ್ಷಿಸಿಕೊಳ್ಳೋದು ಹೇಗೆ..? ಅಲ್ಲದೇ ಬೇಸಿಗೆಯಲ್ಲಿ ಹೇಗೆ ಆಹಾರ ಇರಬೇಕು, ಅದರಲ್ಲೂ ಮಕ್ಕಳ ಬಗ್ಗೆ ಹೇಗೆ ಎಚ್ಚರಿಕೆ ವಹಿಸಬೇಕು ಎಂಬುದನ್ನು ಇಲ್ಲಿ ತಿಳಿಸಲಾಗಿದೆ. ಇದನ್ನೂ ಓದಿ: ಮುಂಜಾನೆ ಬೆಂಗಳೂರಿನ ಟೈಯರ್ ಗೋಡೌನ್‍ನಲ್ಲಿ ಅಗ್ನಿ ಅವಘಡ

    * ಮಕ್ಕಳಿಗೆ ನಿತ್ಯ 2 ರಿಂದ 3 ಲೀಟರ್ ನೀರು ಕುಡಿಸಿ
    * ಕುಡಿಯುವ ನೀರನ್ನ ಕಾಯಿಸಿ, ಆರಿಸಿದ ನಂತರ ನೀಡಿ
    * ಪ್ಲಾಸ್ಟಿಕ್ ಬಾಟಲ್ ಬಳಸೋದನ್ನ ನಿಲ್ಲಿಸಿ
    * ಸ್ಟೀಲ್ ಬಾಟಲ್‍ಗಳಲ್ಲಿ ನೀರನ್ನು ಕೊಡಿ
    * ಕೋಲ್ಡ್ ವಾಟರ್ ನೀಡಲೇಬೇಡಿ
    * ಮಿತವಾದ ಮೃದುವಾದ ಆಹಾರ ನೀಡಿ

    ಮಕ್ಕಳು ಮಾತ್ರವಲ್ಲ ಪೋಷಕರು ಮತ್ತು ಹಿರಿಯರು ಸಹ ತಿನ್ನೋ ಆಹಾರದ ಬಗ್ಗೆ ಗಮನವಹಿಸಬೇಕು. ಜೊತೆಗೆ ಮನೆಯಿಂದ ಹೊರಗೆ ಬಂದಾಗ ಕಾಟನ್ ಬಟ್ಟೆಯನ್ನ ಧರಿಸಿ, ಸೆಖೆ ಅಂತಾ ಎಸಿಯಲ್ಲೇ ಇದ್ರೂ ಸಮಸ್ಯೆಯಾಗಲಿದೆ ಎಂದು ಆಹಾರ ತಜ್ಞೆ ಡಾ. ಪ್ರೇಮ ಹೇಳುತ್ತಾರೆ.

    ಒಟ್ಟಿನಲ್ಲಿ ಈ ಬೇಸಿಗೆ ನೀರಿಲ್ಲದೇ ನಾನಾ ಸಮಸ್ಯೆ ಉಂಟು ಮಾಡ್ತಿದೆ. ನೀರಿಗಾಗಿ ಜನ ಬೀದಿ ಬೀದಿ ಸುತ್ತೋ ಪರಿಸ್ಥಿತಿ ನಿರ್ಮಾಣವಾಗಿದ್ರೇ, ನೀರಿನಿಂದಲೇ ಕಾಲರಾ ಕೂಡ ಜನರ ನಿದ್ದೆಗೆಡಿಸ್ತಿರೋದಂತೂ ಸತ್ಯ.

  • ಶ್ವಾಸಕೋಶದ ತೊಂದರೆ, ಪಾರ್ಶ್ವವಾಯು ಮಾತ್ರವಲ್ಲ ಕೊರೊನಾ ಕಾಲರಾಗೆ ಕಾರಣವಾಗಬಹುದು

    ಶ್ವಾಸಕೋಶದ ತೊಂದರೆ, ಪಾರ್ಶ್ವವಾಯು ಮಾತ್ರವಲ್ಲ ಕೊರೊನಾ ಕಾಲರಾಗೆ ಕಾರಣವಾಗಬಹುದು

    ನವದೆಹಲಿ: ಕೊರೊನಾ ವೈರಸ್ ಗುಣಲಕ್ಷಣಗಳು ಆಧರಿಸಿ ಪ್ರಂಪಚದ್ಯಾಂತ ಹಲವು ಅಧ್ಯಯನಗಳು ನಡೆಯುತ್ತಿದ್ದು, ಕೊರೊನಾ ವೈರಸ್ ನಿಂದ ಕಾಲರಾ ರೋಗವನ್ನು ಸೃಷ್ಟಿಸಬಹುದು ಎಂದು ಅಧ್ಯಯನದ ವರದಿಯೊಂದು ಹೇಳಿದೆ.

    ಶ್ವಾಸಕೋಶದ ತೊಂದರೆ, ಪಾರ್ಶ್ವವಾಯು ಮಾತ್ರವಲ್ಲದೇ ಕೊರೊನಾ ಕಾಲರಾ ಸಮಸ್ಯೆ ಸೃಷ್ಟಿ ಮಾಡಬಲ್ಲದು ಎಂದು ಲಂಡನ್ ನ ಸೈನ್ಸ್ ಜರ್ನಲ್ ನಲ್ಲಿ ಪ್ರಕಟವಾದ ಅಧ್ಯಯನ ವರದಿಯಲ್ಲಿ ಉಲ್ಲೇಖಿಸಲಾಗಿದೆ.

    ನೆದರ್‍ಲ್ಯಾಂಡ್‍ನ ಎರಸಮಸ್ ಮೆಡಿಕಲ್ ಸೆಂಟರ್ ತಜ್ಞರು ನಡೆಸಿದ ಅಧ್ಯಯನ ವರದಿಯನ್ನು ಸೈನ್ಸ್ ಜರ್ನಲ್ ಪ್ರಕಟಿಸಿದೆ. ವರದಿಯಲ್ಲಿ ಕೊರೊನಾ ಶ್ವಾಸಕೋಶದ ACE2 ಎನ್ನುವ ಕಿಣ್ವದ ಮೇಲೆ ಮೊದಲು ಕೊರೊನಾ ದಾಳಿ ಮಾಡಲಿದೆ. ಅಲ್ಲಿಂದ ದೇಹದ ಇತರೆ ಭಾಗಗಳಿಗೂ ಸೋಂಕು ವೃದ್ದಿಸುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

    ಕೊರೊನಾ ವೈರಸ್ ಸೋಂಕು ಕರುಳಿನಲ್ಲಿ ವೃದ್ದಿಸುವ ಸಾಧ್ಯತೆ ಹೆಚ್ಚಿದ್ದು ಸಣ್ಣ ಕರುಳಿನಲ್ಲಿರುವ ಎಪಿಥ್ಯಾಲಿಯಲ್ ನ ACE2 ಕಿಣ್ವಗಳ ಮೇಲೆ ದಾಳಿ ನಡೆಸಲಿದೆ. ಕರುಳಿಗೆ ಸೋಂಕು ತಗುಲಿದ ಬಳಿಕ ಅತಿಸಾರದ ಲಕ್ಷಣಗಳು ಕಂಡು ಕಾಲರಾವಾಗಿ ಬದಲಾಗುವ ಸಾಧ್ಯತೆ ಎಂದು ವರದಿಯಲ್ಲಿ ಹೇಳಲಾಗಿದೆ.

  • ಕೊರೊನಾ ಟೆನ್ಶನ್ ಮಧ್ಯೆ ಬೆಂಗ್ಳೂರಿನಲ್ಲಿ ವಿಚಿತ್ರ ಸಾಂಕ್ರಾಮಿಕ ಕಾಯಿಲೆ

    ಕೊರೊನಾ ಟೆನ್ಶನ್ ಮಧ್ಯೆ ಬೆಂಗ್ಳೂರಿನಲ್ಲಿ ವಿಚಿತ್ರ ಸಾಂಕ್ರಾಮಿಕ ಕಾಯಿಲೆ

    – ಬೆಂಗಳೂರಿಗರೇ ಕೇರ್ ಫುಲ್

    ಬೆಂಗಳೂರು: ಕೊರೊನಾ ಭಯದ ನಡುವೆ ಸಿಲಿಕಾನ್ ಸಿಟಿಯಲ್ಲಿ ವಿಚಿತ್ರ ಕಾಯಿಲೆ ಕಾಣಿಸಿದೆ. ಹೀಗಾಗಿ ಬೀದಿಬದಿ ಚಾಟ್ಸ್ ಮತ್ತು ಫುಡ್ ತಿನ್ನುವ ಮುನ್ನ ಎಚ್ಚರವಾಗಿದೆ.

    ಹೌದು. ಬೆಂಗಳೂರಿನಲ್ಲಿ ಕಲುಶಿತ ನೀರು, ಸ್ವಚ್ಛತೆಯಿಲ್ಲದ ಆಹಾರ ತಿಂದು ಕಾಲರಾ ಲಕ್ಷಣಗಳಿರುವ ಆದರೆ ಕಾಲರಾ ಅಲ್ಲದ ಕಾಯಿಲೆ ಕಾಣಿಸಿಕೊಂಡಿದೆ. ನಗರದ ಅನೇಕ ಆಸ್ಪತ್ರೆಗಳಲ್ಲಿ ಕಾಲರಾ ತರಹದ ರೋಗಲಕ್ಷಣಗಳನ್ನು ಹೊಂದಿರುವ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳು ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಕಾಲರಾ ಲಕ್ಷಣ ಆದರೆ ರಕ್ತದ ಮಾದರಿಯಲ್ಲಿ ಕಾಲರಾ ತರುವ ವಿಬ್ರಿಯೊ ಕಾಲರಾ ಬ್ಯಾಕ್ಟೀರಿಯಾಗಳು ಇರುವುದು ಪತ್ತೆಯಾಗಿಲ್ಲ. ಕಾಲರಾ ರೀತಿಯ ರೋಗ ಲಕ್ಷಣಗಳನ್ನು ಹೊಂದಿರುವ ಅಂದರೆ ರೋಗಿಗಳು ಅತಿಸಾರ, ನಿರ್ಜಲೀಕರಣ, ವಾಂತಿ ಮತ್ತು ಬಳಲಿಕೆ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಇವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಕೂಡ ಇದು ಏನು ಕಾಯಿಲೆ ಅಂತ ಟೆನ್ಶನ್ ಮಾಡಿಕೊಂಡಿದ್ದಾರೆ.

    ಈ ವಿಚಿತ್ರ ಕಾಯಿಲೆ ಈಗ ಆತಂಕಕ್ಕೆ ಕಾರಣವಾಗಿದೆ. ದೇಹ ತೀರಾ ನಿರ್ಜಲೀಕರಣಗೊಳ್ಳುತ್ತೆ, ಅತಿಸಾರ, ವಾಂತಿ ಭೇದಿ ಮತ್ತು ಜಠರಕರುಳಿನ ಸಮಸ್ಯೆಯಿಂದ ಜನ ಆಸ್ಪತ್ರೆಗೆ ದಾಖಲಾಗುವ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

    ಶುದ್ಧ ನೀರು, ಬಿಸಿ ಮಾಡಿ ಆರಿಸಿದ ನೀರು ಕುಡಿಯುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಅಲ್ಲದೇ ಬೀದಿ ಬದಿಯಲ್ಲಿ ಚಾಟ್ಸ್, ಸ್ವಚ್ಛತೆಯಿಲ್ಲದ ಆಹಾರ ತಿನ್ನಬೇಡಿ ಅಂತ ಎಚ್ಚರಿಕೆ ಕೊಟ್ಟಿದ್ದಾರೆ. ಬೇಸಿಗೆಯ ಸಮಯದಲ್ಲಿ ಕೆಲವೊಂದು ಬ್ಯಾಕ್ಟೀರಿಯಾಗಳು ಈ ಸಮಸ್ಯೆಯನ್ನು ತರುತ್ತೆ ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ.