Tag: ಕಾರ್ಯಕ್ರಮ

  • ಗಣೇಶೋತ್ಸವಕ್ಕೆ 5 ದಿನ ಅವಕಾಶ ಕೊಟ್ಟ ಸರ್ಕಾರ

    ಗಣೇಶೋತ್ಸವಕ್ಕೆ 5 ದಿನ ಅವಕಾಶ ಕೊಟ್ಟ ಸರ್ಕಾರ

    ಬೆಂಗಳೂರು: ಸಾರ್ವಜನಿಕ ಗಣೇಶೋತ್ಸವಕ್ಕೆ ಸರ್ಕಾರ 5 ದಿನಗಳ ಷರತ್ತುಬದ್ಧ ಅನುಮತಿ ನೀಡಿದೆ. ಇಂದು ಸಂಜೆ ಸರ್ಕಾರದಿಂದ ಅಧಿಕೃತ ಮಾರ್ಗಸೂಚಿ ಘೋಷಣೆ ಆಗುವುವ ಸಾಧ್ಯತೆ ಇದೆ.

    ಷರತ್ತಿನ ಅನುಮತಿ ರಾಜ್ಯದಲ್ಲಿ 5 ದಿನಗಳ ಕಾಲ ಗಣೇಶ ಪ್ರತಿಷ್ಠಾಪನೆಗೆ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಗಣೇಶೋತ್ಸವ ಮೆರವಣಿಗೆ ಅವಕಾಶವಿಲ್ಲ. 30 ಜನರ ಮಿತಿ ನಿಗಧಿಪಡಿಸಿದ್ದು, ಅನುಮತಿ ಪಡೆದ ಸ್ಥಳಗಳಲ್ಲಿ ಮಾತ್ರ ಗಣೇಶ ಪ್ರತಿಷ್ಠಾಪನೆಗೆ ಅವಕಾಶ. ವಾರ್ಡ್‍ಗೆ ಒಂದು ಅಥವಾ ಗ್ರಾಮಕ್ಕೊಂದು ಗಣಪತಿ ಕೂರಿಸಲು ಅವಕಾಶ ನೀಡಿದೆ. ಇದನ್ನೂ ಓದಿ: ಗಣೇಶೋತ್ಸವಕ್ಕೆ ಅವಕಾಶ ಕೊಡಿ, ನಮ್ಮ ಬದುಕು ಬೀದಿಗೆ ಬಂದಿದೆ: ವ್ಯಾಪಾರಿಗಳ ಅಳಲು

    ಸರ್ಕಾರ ನಿಗದಿತ ಸ್ಥಳದಲ್ಲಿ ಭಕ್ತರು ಸೇರಲು ಅವಕಾಶ ನೀಡಿದೆ. ಗಣೇಶೋತ್ಸವದಲ್ಲಿ ಮನರಂಜನಾ ಕಾರ್ಯಕ್ರಮಗಳಾದ ಆರ್ಕೆಸ್ಟ್ರಾ, ಡಿಜೆ ಅದ್ಧೂರಿ ಮೆರವಣಿಗೆ ಅವಕಾಶ ನಿರಾಕರಿಸಲಾಗಿದ್ದು, ನಿಗದಿತ ಸಂಖ್ಯೆಯಲ್ಲಿ ಭಕ್ತರು ಸೇರಲು ಅವಕಾಶ ಕಲ್ಪಿಸಿದೆ. ಕೆರೆಗಳಲ್ಲಿ ಗಣೇಶ ವಿರ್ಸಜನೆಗೆ ನಿರ್ಬಂಧ ಹೆರಲಾಗಿದ್ದು, ಬಿಬಿಎಂಪಿ ಸೂಚಿಸಿದ ಸ್ಥಳದಲ್ಲೇ ವಿರ್ಸಜನೆ ಅವಕಾಶ ನೀಡಲಾಗಿದೆ.

    ಗಣೇಶ ಪ್ರತಿಷ್ಠಾಪಿಸಿದ ಸ್ಥಳದಲ್ಲೆ ವಿಸರ್ಜನೆಗೆ ಅವಕಾಶ ಮಾಡಲಾಗಿದ್ದು, ಮೊಬೈಲ್ ಟ್ಯಾಂಕರ್‍ ನಲ್ಲಿ ವಿಸರ್ಜನೆಗೆ ಪ್ಲ್ಯಾನ್ ಮಾಡಲಾಗಿದೆ. ಇದರೊಂದಿಗೆ ಗಣೇಶೋತ್ಸವ ಮುಗಿಯುವವರೆಗೆ ರಾಜ್ಯದಲ್ಲಿ ನೈಟ್ ಕರ್ಫ್ಯೂ ಮುಂದುವರಿಸಲು ತೀರ್ಮಾನಿಸಲಾಗಿದೆ. ಇದನ್ನೂ ಓದಿ: ಅಪಘಾತದಲ್ಲಿ ಜೆಡಿಎಸ್ ಕಾರ್ಯಕರ್ತ, ಇಬ್ಬರು ಮಕ್ಕಳು ಸಾವು- ಹೆಚ್‍ಡಿಕೆ ಬೇಸರ

  • ಸಿಎಂ ಕಾರ್ಯಕ್ರಮದಲ್ಲಿ ಕಳ್ಳರ ಕೈಚಳಕ- ಒಂದೂವರೆ ಲಕ್ಷ ಕದ್ದ ಖದೀಮರು

    ಸಿಎಂ ಕಾರ್ಯಕ್ರಮದಲ್ಲಿ ಕಳ್ಳರ ಕೈಚಳಕ- ಒಂದೂವರೆ ಲಕ್ಷ ಕದ್ದ ಖದೀಮರು

    – 13ಕ್ಕೂ ಅಧಿಕ ಜನರ ಜೇಬಿಗೆ ಕತ್ತರಿ

    ಹಾವೇರಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ತವರು ಜಿಲ್ಲೆಗೆ ಆಗಮಿಸಿದ್ದು, ಕಾರ್ಯಕ್ರಮದ ವೇಳೆ 13ಕ್ಕೂ ಅಧಿಕ ಜನರ ಜೇಬಿಗೆ ಖದೀಮರು ಕತ್ತರಿ ಹಾಕಿ, ಒಂದೂವರೆ ಲಕ್ಷ ರೂಪಾಯಿಗಳನ್ನು ಕದ್ದಿದ್ದಾರೆ.

    ಜಿಲ್ಲೆಯ ರಾಣೆಬೆನ್ನೂರು ನಗರದ ಎಪಿಎಂಸಿ ಸಮುದಾಯ ಭವನದಲ್ಲಿ ನಡೆದ ಕಾರ್ಯಕ್ರಮದ ವೇಳೆ ಕಳ್ಳರು ತಮ್ಮ ಕೈ ಚಳಕ ತೋರಿಸಿದ್ದಾರೆ. ಸಿಎಂ ಕಾರ್ಯಕ್ರಮಕ್ಕೆ ಆಗಮಿಸಿದ್ದ ಹೊನ್ನಪ್ಪ ಅವರ ಜೇಬಿನಲ್ಲಿದ್ದ 50 ಸಾವಿರ ರೂ.ಗಳಲ್ಲಿ 49 ಸಾವಿರ ರೂ. ದೋಚಿದ್ದಾರೆ. ಹೊನ್ನಪ್ಪ ಮಾತ್ರವಲ್ಲದೆ 13 ಜನರ ಜೇಬಿಗೆ ಕತ್ತರಿ ಹಾಕಿ, ಸುಮಾರು ಒಂದೂವರೆ ಲಕ್ಷ ರೂಪಾಯಿ ಹಣವನ್ನು ಕಳ್ಳರು ದೋಚಿದ್ದಾರೆ. ಇದನ್ನೂ ಓದಿ: ಕಾಬೂಲ್ ವಿಮಾನ ನಿಲ್ದಾಣದ ಎಂಟ್ರಿ ಗೇಟ್ ಬಳಿ ಮತ್ತೆ ಫೈರಿಂಗ್

    ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಮತ್ತು ಶಂಕುಸ್ಥಾಪನೆ ನೆರವೇರಿಸಲು ಸಿಎಂ ಬೊಮ್ಮಾಯಿ ಆಗಮಿಸಿದ್ದ ವೇಳೆ ಕೃತ್ಯ ಎಸಗಿದ್ದಾರೆ. ಹಿರೇಕೆರೂರು ಪಟ್ಟಣದಲ್ಲೂ ಕೆಲವರ ಜೇಬಿಗೆ ಕತ್ತರಿ ಹಾಕಿದ್ದಾರೆ. ಕಳ್ಳರ ಕೈಚಳಕಕ್ಕೆ ಜನರು ಹಾಗೂ ಸಿಎಂ ಅಭಿಮಾನಿಗಳು ಕಂಗಾಲಾಗಿದ್ದಾರೆ.

  • ಕೊರೊನಾ ಭೀತಿ-ಮಂಡ್ಯದಲ್ಲಿ 30ಕ್ಕೂ ಹೆಚ್ಚು ಜನ ಸೇರುವ ಕಾರ್ಯಕ್ರಮ ನಿಷೇಧ

    ಕೊರೊನಾ ಭೀತಿ-ಮಂಡ್ಯದಲ್ಲಿ 30ಕ್ಕೂ ಹೆಚ್ಚು ಜನ ಸೇರುವ ಕಾರ್ಯಕ್ರಮ ನಿಷೇಧ

    ಮಂಡ್ಯ: 30ಕ್ಕೂ ಹೆಚ್ಚು ಜನ ಸೇರುವ ಕಾರ್ಯಕ್ರಮಗಳಿಗೆ ಮಂಡ್ಯಾದಲ್ಲಿ ಜಿಲ್ಲಾಡಳಿತ ನಿಷೇಧ ಹೇರುವ ಮೂಲಕವಾಗಿ ಕೊರೊನಾ ಕುರಿತಾಗಿ ಮುನ್ನೆಚ್ಚರಿಕೆಯನ್ನು ತೆಗೆದುಕೊಂಡಿದೆ.

    ಕೊರೊನಾ 3ನೇ ಅಲೆ ತಡೆಗೆ ಮಂಡ್ಯ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, 30ಕ್ಕೂ ಹೆಚ್ಚು ಜನ ಸೇರುವ ಎಲ್ಲಾ ಚಟುವಟಿಕೆಗಳಿಗೆ ನಿಬರ್ಂಧಿ ವಿಧಿಸಿ ಮಂಡ್ಯ ಜಿಲ್ಲಾಧಿಕಾರಿ ಅಶ್ವಥಿ ಅವರು ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: ದಕ್ಷಿಣ ಕನ್ನಡ, ಕಾಸರಗೋಡಿಗೆ ಹೊಂದಿಕೊಂಡಿರುವ ಮದ್ಯದಂಗಡಿಗಳು ಕ್ಲೋಸ್

    ಜಿಲ್ಲೆಯಲ್ಲಿ 30ಕ್ಕಿಂತ ಹೆಚ್ಚು ಜನ ಸೇರುವ ಮದುವೆ, ನಿಶ್ಚಿತಾರ್ಥ, ಬೀಗರ ಔತಣಕೂಟ, ಅಂತ್ಯಸಂಸ್ಕಾರ, ತಿಥಿ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳಿಗೆ ನಿಷೇಧ ಹೇರಲಾಗಿದೆ. ದೇವಸ್ಥಾನಗಳಲ್ಲಿ ದೈನಂದಿನ ಪೂಜೆಗೆ ಮಾತ್ರ ಅವಕಾಶ ನೀಡಲಾಗಿದೆ.

     

    ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ವಿಶೇಷ ಆಚರಣೆ, ಧಾರ್ಮಿಕ ಸೇವೆ, ಉತ್ಸವಗಳನ್ನು ನಿಷೇಧ ಮಾಡಲಾಗಿದೆ. ಅಲ್ಲದೇ ದೇವಸ್ಥಾನಗಳಿಗೆ ವಾರಾಂತ್ಯದಲ್ಲಿ ಹಾಗೂ ಸಾರ್ವತ್ರಿಕ ರಜೆಯ ದಿನಗಳಲ್ಲಿ ಭಕ್ತರಿಗೆ ದೇವಸ್ಥಾನಗಳಿಗೆ ನಿಷೇಧ ಹೇರಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಜರುಗುವ ಗ್ರಾಮ ದೇವತೆಗಳ ಹಬ್ಬ, ಸಾಮೂಹಿಕ ಭೋಜನಕ್ಕೂ ಬ್ರೇಕ್ ಹಾಕಲಾಗಿದೆ.

  • ಕೋವಿಡ್ ನಿಯಮ ಉಲ್ಲಂಘಿಸಿ ಬಸವೇಶ್ವರ ಜಾತ್ರೆ- ಕೂಬಿಹಾಳದ 18 ಮಂದಿ ವಿರುದ್ಧ ಪ್ರಕರಣ ದಾಖಲು

    ಕೋವಿಡ್ ನಿಯಮ ಉಲ್ಲಂಘಿಸಿ ಬಸವೇಶ್ವರ ಜಾತ್ರೆ- ಕೂಬಿಹಾಳದ 18 ಮಂದಿ ವಿರುದ್ಧ ಪ್ರಕರಣ ದಾಖಲು

    ಹುಬ್ಬಳ್ಳಿ: ಕೊರೊನಾ ನಿಯಮ ಉಲ್ಲಂಘಿಸಿ ಕುಂದಗೋಳ ತಾಲೂಕಿನ ಕೂಬಿಹಾಳ ಗ್ರಾಮದಲ್ಲಿ ಬಸವೇಶ್ವರ ಜಾತ್ರೆ ಆಚರಿಸಿದ ಆರೋಪದ ಮೇರೆಗೆ 18 ಮಂದಿ ಮೇಲೆ ಕುಂದಗೋಳ ಪೊಲೀಸ್ ಠಾಣೆಯಲ್ಲಿ ಇಂದು ಪ್ರಕರಣ ದಾಖಲಾಗಿದೆ.

    ರಾಮಪ್ಪ ಸಂಶಿ, ಸಿದ್ದಪ್ಪ ರಡ್ಡೇರ, ಹನಮಂತಪ್ಪ ವಡಕಣ್ಣವರ, ಮಂಜುನಾಥ ಪೂಜಾರ, ಯಲ್ಲಪ್ಪ ಹೆಬಸೂರ, ಚಂದ್ರಶೇಖರ ಪಾಲಕರ್, ಬಸಪ್ಪ ಹೊರಗಿನಮನಿ, ಬಸವರಾಜ ದೇಶಪಾಂಡೆ, ಯಲ್ಲಪ್ಪ ಬಿಳೆಬಲ್, ನಿಂಗಪ್ಪ ಬಾಚಣಕಿ, ಬಾಬುಖಾನ್ ನೂರಾಲಿಖಾನವರ, ಚೆನ್ನಬಸಪ್ಪ ರಡ್ಡೇರ, ಸುರೇಶ್ ಗೌಡ ಪಾಟೀಲ್, ವೀರಪಾಕ್ಷಯ್ಯ ಕುಮಾರಗೊಪ್ಪ, ಬಸನಗೌಡ ಶಿರಕೋಳ, ಶಿವಪ್ಪ ತಳವಾರ, ಜಗದೀಶ್ ಬಾಗಲ, ಬಸಪ್ಪ ಕುಂಬಾರ ಮೇಲೆ ಪ್ರಕರಣ ದಾಖಲಿಸಲಾಗಿದೆ.

    ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಏಪ್ರಿಲ್ 3 ರಿಂದ ಜಿಲ್ಲೆಯಾದ್ಯಂತ ಸಾರ್ವಜನಿಕ ಸ್ಥಳಗಳಲ್ಲಿ ಕಾರ್ಯಕ್ರಮಗಳನ್ನು ಆಚರಿಸಬಾರದು ಎಂದು ಜಿಲ್ಲಾಧಿಕಾರಿಗಳು ನಿಷೇಧಾಜ್ಞೆ ಜಾರಿ ಮಾಡಿ ಆದೇಶ ಹೊರಡಿಸಿದ್ದರು.

    ಆದರೆ ಏಪ್ರಿಲ್ 13 ರಂದು ಈ ನಿಯಮ ಉಲ್ಲಂಘಿಸಿ, ಮಾಸ್ಕ್ ಧರಿಸದೇ, ಸಾಮಾಜಿಕ ಅಂತರ ಕಾಪಾಡದೇ ಕುಬಿಹಾಳ ಗ್ರಾಮದಲ್ಲಿ ಬಸವೇಶ್ವರ ಜಾತ್ರೆ ಆಚರಿಸಲಾಗಿದೆ ಎಂದು ಕೂಬಿಹಾಳ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಬಸವರಾಜ್ ಬಾಗಲ ಪ್ರಕರಣ ಕುರಿತು ದೂರು ದಾಖಲಿಸಿದ್ದಾರೆ. ಕುಂದಗೋಳ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

  • ಕೊರೊನಾ ನಿವಾರಣೆಗಾಗಿ ದೇವಾಲಯಗಳಲ್ಲಿ ವಿಶೇಷ ಪೂಜೆ

    ಕೊರೊನಾ ನಿವಾರಣೆಗಾಗಿ ದೇವಾಲಯಗಳಲ್ಲಿ ವಿಶೇಷ ಪೂಜೆ

    ಬೆಂಗಳೂರು: ಮುನೇಶ್ವರ ಸ್ವಾಮಿ ಟ್ರಸ್ಟ್ ವತಿಯಿಂದ ಕೊರೊನಾ ಜಾಗೃತಿಗೆ ಮುಂದಾಗಿದ್ದು, ಧಾರ್ಮಿಕ ಕಾರ್ಯಕ್ರಮದಲ್ಲಿ ಸಾಮಾಜಿಕ ಕೆಲಸಕ್ಕೆ ಒತ್ತು ನೀಡಿದ್ದಾರೆ. ಎರಡನೇ ಅಲೆಯಲ್ಲಿ ಕೊರೊನಾ ಸೋಂಕು ಸಂಪೂರ್ಣವಾಗಿ ನಿವಾರಣೆಯಾಗಲು ಮುನೇಶ್ವರ ಸ್ವಾಮಿ ಹಾಗೂ ಚೌಡೇಶ್ವರಿ ದೇವಿಯಲ್ಲಿ ವಿಶೇಷವಾಗಿ ಪೂಜೆಯನ್ನು ಸಲ್ಲಿಸಿ ಲೋಕಕಲ್ಯಾಣಕ್ಕಾಗಿ ಧಾರ್ಮಿಕ ಕಾರ್ಯವನ್ನು ನಡೆಸಲಾಯಿತು.

    ಈ ಸಮಯದಲ್ಲಿ ಹಗಲಿರುಳು ಶ್ರಮಿಸುತ್ತಿರುವ ಆಶಾ ಕಾರ್ಯಕರ್ತರಿಗೆ ಗೌರವ ಸಮರ್ಪಣೆ ಅರ್ಪಿಸಲಾಯಿತು. ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಹೊಸಪಾಳ್ಯ ಗ್ರಾಮದಲ್ಲಿ ಸರಳ ರೀತಿಯಲ್ಲಿ ಕಾರ್ಯಕ್ರಮ ಆಯೋಜಿಸಿದ್ದರು. ಕಾರ್ಯಕ್ರಮಕ್ಕೆ ಬಸವಣ್ಣ ದೇವರ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ, ರಮಾಣನಂದ ಸ್ವಾಮೀಜಿ ಜ್ಯೋತಿ ಬೆಳಗುವ ಮೂಲಕ ಚಾಲನೆ ನೀಡಿದರು.

    ಕೊರೊನಾ ಸಮಯದಲ್ಲಿ ಆನ್ ಲೈನ್ ವಿದ್ಯಾಭ್ಯಾಸದಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಗೌರವ ಸನ್ಮಾನ ಮಾಡಲಾಯಿತು. ಆಡಳಿತ ಮಂಡಳಿಯಿಂದ ಈಶ್ವರ ಸ್ವರೂಪಿ ಶ್ರೀ ಮುನೇಶ್ವರ ಸ್ವಾಮಿ ಹಾಗೂ ಶ್ರೀ ಚೌಡೇಶ್ವರಿ ದೇವಾಲಯದ 14 ವರ್ಷದ ವಾರ್ಷಿಕೋತ್ಸವ ಜರುಗಿತು.

    ಈ ವೇಳೆಯಲ್ಲಿ ಎಲ್ಲರಿಗೂ ಮಾಸ್ಕ್ ಸ್ಯಾನಿಟೈಸರ್ ನೀಡಿ ಕೊರೊನಾ ಮಹಾಮಾರಿಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಹಾಗೂ ಗ್ರಾಮಸ್ಥರಲ್ಲಿ ಅರಿವು ಹಾಗೂ ಜಾಗೃತಿ ಮೂಡಿಸಿದ್ದು ವಿಶೇಷವಾಗಿತ್ತು. ಈ ವೇಳೆ ಭವಾನಿ ಶಂಕರ್ ಮಂಜುನಾಥ್, ಸಿಎಂ ಗೌಡ, ಹನುಮಂತರಾಜು, ಪಂಚಾಯತಿ ಅಧ್ಯಕ್ಷೆ ಹಾಗೂ ಸದಸ್ಯರು ಉಪಸ್ಥಿತರಿದ್ದರು.

  • ಮಹಾ ನಾಯಕನಿರುವ ಒಂದು ಫೋಟೋ, ವಿಡಿಯೋವನ್ನು ಸಂಗ್ರಹಿಸಿದ ಜಾರಕಿಹೊಳಿ ತಂಡ

    ಮಹಾ ನಾಯಕನಿರುವ ಒಂದು ಫೋಟೋ, ವಿಡಿಯೋವನ್ನು ಸಂಗ್ರಹಿಸಿದ ಜಾರಕಿಹೊಳಿ ತಂಡ

    ಬೆಂಗಳೂರು: ಸಿಡಿ ಯುವತಿ ಪ್ರತ್ಯಕ್ಷ ಬೆನ್ನಲ್ಲೇ ರಮೇಶ್ ಜಾರಕಿಹೊಳಿ ತಂಡ ಇದೀಗ `ಮಹಾ ನಾಯಕ’ನಿಗೆ ಕೌಂಟರ್ ಕೊಡಲು ಸಜ್ಜಾಗಿದೆ. ನಾಳೆ ಅಧಿವೇಶನದಲ್ಲಿ ಕಾಂಗ್ರೆಸ್ ಪ್ರಸ್ತಾಪ ಮಾಡುವ ಮುನ್ನವೇ ಮಹಾನಾಯಕನ ಹೆಸರನ್ನು ರಿವೀಲ್ ಮಾಡೋಕೆ ರಮೇಶ್ ಟೀಂ ತಂತ್ರಗಾರಿಕೆ ಹೆಣೆದಿದೆ ಎಂಬ ವಿಚಾರ ತಿಳಿದು ಬಂದಿದೆ.

    ಕಾರ್ಯಕ್ರಮ ಒಂದರ ಫೋಟೋ, ವಿಡಿಯೋವನ್ನು ಜಾರಕಿಹೊಳಿ ತಂಡ ಸಂಗ್ರಹಿಸಿದೆ. ಆ ವಿಡಿಯೋದಲ್ಲಿ ಆ ಮಹಾನ್ ನಾಯಕ ಇದ್ದು, ಆ ವಿಡಿಯೋ, ಫೋಟೋ ಸಾಕ್ಷಿ ಇಟ್ಟುಕೊಂಡು ಹೆಸರು ಬಹಿರಂಗಪಡಿಸಲು ಮಾಸ್ಟರ್ ಪ್ಲಾನ್‌ ಮಾಡಿದೆ.

    ಜಾರಕಿಹೊಳಿ ತಂಡದ ಮಾಸ್ಟರ್ ಪ್ಲಾನ್‍ಗೆ ಕಾನೂನು ತಜ್ಞರಿಂದ ಗ್ರೀನ್ ಸಿಗ್ನಲ್ ಸಿಕ್ಕಿಲ್ಲ. ಹೆಸರು ಬಹಿರಂಗ ಪಡಿಸಿದರೆ ರಾಜಕೀಯ ತಿರುವು ಪಡೆದುಕೊಳ್ಳುತ್ತದೆ. ಆಗ ನಮ್ಮ ಇನ್ನಷ್ಟು ತಂತ್ರಗಾರಿಕೆ ವಿಫಲ ಆಗಬಹುದು. ಸ್ವಲ್ಪ ಕಾಲ ಕಾದು ನೋಡುವ ತಂತ್ರವನ್ನು ಅನುಸರಿಸೋಣ ಎಂದು ರಮೇಶ್ ಪರ ವಕೀಲರ ಸಲಹೆ ನೀಡಿದ್ದಾರೆ ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

  • ಆಟ- ಗೀಚಾಟ ವಿಶೇಷ ಕಾರ್ಯಕ್ರಮ- ಮಕ್ಕಳಿಂದ ಮೂಡಿಬಂದ ಚಿತ್ರ

    ಆಟ- ಗೀಚಾಟ ವಿಶೇಷ ಕಾರ್ಯಕ್ರಮ- ಮಕ್ಕಳಿಂದ ಮೂಡಿಬಂದ ಚಿತ್ರ

    ಹಾವೇರಿ: ಜಿಲ್ಲೆಯ ರಾಣೇಬೆನ್ನೂರಿನಲ್ಲಿ ಸಾಂಗತ್ಯ ವೇದಿಕೆಯ ಮೂಲಕ ಮಕ್ಕಳಲ್ಲಿನ ಸೃಜನಾತ್ಮಕತೆಯನ್ನು ಗುರುತಿಸುವ ನಿಟ್ಟಿನಲ್ಲಿ ಮಕ್ಕಳಿಗಾಗಿ ಆಟ-ಗೀಚಾಟ ಮಕ್ಕಳ ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.

    ಮಾಲಿನ್ಯದ ವಿರುದ್ಧ ಹೋರಾಟ ಮತ್ತು ಬದುಕು ವಿಷಯದಡಿ ಮಕ್ಕಳು ಚಿತ್ರ ರಚಿಸಿದ್ದರು. ಉತ್ತಮವಾಗಿ ರಚಿಸಿದ ಮಕ್ಕಳಿಗಾಗಿ ಅಭಿನಂದನಾ ಸಮಾರಂಭ ಹಾಗೂ ಚಿತ್ರಕಲಾ ಪ್ರಾತ್ಯೆಕ್ಷಿಕೆ ನಡೆಸಲಾಯಿತು.

    ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನಗರದ ಟ್ಯಾಗೋರ್ ಶಿಕ್ಷಣ ಸಂಸ್ಥೆಯ ನಿರ್ದೇಶಕರಾದ ವೀರೇಶ್ ಹನಗೋಡಿಮಠ ಮಾತನಾಡಿ, ನಮ್ಮ ಸಮಾಜದ ಪ್ರತಿಯೊಂದು ಮಕ್ಕಳು ಚಿತ್ರಕಲೆಯ ಮೂಲಕ ಹೊರಜಗತ್ತಿನೊಂದಿಗೆ ಸಂವಾದಿಸುತ್ತವೆ. ಪ್ರತಿ ಮಗುವಿನಲ್ಲೂ ಕಲಾಜ್ಞಾನ ಇದ್ದೇ ಇರುತ್ತದೆ. ಆ ಜ್ಞಾನವನ್ನು ನಾವು ಅರಿತು ಅವರಿಗೆ ಕಲಾಶಿಕ್ಷಣ ಕೊಡಬೇಕು. ಮಕ್ಕಳಲ್ಲಿ ಈ ಎಲ್ಲಾ ಬೆಳವಣಿಗೆಗಳ ಸಾಮಥ್ರ್ಯವನ್ನು ಬೆಳೆಸುವ ಮನಸ್ಸು ಮಾಡಿದರೆ ಮಕ್ಕಳಲ್ಲಿ ಏನೆಲ್ಲಾ ಕ್ರಿಯಾಶೀಲತೆಯನ್ನು ತುಂಬಬಹುದು ಎನ್ನುವುದಕ್ಕೆ ಈ ಆಟ ಗೀಚಾಟವೇ ಸಾಕ್ಷಿಯಾಗುತ್ತದೆ. ಚಿತ್ರಗಳ ಮೂಲಕ ಸಾಮಾಜಿಕ ಜಾಗೃತಿ ಮೂಡಿಸುತ್ತಿರುವುದು ಒಂದು ಪರಿಣಾಮಕಾರಿ ಮಾಧ್ಯಮವಾಗಿದೆ. ಮಕ್ಕಳ ಶಿಕ್ಷಣದಲ್ಲಿ ಚಿತ್ರಕಲೆಯೇ ಮಹತ್ವವಾಗಿದ್ದು, ಚಿತ್ರಕಲೆ ಒಂದು ವಿಶ್ವ ಭಾಷೆಯಾಗಿದೆ. ನಮ್ಮ ನಿತ್ಯ ಜೀವನದಲ್ಲಿ ಪ್ರತಿಯೊಂದು ವಿಷಯಗಳಲ್ಲಿ ಕಲೆಯ ಪ್ರಭಾವ ಇದ್ದೇ ಇರುತ್ತದೆ ಎಂದು ಮಕ್ಕಳನ್ನು ಉದ್ದೇಶಿಸಿ ಮಾತನಾಡಿದರು.

    ಚಿತ್ರಕಲಾ ಸ್ಪರ್ಧೆಯಲ್ಲಿ ಉತ್ತಮವಾಗಿ ಚಿತ್ರ ರಚಿಸಿದ ತನಿಷ್ಕಾ ಎಸ್. ಕುಬಸದ, ಸಂಜನಾ.ಪಿ.ಸಿ, ಖುಷಿ ಉಜ್ಜಪ್ಪನಳ್ಳಿ, ಸುನಿಧಿ ಗುಡ್ಡದ, ಕೆ. ರಾಜನಂದಿನಿ, ನಮನಾ ಸಿ.ಮಾಳಿಗೇರ, ಸಮರ್ಥ.ಪಿ.ಸಿ, ವರ್ಷಿಣಿ.ಎ.ಎಮ್, ಮದಿಹಾ ಖಾಜಿ, ನಿಹಾಲ್ ಬಣಕಾರ ಇವರುಗಳಿಗೆ ಪುರಸ್ಕಾರ ನೀಡಲಾಯಿತು.

    ಈ ಸಂದರ್ಭದಲ್ಲಿ ದೇವರಾಜ ಹುಣಸಿಕಟ್ಟಿ, ಸವಿತಾ ಮಲ್ಲಾಡದ, ಸುಮಂಗಲಾ ಹೊಸಳ್ಳಿ, ಡಾ.ವೆಂಕಟೇಶ.ಹೆಚ್ ಹಾಗೂ ಪಾಲಕರು ಉಪಸ್ಥಿತರಿದ್ದರು. ಕು.ಸೌಜನ್ಯ ಹೊಸಳ್ಳಿ ಪ್ರಾರ್ಥಿಸಿದರು. ಕು.ಪಂಕಜ್ ಕಾಗದಗಾರ ವಂದಿಸಿದರು. ಕು.ಕುಶಾಲ್ ಕಾಗದಗಾರ ಸ್ವಾಗತಿಸಿದರು.

  • ಸರ್ಕಾರಕ್ಕೆ ಡಿಸೆಂಬರ್‌ವರೆಗೆ ಅಗ್ನಿಪರೀಕ್ಷೆ – ಹಬ್ಬ, ರ‍್ಯಾಲಿ, ಮದುವೆಗೆ ಕಠಿಣ ನಿಯಮ

    ಸರ್ಕಾರಕ್ಕೆ ಡಿಸೆಂಬರ್‌ವರೆಗೆ ಅಗ್ನಿಪರೀಕ್ಷೆ – ಹಬ್ಬ, ರ‍್ಯಾಲಿ, ಮದುವೆಗೆ ಕಠಿಣ ನಿಯಮ

    ಬೆಂಗಳೂರು: ರಾಜ್ಯದಲ್ಲಿ ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೊರೊನಾ ನಿಯಂತ್ರಣ ಸಂಬಂಧ ಮತ್ತೆ ಕಠಿಣ ನಿಯಮಗಳಿಗೆ ಸರ್ಕಾರ ಮನಸ್ಸು ಮಾಡಿದಂತೆ ಕಾಣುತ್ತಿದೆ. ಸರ್ಕಾರದ ಬತ್ತಳಿಕೆಯಲ್ಲಿದ್ದ ಮತ್ತೆ ಹಳೇ ನಿಯಮಗಳನ್ನು ಒಂದೊಂದಾಗಿ ಜಾರಿ ಮಾಡುತ್ತಿದೆ. ಅಲ್ಲದೇ ಕರ್ನಾಟಕಕ್ಕೆ ಮೂರು ತಿಂಗಳು ಕೊರೊನಾ ಮಹಾ ಗಂಡಾಂತರ ಎದುರಾಗಲಿದೆ. ಇದನ್ನೂ ಓದಿ: ರಾಜ್ಯದಲ್ಲಿ ಮತ್ತೆ ಟಫ್ ರೂಲ್ಸ್ – ಯಾರಿಗೆ ಕೊರೊನಾ ಟೆಸ್ಟ್‌ ಕಡ್ಡಾಯ?

    ಮೂರು ತಿಂಗಳಿಗೆ ಕರ್ನಾಟಕ ಸರ್ಕಾರದಿಂದ ಟಫ್ ರೂಲ್ಸ್ ಜಾರಿ ಮಾಡಿದೆ. ಯಾಕೆಂದರೆ ಮುಂದಿನ ಮೂರು ತಿಂಗಳಲ್ಲಿ ಹಬ್ಬ, ಮದುವೆ, ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮ, ನವರಾತ್ರಿ ಪೂಜಾ ಕಾರ್ಯಕ್ರಮ ಜಾಸ್ತಿ ನಡೆಯಲಿದೆ. ಹೀಗಾಗಿ ಈ 3 ತಿಂಗಳಲ್ಲಿ ಕಾರ್ಯಕ್ರಮ ಮಾಡಿದರೆ ಟಫ್ ರೂಲ್ಸ್ ಪಾಲನೆ ಕಡ್ಡಾಯವಾಗಿದೆ. ಇದರಿಂದ ಕರ್ನಾಟಕ ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗೆ ಕೊರೊನಾ ಮಹಾ ಅಗ್ನಿಪರೀಕ್ಷೆಯನ್ನ ಎದುರಿಸಬೇಕಾಗುತ್ತದೆ.

    3 ತಿಂಗಳಿಗೆ ಹೊಸ ರೂಲ್ಸ್
    * ಕಂಟೈನ್ ಮೆಂಟ್ ವಲಯದಲ್ಲಿ ಯಾವುದೇ ಕಾರ್ಯಕ್ರಮ ನಡೆಸುವಂತಿಲ್ಲ. ಕಂಟೈನ್ ಮೆಂಟ್ ಝೋನ್ ಹೊರಗೆ ಅಷ್ಟೇ ಕಾರ್ಯಕ್ರಮಗಳಿಗೆ ಅನುಮತಿ.
    * ಮದುವೆ, ಸಮಾರಂಭ, ಪೂಜೆ, ಸಾಂಸ್ಕೃತಿಕ ಕಾರ್ಯಕ್ರಮ, ರ‍್ಯಾಲಿ , ಸಾರ್ವಜನಿಕ ಸಮಾರಂಭ ಯಾವುದೇ ಕಾರ್ಯಕ್ರಮ ನಡೆಸಿದರೆ 65 ವರ್ಷ ಮೇಲ್ಪಟ್ಟವರನ್ನು, ಗರ್ಭಿಣಿಯರನ್ನು ಹಾಗೂ ಇತರೆ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರನ್ನು ಕಾರ್ಯಕ್ರಮದಲ್ಲಿ ಭಾಗಿಯಾಗದಂತೆ ಎಚ್ಚರಿಕೆ ವಹಿಸಬೇಕು.
    * ಮದುವೆ, ಪೂಜಾ ಕಾರ್ಯ, ರ‍್ಯಾಲಿಗಳು ವಾರಗಟ್ಟಲೇ ನಡೆಯುವಂದ್ದರೆ ಪ್ರತಿ ದಿನವೂ ಕಡಿಮೆ ಜನ ಸೇರುವಂತೆ ನೋಡಿಕೊಳ್ಳಬೇಕು. ಥರ್ಮಲ್ ಸ್ಕ್ಯಾನಿಂಗ್ ಕಡ್ಡಾಯ
    * ಪ್ರತಿ ಸಮಾರಂಭಕ್ಕೂ ಪ್ರತ್ಯೇಕ ಎಂಟ್ರಿ ಎಕ್ಸಿಟ್ ಇರಬೇಕು.


    * ಜನ ಸೇರುವ ಕಾರ್ಯಕ್ರಮಗಳಲ್ಕಿ ಜನ ಸಾಮಾಜಿಕ ಅಂತರ ಪಾಲನೆ ಮಾಡುತ್ತಿದ್ದಾರೆಯೇ ಅಥವಾ ಮಾಸ್ಕ್ ಧರಿಸಿದ್ದಾರೆಯೇ ಅನ್ಮೋದನ್ನು ನೋಡಲು ಕ್ಯಾಮೆರಾ ಕಣ್ಗಾವಲು ಇರಬೇಕು.
    * ರ‍್ಯಾಲಿ ನಡೆಸೋದಿದ್ದರೆ ಅಂಬುಲೆನ್ಸ್ ಕಡ್ಡಾಯ ಹಾಗೂ ಸ್ಥಳೀಯ ಆಸ್ಪತ್ರೆಗೆ ಮೊದಲೇ ಮಾಹಿತಿ ಕೊಟ್ಟಿರಬೇಕು.
    * ಪ್ರತಿ ದೊಡ್ಡ ಕಾರ್ಯಕ್ರಮವನ್ನು ನಿರ್ದಿಷ್ಟ ಸ್ಥಳದಲ್ಲಿ ಆಯೋಜಿಸಿದರೆ ಅಲ್ಲಿ ಸೋಂಕು ಶಂಕಿತರನ್ನು ವೈದ್ಯರಿಗೆ ತೋರಿಸಬೇಕು. ವೈದ್ಯರು ಸ್ಥಳಕ್ಕೆ ಬರುವವರೆಗೆ ಐಸೋಲೇಟ್ ಮಾಡಲು ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಿಕೊಂಡಿರಬೇಕು.
    * ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಿನಿತಾರೆಯನ್ನು ಕರೆಸುವಂತಹ ಸಂದರ್ಭದಲ್ಲಿ ಜನಸಂದಣಿಯ ಬಗ್ಗೆ ಗಮನಹರಿಸಬೇಕು.

  • ‘ಮನೆಯೇ’ ಮಂತ್ರಾಲಯ ಇಂಪ್ಯಾಕ್ಟ್ – ಬಡ ಕುಟುಂಬಕ್ಕೆ ಕರವೇ ಕಾರ್ಯಕರ್ತರ ಸ್ಪಂದನೆ

    ‘ಮನೆಯೇ’ ಮಂತ್ರಾಲಯ ಇಂಪ್ಯಾಕ್ಟ್ – ಬಡ ಕುಟುಂಬಕ್ಕೆ ಕರವೇ ಕಾರ್ಯಕರ್ತರ ಸ್ಪಂದನೆ

    ನೆಲಮಂಗಲ: ಪಬ್ಲಿಕ್ ಟಿವಿಯ ‘ಮನೆಯೇ’ ಮಂತ್ರಾಲಯ ಕಾರ್ಯಕ್ರಮಕ್ಕೆ ಬೆಂಗಳೂರು ಹೊರವಲಯ ನೆಲಮಂಗಲ ನಗರದ ವೀವರ್ಸ್ ಕಾಲೋನಿಯ ಆಟೋ ಡ್ರೈವರ್ ಧನಂಜಯ ಎಂಬವರು ಶುಕ್ರವಾರ ಕರೆ ಮಾಡಿ ತಮ್ಮ ಕಷ್ಟವನ್ನ ಹೇಳಿಕೊಂಡಿದ್ದರು.

    ಕೊರೊನಾ ಲಾಕ್‍ಡೌನ್ ಸಮಯದಲ್ಲಿ ಮನೆಯಿಂದ ಹೊರಬರದೆ ಹಾಗೂ ಬಡತನದ ಬೇಗೆಯಿಂದ ಸಾಕಷ್ಟು ಸಮಸ್ಯೆ ಎದುರಿಸಿದ್ದ ಕುಟುಂಬಕ್ಕೆ ನೆರವು ಸಿಕ್ಕಿದೆ. ಇಂದು ಈ ಬಡ ಕುಟುಂಬದ ಸದಸ್ಯರಿಗೆ ಕರವೇ ಶಿವರಾಮೇಗೌಡ ಬಣದ ನೆಲಮಂಗಲ ತಾಲೂಕು ಅಧ್ಯಕ್ಷ ಸುರೇಶ್ ನೇತೃತ್ವದಲ್ಲಿ ಕರವೇ ಸ್ನೇಹಿತರು ಮಾನವೀಯತೆ ಮೆರೆದಿದ್ದಾರೆ.

    ಪಬ್ಲಿಕ್ ಟಿವಿಯ ಕರೆಗೆ ಸ್ಪಂದಿಸಿ ಈ ಕುಟುಂಬಕ್ಕೆ 15 ದಿನಕ್ಕೆ ಬೇಕಾಗುವ ಎಲ್ಲಾ ರೀತಿಯ ದಿನಸಿ ಪದಾರ್ಥಗಳು ಹಾಗೂ ತರಕಾರಿ ಹಣ್ಣುಗಳನ್ನು ನೀಡಿ ಸಂಕಷ್ಟದಲ್ಲಿದ್ದ ಆಟೋ ಡ್ರೈವರ್ ಧನಂಜಯ್ ಕುಟುಂಬಕ್ಕೆ ನೆರವು ನೀಡಿದ್ದಾರೆ. ನೆರವಿಗೆ ಧಾವಿಸಿದ ಪಬ್ಲಿಕ್ ಟಿವಿ ತಂಡ ಹಾಗೂ ಕರವೇ ಸ್ನೇಹಿತರಿಗೆ ಆಟೋ ಚಾಲಕನ ಕುಟುಂಬಸ್ಥರು ಧನ್ಯವಾದ ತಿಳಿಸಿದ್ದಾರೆ.

    ಈ ವೇಳೆ ಮಾತನಾಡಿದ ನೆಲಮಂಗಲ ಕರವೇ ಅಧ್ಯಕ್ಷ ಸುರೇಶ್, ಇಂತಹ ಸಾಕಷ್ಟು ಜನರು ಈ ಲಾಕ್‍ಡೌನ್ ಸಮಯದಲ್ಲಿ ಸಮಸ್ಯೆ ಎದುರಿಸುತಿದ್ದಾರೆ. ಈ ನಿಟ್ಟಿನಲ್ಲಿ ನಮ್ಮ ತಾಲೂಕಿನಲ್ಲಿ ನಮ್ಮ ಸೇವೆಯನ್ನು ಮುಂದುವರಿಸಿ ಜನರ ಏಳಿಗೆಗೆ ನಮ್ಮ ತಂಡ ಶ್ರಮಿಸುವುದಾಗಿ ತಿಳಿಸಿದ್ದಾರೆ.

     

  • ಕೆಲಸಕ್ಕಾಗಿ ನನಗೆ ಪ್ರಭಾಸ್‍ರನ್ನು ಬಿಡಲು ಸಾಧ್ಯವಿಲ್ಲ: ಅನುಷ್ಕಾ ಶೆಟ್ಟಿ

    ಕೆಲಸಕ್ಕಾಗಿ ನನಗೆ ಪ್ರಭಾಸ್‍ರನ್ನು ಬಿಡಲು ಸಾಧ್ಯವಿಲ್ಲ: ಅನುಷ್ಕಾ ಶೆಟ್ಟಿ

    ಹೈದರಾಬಾದ್: ಬಾಹುಬಲಿ ಬೆಡಗಿ, ನಟಿ ಅನುಷ್ಕಾ ಶೆಟ್ಟಿ ಕೆಲಸಕ್ಕಾಗಿ ನನಗೆ ಪ್ರಭಾಸ್ ಅವರನ್ನು ನಾನು ಬಿಡಲು ಸಾಧ್ಯವಿಲ್ಲ ಎಂಬ ಹೇಳಿಕೆಯೊಂದನ್ನು ನೀಡಿದ್ದಾರೆ.

    ಅನುಷ್ಕಾ ತಮ್ಮ ಮುಂಬರುವ ‘ನಿಶಬ್ದಂ’ ಚಿತ್ರದ ಪ್ರಮೋಶನ್‍ಗಾಗಿ ರಿಯಾಲಿಟಿ ಶೋವೊಂದರಲ್ಲಿ ಭಾಗವಹಿಸಿದ್ದರು. ಈ ಕಾರ್ಯಕ್ರಮದ ವಿಡಿಯೋವೊಂದು ವೈರಲ್ ಆಗಿದ್ದು, ಅದರಲ್ಲಿ ಅನುಷ್ಕಾ, “ಕೆಲಸಕ್ಕಾಗಿ ನನಗೆ ಪ್ರಭಾಸ್ ಅವರ ಸ್ನೇಹವನ್ನು ಬಿಡಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

    ಈ ಹಿಂದೆ ಸಂದರ್ಶನವೊಂದರಲ್ಲಿ ಅನುಷ್ಕಾ, “ಕಳೆದ 15 ವರ್ಷಗಳಿಂದ ನನಗೆ ಪ್ರಭಾಸ್ ಗೊತ್ತು. ಪ್ರಭಾಸ್ ನನ್ನ 3 ಎಎಂ ಫ್ರೆಂಡ್. ನಮ್ಮಿಬ್ಬರ ನಡುವೆ ಅದ್ಭುತವಾದ ಗೆಳತನವಿದೆ. ನಮ್ಮಿಬ್ಬರ ಬಗ್ಗೆ ಸಾಕಷ್ಟು ಗಾಸಿಪ್‍ಗಳು ಹರಿದಾಡುತ್ತಿರುತ್ತೆ. ನಮ್ಮಿಬ್ಬರಿಗೂ ಮದುವೆ ಆಗಿಲ್ಲ ಎಂದು ನಮ್ಮ ಬಗ್ಗೆ ಗಾಸಿಪ್‍ಗಳು ಹರಿದಾಡುತ್ತಲೇ ಇರುತ್ತೆ. ನಮ್ಮ ಆನ್‍ಸ್ಕ್ರೀನ್ ಕೆಮಿಸ್ಟ್ರೀ ತುಂಬಾ ಚನ್ನಾಗಿದೆ, ಅದಕ್ಕೆ ಹೀಗೆ ಕೆಲ ಗಾಸಿಪ್‍ಗಳು ಮಾಡಲಾಗುತ್ತೆ. ನಾವಿಬ್ಬರು ಒಳ್ಳೆಯ ಸ್ನೇಹಿತರು. ಇಬ್ಬರೂ ಒಂದೇ ತರಹದ ವ್ಯಕ್ತಿತ್ವ ಹೊಂದಿದ್ದೇವೆ, ನಮ್ಮ ಭಾವನೆಗಳನ್ನು ನಾವು ಮುಚ್ಚಿಡುವುದಿಲ್ಲ” ಎಂದು ಹೇಳಿದ್ದರು.

    ಅನುಷ್ಕಾ ಶೆಟ್ಟಿ `ನಿಶಬ್ದಂ’ ಸಿನಿಮಾದಲ್ಲಿ ಬ್ಯುಸಿಯಾಗಿದ್ದು, ಸದ್ಯದಲ್ಲೇ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಹೇಮಂತ್ ಮಧುಕರ್ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬರುತ್ತಿದ್ದು, ಈಗಾಗಲೆ ಟೀಸರ್ ಮತ್ತು ಪೋಸ್ಟರ್‍ಗಳ ಮೂಲಕ ಸಿನಿಮಾ ಬಹಳಷ್ಟು ನಿರೀಕ್ಷೆ ಹೆಚ್ಚಿಸಿದೆ. ಸ್ವೀಟಿ ಹೊಸ ಚಿತ್ರದಲ್ಲಿ ಹೇಗೆ ಮೋಡಿ ಮಾಡಲಿದ್ದಾರೆ ಎಂದು ನೋಡಲು ಅಭಿಮಾನಿಗಳು ಕಾತುರದಿಂದ ಕಾದ ಕುಳಿತಿದ್ದಾರೆ.

    ಇತ್ತ ಪ್ರಭಾಸ್ ‘ಓ ಡಿಯರ್’ ಎಂಬ ರೊಮ್ಯಾಂಟಿಕ್ ಸಿನಿಮಾದಲ್ಲಿ ನಟಿಸುತ್ತಿದ್ದು, ಅವರಿಗೆ ನಾಯಕಿಯಾಗಿ ನಟಿ ಪೂಜಾ ಹೆಗ್ಡೆ ನಟಿಸುತ್ತಿದ್ದಾರೆ. ಈ ಚಿತ್ರವನ್ನು ರಾಧಾಕೃಷ್ಣ ಕುಮಾರ್ ನಿರ್ದೇಶಿಸುತ್ತಿದ್ದು, ಯುಗಾದಿ ಹಬ್ಬಕ್ಕೆ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಆಗುತ್ತೆ ಎಂದು ಹೇಳಲಾಗುತ್ತಿದೆ.