Tag: ಕಾರ್ ಡ್ರೈವಿಂಗ್‌

  • ಲಾಂಗ್‌ ಡ್ರೈವ್‌ಗೆ ಅಂತ ಕರೆದೊಯ್ದು ಚಲಿಸುತ್ತಿದ್ದ ಕಾರಿನಲ್ಲೇ ಬಾಲಕಿ ಮೇಲೆ ಅತ್ಯಾಚಾರ; ಇಬ್ಬರು ಅರೆಸ್ಟ್‌

    ಲಾಂಗ್‌ ಡ್ರೈವ್‌ಗೆ ಅಂತ ಕರೆದೊಯ್ದು ಚಲಿಸುತ್ತಿದ್ದ ಕಾರಿನಲ್ಲೇ ಬಾಲಕಿ ಮೇಲೆ ಅತ್ಯಾಚಾರ; ಇಬ್ಬರು ಅರೆಸ್ಟ್‌

    – ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಯವಾಗಿದ್ದ ಸ್ನೇಹಿತನಿಂದಲೇ ಕೃತ್ಯ

    ಭೋಪಾಲ್‌: ಮಧ್ಯಪ್ರದೇಶದ (Madhya Pradesh) ಗ್ವಾಲಿಯರ್‌ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ ಚಲಿಸುತ್ತಿದ್ದ ಕಾರಿನಲ್ಲೇ (Moving Car) 13 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿರುವ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಘಟನೆ ಸಂಬಂಧಿಸಿದ ಮೂವರು ಆರೋಪಿಗಳ ಪೈಕಿ ಇಬ್ಬರನ್ನು ಬಂಧಿಸಿದ್ದು, ಮತ್ತೊಬ್ಬ ಆರೋಪಿಗಾಗಿ ಹುಡುಕಾಟ ನಡೆದಿದೆ ಎಂದು ಪೊಲೀಸ್‌ (Gwalior Police) ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಮೀಸಲಾತಿ ವಿರೋಧಿಸಿ ಪ್ರತಿಭಟನೆ; ಘರ್ಷಣೆಯಲ್ಲಿ 105 ಮಂದಿ ಸಾವು – 300ಕ್ಕೂ ಹೆಚ್ಚು ಭಾರತೀಯರು ತವರಿಗೆ!

    ಇನ್‌ಸ್ಟಾ ಸ್ನೇಹಿತನಿಂದಲೇ ಕೃತ್ಯ:
    9ನೇ ತರಗತಿ ಓದುತ್ತಿರುವ ಬಾಲಕಿಗೆ ಸೋಷಿಯಲ್‌ ಮೀಡಿಯಾ ಇನ್‌ಸ್ಟಾಗ್ರಾಮ್‌ನಲ್ಲಿ ವ್ಯಕ್ತಿಯೊಬ್ಬ ಪರಿಚಯವಾಗಿದ್ದ. ಇಬ್ಬರೂ ಪರಸ್ಪರ ಚಾಟಿಂಗ್‌ ಮಾಡುತ್ತಿದ್ದರು. ಜೂನ್‌ 1ರಂದು ಇಬ್ಬರು ವ್ಯಕ್ತಿಗಳೊಂದಿಗೆ ಆರೋಪಿ ಬಾಲಕಿಯನ್ನ ಭೇಟಿಯಾಗಿದ್ದ. ಆಕೆಯ ಹಳ್ಳಿಯಲ್ಲೇ ಭೇಟಿಯಾಗಿ ಬಾಲಕಿಯನ್ನು ತನ್ನೊಂದಿಗೆ ಲಾಂಗ್‌ ಡ್ರೈವ್‌ ಬರುವಂತೆ ಕೇಳಿದ್ದ. ಬಾಲಕಿ ಬರಲಿಲ್ಲವೆಂದರೂ ಪದೇ ಪದೇ ಪೀಡಿಸಿದ್ದ. ಇದರಿಂದ ಬಾಲಕಿ ಆತನೊಂದಿಗೆ ಕಾರಿನಲ್ಲಿ ಹೊರಟಿದ್ದಳು. ಇದನ್ನೂ ಓದಿ: 1.6 ಕೋಟಿ ಮೌಲ್ಯದ 3 ಮನೆ, 3 ಕೋಟಿಯ 2 ಶೆಡ್ – ಮುದ್ದುಕುಮಾರ್ ಆಸ್ತಿ ಕಂಡು ಅಧಿಕಾರಿಗಳೇ ಸುಸ್ತು!

    ಕಾರಿನಲ್ಲಿ ಹೋಗುತ್ತಿದ್ದಾಗ ಮೂವರ ಪೈಕಿ ಓರ್ವ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಮತ್ತೊಬ್ಬ ಕಾರು ಓಡಿಸುತ್ತಿದ್ದಾಗ, ಇನ್ನೊಬ್ಬ ಕೃತ್ಯವನ್ನು ವೀಡಿಯೋ ಚಿತ್ರೀಕರಣ ಮಾಡಿದ್ದಾನೆ. ಇಷ್ಟಕ್ಕೆ ಸುಮನ್ನಾಗದ ಕಾಮುಕ ಆಕೆಯನ್ನು ಪದೇ ಪದೇ ಭೇಟಿಯಾಗಲು ಪೀಡಿಸಿದ್ದಾನೆ. ಬರದಿದ್ದರೆ, ವೀಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಹರಿಬಿಡುವುದಾಗಿ ಬೆದರಿಕೆಯನ್ನೂ ಹಾಕಿದ್ದಾನೆ. ಕೊನೆಗೆ ಬೇಸತ್ತು ಆಕೆ ಆರೋಪಿಗಳೊಂದಿಗೆ ಹೊರಡಲು ನಿರಾಕರಿಸಿದ ನಂತರ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಬಳಿಕ ಈ ವಿಷಯ ಕುಟುಂಬಸ್ಥರಿಗೆ ತಿಳಿದು ಬಾಲಕಿಯನ್ನು ವಿಚಾರಿಸಿದ್ದಾಗ ಅತ್ಯಾಚಾರ ನಡೆದಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

    ಸದ್ಯ ಪ್ರಕರಣದ ಮೂವರು ಆರೋಪಿಗಳ ಪೈಕಿ ಇಬ್ಬರನ್ನು ಬಂಧಿಸಲಾಗಿದ್ದು, 3ನೇ ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ. ಅಪರಾಧಕ್ಕೆ ಬಳಸಿದ ಮೊಬೈಲ್ ಫೋನ್ ಮತ್ತು ಕಾರನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಎಎಸ್ಪಿ) ನಿರಂಜನ್ ಶರ್ಮಾ ತಿಳಿಸಿದ್ದಾರೆ. ಇದನ್ನೂ ಓದಿ: ಮದ್ಯದ ಅಮಲಿನಲ್ಲಿ ಹಳಿ ಮೇಲೆ ಮಲಗಿದ ಯುವಕರು; ರೈಲು ಹರಿದು ಮೂವರ ದುರ್ಮರಣ

  • ಡ್ರೈವಿಂಗ್‌ ಕಲಿಯಲು ಹೋಗಿ, ಚಾಲಕ ಗೇರ್ ಬದಲಿಸುವ ಶೈಲಿಗೆ ಬೋಲ್ಡ್ ಆದ ಬ್ಯೂಟಿ

    ಡ್ರೈವಿಂಗ್‌ ಕಲಿಯಲು ಹೋಗಿ, ಚಾಲಕ ಗೇರ್ ಬದಲಿಸುವ ಶೈಲಿಗೆ ಬೋಲ್ಡ್ ಆದ ಬ್ಯೂಟಿ

    ಇಸ್ಲಾಮಾಬಾದ್: ಲವ್ ಸ್ಟೋರಿ (Love Story) ಎನ್ನುತ್ತಿದ್ದಂತೆ ಅನೇಕ ಸಿನಿಮಾ (Cinema) ಕಥೆಗಳು ಕಣ್ಣಮುಂದೆಯೇ ಹಾದುಹೋಗುತ್ತವೆ. ಅಲ್ಲಿ ಪ್ರತಿ ಹುಟ್ಟುವ ಕ್ಷಣಗಳು ಕಣ್ಣಿನಲ್ಲಿ ಸೆರೆಯಾಗುತ್ತವೆ. ಹಾಗೆಯೇ ಇಲ್ಲೊಬ್ಬಳು ಯುವತಿ ಕಾರು ಚಾಲಕ ಗೇರ್ ಬದಲಿಸುವ ಶೈಲಿಗೆ ಬೋಲ್ಡ್ ಆಗಿ, ಅವನನ್ನೇ ಮದುವೆಯಾಗಿದ್ದಾಳೆ.

    ಪಾಕಿಸ್ತಾನದ (Pakistan) 17ರ ಯುವತಿ, ತನಗೆ ವಾಹನ ಚಾಲನೆ (Car Driving) ಹೇಳಿಕೊಡುವ 21 ವರ್ಷದ ಚಾಲಕನನ್ನೇ ಮದುವೆಯಾಗಿದ್ದಾಳೆ. ಅದಕ್ಕೆ ಆತನ ಆಸ್ತಿ, ಜನಪ್ರಿಯತೆ, ದೇಹದಾರ್ಡ್ಯ, ಅಥವಾ ಆಕರ್ಷಕ ವ್ಯಕ್ತಿತ್ವ ಮುಂತಾದವು ಕಾರಣವಲ್ಲ. ಆತ ಕಾರಿನ ಗೇರ್ ಬದಲಿಸುವ ಶೈಲಿಗೆ ಪ್ರೀತಿಯಲ್ಲಿ (Love) ಬಿದ್ದು, ಮದುವೆಯಾಗಿದ್ದಾಳೆ. ಸಂದರ್ಶನವೊಂದರಲ್ಲಿ ಅವರು ತಮ್ಮ ಪ್ರೇಮ ಕಥೆಯನ್ನ (Love Story) ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಬಾಡಿಗೆ ತಾಯ್ತನ ಮೂಲಕ ಮಗ-ಸೊಸೆಯ ಮಗುವಿಗೆ ಜನ್ಮ ಕೊಟ್ಟ ಅಜ್ಜಿ

    17ರ ಹರೆಯದ ಖತೀಜಾ ಅವರ ತಂದೆ, ಮಗಳಿಗೆ ಕಾರು ಚಲಾಯಿಸುವುದನ್ನು ಕಲಿಸಿಕೊಡುವಂತೆ ಒಬ್ಬ ವ್ಯಕ್ತಿಯನ್ನು ನೇಮಿಸಿದ್ದರು. ಆದರೆ ಆಕೆ ಕಾರ್ ಡ್ರೈವಿಂಗ್‌ ಎಷ್ಟರಮಟ್ಟಿಗೆ ಕಲಿತಳೋ ಗೊತ್ತಿಲ್ಲ, ಪ್ರೀತಿಯ ಕಲೆಯನ್ನಂತೂ ಕರಗತ ಮಾಡಿಕೊಂಡಳು. ಆತ ಕಾರು ಚಲಾಯಿಸುವ ಶೈಲಿಗೆ ಕ್ಲೀನ್ ಬೋಲ್ಡ್ ಆಗಿ, ಕೊನೆಗೆ ಅವನನ್ನೇ ಮದುವೆಯಾಗಿದ್ದಾಳೆ. ಆದರೂ ಆಕೆ ಕಾರ್ ಡ್ರೈವಿಂಗ್‌ ಕಲಿಯಲೇ ಇಲ್ಲ. ಇದನ್ನೂ ಓದಿ: ವಿಮಾನದ ಸೀಟ್‌ನಲ್ಲಿ ಕುಳಿತು ಮೂತ್ರ ವಿಸರ್ಜನೆ ಮಾಡಿದ ವ್ಯಕ್ತಿಗೆ 1 ವರ್ಷ ಜೈಲು

    ಪ್ರತಿನಿತ್ಯ ಆಕೆ ಚಾಲನಾ ತರಬೇತಿಗೆ ಮಾತ್ರ ತಪ್ಪದೇ ಹಾಜರಾಗುತ್ತಿದ್ದಳು. ಅಲ್ಲಿ ಗೇರ್ ಬದಲಿಸುವುದು, ಕ್ಲಚ್ ಒತ್ತುವುದು, ಸ್ಟೀರಿಂಗ್ ಹಿಡಿಯುವುದು ಆಕೆಯ ತಲೆಗೆ ಹತ್ತಲಿಲ್ಲ. ನಂತರ ಇಬ್ಬರ ನಡುವೆ ಪ್ರೇಮ ಮೂಡಿತ್ತು. ಪ್ರತಿದಿನದ ಭೇಟಿಮಾಡಿ ನಡೆಸುತ್ತಿದ್ದ ಮಾತುಕತೆಯ ಸ್ವಾರಸ್ಯ ಇಬ್ಬರ ಪ್ರೀತಿಯನ್ನು ಮತ್ತಷ್ಟು ಗಟ್ಟಿಗೊಳಿಸಿತ್ತು.

    ಕಾರು ಓಡಿಸುವಾಗ ಆತ ಗೇರ್ ಬದಲಿಸುವುದನ್ನು ಕಂಡಾಗ, ಆತನ ಕೈ ಹಿಡಿದುಕೊಳ್ಳುವ ಆಸೆ ಆಕೆಯಲ್ಲಿ ಮೂಡುತ್ತಿತ್ತಂತೆ. ಕೊನೆಗೆ ಸತಿಪತಿಗಳಾಗಿ ಕೈ ಹಿಡಿದಿದ್ದಾರೆ.

    Live Tv
    [brid partner=56869869 player=32851 video=960834 autoplay=true]