Tag: ಕಾರ್ಯಕ್ರರ್ತ

  • ನೀರಿನ ಟ್ಯಾಂಕ್ ಹತ್ತಿ ಬಿ.ಸಿ ಪಾಟೀಲ್ ಬೆಂಬಲಿಗ ಆತ್ಮಹತ್ಯೆಗೆ ಯತ್ನ

    ನೀರಿನ ಟ್ಯಾಂಕ್ ಹತ್ತಿ ಬಿ.ಸಿ ಪಾಟೀಲ್ ಬೆಂಬಲಿಗ ಆತ್ಮಹತ್ಯೆಗೆ ಯತ್ನ

    ಹಾವೇರಿ: ಕಾಂಗ್ರೆಸ್ ಶಾಸಕ ಬಿ.ಸಿ ಪಾಟೀಲ್‍ಗೆ ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆಯಲ್ಲಿ ಬೆಂಬಲಿಗನೋರ್ವ ನೀರಿನ ಟ್ಯಾಂಕ್ ಹತ್ತಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಹಿರೇಕೆರೂರಿನಲ್ಲಿ ನಡೆದಿದೆ.

    ಶಾಸಕ ಬಿ.ಸಿ ಪಾಟೀಲ್ ಮನೆ ಮುಂದೆ ಅಭಿಮಾನಿಗಳು ಪ್ರತಿಭಟನೆ ನಡೆಸಿದರು. ಶಾಸಕ ಬಿ.ಸಿ ಪಾಟೀಲ್ ಸಮಾಧಾನ ಪಡಿಸಲು ಆಗಮಿಸಿದರು. ಮನೆ ಮುಂದೆ ಇರುವ ನೀರಿನ ಟ್ಯಾಂಕ್ ಮೇಲೆ ಬೆಂಬಲಿಗ ಪುಟ್ಟೇಶ್ ಗೊರವರ್ ಹತ್ತಿದ್ದಾನೆ. ಸಚಿವ ಸ್ಥಾನವನ್ನು ನೀಡಬೇಕು ಇಲ್ಲವಾದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಬೆದರಿಕೆ ಹಾಕಿದರು. ನಂತರ ಬಿ.ಸಿ ಪಾಟೀಲ್ ಸಮಾಧಾನ ಪಡಿಸಿ ಹಾಗೂ ಪೊಲೀಸರು ಟ್ಯಾಂಕ್ ಮೇಲೆ ಹತ್ತಿ ಪುಟ್ಟೇಶ್ ನನ್ನು ಕೆಳಗಡೆ ಇಳಿಸಿದರು.

    ಹಿರೇಕೆರೂರಿನ ಕಾಂಗ್ರೆಸ್ ಶಾಸಕ ಬಿ.ಸಿ ಪಾಟೀಲ್ ಸಚಿವ ಸ್ಥಾನ ಕೈ ತಪ್ಪಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಶಾಸಕರ ಮನೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಶಾಸಕ ಬಿ.ಸಿ ಪಾಟೀಲ್ ನಿವಾಸದ ಮುಂದೆ ಅಭಿಮಾನಿಗಳು, ಕಾರ್ಯಕರ್ತರು ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿ.ಸಿ ಪಾಟೀಲ್ ಮೂರು ಭಾರಿ ಆಯ್ಕೆ ಆಗಿದ್ದಾರೆ. ಮತ್ತೆ ಸಚಿವ ಸ್ಥಾನದಿಂದ ಕೈಬಿಟ್ಟಿದ್ದಕ್ಕೆ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪೇಜಾವರ ಶ್ರೀ ಸನ್ಯಾಸಿಗಳು, ಅವರು ಟಿವಿ ನೋಡದ ಕಾರಣ ಕೇಂದ್ರದ ಯೋಜನೆಗಳ ಅರಿವಿಲ್ಲ: ಕರಂದ್ಲಾಜೆ

    ಪೇಜಾವರ ಶ್ರೀ ಸನ್ಯಾಸಿಗಳು, ಅವರು ಟಿವಿ ನೋಡದ ಕಾರಣ ಕೇಂದ್ರದ ಯೋಜನೆಗಳ ಅರಿವಿಲ್ಲ: ಕರಂದ್ಲಾಜೆ

    ಮಂಗಳೂರು: ಪೇಜಾವರ ಸ್ವಾಮೀಜಿ ಸನ್ಯಾಸಿಗಳು. ಅವರು ಟಿವಿ ನೋಡೋದಿಲ್ಲ. ಹಾಗಾಗಿ ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಅವರಿಗೆ ಅರಿವಿಲ್ಲ ಅಂತಾ ಸಂಸದೆ ಶೋಭಾ ಕರಂದ್ಲಾಜೆ ಮಂಗಳೂರಿನಲ್ಲಿ ಹೇಳಿದ್ದಾರೆ.

    ಕೇಂದ್ರ ಸರ್ಕಾರದ ಸಾಧನೆ ಬಗ್ಗೆ ಪಕ್ಷದ ಹಿರಿಯರಿಂದ ಸ್ವಾಮಿಗಳಿಗೆ ಮನವರಿಕೆ ಮಾಡಲಾಗುತ್ತದೆ. ಪೇಜಾವರ ಸ್ವಾಮೀಜಿಗಳನ್ನು ಭೇಟಿಯಾಗುವವರು ಸರ್ಕಾರದ ಯೋಜನೆಗಳ ಬಗ್ಗೆ ಮಾತನಾಡದೇ ಇರೋದರಿಂದ ಅವರು ತಪ್ಪು ಅಭಿಪ್ರಾಯ ಹೊಂದಿರಬಹುದು ಎಂದು ಶೋಭಾ ಕರಂದ್ಲಾಜೆ ಅಭಿಪ್ರಾಯಪಟ್ಟಿದ್ದಾರೆ.

    ಇನ್ನೂ ಇತ್ತೀಚೆಗೆ ಉಡುಪಿಯಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ದನದ ವ್ಯಾಪಾರಿ ಹಸನಬ್ಬ ಸಾವು ಪ್ರಕರಣದ ಬಗ್ಗೆ ಮಾತನಾಡಿದ ಶೋಭಾ ಕರಂದ್ಲಾಜೆ, ಹಿಂದೂ ಸಂಘಟನೆಯ ಕಾರ್ಯಕರ್ತರನ್ನು ಸುಳ್ಳು ಆರೋಪದ ಮೂಲಕ ಬಂಧಿಸಲಾಗಿದೆ ಎಂದು ಆರೋಪಿಸಿದರು.

    ಆರೋಪಿಗಳ ಜೊತೆ ಮತ್ತು ಎಸ್ಪಿ ಜೊತೆ ಮಾತನಾಡಿದ್ದು, ಕಾರ್ಯಕರ್ತರ ಬಿಡುಗಡೆಗೆ ಆಗ್ರಹಿಸಿ ನಾಳೆ ಉಡುಪಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಬೃಹತ್ ಪ್ರತಿಭಟನೆ ಮಾಡಲಾಗುವುದು ಎಂದು ತಿಳಿಸಿದರು.

    ನರೇಂದ್ರ ಮೋದಿಯವರ ಸರ್ಕಾರ ಬಂದು ನಾಲ್ಕು ವರ್ಷವಾದರು, ಚುನಾವಣೆ ಪೂರ್ವದಲ್ಲಿ ವಿದೇಶದಲ್ಲಿರುವ ಕಪ್ಪು ಹಣವನ್ನು ತರುವುದಾಗಿ ಭರವಸೆ ನೀಡಿ ಈಡೇರಿಸಿಲ್ಲ ಎಂದು ಮಂತ್ರಾಲಯದಲ್ಲಿ ಪೇಜಾವರ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದ್ದರು. ಇದನ್ನೂ ಓದಿ: ಮೋದಿಯವರ ಅಚ್ಛೇ ದಿನ್ ಇನ್ನೂ ಪರಿಣಾಮಕಾರಿ ಆಗಬೇಕಿದೆ: ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ