Tag: ಕಾರ್ಯಕ್ರಮ

  • ಕರ್ನಾಟಕಕ್ಕೆ ಬಂತು ಮೋಡಿಫೈಯಿಂಗ್ ಆಂದೋಲನ

    ಕರ್ನಾಟಕಕ್ಕೆ ಬಂತು ಮೋಡಿಫೈಯಿಂಗ್ ಆಂದೋಲನ

    ಉಡುಪಿ: ಗುಜರಾತ್ ಸಿಎಂ ಮೋದಿಯನ್ನು ಪ್ರಧಾನಿ ಮಾಡಿದ ಮೋಡಿಫೈಯಿಂಗ್ ಸಂಸ್ಥೆ ಕರ್ನಾಟಕಕ್ಕೂ ಕಾಲಿಟ್ಟಿದೆ. ಉಡುಪಿಯಲ್ಲಿ ಮೋಡಿಫೈಯಿಂಗ್ ಉದಯವಾಗಿದೆ. ಕಟಪಾಡಿಯ ಮಹೇಶ್ ಶೆಣೈ ಕರ್ನಾಟಕದ ಉಸ್ತುವಾರಿಯಾಗಿದ್ದಾರೆ.

    ಉಡುಪಿಯಲ್ಲಿ ಮೈಸೂರು ಸಂಸದ, ಬಿಜೆಪಿ ಯುವಮೋರ್ಚಾ ರಾಜ್ಯಾಧ್ಯಕ್ಷ ಪ್ರತಾಪ್ ಸಿಂಹ ಈ ಸಂಸ್ಥೆಯ ಉದ್ಘಾಟನೆ ಮಾಡಿದ್ದಾರೆ. 7 ವರ್ಷದ ಹಿಂದೆ ದೆಹಲಿಯ ತೇಜೇಂದ್ರಪಾಲ್ ಸಿಂಗ್ ಭಾಗ್ ಅವರು ಮೋಡಿಫೈಯಿಂಗ್ ಆಂದೋಲನ ಶುರು ಮಾಡಿದ್ದರು. ಇದೀಗ ಆಂದೋಲನ ಕರ್ನಾಟಕಕ್ಕೆ ವಿಸ್ತರಿಸಿದೆ.

    ಚಾಯ್ ಪೆ ಚರ್ಚಾ, ಚಹಾ ವಿತರಣೆ, ರನ್ ಫಾರ್ ಯೂನಿಟಿ ಮತ್ತಿತರ ಕಾರ್ಯಕ್ರಮ ವನ್ನು ತೇಜ್ ಪಾಲ್ ಮಾಡಿದ್ದರು. ಚುನಾವಣೆವರೆಗೂ ನಿರಂತರವಾಗಿ ಮೋಡಿಫೈಯಿಂಗ್ ಕ್ಯಾಂಪೇನ್ ಇರಲಿದೆ. ಸಿದ್ದರಾಮಯ್ಯ ಸರ್ಕಾರದ ವೈಫಲ್ಯ, ಮೋದಿ ಸರ್ಕಾರದ ಸಾಧನೆಯನ್ನು ಸಾಮಾಜಿಕ ಜಾಲತಾಣದಲ್ಲಿ ಬಿತ್ತರಿಸುವ ಕೆಲಸವನ್ನು ಮೋಡಿಫೈಯಿಂಗ್ ಮಾಡುತ್ತದೆ. ರಾಜಕೀಯ ರಹಿತವಾಗಿರುವ, ಮೋದಿ ಅಭಿಮಾನಿಗಳನ್ನು, ಕೇಂದ್ರ ಸರ್ಕಾರವನ್ನು ಒಪ್ಪುವ ಜನರನ್ನು ಒಗ್ಗೂಡಿಸುವುದು ಮೋಡಿಫೈಯಿಂಗ್ ಕೆಲಸ.

    ದೇಶಕ್ಕೆ ಮೋದಿ ಸಮರ್ಥ ಪ್ರಧಾನಿಯಾಗಿದ್ದರೆ ರಾಜ್ಯಕ್ಕೊಬ್ಬ ಸಮರ್ಥ ಮುಖ್ಯಮಂತ್ರಿ ಅಧಿಕಾರಕ್ಕೆ ಬರಬೇಕೆಂಬ ಉದ್ದೇಶ ಇಟ್ಟುಕೊಂಡಿದ್ದೇವೆ. ಮೋದಿ ಸಾಧನೆ ಜನಕ್ಕೆ ಮುಟ್ಟಿಸುವ ಗುರಿಯಿದೆ. ದಕ್ಷಿಣ ಭಾರತದಲ್ಲಿ ಮೋದಿ ಹವಾ ಕ್ರಿಯೇಟ್ ಮಾಡುವ ಅಭಿಲಾಷೆಯಿದೆ. ಕರ್ನಾಟಕಕ್ಕೂ ಬಿಜೆಪಿ ಆಡಳಿತ ಬೇಕು ಅಂತ ಕರ್ನಾಟಕ ಉಸ್ತುವಾರಿ, ಉಡುಪಿ ಸಂಚಾಲಕ ಮಹೇಶ್ ಶೆಣೈ ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ಹೇಳಿದ್ದಾರೆ.

  • ಅಕ್ರಮ ತಿಳಿದು ಕಾರ್ಯಕ್ರಮದ ವೇದಿಕೆಯಿಂದಲೇ ಸ್ವಾಮೀಜಿಯನ್ನು ಹೊರಹಾಕಿದ ಜನ!

    ಅಕ್ರಮ ತಿಳಿದು ಕಾರ್ಯಕ್ರಮದ ವೇದಿಕೆಯಿಂದಲೇ ಸ್ವಾಮೀಜಿಯನ್ನು ಹೊರಹಾಕಿದ ಜನ!

    ಬಾಗಲಕೋಟೆ: ಸ್ವಾಮೀಜಿಯೊಬ್ಬನ ಅಕ್ರಮ ಚಟುವಟಿಕೆಯ ವಿಚಾರ ತಿಳಿದು ಆತನನ್ನು ಗ್ರಾಮಸ್ಥರೇ ವೇದಿಕೆಯಿಂದ ಹೊರಹಾಕಿದ ಘಟನೆ ಹುನಗುಂದ ತಾಲೂಕಿನ ಸೂಳಿಬಾವಿ ಗ್ರಾಮದಲ್ಲಿ ನಡೆದಿದೆ.

    ಸೂಳಿಭಾವಿ ಗ್ರಾಮದಲ್ಲಿ ಮಂಗಳವಾರ ರಾತ್ರಿ ಪ್ರಾಥಮಿಕ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ನಡೆಸಲಾಗಿತ್ತು. ಶಾಲಾ ಸಿಬ್ಬಂದಿ ಘನಮಠೇಶ್ವರ ಸ್ವಾಮೀಜಿಯ ಹಿಂದಿನ ಅಕ್ರಮ ವಿಚಾರ ತಿಳಿಯದೇ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನ ವಹಿಸುವಂತೆ ಕೇಳಿಕೊಂಡು ಆಹ್ವಾನ ನೀಡಿದ್ದರು.

    ಆಹ್ವಾನ ನೀಡಿದ ಬಳಿಕ ಶಾಲೆಯ ಮುಖ್ಯಸ್ಥರು ಮತ್ತು ಗ್ರಾಮೀಣ ನೈರ್ಮಲ್ಯ ಮತ್ತು ಶುದ್ಧ ಕುಡಿಯುವ ನೀರು ಸಮಿತಿ ಅಧ್ಯಕ್ಷರಾಗಿರುವ ಎಸ್.ಜಿ ನಂಜಯ್ಯನಮಠ ಅವರಿಗೆ ಜಿಲ್ಲೆ ಹಿರೆಕೆರೂರು ತಾಲೂಕಿನ ಅಬಲೂರು ಗ್ರಾಮದ ಈ ಸ್ವಾಮೀಜಿ ಒಂದು ಕೋಟಿಗೂ ಹೆಚ್ಚು ಹಣ ವಂಚನೆ ಮಾಡಿದ್ದು ಅಲ್ಲದೇ ಇಬ್ಬರನ್ನು ಮದುವೆಯಾಗಿ ಮೋಸ ಮಾಡಿದ್ದಾನೆ ಎನ್ನುವ ಮಾಹಿತಿ ತಿಳಿದಿದೆ.

    ವಿಚಾರ ತಿಳಿದ ಬಳಿಕ ಎಸ್.ಜಿ ನಂಜಯ್ಯನಮಠ ಮುಜುಗರ ತಪ್ಪಿಸಿಕೊಳ್ಳಲು ಸ್ವಾಮೀಜಿಗೆ ಫೋನ್ ಮಾಡಿ ಕಾರ್ಯಕ್ರಮ ರದ್ದಾಗಿದೆ ಬರಬೇಡಿ ಎಂದರೂ, ಕಳ್ಳ ಸ್ವಾಮೀಜಿ ಕಾರ್ಯಕ್ರಮಕ್ಕೆ ಹಾಜರಾಗಿದ್ದ. ಬರಬೇಡಿ ಎಂದರೂ ಕಾರ್ಯಕ್ರಮಕ್ಕೆ ಹಾಜರಾಗಿದ್ದನ್ನು ನೋಡಿ ಗ್ರಾಮಸ್ಥರು ಹಾಗೂ ಮಾಜಿ ಶಾಸಕ ನಂಜಯನಮಠ ಈ ಸ್ವಾಮೀಜಿಯನ್ನ ವೇದಿಕೆಯಿಂದ ಹೊರ ನಡೆಯುವಂತೆ ಆಕ್ರೋಶದಿಂದ ಆಗ್ರಹಿಸಿದ್ದಾರೆ.

    ಈ ವೇಳೆ ಘನಮಠೇಶ್ವರ ಸ್ವಾಮೀಜಿ ನಾನು ಹಿಂದೂ ಧರ್ಮದ ರಕ್ಷಕ. ಧರ್ಮದ ಉಳಿವಿಗಾಗಿ ಹೋರಾಡುತ್ತಿದ್ದೇನೆ. ನಾನು ಉಗ್ರಗಾಮಿಯೇ? ನಕ್ಸಲೈಟಾ ಎಂದು ಪ್ರಶ್ನೆ ಮಾಡಿದ್ದಲ್ಲದೇ, ನಾನು ತಪ್ಪು ಮಾಡಿದರೆ ಇಲ್ಲೇ ಗಲ್ಲಿಗೇರಿಸಬೇಕು ಇಲ್ಲವೇ ಕಾರ್ಯಕ್ರಮ ನಡೆಯಲು ಬಿಡಬಾರದು ಎಂದು ರಾದ್ಧಾಂತ ಮಾಡಿದ್ದಾನೆ.

    ಈತನ ಮಾತುಗಳಿಗೆ ಕೆರಳಿದ ಗ್ರಾಮಸ್ಥರು ಇದು ಮಕ್ಕಳ ಕಾರ್ಯಕ್ರಮ ಇಲ್ಲಿ ನಿನ್ನ ಅಸಂಬದ್ಧ ಮಾತುಗಳಿಗೆ ಆಸ್ಪದವಿಲ್ಲ, ಮೊದಲು ಹೊರಹೋಗಿ ಎಂದು ಹೇಳಿ ಸ್ವಾಮೀಜಿಯನ್ನು ಹೊರದಬ್ಬಿದ್ದಾರೆ.

  • ವಿಶ್ವಸುಂದರಿ ಮಾನುಷಿಯ ಖಡಕ್ ಪ್ರಶ್ನೆಗೆ ಕೊಹ್ಲಿ ಮನದಾಳದ ಉತ್ತರ ನೀಡಿದ್ದು ಹೀಗೆ

    ವಿಶ್ವಸುಂದರಿ ಮಾನುಷಿಯ ಖಡಕ್ ಪ್ರಶ್ನೆಗೆ ಕೊಹ್ಲಿ ಮನದಾಳದ ಉತ್ತರ ನೀಡಿದ್ದು ಹೀಗೆ

    ನವದೆಹಲಿ: ಚೀನಾದಲ್ಲಿ ನಡೆದ ವಿಶ್ವಸುಂದರಿ ಸ್ಪರ್ಧೆಯಲ್ಲಿ 17 ವರ್ಷಗಳ ನಂತರ ಭಾರತಕ್ಕೆ ಪ್ರಶಸ್ತಿ ಜಯಿಸಿಕೊಟ್ಟ ಮಾನುಷಿ ಚಿಲ್ಲರ್ ಮತ್ತು ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ದೆಹಲಿಯಲ್ಲಿ ನಡೆದ ಒಂದು ಕಾರ್ಯಕ್ರಮದಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ.

    ಆ ಕಾರ್ಯಕ್ರಮದಲ್ಲಿ ಮಾನುಷಿ ಚಿಲ್ಲರ್ ಟೀಂ ಇಂಡಿಯಾ ಕ್ಯಾಪ್ಟನ್ ಕೊಹ್ಲಿಗೆ, ಇಂದು ನೀವು ವಿಶ್ವದ ಅತ್ಯುತ್ತಮ ಬ್ಯಾಟ್ಸ್ ಮನ್ ಆಗಿದ್ದೀರಿ. ನೀವು ಎಲ್ಲರಿಗೂ ಒಂದು ಸ್ಫೂರ್ತಿ ಆಗಿದ್ದೀರಿ ಹಾಗೂ ನಮ್ಮ ಸಮಾಜಕ್ಕಾಗಿ ಸಾಕಷ್ಟು ಒಳ್ಳೆಯ ಕೆಲಸಗಳನ್ನು ಮಾಡಿದ್ದೀರಿ. ತುಂಬ ಜನರು ನಿಮ್ಮಿಂದ ಸ್ಫೂರ್ತಿ ಪಡೆಯುತ್ತಿದ್ದಾರೆ. ಹೀಗಾಗಿ ಕ್ರಿಕೆಟ್ ಜಗತ್ತಿನ ಮಕ್ಕಳಿಗೆ ನೀವು ಇದನ್ನು ಹೇಗೆ ಹಿಂತಿರುಗಿಸುತ್ತೀರಿ ಎಂದು ಪ್ರಶ್ನಿಸಿದರು.

    ನಾವು ಯಾವಾಗ ಏನು ಮಾಡುತ್ತೇವೆ ಎನ್ನುವುದನ್ನು ವ್ಯಕ್ತಪಡಿಸುವುದು ಮುಖ್ಯ. ನಾವು ಪ್ರಾಮಾಣಿಕವಾಗಿ ಆ ಕೆಲಸವನ್ನು ಮಾಡಬೇಕು. ಅಷ್ಟೇ ಅಲ್ಲದೇ ಮುಕ್ತ ಮನಸ್ಸಿನಿಂದ ಮಾಡಬೇಕು. ಇಲ್ಲದಿದ್ದರೆ ಜನರು ನಾವು ನಟಿಸುತ್ತಿದ್ದೇವೆ ಎಂದು ತಿಳಿದುಕೊಳ್ಳುತ್ತಾರೆ. ನಾನು ಬೇರೆಯವರ ರೀತಿ ಇರಲು ಯಾವತ್ತೂ ಪ್ರಯತ್ನಿಸಿಲ್ಲ. ನಾನು ಯಾವಾಗಲೂ ನಾನಾಗಿಯೇ ಇರಲು ಪ್ರಯತ್ನಿಸುತ್ತೇನೆ. ನಾನು ಇರುವ ರೀತಿ ಹಾಗೂ ನಾನು ತೊಡಗುವ ರೀತಿ ಜನರಿಗೆ ಇಷ್ಟವಾಗುವುದಿಲ್ಲ ಎನ್ನುವುದು ನನಗೆ ತಿಳಿದಿದೆ. ಆದರೆ ಈ ವಿಚಾರಗಳು ನನಗೆ ಎಂದಿಗೂ ತೊಂದರೆಯಾಗಿಲ್ಲ. ಯಾವಾಗ ನಾನು ಬದಲಾಗಬೇಕು ಎಂದು ಅನಿಸುತ್ತದೋ ಆಗ ನಾನು ಆ ಸಮಯದಲ್ಲಿ ಬದಲಾಗಿದ್ದೇನೆ ಎಂದು ವಿರಾಟ್ ಕೊಹ್ಲಿ ದೀರ್ಘ ಉತ್ತರವನ್ನು ನೀಡಿದ್ದಾರೆ.

    ನಾವು ಯಾವತ್ತೂ ನಮ್ಮ ಸ್ವಂತ ಅಸ್ತಿತ್ವವನ್ನು ಕಳೆದುಕೊಳ್ಳಬಾರದು. ಆಗ ನಾವು ಬೇರೆಯವರಿಗೆ ಸ್ಫೂರ್ತಿ ಆಗಲು ಸಾಧ್ಯವಿಲ್ಲ. ನಾವು ಯಾವತ್ತೂ ನಮ್ಮ ಗುರುತನ್ನು, ನಮ್ಮ ಪಾತ್ರವನ್ನು ಹಾಗೂ ವ್ಯಕ್ತಿತ್ವವನ್ನು ಕಳೆದುಕೊಳ್ಳಬಾರದು. ಯಾಕೆಂದರೆ ನೀವು ಬೇರೆಯವರ ರೀತಿ ಆಗಲೂ ಹೊರಟರೆ ನೀವು ಎಂದಿಗೂ ಯಶಸ್ಸು ಕಾಣುವುದಿಲ್ಲ ಹಾಗೂ ಬೇರೆಯವರಿಗೆ ಸ್ಫೂರ್ತಿ ಆಗಲು ಸಾಧ್ಯವಿಲ್ಲ ಎಂದು ಕೊಹ್ಲಿ ಮಾನುಷಿಗೆ ಉತ್ತರಿಸಿದ್ದಾರೆ.

  • ಪಬ್ಲಿಕ್ ಮ್ಯೂಸಿಕ್‍ಗೆ 3ರ ಸಂಭ್ರಮ – ದಿನವಿಡೀ ನಿಮಗಾಗಿ ವಿಶೇಷ ಕಾರ್ಯಕ್ರಮ

    ಪಬ್ಲಿಕ್ ಮ್ಯೂಸಿಕ್‍ಗೆ 3ರ ಸಂಭ್ರಮ – ದಿನವಿಡೀ ನಿಮಗಾಗಿ ವಿಶೇಷ ಕಾರ್ಯಕ್ರಮ

    – ಮೂರು ಪ್ಲಸ್ಸು ನೋಡಿ ಎಂಜಾಯ್ ಮಾಡಿ

    ಬೆಂಗಳೂರು: ನೀವು ಹರಸಿ ಬೆಳೆಸಿದ ನಿಮ್ಮ ಪಬ್ಲಿಕ್ ಮ್ಯೂಸಿಕ್ ಚಾನೆಲ್ ಇಂದು ಮೂರನೇ ವರ್ಷಕ್ಕೆ ಕಾಲಿಡುತ್ತಿದೆ.

    ಮೂರನೇ ವಸಂತದ ಸಂಭ್ರಮಾಚರಣೆಯ ಸಲುವಾಗಿ ಮ್ಯೂಸಿಕಲ್ ಧಮಾಕೇದಾರ್ ಕಾರ್ಯಕ್ರಮಗಳು ಪ್ರಸಾರವಾಗಲಿವೆ. ಜೊತೆಗೆ ದಿನಪೂರ್ತಿ ವಿಭಿನ್ನ ಸಂಗೀತ ಕಾರ್ಯಕ್ರಗಳು ಇರಲಿವೆ. 2ನೇ ವರ್ಷದ ಸಂಭ್ರಮಾಚರಣೆ ವೇಳೆ ದಾಖಲೆಯ ಮ್ಯೂಸಿಕಲ್ ಮ್ಯಾರಥಾನ್ ಕಾರ್ಯಕ್ರಮ ಮಾಡಿದ್ದಾಗ ನೀವು ನೀಡಿದ್ದ ಅಭೂತಪೂರ್ವ ಬೆಂಬಲ ನಮಗೆ ಇನ್ನೂ ನೆನಪಿದೆ.

    ಈ ಬಾರಿ ಮೂರು ವರ್ಷ ಪ್ಲಸ್ಸು ಎಂಬ ಕಾನ್ಸೆಪ್ಟ್‍ನೊಂದಿಗೆ ನಿಮ್ಮ ಮುಂದೆ ಬರುತ್ತಿದ್ದೇವೆ. ಮ್ಯೂಸಿಕ್ ಕಂಪೋಸರ್ ಅರ್ಜುನ್ ಜನ್ಯ, ನಟಿ ರಚಿತಾರಾಮ್ ಹಾಗೂ ಧ್ರುವ ಸರ್ಜಾ ಸೇರಿದಂತೆ ಹತ್ತಾರು ಸೆಲೆಬ್ರಿಟಿಗಳು ನಿಮ್ಮೊಂದಿಗಿರಲಿದ್ದಾರೆ. ನಮ್ಮನ್ನು ನಿರಂತರ ಬೆಂಬಲಿಸಿ, ಕೈಹಿಡಿದು ಮುನ್ನಡೆಸಿದ ನಿಮಗೆ ಹೃದಯಪೂರ್ವಕ ಕೃತಜ್ಞತೆಗಳು.

  • ರಮಾನಾಥ ರೈಗೆ ಗೃಹ ಖಾತೆ: ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿದ್ದು ಹೀಗೆ

    ರಮಾನಾಥ ರೈಗೆ ಗೃಹ ಖಾತೆ: ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿದ್ದು ಹೀಗೆ

    ಚಿಕ್ಕಮಗಳೂರು: ರಮಾನಾಥ ರೈ ಗೃಹ ಸಚಿವ ಆಗುವುದು ನನಗೆ ಸಂತೋಷ ತಂದಿದೆ ಎಂದು ಆರ್‍ಎಸ್‍ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಹೇಳಿದರು.

    ಮೂಡಿಗೆರೆಯ ಸಾರ್ವಜನಿಕ ಗಣಪತಿ ಸೇವಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಮಾನಾಥ ರೈ ಅವರು ಸಿಟ್ಟಿನಿಂದ, ದ್ವೇಷದಿಂದ, ಆವೇಷದಿಂದ ಧರ್ಮವಿರೋಧಿ ಕೆಲಸ ಮಾಡಬಾರದು. ಏಕೆಂದರೆ ಗೃಹ ಅಂದರ ಮನೆ, ಮನೆ ಆನಂದ, ಸಂತೋಷ ನೀಡುವಂತಹ ಜಾಗ. ರೈ ಅವರಿಗೆ ಇಡೀ ರಾಜ್ಯವೇ ಮನೆ ಇದ್ದ ಹಾಗೆ. ಎಲ್ಲರಿಗೂ ಸುಖ, ಶಾಂತಿ, ನೆಮ್ಮದಿ ನೀಡಿ ರಾಜಕೀಯ ವೈರತ್ವ ಮರೆತು ಕೆಲಸ ಮಾಡಲಿ ಎಂದು ರೈ ಅವರಿಗೆ ಸಲಹೆ ನೀಡಿದರು.

    ಕೊಲ್ಲೂರು ದೇವಾಲಯದಿಂದ ಕಲ್ಲಡ್ಕ ಶ್ರೀರಾಮ ಶಾಲೆಗೆ ಅನುದಾನ ನಿಲ್ಲಿಸಿದ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ನಾನು ಕಾನೂನು ಸಮರ ನಿಲ್ಲಿಸೋದು ಇಲ್ಲ, ಅವರ ಕಾಲಿಗೂ ಬೀಳೋದಿಲ್ಲ. ಸರ್ಕಾರ ಮಕ್ಕಳಿಗೆ ಮೋಸ ಮಾಡುತ್ತಿದೆ ಎಂದು ಹೇಳಿದರು.

    ಸಿದ್ದರಾಮಯ್ಯ ನಾನು ಅಹಿಂದ ಸಿಎಂ ಎಂದು ಹೇಳುತ್ತಾರೆ. ಆದರೆ ಕಲ್ಲಡ್ಕ ಶಾಲೆಯಲ್ಲಿ ಶೇ.94 ರಷ್ಟು ಅಹಿಂದ ಮಕ್ಕಳಿದ್ದಾರೆ. ಈ ಸರ್ಕಾರ ಮಕ್ಕಳ ಹೊಟ್ಟೆ ಮೇಲೆ ಹೊಡೆದಿದೆ. ಇದು ಅಧರ್ಮದಲ್ಲಿ ನಡೆಯುತ್ತಿರೋ ಸರ್ಕಾರ. ಇವರಿಗೆ ರಾಜಕೀಯ ದ್ವೇಷವಿದ್ದರೆ ಅಖಾಡಕ್ಕೆ ಬರಲಿ ಹೋರಾಡೋಣ. ಅದನ್ನು ಬಿಟ್ಟು ಮಕ್ಕಳ ಜೊತೆ ಹೋರಾಡಬಾರದು ಯಾರೇ ಆಗಲಿ ಯಾವ ಪಕ್ಷದವರೇ ಆಗಲಿ, ಮಕ್ಕಳ ಅನ್ನಕ್ಕೆ ಕನ್ನ, ಕಲ್ಲು ಹಾಕಬಾರದು ಎಂದು ಸರ್ಕಾರದ ವಿರುದ್ಧ ಕಿಡಿ ಕಾರಿದರು.

    ಮೂಡಿಗೆರೆಯ ಹ್ಯಾಂಡ್ ಪೋಸ್ಟ್‍ನಿಂದ ಬೈಕ್ ಜಾಥಾ ಮಾಡುವ ಮೂಲಕ ಪ್ರಭಾಕರ್ ಭಟ್ ಅವರನ್ನು ಸ್ವಾಗತಿಸಿಕೊಂಡರು. ಕಲ್ಲಡ್ಕ ಪ್ರಭಾಕರ್ ಭಟ್ ಮೆರವಣಿಗೆಗಾಗಿ ಸ್ಥಳೀಯರು ತೆರೆದ ಜೀಪ್ ಸಿದ್ಧಪಡಿಸಿಕೊಂಡಿದ್ದರು. ಆದರೆ ಪ್ರಭಾಕರ್ ಭಟ್ ಮೆರವಣಿಗೆಯಲ್ಲಿ ಪಾಲ್ಗೊಳ್ಳದೆ ತಮ್ಮ ಕಾರಿನಲ್ಲಿ ನೇರವಾಗಿ ರಂಗಮಂದಿರದ ಬಳಿ ಬಂದು ಗಣಪತಿಯ ಹೋಮ-ಹವನ ಪೂಜೆಯಲ್ಲಿ ಪಾಲ್ಗೊಂಡು ಧಾರ್ಮಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದರು.

    ನಗರದಾದ್ಯಂತ 800 ಕ್ಕೂ ಹೆಚ್ಚು ಪೊಲೀಸರಿಂದ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಅನೇಕ ಷರತ್ತು ವಿಧಿಸಿ ಕಲ್ಲಡ್ಕ ಪ್ರಭಾಕರ್ ಭಟ್ ಆಗಮನಕ್ಕೆ ಪೊಲೀಸರು ಅನುವು ಮಾಡಿಕೊಟ್ಟಿದ್ದರು.

  • ತುಪ್ಪದ ಬೆಡಗಿ ಮಂಗಳೂರಿಗೆ ಭೇಟಿ- ಅಂಜಲ್ ಫ್ರೈ, ಪ್ರಾವ್ನ್ಸ್ ಗೀ ರೋಸ್ಟ್ ಸವಿದ ನಟಿ ರಾಗಿಣಿ

    ತುಪ್ಪದ ಬೆಡಗಿ ಮಂಗಳೂರಿಗೆ ಭೇಟಿ- ಅಂಜಲ್ ಫ್ರೈ, ಪ್ರಾವ್ನ್ಸ್ ಗೀ ರೋಸ್ಟ್ ಸವಿದ ನಟಿ ರಾಗಿಣಿ

    ಮಂಗಳೂರು: ಕೆಂಪೇಗೌಡನ ಅರಗಿಣಿ ಹಾಗೂ ತುಪ್ಪದ ಹುಡುಗಿ ರಾಗಿಣಿ ದ್ವಿವೇದಿ ಗುರುವಾರ ಕರಾವಳಿ ನಗರ ಮಂಗಳೂರಿಗೆ ಭೇಟಿ ನೀಡಿ ಮೀನಿನ ಖಾದ್ಯವನ್ನು ಸವಿದಿದ್ದಾರೆ.

     

    ನಗರದ ಮಣ್ಣಗುಡ್ಡದಲ್ಲಿರುವ ನಂದಿನಿ ಫಿಶ್ ಬೌಲ್ ರೆಸ್ಟೋರೆಂಟ್‍ಗೆ ಮಧ್ಯಾಹ್ನ ದಿಢೀರನೆ ಭೇಟಿ ನೀಡಿ ನಟಿ ರಾಗಿಣಿ ಕರಾವಳಿಯ ತಾಜಾ ಮೀನಿನ ಖಾದ್ಯಗಳಾದ ಅಂಜಲ್ ಫ್ರೈ, ಪ್ರಾವ್ನ್ಸ್ ಗೀ ರೋಸ್ಟ್ ಮತ್ತು ಫಿಶ್ ಕರಿ ರೈಸ್‍ಯನ್ನು ಭರ್ಜರಿಯಾಗಿ ತಿಂದು ತೇಗಿದ್ದಾರೆ.

    ಮಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅತಿಥಿಯಾಗಿ ಭಾಗವಹಿಸಲು ಬಂದಿದ್ದ ಖ್ಯಾತ ಬಹುಭಾಷಾ ನಟಿ ರಾಗಿಣಿಯವರು ದಿಢೀರ್ ಭೇಟಿ ನೀಡಿರುವುದು ಕಂಡು ಹೋಟೆಲ್ ಮಾಲೀಕನಿಗೆ ಹಾಗೂ ಗ್ರಾಹಕರಿಗೆ ಸಂತೋಷ ತಂದಿದೆ. ರಾಗಿಣಿ ರೆಸ್ಟೋರೆಂಟ್‍ಗೆ ಬಂದಿರುವುದು ನೋಡಿ ಹೊಟೇಲ್‍ನ ಮಾಲೀಕ ಅನುಪ್ ಫುಲ್ ಖುಷ್ ಆಗಿದ್ದರೆ ಹಾಗೂ ರೆಸ್ಟೋರೆಂಟ್‍ನಲ್ಲಿದ್ದ ಜನರು ಮಾತ್ರ ಸೆಲ್ಫಿಗಾಗಿ ಮುಗಿಬಿದಿದ್ದರು. ತಮ್ಮ ಫ್ಯಾನ್ಸ್ ಮೇಲೆ ಪ್ರೀತಿ ಹೊಂದಿರುವ ರಾಗಿಣಿ ಕೂಡ ಅವರೊಂದಿಗೆ ಒಂದೆರಡು ಸೆಲ್ಫಿ ಕ್ಲಿಕ್ಕಿಸಿಕೊಂಡರು.

    ಈಗಾಗಲೇ ಕನ್ನಡ ಸಿನಿಮಾಗಳಿಗೆ ಸೈನ್ ಮಾಡಿರುವ ನಟಿ ರಾಗಿಣಿ ತಮ್ಮ ತೂಕವನ್ನು ಗಣನೀಯ ಪ್ರಮಾಣದಲ್ಲಿ ಇಳಿಸುವ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಅದಕ್ಕೆ ಬೇಕಾಗಿರುವ ಡಯೆಟ್ ಚಾರ್ಟ್‍ಯನ್ನು ಕೂಡ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ. ಆದರೆ ಮಂಗಳೂರಿಗೆ ಬಂದ ರಾಗಿಣಿಯವರು ಅಂಜಲ್ ಫ್ರೈ ಹಾಗೂ ಇತರ ಖಾದ್ಯಗಳಿಗೆ ಮನಸೋತು ತಮ್ಮ ಎಲ್ಲಾ ಡಯಟ್ ಪ್ಲಾನ್‍ಗಳನ್ನು ಮರೆತು ಹೊಟ್ಟೆ ತುಂಬಾ ತಿಂದಿದ್ದಾರೆ.