Tag: ಕಾರ್ಯಕ್ರಮ

  • IIFA ಫಿಲ್ಮ್ ಅವಾರ್ಡ್ಸ್- ಯಾರಿಗೆ ಯಾವ ಪ್ರಶಸ್ತಿ: ಇಲ್ಲಿದೆ ಸಂಪೂರ್ಣ ಮಾಹಿತಿ

    IIFA ಫಿಲ್ಮ್ ಅವಾರ್ಡ್ಸ್- ಯಾರಿಗೆ ಯಾವ ಪ್ರಶಸ್ತಿ: ಇಲ್ಲಿದೆ ಸಂಪೂರ್ಣ ಮಾಹಿತಿ

    ನವದೆಹಲಿ: ಭಾರತ ಅಂತರಾಷ್ಟ್ರೀಯ ಫಿಲ್ಮ್ ಅವಾರ್ಡ್ಸ್ (ಐಫಾ) ಭಾನುವಾರ ರಾತ್ರಿ ಬ್ಯಾಂಕಾಕ್‍ನಲ್ಲಿ ನಡೆದಿದೆ. ಈ ಕಾರ್ಯಕ್ರಮದಲ್ಲಿ ಬಾಲಿವುಡ್ ತಾರೆಯರಾದ ರೇಖಾ, ರಣ್‍ಬೀರ್ ಕಪೂರ್, ವರುಣ್ ಧವನ್, ಅನಿಲ್ ಕಪೂರ್, ಅರ್ಜುನ್ ಕಪೂರ್, ಶ್ರದ್ಧಾ ಕಪೂರ್, ಕೃತಿ ಸನೋನ್, ಕಾರ್ತಿಕ್ ಆರ್ಯನ್, ಕರಣ್ ಜೋಹರ್ ಮುಂತಾದ ತಾರೆಯರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

    ಬ್ಯಾಂಕಾಕ್‍ನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ದಿವಂಗತ ಶ್ರೀದೇವಿ ಅವರಿಗೆ ‘ಮಾಮ್’ ಚಿತ್ರಕ್ಕೆ ಅತ್ಯುತ್ತಮ ನಟಿ ಪ್ರಶಸ್ತಿ ದೊರೆತಿದೆ. ‘ಹಿಂದಿ ಮೀಡಿಯಂ’ ಚಿತ್ರಕ್ಕಾಗಿ ನಟ ಇರ್ಫಾನ್ ಖಾನ್ ಅತ್ಯುತ್ತಮ ನಟ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಇನ್ನೂ ವಿದ್ಯಾ ಬಾಲನ್ ನಟನೆಯ ‘ತುಮಾರಿ ಸುಲು’ ಚಿತ್ರಕ್ಕೆ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಪಡೆದಿದೆ. ಇದನ್ನೂ ಓದಿ: 63ನೇ ವಯಸ್ಸಿನಲ್ಲಿಯೂ 23ರ ನಟಿಯಂತೆ ಹೆಜ್ಜೆ ಹಾಕಿದ ರೇಖಾ-ವಿಡಿಯೋ ನೋಡಿ

    ಐಫಾ ಕಾರ್ಯಕ್ರಮವನ್ನೂ ಖ್ಯಾತ ನಿರ್ದೇಶಕ ಕರಣ್ ಜೋಹರ್ ಹಾಗೂ ನಟ ರಿತೇಶ್ ದೇಶ್‍ಮುಕ್ ನಿರೂಪಣೆ ಮಾಡಿದ್ದಾರೆ. ಇನ್ನೂ 20 ವರ್ಷಗಳ ನಂತರ ಹಿರಿಯ ನಟಿ ರೇಖಾ ಸ್ಟೇಜ್ ಮೇಲೆ ಹೆಜ್ಜೆ ಹಾಕಿದ್ದಾರೆ.

    ಯಾರಿಗೆ ಯಾವ ಪ್ರಶಸ್ತಿ: ಇಲ್ಲಿದೆ ಸಂಪೂರ್ಣ ಮಾಹಿತಿ:
    ಅತ್ಯುತ್ತಮ ಚಿತ್ರ: ತುಮಾರಿ ಸುಲು
    ಅತ್ಯುತ್ತಮ ನಟಿ: ಶ್ರೀದೇವಿ (ಮಾಮ್)
    ಅತ್ಯುತ್ತಮ ನಟ: ಇರ್ಫಾನ್ ಖಾನ್ (ಹಿಂದಿ ಮೀಡಿಯಂ)
    ಅತ್ಯುತ್ತಮ ಪೋಷಕ ನಟಿ: ಮೆಹೆರ್ ವಿಜ್ (ಸಿಕ್ರೇಟ್ ಸೂಪರ್ ಸ್ಟಾರ್)

    ಅತ್ಯುತ್ತಮ ಪೋಷಕ ನಟ: ನವಾಜುದ್ದೀನ್ ಸಿದ್ದಿಕಿ (ಮಾಮ್)
    ಅತ್ಯುತ್ತಮ ನಿರ್ದೇಶಕ: ಸಕೇತ್ ಚೌಧರಿ (ಹಿಂದಿ ಮೀಡಿಯಂ)
    ಅತ್ಯುತ್ತಮ ಡೆಬ್ಯೂ ನಿರ್ದೇಶಕ: ಕೋನಕೋನ ಸೇನ್‍ಶರ್ಮಾ (ಎ ಡೆತ್ ಇನ್ ದ ಗುಂಜ್)
    ಅತ್ಯುತ್ತಮ ಕಥೆ: ಅಮಿತ್ ವಿ ಮುಸರ್‍ಕರ್ (ನ್ಯೂಟನ್)

    ಅತ್ಯುತ್ತಮ ಸಂಗೀತ ನಿರ್ದೇಶಕ: ಅಮಾಲ್ ಮಲ್ಲಿಕ್, ತನೀಶ್ಕ್ ಬಗಾಚಿ, ಅಕೀಲ್ ಸಚ್‍ದೇವ (ಬದ್ರಿನಾಥ್ ಕೀ ದುಲ್ಹನೀಯಾ)
    ಅತ್ಯುತ್ತಮ ಸ್ಕ್ರೀನ್‍ಪ್ಲೇ: ನಿತೇಶ್ ತಿವಾರಿ, ಶ್ರೇಯಸ್ ಜೈನ್ (ಬರೇಲಿ ಕೀ ಬರ್ಫಿ)
    ಅತ್ಯುತ್ತಮ ಗಾಯಕಿ: ಮೇಘನಾ ಮಿಶ್ರಾ (ಮೇ ಕೋನ್ ಹೂ- ಸಿಕ್ರೇಟ್ ಸೂಪರ್ ಸ್ಟಾರ್)
    ಅತ್ಯುತ್ತಮ ಗಾಯಕ: ಅರ್ಜಿತ್ ಸಿಂಗ್ (ಹವಾಯೈ- ಜಬ್ ಹ್ಯಾರಿ ಮೆಟ್ ಸೇಜಲ್)

    ಅತ್ಯುತ್ತಮ ನೃತ್ಯ ನಿರ್ದೇಶಕ: ವಿಜಯ್ ಗಂಗೂಲಿ ಹಾಗೂ ರುಯಿಲ್ ದೌಸಾನ್ ವರಿನ್‍ದಾನಿ (ಗಲ್ತಿ ಸೇ ಮಿಸ್ಟೇಕ್)
    ಬೆಸ್ಟ್ ಸ್ಟೈಲ್ ಐಕಾನ್: ಕೃತಿ ಸನೋನ್
    ಭಾರತೀಯ ಸಿನಿಮಾದ ಜೀವಮಾನ ಶ್ರೇಷ್ಠ ಪ್ರಶಸ್ತಿ: ಅನುಪಮ್ ಖೇರ್

  • ಸಂಬಂಧಿಕರ ಮನೆ ಕಾರ್ಯಕ್ರಮದ ಅಡುಗೆಗೆ ವಿಷ ಬೆರೆಸಿ 5 ಜನರ ಕೊಂದವಳ ಬಂಧನ!

    ಸಂಬಂಧಿಕರ ಮನೆ ಕಾರ್ಯಕ್ರಮದ ಅಡುಗೆಗೆ ವಿಷ ಬೆರೆಸಿ 5 ಜನರ ಕೊಂದವಳ ಬಂಧನ!

    ಮುಂಬೈ: ಸಂಬಂಧಿಕರ ಮನೆ ಕಾರ್ಯಕ್ರಮದ ಅಡುಗೆಗೆ ಕ್ರಿಮಿನಾಶಕ ಬೆರೆಸಿ, 5 ಜನರ ಸಾವಿಗೆ ಕಾರಣವಾಗಿದ್ದ ಆರೋಪಿ ಮಹಿಳೆಯನ್ನು ಮಹಾರಾಷ್ಟ್ರ ಪೊಲೀಸರು ಬಂಧಿಸಿದ್ದಾರೆ.

    ಪ್ರಗ್ಯಾ ಸುರ್ವಾಸ್ ಬಂಧಿತ ಮಹಿಳೆ. ಜೂನ್ 18ರಂದು ಮಹಾರಾಷ್ಟ್ರದ ರಾಯ್ಗಡ್ ಜಿಲ್ಲೆ ಮಹಾದ್ ಹಳ್ಳಿಯ ಸುಭಾಷ್ ಮನ್ನಾ ಎನ್ನುವ ಮನೆಯ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿತ್ತು.

    ಪ್ರಗ್ಯಾ ಸುರ್ವಾಸ್ ತನ್ನ ಸಂಬಂಧಿ ಸುಭಾಷ್ ಮನ್ನಾ ಅವರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಳು. ಅಲ್ಲದೇ ಕಾರ್ಯಕ್ರಮದ ನಿಮಿತ್ತ ತಯಾರಾಗಿದ್ದ ಅಡುಗೆಗೆ ಕ್ರಿಮಿನಾಶಕ ಬೆರೆಸಿ ಅತಿಥಿಗಳಿಗೆ ಉಣಬಡಿಸಿದ್ದಾಳೆ. ಅವಳ ಈ ಅಮಾನವೀಯ ಕೃತ್ಯದಿಂದಾಗಿ ಊಟ ಮಾಡಿದ್ದ 5 ಜನರು ಮೃತಪಟ್ಟಿದ್ದು, 80ಕ್ಕೂ ಹೆಚ್ಚು ಜನರು ಆಸ್ಪತ್ರೆಗೆ ದಾಖಲಾಗಿದ್ದರು.

    ಪ್ರಕರಣ ದಾಖಲಿಸಿಕೊಂಡು ತೀವ್ರ ತನಿಖೆ ಕೈಗೊಂಡಿದ್ದ ರಾಯ್ಗಡ್ ಪೊಲೀಸರು, ಪ್ರಗ್ಯಾ ಸುರ್ವಾಸ್ ನನ್ನು ವಿಚಾರಿಸಿದ್ದಾರೆ. ಆಗ ಅವಳು ಕೌಟುಂಬಿಕ ಕಲಹದಿಂದಾಗಿ ತಾನು ಆಹಾರದಲ್ಲಿ ಕ್ರಿಮಿನಾಶಕ ಬೆರೆಸಿರುವುದಾಗಿ ಒಪ್ಪಿಕೊಂಡಿದ್ದಾಳೆ. ಪ್ರಗ್ಯಾ ಸುರ್ವಾಸ್ ವಿರುದ್ಧ ಈಗ ಕೊಲೆ ಹಾಗೂ ಕೊಲೆಗೆ ಯತ್ನ ಪ್ರಕರಣ ದಾಖಲಾಗಿದೆ.

  • ಬುಧವಾರ ರೇವಾ ವಿವಿಯಲ್ಲಿ ಸ್ಟೇಟ್ ಆಫ್ ದಿ ಆರ್ಟ್ ಸೆಕ್ಯೂರಿಟಿ ಸರ್ವಿಸ್ ಸಿಸ್ಟಂ ಕಾರ್ಯಕ್ರಮ

    ಬುಧವಾರ ರೇವಾ ವಿವಿಯಲ್ಲಿ ಸ್ಟೇಟ್ ಆಫ್ ದಿ ಆರ್ಟ್ ಸೆಕ್ಯೂರಿಟಿ ಸರ್ವಿಸ್ ಸಿಸ್ಟಂ ಕಾರ್ಯಕ್ರಮ

    ಬೆಂಗಳೂರು: ರೇವಾ ವಿಶ್ವವಿದ್ಯಾಲಯ “ಸ್ಟೇಟ್ ಆಫ್ ದಿ ಆರ್ಟ್ ಸೆಕ್ಯೂರಿಟಿ ಸರ್ವಿಸ್ ಸಿಸ್ಟಂ” ಹೆಸರಿನಲ್ಲಿ ಬುಧವಾರ ಕಾರ್ಯಕ್ರಮವನ್ನು ಆಯೋಜಿಸಿದೆ.

    ಬುಧವಾರ ಬೆಳಗ್ಗೆ 10.30ಕ್ಕೆ ಇಲ್ಲಿನ ಯಲಹಂಕದ ಕಟ್ಟಿಗೆನಹಳ್ಳಿಯ ರುಕ್ಮಿಣಿ ನಾಲೆಡ್ಜ್ ಪಾರ್ಕ್ ಸಮೀಪದ ರೇವಾ ವಿಶ್ವವಿದ್ಯಾಲಯದಲ್ಲಿ ಕಾರ್ಯಕ್ರಮವು ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ ಭಾಗವಹಿಸಲಿದ್ದಾರೆ.

    ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೇವಾ ವಿಶ್ವವಿದ್ಯಾಲಯದ ಗೌರವಾನ್ವಿತ ಕುಲಪತಿ ಶ್ಯಾಮ ರಾಜು ವಹಿಸಲಿದ್ದಾರೆ. ರೇವಾ ವಿಶ್ವವಿದ್ಯಾಲಯದ ಉಪ ಕುಲಸಚಿವರಾದ ಡಾ.ಎಸ್.ವೈ.ಕುಲಕರ್ಣಿ ಕಾರ್ಯಕ್ರಮದಲ್ಲಿ ಉಪಸ್ಥಿತರಿಲಿದ್ದಾರೆ.

  • 2018ನೇ ಫಿಲಂ ಫೇರ್ ಪ್ರಶಸ್ತಿ ಪ್ರಕಟ- ಯಾರು ಅತ್ಯುತ್ತಮ ನಟ, ನಟಿ: ಇಲ್ಲಿದೆ ಸಂಪೂರ್ಣ ಮಾಹಿತಿ

    2018ನೇ ಫಿಲಂ ಫೇರ್ ಪ್ರಶಸ್ತಿ ಪ್ರಕಟ- ಯಾರು ಅತ್ಯುತ್ತಮ ನಟ, ನಟಿ: ಇಲ್ಲಿದೆ ಸಂಪೂರ್ಣ ಮಾಹಿತಿ

    ಹೈದರಾಬಾದ್: 2018ರ ಸೌತ್ ಫಿಲಂ ಫೇರ್ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಶನಿವಾರ ಹೈದರಾಬಾದ್‍ನಲ್ಲಿ ನಡೆದಿದೆ. ಈ ಅದ್ಧೂರಿ ಕಾರ್ಯಕ್ರಮದಲ್ಲಿ ದಕ್ಷಿಣ ಭಾರತದ ನಾಲ್ಕು ಚಿತ್ರರಂಗದ ಗಣ್ಯರು ಭಾಗಿಯಾಗಿದ್ದರು.

    2018 ನೇ ಸಾಲಿನ ಸೌತ್ ಫಿಲಂ ಫೇರ್ ಅವಾರ್ಡ್ ಪ್ರಕಟವಾಗಿದ್ದು, ‘ರಾಜಕುಮಾರ’ ಚಿತ್ರಕ್ಕಾಗಿ ಪವರ್ ಸ್ಟಾರ್ ಪುನೀತ್‍ ರಾಜ್‍ಕುಮಾರ್ ಅತ್ಯುತ್ತಮ ನಟ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ. ಇನ್ನೂ ‘ಬ್ಯೂಟಿಫುಲ್ ಮನಸ್ಸುಗಳು’ ಚಿತ್ರಕ್ಕಾಗಿ ನಟಿ ಶೃತಿ ಹರಿಹರನ್ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಪಡೆದಿದ್ದಾರೆ.

    ಪುನೀತ್ ರಾಜ್‍ಕುಮಾರ್ ಅತ್ಯುತ್ತಮ ನಟ ಪ್ರಶಸ್ತಿಯನ್ನು ಸ್ವೀಕರಿಸುವಾಗ ಪುನೀತ್ ಬಾಲ್ಯದಿನಗಳಲ್ಲಿ ಅಪ್ಪಾಜಿ ಜೊತೆ ಸ್ವೀಕರಿಸಿದ್ದ ಪ್ರಶಸ್ತಿಯನ್ನು ನೆನಪಿಸಿಕೊಂಡರು. ಇನ್ನೂ ಅತ್ಯುತ್ತಮ ಪ್ರಶಸ್ತಿ ಪಡೆದ ಶೃತಿ ಹರಿಹರನ್ ಬ್ಯೂಟಿಫುಲ್ ಮನಸ್ಸುಗಳು ಸಿನಿಮಾಕ್ಕಾಗಿ ರಾಜ್ಯ ಪ್ರಶಸ್ತಿಯನ್ನು ಪಡೆದಿದ್ದರು.

    https://twitter.com/PuneethOfficial/status/1008223181256224769

    2018 ನೇ ಸಾಲಿನ ಸೌತ್ ಫಿಲಂ ಫೇರ್ ಅವಾರ್ಡ್ ಪ್ರಕಟ:

    ಅತ್ಯುತ್ತಮ ನಟ                                            – ಪುನೀತ್ ರಾಜ್‍ಕುಮಾರ್(ರಾಜಕುಮಾರ್)
    ಅತ್ಯುತ್ತಮ ನಟಿ                                             – ಶೃತಿ ಹರಿಹರನ್ (ಬ್ಯೂಟಿಫುಲ್ ಮನಸ್ಸುಗಳು)
    ಅತ್ಯುತ್ತಮ ನಿದೇಶಕ                                      – ತರುಣ್ ಸುಧೀರ್ (ಚೌಕ)
    ಅತ್ಯುತ್ತಮ ಗೀತರಚನೆಕಾರ                             – ವಿ.ನಾಗೇಂದ್ರ ಪ್ರಸಾದ್(ಚೌಕ)
    ಅತ್ಯುತ್ತಮ ಚಿತ್ರ                                            – ಒಂದು ಮೊಟ್ಟೆಯ ಕಥೆ
    ಅತ್ಯುತ್ತಮ ಹಿನ್ನೆಲೆ ಗಾಯಕ                             – ಆರ್ಮನ್ ಮಲ್ಲಿಕ್(ಚಕ್ರವರ್ತಿ)
    ಅತ್ಯುತ್ತಮ ಹಿನ್ನೆಲೆ ಗಾಯಕಿ                             –ಅನುರಾಧ ಭಟ್(ಚೌಕ)
    ಅತ್ಯುತ್ತಮ ಸಂಗೀತ ನಿರ್ದೇಶಕ                       –ಭರತ್ ಬಿಜೆ(ಬ್ಯೂಟಿಫುಲ್ ಮನಸ್ಸುಗಳು)
    ಕ್ರಿಟಿಕ್ಸ್ ಅವಾರ್ಡ್                                         – ಧನಂಜಯ್(ಅಲ್ಲಮ್ಮ)
    ಕ್ರಿಟಿಕ್ಸ್ ಅವಾರ್ಡ್                                         – ಶ್ರದ್ಧ ಶ್ರೀನಾಥ್(ಆಪರೇಷನ್ ಅಲುಮೇಲಮ್ಮ)

     

    ತಮಿಳಿನಲ್ಲಿ ‘ಆರಂ’ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದಿದೆ. ‘ವಿಕ್ರಮ್ ವೇದ’ ಚಿತ್ರಕ್ಕಾಗಿ ನಟ ವಿಜಯ್ ಸೇತುಪತಿ ಅತ್ಯುತ್ತಮ ನಟ ಪ್ರಶಸ್ತಿ ಪಡೆದರೆ, ‘ಆರಂ’ ಚಿತ್ರಕ್ಕೆ ನಟಿ ನಯನತಾರ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ದಾರೆ.

    ತೆಲುಗುವಿನಲ್ಲಿ ‘ಬಾಹುಬಲಿ-2’ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದಿದೆ. ‘ಅರ್ಜುನ್ ರೆಡ್ಡಿ’ ಚಿತ್ರಕ್ಕಾಗಿ ವಿಜಯ್ ದೇವರಕೊಂಡ ಅತ್ಯುತ್ತಮ ನಟ ಪ್ರಶಸ್ತಿ ಪಡೆದರೆ, ‘ಫೀದಾ’ ಚಿತ್ರಕ್ಕೆ ಸಾಯಿ ಪಲ್ಲವಿ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ದಾರೆ.

     

  • ಹಿರಿಯ ನಟಿಯ ಅನುಮತಿ ಪಡೆದು ಅಂಬಿ ಹುಟ್ಟುಹಬ್ಬದಲ್ಲಿ ಯಶ್ ಭಾಗವಹಿಸಿದ್ರು!

    ಹಿರಿಯ ನಟಿಯ ಅನುಮತಿ ಪಡೆದು ಅಂಬಿ ಹುಟ್ಟುಹಬ್ಬದಲ್ಲಿ ಯಶ್ ಭಾಗವಹಿಸಿದ್ರು!

    ಬೆಂಗಳೂರು: ಹಿರಿಯ ನಟಿ ಅನುಮತಿ ಪಡೆದು ರಾಕಿಂಗ್ ಸ್ಟಾರ್ ಯಶ್ ರೆಬಲ್ ಸ್ಟಾರ್ ಅಂಬರೀಷ್ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

    66ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ಅಂಬರೀಷ್‍ಗೆ ಬೆಂಗಳೂರಿನ ಕಲಾವಿದರ ಸಂಘದಿಂದ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೊದಲು ಯಶ್ ಅವರು ಯಶ್ ಹಿರಿಯ ನಟಿ ಸುಮಲತಾರಿಂದ ಅನುಮತಿ ಪಡೆದು ರಾಧಿಕಾ ಪಂಡಿತ್ ಅವರನ್ನು ಬಿಟ್ಟು ಒಬ್ಬರೇ ಪಾಲ್ಗೊಂಡಿದ್ದರು.

    ಯಶ್‍ಗೆ ಗಡ್ಡ ತೆಗೆಯುವಂತೆ ಹಲವು ದಿನಗಳ ಹಿಂದೆ ಅಂಬರೀಷ್ ವಾರ್ನ್ ಮಾಡಿದ್ದರು. ಆದರೆ ಯಶ್ ಕೆಜಿಎಫ್ ಸಿನಿಮಾ ಮುಗಿದು ಪ್ರಮೋಶನ್ ಆ್ಯಕ್ಟಿವಿಟಿ ಮುಗಿಯೋವರೆಗೂ ಗಡ್ಡ ತೆಗೆಯುವಂತಿಲ್ಲ. ಹಾಗಾಗಿ ಗಡ್ಡ ತೆಗೆಯದೇ ಅಂಬಿ ಮುಂದೆ ಹೋದರೇ ಬೈಯುತ್ತಾರೋ ಏನೋ ಎಂದು ಮೊದಲು ನಟಿ ಸುಮಲತಾಗೆ ಕಾಲ್ ಮಾಡಿ ಕನ್ಫರ್ಮ್ ಮಾಡಿಕೊಂಡಿದ್ದಾರೆ. ಅನಂತರವಷ್ಟೇ ಅಂಬಿ ಸನ್ಮಾನ ಕಾರ್ಯಕ್ರಮಕ್ಕೆ ಯಶ್ ಹೋಗಿದ್ದಾರೆ.

    ನಾನು ಬಾಲ್ಯದ ದಿನಗಳಿಂದಲೂ ಅಂಬರೀಷ್ ಸಿನಿಮಾಗಳನ್ನು ನೋಡಿಕೊಂಡು ಬೆಳೆದಿದ್ದೇನೆ. ಅಂತ, ನಾಗರಹಾವು ಸೇರಿದಂತೆ ಹಲವು ಸಿನಿಮಾಗಳು ನನಗೆ ಬಹಳ ಪರಿಣಾಮ ಬೀರಿವೆ. ನನ್ನ ಸಿನಿಕೆರಿಯರ್ ನಲ್ಲಿ ರೆಬೆಲ್ ಪಾತ್ರಗಳನ್ನು ಮಾಡುವ ಆಸೆ ಇಟ್ಟುಕೊಂಡಿದ್ದೇನೆ. ಮೊದಲು ಜಲೀಲನ ಥರ ಕ್ಯಾರೆಕ್ಟರ್ ಮಾಡಬೇಕು ಎಂದು ಮೈಂಡ್‍ನಲ್ಲಿ ಫಿಕ್ಸ್ ಆಗಿತ್ತು ಎಂದು ಸ್ವತಃ ಯಶ್ ಅಂಬರೀಷ್ ಸನ್ಮಾನ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

    ಯಶ್‍ಗೆ ನೆಗೆಟೀವ್ ಶೇಡ್ ಪಾತ್ರಗಳಂದರೆ ಬಹಳ ಇಷ್ಟ. ಲವ್ವರ್ ಬಾಯ್‍ಗೂ ಸೈ ಆ್ಯಕ್ಷನ್‍ಗೂ ಜೈ ಎನ್ನುವ ಯಶ್ ಈಗಾಗಲೇ ಲವ್ವರ್ ಬಾಯ್ ಆಗಿ ಮಿಂಚಿದ್ದಾರೆ. ಆ್ಯಕ್ಷನ್ ಸಿನಿಮಾದಲ್ಲೂ ಕೂಡ ಮಿಂಚಿದ್ದಾರೆ. ಈಗ ಜಲೀಲನಾಗಿ ಮಿಂಚಬೇಕು ಎನ್ನುವ ಆಸೆಯನ್ನು ಯಶ್ ವ್ಯಕ್ತಪಡಿಸಿದ್ದಾರೆ.

  • ಕಲಾವಿದರು ಮನೆಯಲ್ಲಿ ಬಡತನದಿಂದ ಅಳುತ್ತಿದ್ರೂ, ಹೊರಗೆ ಜನರನ್ನು ನಗಿಸುತ್ತಾರೆ- ದರ್ಶನ್

    ಕಲಾವಿದರು ಮನೆಯಲ್ಲಿ ಬಡತನದಿಂದ ಅಳುತ್ತಿದ್ರೂ, ಹೊರಗೆ ಜನರನ್ನು ನಗಿಸುತ್ತಾರೆ- ದರ್ಶನ್

    ಮಂಗಳೂರು: ನಗರದ ಪ್ರಸಿದ್ಧ ಯಕ್ಷಗಾನ ಭಾಗವತ ಪಟ್ಲ ಸತೀಶ್ ಶೆಟ್ಟಿ ನೇತೃತ್ವದ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ವಾರ್ಷಿಕ ಸಂಭ್ರಮದ ಮುಖ್ಯ ಅತಿಥಿಯಾಗಿ ನಟ ದರ್ಶನ್ ತೂಗುದೀಪ್ ಭಾಗವಹಿಸಿದರು.

    ಮಂಗಳೂರಿನ ಅಡ್ಯಾರ್ ನಲ್ಲಿರುವ ಅಡ್ಯಾರ್ ಗಾರ್ಡಾನ್ ನಲ್ಲಿ “ಪಟ್ಲ ಸಂಭ್ರಮ” ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ ದರ್ಶನ್ ಸಭೆಯನ್ನುದ್ದೇಶಿಸಿ ಮಾತನಾಡಿದ್ದು, ಕಲಾವಿದರು ಯಾರೂ ಬಡವರಲ್ಲ, ಆರ್ಥಿಕವಾಗಿ ಮಾತ್ರ ಬಡವರಾಗಿರಬಹುದು. ಆದರೆ ಕಲೆಯಲ್ಲಿ ಅವರಷ್ಟು ಶ್ರೀಮಂತರು ಬೇರೆ ಯಾರೂ ಇರೋಲ್ಲ ಎಂದು ಹೇಳಿದ್ದಾರೆ.

    100 ಕಲಾವಿದರಲ್ಲಿ ಎಲ್ಲರೂ ಕಷ್ಟಪಡುತ್ತಾರೆ, ಆದರೆ ಐದು ಜನರಿಗೆ ಮಾತ್ರ ಅದೃಷ್ಟ ಸಿಗುತ್ತದೆ. ಕಲಾವಿದರು ಮನೆಯಲ್ಲಿ ಬಡತನದಿಂದ ಅಳುತ್ತಿದ್ದರೂ, ಹೊರಗೆ ಬಂದು ಜನರನ್ನು ನಗಿಸುತ್ತಾರೆ. ಅದಕ್ಕಾಗಿಯೇ ಕಲಾವಿದರು ಶ್ರೀಮಂತರು ಎಂದು ಹೇಳಿ ನೆರೆದ ಕಲಾವಿದರನ್ನು ಪ್ರೋತ್ಸಾಹಿಸಿ ದರ್ಶನ್ ಮಾತನಾಡಿದರು.

    ಪಟ್ಲ ಸಂಭ್ರಮದಲ್ಲಿ ಟ್ರಸ್ಟ್‍ನ ವತಿಯಿಂದ ಯಕ್ಷಗಾನ ಕಲಾವಿದರನ್ನು ಸನ್ಮಾನಿಸಲಾಯಿತು. ಕುಬಣೂರು ಶ್ರೀಧರ್ ರಾವ್ ಅವರಿಗೆ ಮರಣೋತ್ತರ ಪ್ರಶಸ್ತಿ ನೀಡಲಾಗಿದ್ದು. ಇತರೆ ಬಡ ಯಕ್ಷಗಾನ ಕಲಾವಿದರಿಗೆ ಸಹಾಯಧನ, ವೈದ್ಯಕೀಯ ಚಿಕಿತ್ಸೆಗೆ ನೆರವು, ಗೃಹ ನಿರ್ಮಾಣಕ್ಕೆ ನೆರವು ನೀಡಲಾಯಿತು. ಜೊತೆಗೆ ಒಂದು ಲಕ್ಷ ನಗದು ನೀಡಿ ಹಿರಿಯ ಯಕ್ಷಗಾನ ಪ್ರಸಂಗಕರ್ತ ಶಿಮಂತೂರು ನಾರಾಯಣ ಶೆಟ್ಟಿ ಅವರಿಗೆ ಪಟ್ಲ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದನ್ನೂ ಓದಿ: ಚಾಲೆಂಜಿಂಗ್ ಸ್ಟಾರ್ ಗೆ ಅಭಿಮಾನಿಯಿಂದ ಅಪರೂಪದ ಉಡುಗೊರೆ!

  • 6 ದಿನ, 6 ಜಾಗಗಳಲ್ಲಿ ನಡೆಯಲಿದೆ ರಮಣನ ಮದುವೆ!

    6 ದಿನ, 6 ಜಾಗಗಳಲ್ಲಿ ನಡೆಯಲಿದೆ ರಮಣನ ಮದುವೆ!

    ಬೆಂಗಳೂರು: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ರಾಧಾ ರಮಣ ಧಾರಾವಾಹಿಯ ನಟ ಸ್ಕಂದ ಆಶೋಕ್ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.

    ನಟ ಸ್ಕಂದ ಆಶೋಕ್ ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದ ತನ್ನ ಪ್ರೇಯಸಿ ಶಿಖಾ ಪ್ರಸಾದ್ ಜೊತೆ ತಮ್ಮ ಪೂರ್ತಿ ಜೀವನವನ್ನು ಕಳೆಯಲು ಸಿದ್ಧರಾಗಿದ್ದಾರೆ. ಇನ್ನೂ ಇವರ ಮದುವೆ ಆರು ದಿನಗಳ ಕಾಲ ನಡಯಲಿದೆ. ಒಂದೊಂದು ಶಾಸ್ತ್ರದ ಕಾರ್ಯಕ್ರಮಗಳನ್ನು ಒಂದೊಂದು ಸ್ಥಳದಲ್ಲಿ ನಡೆಯಲು ಸಿದ್ಧತೆ ನಡೆದಿದೆ.

    ಮೇ 25ರಿಂದ ಮದುವೆ ಕಾರ್ಯಕ್ರಮಗಳು ನಡೆಯಲಿದ್ದು, ಮೇ 20ರಂದು ಬಸವನಗುಡಿಯಲ್ಲಿರುವ ಗಂಜಂ ಕಲ್ಯಾಣ ಮಂಟಪದಲ್ಲಿ ಹಳದಿ ಶಾಸ್ತ್ರ ನಡೆಯಲಿದೆ. ನಂತರ ಮೇ 28ರಂದು ತಾಜ್ ವೆಸ್ಟ್ ಎಂಡ್ ಹೋಟೆಲ್‍ನಲ್ಲಿ ಮೆಹೆಂದಿ ಶಾಸ್ತ್ರ ಆಯೋಜಿಸಲಾಗಿದೆ.

    ಮೆಹೆಂದಿ ಕಾರ್ಯಕ್ರಮ ನಡೆದ ನಂತರ ಅದೇ ದಿನ ಸಂಜೆ ಸಂಗೀತಾ ಕಾರ್ಯಕ್ರಮ ಕೂಡ ನಡೆಯಲಿದೆ. ಈ ಸಂಗೀತಾ ಕಾರ್ಯಕ್ರಮಕ್ಕೆ ಹಲವು ಸಿನಿಮಾ ಕಲಾವಿದರು ಹಾಗೂ ಕಿರುತರೆ ನಟ- ನಟಿಯರು ಪಾಲ್ಗೊಳ್ಳಲಿದ್ದಾರೆ.

     

    ಮೇ 29ರಂದು ಬೆಂಗಳೂರಿನ ಶಾಂಗ್ರಿಲಾ ಹೋಟೆಲ್‍ನಲ್ಲಿ ವರಪೂಜೆ ನಡೆಯಲಿದ್ದು, ಅದರ ಜೊತೆ ಬಳೆ ಶಾಸ್ತ್ರ ಜರುಗಲಿದೆ. ಇನ್ನೂ ಈ ವರ ಪೂಜೆ ಸಮಾರಂಭಕ್ಕೆ ಸ್ಕಂದ ಆಶೋಕ್ ಹಾಗೂ ಶಿಖಾ ಪ್ರಸಾದ್ ಮನೆಯ ಹಿರಿಯರು ಭಾಗಿಯಾಗಲಿದ್ದಾರೆ.

    ಈ ಎಲ್ಲ ಶಾಸ್ತ್ರ ಮುಗಿದ ನಂತರ ಬೆಂಗಳೂರು ಅರಮನೆ ಮೈದಾನದಲ್ಲಿ ಮೇ 30 ಆರತಕ್ಷತೆ ನಡೆಯಲಿದ್ದು, ನಂತರ ಮೇ 31 ರಂದು ಅಲ್ಲೇ ಅದ್ಧೂರಿಯಾಗಿ ಮದುವೆಯಾಗಲಿದ್ದಾರೆ.

  • ಹೆಣ್ಮಕ್ಳು ಎಷ್ಟು ಹೊತ್ತಲ್ಲೂ, ಯಾವ ಬಟ್ಟೆಲಿ ಬೇಕಾದ್ರೂ ಬೆಂಗ್ಳೂರಲ್ಲಿ ಸುತ್ತಾಡ್ಬೋಡು- ಆರೋಪಗಳಿಗೆ ಸಂಜನಾ ಖಡಕ್ ಉತ್ತರ

    ಹೆಣ್ಮಕ್ಳು ಎಷ್ಟು ಹೊತ್ತಲ್ಲೂ, ಯಾವ ಬಟ್ಟೆಲಿ ಬೇಕಾದ್ರೂ ಬೆಂಗ್ಳೂರಲ್ಲಿ ಸುತ್ತಾಡ್ಬೋಡು- ಆರೋಪಗಳಿಗೆ ಸಂಜನಾ ಖಡಕ್ ಉತ್ತರ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮಧ್ಯರಾತ್ರಿಯಲ್ಲಿ ಹೆಣ್ಣು ಮಕ್ಕಳು ಸಂಚರಿಸೋಕೆ ಆಗಲ್ಲ. ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿವೆ ಎಂಬ ಆರೋಪಕ್ಕೆ ಸ್ಯಾಂಡಲ್‍ವುಡ್ ನಟಿ ಸಂಜನಾ ಗಲ್ರಾಣಿ ಧ್ವನಿ ಎತ್ತಿದ್ದಾರೆ.

    ರಾಜಧಾನಿ ಬೆಂಗಳೂರಿನ ಬಗ್ಗೆ ಖಾಸಗಿ ಕಾರ್ಯಕ್ರಮವೊಂದರಲ್ಲಿ ಹೆಣ್ಣು ಮಕ್ಕಳ ವಿರುದ್ಧ ಹಲವರು ಅಪವಾದ ಎತ್ತಿದ್ದಾಗ ಸ್ಯಾಂಡಲ್‍ವುಡ್ ನಟಿ ಸಂಜನಾ ಗಲ್ರಾಣಿ, ಸಿಲಿಕಾನ್ ಸಿಟಿ ಪರವಾಗಿ ಧ್ವನಿ ಎತ್ತಿದ್ದಾರೆ.

    ಎಷ್ಟು ಹೊತ್ತಲ್ಲೂ ಬೇಕಾದರೂ, ಯಾವ ಬಟ್ಟೆಯಲ್ಲಿ ಬೇಕಾದ್ರೂ ಸಿಲಿಕಾನ್ ಸಿಟಿಯಲ್ಲಿ ಸುತ್ತಾಡಬಹುದು. ನಾನೇ ಎಷ್ಟೋ ಸಲ ಮಧ್ಯರಾತ್ರಿ ಮನೆಯಿಂದ ಹೊರಗೆ ಹೋಗಿ ಸೇಫ್ ಆಗಿ ವಾಪಸ್ ಬಂದಿದ್ದೇನೆ. ದೆಹಲಿ ಹಾಗೂ ಕೋಲ್ಕತ್ತಾದಂತಹ ನಗರಗಳಿಗೆ ನಮ್ಮ ಬೆಂಗಳೂರನ್ನು ಹೋಲಿಸಿ ಮಾತನಾಡುವುದು ಸರಿಯಲ್ಲ ಸಂಜನಾ ಗುಡುಗಿದ್ದಾರೆ.

  • ದರ್ಶನ್ ಜೊತೆ ನಟಿಸ್ತೀನಿ ಅಂದ್ರು ಹ್ಯಾಟ್ರಿಕ್ ಹೀರೋ!

    ದರ್ಶನ್ ಜೊತೆ ನಟಿಸ್ತೀನಿ ಅಂದ್ರು ಹ್ಯಾಟ್ರಿಕ್ ಹೀರೋ!

    ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಚಾಲೆಂಜಿಂಗ್ ಸ್ಟಾರ್ ಜೊತೆ ನಾನು ನಟಿಸಲು ಸಿದ್ಧನಿದ್ದೇನೆ ಎಂದು ಕಾರ್ಯಕ್ರಮವೊಂದರಲ್ಲಿ ತಿಳಿಸಿದ್ದಾರೆ.

    ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಶಿವರಾಜ್‍ಕುಮಾರ್ ನಡೆಸಿಕೊಡುವ ಕಾರ್ಯಕ್ರಮದಲ್ಲಿ ‘ಮಫ್ತಿ’ ಚಿತ್ರದ ನಿರ್ದೇಶಕ ನರ್ತನ್ ಹಾಗೂ ರೋರಿಂಗ್ ಸ್ಟಾರ್ ಮುರಳಿ ಭಾಗವಹಿಸಿದ್ದರು. ಕಾರ್ಯಕ್ರಮದ ಸೆಗ್ಮೆಂಟ್‍ಗಳೆಲ್ಲ ಮುಗಿದ ಮೇಲೆ ನರ್ತನ್ ಅವರ ಮುಂದಿನ ಚಿತ್ರದ ಬಗ್ಗೆ ಶಿವಣ್ಣ ಮಾತನಾಡುತ್ತಿದ್ದರು.

    ಮಫ್ತಿ ಚಿತ್ರದಲ್ಲಿ ನನ್ನ ಹಾಗೂ ಶ್ರೀಮುರಳಿ ಕಾಂಬಿನೇಷನ್‍ನಲ್ಲಿ ಸಿನಿಮಾ ಮಾಡಿದ್ದೀರಿ. ಈಗ ಮಫ್ತಿ-2 ಚಿತ್ರ ಮಾಡುತ್ತೀರಾ? ಎಂದು ಶಿವರಾಜ್‍ಕುಮಾರ್ ನಿರ್ದೇಶಕ ನರ್ತನ್‍ರನ್ನು ಪ್ರಶ್ನಿಸಿದ್ದರು. ಆಗ ನರ್ತನ್ ಮಫ್ತಿ-2ಗೆ ಭೈರತಿ ರಣಗಲ್ ಎಂದು ಟೈಟಲ್ ಇಡುಲು ಯೋಚಿಸುತ್ತಿದ್ದೇನೆ ಎಂದು ನರ್ತನ್ ಉತ್ತರಿಸಿದ್ದರು.

    ಮಫ್ತಿ-2 ಸಿನಿಮಾ ಮಾಡಿದರೆ ನಾನು ರೆಡಿ. ಈ ಚಿತ್ರದಲ್ಲಿ ಶಿವಣ್ಣ ಹಾಗೂ ದರ್ಶನ್ ಎಂದು ಇದೆ. ಅದನ್ನು ಮಾಡಿ ಯಾರೂ ಬೇಡ ಎನ್ನುತ್ತಾರೆ? ಎಲ್ಲರ ಜೊತೆ ಸಿನಿಮಾ ಮಾಡಬೇಕೆಂಬುದೇ ನನ್ನ ಆಸೆ ಎಂದು ಶಿವರಾಜ್‍ಕುಮಾರ್ ತಿಳಿಸಿದ್ದರು.

    ಶಿವರಾಜ್‍ಕುಮಾರ್ ಜೊತೆಗೆ ದರ್ಶನ್ ಕಾಣಿಸಿಕೊಳ್ಳುತ್ತಾರೆಂಬ ಗಾಸಿಪ್ ಹರಿದಾಡುತ್ತಿರುವಾಗಲೇ ಶಿವಣ್ಣ ದರ್ಶನ್ ಜೊತೆ ಮಫ್ತಿ-2 ಸಿನಿಮಾವನ್ನು ಮಾಡಿ ಎಂದು ನಿರ್ದೇಶಕ ನರ್ತನ್‍ಗೆ ಹೇಳಿದ್ದರು.

    ಈ ಹಿಂದೆ ಉಪೇಂದ್ರ, ರವಿಚಂದ್ರನ್, ಶ್ರೀಮುರಳಿ, ಜಗ್ಗೇಶ್, ವಿಜಯ್ ರಾಘವೇಂದ್ರ ಹಾಗೂ ಕಿಚ್ಚ ಸುದೀಪ್ ಜೊತೆ ಶಿವಣ್ಣ ತೆರೆ ಹಂಚಿಕೊಂಡಿದ್ದಾರೆ. ಸದ್ಯ ಈಗ ಅವರಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ನಟಿಸಬೇಕೆಂಬ ಆಸೆ ಇದೆ.

  • ಮದ್ವೆ ಬಳಿಕ ಹನಿಮೂನ್ ಯಾವಾಗ: ಅಭಿಮಾನಿಗಳ ಪ್ರಶ್ನೆಗೆ ಮೇಘನಾ ಉತ್ತರಿಸಿದ್ದು ಹೀಗೆ!

    ಮದ್ವೆ ಬಳಿಕ ಹನಿಮೂನ್ ಯಾವಾಗ: ಅಭಿಮಾನಿಗಳ ಪ್ರಶ್ನೆಗೆ ಮೇಘನಾ ಉತ್ತರಿಸಿದ್ದು ಹೀಗೆ!

    ಬೆಂಗಳೂರು: ಸ್ಯಾಂಡಲ್‍ವುಡ್ ಮತ್ತೊಂದು ಮದುವೆ ಸಂಭ್ರಮಕ್ಕೆ ಸಜ್ಜಾಗುತ್ತಿದ್ದು, ಮೇ 2 ರಂದು ನಟಿ ಮೇಘನಾ ರಾಜ್ ನಟ ಚಿರಂಜೀವಿ ಸರ್ಜಾ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.

    ಸೆಲೆಬ್ರಿಟಿಗಳು ಮದುವೆಯಾಗುತ್ತಿರುವ ಬೆನ್ನಲ್ಲೆ ಹನಿಮೂನ್ ಗೆ ಹೋಗುವುದು ಸಾಮಾನ್ಯ. ಹೀಗಾಗಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ಈ ತಾರಾ ಜೋಡಿಗಳು ಹನಿಮೂನ್‍ಗಾಗಿ ಯಾವ ಕಡೆ ಹೋಗುತ್ತಾರೆ ಎನ್ನುವ ಪ್ರಶ್ನೆ ಅಭಿಮಾನಿಗಳಿಗೆ ಹುಟ್ಟದೇ ಇರಲಾರದು. ಆದರೆ ಮೇಘನಾ ಮತ್ತು ಚಿರು ಮದುವೆಯಾದ ತಕ್ಷಣವೇ ಹನಿಮೂನಿಗೆ ಹೋಗುತ್ತಿಲ್ಲ.

    ಮದುವೆಯ ಸಿದ್ಧತೆ ಬಗ್ಗೆ ಮಾಹಿತಿ ನೀಡಿದ ಮೇಘನಾ ರಾಜ್ ಅವರಿಗೆ ಹನಿಮೂನ್ ಗಾಗಿ ಯಾವ ದೇಶಕ್ಕೆ ಹೋಗುತ್ತಿರಿ ಎಂದು ಪ್ರಶ್ನಿಸಲಾಗಿತ್ತು. ಈ ಪ್ರಶ್ನೆಗೆ ಮೇಘನಾ, ನಾವು ಮದುವೆಯಾದ ಮೇಲೆ ಎಲ್ಲೂ ಹನಿಮೂನ್‍ಗೆ ಹೋಗುತ್ತಿಲ್ಲ. ಚಿರುಗೆ ‘ರಾಜಮಾರ್ತಾಂಡ’ ಚಿತ್ರದ ಶೂಟಿಂಗ್ ಇದ್ದು, ಚಿತ್ರೀಕರಣ ಮುಗಿದು ಒಂದು ತಿಂಗಳ ನಂತರ ಹನಿಮೂನ್‍ಗೆ ಹೋಗುವ ಪ್ಲಾನ್ ನಿರ್ಧಾರವಾಗಲಿದೆ ಎಂದು ಉತ್ತರಿಸಿದ್ದಾರೆ.

    ಚಿರು ಹಾಗೂ ಮೇಘನಾ ಮದುವೆ ಅರಮನೆ ಮೈದಾನದ ವೈಟ್ ಪೆಟಲ್ಸ್ ಹಾಲ್‍ನಲ್ಲಿ ನಡೆಯಲಿದ್ದು, ಮದುವೆ ಸಂಭ್ರಮಕ್ಕೆ ಸ್ಯಾಂಡಲ್‍ವುಡ್‍ನ ಗಣ್ಯಾತಿಗಣ್ಯರು ಸಾಕ್ಷಿಯಾಗಲಿದ್ದಾರೆ. ನಾಳೆಯಿಂದ ಚಪ್ಪರ ಶಾಸ್ತ್ರ, ಅರಿಶಿಣ ಶಾಸ್ತ್ರ ಶುರುವಾಗಲಿದೆ. ಹಿಂದೂ ಮತ್ತು ಕ್ರಿಶ್ಚಿಯನ್ ಸಂಪ್ರದಾಯದ ಪ್ರಕಾರ ಮದುವೆ ನಡೆಯಲಿದ್ದು, ಇದೇ ತಿಂಗಳು 29ಕ್ಕೆ ಕೋರಮಂಗಲದ ಚರ್ಚ್‍ನಲ್ಲಿ ಕ್ರಿಶ್ಚಿಯನ್ ಸಂಪ್ರದಾಯದ ಪ್ರಕಾರ ವಿವಾಹ ನಡೆಯಲಿದೆ.

    ಮೇ 2ರ ಬೆಳಗ್ಗೆ 10.30ರಿಂದ 11 ಗಂಟೆಗೆ ಮದುವೆ ಮುಹೂರ್ತವಿದ್ದು, ಸಂಜೆ 7 ಗಂಟೆಗೆ ಆರತಕ್ಷತೆ ನಡೆಯಲಿದೆ. ಮೊದಲು ಎಂದರೆ ನಾಳೆ ಚಪ್ಪರ ಪೂಜೆ ನಡೆಯಲಿದೆ. ನಂತರ ಹಳದಿ ಶಾಸ್ತ್ರ, ಬಳೆ ಶಾಸ್ತ್ರ ನಡೆಯಲಿದೆ. ಹಳದಿ ಶಾಸ್ತ್ರಕ್ಕೆ ಇಂಡೋ ವೆಸ್ಟ್ರನ್ ಲುಕ್, ಮೆಹೆಂದಿಗೆ ನಾರ್ಥ್ ಇಂಡಿಯನ್ ಲುಕ್‍ನಲ್ಲಿ ಮೇಘನಾ ರಾಜ್ ಕಾಣಿಸಿಕೊಳ್ಳಲಿದ್ದಾರೆ. ಇದನ್ನೂ ಓದಿ: ಮದುವೆಯ ಎಲ್ಲ ಸಿದ್ಧತೆ ಬಗ್ಗೆ ಮಾಹಿತಿ ನೀಡಿದ ಮೇಘನಾ ರಾಜ್

    ಸ್ಯಾಂಡಲ್‍ವುಡ್‍ನಲ್ಲಿ ಮೊದಲ ಬಾರಿಗೆ ರೋಮನ್ ಕ್ಯಾಥೋಲಿಕ್ ಸಂಪ್ರದಾಯದಂತೆ ಮದುವೆ ಬೆಂಗಳೂರಿನ ಸೇಂಟ್ ಆಂಟೋನಿಸ್ ಚರ್ಚ್‍ನಲ್ಲಿ ನಡೆಯಲಿದೆ. ಇದಾದ ಬಳಿಕ ಮೆಹಂದಿ ಶಾಸ್ತ್ರ ಮನೆಯಲೇ ನಡೆಯಲಿದೆ. ಇದೆಲ್ಲಾ ಮುಗಿದ ಮೇಲೆ ಮುಹೂರ್ತ ಹಾಗೂ ಆರತಕ್ಷತೆ ನಡೆಯಲಿದೆ.

    ಕನ್ನಡ, ತಮಿಳು, ತೆಲುಗು, ಮಲೆಯಾಳಂ ಚಿತ್ರರಂಗದ ಖ್ಯಾತ ಕಲಾವಿದರನ್ನು ಮದುವೆಗೆ ಆಹ್ವಾನಿಸಲಾಗಿದೆ.