Tag: ಕಾರ್ ಡ್ರೈವರ್

  • ಬೆಂಗಳೂರಿನಲ್ಲಿ ಕಾರ್ ಡ್ರೈವರ್‌ನ ಭೀಕರ ಕೊಲೆ – ಸ್ನೇಹಿತರಿಂದಲೇ ಹತ್ಯೆ ಶಂಕೆ

    ಬೆಂಗಳೂರಿನಲ್ಲಿ ಕಾರ್ ಡ್ರೈವರ್‌ನ ಭೀಕರ ಕೊಲೆ – ಸ್ನೇಹಿತರಿಂದಲೇ ಹತ್ಯೆ ಶಂಕೆ

    ಬೆಂಗಳೂರು: ಕಾರ್ ಡ್ರೈವರ್‌ನನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ (Bengaluru) ಮೈಸೂರು ರಸ್ತೆಯ ಬಾಪೂಜಿನಗರದಲ್ಲಿ (Bapujinagara) ನಡೆದಿದೆ.

    ಕೌಶಿಕ್ (25 ) ಕೊಲೆಯಾದ ದುರ್ದೈವಿ. ಮೃತ ಕೌಶಿಕ್ ಬ್ಯಾಟರಾಯನಪುರದಲ್ಲಿ ರೌಡಿಶೀಟರ್ ಆಗಿದ್ದ. 2020ರಲ್ಲಿ ಕೊಲೆ ಕೇಸ್ ಒಂದರಲ್ಲಿ ಕೌಶಿಕ್ ಎ8 ಆರೋಪಿಯಾಗಿ ಜೈಲು ಸೇರಿದ್ದ. ಬಳಿಕ ಜಾಮೀನಿನ ಮೂಲಕ ಹೊರಬಂದು, ಕ್ಯಾಬ್ ಓಡಿಸಿಕೊಂಡು ಜೀವನ ಸಾಗಿಸ್ತಿದ್ದ. ಇದನ್ನೂ ಓದಿ: ಮದ್ದೂರಿನಲ್ಲಿ ಗಣೇಶನಿಗೆ ಕಲ್ಲು – ಪ್ರತಿಭಟಿಸಿದ ಹಿಂದೂ ಕಾರ್ಯಕರ್ತರ ಮೇಲೆ ಲಾಠಿಚಾರ್ಜ್‌

     ಭಾನುವಾರ ರಾತ್ರಿ ಕೌಶಿಕ್, ಸ್ನೇಹಿತರೊಂದಿಗೆ ಪಾರ್ಟಿ ಮಾಡುತ್ತಿದ್ದ ವೇಳೆ ಜಗಳ ನಡೆದಿದೆ. ಬಳಿಕ ಜೊತೆಯಲ್ಲಿದ್ದ ಸ್ನೇಹಿತರೇ ಕೌಶಿಕ್‌ನನ್ನು ಹತ್ಯೆಗೈದಿದ್ದಾರೆ ಎನ್ನಲಾಗುತ್ತಿದೆ. ಮಧ್ಯರಾತ್ರಿ 2:30ರ ಸುಮಾರಿಗೆ ಆರೋಪಿಗಳು ಕೊಲೆ ಮಾಡಿ ಪರಾರಿಯಾಗಿದ್ದಾರೆ. ಇದನ್ನೂ ಓದಿ: ದೇಶ ಕಾಯೋ ಯೋಧನಿಂದಲೇ ಕೊಲೆ – ಡೀಸೆಲ್‌ ಸುರಿದು ಸಹೋದರನ ಹತ್ಯೆಗೈದ ಮೂವರು ಅರೆಸ್ಟ್

    ಘಟನಾ ಸ್ಥಳಕ್ಕೆ ಬ್ಯಾಟರಾಯನಪುರ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಬಳಿಕ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದ್ದಾರೆ. ಬ್ಯಾಟರಾಯನಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕಾರ್ ಡ್ರೈವರ್‌ಗೆ ಪಾಠ ಕಲಿಸಲು ಫೇಕ್ ಕಾಲ್ ಮಾಡಿದವ ಅರೆಸ್ಟ್ – ಅಸಲಿ ಕಾರಣವೇನು?

    ಕಾರ್ ಡ್ರೈವರ್‌ಗೆ ಪಾಠ ಕಲಿಸಲು ಫೇಕ್ ಕಾಲ್ ಮಾಡಿದವ ಅರೆಸ್ಟ್ – ಅಸಲಿ ಕಾರಣವೇನು?

    ನವದೆಹಲಿ: ಕಾರ್ ಡ್ರೈವರ್‌ಗೆ ಪಾಠ ಕಲಿಸಲು ಪೊಲೀಸರಿಗೆ ಫೇಕ್ ಕಾಲ್ ಮಾಡಿದವನನ್ನು ಅರೆಸ್ಟ್ ಮಾಡಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

    ದೆಹಲಿಯ ಮುಂಡ್ಕಾ ಪೊಲೀಸ್ ಠಾಣೆಗೆ ಕಾಲ್ ಮಾಡಿದ ಆರೋಪಿಯು, ತನ್ನ ಮೇಲೆ ಯಾರೂ ಪಿಸ್ತೂಲ್‍ನಿಂದ ಹಲ್ಲೆ ಮಾಡಲು ಬಂದಿದ್ದಾರೆ ಎಂದು ಪೊಲೀಸರಿಗೆ ನಕಲಿ ಕರೆ ಮಾಡಿದ್ದಾನೆ. ಈ ಹಿನ್ನೆಲೆ ಕಾಲ್‌ ಮಾಡಿದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಸೋಮವಾರ ಹೇಳಿದ್ದಾರೆ. ಇದನ್ನೂ ಓದಿ:  ಭಾರತದ ಗಡಿಯನ್ನು ಅಕ್ರಮವಾಗಿ ಪ್ರವೇಶಿದ್ದ ಪೋಲೆಂಡ್ ಪ್ರಜೆ ಅರೆಸ್ಟ್

    ಜುಲೈ 22 ರಂದು ಅರವಿಂದ್ ಕುಮಾರ್(39) ಬೈಕ್‍ನಲ್ಲಿ ಹೋಗುತ್ತಿದ್ದಾಗ ಕಾರೊಂದು ಕೊಚ್ಚೆಯ ಮೇಲೆ ಹರಿದಿದೆ. ಈ ವೇಳೆ ಪಕ್ಕದಲ್ಲೇ ಇದ್ದ ಅರವಿಂದ್ ಮೇಲೆ ಕೊಚ್ಚೆ ನೀರು ಬಿದ್ದಿದೆ. ಇದರಿಂದ ತನ್ನ ಬಟ್ಟೆ ಹಾಳು ಮಾಡಿದ್ದಕ್ಕಾಗಿ ಚಾಲಕನಿಗೆ ಪಾಠ ಕಲಿಸಲು, ಅವನು ಪೊಲೀಸರಿಗೆ ನಕಲಿ ಕರೆ ಮಾಡಿದ್ದಾನೆ ಎಂದು ಉಪ ಪೊಲೀಸ್ ಆಯುಕ್ತ(ಹೊರ) ಸಮೀರ್ ಶರ್ಮಾ ಹೇಳಿದ್ದಾರೆ.

    ಗ್ಯಾಸ್ ಏಜೆನ್ಸಿಯಲ್ಲಿ ಕೆಲಸ ಮಾಡುವ ಕುಮಾರ್, ಮುಂಡ್ಕ ಪೊಲೀಸ್ ಠಾಣೆಗೆ ಕರೆ ಮಾಡಿ ಕಾರು ಚಾಲಕ ತನ್ನ ಮೇಲೆ ಪಿಸ್ತೂಲ್‍ನಿಂದ ಹಲ್ಲೆ ಮಾಡಲು ಬಂದಿದ್ದಾನೆ ಎಂದು ಆರೋಪಿಸಿದ್ದಾನೆ. ಆದರೆ, ಪೊಲೀಸರು ಸ್ಥಳಕ್ಕೆ ತಲುಪಿದಾಗ ಕುಮಾರ್ ಅಲ್ಲಿ ಇರಲಿಲ್ಲ ಮತ್ತು ಅವರ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿತ್ತು ಎಂದು ವಿವರಿಸಿದ್ದಾರೆ. ಇದನ್ನೂ ಓದಿ: ಕಮರಿಗೆ ಬಿದ್ದ ಕಾರು: 5 ಸಾವು, ಇಬ್ಬರಿಗೆ ಗಂಭೀರ ಗಾಯ

    ಮರುದಿನ, ಪೊಲೀಸರು ಕುಮಾರ್‌ನನ್ನು ಸಂಪರ್ಕಿಸಿದ್ದು, ವಿಚಾರಣೆಯ ಮಾಡಿದ್ದಾರೆ. ಈ ವೇಳೆ, ತಾನು ಕಾರು ಚಾಲಕನಿಗೆ ಬುದ್ಧಿ ಕಲಿಸಲು ನಕಲಿ ಕರೆ ಮಾಡಿದ್ದೇನೆ ಎಂದು ಒಪ್ಪಿಕೊಂಡಿದ್ದಾನೆ.

    Live Tv
    [brid partner=56869869 player=32851 video=960834 autoplay=true]

  • ಬಸ್, ಕಾರು ಡಿಕ್ಕಿ – ಸ್ವಿಫ್ಟ್‌ನಲ್ಲಿದ್ದ 3 ಮಹಿಳೆಯರ ಜೊತೆ ಚಾಲಕ ಸಾವು

    ಬಸ್, ಕಾರು ಡಿಕ್ಕಿ – ಸ್ವಿಫ್ಟ್‌ನಲ್ಲಿದ್ದ 3 ಮಹಿಳೆಯರ ಜೊತೆ ಚಾಲಕ ಸಾವು

    ದಾವಣಗೆರೆ: ಕೆಎಸ್‍ಆರ್‌ಟಿಸಿ  ಬಸ್ ಹಾಗೂ ಸ್ವಿಫ್ಟ್ ಕಾರ್ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು,  ಕಾರ್‌ನಲ್ಲಿದ್ದ  3 ಜನ ಮಹಿಳೆಯರ ಜೊತೆ ಚಾಲಕ ಸಾವನ್ನಪ್ಪಿದ ಘಟನೆ ನ್ಯಾಮತಿ ತಾಲೂಕಿನ ಸವಳಂಗ ಬಳಿ ನಡೆದಿದೆ.

    ಕಾರು ಚಾಲಕ ಸುನಿಲ್(30), ದ್ರಾಕ್ಷಾಯಿಣಮ್ಮ(40), ಸುಮಾ(45), ಶಾರದಮ್ಮ(65) ಮೃತ ದುರ್ದೈವಿಗಳು. ಮೃತರು ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಏಡೇಹಳ್ಳಿ ಗ್ರಾಮದ ನಿವಾಸಿಗಳಾಗಿದ್ದು, ನ್ಯಾಮತಿ ತಾಲೂಕಿನ ಹಳೇಜೋಗ ಗ್ರಾಮದಲ್ಲಿ ಕಾರ್ಯಕ್ರಮಯೊಂದಕ್ಕೆ ಆಗಮಿಸಿದ್ದರು ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಅತ್ಯಾಚಾರ ಕುರಿತ ರಮೇಶ್‌ ಕುಮಾರ್‌ ಹೇಳಿಕೆಗೆ ಕಾಂಗ್ರೆಸ್‌ ನಾಯಕರಿಂದಲೇ ಟೀಕೆ

    ಕಾರನಲ್ಲಿದ್ದ ಆಶಾ ಗಂಭೀರವಾಗಿ ಗಾಯಗೊಂಡಿದ್ದು, ಮೆಗ್ಗಾನ್ ಆಸ್ಪತ್ರೆ ದಾಖಲಾಗಿದ್ದಾರೆ. ಸ್ಥಳಕ್ಕೆ ನ್ಯಾಮತಿ ಠಾಣೆಯ ಸಿಪಿಐ ದೇವರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹಗಳನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಅಂಬುಲೆನ್ಸ್ ಮೂಲಕ ರವಾನೆ ಮಾಡಲಾಗಿದೆ. ಇದನ್ನೂ ಓದಿ:  ಶಾಲೆಯಲ್ಲಿ ಮೊಟ್ಟೆ ವಿತರಣೆ ಪರ ಬ್ಯಾಟ್ ಬೀಸಿದ: ರಘುಪತಿ ಭಟ್

  • ಓಲಾ ಹತ್ತಿದ್ದೇ ತಪ್ಪಾಯ್ತು, ಯುವತಿಗೆ ನರಕಯಾತನೆ ನೀಡಿದ ಡ್ರೈವರ್!

    ಓಲಾ ಹತ್ತಿದ್ದೇ ತಪ್ಪಾಯ್ತು, ಯುವತಿಗೆ ನರಕಯಾತನೆ ನೀಡಿದ ಡ್ರೈವರ್!

    ಬೆಂಗಳೂರು: ಓಲಾ ಹತ್ತಿದ ಯುವತಿಗೆ ಡ್ರೈವರ್ ಒಬ್ಬ ನರಕಯಾತನೆ ನೀಡಿರುವ ಘಟನೆ ಬೆಂಗಳೂರಿನ ಬೈಯಪ್ಪನಹಳ್ಳಿಯಲ್ಲಿ ನಡೆದಿದೆ.

    ಯುವತಿ ಬೈಯಪ್ಪನಹಳ್ಳಿಯ ಮಲ್ಲೇಶ್ ಪಾಳ್ಯ ಕಿಡ್ ಕ್ಯಾಸ್ಟಲ್‍ಗೆ ಹೋಗಲು ಓಲಾ ಬುಕ್ ಮಾಡಿದ್ದಾಳೆ. ಬುಕ್ ಮಾಡಿದ ಬಳಿಕ ಓಲಾ ತಡವಾಗಿ ಬಂದಿತ್ತು. ಈ ವೇಳೆ ತಡವಾಗಿದ್ದು ಯಾಕೆ ಎಂದು ಪ್ರಶ್ನೆ ಮಾಡಿದ್ದಕ್ಕೆ ಓಲಾ ಡ್ರೈವರ್ ಕಿರಿಕ್ ಮಾಡಿದ್ದಾನೆ.

    ಇಷ್ಟರ ನಡುವೆ ಮಲ್ಲೇಶ್ ಪಾಳ್ಯದಿಂದ ಕ್ಯಾಬ್ ಹೊರಟಿದೆ. ಅಷ್ಟರಲ್ಲಿ ಡ್ರೈವರ್ ಮತ್ತೆ ಕಿರಿಕ್ ಶುರು ಮಾಡಿದ್ದ. ಮಾತಿಗೆ ಮಾತು ಬೆಳಸಿದ ಕ್ಯಾಬ್ ಡ್ರೈವರ್, ಕಾರಿನ ಡೋರ್ ಲಾಕ್ ಮಾಡಿ ಕಾರಿನಲ್ಲೇ ಕುಳಿತುಕೊಳ್ಳುವಂತೆ ಒತ್ತಾಯಿಸಿದ್ದಾನೆ. ಹುಡುಗಿಯ ಕೈ ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ಯುವತಿ ಆರೋಪ ಮಾಡಿದ್ದಾಳೆ.

    ಯಾವಾಗ ಕ್ಯಾಬ್ ಡ್ರೈವರ್ ನ ಉದ್ಧಟತನ ಜಾಸ್ತಿ ಆಯ್ತೋ ಯುವತಿಗೆ ಬೇರೆ ದಾರಿ ಇಲ್ಲದೇ ಕಿರುಚಿಕೊಂಡಿದ್ದಾಳೆ. ಯುವತಿಯ ಚೀರಾಟ ಕೇಳಿಸಿಕೊಂಡ ಸಾರ್ವಜನಿಕರು ಕಾರನ್ನು ನಿಲ್ಲಿಸಿ ಯುವತಿಯನ್ನು ರಕ್ಷಣೆ ಮಾಡಿದ್ದಾರೆ. ಜೊತೆಗೆ ಕ್ಯಾಬ್ ಚಾಲಕನಿಗೆ ಬುದ್ಧಿವಾದ ಹೇಳಿದ್ದಾರೆ.

    ಬಳಿಕ ಯುವತಿ ಕ್ಯಾಬ್‍ನ ಚಾಲಕನ ವಿರುದ್ಧ ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ.

  • ನಟಿ ಶೃತಿ ಮಾಜಿ ಕಾರು ಡ್ರೈವರ್ ಮಂಜುನಾಥ್ ಸಿಂಗ್ ಆತ್ಮಹತ್ಯೆ

    ನಟಿ ಶೃತಿ ಮಾಜಿ ಕಾರು ಡ್ರೈವರ್ ಮಂಜುನಾಥ್ ಸಿಂಗ್ ಆತ್ಮಹತ್ಯೆ

    – ಟವಲ್‍ನಲ್ಲಿ ನೇಣು ಹಾಕಿಕೊಂಡು ಸಾವು

    ನೆಲಮಂಗಲ: ಕಳೆದ ಎರಡುವರೆ ವರ್ಷಗಳ ಕಾಲ ನಟಿ ಶೃತಿ ಕಾರು ಡ್ರೈವರ್ ಆಗಿ ಕಾರ್ಯನಿರ್ವಹಿಸಿ, ಆರು ತಿಂಗಳ ಹಿಂದೆ ಕೆಲಸ ಬಿಟ್ಟ ಕಾರು ಚಾಲಕ ಮಂಜುನಾಥ್ ಸಿಂಗ್ ಇಂದು ಅನುಮಾನಾಸ್ಪದವಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

    ಬೆಂಗಳೂರು ಹೊರವಲಯ ಮಾಗಡಿ ರಸ್ತೆಯ ಫಾರೆಸ್ಟ್ ಗೇಟ್ ನಲ್ಲಿ ನೇಣಿಗೆ ಶರಣಾಗಿರುವ ಮಂಜುನಾಥ್ ಸಿಂಗ್, ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಬೆಳವಾಡಿ ಗ್ರಾಮದ ನಿವಾಸಿಯಾಗಿದ್ದು, ಕಳೆದ 15 ವರ್ಷಗಳಿಂದ ಮಾಗಡಿ ರಸ್ತೆಯ ಮಾಚೋಹಳ್ಳಿಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.

    ಕಳೆದ ಕೆಲವು ವರ್ಷಗಳಿಂದ ನಟಿ ಶೃತಿ ಮತ್ತು ಶರಣ್ ಕಾರ್ ಡ್ರೈವರ್ ಆಗಿದ್ದು ಮಂಜುನಾಥ್, ನಿನ್ನೆ ರಾತ್ರಿ ಸ್ನೇಹಿತರೊಂದಿಗೆ ಕಡಬಗೆರೆಯಲ್ಲಿ ಪಾರ್ಟಿಗೆ ಹೋಗಿದ್ದ ಎನ್ನಲಾಗಿದೆ. ನಂತರ ಟವಲ್ ನಲ್ಲಿ ಮರಕ್ಕೆ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಮಂಜುನಾಥ್ ಪತ್ತೆಯಾಗಿದ್ದಾನೆ.

    ಮಂಜುನಾಥ್ ಸಾವಿನ ಬಗ್ಗೆ ಹಲವು ಅನುಮಾನವನ್ನು ಸಂಬಂಧಿಗಳು ವ್ಯಕ್ತಪಡಿಸುತ್ತಿದ್ದಾರೆ. ಮಂಜುನಾಥ್ ಸಿಂಗ್ ಬಾವ ದೀಪಕ್ ಸಿಂಗ್ ಮಾತನಾಡಿ, ಮಂಜುನಾಥ್ ಸಾಯುವ ವ್ಯಕ್ತಿಯಲ್ಲ. ಪೊಲೀಸರಿಂದ ಸೂಕ್ತ ತನಿಖೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.

    ಈ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

  • ಪ್ರಕಾಶ್ ರೈ ಎಲ್ಲಿ ಉಳಿದುಕೊಳ್ಳುತ್ತಾನೆ- ಕಾರ್ ಚಾಲಕನಿಗೆ ಧಮ್ಕಿ

    ಪ್ರಕಾಶ್ ರೈ ಎಲ್ಲಿ ಉಳಿದುಕೊಳ್ಳುತ್ತಾನೆ- ಕಾರ್ ಚಾಲಕನಿಗೆ ಧಮ್ಕಿ

    ಮಂಗಳೂರು: ನಟ ಪ್ರಕಾಶ್ ರೈ ಅವರಿಗೆ ನಗರದ ವಿಮಾನ ನಿಲ್ದಾಣದಲ್ಲಿ ನಾಲ್ವರು ಬೆದರಿಕೆ ಹಾಕಿರೋ ಘಟನೆಯೊಂದು ನಡೆದಿರುಬವ ಬಗ್ಗೆ ಬೆಳಕಿಗೆ ಬಂದಿದೆ.

    ರಾತ್ರಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಕಾರ್ ಡ್ರೈವರ್ ಬಳಿ ಬಂದ ನಾಲ್ವರು ಕೆಲ ಪ್ರಶ್ನೆಗಳನ್ನು ಹಾಕಿದ್ದಾರೆ. ಪ್ರಕಾಶ್ ರೈ ಎಲ್ಲಿ ಉಳಿದುಕೊಳ್ಳುತ್ತಾರೆ ಅಂತ ಹೇಳಿ ಕಾರ್ ಡ್ರೈವರ್ ಗೆ ಧಮ್ಕಿ ಹಾಕಿದ್ದಾರೆ. ಪೊಲೀಸರು ಬಂದ ಬಳಿಕ ಕೂಡಲೇ ಅಲ್ಲಿಂದ ಕಾಲ್ಕಿತ್ತಿದ್ದಾರೆ. ಇದರಿಂದ ಇಲ್ಲಿ ನನಗೆ ಆತಂಕದ ವಾತಾವರಣ ನಿರ್ಮಾಣವಾಗಿದೆ ಅಂತ ರೈ ಮಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ನಡೆದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಹೇಳಿದ್ದಾರೆ.

    ನನ್ನ ಹೇಳಿಕೆಯನ್ನು ಸದಾ ತಿರುಚಲಾಗುತ್ತದೆ. ನಾನು ರಾಜಕೀಯ ಪಕ್ಷದಿಂದ ಬೆಳೆದಿಲ್ಲ. ರಾಜಕೀಯದಲ್ಲಿ ಆತಂಕದ ವಾತಾವರಣ ಇದೆ. ನಾನು ಆಳುವ ಪಕ್ಷದ ವಿರೋಧಿಯಾಗಿದ್ದೇನೆ. ಒಬ್ಬ ಪ್ರಜೆ, ಪ್ರಜೆಯಾಗಿರೋದಕ್ಕೆ ಸಾಧ್ಯವಾಗುತ್ತಿಲ್ಲ. ಪ್ರಶ್ನಿಸುವ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ. #just asking ಅಭಿಯಾನ ನಿರಂತರವಾಗಿರುತ್ತದೆ ಅಂತ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಪ್ರತಾಪ್ ಸಿಂಹ ಜೊತೆ ದ್ವೇಷವಿಲ್ಲ: ನಾನು ಯಾವುದೇ ಚುನಾವಣಾ ಪ್ರಚಾರಕ್ಕೆ ಹೋಗಲ್ಲ. ಆದ್ರೆ ಕೆಲ ಪಕ್ಷಗಳ ವಿರುದ್ಧ ಮಾತನಾಡುತ್ತೇನೆ. ಬಿಜೆಪಿ ಕೋಮುವಾದದ ಬಗ್ಗೆ ಮಾತನಾಡ್ತೇನೆ. ಬಿಜೆಪಿ ಕೋಮುವಾದ ದೇಶದ ಸಾಮರಸ್ಯ ಹಾಳು ಮಾಡುತ್ತದೆ. ಸಂಸದ ಪ್ರತಾಪ್ ಸಿಂಹ ಬಗ್ಗೆ ನನಗೆ ದ್ವೇಷ ಇಲ್ಲ. ಅವರು ಮುಖವಾಡ ಹಾಕಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸೊಂಟದ ಕೆಳಗಿನ ಭಾಷೆ ಬಳಕೆ ಮಾಡ್ತಾರೆ. ನಾನು ಒಬ್ಬ ಪ್ರಜೆಯಾಗಿ ಪ್ರತಾಪ್ ಸಿಂಹ ವಿರುದ್ಧ ಕೇಸ್ ಹಾಕಿದ್ದೇನೆ ಅಂತ ಅವರು ಹೇಳಿದ್ರು.

    ಆರೋಪಿಗಳ ಖುಲಾಸೆಗೆ ವಿಷಾದ: ಪಬ್ ದಾಳಿ ಆರೋಪಿಗಳಿಗೆ ಕೋರ್ಟ್ ಖುಲಾಸೆ ವಿಚಾರದ ಕುರಿತು ಇದೇ ವೇಳೆ ಮಾತನಾಡಿದ ಅವರು, ಕೋರ್ಟ್ ಸಾಕ್ಷ್ಯಾಧಾರ ಇಲ್ಲ ಅಂತ ಹೇಳಿದೆ. ಕಾರ್ಯಕರ್ತರು ಹೊಡೆದಿರುವ ವಿಡಿಯೋ ಕೂಡಾ ಇದೆ. ಕೋರ್ಟ್ ಆಜ್ಞೆ ಜನಸಾಮಾನ್ಯರನ್ನು ಗೊಂದಲ ಮಾಡಿದೆ. ಕೋರ್ಟ್ ಆರ್ಡರ್ ಕೊಟ್ಟಿದ್ದು ನ್ಯಾಯನಾ? ಆಡಳಿತರೂಢ ಕಾಂಗ್ರೆಸ್ ಇದರ ಬಗ್ಗೆ ಪ್ರಶ್ನೆ ಮಾಡಬಹುದಿತ್ತು. ಪ್ರಶ್ನೆ ಮಾಡಿದ್ರೆ ವಿರೋಧಿಯಾಗ್ತಿವಿ ಎಂಬ ಭಯ ಇದೆ. ಕಾಂಗ್ರೆಸ್ ರಾಜಕೀಯ ಪ್ರದರ್ಶನ ಮಾಡುತ್ತಿದೆ ಅಂದ್ರು.