Tag: ಕಾರ್ಯಕ್ರಮ

  • ಏಯ್ ಫೋಟೋ ತೆಗೆಯೋ..!- ಹಾಲು ಒಕ್ಕೂಟದ ಕಾರ್ಯಕ್ರಮದಲ್ಲಿ ಸಚಿವ ರೇವಣ್ಣರದ್ದೇ ಫುಲ್ ಹವಾ

    ಏಯ್ ಫೋಟೋ ತೆಗೆಯೋ..!- ಹಾಲು ಒಕ್ಕೂಟದ ಕಾರ್ಯಕ್ರಮದಲ್ಲಿ ಸಚಿವ ರೇವಣ್ಣರದ್ದೇ ಫುಲ್ ಹವಾ

    ಹಾಸನ: ಇಂದು ಜಿಲ್ಲೆಯಲ್ಲಿ ಹಾಲು ಒಕ್ಕೂಟ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಇಡೀ ಕಾರ್ಯಕ್ರಮದ ಸ್ವಾಗತ, ನಿರೂಪಣೆ, ಸನ್ಮಾನ ಎಲ್ಲವನ್ನೂ ಲೋಕೋಪಯೋಗಿ ಸಚಿವ ರೇವಣ್ಣ ಅವರೇ ನಿರ್ವಹಿಸಿದ್ದು, ಏಯ್ ಫೋಟೋ ತೆಗೆಯೋ ಎಂದು ಹೇಳುತ್ತಾ ಖುಷಿ ಖುಷಿಯಲ್ಲಿ ಇಡೀ ಕಾರ್ಯಕ್ರಮವನ್ನು ತಾವೇ ಆವರಿಸಿಕೊಂಡಿದ್ದರು.

    ಹಾಲು ಒಕ್ಕೂಟದ ಅಧ್ಯಕ್ಷರೂ ಆಗಿದ್ದರಿಂದ ಇವರೇ ಇಡೀ ಕಾರ್ಯಕ್ರಮವನ್ನು ನಿರ್ವಹಿಸಿದರು. ಈ ವೇಳೆ ಸ್ವಾಗತಕ್ಕೆ ಶಾಸಕ ಬಾಲಕೃಷ್ಣ ಸಜ್ಜಾಗಿದ್ದರೂ ಅವರಿಗೆ ಮೈಕ್ ನೀಡದೆ ತಾವೇ ಸ್ವಾಗತ ಭಾಷಣ ಮಾಡಿದರು. ಸಿಎಂ ಪ್ರಮುಖ ಕಾರ್ಯಕ್ರಮಕ್ಕೆ ತಡವಾಗುತ್ತೆಂದು ಆತುರಾತುರವಾಗಿ ಕಾರ್ಯಕ್ರಮ ಮುಗಿಸಿದರು. ಅಷ್ಟೇ ಅಲ್ಲದೇ ಸ್ವಾಗತ, ಒಟ್ಟೊಟ್ಟಿಗೇ ಸನ್ಮಾನ, ಅವರ ಮಾತಿನ ಶೈಲಿಯ ವರ್ತನೆ ಕಂಡು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಜನರೆಲ್ಲರೂ ನಕ್ಕು ನಲಿದರು.

    10 ವರ್ಷಗಳ ಬಳಿಕ ಒಲಿದು ಬಂದ ಮಂತ್ರಿಗಿರಿಯಿಂದ ಜಿಲ್ಲೆಯಲ್ಲಿ ಆರಂಭವಾಗಿರೊ ಅಭಿವೃದ್ಧಿ ಪರ್ವದಿಂದ ಖುಷಿಯಲ್ಲಿದ್ದ ರೇವಣ್ಣನವರು ಸಿಎಂ ಭಾಷಣ ಮಾಡುತ್ತಿದ್ದರೂ ವೇದಿಕೆಯಲ್ಲಿ ತಮ್ಮಪಾಡಿಗೆ ತಾವು ಓಡಾಡುತ್ತಿದ್ದರು. ಸಿಎಂ ಮಾತು ಮುಗಿದ ಕೂಡಲೆ ಅವರಿಂದ ಮೈಕ್ ಕಸಿದುಕೊಂಡು ಮತ್ತೆ ಮಾತು ಆರಂಭ ಮಾಡಿದರು. ಸನ್ಮಾನ ವೇಳೆ ಹಾಸನ ಉಸ್ತುವಾರಿ ಕಾರ್ಯದರ್ಶಿ ರಾಕೇಶ್ ಸಿಂಗ್ ಗೆ ಸನ್ಮಾನ ನಾನೇ ಮಾಡುತ್ತೇನೆ ಎಂದು ಹೇಳಿ ಓಡಿ ಬಂದು ರಾಕೇಶ್ ಸಿಂಗ್ ಗೆ ಹೊದಿಸಿದ್ದ ಶಾಲು ತೆಗೆದು ತಾವೇ ಹೊದಿಸಿದರು. ಬಳಿಕ ನೆರೆ ಸಂತ್ರಸ್ಥರಿಗೆ ಸಹಕಾರಿ ಸಂಘಗಳ ಚೆಕ್ ವಿತರಣೆಯನ್ನೂ ಕೂಡ ತಾವೇ ನೆರವೆರಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ರಶ್ಮಿಕಾ ಮಂದಣ್ಣ ನನ್ನ ಬಾಡಿಗಾರ್ಡ್ ಆಗಿದ್ದರು: ನಾಗಾರ್ಜುನ

    ರಶ್ಮಿಕಾ ಮಂದಣ್ಣ ನನ್ನ ಬಾಡಿಗಾರ್ಡ್ ಆಗಿದ್ದರು: ನಾಗಾರ್ಜುನ

    ಹೈದರಾಬಾದ್: ರಶ್ಮಿಕಾ ಮಂದಣ್ಣ ನನಗೆ ಬಾಡಿಗಾರ್ಡ್ ಆಗಿದ್ದರು ಎಂದು ಟಾಲಿವುಡ್ ಸೂಪರ್ ಸ್ಟಾರ್ ನಾಗಾರ್ಜುನ ಹೇಳಿದ್ದಾರೆ.

    ಗುರುವಾರ ಸಂಜೆ ರಶ್ಮಿಕಾ ಮಂದಣ್ಣ, ನಾನಿ ಹಾಗೂ ನಾಗುರ್ಜನ ಅವರು ಅಭಿನಯಿಸಿದ ‘ದೇವದಾಸ್’ ಚಿತ್ರದ ಆಡಿಯೋ ಲಾಂಚ್ ಕಾರ್ಯಕ್ರಮವಿತ್ತು. ಈ ಕಾರ್ಯಕ್ರಮದಲ್ಲಿ ಚಿತ್ರದ ಕಲಾವಿದರ ಜೊತೆ ಸಮಂತಾ, ಸುಶಾಂತ್, ಅಖಿಲ್ ಹಾಗೂ ಅಮಲಾ ಅಕ್ಕಿನೇನಿ ಕೂಡ ಭಾಗಿಯಾಗಿದ್ದರು.

    ಈ ಕಾರ್ಯಕ್ರಮದಲ್ಲಿ ಚಿತ್ರದ ನಾಯಕರಾದ ನಾಗರ್ಜುನ ಹಾಗೂ ನಾನಿ ರಶ್ಮಿಕಾ ಬಗ್ಗೆ ಮಾತನಾಡಿದ್ದಾರೆ. ಅಲ್ಲದೇ ತೆಲುಗು ಪ್ರೇಕ್ಷಕರಿಗೆ ರಶ್ಮಿಕಾ ಮಂದಣ್ಣ ಏಕೆ ಇಷ್ಟವಾಗುತ್ತಾರೆ ಎಂಬುದನ್ನು ಕಾರ್ಯಕ್ರಮದಲ್ಲಿ ಎಲ್ಲರ ಸಮ್ಮುಖದಲ್ಲಿ ಹೇಳಿದರು.

    ಚಿತ್ರದ ಚಿತ್ರೀಕರಣ ಮುಗಿಸಿ ನಾವು ಥೈಲ್ಯಾಂಡ್‍ನಿಂದ ವಾಪಸ್ ಬರುತ್ತಿದ್ದಾಗ ರಶ್ಮಿಕಾ ನನ್ನ ಪಕ್ಕದಲ್ಲೇ ಕುಳಿತುಕೊಂಡಿದ್ದರು. ಮೂರು ಗಂಟೆಯ ಪ್ರಯಾಣದಲ್ಲಿ ರಶ್ಮಿಕಾ ನಿರಂತರವಾಗಿ ನನ್ನನ್ನು ನಗಿಸುತ್ತಲ್ಲೇ ಇದ್ದರು. ಅಲ್ಲದೇ ರಶ್ಮಿಕಾ ನನಗೆ ಬಾಡಿಗಾರ್ಡ್ ಆಗಿ ಕೂಡ ಇದ್ದರು. ಫ್ಲೈಟ್‍ನಲ್ಲಿ ರಾತ್ರಿ ಹೊತ್ತು ನಮ್ಮ ಹಿಂದೆ ಕುಳಿತ್ತಿದ್ದವರು ಕುಡಿದ ನಶೆಯಲ್ಲಿ ಗಲಾಟೆ ಮಾಡುತ್ತಿದ್ದಾರೆ. ಆಗ ರಶ್ಮಿಕಾ ನನ್ನನ್ನು ರಕ್ಷಿಸಲು ಅವರ ಮೇಲೆ ಕೈ ಕೂಡ ಮಾಡಿದರು ಎಂದು ಹೇಳಿದರು.

    ಸದ್ಯ ‘ಚಲೋ’ ಹಾಗೂ ‘ಗೀತಾ ಗೋವಿಂದಂ’ ಚಿತ್ರದ ನಂತರ ದೇವದಾಸ್ ಚಿತ್ರ ರಶ್ಮಿಕಾಗೆ ಹ್ಯಾಟ್ರಿಕ್ ಗೆಲವು ಸಿಗಲಿದೆ. ರಶ್ಮಿಕಾ ದಕ್ಷಿಣ ಭಾರತದ ಟಾಪ್ ಹೀರೋಯಿನ್ ಆಗುವುದರಲ್ಲಿ ಯಾವುದೇ ಅನುಮಾವಿಲ್ಲ ಎಂದು ನಾಗಾರ್ಜುನ್ ಕಾರ್ಯಕ್ರಮದಲ್ಲಿ ಹೇಳಿದರು.

    ಕಾರ್ಯಕ್ರಮದಲ್ಲಿ ನಟ ನಾನಿ ಕೂಡ ರಶ್ಮಿಕಾ ಬಗ್ಗೆ ಮಾತನಾಡಿದರು. ರಶ್ಮಿಕಾ ಅವರ ಜೊತೆ ಕೆಲಸ ಮಾಡಿದ್ದು ನಿಜಕ್ಕೂ ಪಾಸಿಟೀವ್ ಎನರ್ಜಿ. ಅವರು ಸಿನಿಮಾ ಸೆಟ್‍ನಲ್ಲಿ ಯಾವಾಗಲೂ ನಗುತ್ತಿರುತ್ತಾರೆ. ಅವರು ಚಿತ್ರದ ಸೆಟ್‍ನಲ್ಲಿ ಇದ್ದಾರೆ ಎಂದರೆ ಅಲ್ಲಿ ಎಲ್ಲರು ಖುಷಿಯಾಗಿರುತ್ತಾರೆ ಎಂದು ನಟ ನಾನಿ ರಶ್ಮಿಕಾ ಅವರ ಬಗ್ಗೆ ಮಚ್ಚುಗೆ ವ್ಯಕ್ತಪಡಿಸಿದರು.

    ಸದ್ಯ ದೇವದಾಸ್ ಚಿತ್ರ ಇದೇ ತಿಂಗಳು ಸೆಪ್ಟೆಂಬರ್ 27ರಂದು ಬಿಡುಗಡೆಯಾಗಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸಮಿಶ್ರ ಸರ್ಕಾರ ಬೀಳ್ತದೆಂದು ಹೇಳ್ತಿದ್ದಾರೆ, ರಾಜಕೀಯ ಬೆಳವಣಿಗೆಗಳನ್ನು ಕುತೂಹಲದಿಂದ ನೋಡುವಂತವರಲ್ಲಿ ನಾನು ಮೊದಲಿಗ- ಪ್ರಥಮ್

    ಸಮಿಶ್ರ ಸರ್ಕಾರ ಬೀಳ್ತದೆಂದು ಹೇಳ್ತಿದ್ದಾರೆ, ರಾಜಕೀಯ ಬೆಳವಣಿಗೆಗಳನ್ನು ಕುತೂಹಲದಿಂದ ನೋಡುವಂತವರಲ್ಲಿ ನಾನು ಮೊದಲಿಗ- ಪ್ರಥಮ್

    ಬೆಂಗಳೂರು: ಎಚ್.ಡಿ ಕುಮಾರಸ್ವಾಮಿಯವರು ಸಿಎಂ ಆಗಿ 100 ದಿನ ಪೂರೈಸಿದ್ದು, ಅವರ ಬಗ್ಗೆ ಇನ್ನು ಹೆಚ್ಚಿನ ನಿರೀಕ್ಷೆಗಳಿವೆ ಈಗ ಸಮಿಶ್ರ ಸರ್ಕಾರ ಬೀಳುತ್ತದೆ ಎಂದು ಹೇಳುತ್ತಿದ್ದಾರೆ. ಪ್ರತಿ ದಿನ ರಾಜಕೀಯ ಬೆಳವಣಿಗೆಗಳನ್ನು ಬಹಳ ಕುತೂಹಲದಿಂದ ನೋಡುವಂತವರಲ್ಲಿ ನಾನು ಮೊದಲಿಗ ಎಂದು ಬಿಗ್ ಬಾಸ್ ಖ್ಯಾತಿಯ ಪ್ರಥಮ್ ಹೇಳಿದರು.

    ಬೆಂಗಳೂರು ಹೊರವಲಯ ಆನೇಕಲ್ ಪಟ್ಟಣದಲ್ಲಿ ಭಾನುವಾರ ಸ್ವಾಮಿ ವಿವೇಕಾನಂದ ಯುವ ಸೇನೆ ವತಿಯಿಂದ ಆಯೋಜಿಸಿದ್ದ ಬೃಹತ್ ಕಣ್ಣಿನ ತಪಾಸಣಾ ಶಿಬಿರಕ್ಕೆ ಆಗಮಿಸಿ ಚಾಲನೆ ನೀಡಿದರು. ಬಳಿಕ ಪ್ರಥಮ್ ಮಾಧ್ಯಮಗಳೊಂದಿಗೆ ಈಗ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ಬಗ್ಗೆ ಮಾತನಾಡಿದರು.

    ಕುಮಾರಸ್ವಾಮಿ ಅವರು ಸಿ.ಎಂ ಆಗಿ 100 ದಿನ ಪೂರೈಸಿದ್ದಾರೆ ಅವರ ಬಗ್ಗೆ ನನಗೆ ಇನ್ನು ಹೆಚ್ಚಿನ ನಿರೀಕ್ಷೆಗಳಿವೆ. ಈಗ ಸಮಿಶ್ರ ಸರ್ಕಾರ ಬೀಳುತ್ತದೆ ಎಂದು ಹೇಳುತ್ತಿದ್ದಾರೆ. ನಾನು ಸಹ ಪ್ರತಿ ದಿನ ರಾಜಕೀಯ ಬೆಳವಣಿಗೆಗಳನ್ನು ಬಹಳ ಸೂಕ್ಷ್ಮವಾಗಿ ಕುತೂಹಲದಿಂದ ನೋಡುವಂತವರಲ್ಲಿ ನಾನು ಮೊದಲಿಗ. ಈಗಿನ ಸರ್ಕಾರ ಬಿದ್ದರು ಸರಿ ಬೀಳದೆ ಇದ್ದರು ಸರಿ ಯಾವ ಸರ್ಕಾರವಾಗಲಿ ಆಡಳಿತವಾಗಲಿ ಅದು ಜನಕ್ಕೆ ಉಪಯೋಗವಾಗುವಂತ ಉತ್ತಮವಾದ ಆಡಳಿತ ಕೊಡಲಿ ಎಂದು ಹೇಳಿದರು.

    ಅಲ್ಲದೇ ನನ್ನ ಮುಂದಿನ ಚಿತ್ರವು ಸಹ ರಾಜಕೀಯ ಸಂಬಂಧಿತ ಎಂಎಲ್‍ಎ ಚಿತ್ರವು ಈಗಾಗಲೇ ಬಿಡುಗಡೆಗೆ ಸಿದ್ದವಾಗಿದೆ. ಎಲ್ಲರೂ ಚಿತ್ರವನ್ನು ನೋಡಿ ನಮಗೆ ಆಶೀರ್ವದಿಸಿ ಮತ್ತು ಈ ಚಿತ್ರವು ಈಗಿನ ರಾಜಕೀಯ ಬೆಳವಣಿಗೆಗಳಿಗೆ ಸಂಬಂಧ ಪಟ್ಟ ಚಿತ್ರ ನಾನು ಎಂಎಲ್‍ಎ ಆಗಿ ನಟನೆ ಮಾಡಿದ್ದೇನೆ ಎಲ್ಲರೂ ಚಿತ್ರವನ್ನು ನೋಡಿ ಎಂದು ಬಿಗ್ ಬಾಸ್ ವಿನ್ನರ್ ಪ್ರಥಮ್ ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ತೆಲುಗು ಕಾರ್ಯಕ್ರಮದಲ್ಲಿ ತನ್ನ ತವರೂರಿನ ಬಗ್ಗೆ ಮಾತನಾಡಿದ್ರು ರಶ್ಮಿಕಾ ಮಂದಣ್ಣ

    ತೆಲುಗು ಕಾರ್ಯಕ್ರಮದಲ್ಲಿ ತನ್ನ ತವರೂರಿನ ಬಗ್ಗೆ ಮಾತನಾಡಿದ್ರು ರಶ್ಮಿಕಾ ಮಂದಣ್ಣ

    ಬೆಂಗಳೂರು: ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ತೆಲುಗಿನ ರಿಯಾಲಿಟಿ ಶೋನಲ್ಲಿ ತನ್ನ ತವರೂರಿನ ಬಗ್ಗೆ ಮಾತನಾಡಿ “ನಾನು ಕೊಡಗಿನವಳು” ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

    ರಶ್ಮಿಕಾ ಮಂದಣ್ಣ ತೆಲುಗಿನಲ್ಲಿ ನಟಿಸಿದ ‘ಗೀತಾ ಗೋವಿಂದಂ’ ಚಿತ್ರ ಬ್ಲಾಕ್‍ಬಸ್ಟರ್ ಹಿಟ್ ಆಗಿದೆ. ಹಾಗಾಗಿ ರಶ್ಮಿಕಾ ಅವರನ್ನು ತೆಲುಗಿನ ಡ್ಯಾನ್ಸ್ ರಿಯಾಲಿಟಿ ಶೋ ‘ಆಟ ಜ್ಯೂನಿಯರ್ಸ್’ನಲ್ಲಿ ಸೆಲೆಬ್ರಿಟಿ ಜಡ್ಜ್ ಯಾಗಿ ಆಹ್ವಾನಿಸಿದ್ದರು.

    ಈ ಕಾರ್ಯಕ್ರಮದಲ್ಲಿ ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಮಹಾಲಕ್ಷ್ಮಿ ಎಂಬ ಹುಡುಗಿ ಭಾಗವಹಿಸುತ್ತಿದ್ದಾಳೆ. ಮಹಾಲಕ್ಷ್ಮಿ ನಾನು ಕರ್ನಾಟಕದವಳು ಎಂದು ಹೇಳಿದಾಗ ರಶ್ಮಿಕಾ ಹೆಮ್ಮೆಯಿಂದ ನಾನು ಕೊಡಗಿನವಳು ಎಂದು ಹೇಳಿದ್ದಾರೆ.

    ಮಹಾಲಕ್ಷ್ಮಿ ಪರ್ಫಮೆನ್ಸ್ ಮುಗಿಸಿದ ಬಳಿಕ ಆ ಕಾರ್ಯಕ್ರಮದ ನಿರೂಪಕ ರಶ್ಮಿಕಾ ಅವರಿಗೆ ಈ ಹುಡುಗಿಯ ಊರು ಯಾವುದು ಎಂದು ಕೇಳಿ ಎಂದು ಹೇಳಿದ್ದಾರೆ. ಬಳಿಕ ರಶ್ಮಿಕಾ ನಿನ್ನ ಊರು ಯಾವುದು ಎಂದು ಕೇಳಿದ್ದಾಗ ಮಹಾಲಕ್ಷ್ಮೀ ಕರ್ನಾಟಕ ಎಂದು ಉತ್ತರಿಸಿದ್ದಾಳೆ.

    ಮಹಾಲಕ್ಷ್ಮಿ ತನ್ನ ಊರು ಕರ್ನಾಟಕ ಎಂದು ಹೇಳಿದ ತಕ್ಷಣ ರಶ್ಮಿಕಾ “ಹೌದಾ.. ಸೂಪರ್, ಐ ಲವ್ ಯು ಎಂದು ಹೇಳಿದ್ದಾರೆ. ಅಲ್ಲದೇ ಸೆಲೆಬ್ರಿಟಿ ಜಡ್ಜ್ ಸೀಟಿನಲ್ಲೇ ಕುಳಿತು ಮಹಾಲಕ್ಷ್ಮಿಗೆ ಅಪ್ಪುಗೆ ಕೂಡ ನೀಡಿದ್ದಾರೆ.

    ಈ ವೇಳೆ ರಶ್ಮಿಕಾ ನಾನು ಕೊಡಗು ಅಂದು ಹೇಳಿದ್ದಾರೆ. ಆಗ ಕಾರ್ಯಕ್ರಮದ ನಿರೂಪಕ ಕೊಡಕ ಎಂದರೆ ಮಗ ಎಂದು ತಮಾಷೆ ಮಾಡಿದ್ದರು. ಆಗ ರಶ್ಮಿಕಾ ಕೊಡಗು ಅದು ಒಂದು ಜಿಲ್ಲೆ ಎಂದು ಹೇಳಿದ್ದರು. ಈ ವೇಳೆ ಮಹಾಲಕ್ಷ್ಮಿ ನಾನು ಶಿವಮೊಗ್ಗದ ಸೊರಬ ತಾಲೂಕಿನವಳು ಎಂದು ಹೇಳಿದ್ದಳು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಗ್ರಾಮದಲ್ಲಿ ವಾಸ್ತವ್ಯ ಬದಲು ಪ್ರವಾಸಿ ಮಂದಿರಕ್ಕೆ ದೌಡಾಯಿಸಿದ ಅಧಿಕಾರಿಗಳು!

    ಗ್ರಾಮದಲ್ಲಿ ವಾಸ್ತವ್ಯ ಬದಲು ಪ್ರವಾಸಿ ಮಂದಿರಕ್ಕೆ ದೌಡಾಯಿಸಿದ ಅಧಿಕಾರಿಗಳು!

    ಗದಗ: ಗ್ರಾಮ ವಾಸ್ತವ್ಯದ ನೆಪದಲ್ಲಿ ಗ್ರಾಮಕ್ಕೆ ಆಗಮಿಸಿದ ಅಧಿಕಾರಿಗಳು ಗ್ರಾಮದಲ್ಲಿ ವಾಸ್ತವ್ಯ ಬದಲು ಪ್ರವಾಸಿ ಮಂದಿರಕ್ಕೆ ದೌಡಾಯಿಸಿದ್ದಾರೆ.

    ಜಿಲ್ಲಾಧಿಕಾರಿ ಎಂಜಿ ಹಿರೇಮಠ್ ನೇತೃತ್ವದಲ್ಲಿ ಗದಗ ಜಿಲ್ಲೆಯ ಡಂಬಳ ಗ್ರಾಮದಲ್ಲಿ ಜನಸ್ಪಂದನಾ ಹಾಗೂ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಇಡೀ ಜಿಲ್ಲಾಡಳಿತದ ಅಧಿಕಾರಿಗಳು ಕೂಡಾ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇಡೀ ಜಿಲ್ಲಾಡಳಿತವೇ ತಮ್ಮ ಗ್ರಾಮಕ್ಕೆ ಬರುವುದರಿಂದ ನಮ್ಮ ಸಮಸ್ಯೆಗಳು ಇಲ್ಲಿಗೆ ಮುಗಿಯಲಿವೆ ಅಂತ ಅಲ್ಲಿನ ಜನರು ನಂಬಿದ್ದರು. ಆದರೆ ಅಲ್ಲಿ ಆಗಿದ್ದೇ ಬೇರೆ. ಗ್ರಾಮ ವಾಸ್ತವ್ಯದ ನೆಪದಲ್ಲಿ ಗ್ರಾಮಕ್ಕೆ ಆಗಮಿಸಿದ ಅಧಿಕಾರಿಗಳು ಗ್ರಾಮದಲ್ಲಿ ವಾಸ್ತವ್ಯ ಬದಲು ಪ್ರವಾಸಿ ಮಂದಿರಕ್ಕೆ ದೌಡಾಯಿಸಿದ್ದಾರೆ.

    ಪ್ರವಾಸಿ ಮಂದಿರದ ಎ.ಸಿ ರೂಂನಲ್ಲೇ ವಾಸ್ತವ್ಯ ಹೂಡಿ, ಮೃಷ್ಟಾನ್ನ ಭೋಜನ ಸವಿದರು. ಡಿಸಿ ಎಂ.ಜಿ ಹಿರೇಮಠ್ ನೇತೃತ್ವದ ಅಧಿಕಾರಿಗಳು ಉತ್ತರ ಕರ್ನಾಟಕದ ಭಾರೀ ಭೋಜನ ಮಾಡಿ, ಬಾಳೆ ಹಣ್ಣು, ಸೇಬುಗಳನ್ನ ಜೇಬಿಗಿಳಿಸಿ ತಿಂದು ತೇಗಿ ಎಸಿ ರೂಮ್ ನಲ್ಲಿ ಹಾಯಾಗಿ ಮಲಗಿದ್ದಾರೆ. ಡಿಸಿ ಎಂ.ಜಿ ಹಿರೇಮಠ್, ಜಿಲ್ಲಾ ಪಂಚಾಯತ್ ಸಿಇಒ ಮಂಜುನಾಥ್ ಚವ್ಹಾಣ, ಅಪರ ಡಿಸಿ ಶಿವಾನಂದ, ಎಸಿ ಮಂಜುನಾಥ್ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಈ ಗ್ರಾಮ ವಾಸ್ತವ್ಯದಲ್ಲಿ ಭಾಗಿಯಾಗಿದ್ದರು.

    ಎಲ್ಲ ಅಧಿಕಾರಿಗಳಿಗೆ ಹೈಫ್ ಕಾಟ್, ಬೆಡ್‍ಶಿಟ್, ತಲೆದಿಂಬು, ಬ್ಲಾಂಕೆಟ್ ವ್ಯವಸ್ಥೆ ಮಾಡಲಾಗಿತ್ತು. ಇದು ಗದಗ ಜಿಲ್ಲಾಡಳಿತ ಹಮ್ಮಿಕೊಂಡಿದ್ದ ಗ್ರಾಮ ವಾಸ್ತವ್ಯದ ಅಸಲಿ ಕಥೆ ಆಗಿದೆ. ಇನ್ನು ಈ ಕುರಿತು ಡಿಸಿ ಅವರನ್ನು ಕೇಳಿದರೆ 52 ಅರ್ಜಿಗಳು ಬಂದಿದ್ದು, ಕೆಲ ಸಮಸ್ಯೆಗಳನ್ನು ಸ್ಥಳದಲ್ಲೇ ಇತ್ಯರ್ಥ ಮಾಡಲಾಗಿದೆ. ಕೆಲ ಸಮಸ್ಯೆಗಳನ್ನು ಸಂಬಂಧಪಟ್ಟ ಇಲಾಖೆಗೆ ತಿಳಿಸಲಾಗಿದೆ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ರಸ್ತೆಬದಿಯಲ್ಲಿ ಸ್ಟಿಕ್ಕರ್, ಹೇರ್ ಬ್ಯಾಂಡ್  ಮಾರಿದ ಪಂಚಭಾಷಾ ತಾರೆ ಪ್ರಿಯಾಮಣಿ

    ರಸ್ತೆಬದಿಯಲ್ಲಿ ಸ್ಟಿಕ್ಕರ್, ಹೇರ್ ಬ್ಯಾಂಡ್ ಮಾರಿದ ಪಂಚಭಾಷಾ ತಾರೆ ಪ್ರಿಯಾಮಣಿ

    ಬೆಂಗಳೂರು: ಪಂಚಾಭಾಷಾ ತಾರೆಯಾಗಿ ಮಿನುಗುತ್ತಿರುವ ಪ್ರಿಯಾಮಣಿಯವರು ರಸ್ತೆಬದಿಯಲ್ಲಿ ನಿಂತು ಸ್ಟಿಕ್ಕರ್, ಹೇರ್ ಬ್ಯಾಂಡ್ ಹಾಗೂ ಕ್ಲಿಪ್‍ಗಳನ್ನು ಮಾರಾಟ ಮಾಡುತ್ತಿರುವುದು ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಮೂಡಿಸಿದೆ.

    ಅಭಿಮಾನಿಗಳಲ್ಲಿ ಈ ಕುರಿತು ಯಾವ ಸಿನಿಮಾದ ಚಿತ್ರೀಕರಣ ಎಂಬ ಗೊಂದಲ ಮೂಡಬಹುದು. ಆದರೆ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಕಾರ್ಯಕ್ರಮದಲ್ಲಿ ಇದೀಗ ಪ್ರಿಯಾಮಣಿ ಅವರ ಸರದಿ ಬಂದಿದೆ. ಈ ಹಿಂದೆ ಸ್ಯಾಂಡಲ್ ವುಡ್ ನಟರು ಮಾರಾಟ ಮಾಡಿ ಸಹಾಯ ಮಾಡಿದರು. ಈ ಬಾರಿ ಪ್ರಿಯಾಮಣಿಯವರು ಒಂದು ಕುಟುಂಬಕ್ಕೆ ಸಹಾಯಹಸ್ತ ಚಾಚಿದ್ದಾರೆ.

    ಮಂಜುಳಾ-ಸಿದ್ದರಾಜು ಕುಟುಂಬಕ್ಕಾಗಿ ಪ್ರಿಯಾಮಣಿ ಖಾಸಗಿ ವಾಹಿನಿಯ ಕಾರ್ಯಕ್ರಮದ ಮೂಲಕ ಸಹಾಯಕ್ಕೆ ಮುಂದಾಗಿದ್ದು, ಬೆಂಗಳೂರಿನ ದೊಡ್ಡ ಗಣಪತಿ ದೇವಸ್ಥಾನದ ರಸ್ತೆ ಬದಿಯಲ್ಲಿ ಅಲಂಕಾರಿಕ ವಸ್ತುಗಳಾದ ಬಳೆ, ಕ್ಲಿಪ್, ಸ್ಟಿಕ್ಕರ್, ಹೇರ್ ಬ್ಯಾಂಡ್ ಅನ್ನು ಮಾರಾಟ ಮಾಡಿದರು. ಅಷ್ಟೇ ಅಲ್ಲದೇ ದೇವಸ್ಥಾನದ ಸುತ್ತ ಅಭಿಮಾನಿಗಳು ತುಂಬಿಕೊಂಡಿದ್ದು, ಅವರೊಂದಿಗೆ ಕುಣಿದು ಕುಪ್ಪಳಿಸಿ ಸೆಲ್ಫಿ ಕ್ಲಿಕ್ಕಿಸಿಕೊಂಡರು.

    ಮಂಜುಳಾ ಅವರಿಗೆ ಕಿಡ್ನಿ ಸಮಸ್ಯೆ ಇದ್ದು, ಮಗನು ಹೃದಯ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ದಾರೆ. ಪತಿ ಸಿದ್ದರಾಜು ಅವರು ಧೋಬಿ ಕೆಲಸ ನಿರ್ವಹಿಸುತ್ತಿದ್ದು, ದುಡಿದ ಹಣದಿಂದ ಸಂಸಾರವನ್ನು ಸಾಗಿಸಲು ಸಾಧ್ಯವಾಗುತ್ತಿಲ್ಲ. ಅಷ್ಟೇ ಅಲ್ಲದೇ ಮಗ ಮತ್ತು ಮಂಜುಳಾ ಅವರ ಚಿಕಿತ್ಸೆಗೆ ಈಗಾಗಲೇ ಸಾಲವನ್ನು ಮಾಡಿಕೊಂಡಿದ್ದಾರೆ. ಹೀಗಾಗಿ ಪ್ರಿಯಾಮಣಿ ಈ ಕುಟುಂಬಕ್ಕೆ ಸಹಾಯ ಮಾಡುವ ಮನಸ್ಸು ಮಾಡಿದ್ದಾರೆ.

    ಈ ಹಿಂದೆ ಸ್ಟಾರ್ ನಟ, ನಟಿಯರಾದ ಶ್ರೀಮುರುಳಿ, ಉಪೇಂದ್ರ, ರಶ್ಮಿಕಾ ಮಂದಣ್ಣ, ಸೃಜನ್ ಲೋಕೇಶ್ ಹಾಗೂ ಪ್ರಿಯಾಂಕ ಉಪೇಂದ್ರ ಇದೇ ರೀತಿ ಕೆಲಸ ಮಾಡಿ ಈ ಕಾರ್ಯಕ್ರಮದ ಮೂಲಕ ನಿಮ್ಮೊಂದಿಗೆ ಇದ್ದೇವೆ ಎಂದು ಭರವಸೆ ನೀಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬೆಂಗ್ಳೂರು ಕೇಂದ್ರ ವಿಶ್ವವಿದ್ಯಾಲಯದ ಕ್ರೀಡಾಂಗಣ ಆಯ್ತು ಮದ್ಯ ಬಾಟಲಿಗಳ ತಾಣ

    ಬೆಂಗ್ಳೂರು ಕೇಂದ್ರ ವಿಶ್ವವಿದ್ಯಾಲಯದ ಕ್ರೀಡಾಂಗಣ ಆಯ್ತು ಮದ್ಯ ಬಾಟಲಿಗಳ ತಾಣ

    ಬೆಂಗಳೂರು: ನಗರದ ಕೇಂದ್ರ ವಿಶ್ವವಿದ್ಯಾಲಯದ ಸೆಂಟ್ರಲ್ ಕಾಲೇಜಿನ ಕ್ರೀಡಾಂಗಣ ಮದ್ಯ ಬಾಟಲಿಗಳ ರಾಶಿಗಳು, ಕಸದ ರಾಶಿಗಳಿಂದ ತುಂಬಿದೆ.

    ಮಂಗಳವಾರ ಸೆಂಟ್ರಲ್ ಕಾಲೇಜ್ ಕ್ರೀಡಾಂಗಣದಲ್ಲಿ ಇಂಡೋ-ನೇಪಾಳಿ ಹಬ್ಬ ಆಯೋಜನೆ ಮಾಡಲಾಗಿತ್ತು. ಹೀಗಾಗಿ ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯ ಕ್ರೀಡಾಂಗಣವನ್ನು ಬಾಡಿಗೆಗೆ ಕೊಟ್ಟು ಈಗ ಅದ್ವಾನ ಮಾಡಿದ್ದರು. ಕಾರ್ಯಕ್ರಮಕ್ಕೆ ಬಂದ ಜನರು ಕುಡಿದು ಕುಣಿದು ಕುಪ್ಪಳಿಸಿ ಬಾಟಲಿಗಳನ್ನ ಕ್ರೀಡಾಂಗಣದಲ್ಲೇ ಎಸೆದು ಹಾಳು ಮಾಡಿದ್ದಾರೆ.

    ಬೇರೆ ಕಾರ್ಯಕ್ರಮಗಳಿಗೆ ಕ್ರೀಡಾಂಗಣವನ್ನ ಬಾಡಿಗೆಗೆ ನೀಡುವ ನಿಯಮವಿಲ್ಲ. ಆದರೆ ಕೇಂದ್ರ ವಿಶ್ವವಿದ್ಯಾಲಯ ಕುಲಪತಿ ಜಾಫೆಟ್ ಹಣಕ್ಕಾಗಿ ಕ್ರೀಡಾಂಗಣವನ್ನ ಬಾಡಿಗೆ ನೀಡಿದ್ದಾರೆ. ಇದೀಗ ಕ್ರೀಡಾಂಗಣದಲ್ಲಿ ತುಂಬಿದ್ದ ಕಸ, ಬಾಟಲಿಗಳನ್ನು ತೆಗೆದು ಸ್ವಚ್ಛಗೊಳಿಸಲು ಸಿಬ್ಬಂದಿ ಬಂದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ತನ್ನ ಸೀಮಂತದಲ್ಲಿ ಖುಷಿಯಾಗಿ ಕುಣಿದು ಕುಪ್ಪಳಿಸಿದ ನಟಿ ರಂಭಾ- ಫೋಟೋ ವೈರಲ್!

    ತನ್ನ ಸೀಮಂತದಲ್ಲಿ ಖುಷಿಯಾಗಿ ಕುಣಿದು ಕುಪ್ಪಳಿಸಿದ ನಟಿ ರಂಭಾ- ಫೋಟೋ ವೈರಲ್!

    ಟೊರಂಟೊ: ಬಹುಭಾಷಾ ನಟಿ ರಂಭಾ ತಮ್ಮ ಮೂರನೇ ಮಗುವಿನ ಆಗಮನದ ಖುಷಿಯಲ್ಲಿದ್ದಾರೆ. ಇತ್ತೀಚಿಗೆ ಸೀಮಂತ ಕಾರ್ಯಕ್ರಮ ಕೆನಡಾದಲ್ಲಿ ಜರುಗಿದ್ದು, ರಂಭಾ ಕುಣಿದು ಕುಪ್ಪಳಿಸಿದ್ದಾರೆ.

    ರಂಭಾ ಉದ್ಯಮಿ ಇಂದ್ರಕುಮಾರ್ ಪತ್ಮನಾಥನ್ ಅವರನ್ನು 2010ರಲ್ಲಿ ಮದುವೆಯಾಗಿದ್ದರು. ಈಗಾಗಲೇ ಅವರಿಗೆ ಲಾನ್ಯ ಹಾಗೂ ಸಾಶಾ ಹೆಣ್ಣು ಮಕ್ಕಳಿದ್ದು, ಈಗ ಮೂರನೇ ಮಗುವಿನ ಆಗಮನಕ್ಕೆ ಕಾಯುತ್ತಿದ್ದಾರೆ. ಸದ್ಯ ರಂಭಾ ತನ್ನ ಪತಿ ಹಾಗೂ ಮಕ್ಕಳ ಜೊತೆ ಕೆನಡಾದಲ್ಲಿ ವಾಸಿಸುತ್ತಿದ್ದಾರೆ.

    ಕೆನಡಾದಲ್ಲಿರುವ ನಿವಾಸದಲ್ಲಿ ರಂಭಾ ಅವರ ಸೀಮಂತ ಕಾರ್ಯಕ್ರಮ ಸಂಪ್ರಾದಾಯದಂತೆ ನಡೆಯಿತು. ಈ ಕಾರ್ಯಕ್ರಮದಲ್ಲಿ ಅವರ ಪತಿ ಇಂದ್ರಕುಮಾರ್, ಲಾನ್ಯ ಹಾಗೂ ಸಾಶಾ ಕೂಡ ಭಾಗಿಯಾಗಿದ್ದರು.

    ಸೋಮವಾರ ರಂಭಾ ಅವರ ಸೀಮಂತ ಕಾರ್ಯಕ್ರಮ ಜರುಗಿತ್ತು. ಕಾರ್ಯಕ್ರಮದ ಎಲ್ಲಾ ಫೋಟೋಗಳನ್ನು ರಂಭಾ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ರಂಭಾ ತುಂಬು ಗರ್ಭೀಣಿಯಾಗಿದ್ದರೂ, ತನ್ನ ಸೀಮಂತದ ಕಾರ್ಯಕ್ರಮದಲ್ಲಿ ಸಂಬಂಧಿಕರ ಜೊತೆ ಡ್ಯಾನ್ಸ್ ಮಾಡಿದ್ದಾರೆ. ಸದ್ಯ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    #rambhababy #baby #babyshower #rambhababyshower

    A post shared by RambhaIndrakumar???? (@rambhaindran_) on

    #rambhababy #baby #babyshower #rambhababyshower

    A post shared by RambhaIndrakumar???? (@rambhaindran_) on

    #rambhababy #baby #babyshower #rambhababyshower

    A post shared by RambhaIndrakumar???? (@rambhaindran_) on

    #rambhababy #baby #babyshower #rambhababyshower

    A post shared by RambhaIndrakumar???? (@rambhaindran_) on

    With family ???? #rambhababy #baby #babyshower #rambhababyshower

    A post shared by RambhaIndrakumar???? (@rambhaindran_) on

    With Kalamaster ???? #rambhababy #baby #babyshower #rambhababyshower

    A post shared by RambhaIndrakumar???? (@rambhaindran_) on

    My family ???? #rambhababy #baby #babyshower #rambhababyshower

    A post shared by RambhaIndrakumar???? (@rambhaindran_) on

    #rambhababy #baby #babyshower #rambhababyshower

    A post shared by RambhaIndrakumar???? (@rambhaindran_) on

    Happy moments ????????#rambhababy #baby #babyshower #rambhababyshower

    A post shared by RambhaIndrakumar???? (@rambhaindran_) on

    #rambhababy #baby #babyshower #rambhababyshower

    A post shared by RambhaIndrakumar???? (@rambhaindran_) on

    #rambhababy #baby #babyshower #rambhababyshower

    A post shared by RambhaIndrakumar???? (@rambhaindran_) on

  • ಭಾನುವಾರ ನಿಗದಿಯಾಗಿದ್ದ ಆಲಮಟ್ಟಿ ಜಲಾಶಯದ ಬಾಗಿನ ಕಾರ್ಯಕ್ರಮ ರದ್ದು

    ಭಾನುವಾರ ನಿಗದಿಯಾಗಿದ್ದ ಆಲಮಟ್ಟಿ ಜಲಾಶಯದ ಬಾಗಿನ ಕಾರ್ಯಕ್ರಮ ರದ್ದು

    ಹುಬ್ಬಳ್ಳಿ: ಹವಾಮಾನ ವೈಪರೀತ್ಯದಿಂದಾಗಿ ಇಂದು ನಿಗದಿಯಾಗಿದ್ದ ಆಲಮಟ್ಟಿ ಜಲಾಶಯಕ್ಕೆ ಬಾಗಿನ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

    ಕಾರ್ಯಕ್ರಮ ನಿಮಿತ್ತ ಪ್ರವಾಸ ಕೈಗೊಂಡಿದ್ದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಇಂದು ಮಧ್ಯಾಹ್ನ ನಗರದ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಆದರೆ ಬೆಳಗ್ಗಿನಿಂದಲೂ ಸುರಿಯುತ್ತಿರುವ ಮಳೆಯಿಂದಾಗಿ ಹೆಲಿಕಾಪ್ಟರ್ ಪೈಲಟ್ ಹವಾಮಾನ ಸರಿ ಇಲ್ಲದ ಕಾರಣ ಅನುಮತಿಗೆ ನಿರಾಕರಿಸಿದ್ದಾರೆ.

    ಈ ಕುರಿತು ಪ್ರತಿಕ್ರಿಯಿಸಿದ ಸಚಿವ ಡಿಕೆ ಶಿವಕುಮಾರ್, ಸುರಿಯುತ್ತಿರುವ ಮಳೆಯಿಂದಾಗಿ ಪೈಲಟ್ ವಿಜಯಪುರ ಪ್ರಯಾಣಕ್ಕೆ ನಿರಾಕರಿಸಿದ್ದರು. ಹೀಗಾಗಿ ರಸ್ತೆ ಮೂಲಕ ತೆರಳಲು ನಿರ್ಧಾರ ಮಾಡಿದ್ದೇವು, ಆದರೆ ನಿರಂತರವಾಗಿ ಮಳೆಯಾಗುತ್ತಿರುವುದರಿಂದ ವಾಹನಗಳ ಮುಖಾಂತರ ತಲುಪಲು ತಡವಾಗುತ್ತದೆ. ಈ ಹಿನ್ನೆಲೆಯಲ್ಲಿ ಬಾಗಿನ ಕಾರ್ಯಕ್ರಮವನ್ನು ರದ್ದುಗೊಳಿಸಿ ಇದೇ ಆಗಸ್ಟ್ 15ರಂದು ಕಾರ್ಯಕ್ರಮವನ್ನು ನಡೆಸುವುದಾಗಿ ಹೇಳಿದ್ದಾರೆ.

    ಸದ್ಯ ಮುಖ್ಯಮಂತ್ರಿ ಕುಮಾರಸ್ವಾಮಿಯವರು ವಿಮಾನ ನಿಲ್ದಾಣದಿಂದ ಬಸವರಾಜ ಹೊರಟ್ಟಿ ಮನೆಗೆ ತೆರಳಿದ್ದಾರೆ. ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು ವ್ಯಾಪಕ ಮಳೆ ಸುರಿಯುತ್ತಿರುವುದರಿಂದ ಆಲಮಟ್ಟಿ ಬಾಗಿನ ಅರ್ಪಿಸುವ ಕಾರ್ಯಕ್ರಮವನ್ನು ರದ್ದು ಮಾಡಲಾಗಿದ್ದು, ಒಂದು ವಾರದ ಬಳಿಕ ಕಾರ್ಯಕ್ರಮವನ್ನು ನಡೆಸುವುದಾಗಿ ತಿಳಿಸಿದ್ದಾರೆ.

    ಹವಾಮಾನ ವೈಪರೀತ್ಯದಿಂದ ಏಕಾಏಕಿ ಸಿಎಂ ಕಾರ್ಯಕ್ರಮ ರದ್ದುಗೊಂಡಿದ್ದರಿಂದ, ಆಲಮಟ್ಟಿ ಜಲಾಶಯದಲ್ಲಿ ಮನವಿ ಕೊಡಲು ಬಂದಿದ್ದ ರೈತರು ಅಸಮಾಧಾನ ಹೊರಹಾಕಿ, ಆಕ್ರೋಶ ವ್ಯಕ್ತಪಡಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews

  • ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಕಾವೇರಿಗೆ ಬಾಗಿನ ಅರ್ಪಣೆ

    ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಕಾವೇರಿಗೆ ಬಾಗಿನ ಅರ್ಪಣೆ

    ಮಡಿಕೇರಿ: ತಲಕಾವೇರಿಯಲ್ಲಿ ಹುಟ್ಟಿ ದಕ್ಷಿಣ ಭಾರತದಲ್ಲಿ ಹರಿಯುವ ಕಾವೇರಿ ನದಿಗೆ ಬಾಗಿನ ಅರ್ಪಿಸುವ ಕಾರ್ಯಕ್ರಮ ಶನಿವಾರ ಅದ್ಧೂರಿಯಾಗಿ ನಡೆಯಿತು.

    ಭಾಗಮಂಡಲದ ಭಗಂಡೇಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ದೇವಾಲಯದಿಂದ ಉತ್ಸವ ಮಂಟಪವನ್ನು ತ್ರಿವೇಣಿ ಸಂಗಮಕ್ಕೆ ತಂದು ಮಳೆ ಕಡಿಮೆಯಾಗಿ ಕಾವೇರಿ ಮಾತೆ ಶಾಂತವಾಗಿ ಹರಿಯಲಿ ಎಂದು ಪ್ರಾರ್ಥಿಸಿ ಬಾಗಿನವನ್ನು ಸಮರ್ಪಣೆ ಮಾಡಲಾಯಿತು. ಪ್ರತಿವರ್ಷ ಮಳೆ ಸುರಿದು ತ್ರಿವೇಣಿ ಸಂಗಮ ಭರ್ತಿಯಾದ ನಂತರದ ಕರ್ಕಾಟಕ ಅಮವಾಸ್ಯೆಯಂದು ಪೊಲಿಂಕಾನ ಅಥವಾ ಬಾಗಿನ ಅರ್ಪಿಸುವ ಕಾರ್ಯಕ್ರಮ ನಡೆಯುತ್ತದೆ.

    ಈ ವೇಳೆ ಭಗಂಡೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆಯ ನಂತರ ಬಾಳೆ ಕಂಬದಿಂದ ವಿಶೇಷವಾಗಿ ಸಿದ್ಧಗೊಳಿಸಿದ ಉತ್ಸವ ಮಂಟಪದಲ್ಲಿ ಮುತ್ತೈದೆಯರಿಗೆ ನೀಡೋ ಬಳೆ, ಬಿಚ್ಚೋಲೆ, ಅರಿಶಿಣ ಕುಂಕುಮ, ಸೀರೆ, ಕರಿಮಣಿ ಸೇರಿದಂತೆ ಮುಂತಾದ ಪೂಜಾ ವಸ್ತುಗಳನ್ನು ಇಟ್ಟು ತ್ರಿವೇಣಿ ಸಂಗಮದಲ್ಲಿ ಕಾವೇರಿ ಮಾತೆಗೆ ಅರ್ಪಣೆಮಾಡಲಾಗುತ್ತದೆ. ಅಲ್ಲದೇ ಇದೇ ಮಂಟಪಕ್ಕೆ ಚಿನ್ನ ಹಾಗೂ ಬೆಳ್ಳಿಯನ್ನೂ ತೊಟ್ಟಿಲಲ್ಲಿ ಹಾಕಿ ನೀರಿನಲ್ಲಿ ಬಿಡಲಾಗುತ್ತದೆ.

    ರಾಜ್ಯದಲ್ಲಿ ಉತ್ತಮ ಮಳೆ ಸುರಿಸಿ ಕೃಷಿ ಚಟುವಟಿಕೆ ಸುಭೀಕ್ಷೆಯಾಗಿ ನಡೆಯಲು ಅನುವುಮಾಡಿದ ಕಾವೇರಿಗೆ ವಂದಿಸುತ್ತಾ, ಮುಂದೆ ಪ್ರವಾಹ ಬಾರದಂತೆ ಬೇಡೋದು ಈ ಉತ್ಸವದ ಪ್ರಮುಖ ಉದ್ದೇಶವಾಗಿದೆ. ಈ ಕಾರ್ಯಕ್ರಮಕ್ಕೆ ನೂರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಶ್ರದ್ದಾಭಕ್ತಿಯಿಂದ ವರ್ಷವಿಡೀ ಅನ್ನ ನೀರು ನೀಡೋ ಮಾತೆಗೆ ವಂದಿಸಿ ಪುನೀತರಾಗುತ್ತಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews