ಬೀದರ್: ಬೀದರ್ ಜಿಲ್ಲಾ ಪೊಲೀಸರು 43 ಲಕ್ಷಕ್ಕೂ ರೂ. ಅಧಿಕ ಮೌಲ್ಯದ ಬೈಕ್, ಚಿನ್ನಾಭರಣ ಇನ್ನಿತರ ವಸ್ತುಗಳನ್ನು ಜಪ್ತಿ ಮಾಡಿದ್ದು, ಭರ್ಜರಿ ಕಾರ್ಯಾಚರಣೆ ಮಾಡುವ ಮೂಲಕ ಕಳ್ಳರಿಗೆ ಬಿಗ್ ಶಾಕ್ ನೀಡಿದ್ದಾರೆ.ಇದನ್ನೂ ಓದಿ: ಶೂಟಿಂಗ್ ಮುಗಿಸಿದ ಅರ್ಜುನ್ ಜನ್ಯ ನಿರ್ದೇಶನದ ಚೊಚ್ಚಲ ಸಿನಿಮಾ
35 ಲಕ್ಷ ರೂ. ಅಧಿಕ ಮೌಲ್ಯದ ಬೈಕ್, 5 ಲಕ್ಷ 95 ಸಾವಿರ ರೂ. ಮೌಲ್ಯದ ಚಿನ್ನಧಾಭರಣ, 1 ಲಕ್ಷ 50 ಸಾವಿರ ರೂ. ಮೌಲ್ಯದ ಕಳ್ಳತನವಾಗಿದ್ದ ಕುರಿಗಳು, 21 ಸಾವಿರ ರೂ. ಮೌಲ್ಯ ಬೆಳ್ಳಿ ಹಾಗೂ 40 ಸಾವಿರ ರೂ. ಮೌಲ್ಯದ ನೀರಿನ ಪಂಪಸೆಟ್‌ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಜಿಲ್ಲೆಯಾದ್ಯಂತ 9 ಠಾಣೆಯಲ್ಲಿ ದಾಖಲಾಗಿದ್ದ 20 ಪ್ರಕರಣಗಳಲ್ಲಿ ಒಟ್ಟು 25 ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ. ಮೊದಲ ಬಾರಿಗೆ ಪೊಲೀಸರು 35 ಲಕ್ಷ ರೂ. ಮೌಲ್ಯದ ಬೈಕ್‌ಗಳನ್ನು ಜಪ್ತಿ ಮಾಡಿದ್ದು, ಈ ಮೂಲಕ ಅಂತರ ರಾಜ್ಯದಿಂದ ಬಂದು ಬೈಕ್ ಕಳ್ಳತನ ಮಾಡುವ ಖದೀಮರಿಗೆ ಬಿಗ್ ಶಾಕ್ ನೀಡಿದ್ದಾರೆ.ಇದನ್ನೂ ಓದಿ: ಹಂಸ ದಮಯಂತಿಯಂತೆ ಪೋಸ್ ಕೊಟ್ಟ ಹರ್ಷಿಕಾ
ನವದೆಹಲಿ: ಜಮ್ಮು ಮತ್ತು ಕಾಶ್ಮೀರದ (Jammu Kashmir) ಅನಂತ್‌ನಾಗ್ (Anantnag) ಜಿಲ್ಲೆಯಲ್ಲಿ ಭಯೋತ್ಪಾದಕರ (Terrorist) ವಿರುದ್ಧ ಕಳೆದ ಮೂರು ದಿನಗಳಿಂದ ಕಾರ್ಯಾಚರಣೆ ನಡೆಯುತ್ತಿದೆ. ಈ ಕಾರ್ಯಾಚರಣೆ (Operation) ನಡೆಸಲು ತೆರಳಿದ್ದ ಕರ್ನಲ್ ಮನ್‌ಪ್ರೀತ್ ಸಿಂಗ್, ಮೇಜರ್ ಆಶಿಶ್ ಧೋಂಚಕ್ ಮತ್ತು ಪೊಲೀಸ್ ಉಪ ಅಧೀಕ್ಷಕ ಹಿಮಯುನ್ ಭಟ್ ಹುತಾತ್ಮರಾಗಿದ್ದಾರೆ. ಇದಾದ ಬಳಿಕವೂ ಭಯೋತ್ಪಾದಕರಿಗಾಗಿ ಮೂರು ದಿನದಿಂದ ತೀವ್ರ ಶೋಧ ನಡೆಯುತ್ತಿದ್ದು, ಮಿಷನ್ ಮಾತ್ರ ಪೂರ್ಣವಾಗುತ್ತಿಲ್ಲ.
ಈ ಮಿಷನ್ ವಿಳಂಬಕ್ಕೆ ದಟ್ಟವಾದ ಕಾಡು ಮತ್ತು ಆಳವಾದ ಕಂದಕ ಕಾರಣ ಎಂದು ತಿಳಿದು ಬಂದಿದೆ. ಭಯೋತ್ಪಾದಕರು ಅಡಗಿ ಕುಳಿತಿರುವ ಪ್ರದೇಶ ದಟ್ಟ ಅರಣ್ಯದಿಂದ ಕೂಡಿದೆ. ಭಯೋತ್ಪಾದಕರು ಬೆಟ್ಟದ ಮೇಲಿರುವ ಗುಹೆಯೊಂದರಲ್ಲಿ ಅಡಗಿಕೊಂಡಿರುವುದರಿಂದ ಮೇಲಿನಿಂದ ಕೆಳ ಭಾಗದಲ್ಲಿ ನಡೆಯುತ್ತಿರುವ ಘಟನೆಗಳನ್ನು ಗಮನಿಸಿ ಪ್ರತಿದಾಳಿ ಮಾಡುತ್ತಿದ್ದಾರೆ. ಇದನ್ನೂ ಓದಿ: ವಾಕ್ ಸ್ವಾತಂತ್ರ್ಯ ಧರ್ಮದ ವಿರುದ್ಧ ದ್ವೇಷ ಭಾಷಣ ಆಗಬಾರದು: ಮದ್ರಾಸ್ ಹೈಕೋರ್ಟ್
ಬೆಟ್ಟದ ತುದಿಗೆ ತೆರಳಲು ಸೀಮಿತವಾದ ಸ್ಥಳವಿರುವ ಹಿನ್ನೆಲೆ ಅದೇ ಮಾರ್ಗದ ಮೂಲಕ ಚಲಿಸಬೇಕಿದೆ. ಇಲ್ಲಿ ಒಂದು ಕಡೆ ಅರಣ್ಯ, ಮತ್ತೊಂದು ಕಡೆ ಆಳವಾದ ಕಂದಕಗಳಿರುವ ಹಿನ್ನೆಲೆ ಸೈನಿಕರ ಸಂಚಾರ ತ್ರಾಸದಾಯವಾಗಿದೆ. ಭದ್ರತಾ ಪಡೆ ಸಿಬ್ಬಂದಿ ಶಸ್ತ್ರಾಸ್ತ್ರ ಮದ್ದುಗುಂಡು ಅಥವಾ ಆಹಾರದ ಕೊರತೆಯಲ್ಲಿ ಭಯೋತ್ಪಾದಕರ ವಿರುದ್ಧ ಹೋರಾಡುತ್ತಿದ್ದಾರೆ. ಇದನ್ನೂ ಓದಿ: 39 ವರ್ಷದ ವ್ಯಕ್ತಿಗೆ ಪಾಸಿಟಿವ್- ಕೇರಳದಲ್ಲಿ ನಿಫಾ ಪ್ರಕರಣ 6ಕ್ಕೆ ಏರಿಕೆ
ದಾಳಿ ಆರಂಭ:
ಮಂಗಳವಾರ ರಾತ್ರಿ ಕೋಕರ್‌ನಾಗ್‌ನ ಗದುಲ್ ಅರಣ್ಯದಲ್ಲಿ ಉಗ್ರರು ಅಡಗಿರುವ ಬಗ್ಗೆ ಭದ್ರತಾ ಪಡೆಗಳಿಗೆ ಮೊದಲು ಗುಪ್ತಚರ ಮಾಹಿತಿ ಸಿಕ್ಕಿದ ಬಳಿಕ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು. ಆದರೆ ಭಯೋತ್ಪಾದಕರು ಪತ್ತೆಯಾಗಲಿಲ್ಲ. ನಂತರ ಸೇನೆ ಮತ್ತು ಪೊಲೀಸ್ ಸಿಬ್ಬಂದಿಯ ಜಂಟಿ ತಂಡಕ್ಕೆ ಭಯೋತ್ಪಾದಕರು ಬೆಟ್ಟದ ಮೇಲಿರುವ ಮಾಹಿತಿ ದೊರೆಯಿತು. ಇದನ್ನೂ ಓದಿ: ಸೇಡು ತೀರಿಸಿಕೊಳ್ಳಲು ಮೊಮ್ಮಗಳನ್ನು ಸೇನೆಗೆ ಸೇರಿಸ್ತೀನಿ- ಆಶೀಶ್ ಢೋನ್‍ಚಕ್ ತಾಯಿ
ಬುಧವಾರ ಮುಂಜಾನೆ, ಭದ್ರತಾ ಪಡೆಗಳು ಜಂಟಿ ಕಾರ್ಯಾಚರಣೆ ಮೂಲಕ ಭಯೋತ್ಪಾದಕರ ಮೇಲೆ ದಾಳಿ ಮಾಡಲು ನಿರ್ಧರಿಸಿದವು. ಬೆಟ್ಟದ ತುದಿಗೆ ಹೋಗಲು ಪಡೆಗಳು ತೆಗೆದುಕೊಳ್ಳಬೇಕಾದ ಮಾರ್ಗವು ಸಾಕಷ್ಟು ಸವಾಲಿನದ್ದಾಗಿತ್ತು. ಕಿರಿದಾದ ಮಾರ್ಗದ ಮೂಲಕ ಸಿಬ್ಬಂದಿಗಳು ಬೆಟ್ಟ ಹತ್ತಲು ಪ್ರಾರಂಭಿಸಿದರು. ರಾತ್ರಿಯಾಗುತ್ತಿದ್ದಂತೆ ಭದ್ರತಾ ಪಡೆಗಳು ಇನ್ನಷ್ಟು ಸಮಸ್ಯೆಯನ್ನು ಎದುರಿಸಿತು. ಇದನ್ನೂ ಓದಿ: ಭಯೋತ್ಪಾದಕರ ಗುಂಡೇಟಿನಿಂದ ಯೋಧ ಹುತಾತ್ಮ; ಸೆಲ್ಯೂಟ್ ಮಾಡಿ ತಂದೆಗೆ ಅಂತಿಮ ನಮನ ಸಲ್ಲಿಸಿದ ಪುಟ್ಟ ಮಕ್ಕಳು
ಸವಾಲಿನ ನಡುವೆ ಬೆಟ್ಟದ ಮೇಲಿರುವ ಅಡುಗುತಾಣ ಗುಹೆಯನ್ನು ಭದ್ರತಾ ಪಡೆಗಳು ಸಮೀಪಿಸುತ್ತಿದ್ದಂತೆ ಭಯೋತ್ಪಾದಕರು ದಾಳಿ ಆರಂಭಿಸಿದರು. ಕಿರಿದಾದ ಮಾರ್ಗದಲ್ಲಿದ್ದ ಭದ್ರತಾ ಪಡೆಗಳು ಕಂದಕಗಳಿಗೆ ಬೀಳುವ ಸಾಧ್ಯತೆ ಎದುರಿಸಿದರು. ಪ್ರತಿದಾಳಿ ಮಾಡಲು ಸೂಕ್ತವಾದ ಅವಕಾಶ ಇಲ್ಲದಂತಾಯಿತು. ಈ ವೇಳೆ ಕರ್ನಲ್ ಮನ್‌ಪ್ರೀತ್ ಸಿಂಗ್, ಮೇಜರ್ ಆಶಿಶ್ ಧೋಂಚಕ್ ಮತ್ತು ಪೊಲೀಸ್ ಉಪ ಅಧೀಕ್ಷಕ ಹಿಮಯುನ್ ಭಟ್ ಗುಂಡಿನ ದಾಳಿಗೆ ಗಾಯಗೊಂಡು ಬಳಿಕ ಸಾವನ್ನಪ್ಪಿದರು. ಇದನ್ನೂ ಓದಿ: ಸೇನೆ, ಉಗ್ರರ ನಡುವೆ ಗುಂಡಿನ ಚಕಮಕಿ- ಇದುವರೆಗೆ ನಾಲ್ವರು ಯೋಧರು ಹುತಾತ್ಮ
ಬೆಟ್ಟ ಸುತ್ತುವರಿದ ಭದ್ರತಾ ಪಡೆಗಳು:
ಎನ್‌ಕೌಂಟರ್ ಪ್ರಾರಂಭವಾಗಿ ಸುಮಾರು 72 ಗಂಟೆಗಳು ಕಳೆದಿವೆ. ಭದ್ರತಾ ಪಡೆಗಳು ಬೆಟ್ಟವನ್ನು ಸುತ್ತುವರೆದಿವೆ. ಡ್ರೋನ್‌ಗಳನ್ನು ಬಳಸಿ ಸ್ಫೋಟಕಗಳನ್ನು ಬೀಳಿಸಲಾಗುತ್ತಿದೆ. ರಾಕೆಟ್ ಲಾಂಚರ್‌ಗಳನ್ನು ಬಳಸಲಾಗುತ್ತಿದೆ ಮತ್ತು ಸಿಬ್ಬಂದಿ ನಿರಂತರ ಗುಂಡು ಹಾರಿಸುತ್ತಿದ್ದಾರೆ. ಆದರೆ ಅದರ ಸವಾಲಿನ ಭೌಗೋಳಿಕತೆಯಿಂದಾಗಿ ಸೇನೆಯು ಈ ಪ್ರದೇಶದ ಪ್ರಾಬಲ್ಯವನ್ನು ಸಾಧಿಸಲು ಇನ್ನೂ ಸಾಧ್ಯವಾಗಿಲ್ಲ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಸೆ.18 ರಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ತುರ್ತು ಸಭೆ
ಸಾಮಾನ್ಯ ಭಯೋತ್ಪಾದಕರಿಲ್ಲ:
ಮೂಲಗಳ ಪ್ರಕಾರ ಭಯೋತ್ಪಾದಕರ ಸಂಖ್ಯೆ ಮೂರಕ್ಕಿಂತ ಹೆಚ್ಚಿರುವ ಸಾಧ್ಯತೆ ಇದೆ. ಈ ಪೈಕಿ ಕಳೆದ ವರ್ಷ ಲಷ್ಕರ್-ಎ-ತೊಯ್ಬಾಗೆ ಸೇರಿದ್ದ ಉಝೈರ್ ಖಾನ್ ಕೂಡ ಸೇರಿದ್ದಾನೆ ಎನ್ನಲಾಗಿದೆ. ಅಡಗಿರುವ ಭಯೋತ್ಪಾದಕರು ಇಡೀ ಪ್ರದೇಶದ ಮಾಹಿತಿಯನ್ನು ಹೊಂದಿದ್ದು, ಅದರ ಲಾಭ ಪಡೆಯುತ್ತಿದ್ದಾರೆ. ಸಾಮಾನ್ಯ ಭಯೋತ್ಪಾದಕರು ಇಷ್ಟು ದಿನ ಎನ್‌ಕೌಂಟರ್ ಅನ್ನು ವಿಸ್ತರಿಸಲು ಸಾಧ್ಯವಿಲ್ಲ. ಸದ್ಯಕ್ಕಿರುವ ಭಯೋತ್ಪಾದಕರು ಉತ್ತಮ ತರಬೇತಿ ಪಡೆದಿದ್ದಾರೆ ಮತ್ತು ಉತ್ತಮ ಶಸ್ತ್ರಾಸ್ತ್ರಗಳನ್ನು ಹೊಂದಿದ್ದಾರೆ. ಇದನ್ನೂ ಓದಿ: ಕಾಶ್ಮೀರದಲ್ಲಿ ಭಯೋತ್ಪಾದಕರ ವಿರುದ್ಧ ಮುಂದುವರಿದ ಎನ್‌ಕೌಂಟರ್ – ಓರ್ವ ಯೋಧ ನಾಪತ್ತೆ
ಡೆಹ್ರಾಡೂನ್: ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ನೀರ್ಗಲ್ಲು ಕುಸಿತದಿಂದ ಉಂಟಾದ ಪ್ರವಾಹಕ್ಕೆ ಸಿಲುಕಿ ಸಾವನ್ನಪ್ಪಿದವರ ಸಂಖ್ಯೆ 62ಕ್ಕೆ ಏರಿಕೆಯಾಗಿದೆ.
ಹಿಮ ಪ್ರಳಯಕ್ಕೆ ತುತ್ತಾದ ಚಮೋಲಿ ತಪೋವನ ಸಿಲುಕಿಕೊಂಡಿರುವವರ ಪತ್ತೆ ಕಾರ್ಯ 13ನೇ ದಿನವೂ ಮುಂದುವರಿದಿದ್ದು, ಗುರುವಾರ ಶವವೊಂದನ್ನು ಹೊರತೆಗೆಯಲಾಗಿದೆ.
62 dead bodies and 28 body parts recovered. Rescue and search operation underway at five places: DGP Ashok Kumar on search-cum-rescue operation in Chamoli, Uttarakhand pic.twitter.com/qSu607wZDq
ತಪೋವನವಿಷ್ಣುಗಡ್ ಯೋಜನೆಯ ಬಳಿ ಗುರುವಾರ ರಾತ್ರಿ ಶವ ಪತ್ತೆಯಾಗಿದೆ. ಈವರೆಗೆ ಒಟ್ಟು 62 ಶವಗಳು ಪತ್ತೆಯಾಗಿವೆ. 142 ಜನರು ನಾಪತ್ತೆಯಾಗಿದ್ದಾರೆ. ಇಲ್ಲಿಯವರೆಗೆ ಯೋಜನೆಯ ಸುರಂಗದಲ್ಲಿ 13 ಶವಗಳು ಪತ್ತೆಯಾಗಿವೆ. ಇದನ್ನು ಹೊರತುಪಡಿಸಿ ಹಲವೆಡೆ 28 ಕೈಕಾಲುಗಳು ಸಿಕ್ಕಿವೆ.
ಪತ್ತೆಯಾಗಿರುವ 62 ಶವಗಳಲ್ಲಿ 33 ಜನರನ್ನು ಗುರುತಿಸಲಾಗಿದೆ. ಗುರುತಿಸಲಾಗದವರ ಡಿಎನ್‍ಎಯನ್ನು ಸಂರಕ್ಷಣೆ ಮಾಡಲಾಗಿದೆ ಎಂದು ಚಮೋಲಿ ಜಿಲ್ಲಾ ಪೊಲೀಸರು ಇಂದು ತಿಳಿಸಿದ್ದಾರೆ.
ಮಡಿಕೇರಿ: ಕೇರಳ-ಕೊಡಗಿನ ಗಡಿ ಭಾಗದಲ್ಲಿ ನಕ್ಸಲ್ ಚಟುವಟಿಕೆ ವಿರುದ್ಧ ಎಎನ್‍ಎಫ್, ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆಗಳು ನಿರಂತರವಾಗಿ ಕಾರ್ಯಾಚರಣೆ ನಡೆಸುತ್ತಿದೆ ಎಂದು ಐಜಿ ವಿಫುಲ್ ಕುಮಾರ್ ಹೇಳಿದ್ದಾರೆ.
ಮಡಿಕೇರಿಯಲ್ಲಿ ಮಾದಕ ವಸ್ತು, ಅಪರಾಧ ತಡೆ ಕುರಿತು ಜಿಲ್ಲಾ ಪೊಲೀಸ್ ಇಲಾಖೆಯಿಂದ ನಗರದಲ್ಲಿ ಹಮ್ಮಿಕೊಂಡಿದ್ದ ಜಾಗೃತಿ ಜಾಗೃತಿ ಜಾಥಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕೊರೊನಾ ಸಂದರ್ಭದಲ್ಲಿ ಜಿಲ್ಲೆಯ ಜನತೆ ಆತ್ಮಶಿಸ್ತಿನಿಂದ ವರ್ತಿಸಿದ್ದಾರೆ. ಅದಕ್ಕಾಗಿ ಅವರಿಗೆ ಧನ್ಯವಾದಗಳನ್ನು ಹೇಳುತ್ತೇನೆ ಎಂದರು.
ಕೊರೊನಾ ಅಬ್ಬರ ಇನ್ನೂ ಕಡಿಮೆಯಾಗಿಲ್ಲ. ಆದ್ದರಿಂದ ಕಡ್ಡಾಯವಾಗಿ ಮಾಸ್ಕ್, ಸ್ಯಾನಿಟೈಸರ್ ಹಾಗೂ ಸಾಮಾಜಿಕ ಅಂತರವನ್ನು ಎಲ್ಲರೂ ಕಟ್ಟುನಿಟ್ಟಾಗಿ ಪಾಲಿಸಬೇಕು. ಇದೊಂದು ಜನಾಂದೋಲನದ ರೀತಿಯಲ್ಲಿ ಆಗಬೇಕಿದೆ. ಹಾಗೆಯೇ ರಾಜ್ಯದಲ್ಲಿ ಮಾದಕ ವಸ್ತುಗಳನ್ನು ಬೇರು ಸಹಿತ ಕಿತ್ತು ಹಾಕಲು ಸಂಕಲ್ಪ ಮಾಡಿದ್ದೇವೆ. ಮಾದಕ ವಸ್ತುಗಳ ಬಳಕೆಯಿಂದ ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳ ಬಗ್ಗೆಯೂ ಅರಿವು ಮೂಡಿಸುತ್ತಿದ್ದೇವೆ ಎಂದು ತಿಳಿಸಿದರು.
ಇದೇ ವೇಳೆ ಪೊಲೀಸ್ ಇಲಾಖೆಯಿಂದ 112 ತುರ್ತು ಸಹಾಯ ದೂರವಾಣಿಯನ್ನು ಪ್ರಾರಂಭಿಸಲಾಗಿದ್ದು, ಜನತೆ ಇದನ್ನು ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ಮಡಿಕೇರಿ: ಸತತ 10 ದಿನಗಳ ನಂತರ ಪತ್ತೆ ಹಚ್ವಲು ಸಾಧ್ಯವಾಗದಂತಹ ಸ್ಥಿತಿಯಲ್ಲಿ ಮತ್ತೊಂದು ಮೃತದೇಹ ನಾಗತೀರ್ಥ ಸಮೀಪ ಪತ್ತೆಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.
ಬ್ರಹ್ಮಗಿರಿ ಬೆಟ್ಟದಲ್ಲಿ ಇಂದು ಮತ್ತೊಂದು ಶವ ಪತ್ತೆಯಾಗಿದ್ದು, ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಅರ್ಚಕ ನಾರಾಯಣಾಚಾರ್ ಪತ್ತೆಯಾದ ಸ್ಥಳದಿಂದ ಬಹುದೂರದಲ್ಲಿ ಮೃತದೇಹ ಪತ್ತೆಯಾಗಿದೆ. ಆದರೆ ಮೃತದೇಹ ಹೆಣ್ಣು ಅಥವಾ ಗಂಡು ಎಂದು ಗುರುತಿಸಲಾಗದಷ್ಟು ಕೊಳೆತಿದೆ. ಮಾಹಿತಿ ತಿಳಿದ ಸಚಿವ ಸೋಮಣ್ಣ ಮತ್ತು ಸಂಸದ ಪ್ರತಾಪ ಸಿಂಹ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕೊಡಗಿನ ತಲಕಾವೇರಿಯಲ್ಲಿ ಭೂಕುಸಿತ ಸಂಭವಿಸಿ ಕಣ್ಮರೆಯಾಗಿದ್ದ ಐವರ ಪೈಕಿ ಪ್ರಸ್ತುತ ಮೂವರ ಮೃತದೇಹಗಳು ಸಿಕ್ಕಿದೆ. ಹತ್ತು ದಿನಗಳ ಬಳಿಕ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಮತ್ತೊಂದು ಮೃತದೇಹ ಪತ್ತೆಯಾಗಿದೆ. ನಾರಾಯಣ ಆಚಾರ್ ಮೃತದೇಹ ಪತ್ತೆಯಾದ ಜಾಗದ ಅನತಿ ದೂರದಲ್ಲಿ ಪತ್ತೆಯಾಗಿದೆ. ಆದರೆ ಅದು ಮಹಿಳೆ ಅಥವಾ ಪುರುಷನದೋ ಎಂದು ತಿಳಿಯುತ್ತಿಲ್ಲ. ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹ ಯಾರದ್ದೆಂದು ತಿಳಿಯಲಿದೆ. ಸಂಜೆ ಶವ ಸಂಸ್ಕಾರ ನಡೆಯಲಿದೆ. ಯಾವುದೇ ಕಾರಣಕ್ಕೂ ಕಾರ್ಯಾಚರಣೆಯನ್ನು ಕೈ ಬಿಡುವುದಿಲ್ಲ ಎಂದು ಸಚಿವ ಸೋಮಣ್ಣ ತಿಳಿಸಿದರು.
ಈ ಹಿಂದೆ ಬೆಟ್ಟ ಕುಸಿದ ಆರು ದಿನಗಳ ನಂತರ ತಲಕಾವೇರಿಯ ಬ್ರಹ್ಮಗಿರಿ ಬೆಟ್ಟದ ಕಾರ್ಯಾಚರಣೆಯಲ್ಲಿ ಪ್ರಪಾತದಲ್ಲಿ ನಾರಾಯಣಾಚಾರ್ ಆಚಾರ್ಯ ಮೃತದೇಹ ಪತ್ತೆಯಾಗಿತ್ತು. ನಾರಾಯಣಾಚಾರ್ ಆಚಾರ್ಯ ಮೃತದೇಹ ಮನೆಯಿಂದ ಅರ್ಧ ಕಿ.ಮೀ ದೂರಕ್ಕೆ ಕೊಚ್ಚಿಕೊಂಡು ಹೋಗಿತ್ತು. ಹೀಗಾಗಿ ಪ್ರಪಾತದಲ್ಲಿ ಶವ ಪತ್ತೆಯಾಗಿತ್ತು.
ಮಡಿಕೇರಿ: ಸತತ ಆರು ದಿನಗಳ ನಂತರ ತಲಕಾವೇರಿಯ ಬ್ರಹ್ಮಗಿರಿ ಬೆಟ್ಟದ ಕಾರ್ಯಾಚರಣೆಯಲ್ಲಿ ಪ್ರಪಾತದಲ್ಲಿ ಮತ್ತೊಂದು ಮೃತದೇಹ ಪತ್ತೆಯಾಗಿದೆ.
ಮಣ್ಣಿನಡಿ ಸಿಲುಕಿದ್ದ ಮತ್ತೊಂದು ಮೃತ ದೇಹ ಪತ್ತೆಯಾಗಿದ್ದು, ನಾರಾಯಣಾಚಾರ್ ಆಚಾರ್ಯ ಮೃತದೇಹ ಎಂದು ಗುರುತಿಸಲಾಗಿದೆ. ಕಂದಕದ ಕೆಳಗಿರುವ ಸಿಬ್ಬಂದಿ ಈ ಬಗ್ಗೆ ಮಾಹಿತಿ ನೀಡಿದ್ದು, ಸ್ಥಳಿಯ ಸರ್ಕಲ್ ಇನ್ಸ್‌ಪೆಕ್ಟರ್ ನಾರಾಯಣಾಚಾರ್ ಆಚಾರ್ಯ ಮೃತದೇಹ ಎಂದು ಗುರುತು ಪತ್ತೆ ಮಾಡಿದ್ದಾರೆ.
ನಾರಾಯಣಾಚಾರ್ ಆಚಾರ್ಯ ಮೃತದೇಹ ಮನೆಯಿಂದ ಅರ್ಧ ಕಿ.ಮೀ ದೂರಕ್ಕೆ ಕೊಚ್ಚಿಕೊಂಡು ಹೋಗಿತ್ತು. ಹೀಗಾಗಿ ಪ್ರಪಾತದಲ್ಲಿ ಶವ ಪತ್ತೆಯಾಗಿದೆ. ಸಿಬ್ಬಂದಿ ಮೃತದೇಹ ಹೊರತೆಗೆದು ಮೇಲಕ್ಕೆ ತರುತ್ತಿದ್ದಾರೆ. ಇತ್ತ ಆಪರೇಷನ್ ಬ್ರಹ್ಮಗಿರಿ ನಡೆಯುತ್ತಿರುವ ಸ್ಥಳದಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಇದರಿಂದ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ.
ಇಂದು ಬೆಳಗ್ಗೆ ನಾರಾಯಣ ಆಚಾರ್ ಬಳಸುತ್ತಿದ್ದ ರೆನಾಲ್ಟ್ ಡಸ್ಟರ್ ಮತ್ತು ಓಮ್ನಿ ಎರಡು ಕಾರುಗಳು ಪತ್ತೆಯಾಗಿದ್ದವು. ಜೊತೆಗೆ ಒಂದು ಬೈಕ್ ಮತ್ತು ನಾಯಿಯ ಮೃತದೇಹ ಪತ್ತೆಯಾಗಿತ್ತು. ಎರಡು ಕಾರುಗಳು ಸಂಪೂರ್ಣ ನುಜ್ಜು-ಗುಜ್ಜಾಗಿದ್ದವು.
ಮಡಿಕೇರಿ: ತಲಕಾವೇರಿಯ ಬ್ರಹ್ಮಗಿರಿಯಲ್ಲಿ ಬೆಟ್ಟ ಕುಸಿದು ಕಣ್ಮರೆಯಾಗಿದ್ದವರಿಗೆ ಎನ್‌ಡಿಆರ್‌ಎಫ್ ತಂಡ ತೀವ್ರ ಶೋಧ ನಡೆಸುತ್ತಿದೆ. ಇದೀಗ ಕಣ್ಮರೆಯಾದ ಪ್ರಧಾನ ಅರ್ಚಕರಾದ ನಾರಾಯಣ ಆಚಾರ್ ಅವರು ಬಳಸುತ್ತಿದ್ದ ಎರಡು ಕಾರುಗಳು ಪತ್ತೆಯಾಗಿವೆ.
ಕಳೆದ ನಾಲ್ಕು ದಿನಗಳಿಂದ ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಬೆಳಗ್ಗೆಯಿಂದಲೇ ಕಣ್ಮರೆಯಾದವರಿಗೆ ತೀವ್ರವಾದ ಹುಡುಕಾಟವನ್ನು ಪ್ರಾರಂಭಿಸಿದ್ದಾರೆ. ಈ ವೇಳೆ ನಾರಾಯಣ ಆಚಾರ್ ಬಳಸುತ್ತಿದ್ದ ರೆನಾಲ್ಟ್ ಡಸ್ಟರ್ ಹಾಗೂ ಮತ್ತೊಂದು ಓಮ್ನಿ ಎರಡು ಕಾರುಗಳು ಪತ್ತೆಯಾಗಿವೆ.
ಎರಡು ಕಾರುಗಳು ಸಂಪೂರ್ಣ ನುಜ್ಜು-ಗುಜ್ಜಾಗಿವೆ. ನಾರಾಯಣ ಆಚಾರ್ ಶೆಡ್‍ನಲ್ಲಿ ಇದ್ದ ಎರಡು ಕಾರುಗಳು ಇಂದು ಕಾರ್ಯಾಚರಣೆ ವೇಳೆ ಪತ್ತೆಯಾಗಿದೆ. ಜೊತೆಗೆ ಅರ್ಚಕರಿಗೆ ಸೇರಿದ ವಸ್ತುಗಳು ಪತ್ತೆಯಾಗುತ್ತಿವೆ. ಆದರೆ ಇನ್ನೂ ನಾರಾಯಣ ಆಚಾರ್ ಹಾಗೂ ಉಳಿದ ನಾಲ್ವರ ಮೃತದೇಹ ಪತ್ತೆಯಾಗಿಲ್ಲ.
ಈಗಾಗಲೇ ಘಟನಾ ಸ್ಥಳದಲ್ಲಿ ಜೆಸಿಬಿ ಹಾಗೂ ಹಿಟಾಚಿಗಳು ತೀವ್ರ ಶೋಧ ನಡೆಸುತ್ತಿವೆ. ಒಟ್ಟು 60 ಸಿಬ್ಬಂದಿ ಉಳಿದ ನಾಲ್ವರ ಕುರುಹುಗಾಗಿ ಶೋಧ ಮಾಡುತ್ತಿದ್ದಾರೆ. ಅನಂದ್ ತೀರ್ಥ ಅವರ ಮೃತದೇಹವನ್ನು ಇಂದು ಅಂತ್ಯಕ್ರಿಯೆ ಮಾಡುವ ಸಾಧ್ಯತೆ ಇದೆ.
ಮಡಿಕೇರಿ: ಕೊಡಗಿನ ಭಾಗಮಂಡಲ ಬ್ರಹ್ಮಗಿರಿ ಬೆಟ್ಟದಲ್ಲಿ ನಡೆಯುತ್ತಿರುವ ಆಪರೇಷನ್ ಬ್ರಹ್ಮಗಿರಿ ಕಾರ್ಯಾಚರಣೆ ಯಾವುದೇ ಕಾರಣಕ್ಕೂ ನಿಲ್ಲಿಸಲ್ಲ. ಮಣ್ಣಿನಲ್ಲಿ ಹೂತು ಹೋಗಿರುವ ನಾಲ್ಕು ಮೃತದೇಹಗಳು ಸಿಗುವವರೆಗೂ ಕಾರ್ಯಚರಣೆ ಮಾಡುತ್ತೀವಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ತಿಳಿಸಿದರು.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ವಿ.ಸೋಮಣ್ಣ ಅವರು, ಬೆಟ್ಟ ಕುಸಿತವಾದ ನಂತರ ಸರ್ಕಾರ ನಿರಂತರವಾಗಿ ಕಾರ್ಯಾಚರಣೆ ನಡೆಸುತ್ತಿದೆ. ಒಬ್ಬರ ಮೃತದೇಹ ಸಿಕ್ಕಿದ ಮೇಲೆ ಮೂರು ದಿನಗಳಿಂದ ಎನ್‍ಡಿಎಫ್‍ಆರ್ ತಂಡ, ಪೊಲೀಸ್, ಅಗ್ನಿಶಾಮಕ ದಳದವರು ಸೇರಿ ನಿರಂತರವಾಗಿ ಕಾರ್ಯಾಚರಣೆ ಮಾಡುತ್ತಿದೆ. ಅರ್ಚಕರ ಮನೆಯ ಮಂಚ, ಕುರ್ಚಿಗಳು 60 ಅಡಿಯ ಆಳದಲ್ಲಿ ಬಿದ್ದಿವೆ. ಈಗ ಆ ಪ್ರದೇಶದಲ್ಲೂ ಹುಡುಕಾಟ ಮಾಡುತ್ತಿದ್ದೀವಿ ಎಂದರು.
ಮಣ್ಣಿನಲ್ಲಿ ಹೂತು ಹೋಗಿರುವ ನಾಲ್ಕು ಮೃತ ದೇಹಗಳು ಸಿಗುವವರೆಗೂ ಕಾರ್ಯಚರಣೆ ಮಾಡುತ್ತೀವಿ. ಸ್ಥಳಕ್ಕೆ ಶ್ವಾನ ದಳವನ್ನು ಕರೆಸಲಾಗಿದೆ. ಆದರೆ ಮಳೆ ಬರುತ್ತಿರುವುದರಿಂದ ವಾಸನೆ ಕಂಡು ಹಿಡಿಯಲು ಸಾಧ್ಯವಾಗುತ್ತಿಲ್ಲ. ಯಾವ ಯಾವ ರೀತಿ ಶೋಧಕಾರ್ಯ ಮಾಡಬೇಕೋ ಎಲ್ಲವನ್ನು ಸರ್ಕಾರ ಮಾಡುತ್ತಿದೆ. ಯಾವುದೇ ಕಾರಣಕ್ಕೂ ಕಾರ್ಯಾಚರಣೆ ನಿಲ್ಲಿಸುವ ತೀರ್ಮಾನಕ್ಕೆ ಬರುವುದಿಲ್ಲ ಎಂದು ಸೋಮಣ್ಣ ಸ್ಪಷ್ಟಪಡಿಸಿದರು.
ಪೂಜೆ ನಿಂತಿರುವ ತಲಕಾವೇರಿಯಲ್ಲಿ ಇವತ್ತು ಅಥವಾ ನಾಳೆಯಿಂದ ಪೂಜೆ ಆರಂಭ ಮಾಡುತ್ತೀವಿ. ಮೃತದೇಹ ಸಿಗುವವರೆಗೂ ಪೂಜೆ ಬೇಡ ಎಂಬ ತೀರ್ಮಾನ ಮಾಡಿಲ್ಲ. ನಾಳೆಯೊಳಗೆ ಪೂಜೆ ಶುರು ಮಾಡುತ್ತೀವಿ ಎಂದು ಹೇಳಿದ್ದಾರೆ.
ಶ್ರೀನಗರ: ಇಂದು ಬೆಳಗಿನಜಾವ ಜಮ್ಮು ಕಾಶ್ಮೀರದ ಶೋಪಿಯನ್‍ನಲ್ಲಿ ನಡೆದ ಗುಂಡಿನ ಚಕಮಕಿ ವೇಳೆ ಭಾರತೀಯ ಸೇನೆಯ ಯೋಧರು ಮೂವರು ಉಗ್ರರನ್ನು ಸೆದೆ ಬಡಿದಿದ್ದಾರೆ.
ಬೆಳಗಿನಜಾವ 5 ಗಂಟೆಗೆ ಶೋಪಿಯಾನ್‍ನ ಕುರ್ಕ್ವಾಂಗಮ್ ಪ್ರದೇಶದಲ್ಲಿ 44 ರಾಷ್ಟ್ರೀಯ ರೈಫಲ್ಸ್ ಯೋಧರು ಹಾಗೂ ಉಗ್ರರ ನಡುವೆ ಗುಂಡಿನ ಚಕಮಕಿ ನಡೆದಿದೆ. ಈ ವೇಳೆ ಮೂವರು ಉಗ್ರರರು ಹತರಾಗಿದ್ದಾರೆ.
ರಾಷ್ಟ್ರೀಯ ರೈಫಲ್ಸ್ ಯೋಧರು ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಝೈನಾಪುರದ ವಿಶೇಷ ಕಾರ್ಯಾಚರಣೆ ಪಡೆ(ಎಸ್‍ಒಜಿ)ಯ ಹಾಗೂ ಸಿಆರ್ ಪಿಎಫ್‍ನ 178ನೇ ಬೆಟಾಲಿಯನ್ ಯೋಧರು ಸೇರಿಕೊಂಡಿದ್ದಾರೆ. ಬೆಳಗ್ಗೆ 6.30ರ ಹೊತ್ತಿಗೆ ಜಂಟಿ ಕಾರ್ಯಾಚರಣೆ ಪೂರ್ಣಗೊಂಡಿದೆ. ಹತ್ಯೆಯಾದ ಮೂವರು ಉಗ್ರರ ಗುರುತನ್ನು ಪತ್ತೆ ಹಚ್ಚಬೇಕಿದೆ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕಾರ್ಯಾಚರಣೆ ನಡೆದ ಸ್ಥಳದಿಂದ ಒಂದು ಐಎನ್‍ಎಸ್‍ಎಎಸ್ ಹಾಗೂ ಎರಡು ಎಕೆ-47 ಬಂದೂಕುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಪತ್ತೆ ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಶನಿವಾರವಷ್ಟೇ ಜಮ್ಮು ಕಾಶ್ಮೀರದ ಕುಲ್ಗಮ್ ಜಿಲ್ಲೆಯಲ್ಲಿ ಇಬ್ಬರು ಹಿಜ್ಬುಲ್ ಮುಜಾಹಿದ್ದೀನ್ ಉಗ್ರರನ್ನು ಹತ್ಯೆ ಮಾಡಲಾಗಿತ್ತು.
ಬೆಂಗಳೂರು: ವಾಹನಗಳ ಚಿತ್ರ, ವಿಚಿತ್ರ ನಂಬರ್ ಪ್ಲೇಟ್ ಹಾಗೂ ನಂಬರ್ ಪ್ಲೇಟ್‍ಗಳ ಮೇಲಿನ ಹೆಸರು, ಹುದ್ದೆಗಳಿದ್ದ ಪ್ಲೇಟ್‍ಗಳನ್ನು ನೆಲಮಂಗಲ ಪೊಲೀಸರು ಕಾರ್ಯಾಚರಣೆ ಮಾಡಿ ತೆರವುಗೊಳಿಸಿದ್ದಾರೆ.
ಬೆಂಗಳೂರು ಹೊರವಲಯ ನೆಲಮಂಗಲದಲ್ಲಿ ಸರ್ಕಲ್ ಇನ್ಸ್ ಪೆಕ್ಟರ್ ಶಿವಣ್ಣ ಹಾಗೂ ಟೌನ್ ಠಾಣೆ ಪಿಎಸ್‍ಐ ಮಂಜುನಾಥ ನೇತೃತ್ವದಲ್ಲಿ ವಾಹನಗಳ ಪರಿಶೀಲನೆ ಮಾಡಲಾಯಿತು. ಈ ವೇಳೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕು ಪಂಚಾಯತ್ ಅಧ್ಯಕ್ಷರ ಕಾರು ಸೇರಿದಂತೆ ಹಲವು ಸಂಘ- ಸಂಸ್ಥೆ, ಅಧ್ಯಕ್ಷ, ರಾಜ್ಯಾಧ್ಯಕ್ಷ, ದೇವರ ಹೆಸರುಗಳಿದ್ದ ನಾಮಾಕಿಂತ ನಂಬರ್ ಪ್ಲೇಟ್‍ಗಳನ್ನು ತೆರವು ಮಾಡಿ ಸ್ಥಳದಲ್ಲಿಯೇ ಫೈನ್ ಹಾಕಿ ಮತ್ತೊಮ್ಮೆ ಈ ರೀತಿ ಮಾಡದಂತೆ ಎಚ್ಚರಿಕೆ ನೀಡಿದರು.
ಹೈಕೋರ್ಟ್ ಕಳೆದ ತಿಂಗಳು ವಿಚಿತ್ರ ನಂಬರ್ ಪ್ಲೇಟ್‍ಗಳ ತೆರವಿಗೆ ಆದೇಶ ಮಾಡಿತ್ತು. ಇಂದು ಕಾರ್ಯಚರಣೆ ನಡೆಸಿದ ಪೊಲೀಸರು ಮುಲಾಜಿಲ್ಲದೆ ಎಲ್ಲಾ ವಾಹನಗಳನ್ನು ಪರಿಶೀಲಿಸಿ ಸಾರ್ವಜನಿಕರು ಹಾಗೂ ವಾಹನ ಸವಾರರಲ್ಲಿ ಜಾಗೃತಿ ಮೂಡಿಸುವ ಮೂಲಕ ಅರಿವು ಮೂಡಿಸಿದರು. ಎಲ್ಲರಿಗೂ ಕಾನೂನು ಒಂದೇ ಎಲ್ಲರೂ ಕಾನೂನಿನ ನಿಯಮಗಳನ್ನು ಪಾಲಿಸಬೇಕು. ತಮ್ಮ ವಾಹನದ ನಂಬರ್ ಪ್ಲೇಟ್ ತೆರವು ಮಾಡದಿದ್ದಲ್ಲಿ ಕೂಡಲೇ ತಾವೇ ತೆರವು ಮಾಡುವ ಮೂಲಕ ಕಾನೂನು ಪಾಲಿಸಿ ಎಂದು ಪೊಲೀಸರು ಜಾಗೃತಿ ಮೂಡಿಸುವ ಮೂಲಕ ದಂಡ ವಿಧಿಸಿ ಎಚ್ಚರಿಕೆಯನ್ನ ನೀಡಿದ್ದಾರೆ.