Tag: ಕಾರ್ ಬಾಂಬ್

  • ಪುಟಿನ್‌ ಬ್ರೈನ್‌ ಎಂದೇ ಹೆಸರಾಗಿದ್ದ ರಷ್ಯಾ ನಾಯಕನ ಪುತ್ರಿ ಕಾರ್‌ ಬಾಂಬ್‌ ಸ್ಫೋಟದಿಂದ ಸಾವು

    ಪುಟಿನ್‌ ಬ್ರೈನ್‌ ಎಂದೇ ಹೆಸರಾಗಿದ್ದ ರಷ್ಯಾ ನಾಯಕನ ಪುತ್ರಿ ಕಾರ್‌ ಬಾಂಬ್‌ ಸ್ಫೋಟದಿಂದ ಸಾವು

    ಮಾಸ್ಕೋ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಆಪ್ತ ʼಪುಟಿನ್‌ ಬ್ರೈನ್‌ʼ ಎಂದೇ ಹೆಸರಾಗಿದ್ದ ರಷ್ಯಾದ ಸಿದ್ಧಾಂತವಾದಿ ಅಲೆಕ್ಸಾಂಡರ್ ಡುಗಿನ್ ಅವರ ಮಗಳು ಮಾಸ್ಕೋದ ಹೊರವಲಯದಲ್ಲಿ ಕಾರ್ ಬಾಂಬ್ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಉಕ್ರೇನ್‌ ಮೇಲಿನ ರಷ್ಯಾ ದಾಳಿಗೆ ಡುಗಿನ್‌ ಬೆಂಬಲಿಗರಾಗಿದ್ದರು. ಡುಗಿನ್‌ ಅವರನ್ನು ಹತ್ಯೆಗೆ ಟಾರ್ಗೆಟ್‌ ಮಾಡಲಾಗಿತ್ತು. ಆದರೆ ಸ್ಫೋಟಕ್ಕೆ ಕೆಲವು ಕ್ಷಣಗಳ ಮುಂಚೆ ಡುಗಿನ್‌ ಅವರ ಕಾರನ್ನು ಪುತ್ರಿ ಪಡೆದುಕೊಂಡಿದ್ದರು. ನಂತರ ಕಾರ್‌ ಬಾಂಬ್‌ ಸ್ಫೋಟಕ್ಕೆ ಬಲಿಯಾಗಿದ್ದಾರೆ ಎಂದು ರಷ್ಯಾ ಮಾಧ್ಯಮಗಳು ವರದಿ ಮಾಡಿವೆ. ಇದನ್ನೂ ಓದಿ: ನದಿ, ಕೆರೆಗಳಲ್ಲಿ ಸ್ನಾನ ಮಾಡೋ ಮುನ್ನ ಹುಷಾರ್ – ವಿದೇಶದಲ್ಲಿ ಪತ್ತೆಯಾಗಿದೆ ಮೆದುಳು ತಿನ್ನುವ ಡೆಡ್ಲಿ ವೈರಸ್

    1992 ರಲ್ಲಿ ಜನಿಸಿದ ಡೇರಿಯಾ ಡುಗಿನಾ, ಮಾಸ್ಕೋದ ಹೊರವಲಯದಲ್ಲಿ ಸುಮಾರು 40 ಕಿಲೋಮೀಟರ್ ದೂರದಲ್ಲಿದ್ದ ಬೊಲ್ಶಿ ವೈಝೋಮಿ ಗ್ರಾಮದ ಬಳಿ ಹೆದ್ದಾರಿಯಲ್ಲಿ ಚಲಿಸುತ್ತಿದ್ದಾಗ ತನ್ನ ಟೊಯೊಟಾ ಲ್ಯಾಂಡ್ ಕ್ರೂಸರ್‌ನಲ್ಲಿ ಇರಿಸಲಾಗಿದ್ದ ಬಾಂಬ್ ಸ್ಫೋಟಗೊಂಡು ಸಾವನ್ನಪ್ಪಿದ್ದಾಳೆ ಎಂದು ರಷ್ಯಾದ ತನಿಖಾ ಸಮಿತಿ ಹೇಳಿಕೆಯಲ್ಲಿ ತಿಳಿಸಿದೆ.

    ಡುಗಿನಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆ ಸಂಬಂಧ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: 900 ಉದ್ಯೋಗಿಗಳನ್ನು ಮನೆಗೆ ಕಳುಹಿಸಿದ ಕ್ಸಿಯೋಮಿ

    ಡೇರಿಯಾ ಡುಗಿನಾ ತಂದೆ ಅಲೆಗ್ಸಾಂಡರ್‌ ಡುಗಿನ್‌ ಅವರು ‌ʻಪುಟಿನ್‌ ಬ್ರೈನ್ʼ (ಪುಟಿನ್‌ ಮಿದುಳು) ಎಂದೇ ಹೆಸರಾದವರು. ರಷ್ಯಾ ಮಾತನಾಡುವ ಪ್ರದೇಶಗಳ ಏಕೀಕರಣವನ್ನು ಡುಗಿನ್‌ ನಿರಂತರವಾಗಿ ಪ್ರತಿಪಾದಿಸುತ್ತಿದ್ದವರು. ಉಕ್ರೇನ್‌ನಲ್ಲಿ ಮಾಸ್ಕೋದ ಕಾರ್ಯಾಚರಣೆಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದರು.

    ಉಕ್ರೇನಿಯನ್ ಆಡಳಿತ ಭಯೋತ್ಪಾದಕರು ಅಲೆಕ್ಸಾಂಡರ್ ಡುಗಿನ್ ಅವರ ಹತ್ಯೆಗೆ ಪ್ರಯತ್ನಿಸಿದ್ದರು. ಆದರೆ ಅವರ ಮಗಳು ಬಲಿಯಾಗಿದ್ದಾಳೆ ಎಂದು ಡಿಎನ್‌ಆರ್‌ ಮುಖ್ಯಸ್ಥ ಡೆನಿಸ್ ಪುಶಿಲಿನ್ ಟೆಲಿಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸ್ಫೋಟಕ್ಕೆ ಬಳಸಿದ್ದು 100 ರಿಂದ 150 ಕೆಜಿ RDX- 7 ಶಂಕಿತರ ವಶಕ್ಕೆ..!

    ಸ್ಫೋಟಕ್ಕೆ ಬಳಸಿದ್ದು 100 ರಿಂದ 150 ಕೆಜಿ RDX- 7 ಶಂಕಿತರ ವಶಕ್ಕೆ..!

    ಪುಲ್ವಾಮ: ಜಮ್ಮು-ಕಾಶ್ಮೀರದ ಪುಲ್ವಾಮಾದ ಅವಂತಿಪೋರದಲ್ಲಿ ಆತ್ಮಾಹುತಿ ದಾಳಿಗೆ 44 ಯೋಧರು ವೀರಮರಣವನ್ನಪ್ಪಿದ್ದಾರೆ. ಆದರೆ 44 ಯೋಧರನ್ನು ಬಲಿಪಡೆದ ರಕ್ತಪಿಪಾಸುಗಳ ದುಷ್ಕೃತ್ಯದ ಹಿಂದಿನ ಪ್ಲಾನ್ ಈಗ ಒಂದೊಂದಾಗಿ ಹೊರಬರ್ತಿದೆ. ಈ ಪಾಪ ಕೃತ್ಯದ ಮಾಸ್ಟರ್ ಮೈಂಡ್ ಜೈಷ್-ಎ-ಮೊಹಮ್ಮದ್ ಉಗ್ರ ಸಂಘಟನೆಯ ಕಮಾಂಡರ್ ಅಬ್ದುಲ್ ರಶೀದ್ ಘಾಝಿ. ಈತನೇ ಈ ದಾಳಿಯನ್ನು ಕಾರ್ಯರೂಪಕ್ಕೆ ತಂದಿದ್ದು ಅಂತಾ ಗುಪ್ತಚರ ಇಲಾಖೆ ಎಂಬ ಮಾಹಿತಿಗಳು ಲಭ್ಯವಾಗಿದೆ.

    ಅಫ್ಘಾನಿಸ್ತಾನದಲ್ಲಿ ತರಬೇತುಗೊಂಡಿದ್ದ ಈತ ಸುಧಾರಿತ ಸ್ಫೋಟಕ ತಯಾರಿಕೆಯಲ್ಲಿ ಹೆಚ್ಚು ಪರಿಣಿತನಾಗಿದ್ದರಿಂದ ಪುಲ್ವಾಮಾ ಸ್ಫೋಟದ ಜವಾಬ್ದಾರಿ ಈತನಿಗೆ ನೀಡಲಾಗಿತ್ತು. ಎನ್‍ಎಸ್‍ಜಿ ಮತ್ತು ಎನ್‍ಐಎ ಮಾಹಿತಿ ಪ್ರಕಾರ ಸ್ಫೋಟಕ್ಕೆ ಉಗ್ರರು ಬಳಸಿದ್ದು ಬರೋಬ್ಬರಿ 100 ರಿಂದ 150ಕೆಜಿ ಆರ್ ಡಿಎಕ್ಸ್. ಇದರಲ್ಲಿ ಹರಿತ ಕಬ್ಬಿಣದ ಚೂರುಗಳನ್ನು ಬಳಕೆ ಮಾಡಲಾಗಿತ್ತು. ಈ ಬಗ್ಗೆ ಎನ್‍ಎಸ್‍ಜಿ ಮತ್ತು ಎನ್‍ಐಎ ಸ್ಯಾಂಪಲ್ ಸಂಗ್ರಹಿಸಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಿದೆ.

    ಕಾಕಪೋರ ಸಂಪರ್ಕಿಸುವ ಕಚ್ಚಾ ರಸ್ತೆ ಮೂಲಕ ಆತ್ಮಾಹುತಿ ಬಾಂಬರ್ ಬರುತ್ತಿದ್ದ. ಈತ ಸೆಡಾನ್ ಕಾರ್ ನಲ್ಲಿ ಬಂದು ಸರತಿ ಸಾಲಿನಲ್ಲಿ ಬರುತ್ತಿದ್ದ ಯೋಧರ ಐದನೇ ವಾಹನದ ಎಡಭಾಗಕ್ಕೆ ಡಿಕ್ಕಿ ಹೊಡೆದಿದ್ದಾನೆ. ಸೆಡಾನ್ ಕಾರ್ ಡಿಕ್ಕಿ ಹೊಡೆಯುತ್ತಲೇ 150 ಮೀಟರ್ ವ್ಯಾಪ್ತಿಯಲ್ಲಿ ಆರ್ ಡಿಎಕ್ಸ್ ಸ್ಫೋಟಗೊಂಡಿದೆ. ಪರಿಣಾಮ 80 ಮೀಟರ್ ದೂರದವರೆಗೂ ಯೋಧರ ದೇಹಗಳು ಚೂರು ಚೂರಾಗಿ ಹಾರಿ ಬಿದ್ದಿದೆ. ಸ್ಫೋಟದ ತೀವ್ರತೆಗೆ ಸುಮಾರು 10 ಕಿ.ಮೀ. ಶಬ್ದ ಕೇಳಿತ್ತು. ಸುತ್ತಮುತ್ತ ಪ್ರದೇಶದಲ್ಲಿ ಭೂಕಂಪದ ಅನುಭವವಾಗಿತ್ತು ಅಂತ ಸ್ಥಳೀಯರು ಹೇಳಿದ್ದಾರೆ.

    ದಾಳಿಗೆ ಸಹಕರಿಸಿದ ಆರೋಪದ ಮೇಲೆ ಪುಲ್ವಾಮಾ ಮತ್ತು ಆವಂತಿಪೋರಾದಲ್ಲಿ 7 ಮಂದಿ ಶಂಕಿತರನ್ನ ವಶಕ್ಕೆ ಪಡೆಯಲಾಗಿದೆ. ಮೊದಲು ದಕ್ಷಿಣದ ಕಾಶ್ಮೀರದ ಮಿಡೂರದಲ್ಲಿ ಜೈಷ್ ಉಗ್ರ ಕಮ್ರಾನ್ ನೇತೃತ್ವದಲ್ಲಿ ಭಯಾನಕ ಕೃತ್ಯದ ಸಂಚು ರೂಪಿಸಲಾಗಿತ್ತು. ಆದ್ರೆ ಅದು ವಿಫಲಗೊಂಡಿತ್ತು. ಒಟ್ಟಿನಲ್ಲಿ ಸ್ಫೋಟದ ಹಿಂದಿರುವ ಪಾಕ್ ಸಂಚಿಗೆ ವಿಶ್ವದಾದ್ಯಂತ ಆಕ್ರೋಶ ವ್ಯಕ್ತವಾಗ್ತಿದೆ. ಭಾರತದೆಲ್ಲೆಡೆ ಪ್ರತಿಭಟನೆ ನಡೆಯುತ್ತಿದೆ.

    https://www.youtube.com/watch?v=SJLdZhK9wTU

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಭದ್ರತಾ ಪಡೆಗೆ ಹೊಸ ತಲೆನೋವಾದ ಕಾರ್ ಬಾಂಬ್!

    ಭದ್ರತಾ ಪಡೆಗೆ ಹೊಸ ತಲೆನೋವಾದ ಕಾರ್ ಬಾಂಬ್!

    ಬೆಂಗಳೂರು: ಕಾರ್ ಬಾಂಬ್.. ವಿಬಿಐಇಡಿ.. ಇದು ಕಣಿವೆ ರಾಜ್ಯದ ಭದ್ರತಾ ಪಡೆಗೆ ಹೊಸ ತಲೆನೋವು ಹುಟ್ಟುಹಾಕಿದೆ. ಇಷ್ಟು ದಿನ ಬಂದೂಕು ಹಿಡಿದು ಅಟ್ಟಹಾಸ ಮಾಡುತ್ತಿದ್ದ ದುಷ್ಟ ಉಗ್ರರು ಈಗ ಈ ಹೊಸ ಮಾರ್ಗವನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಮೂಲಕ ದೊಡ್ಡ ಪ್ರಮಾಣದಲ್ಲಿ ರಕ್ತ ಹರಿಸಿದ್ದಾರೆ. ಗುರುವಾರ ಪುಲ್ವಾಮಾದಲ್ಲಿ ನಡೆದ ದಾಳಿಯೇ ಇದಕ್ಕೆ ಸಾಕ್ಷಿ. ಅಷ್ಟಕ್ಕೂ ಈ ಕಾರ್ ಬಾಂಬ್ ದಾಳಿ ಅಂದ್ರೇನು..? ಅದು ಹೇಗೆ ಸ್ಫೋಟಗೊಳ್ಳುತ್ತೆ ಎಂಬ ಮಾಹಿತಿ ಇಲ್ಲಿದೆ

    ಕಾರ್ ಬಾಂಬ್: ವಾಹನಗಳ ಮುಖಾಂತರ ಐಇಡಿ ದಾಳಿ ಮಾಡುವುದನ್ನು ಕಾರ್ ಬಾಂಬ್ ಎಂದು ಕರೆಯಲಾಗುತ್ತದೆ. ಕಾರ್ ಪಾರ್ಕಿಂಗ್ ಮಾಡಿಯೂ ಸ್ಫೋಟಿಸಬಹುದು. ಸ್ಫೋಟಕಗಳನ್ನು ಕಾರಿನಲ್ಲಿ ತುಂಬಿಕೊಂಡು ಆತ್ಮಾಹುತಿ ದಾಳಿ ನಡೆಸಬಹುದು. ವಾಹನ ಮುಂಭಾಗ ಅಥವಾ ಹಿಂಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಲೋಡ್ ಮಾಡಲಾಗಿರುತ್ತದೆ. ವಾಹನ ಡಿಕ್ಕಿಯಾದ ತಕ್ಷಣವೇ ಸ್ಫೋಟಕಗಳು ಸ್ಫೋಟಗೊಳ್ಳುವಂತ ವಿನ್ಯಾಸ ಮಾಡಲಾಗಿರುತ್ತದೆ. ಅಫ್ಘಾನಿಸ್ಥಾನ, ಇಸ್ರೇಲ್‍ನಲ್ಲಿ ಹೆಚ್ಚಿನ ಕಾರ್ ಬಾಂಬ್ ದಾಳಿ ನಡೆದಿದ್ದು, ಪರಿಣಿತರ ಕೈಯಲ್ಲಿ ಮಾತ್ರ ಕಾರ್ ಬಾಂಬ್ ತಯಾರಿಸಲು ಸಾಧ್ಯವಿದೆ. ಐಇಡಿ ತುಂಬಾ ಮಾರಕವಾಗಿದ್ದರಿಂದ ಕಾರ್ ಬಾಂಬ್ ಗೆ ಉಗ್ರರನ್ನು ಇದನ್ನೇ ಬಳಸಿಕೊಳ್ಳಲು ಮುಂದಾಗುತ್ತಾರೆ.

    ಹೇಗೆ ಸ್ಫೋಟಗೊಳ್ಳುತ್ತೆ..? ಕಾರ್ ಬಾಂಬ್ ಸ್ಫೋಟ ಹೇಗೆ ನಡೆಯಬೇಕು ಎಂಬುದನ್ನು ಉಗ್ರರು ಪ್ಲಾನ್ ಮಾಡಿಕೊಂಡಿರುತ್ತಾರೆ. ಡ್ರೈವರ್ ಸೀಟ್‍ನ ಡೋರ್ ಓಪನ್ ಮಾಡುವಾಗ ಅಥವಾ ಎಕ್ಸಲೇಟರ್ ಹೆಚ್ಚಿಸಿದಾಗ ಅಥವಾ ಎಂಜಿನ್ ಆನ್, ಆಫ್ ಮಾಡುವಾಗ ಕಾರ್ ಬಾಂಬ್ ಸ್ಫೋಟಗೊಳ್ಳುವಂತೆ ವಿನ್ಯಾಸ ಮಾಡಲಾಗಿರುತ್ತದೆ. ಪಾರ್ಕಿಂಗ್ ದಾಳಿಯಲ್ಲಿ ಟೈಮರ್ ಸೆಟ್ ಮಾಡಲಾಗಿರುತ್ತದೆ.

    https://www.youtube.com/watch?v=8F-W6B8PpsI

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv