Tag: ಕಾರ್ಯಕ್ರಮ

  • ಪ್ರಭಾಸ್ ಒಬ್ಬ ಕೆಟ್ಟ ಹುಡುಗ, ಅದು ನಿಮ್ಗೆ ಗೊತ್ತಾಗಲ್ಲ: ರಾಜಮೌಳಿ

    ಪ್ರಭಾಸ್ ಒಬ್ಬ ಕೆಟ್ಟ ಹುಡುಗ, ಅದು ನಿಮ್ಗೆ ಗೊತ್ತಾಗಲ್ಲ: ರಾಜಮೌಳಿ

    ಮುಂಬೈ: ಬಾಹುಬಲಿ ನಟ ಪ್ರಭಾಸ್ ಒಬ್ಬ ಕೆಟ್ಟ ಹುಡುಗ. ಅವನು ಬ್ಯಾಡ್ ಬಾಯ್ ಎಂದು ಕಂಡು ಹಿಡಿಯಲು ನಿಮಗೆ ಸಾಧ್ಯವೇ ಇಲ್ಲ ಎಂದು ಸ್ಟಾರ್ ನಿರ್ದೇಶಕ ರಾಜಮೌಳಿ ಹೇಳಿದ್ದಾರೆ.

    ಇತ್ತೀಚೆಗೆ ನಿರ್ದೇಶಕ ಕರಣ್ ಜೋಹರ್ ನಡೆಸಿ ಕೊಡುವ `ಕಾಫಿ ವಿತ್ ಕರಣ್’ ಕಾರ್ಯಕ್ರಮದಲ್ಲಿ ಪ್ರಭಾಸ್ ಅತಿಥಿಯಾಗಿ ಭಾಗವಹಿಸಿದ್ದರು. ಪ್ರಭಾಸ್ ಜೊತೆ ಬಾಹುಬಲಿ ಚಿತ್ರದ ನಿರ್ದೇಶಕ ರಾಜಮೌಳಿ ಹಾಗೂ ರಾಣಾ ದಗ್ಗುಬಾಟಿ ಕೂಡ ಪಾಲ್ಗೊಂಡಿದ್ದರು. ಈ ವೇಳೆ ರಾಜಮೌಳಿ ಪ್ರಭಾಸ್ ಬಗ್ಗೆ ಈ ಹೇಳಿಕೆ ನೀಡಿದ್ದಾರೆ.

    ಕಾರ್ಯಕ್ರಮದಲ್ಲಿ ಕರಣ್ ಜೋಹರ್, ರಾಣಾ ಹಾಗೂ ಪ್ರಭಾಸ್ ನಡುವೆ ಬ್ಯಾಡ್ ಬಾಯ್ ಯಾರು ಎಂದು ರಾಜಮೌಳಿ ಅವರನ್ನು ಪ್ರಶ್ನಿಸಿದ್ದಾರೆ. ಆಗ ರಾಜಮೌಳಿ ಬ್ಯಾಡ್ ಬಾಯ್ ಎಂದರೆ ಅದು ಪ್ರಭಾಸ್. ಆದರೆ ಅವನು ಬ್ಯಾಡ್ ಬಾಯ್ ಎಂದು ನಿಮಗೆ ಕಂಡು ಹಿಡಿಯಲು ಸಾಧ್ಯವಿಲ್ಲ ಎಂದು ಉತ್ತರಿಸಿದರು. ಈ ವೇಳೆ ರಾಣಾ ನಾನು ತಪ್ಪು ಮಾಡಿದ್ದರೆ ಬೇಗ ಸಿಕ್ಕಿ ಹಾಕಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಅನುಷ್ಕಾ ಜೊತೆಗಿನ ಸಂಬಂಧದ ರಹಸ್ಯ ಬಿಚ್ಚಿಟ್ಟ ಪ್ರಭಾಸ್: ವಿಡಿಯೋ

    ಈ ಕಾರ್ಯಕ್ರಮದ ಪ್ರೋಮೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ನೀವು ಸಿಂಗಲ್ ಆಗಿದ್ದೀರಾ? ನಿಮ್ಮ ಮತ್ತು ಅನುಷ್ಕಾ ಡೇಟಿಂಗ್ ಸುದ್ದಿ ನಿಜಾವೇ ಎಂದು ಪ್ರಭಾಸ್ ಅವರನ್ನು ಪ್ರಶ್ನಿಸಿದ್ದಾರೆ. ಈ ಪ್ರಶ್ನೆಗೆ ಪ್ರಭಾಸ್, ನಾನು ಸಿಂಗಲ್ ಎಂದು ಉತ್ತರಿಸಿದ್ದಾರೆ. ನಂತರ ಕರಣ್ ರ‍್ಯಾಪಿಡ್ ಫೈರ್ ರೌಂಡ್‍ನಲ್ಲಿ ಕರಣ್ ಅವರು ಪ್ರಭಾಸ್ ನೀವು ಈ ಸೋಫಾದಲ್ಲಿ ಕುಳಿತು ಸುಳ್ಳು ಹೇಳಿದ್ದೀರಿ ಅಲ್ಲವೇ ಎಂದು ಪ್ರಶ್ನಿಸಿದ್ದಾರೆ. ಆಗ ಪ್ರಭಾಸ್ ಹೌದು ಎಂದು ಹೇಳಿ ಎಲ್ಲರ ಮುಂದೆ ಜೋರಾಗಿ ನಕ್ಕಿದ್ದಾರೆ.

    ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಮೊದಲ ಬಾರಿಗೆ ದಕ್ಷಿಣ ಭಾರತದ ನಟರು ಭಾಗಿಯಾಗಿದ್ದಾರೆ. ಬಾಹುಬಲಿ ಚಿತ್ರತಂಡ ಜೊತೆ ಕರಣ್ ನಡೆಸಿಕೊಟ್ಟ ಈ ಸಂಚಿಕೆ ಡಿಸೆಂಬರ್ ತಿಂಗಳ ಕೊನೆಯಲ್ಲಿ ಪ್ರಸಾರವಾಗಲಿದೆ. ಪ್ರಭಾಸ್ ಅವರಿಗೆ 38 ವರ್ಷವಾಗಿದ್ದು, ಸಲ್ಮಾನ್ ಖಾನ್ ಅವರಂತೆ ಪ್ರಭಾಸ್ ಅವರನ್ನು ಅಭಿಮಾನಿಗಳು ಮೋಸ್ಟ್ ಎಲಿಜಬಲ್ ಬ್ಯಾಚುಲರ್ ಎಂದು ಕರೆಯುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಮ್ಮ ರಾಜ್ಯದ ಸಂಸ್ಕೃತಿ ನಮ್ಮ ಹೆಮ್ಮೆ- ಸುನೀಲ್ ಶೆಟ್ಟಿ

    ನಮ್ಮ ರಾಜ್ಯದ ಸಂಸ್ಕೃತಿ ನಮ್ಮ ಹೆಮ್ಮೆ- ಸುನೀಲ್ ಶೆಟ್ಟಿ

    ಬೆಳಗಾವಿ: ತುಳುನಾಡು ಹಾಗೂ ಕರ್ನಾಟಕ ಜನತೆಗೆ ಪ್ರೀತಿ ಇರಲಿ. ನಮ್ಮ ರಾಜ್ಯದ ಸಂಸ್ಕೃತಿ ನಮ್ಮ ಹೆಮ್ಮೆ. ನಾನು ಹೆಮ್ಮೆಯ ಕನ್ನಡಿಗ ಎಂದು ಬಾಲಿವುಡ್ ನಟ, ಆ್ಯಕ್ಷನ್ ಹೀರೋ ಸುನೀಲ್ ಶೆಟ್ಟಿ ಹೇಳಿದ್ದಾರೆ.

    ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಬೆಳಗಾವಿಗೆ ಬಂದಾಗ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ನಾನು 25 ವರ್ಷದಿಂದ ಬಾಲಿವುಡ್‍ನಲ್ಲಿದ್ದೇನೆ. ಇಂದು ನನಗೆ ತುಂಬಾ ಖುಷಿಯಾಗುತ್ತಿದೆ. ಏಕೆಂದರೆ ನಾನು ಚಿಕ್ಕ ವಯಸ್ಸಿನಲ್ಲಿದ್ದಾಗ ಮಂಗಳೂರಿಗೆ ಬಂದಾಗ ನಾನು ಬೆಳಗಾವಿಗೆ ಹೋಗುತ್ತಿದ್ದೆ. ಇಲ್ಲಿ ನನ್ನ ಬಾಲ್ಯದ ನೆನಪು ಸಾಕಷ್ಟಿದೆ. ನಾನು ಸಂಜೆ ಹೊತ್ತು ಬೆಳಗಾವಿಗೆ ಬರುತ್ತಿದ್ದೆ. ಬೆಳಗಾವಿ ಏರ್ ಕಂಡಿಶನ್ ಸಿಟಿ ಎಂದು ಕರೆಯುತ್ತಿದ್ದೇವು. ರಾಮ್‍ದೇವ್ ಹೋಟೆಲ್‍ನಲ್ಲಿ ಯಾವಾಗಲೂ ವಾಸಿಸುತ್ತಿದ್ದೇವು. ಇಲ್ಲಿ ನನ್ನ ಬಾಲ್ಯದ ನೆನಪು ಸಾಕಷ್ಟಿದೆ ಎಂದರು.

    ‘ಬಲವಾನ್’ ಸಿನಿಮಾದಿಂದ ‘ಪೈಲ್ವಾನ್’ ಸಿನಿಮಾವರೆಗಿನ ನನ್ನ ಪಯಾಣ ಚೆನ್ನಾಗಿದೆ. 26-27 ವರ್ಷದಿಂದ ಜನರು ನನಗೆ ಸಾಕಷ್ಟು ಗೌರವ ಹಾಗೂ ಪ್ರೀತಿ ನೀಡಿದ್ದಾರೆ. ಜನರ ಈ ಪ್ರೀತಿ ಹಾಗೂ ಗೌರವ ಪಡೆಯುತ್ತಿರುವುದ್ದಕ್ಕೆ ನನ್ನನ್ನು ನಾನು ಅದೃಷ್ಟವಂತ ಎಂದು ಭಾವಿಸುತ್ತೇನೆ. ಪೈಲ್ವಾನ್ ಚಿತ್ರ ಬಗ್ಗೆ ಈಗ ಮಾತನಾಡುವುದು ಬೇಡ. ಪೈಲ್ವಾನ್ ಚಿತ್ರ ಬಿಡುಗಡೆಯಾದಾಗ ಮಾತನಾಡಿದ್ದರೆ ಚೆನ್ನಾಗಿರುತ್ತದೆ. ಕೃಷ್ಣ ಹಾಗೂ ಸುದೀಪ್ ಶೂಟಿಂಗ್‍ನಲ್ಲಿದ್ದಾರೆ. ಶೂಟಿಂಗ್ ಮುಗಿದ್ದಾಗ ಈ ಚಿತ್ರದ ಬಗ್ಗೆ ಮಾತನಾಡೋಣ ಎಂದು ತಿಳಿಸಿದರು.

    ಸೆಲೆಬ್ರಿಟಿ ಕ್ರಿಕೆಟ್ ಲೀಗ್ ನಾವು ಕ್ರಿಕೆಟ್‍ಗಾಗಿ ಆಡುವುದಿಲ್ಲ. ನಾವು ಒಂದು ಒಳ್ಳೆಯ ಉದ್ದೇಶಕ್ಕಾಗಿ ಆಡುತ್ತೇವೆ. 100 ಮಕ್ಕಳಿಗೆ 100 ಸರ್ಜರಿಗಾಗಿ ಯಂಗ್ ಹಾರ್ಟ್‍ಗಾಗಿ ನಾವು ಕ್ರಿಕೆಟ್ ಆಡುತ್ತೇವೆ. ಚಾರಿಟಿಗಾಗಿ ಹಾಗೂ ಸ್ನೇಹವನ್ನು ಬೆಳೆಸಲು ನಾವು ಕ್ರಿಕೆಟ್ ಆಡುತ್ತೇವೆ. 8 ರಾಜ್ಯದ ಕಲಾವಿದರು ಒಟ್ಟಿಗೆ ಬಂದು ಒಂದು ಒಳ್ಳೆಯ ಉದ್ದೇಶಕ್ಕಾಗಿ ಕ್ರಿಕೆಟ್ ಆಡುತ್ತಾರೆ ಎಂದು ಹೇಳಿದರು.

    ನಾನು ಒಬ್ಬ ಸ್ಪೋಟ್ಸ್ ಪರ್ಸನ್ ಆಗಿದ್ದು, ನಾನು ನನ್ನ ಆರೋಗ್ಯದ ಬಗ್ಗೆ ಹೆಚ್ಚು ಗಮನ ಕೊಡುತ್ತೇನೆ. ನನ್ನ ಆರೋಗ್ಯ, ಫಿಸಿಕ್ ನನಗೆ ಆ್ಯಕ್ಷನ್ ಹೀರೋ ಎಂಬ ಪಟ್ಟ ನೀಡಿದೆ. ಸಿಎಸ್‍ಆರ್ ನನ್ನ ಜೀವನದ ಒಂದು ಭಾಗ. ನಾವು ಜೀವನದಲ್ಲಿ ಏನಾದರೂ ಸಾಧಿಸಿದ್ದಾಗ ನಾವು ಅದನ್ನು ವಾಪಸ್ ನೀಡುವುದು ತುಂಬಾನೇ ಮುಖ್ಯ. ನಮ್ಮ ಮುಖ್ಯ ಗುರಿ ಮಕ್ಕಳಿಗೆ ಶಿಕ್ಷಣ ನೀಡುವುದು. ಈ ಗುರಿ ಎಂದಿಗೂ ಬದಲಾಗುವುದಿಲ್ಲ. ಹಾಗಾಗಿ ನಾನು ಒಂದೇ ಗುರಿಯಲ್ಲಿ ನಡೆಯುತ್ತೇನೆ. 10 ಜನ ಅದು ಮಾಡು ಇದು ಮಾಡು ಎಂದು ಹೇಳುತ್ತಾರೆ. ಆದರೆ ಎಲ್ಲಿ ಉತ್ತಮ ಫಲಿತಾಂಶ ಸಿಗುತ್ತೋ ಅಲ್ಲಿ ನಾನು ಗಮನ ನೀಡುತ್ತೇನೆ ಎಂದರು.

    ನನಗೆ ಕನ್ನಡ ಸ್ವಲ್ಪ ಸ್ವಲ್ಪ ಬರುತ್ತೆ. ನಾನು ಹೆಚ್ಚು ತುಳು ಮಾತನಾಡುವುದು. ಹಾಗಾಗಿ ತುಳುನಾಡು ಹಾಗೂ ಕರ್ನಾಟಕ ಜನತೆಗೆ ಪ್ರೀತಿ ಇರಲಿ. ನಮ್ಮ ರಾಜ್ಯದ ಸಂಸ್ಕೃತಿ ನಮ್ಮ ಹೆಮ್ಮೆ. ನಾನು ಹೆಮ್ಮೆಯ ಕನ್ನಡಿಗ. ಈ ರಾಜ್ಯದಲ್ಲಿ ಮಹಿಳೆಯರಿಗೆ ಹೆಚ್ಚು ಗೌರವ ನೀಡುತ್ತಾರೆ. ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡುತ್ತಾರೆ. ಹಾಗಾಗಿ ನನಗೆ ಈ ರಾಜ್ಯ ಇಷ್ಟವಾಗುತ್ತದೆ. ಬೆಳಗಾವಿಗೆ ಬರಲು ನನಗೆ ಇಷ್ಟವಾಗುತ್ತದೆ. ಬೆಳಗಾವಿ ಹೆಚ್ಚು ಅಭಿವೃದ್ಧಿ ಹೊಂದಿದೆ. ಕಳೆದ ವರ್ಷ ಕರ್ನಾಟಕ ಪ್ರೀಮಿಯರ್ ಲೀಗ್‍ಗೆ ಬಂದಿದ್ದೆ. ಬೆಳಗಾವಿಯಿಂದ ಹುಬ್ಬಳ್ಳಿಗೆ ಹೋಗಿದ್ದೆ ಎಂದು ಸುನೀಲ್ ಶೆಟ್ಟಿ ನೆನಪನ್ನು ಹಂಚಿಕೊಂಡರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರೇವಾ ವಿಶ್ವವಿದ್ಯಾಲಯದಲ್ಲಿ ನ.12ರಂದು ಮತದಾನ ಜಾಗೃತಿ ಕಾರ್ಯಕ್ರಮ

    ರೇವಾ ವಿಶ್ವವಿದ್ಯಾಲಯದಲ್ಲಿ ನ.12ರಂದು ಮತದಾನ ಜಾಗೃತಿ ಕಾರ್ಯಕ್ರಮ

    ಬೆಂಗಳೂರು: ವಿದ್ಯಾರ್ಥಿಗಳಲ್ಲಿ ಮತದಾನ ಮಹತ್ವ ತಿಳಿಸುವ ಉದ್ದೇಶದಿಂದ ರೇವಾ ವಿಶ್ವವಿದ್ಯಾಲಯದಲ್ಲಿ ಮತದಾನ ಜಾಗೃತಿ ಕಾರ್ಯಕ್ರಮವನ್ನು ನವೆಂಬರ್ 12ರಂದು ಹಮ್ಮಿಕೊಳ್ಳಲಾಗಿದೆ.

    ಈ ಮತದಾನ ಜಾಗೃತಿ ಕಾರ್ಯಕ್ರಮವನ್ನು ರೇವಾ ಚುನಾವಣಾ ಸಾಕ್ಷರತಾ ಸಂಘವು ಆಯೋಜಿಸಿದೆ. ವಿಶ್ವವಿದ್ಯಾಲಯ ಕ್ಯಾಂಪಸ್‍ನ ಕುವೆಂಪು ಸಭಾಭವನದಲ್ಲಿ ನವೆಂಬರ್ 12ರಂದು ಮಧ್ಯಾಹ್ನ 12 ಗಂಟೆಗೆ ಪ್ರಾರಂಭವಾಗಲಿದೆ.

    ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್, ಗೌರವ ಅತಿಥಿಗಳಾಗಿ ರಾಜ್ಯ ಚುನಾವಣಾ ಆಯೋಗದ ಅಧಿಕಾರಿ ಶ್ರೀನಿವಾಸಾಚಾರ್ಯ ಆಗಮಿಸಲಿದ್ದಾರೆ. ವಿಶ್ವವಿದ್ಯಾಲಯದ ಕುಲಾಧಿಪತಿ ಡಾ. ಪಿ ಶ್ಯಾಮರಾಜು ಅಧ್ಯಕ್ಷತೆ ವಹಿಸಿಕೊಳ್ಳಲಿದ್ದಾರೆ.

    ಉತ್ತಮ ನಾಯಕರ ಆಯ್ಕೆಯಲ್ಲಿ ಪ್ರತಿಯೊಂದು ಮತಕ್ಕೂ ಪ್ರಾಮುಖ್ಯತೆ ಇರುತ್ತದೆ. ಹೀಗಾಗಿ ವಿದ್ಯಾರ್ಥಿಗಳಲ್ಲಿ ಚುನಾವಣಾ ಪ್ರಕ್ರಿಯೆ, ಮತದಾನ ಎಷ್ಟು ಅಗತ್ಯ ಎನ್ನುವ ಕುರಿತು ತಿಳಿಸಲಾಗುತ್ತದೆ. ಆಸಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಬಹುದು ಎಂದು ರೇವಾ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಡಾ.ಎಂ.ಧನಂಜಯ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/

  • ಆಹ್ವಾನ ಪತ್ರಿಕೆಯಲ್ಲಿ ಹೆಸರಿಲ್ಲದ್ದಕ್ಕೆ ಕಾರ್ಯಕ್ರಮದಿಂದಲೇ ಹೊರ ನಡೆದ ಸಾ.ರಾ.ಮಹೇಶ್

    ಆಹ್ವಾನ ಪತ್ರಿಕೆಯಲ್ಲಿ ಹೆಸರಿಲ್ಲದ್ದಕ್ಕೆ ಕಾರ್ಯಕ್ರಮದಿಂದಲೇ ಹೊರ ನಡೆದ ಸಾ.ರಾ.ಮಹೇಶ್

    ಮೈಸೂರು: ಆಹ್ವಾನ ಪತ್ರಿಕೆಯಲ್ಲಿ ತಮ್ಮ ಹೆಸರನ್ನು ನಮೂದಿಸದೇ ಇರುವುದಕ್ಕೆ ಕಾರ್ಯಕ್ರಮದ ಮಧ್ಯೆಯೇ ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್ ಹೊರನಡೆದಿದ್ದಾರೆ.

    ನಗರದ ಮಾನಸ ಗಂಗೋತ್ರಿ ಕ್ಯಾಂಪಸ್‍ನಲ್ಲಿ ಗಾಂಧಿ ಕುರಿತ ಸಿಮೆಂಟ್ ಕಲಾಕೃತಿಗಳ ಲೋಕಾರ್ಪಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಕಾರ್ಯಕ್ರಮಕ್ಕೆ ಬಂದ ಸಚಿವರು ಆಹ್ವಾನ ಪತ್ರಿಕೆಯಲ್ಲಿ ತಮ್ಮ ಹೆಸರನ್ನು ನಮೂದಿಸದೇ ಇರುವುದನ್ನು ಗಮನಿಸಿ ಅಧಿಕಾರಿಗಳ ವಿರುದ್ಧ ಕೆಂಡಾಮಂಡಲರಾದರು.

    ಇದಾದ ನಂತರ ಕ್ಯಾಂಪಸ್ ಆವರಣದಲ್ಲಿದ್ದ ಕಲಾಕೃತಿಗಳನ್ನು ಉದ್ಘಾಟನೆ ಮಾಡಿ, ಅಧಿಕಾರಿಗಳನ್ನು ಬೈಯುತ್ತಾ ವೇದಿಕೆ ಕಾರ್ಯಕ್ರಮಕ್ಕೆ ಹಾಜರಾಗದೇ ತೆರಳಿದರು. ಈ ವೇಳೆ ಸ್ಥಳದಲ್ಲೇ ಇದ್ದ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡರು ಕಾರ್ಯಕ್ರಮಕ್ಕೆ ಬಾರಯ್ಯ ಎಂದು ಕರೆದರು. ಇಲ್ಲ ಇಲ್ಲ ನನಗೆ ಬೇರೆ ಕಾರ್ಯಕ್ರಮವಿದೆ ಎನ್ನುತ್ತಾ ಸಾ.ರಾ.ಮಹೇಶ್ ಹೊರಟು ಹೋದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸನ್ನಿ ಡ್ಯಾನ್ಸ್ ಗೆ ಪಡ್ಡೆ ಹೈಕ್ಳು ಫುಲ್ ಫಿದಾ – ಇತ್ತ ಸನ್ನಿಗೆ ಪುಂಡನಿಂದ ಕಿರಿಕ್

    ಸನ್ನಿ ಡ್ಯಾನ್ಸ್ ಗೆ ಪಡ್ಡೆ ಹೈಕ್ಳು ಫುಲ್ ಫಿದಾ – ಇತ್ತ ಸನ್ನಿಗೆ ಪುಂಡನಿಂದ ಕಿರಿಕ್

    ಬೆಂಗಳೂರು: ಭಾರೀ ವಿರೋಧದ ನಡುವೆಯೂ ಬಾಲಿವುಡ್ ನ ಹಾಟ್ ಬೆಡಗಿ ಸನ್ನಿ ಲಿಯೋನ್ ಬೆಂಗಳೂರಿಗೆ ಬಂದು ಸಖತ್ ಸ್ಟೆಪ್ ಹಾಕಿದ್ದು, ಸನ್ನಿ ಡ್ಯಾನ್ಸ್ ಗೆ ಪಡ್ಡೆ ಹುಡುಗರು ಫುಲ್ ಫಿದಾ ಆಗಿದ್ದಾರೆ. ಆದರೆ ಕಾರ್ಯಕ್ರಮದಲ್ಲಿ ಸನ್ನಿಗೆ ಪುಂಡನೊಬ್ಬ ಕಿರಿಕ್ ಮಾಡಿದ್ದಾನೆ.

    ಸಾಕಷ್ಟು ಕುತೂಹಲ ಹುಟ್ಟಿಸಿದ್ದ ಬಾಲಿವುಡ್ ಹಾಟ್ ಬೆಡಗಿ ಸನ್ನಿ ನೈಟ್ ಕಾರ್ಯಕ್ರಮ ಬೆಂಗಳೂರಿನಲ್ಲಿ ಮೊದಲ ಬಾರಿಗೆ ನಡೆದಿದೆ. ಸಾಕಷ್ಟು ವಿರೋಧದ ನಡುವೆಯೂ ಮಾನ್ಯತಾ ಟೆಕ್ ಪಾರ್ಕ್‍ನ ವೈಟ್ ಆರ್ಕಿಡ್‍ನಲ್ಲಿ ಟೈಮ್ ಕ್ರಿಯೇಷನ್ಸ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಾಟ್ ಬೆಡಗಿ ಸನ್ನಿ ಲಿಯೋನ್ ಭಾಗವಹಿಸಿದ್ದರು.

    ಅಷ್ಟೇ ಅಲ್ಲದೇ ಕನ್ನಡದಲ್ಲಿ ರಾಜ್ಯೋತ್ಸವದ ಶುಭಾಶಯ ಹೇಳಿದ ಸನ್ನಿ ಲಿಯೋನ್ ಕನ್ನಡದ ಹಾಡುಗಳಿಗೂ ಸಖತ್ ಸ್ಟೆಪ್ ಹಾಕಿದ್ದಾರೆ. ಸನ್ನಿ ಸ್ಟೆಪ್‍ಗೆ ನೆರೆದಿದ್ದ ಪ್ರೇಕ್ಷಕರು ಹುಚ್ಚೆದ್ದು ಕುಣಿದರೆ, ಪಡ್ಡೆ ಹೈಕ್ಳು ಫುಲ್ ಫಿದಾ ಆಗಿದ್ದಾರೆ. ಇನ್ನು ಗಾಯಕ ರಘು ದೀಕ್ಷಿತ್ ಕೂಡ ಸಾಂಗ್ ಹಾಡುವ ಮೂಲಕ ಸಖತ್ ಮನರಂಜನೆ ನೀಡಿದ್ದಾರೆ.

    ಇತ್ತ ಸನ್ನಿ ಲಿಯೋನ್ ‘ಶೇಷಮ್ಮ’ ಹಾಡಿಗೆ ಹೆಜ್ಜೆ ಹಾಕುವಾಗ ಸನ್ನಿ ಮೇಲೆ ಬಾಟಲ್ ಎಸೆದು ಪುಂಡನೊಬ್ಬ ರಾದ್ಧಾಂತ ಮಾಡಿದ್ದಾನೆ. ತಕ್ಷಣ ಬಾಟೆಲ್ ಎಸೆದರೆ ಸಿಸಿಟಿವಿ ನೋಡಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ವೇದಿಕೆಯಲ್ಲೇ ಪುಂಡನಿಗೆ ನಿರೂಪಕ ರಿಯಾಜ್ ವಾರ್ನಿಂಗ್ ಕೊಟ್ಟಿದ್ದಾರೆ.

    ಸನ್ನಿ ನೈಟ್ಸ್ ನಲ್ಲಿ ಜನಸಾಗರವೇ ಹರಿದು ಬರುವ ನಿರೀಕ್ಷೆಯಲಿದ್ದ ಟೈಮ್ ಕ್ರಿಯೇಷನ್‍ಗೆ ಸನ್ನಿ ಸಖತ್ ಕೈ ಕೊಟ್ಟಿದ್ದಾರೆ. ಸುಮಾರು ಆರು ಸಾವಿರ ಜನ ಸೇರುವ ನಿರೀಕ್ಷೆಯಲ್ಲಿದ್ದ ಆಯೋಜಕರಿಗೆ ನಿರಾಸೆಯಾಗಿದೆ. ಸನ್ನಿ ನೋಡಲು ಪ್ರೇಕ್ಷಕರು ಮಾತ್ರ ಟಿಕೆಟ್ ಕೌಂಟರ್ ಕಡೆಗೆ ಬರಲೇ ಇಲ್ಲ. ಆದರೆ ಅತ್ಯಂತ ವಿರಳ ಸಂಖ್ಯೆಯಲ್ಲಿ ಬಂದ ಜನ ಸನ್ನಿ ಲಿಯೋನ್‍ರನ್ನು ಕಣ್ತುಂಬಿಕೊಂಡಿದ್ದಾರೆ.

    ಇನ್ನೂ ಟಿಕೆಟ್ ಕೌಂಟರ್ ಬಳಿ ಕೆಲ ಕಿಡಿಗೇಡಿಗಳು ಬ್ಲಾಕ್ ಟಿಕೆಟ್ ಮಾರುತ್ತಿದ್ದು, ಇದನ್ನು ನೋಡಿದ ಕೆಲ ಯುವಕರು ಹಾಗೂ ಕಿಡಿಗೇಡಿಗಳ ನಡುವೆ ಮಾತಿನ ಚಕಮಕಿ ನಡೆದಿದೆ. ಸನ್ನಿಗೆ ಸಾಕಷ್ಟು ವಿರೋಧ ವ್ಯಕ್ತಪಡಿಸಿದ್ದ ಕೆಲ ಸಂಘಟನೆಗಳು ಮಾನ್ಯತಾ ಟೆಕ್ ಪಾರ್ಕ್ ಹತ್ತಿರವೂ ಸುಳಿಯಲಿಲ್ಲ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=-nwUjVYLoXk

  • ಸನ್ನಿ ಲಿಯೋನ್‍ಗಾಗಿ 330ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ನೇಮಕ

    ಸನ್ನಿ ಲಿಯೋನ್‍ಗಾಗಿ 330ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ನೇಮಕ

    ಬೆಂಗಳೂರು: ಶನಿವಾರ ರಾತ್ರಿ ನಡೆಯಲಿರುವ ಬಾಲಿವುಡ್ ಮೋಹಕ ಬೆಡಗಿ ಸನ್ನಿ ಲಿಯೋನ್ ಅವರ ನೈಟ್ಸ್ ಕಾರ್ಯಕ್ರಮಕ್ಕೆ ಪೊಲೀಸರು ಬಿಗಿ ಭದ್ರತೆಯನ್ನು ಆಯೋಜನೆ ಮಾಡಿದ್ದಾರೆ.

    ಈಶಾನ್ಯ ವಿಭಾಗ ಡಿಸಿಪಿ ಕಲಾ ಕೃಷ್ಣ ಸ್ವಾಮಿ ನೇತೃತ್ವದಲ್ಲಿ ಕಾರ್ಯಕ್ರಮಕ್ಕೆ ಭದ್ರತೆಯನ್ನು ನಿಯೋಜನೆ ಮಾಡಲಾಗಿದ್ದು, ಈ ಕಾರ್ಯಕ್ರಮಕ್ಕೆ 330 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನೇಮಕ ನೇಮಕ ಮಾಡಲಾಗಿದೆ. 2 ಎಸಿಪಿ, 6 ಇನ್ಸ್ ಪೆಕ್ಟರ್ ಮತ್ತು 15 ಸಬ್ ಇನ್ಸ್ ಪೆಕ್ಟರ್ ಸೇರಿದಂತೆ ಒಟ್ಟು 330 ಪೊಲೀಸರು ಭದ್ರತೆಗೆ ನೇಮಕಗೊಂಡಿದ್ದಾರೆ.

    ಅಷ್ಟೇ ಅಲ್ಲದೇ ಮುಂಜಾಗ್ರತಾ ಕ್ರಮವಾಗಿ ಕೆಎಸ್‍ಆರ್ ಪಿ ತುಕಡಿಗಳನ್ನು ನಿಯೋಜನೆ ಮಾಡಲಾಗಿದ್ದು, ಪೊಲೀಸರು ಪ್ರತಿಯೊಬ್ಬರನ್ನು ತಪಾಸಣೆ ನಡೆಸಿ ಒಳಗೆ ಬಿಡುತ್ತಿದ್ದಾರೆ. ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕ್ ನಲ್ಲಿ ಸನ್ನಿ ಲಿಯೋನ್ ಕಾರ್ಯಕ್ರಮ ಆಯೋಜನೆಗೊಂಡಿದೆ. ಆದ್ದರಿಂದ ಇಂದು ಟೆಕ್ ಪಾರ್ಕ್ ಒಳಗೆ ಸಾರ್ವಜನಿಕ ವಾಹನಗಳ ಪ್ರವೇಶವನ್ನು ನಿರ್ಬಂಧಿಸಲಾಗಿದೆ.

    ಇಂದು ಸಂಜೆ 6 ಗಂಟೆಯಿಂದ 10 ಗಂಟೆಯವರೆಗೆ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮ ಟೈಂ ಕ್ರಿಯೇಷನ್ಸ್ ನಿಂದ ಆಯೋಜನೆಗೊಂಡಿದ್ದು, ಫೂಷನ್ ನೈಟ್ ಅನ್ನೋ ಹೆಸರಿನಲ್ಲಿ ನಡೆಯಲಿದೆ. ಸನ್ನಿ ಲಿಯೋನ್ ಆಗಮನವನ್ನು ಕನ್ನಡ ಪರ ಸಂಘಟನೆಗಳು ವಿರೋಧಿಸುತ್ತಿರುವ ಹಿನ್ನೆಲೆಯಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರಿಂದ ಬಿಗಿ ಭದ್ರತೆ ಮಾಡಿದ್ದಾರೆ.

    ಈ ಹಿಂದೆ ಸನ್ನಿ ಕಾರ್ಯಕ್ರಮವನ್ನು ವಿರೋಧ ವ್ಯಕ್ತಪಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಯುವಸೇನೆ ಕಾರ್ಯಕರ್ತರು ಟೌನ್‍ಹಾಲ್‍ನಲ್ಲಿ ಕೈ ಕುಯ್ದುಕೊಂಡಿದ್ದರು. ಆದರೆ ಅಂದು ಕೈ ಕುಯ್ದುಕೊಂಡಿದ್ದವರೇ ನೂಕು ನುಗ್ಗಲಲ್ಲಿ ನಿಂತು ಬರೋಬ್ಬರಿ 235 ಕಾರ್ಯಕ್ರಮದ ಟಿಕೆಟ್ ಖರೀದಿಸಿದ್ದರು. ಅಷ್ಟೇ ಅಲ್ಲದೇ ಶೇಷಮ್ಮ ಕನ್ನಡ ಹಾಡಿಗೆ ಕುಣಿದರೆ ನೋಡುವುದಕ್ಕೆ ನಮ್ಮದೇನು ಅಭ್ಯಂತರವಿಲ್ಲ. ಆಮೇಲೆ ರಘುದೀಕ್ಷಿತ್ ಕನ್ನಡ ಹಾಡು ಹಾಡುತ್ತಾರೆ. ಅದನ್ನೆಲ್ಲ ನೋಡೋಕೆ ಹೋಗುತ್ತೀವಿ ಅಂತ ಹೇಳಿಕೆಯನ್ನು ಕೊಟ್ಟಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕೊನೆಗೂ ಸಿಲಿಕಾನ್ ಸಿಟಿಗೆ ಹಾಟ್ ಬೆಡಗಿ ಸನ್ನಿ ಲಿಯೋನ್ ಆಗಮನ

    ಕೊನೆಗೂ ಸಿಲಿಕಾನ್ ಸಿಟಿಗೆ ಹಾಟ್ ಬೆಡಗಿ ಸನ್ನಿ ಲಿಯೋನ್ ಆಗಮನ

    ಬೆಂಗಳೂರು: ಕೊನೆಗೂ ಸಿಲಿಕಾನ್ ಸಿಟಿಗೆ ಹಾಟ್ ಬೆಡಗಿ ಸನ್ನಿ ಲಿಯೋನ್ ಆಗಮಿಸುತ್ತಿದ್ದಾರೆ. ದಿ ಟೈಮ್ ಕ್ರಿಯೇಶನ್ ವತಿಯಿಂದ ಹಮ್ಮಿಕೊಂಡಿರುವ ಫ್ಯೂಷನ್ ಲೈಟ್ಸ್ ಕಾರ್ಯಕ್ರಮದಲ್ಲಿ ಸನ್ನಿ ಭಾಗಿಯಾಗಲಿದ್ದಾರೆ.

    ನವೆಂಬರ್ 3ರಂದು ಮಾನ್ಯತಾ ಟೆಕ್ ಪಾರ್ಕ್ ಆವರಣದಲ್ಲಿರುವ `ವೈಟ್ ಆರ್ಕಿಡ್’ ಸಭಾಂಗಣದಲ್ಲಿ ಸಂಗೀತ ಸಂಜೆ ಕಾರ್ಯಕ್ರಮ ನಡೆಯಲಿದೆ. ಕನ್ನಡದ ಖ್ಯಾತ ಗಾಯಕ ರಘು ದೀಕ್ಷಿತ್ ಮತ್ತು ಖ್ಯಾತ ಬಾಲಿವುಡ್ ನಟಿ ಸನ್ನಿ ಲಿಯೋನ್ ಭಾಗಿಯಾಗಲಿದ್ದಾರೆ. ಸನ್ನಿ ಮತ್ತು ರಘು ದೀಕ್ಷಿತ್ ಟೀಂ ಕನ್ನಡ ಮತ್ತು ಬಾಲಿ ಕಾನ್ಸರ್ಟ್ ನಲ್ಲಿ ಮನೋರಂಜನಾ ಪ್ರದರ್ಶನ ನೀಡಲಿದ್ದಾರೆ.

    ಈ ಕಾರ್ಯಕ್ರಮ ಆಯೋಜಕ ಹರೀಶ್ ಮಾತನಾಡಿ, ಕಾರ್ಯಕ್ರಮ ಆಯೋಜನೆ ಮಾಡುವ ಮೊದಲೇ ಕನ್ನಡ ಪರ ಸಂಘಟನೆಗಳ ಅಧ್ಯಕ್ಷರಾದ ನಾರಾಯಣ ಗೌಡ, ಪ್ರವೀಣ್ ಶೆಟ್ಟಿ ಬಳಿ ಮಾತನಾಡಿದ್ದೇವೆ. ಈ ಕಾರ್ಯಕ್ರಮದ ಬಗ್ಗೆ ತಿಳಿಸಿದ್ದೀವಿ. ಅದಕ್ಕೆ ಅವರು ಯಾವುದೇ ವಿರೋಧ ವ್ಯಕ್ತಪಡಿಸಿಲ್ಲ. ಆದರೆ ಉಳಿದ ಕೆಲ ಯುವ ಸಂಘಟನೆಗಳು ವಿರೋಧಿಸುತ್ತಿವೆ. ಈ ರೀತಿ ತೊಂದರೆಯಾಗದಂತೆ ನೋಡಿಕೊಳ್ಳುವುದಾಗಿ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ ಎಂದು ಹೇಳಿದರು.

    ಈ ಕಾರ್ಯಕ್ರಮದ ನಿರೂಪಣೆಯನ್ನು ಬಿಗ್ ಬಾಸ್ ಖ್ಯಾತಿಯ ನಯಾಝ್ ಮಾಡಲಿದ್ದಾರೆ. ಸನ್ನಿ ಕಾರ್ಯಕ್ರಮಕ್ಕೆ ಕೆಲ ಸಂಘಟನೆಗಳು ಭಾರಿ ವಿರೋಧ ವ್ಯಕ್ತಪಡಿಸಿದ್ದು, ನಾಳೆ ಯಾವುದು ಕಾರಣಕ್ಕೂ ಕಾರ್ಯಕ್ರಮ ನಡೆಯಲು ಬಿಡುವುದಿಲ್ಲ. ಸನ್ನಿಗೆ ಕಪ್ಪು ಮಸಿಯನ್ನು ಬಳಿಯುತ್ತೇವೆ ಎಂದು ಎಚ್ಚರಿಕೆ ನೀಡಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ವಿಡಿಯೋ: ದೀಪಿಕಾಗೆ ನೇರವಾಗಿ ಹುಚ್ಚಿ, ಕ್ರ್ಯಾಕ್ ಎಂದ ಅಲಿಯಾ

    ವಿಡಿಯೋ: ದೀಪಿಕಾಗೆ ನೇರವಾಗಿ ಹುಚ್ಚಿ, ಕ್ರ್ಯಾಕ್ ಎಂದ ಅಲಿಯಾ

    ಮುಂಬೈ: ಭಾರತದ ಅತೀ ದೊಡ್ಡ ಶೋ ಕರಣ್ ಜೋಹರ್ ನಿರೂಪಕರಾಗಿರುವ ‘ಕಾಫಿ ವಿತ್ ಕರಣ್ ಸೀಸನ್- 6ರ’ ಕಾರ್ಯಕ್ರಮದಲ್ಲಿ ಬಾಲಿವುಡ್ ಬೆಡಗಿ ಅಲಿಯಾ ಭಟ್ ಡಿಂಪಲ್ ಬೆಡಗಿ ದೀಪಿಕಾ ಪಡುಕೋಣೆಗೆ ನೇರವಾಗಿ ಹುಚ್ಚಿ ಎಂದು ಕರೆದಿದ್ದಾರೆ.

    ದೀಪಿಕಾ ಪಡುಕೋಣೆ ಹಾಗೂ ಅಲಿಯಾ ಭಟ್ ಬಹಳ ಒಳ್ಳೆಯ ಸ್ನೇಹಿತರು. ಆದರೆ ಇಬ್ಬರು ಹೆಚ್ಚು ಸಮಯ ಜೊತೆಯಲ್ಲಿ ಕಳೆಯುವುದಿಲ್ಲ. ಅಲ್ಲದೇ ಸಾಮಾಜಿಕ ಜಾಲತಾಣದಲ್ಲೂ ಇಬ್ಬರು ಇಂಟರ್ಯಾಕ್ಟ್ ಮಾಡುವುದಿಲ್ಲ. ಸದ್ಯ ಅಲಿಯಾ ಹಾಗೂ ದೀಪಿಕಾ ಇಬ್ಬರು ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಸ್ನೇಹದ ಬಗ್ಗೆ ಮಾತನಾಡಿದ್ದಾರೆ.

    ದೀಪಿಕಾ ಹಾಗೂ ಅಲಿಯಾ ಎರಡು ವರ್ಷಗಳ ಹಿಂದೆ ಐಫಾ ಅವಾರ್ಡ್ ಕಾರ್ಯಕ್ರಮದಲ್ಲಿ ಭಾಗವಹಿಸಲು ಹೋಗಿದ್ದರು. ಈ ವೇಳೆ ದೀಪಿಕಾ ಹಾಗೂ ಅಲಿಯಾ ಕೋಲ್ಡ್ ಪ್ಲೇ ಕಾನ್ಸರ್ಟ್ ನೋಡಲು ಸಡನ್ ಪ್ಲಾನ್ ಮಾಡಿಕೊಂಡು ಹೋಗಿದ್ದರು.

    ಕಾನ್ಸರ್ಟ್ ವೇಳೆ ದೀಪಿಕಾ ಹಾಗೂ ಅಲಿಯಾಗೆ ಶೌಚಾಲಯಕ್ಕೆ ಹೋಗಬೇಕಿತ್ತು, ಆದರೆ ಮಹಿಳಾ ಶೌಚಾಲಯದಲ್ಲಿ ಉದ್ದದ ಲೈನ್ ಇತ್ತು. ಅಲ್ಲದೇ ಪುರುಷರ ಶೌಚಾಲಯದ ಹೊರಗೆ 4ರಿಂದ 5 ಜನರಿದ್ದರು. ಈ ವೇಳೆ ನಾವು ಎಲ್ಲರಿಗೂ ದೂರ ತಳ್ಳಿ ಪುರುಷರ ಶೌಚಾಲಯಕ್ಕೆ ಹೋಗಿದ್ದೇವು ಎಂದು ಇಬ್ಬರು ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದಾರೆ.

    ಪುರುಷರ ಶೌಚಾಲಯಕ್ಕೆ ಹೋಗಿದ್ದು ನನಗೆ ಹೊಸ ಅನುಭವವಾಯಿತು. ಆದರೆ ದೀಪಿಕಾಳನ್ನು ನೋಡಿ ನಾನು ಆಕೆ ಶಾಂತ ಮಹಿಳೆ ಎಂದುಕೊಂಡಿದ್ದೆ. ಆದರೆ ದೀಪಿಕಾ ಒಬ್ಬಳು ಹುಚ್ಚಿ, ಕ್ರ್ಯಾಕ್ ಎಂದು ಅಲಿಯಾ ಕಾರ್ಯಕ್ರಮದ ನಿರೂಪಕ ಕರಣ್ ಜೋಹರ್‍ಗೆ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

     

    View this post on Instagram

     

    Hear all about @deepikapadukone’s wild side from @aliaabhatt! #KoffeeWithKaran #KoffeeWithAlia #KoffeeWithDeepika

    A post shared by Star World (@starworldindia) on

  • ಆಯುಧ ಪೂಜೆ ಮೊಟಕುಗೊಳಿಸಿ ಬೆಂಗ್ಳೂರಿಗೆ ಪ್ರಯಾಣಿಸಿದ್ರು ಪ್ರಮೋದಾದೇವಿ!

    ಆಯುಧ ಪೂಜೆ ಮೊಟಕುಗೊಳಿಸಿ ಬೆಂಗ್ಳೂರಿಗೆ ಪ್ರಯಾಣಿಸಿದ್ರು ಪ್ರಮೋದಾದೇವಿ!

    ಮೈಸೂರು: ಇಂದು ನಾಡಿನಾದ್ಯಂತ ಆಯುಧ ಪೂಜೆ ಹಬ್ಬವನ್ನು ಆಚರಿಸಲಾಗುತ್ತಿದೆ. ಆದರೆ ಇಂದು ಅರಮನೆಯಲ್ಲಿ ನಡೆಯುತ್ತಿದ್ದ ಪೂಜಾ ಕಾರ್ಯಕ್ರಮಗಳನ್ನು ರಾಜವಂಶಸ್ಥೆ ಪ್ರಮೋದಾದೇವಿ ಅವರು ಮೊಟಕುಗೊಳಿಸಿ ದಿಢೀರ್ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ.

    ರಾಜವಂಶಸ್ಥೆ ವಿಶಾಲಾಕ್ಷಿ ದೇವಿಯವರಿಗೆ ಅನಾರೋಗ್ಯ ಹಿನ್ನೆಲೆಯಲ್ಲಿ ಮೈಸೂರು ಅರಮನೆಯಿಂದ ದಿಢೀರ್ ಆಗಿ ಪ್ರಮೋದಾದೇವಿ ಅವರು ಬೆಂಗಳೂರಿಗೆ ಪ್ರಯಾಣ ಕೈಗೊಂಡಿದ್ದಾರೆ. ವಿಶಾಲಕ್ಷಿದೇವಿ ಅವರು ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಸಹೋದರಿಯಾಗಿದ್ದು, ಸಂಬಂಧದಲ್ಲಿ ಪ್ರಮೋದಾದೇವಿ ಒಡೆಯರ್ ಅವರಿಗೆ ನಾದಿನಿಯಾಗಬೇಕು. ಆದ್ದರಿಂದ ನಾದಿನಿ ಆರೋಗ್ಯ ವಿಚಾರಿಸಲು ಬೆಂಗಳೂರಿಗೆ ಹೊರಟಿದ್ದಾರೆ.

    ವಿಶಾಲಾಕ್ಷಿ ದೇವಿಯವರಿಗೆ ತೀವ್ರ ಅನಾರೋಗ್ಯದ ವಿಚಾರ ತಿಳಿದು ಆಯುಧ ಪೂಜಾ ಕಾರ್ಯಕ್ರಮಗಳನ್ನು ಮೊಟಕುಗೊಳಿಸಿ ಪ್ರಮೋದಾದೇವಿ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ. ಈ ಬಾರಿಯ ದಸರಾ ಆಚರಣೆಗಳಲ್ಲೂ ರಾಜಮನೆತನ ಸರಳತೆಯನ್ನು ಕಾಯ್ದುಕೊಂಡಿದೆ. ವಿಶಾಲಾಕ್ಷಿದೇವಿಯವರ ಅನಾರೋಗ್ಯದ ಹಿನ್ನೆಲೆಯಲ್ಲಿ ಸರಳವಾಗಿ ದಸರಾ ಆಚರಣೆ ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಆಯುಧಪೂಜೆ, ಜಂಬೂಸವಾರಿ: ಮೈಸೂರು ಅರಮನೆಯಲ್ಲಿ ನಡೆಯಲಿರುವ ಕಾರ್ಯಕ್ರಮಗಳ ಪೂರ್ಣ ಪಟ್ಟಿ ಇಲ್ಲಿದೆ

    ಆಯುಧಪೂಜೆ, ಜಂಬೂಸವಾರಿ: ಮೈಸೂರು ಅರಮನೆಯಲ್ಲಿ ನಡೆಯಲಿರುವ ಕಾರ್ಯಕ್ರಮಗಳ ಪೂರ್ಣ ಪಟ್ಟಿ ಇಲ್ಲಿದೆ

    ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿಗೆ ಎರಡು ದಿನ ಬಾಕಿ ಇದ್ದು, ಇದಕ್ಕಾಗಿ ಮೈಸೂರಿನಲ್ಲಿ ಸಕಲ ರೀತಿಯ ಸಿದ್ಧತೆ ನಡೆಯುತ್ತಿದೆ.

    ಗುರುವಾರ ಮೈಸೂರು ಅರಮನೆಯಲ್ಲಿ ಸಾಂಪ್ರದಾಯಿಕ ಆಯಧ ಪೂಜೆ ನಡೆಯಲಿದೆ. ಇದಕ್ಕಾಗಿ ಇಂದು ಅರಮನೆಯಲ್ಲಿದ್ದ ಬೆಳ್ಳಿರಥವನ್ನ ಹೊರತೆಗೆದು ಸ್ವಚ್ಛಗೊಳಿಸಲಾಯಿತು.

    ಗುರುವಾರದ ಕಾರ್ಯಕ್ರಮಗಳು
    – ಬೆಳಗ್ಗೆ 5.30ಕ್ಕೆ ಚಂಡಿ ಹೋಮದ ಕೊಠಡಿಯಲ್ಲಿ ಚಂಡಿಕಾ ಹೋಮ ಆರಂಭವಾಗಲಿದೆ.
    – ಬೆಳಗ್ಗೆ 7ಕ್ಕೆ ಆನೆ ಬಾಗಿಲಿಗೆ ಪಟ್ಟದ ಆನೆ, ಪಟ್ಟದ ಹಸು, ಪಟ್ಟದ ಕುದುರೆ ಆಗಮನ.
    – ಬೆಳಗ್ಗೆ 7.45ಕ್ಕೆ ಖಾಸ್ ಆಯುಧಗಳು ಅರಮನೆಯಿಂದ ಜಯ ಮಾರ್ತಾಂಡ ದ್ವಾರದ ಮಾರ್ಗವಾಗಿ ಕೋಡಿ ಸೋಮೇಶ್ವರ ದೇವಾಲಯಕ್ಕೆ ಕಳುಹಿಸಿ ಪೂಜೆ. ಆಯುಧಗಳೊಂದಿಗೆ ಹೆಜ್ಜೆ ಹಾಕಲಿರುವ ಪಟ್ಟದ ಆನೆ, ಕುದುರೆ, ಹಸು.
    – ಬೆಳಗ್ಗೆ 8.15ರಿಂದ 8.30ಕ್ಕೆ ಕೋಡಿ ಸೋಮೇಶ್ವರ ದೇವಾಲಯದಿಂದ ಅರಮನೆಯ ಕಲ್ಯಾಣ ಮಂಟಪಕ್ಕೆ ಆಯುಧಗಳ ಆಗಮನ.
    – ಬೆಳಗ್ಗೆ 9ಕ್ಕೆ ಚಂಡಿಕಾ ಹೋಮದ ಕೊಠಡಿಯಲ್ಲಿ ಚಂಡಿಕಾ ಹೋಮ ಪೂರ್ಣಾಹುತಿ.
    – ಬೆಳಗ್ಗೆ 10ರಿಂದ 10.25 ಕಲ್ಯಾಣ ಮಂಟಪದಲ್ಲಿ ಆಯುಧ ಪೂಜೆ. ಕತ್ತಿ, ಖಡ್ಗ, ಗುರಾಣಿ, ಯುದ್ಧೋಪಕರಣ, ವಾಹನ ಸೇರಿದಂತೆ ಅರಮನೆಯ ಆಯುಧಗಳಿಗೆ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಂದ ಪೂಜೆ.
    – ಸಾಯಂಕಾರ ಅಂಬಾವಿಲಾಸ ದರ್ಬಾರ್ ಹಾಲ್‍ನಲ್ಲಿ ಸಿಂಹಾಸನ ವಿಸರ್ಜನೆ.
    – ವಾಣಿ ವಿಲಾಸ ದೇವರ ಮನೆಯಲ್ಲಿ ಕಂಕಣ ವಿಸರ್ಜನೆ.

    ಶುಕ್ರವಾರದ ಕಾರ್ಯಕ್ರಮಗಳು
    – ಬೆಳಗ್ಗೆ 8.45 ಕ್ಕೆ ಅರಮನೆಗೆ ಪಟ್ಟದ ಆನೆ, ಕುದುರೆ, ಹಸು, ಆಗಮನ ಮತ್ತು ಪೂಜೆ
    – 9.10 ರಿಂದ 10.15 ರ ಒಳಗೆ ವಜ್ರಮುಷ್ಠಿ ಕಾಳಗ
    – ಕಾಳಗ ಮುಗಿದ ಮೇಲೆ ಬೆಳ್ಳಿ ರಥದಲ್ಲಿ ಯದುವೀರ್ ವಿಜಯಯಾತ್ರೆ
    – ಅರಮನೆಯ ಒಳಗಿನ ಭುವನೇಶ್ವರಿ ದೇವಾಲಯದಲ್ಲಿ ಯದುವೀರ್ ಪೂಜೆ
    – ಪೂಜೆ ನಂತರ ಮೆರವಣಿಗೆ ಮೂಲಕ ಯದುವೀರ್ ಅರಮನೆಗೆ ವಾಪಸ್
    – ಅಲ್ಲಿಗೆ ಖಾಸಗಿ ದರ್ಬಾರ್ ಮುಕ್ತಾಯ.
    – ಮಧ್ಯಾಹ್ನ 2.30 ರಿಂದ 3.16 ರ ಕುಂಭ ಲಗ್ನದಲ್ಲಿ ನಂದಿ ಧ್ವಜಕ್ಕೆ ಪೂಜೆ.
    – 3.40 ರಿಂದ 4.10 ರ ಲಗ್ನದಲ್ಲಿ ವಿಜಯದಶಮಿಯ ಮೆರವಣಿಗೆಗೆ ಪುಷ್ಪಾರ್ಚನೆ.
    – ಮೆರವಣಿಗೆ ಮುಗಿದ ಮೇಲೆ 7ಕ್ಕೆ ಬನ್ನಿಮಂಟಪದಲ್ಲಿ ಪಂಜಿನ ಕವಾಯತು ಆರಂಭ.

    ಇಂದು ಶಸ್ತ್ರ ಸಹಿತ ಪೊಲೀಸ್ ಸಿಬ್ಬಂದಿಗಳು, ಗಜಪಡೆ ಹಾಗೂ ಅಶ್ವಪಡೆಗಳು ಕೊನೆ ಹಂತದ ತಾಲೀಮಿನಿಲ್ಲಿ ಭಾಗಿಯಾಗಿದ್ದವು. ಆನೆಗಳಿಗೆ ಪುಷ್ಪರ್ಚನೆ ಮಾಡಿ ಗೌರವ ವಂದನೆ ಸ್ವೀಕರಿಸಿದ ನಗರ ಪೊಲೀಸ್ ಆಯುಕ್ತರು, ಶುಕ್ರವಾರ ನಡೆಯಲಿರುವ ಜಂಬೂಸವಾರಿಗೆ ಎಲ್ಲ ಸಿದ್ಧತೆ ನಡೆದಿದೆ. ಯಶಸ್ವಿ ಜಂಬೂಸವಾರಿಗೆ ಪೊಲೀಸ್ ಇಲಾಖೆ ಸಜ್ಜಾಗಿದೆ. ಜಂಬೂಸವಾರಿ ಸಮಯದಲ್ಲಿ ಪಾರಂಪರಿಕ ಹಳೆ ಕಟ್ಟಡಗಳ ಮೇಲೆ ಹತ್ತಬಾರದು ಅಂತ ಪಾಲಿಕೆ ಹಾಗೂ ಪೊಲೀಸ್ ಇಲಾಖೆ ಸೂಚನೆ ನೀಡಿದ್ದು, ಸಾರ್ವಜನಿಕರು ಸಹಕರಿಸಬೇಕು ಎಂದು ಹೇಳಿದ್ದಾರೆ.

    ಜಂಬೂಸವಾರಿಯಲ್ಲಿ ಗಮನ ಸೆಳೆಯುವ ಸ್ತಬ್ಧ ಚಿತ್ರಗಳಿಗೆ ಕೊನೆ ಹಂತದ ಸ್ಪರ್ಶ ನೀಡಲಾಗುತ್ತಿದೆ. ಈ ಬಾರಿ 42 ಸ್ತಬ್ಧ ಚಿತ್ರಗಳು ಮೆರವಣಿಗೆಯಲ್ಲಿ ಭಾಗಿಯಾಗುತ್ತಿವೆ. 30 ಜಿಲ್ಲೆಗಳ ಜೊತೆ 12 ಇಲಾಖೆಯ ಸ್ತಬ್ಧ ಚಿತ್ರಗಳು. ಭಿನ್ನ ವಿಭಿನ್ನ ಸಂದೇಶ ಸಾರುತ್ತಿದ್ದು ಈ ಬಾರಿ ಜನರಿಗೆ ಸ್ತಬ್ಧ ಚಿತ್ರಗಳು ಮುದ ನೀಡಲಿದೆ ಎಂದು ಹಾವೇರಿ ಸ್ತಬ್ಧ ಚಿತ್ರ ಅಧಿಕಾರಿ ಪ್ರಕಾಶ್ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv