Tag: ಕಾರ್ಯಕ್ರಮ

  • ಖ್ಯಾತ ಗಾಯಕ, ನಟ ರಾಜು ಅನಂತಸ್ವಾಮಿ ನೆನಪಲ್ಲಿ ಸಂಗೀತ ಸಂಜೆ

    ಖ್ಯಾತ ಗಾಯಕ, ನಟ ರಾಜು ಅನಂತಸ್ವಾಮಿ ನೆನಪಲ್ಲಿ ಸಂಗೀತ ಸಂಜೆ

    ಮ್ಮ ಅಮೋಘ ಗಾಯನದಿಂದ ವಿಶ್ವದೆಲ್ಲೆಡೆ ಮನೆಮಾತಾಗಿದ್ದ ಖ್ಯಾತ ಗಾಯಕ ರಾಜು ಅನಂತಸ್ವಾಮಿ (Raju Ananthaswamy) ಅವರ ನೆನಪಿನಲ್ಲೊಂದು ಸುಗಮ ಸಂಗೀತ ಸಂಜೆ ‘ರಾಜು ದಿ ಲೆಜೆಂಡ್’ (Raju the Legend) ಎಂಬ ಹೆಸರಿನಲ್ಲಿ ಏಪ್ರಿಲ್ 19 ರಂದು ಕೋಣನ ಕುಂಟೆ ಬಳಿಯ ಶ್ರೀಹರಿ ಖೋಡೆ ಆಡಿಟೋರಿಯಂ ನಲ್ಲಿ ಅದ್ದೂರಿಯಾಗಿ ನಡೆಯಲಿದೆ. ಹೆಸರಾಂತ ಡ್ರಮರ್ ಮಂಜನಾಥ್ ಸತ್ಯಶೀಲ್ ಹಾಗೂ ಖ್ಯಾತ ಗಾಯಕಿ ಅನನ್ಯ ಭಟ್ ಈ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿ ನೀಡಲು ಪತ್ರಿಕಾಗೋಷ್ಠಿ ಆಯೋಜಿಸಲಾಗಿತ್ತು. ಹಿರಿಯ ರಂಗಕರ್ಮಿ ಶ್ರೀನಿವಾಸ್ ಜಿ ಕಪ್ಪಣ್ಣ, ಸಂಗೀತ ನಿರ್ದೇಶಕರಾದ ಪ್ರವೀಣ್ ಡಿ ರಾವ್, ಪ್ರವೀಣ್ ಮತ್ತು ಪ್ರದೀಪ್ ಹಾಗೂ ಗಾಯಕಿ ದಿವ್ಯ ರಾಘವನ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

    ರಾಜು ಅನಂತಸ್ವಾಮಿ ಅವರ ಹಾಡುಗಳನ್ನು ಕೇಳಿ ಬೆಳೆದ ನನಗೆ ಅವರ ಹೆಸರಿನಲ್ಲೊಂದು ಕಾರ್ಯಕ್ರಮ ಮಾಡಬೇಕೆನಿಸಿತು. ಈ ಕುರಿತು ಸ್ನೇಹಿತರಾದ ಖ್ಯಾತ ಡ್ರಮ್ಮರ್ ಮಂಜುನಾಥ್ ಸತ್ಯಶೀಲ್  ಅವರ ಬಳಿ ಹೇಳಿದೆ. ಅವರ ಯೋಚನೆ ಕೂಡ ಇದೇ ಆಗಿತ್ತು. ನಾವಿಬ್ಬರು ಈ ಸಮಾರಂಭವನ್ನು ಆಯೋಜಿಸಲು ಮುಂದಾದೆವು. ಈ ಕುರಿತು ಎಲ್ಲರೊಡನೆ ಚರ್ಚಿಸಿದಾಗ ರಾಜು ಅನಂತಸ್ವಾಮಿ ಅವರ ಹತ್ತಿರದ ಒಡನಾಡಿಗಳು ಹಾಗೂ ಅವರ ಶಿಷ್ಯರು ನಮ್ಮ ಪ್ರಯತ್ನಕ್ಕೆ ಬೆಂಬಲವಾಗಿ ನಿಂತರು. ‌ಶ್ರೀನಿವಾಸ ಜಿ ಕಪ್ಪಣ್ಣ ಹಾಗೂ ಪ್ರವೀಣ್ ಡಿ ರಾವ್ ಅವರಂತಹ ಹಿರಿಯರ ಮಾರ್ಗದರ್ಶನದಲ್ಲಿ ಈ ಸಮಾರಂಭ ನಡೆಯಲಿದೆ. ಏಪ್ರಿಲ್ 19 ರಾಜು ಅನಂತಸ್ವಾಮಿ ಅವರ ಹುಟ್ಟುಹಬ್ಬ. ಹಾಗಾಗಿ ಅದೇ ದಿನ “ರಾಜು ದಿ ಲೆಜೆಂಡ್” ಹೆಸರಿನಲ್ಲಿ ರಾಜು ಅನಂತಸ್ವಾಮಿ ಅವರ ಹಾಡುಗಳ ಸುಗಮ ಸಂಗೀತ ಸಂಜೆ  ಕೋಣನಕುಂಟೆಯ ಶ್ರೀಹರಿ ಖೋಡೆ ಆಡಿಟೋರಿಯಂ ನಲ್ಲಿ  ನಡೆಯಲಿದೆ. ನಾಡಿನ ಅನೇಕ ಹೆಸರಾಂತ ಕಲಾವಿದರು ಹಾಗೂ ಗಾಯಕರು ಈ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ. ರಾಜು ಅನಂತಸ್ವಾಮಿ ಅವರ ಹದಿನೆಂಟು ಹಾಡುಗಳ ಗಾಯನ ಸುಪ್ರಸಿದ್ದ ಗಾಯಕ, ಗಾಯಕಿಯರ ಕಂಠಸಿರಿಯಲ್ಲಿ ಮೊಳಗಲಿದೆ. ಆಧುನಿಕ ತಂತ್ರಜ್ಞಾನ AI ಮೂಲಕ ರಾಜು ಅನಂತಸ್ವಾಮಿ ಅವರ ಕುರಿತಾದ ವಿಷುಯಲ್ಸ್ ಪ್ರದರ್ಶನವಾಗುತ್ತದೆ. ಮೊದಲು ಈ ಸಮಾರಂಭವನ್ನು ಸಣ್ಣ ಮಟ್ಟದಲ್ಲಿ ಮಾಡಬೇಕೆಂದುಕೊಂಡೆವು. ಈಗ ದೊಡ್ಡಮಟ್ಟದಲ್ಲಿ ರಾಜ್ಯದಲ್ಲೇ ದೊಡ್ಡ ಆಡಿಟೋರಿಯಂನಲ್ಲಿ ಈ ಸಮಾರಂಭ ನಡೆಯಲಿದೆ. ಈ ಸಂಗೀತ ಸಂಜೆ ಯಶಸ್ವಿಯಾಗಲು ಜನರ ಸಹಕಾರ ಅಗತ್ಯ. ರಾಜು ಅನಂತಸ್ವಾಮಿ ಅವರ ಅಭಿಮಾನಿಗಳು ಹಾಗೂ ಸಂಗೀತಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕೆಂದು ಈ ಮೂಲಕ ವಿನಂತಿ ಮಾಡುತ್ತೇವೆ‌ ಎಂದು ಗಾಯಕಿ ಅನನ್ಯ ಭಟ್ ತಿಳಿಸಿದರು.

    ರಾಜು ಅನಂತಸ್ವಾಮಿ ಅವರ ಅಭಿಮಾನಿಯಾಗಿ ಹಾಗೂ ಅವರ ವಿದ್ಯಾರ್ಥಿಯಾಗಿ ಅವರ ಬಗ್ಗೆ ಒಂದು ಕಾರ್ಯಕ್ರಮ ಮಾಡಬೇಕೆನಿಸಿತು. ಏಪ್ರಿಲ್ 19, ರಾಜು ಅನಂತಸ್ವಾಮಿ ಅವರ ಹುಟ್ಟುಹಬ್ಬ. ಅದೇ ದಿನ “ರಾಜು ದಿ ಲೆಜೆಂಡ್” ಎಂಬ ಕಾರ್ಯಕ್ರಮ ಮಾಡಲು ನಾನು ಹಾಗೂ ಅನನ್ಯ ಭಟ್ ನಿರ್ಧರಿಸಿದ್ದೆವು. ನಂತರ ನಮ್ಮೊಂದಿಗೆ ರಾಜು ಅನಂತಸ್ವಾಮಿ ಅವರ ಒಡನಾಡಿಗಳು, ಅಭಿಮಾನಿಗಳು ಹಾಗೂ ವಿದ್ಯಾರ್ಥಿಗಳು ಜೊತೆಯಾದರು. ಸುಗಮ ಸಂಗೀತ ಕಾರ್ಯಕ್ರಮ ಎಂದರೆ ಸೀಮಿತ ವಾದ್ಯಗಾರರಷ್ಟೇ ಇರುತ್ತಾರೆ. ಆದರೆ “ರಾಜು ದಿ ಲೆಜೆಂಡ್” ಸುಗಮ ಸಂಗೀತ ಕಾರ್ಯಕ್ರಮದಲ್ಲಿ ನಾಡಿನ ಸುಪ್ರಸಿದ್ಧ ಗಾಯಕ, ಗಾಯಕಿಯರು, ಸಹ ಹಾಡುಗಾರರು(ಕೋರಸ್) ಹಾಗೂ ವಾದ್ಯಗಾರರು ಉಪಸ್ಥಿತರಿರುತ್ತಾರೆ. ಅಷ್ಟೇ ಅಲ್ಲದೇ ಬೇರೆ ದೇಶದ ವಿವಿಧ ವಾದ್ಯಗಳನ್ನು ಇದೇ ಮೊದಲ ಬಾರಿಗೆ ಸುಗಮ ಸಂಗೀತದ ಹಾಡುಗಳಿಗೆ ಬಳಸುವ ವಿಶಿಷ್ಟ ಪ್ರಯತ್ನ ಕೂಡ ಮಾಡಲಾಗುತ್ತಿದೆ‌. ಈ ಸಮಾರಂಭವನ್ನು ವಿಶ್ವಮಟ್ಟದಲ್ಲಿ ಗುರುತಿಸುವ ಹಾಗೆ ಮಾಡಬೇಕೆಂಬುದು ನಮ್ಮೆಲ್ಲರ ಕನಸು. ಆ ಕನಸಿಗೆ ಕನ್ನಡ ಕಲಾರಸಿಕರು ಆಸರೆಯಾಗುವ ಭರವಸೆಯಿದೆ. ಇಡೀ ಸಮಾರಂಭ ರಾಜು ಅನಂತಸ್ವಾಮಿ ಅವರಿಗೆ ಅರ್ಪಣೆಯಾಗಲಿದೆ ಎಂದು ಕಾರ್ಯಕ್ರಮದ ಬಗ್ಗೆ ಮಂಜುನಾಥ್ ಸತ್ಯಶೀಲ್ (ಡ್ರಮ್ಮರ್) ಮಾಹಿತಿ ನೀಡಿದರು.

    ರಾಜು ಅನಂತಸ್ವಾಮಿ ಅವರೊಂದಿಗಿನ ಒಡನಾಟವನ್ನು  ನೆನಪಿಸಿಕೊಂಡ ಹಿರಿಯ ರಂಗಕರ್ಮಿ ಶ್ರೀನಿವಾಸ್ ಜಿ ಕಪ್ಪಣ್ಣ, “ರಾಜು ದಿ ಲೆಜೆಂಡ್” ಸಮಾರಂಭ ಯಶಸ್ವಿಯಾಗಲೆಂದು ಹಾರೈಸಿದರು. ಪ್ರವೀಣ್ ಡಿ ರಾವ್, ದಿವ್ಯ ರಾಘವನ್, ಪ್ರವೀಣ್ ಹಾಗೂ ಪ್ರದೀಪ್ ಸಹ ಸಮಾರಂಭದ ಕುರಿತು ಮಾತನಾಡಿದರು.

  • ಆರ್.ಎಸ್.ಎಸ್ ಕಾರ್ಯಕ್ರಮಕ್ಕೆ ಹೋಗಲ್ಲ: ನಿರ್ದೇಶಕ ನಾಗತಿಹಳ್ಳಿ ಸ್ಪಷ್ಟನೆ

    ಆರ್.ಎಸ್.ಎಸ್ ಕಾರ್ಯಕ್ರಮಕ್ಕೆ ಹೋಗಲ್ಲ: ನಿರ್ದೇಶಕ ನಾಗತಿಹಳ್ಳಿ ಸ್ಪಷ್ಟನೆ

    ಪ್ರಗತಿಪರ ಗುಂಪಿನಲ್ಲಿ ಗುರುತಿಸಿಕೊಂಡಿರುವ ಸಿನಿಮಾ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ (Nagatihalli Chandrasekhar) ಆರ್.ಆರ್.ಎಸ್ ಸಂಘಟನೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾಗಿ ಆಗುತ್ತಿರುವುದು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಆರ್.ಎಸ್.ಎಸ್ ಸಂಘಟನೆಯನ್ನು ವಿರೋಧಿಸುತ್ತಾ ಬಂದಿರುವ ಬಳಗದಲ್ಲಿದ್ದ ನಾಗತಿಹಳ್ಳಿ ಚಂದ್ರಶೇಖರ್ ಅದು ಹೇಗೆ ಕಾರ್ಯಕ್ರಮವನ್ನು ಒಪ್ಪಿಕೊಂಡರು ಎನ್ನುವುದು ಕೆಲವರ ಪ್ರಶ್ನೆಯಾಗಿತ್ತು.

    ಬೆಂಗಳೂರಿನ ರಾಷ್ಟ್ರೀಯ ಸ್ವಯಂ ಸೇವಕ ಸಂಘ (RSS) ಶಂಕರಪುರ ಭಾಗ ಜುಲೈ 16ರಂದು ‘ಶ್ರೀ ಗುರು ಪೂಜಾ ಉತ್ಸವ’ವನ್ನು ಆಯೋಜನೆ ಮಾಡಿತ್ತು. ಈ ಕಾರ್ಯಕ್ರಮದ (Programme) ಅಧ್ಯಕ್ಷತೆಯನ್ನು ನಾಗತಿಹಳ್ಳಿ ಚಂದ್ರಶೇಖರ್ ವಹಿಸಿಕೊಳ್ಳಲಿದ್ದಾರೆ ಎಂದೂ, ಅಖಿಲ ಭಾರತ ಗ್ರಾಮ ವಿಕಾಸ ಸಂಯೋಜಕ ಶ್ರೀಗುರುರಾಜ್ ಅಂದಿನ ಸಮಾರಂಭದಲ್ಲಿ ಭಾಗಿಯಾಲಿದ್ದಾರೆ ಎಂದು ಆಮಂತ್ರಣ ಪತ್ರಿಕೆಯನ್ನು ಮುದ್ರಿಸಲಾಗಿತ್ತು. ಈ ಆಹ್ವಾನ ಪತ್ರಿಕೆ ವೈರಲ್ ಆಗಿತ್ತು.

    ನಾಗತಿಹಳ್ಳಿ ಚಂದ್ರಶೇಖರ್ ಇತ್ತೀಚೆಗೆ ಬದಲಾಗಿದ್ದಾರೆ ಎಂದು ಕೆಲವರು ಟೀಕೆ ಮಾಡಿದ್ದರೆ, ಇನ್ನೂ ಕೆಲವರು ಅವರು ಬಿಜೆಪಿ ಮತ್ತು ಆರ್.ಎಸ್.ಎಸ್ ಜೊತೆ ಗುರುತಿಸಿಕೊಂಡು ತುಂಬಾ ದಿನವಾಗಿದೆ ಎಂದು ಹಲವರು ಕಾಮೆಂಟ್ ಮಾಡಿದ್ದರು. ನಾಗ್ತಿ ಮೇಷ್ಟ್ರ ಮೇಲೆ ನೆಗೆಟಿವ್ ಕಾಮೆಂಟ್ ಬಂದಿದ್ದೇ ಹೆಚ್ಚಿತ್ತು. ಹಾಗಾಗಿ ನಾಗತಿಹಳ್ಳಿಯವರು ಇದಕ್ಕೆ ಸ್ಪಷ್ಟನೆಯನ್ನು ನೀಡಿದ್ದಾರೆ. ಇದನ್ನೂ ಓದಿ:ಬಿಗ್ ಬಾಸ್ ಮನೆಯಲ್ಲಿ 30 ಸೆಕೆಂಡ್ ಲಿಪ್ ಲಾಕ್: ಕಣ್ಮುಚ್ಚಿಕೊಂಡ ಪೂಜಾ ಭಟ್

    ಸೋಷಿಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ನಾಗತಿಹಳ್ಳಿ ಚಂದ್ರಶೇಖರ್, ‘ಈ ಸಮಾರಂಭದಲ್ಲಿ ನಾನು ಭಾಗವಹಿಸುತ್ತಿಲ್ಲ (Absent). ಅದನ್ನು ನಾನು ಸ್ಪಷ್ಟಪಡಿಸಿಯೂ ಆಮಂತ್ರಣದಲ್ಲಿ ನನ್ನ ಹೆಸರು ಅಚ್ಚಾಗಿದೆ. ಅದು ‘ಆಕಸ್ಮಿಕ’ ಎಂದು ಅವರು ಕ್ಷಮೆ ಯಾಚಿಸಿದ್ದಾರೆ. ಅಲ್ಲಿಗೆ ವಿಷಯ ಮುಕ್ತಾಯಗೊಂಡಿದೆ. ಆ ದಿನಾಂಕದಂದು ನಾನು ದೂರದ ದೇಶದಲ್ಲಿ ಚಿತ್ರೀಕರಣದಲ್ಲಿರುವುದು ನನ್ನನ್ನು ಬಲ್ಲವರಿಗೆಲ್ಲ ತಿಳಿದಿದೆ. ನನ್ನನ್ನು ಅತ್ಯಂತ ಹತ್ತಿರದಿಂದ ಬಲ್ಲ, ನನ್ನನ್ನು ನಂಬುವ, ನನ್ನನ್ನು ಪ್ರೀತಿಸುವ, ನನ್ನನ್ನು ಬೆಳೆಸಿರುವ, ನನ್ನೊಂದಿಗೆ ಹಳ್ಳಿಯ ಕೆಲಸದಲ್ಲಿ ಕೈಜೋಡಿಸಿರುವ ಅಕ್ಕರೆಯ ಎಲ್ಲ  ಮನಸ್ಸುಗಳಿಗೆ ಹೇಳುವ ಒಂದು ಮಾತು, ನಾನು ಏನಾಗಿದ್ದೀನೋ ಅದೇ ಆಗಿ ಇರುತ್ತೇನೆ. ನಾನು ಏನು ಮಾಡುತ್ತಿದ್ದೀನೋ ಅದು ಸರಿ ಇದೆ. ಅದನ್ನೇ ಮುಂದುವರೆಸುತ್ತೇನೆ’ ಎಂದು ಬರೆದುಕೊಂಡಿದ್ದಾರೆ.

     

    ಮುಂದುವರೆದು, ‘ತಪ್ಪು ತಿಳಿಯಲು, ತಪ್ಪು ಹರಡಲು ತುದಿಗಾಲಲ್ಲಿ ನಿಂತವರನ್ನು, ನಿತ್ಯ ಹೊಸ, ಹುಸಿ ರೋಮಾಂಚನ ಬಯಸುವ ಮಹನೀಯರನ್ನು ಮನ್ನಿಸಿ ಮುಂದೆ ಹೋಗೋಣ. ಇಲ್ಲಿ ನಾವೆಲ್ಲ ಮಾಡಲೇಬೇಕಾದ ಜನಪರ ಕೆಲಸಗಳು ಬಹಳಷ್ಟಿವೆ. ಮಾಡೋಣ. ಇನ್ನು ಮಾತು ಸಾಕು’ ಎಂದು ನಾಗತಿಹಳ್ಳಿ ಚಂದ್ರಶೇಖರ್ ಬರೆದುಕೊಂಡಿದ್ದಾರೆ.
    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕ್ಯಾನ್ಸರ್ ನಿಂದ ಬಳಲುತ್ತಿರುವ ನಟಿಗಾಗಿ ಹಾಡಲಿದ್ದಾರೆ ಚಿನ್ಮಯಿ

    ಕ್ಯಾನ್ಸರ್ ನಿಂದ ಬಳಲುತ್ತಿರುವ ನಟಿಗಾಗಿ ಹಾಡಲಿದ್ದಾರೆ ಚಿನ್ಮಯಿ

    ಸಾಫ್ಟ್​ ಲಿಂಕ್ಸ್​ ಸಂಸ್ಥೆಯ ಸುರೇಶ್​ ಬಾಬು ಕಳೆದ ಕೆಲವು ವರ್ಷಗಳಿಂದ ಹಲವು ಸಂಗೀತ (Music) ಸಂಜೆಗಳನ್ನು (Program) ಆಯೋಜಿಸುತ್ತಾ ಬಂದಿದ್ದಾರೆ. ಈಗ ಅವರು ಖ್ಯಾತ ಗಾಯಕಿ ಚಿನ್ಮಯಿ ಶ್ರೀಪಾದ (Chinmayi Sripad) ಅವರ ಸಂಗೀತ ಸಂಜೆಯನ್ನು ಮಾರ್ಚ್​ 18ರಂದು ನಗರದ ಚೌಡಯ್ಯ ಮೆಮೋರಿಯಲ್​ ಹಾಲ್​ನಲ್ಲಿ ಆಯೋಜಿಸಿದ್ದಾರೆ.

    ಕಳೆದ 20 ವರ್ಷಗಳಿಂದ ದಕ್ಷಿಣ ಭಾರತದ ಜನಪ್ರಿಯ ಹಿನ್ನೆಲೆ ಗಾಯಕಿಯಾಗಿ ಗುರುತಿಸಿಕೊಂಡಿರುವ ಚಿನ್ಮಯಿ ಶ್ರೀಪಾದ, ರೇಡಿಯೋ ಜಾಕಿಯಾಗಿ, ಡಬ್ಬಿಂಗ್​ ಕಲಾವಿದೆಯಾಗಿ, ನಿರೂಪಕಿಯಾಗಿಯೂ ಹೆಸರು ಮಾಡಿದ್ದಾರೆ. ಬ್ಲೂ ಎಲಿಫೆಂಟ್​ ಎಂಬ ಸಂಸ್ಥೆಯ ಸಂಸ್ಥಾಯ ಮತ್ತು ಸಿಇಓ ಆಗಿಯೂ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ಇದನ್ನೂ ಓದಿ:ಸಿದ್ಧಾರ್ಥ್ ಜೊತೆಗಿನ ಡೇಟಿಂಗ್ ವಿಚಾರಕ್ಕೆ ನಟಿ ಅದಿತಿ ರಾವ್‌ ಹೈದರಿ ಪ್ರತಿಕ್ರಿಯೆ

    ಬಾಲ್ಯದಿಂದಲೂ ಗಾಯಕಿಯಾಗಿ ಗುರುತಿಸಿಕೊಂಡಿರುವ ಚಿನ್ಮಯಿ ಶ್ರೀಪಾದ, ಚಿತ್ರರಂಗಕ್ಕೂ ಬರುವ ಮುನ್ನ ಹಲವು ಟಿವಿ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು. ಸನ್​ ಟಿವಿಯಲ್ಲಿ ಪ್ರಸಾರವಾದ ‘ಸಪ್ತಸ್ವರಂಗಳ್​’ ಎಂಬ ಕಾರ್ಯಕ್ರಮದಲ್ಲಿ ಅವರ ಗಾಯನ ಪ್ರತಿಭೆಯನ್ನು ಗುರುತಿಸಿದ ಖ್ಯಾತ ಸಂಗೀತ ನಿರ್ದೇಶಕ ಎ.ಆರ್​. ರೆಹಮಾನ್​ ಅವರು ತಮ್ಮ ಸಂಗೀತ ನಿರ್ದೇಶನದ ‘ಕಣ್ಣತ್ತಿಲ್​ ಮುತ್ತಮಿಟ್ಟಾಲ್​’ ಚಿತ್ರದ ಒಂದು ಪ್ರಮುಖ ಹಾಡನ್ನು ಹಾಡುವುದಕ್ಕೆ ಅವಕಾಶ ನೀಡಿದ್ದಾರೆ. 2002ರಲ್ಲಿ ಬಿಡುಗಡೆಯಾದ ಈ ಚಿತ್ರದ ‘ಒರು ದೈವಂ ತಂದ ಪೂವೆ …’ ಹಾಡಿನಿಂದ ಜನಪ್ರಿಯರಾದ ಚಿನ್ಮಯಿ ಮತ್ತೆಂದೂ ಹಿಂದಿರುಗಿ ನೋಡಲಿಲ್ಲ. ತಮಿಳು, ತೆಲುಗು, ಕನ್ನಡ, ಹಿಂದಿ ಹಾಗೂ ಮಲಯಾಳಂ ಭಾಷೆಯ ಚಿತ್ರಗಳಿಗೆ ನೂರಾರು ಹಾಡುಗಳನ್ನು ಹಾಡಿದ್ದಾರೆ.

    ‘ಹನಿಹನಿ’ ಚಿತ್ರದ ‘ಬೇಡ ಬೇಡ’ ಎಂಬ ಹಾಡಿನ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಚಿನ್ಮಯಿ, ನಂತರದ ದಿನಗಳಲ್ಲಿ ‘ಮಸ್ತ್ ಮಜಾ ಮಾಡಿ’ ಚಿತ್ರದ ‘ಚೋರಿ ಚೋರಿ’, ‘ಗನ್​’ ಚಿತ್ರದ ‘ತಾಜ ತಾಜ ಕನಸುಗಳು’, ‘ವಿಕ್ರಾಂತ್​ ರೋಣ’ ಚಿತ್ರದ ‘ಹೇ ಫಕೀರಾ’, ‘ದಿಯಾ’ ಚಿತ್ರದ ‘ಸೌಲ್​ ಆಫ್​ ದಿಯಾ’ ಸೇರಿದಂತೆ ಹಲವು ಹಾಡುಗಳನ್ನು ಹಾಡಿದ್ದಾರೆ.

    ಚಿತ್ರರಂಗದಲ್ಲಿ ಹಿನ್ನೆಲೆ ಗಾಯಕಿಯಾಗಿ 20 ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಸಾಫ್ಟ್​ ಲಿಂಕ್ಸ್​ ಸಂಸ್ಥೆಯಿಂದ ‘ಸುವರ್ಣ ಸಂಜೆ’ ಎಂಬ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಸಮಾರಂಭದಲ್ಲಿ ಚಿನ್ಮಯಿ ಶ್ರೀಪಾದ ಅವರನ್ನು ವಿಶೇಷವಾಗಿ ಗೌರವಿಸಲಾಗುತ್ತದೆ. ಅಂದು ಕನ್ನಡದ ಹಲವು ಜನಪ್ರಿಯ ಹಾಡುಗಳನ್ನು ಹಾಡಲಾಗುವುದು. ಚಿನ್ಮಯಿ ಶ್ರೀಪಾದ ಸಹ ಈ ಸಂದರ್ಭದಲ್ಲಿ ತಾವು ಹಾಡಿರುವ ಕೆಲವು ಜನಪ್ರಿಯ ಹಾಡುಗಳನ್ನು ಲೈವ್​ ಆಗಿ ಹಾಡಲಿದ್ದಾರೆ. ಅವರ ಜತೆಗೆ ಅಜಯ್​ ಕೃಷ್ಣ ಸೇರಿದಂತೆ ಹಲವು ಜನಪ್ರಿಯ ಗಾಯಕ, ಗಾಯಕಿಯರು ಧ್ವನಿಗೂಡಿಸಲಿದ್ದಾರೆ. ಈ ಸಮಾರಂಭದಲ್ಲಿ ಕನ್ನಡ ಚಿತ್ರರಂಗದ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಈ ಸಂಗೀತ ಸಂಜೆಯಿಂದ ಬರುವ ಹಣದ ಒಂದು ಭಾಗವನ್ನು, ಕ್ಯಾನ್ಸರ್​ನಿಂದ (Cancer) ಬಳಲುತ್ತಿರುವ ಹಿರಿಯ ಕಲಾವಿದೆ ಶೈಲಶ್ರೀ ಸುದರ್ಶನ್​ ಅವರ ಚಿಕಿತ್ಸೆಗೆ ಭರಿಸಲಾಗುವುದು.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಬೆಂಗಳೂರಿನಲ್ಲಿ ನಡೆಯಿತು ‘ಅಸ್ಟೆಮಿದ ಐಸಿರಿ’ ಮೊಸರು ಕುಡಿಕೆ ಉತ್ಸವ

    ಬೆಂಗಳೂರಿನಲ್ಲಿ ನಡೆಯಿತು ‘ಅಸ್ಟೆಮಿದ ಐಸಿರಿ’ ಮೊಸರು ಕುಡಿಕೆ ಉತ್ಸವ

    ಬೆಂಗಳೂರು: ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ತುಳುನಾಡ ಜವನೆರ್ ಬೆಂಗಳೂರಿನ ಆಶ್ರಯದಲ್ಲಿ ಭಾನುವಾರ ಅದ್ದೂರಿಯಾಗಿ ‘ಅಸ್ಟೆಮಿದ ಐಸಿರಿ’ ಮೊಸರು ಕುಡಿಕೆ ಉತ್ಸವ ಬೆಂಗಳೂರಿನಲ್ಲಿ ನಡೆಯಿತು.

    ವಿಜಯನಗರದ ಬಂಟರ ಸಂಘದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹುಲಿವೇಷ, ನೃತ್ಯ ಚೆಂಡೆ, ಭಜನಾ ಸಂಕೀರ್ತನೆ, ಮೊಸರು ಕುಡಿಕೆ, ತುಳುನಾಡಿನ ಆಹಾರ ಖಾದ್ಯ, ಕಂಗೀಲು ನೃತ್ಯ, ಮಹಿಷಮರ್ಧಿನಿ ರೂಪಕ, ತುಳು ನಾಟಕ ಹಾಗೂ ತುಳು ಲಿಪಿ ಕಾರ್ಯಾಗಾರ ಪ್ರಮುಖ ಆಕರ್ಷಣೆಗಳಾಗಿದ್ದವು. ಇದನ್ನೂ ಓದಿ: 2023ರಿಂದ ಅಯೋಧ್ಯೆ ರಾಮಮಂದಿರದಲ್ಲಿ ದೇವರ ದರ್ಶನ

    ಮಕ್ಕಳಿಗಾಗಿ ಮುದ್ದು ರಾಧಾ-ಕೃಷ್ಣ ವೇಷ ಹಾಗೂ ಆಟಗಳನ್ನು ಆಡಿಸಲಾಯಿತು. ಮಹಿಳೆಯರಿಗೆ ಹಾಗೂ ಪುರುಷರಿಗೆ ವಿವಿಧ ಆಟೋಟ ಸ್ಪರ್ಧೆಯನ್ನೂ ಆಯೋಜಿಸಲಾಗಿತ್ತು. ಮಡಿಕೆ ಒಡೆಯುವ ಸ್ಪರ್ಧೆ, ಹಗ್ಗಜಗ್ಗಾಟ, ಅಡ್ಡಕಂಬ ಸ್ಪರ್ಧೆ, ಹಾಳೆ ಸೋಗೆ ದಂಪತಿ ಸ್ಪರ್ಧೆ, ರಸಪ್ರಶ್ನೆ ಹಾಗೂ ಇತರ ತುಳುನಾಡಿನ ಆಟೋಟಗಳಲ್ಲಿ ನೆರೆದವರು ತೊಡಗಿಸಿಕೊಂಡರು. ಇದನ್ನೂ ಓದಿ: ಅಕ್ಟೋಬರ್ 17ಕ್ಕೆ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ

    Live Tv
    [brid partner=56869869 player=32851 video=960834 autoplay=true]

  • ‘ಡಾನ್ಸ್ ಕರ್ನಾಟಕ ಡಾನ್ಸ್’ ವೇದಿಕೆಯಲ್ಲಿ ಶಿವರಾಜ್ ಕುಮಾರ್ ಜೊತೆ ಕುಣಿದ ಕಿಚ್ಚ ಸುದೀಪ್

    ‘ಡಾನ್ಸ್ ಕರ್ನಾಟಕ ಡಾನ್ಸ್’ ವೇದಿಕೆಯಲ್ಲಿ ಶಿವರಾಜ್ ಕುಮಾರ್ ಜೊತೆ ಕುಣಿದ ಕಿಚ್ಚ ಸುದೀಪ್

    ಜೀ ಕನ್ನಡ ವಾಹಿನಿಯ ಜನಪ್ರಿಯ ಡಾನ್ಸ್ ರಿಯಾಲಿಟಿ ಶೋ ‘ಡಾನ್ಸ್ ಕರ್ನಾಟಕ ಡಾನ್ಸ್’ ವೇದಿಕೆಯ ಮೇಲೆ ಕಿಚ್ಚ ಸುದೀಪ್ ಕಾಣಿಸಿಕೊಂಡಿದ್ದಾರೆ. ಶಿವರಾಜ್ ಕುಮಾರ್ ಜೊತೆ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದಾರೆ. ಆ ಹಾಡು ಯಾವುದು? ಇಬ್ಬರ ಡಾನ್ಸ್ ಹೇಗಿತ್ತು ಎನ್ನುವುದಕ್ಕೆ ಈ ವಾರಾಂತ್ಯ ಕಾಯಲೇಬೇಕು. ಅಷ್ಟಕ್ಕೂ ಕಿಚ್ಚ ಸುದೀಪ್ ಈ ಶೋನಲ್ಲಿ ಕಾಣಿಸಿಕೊಳ್ಳುತ್ತಿರುವುದಕ್ಕೆ ಕಾರಣ, ಅವರ ಸಿನಿಮಾ ಪ್ರಚಾರಕ್ಕೆ ಅನ್ನುವುದು ಗುಟ್ಟಾಗಿ ಉಳಿದಿಲ್ಲ.

    ಜುಲೈ ತಿಂಗಳಲ್ಲಿ ಕಿಚ್ಚ ಸುದೀಪ್ ನಟನೆಯ ವಿಕ್ರಾಂತ ರೋಣ ಸಿನಿಮಾ ರಿಲೀಸ್ ಆಗುತ್ತಿದೆ. ಈಗಾಗಲೇ ಬೆಂಗಳೂರು, ಮುಂಬೈ, ಹೈದರಾಬಾದ್, ಚೆನ್ನೈ, ಕೊಚ್ಚಿ ಸೇರಿದಂತೆ ಹಲವು ಕಡೆ ಸ್ವತಃ ಸುದೀಪ್ ಅವರೇ ಹೋಗಿ ಸಿನಿಮಾ ಪ್ರಚಾರ ಮಾಡಿ ಬಂದಿದ್ದಾರೆ. ಜೊತೆಗೆ ತಂಡವನ್ನೂ ಕರೆದುಕೊಂಡು ಹೋಗಿದ್ದಾರೆ. ಟ್ರೈಲರ್ ರಿಲೀಸ್ ಆಗಿದೆ. ಅದರಲ್ಲೂ ರಾ ರಾ ರಕ್ಕಮ್ಮ ಹಾಡಿಗೆ ಸಖತ್ ರೆಸ್ಪಾನ್ಸ್ ಬಂದಿದೆ. ಇವಷ್ಟೇ ಅಲ್ಲದೇ ಅನೇಕ ಶೋಗಳಲ್ಲೂ ಸುದೀಪ್ ಕಾಣಿಸಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ಇಡಿ ವಿಚಾರಣೆಯಲ್ಲಿ ಜಾಕ್ವೆಲಿನ್ ಫರ್ನಾಂಡಿಸ್: ‘ವಿಕ್ರಾಂತ್ ರೋಣ’ ಪ್ರಚಾರಕ್ಕೆ ಗೈರಾದ ನಟಿ

    ಬುಧವಾರ ಬೆಂಗಳೂರಿನಲ್ಲಿ ನಡೆದ ಡಾನ್ಸ್ ಕರ್ನಾಟಕ ಡಾನ್ಸ್ ಶೋ ಶೂಟಿಂಗ್ ನಲ್ಲಿ ಸುದೀಪ್ ಭಾಗಿಯಾಗಿದ್ದು, ಸ್ಪರ್ಧಾಳುಗಳ ಜೊತೆ ಮನಬಿಚ್ಚಿ ಮಾತನಾಡಿದ್ದಾರೆ. ವಿಕ್ರಾಂತ್ ರೋಣ ಸಿನಿಮಾದ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಶಿವರಾಜ್ ಕುಮಾರ್ ಮತ್ತು ತಮ್ಮ ಒಡನಾಟದ ಬಗ್ಗೆಯೂ ಮಾತನಾಡಿದ್ದಾರೆ. ಕುಣಿದಿದ್ದಾರೆ ಇಡೀ ದಿನ ಅವರು ಎಂಜಾಯ್ ಮಾಡಿದ್ದಾರಂತೆ.

    Live Tv

  • ಬೀದರ್‌ನಲ್ಲಿ ಇಂದು ಸಚಿವ ಆರ್ ಅಶೋಕ್ ಗ್ರಾಮವಾಸ್ತವ್ಯ

    ಬೀದರ್‌ನಲ್ಲಿ ಇಂದು ಸಚಿವ ಆರ್ ಅಶೋಕ್ ಗ್ರಾಮವಾಸ್ತವ್ಯ

    ಬೀದರ್: ಗಡಿ ಜಿಲ್ಲೆಯ ಔರಾದ್ ತಾಲೂಕಿನ ವಡಗಾಂವ್ ಗ್ರಾಮದಲ್ಲಿಂದು ರಾತ್ರಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಸತಿ ನಿಲಯದಲ್ಲಿ ಕಂದಾಯ ಸಚಿವ ಆರ್ ಅಶೋಕ್ ಗ್ರಾಮ ವಾಸ್ತವ್ಯ ಮಾಡಲಿದ್ದಾರೆ.

    ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಅವರು ಭಾಗಿಯಾಗಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಅವರು ಸಾವಿರಾರು ಜನರ ಅಹವಾಲುಗಳನ್ನು ಸ್ವೀಕಾರ ಮಾಡಲಿದ್ದಾರೆ. ಈಗಾಗಲೇ ಅವರನ್ನು ಅದ್ದೂರಿಯಾಗಿ ಸ್ವಾಗತ ಮಾಡಲಿಕ್ಕೆ ಕಲಾ ತಂಡಗಳು, ಅಲಂಕೃತ ಎತ್ತಿನ ಬಂಡಿ ಸಿದ್ದವಾಗಿವೆ. ಇದನ್ನೂ ಓದಿ: ಬಟದ್ರವ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ ಪ್ರಮುಖ ಆರೋಪಿ ಅರೆಸ್ಟ್

    ಜಿಲ್ಲೆಯಾದ್ಯಂತ 25 ಸಾವಿರ ಜನರು ಈ ಕಾರ್ಯಕ್ರಮದಲ್ಲಿ ಸೇರುವ ನಿರೀಕ್ಷೆಯಿದೆ. ಆರ್ ಅಶೋಕ್ ಅವರ ಅಷ್ಟೇ ಅಲ್ಲದೇ ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಸರಿಗಮಪ ಖ್ಯಾತಿಯ ಹನುಮಂತ ಲಂಬಾಣಿಯಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿಕೊಡಲಾಗುತ್ತಿದೆ. ಇದನ್ನೂ ಓದಿ: ತಲೆಗೆ ಕಲರ್ ಹಾಕೋ ರೇಟ್ ವಿಚಾರಕ್ಕೆ ಜಗಳ- ಕತ್ತರಿಯಿಂದ ಇರಿದು ಗ್ರಾಹಕನ ಕೊಲೆ

  • ಈ ಕಾಂಗ್ರೆಸ್‍ನವರು ದರಿದ್ರ ನನ್ಮಕ್ಕಳು, ಅವರ ಜೊತೆ ಹೋಗಬಾರದಿತ್ತು: ನಂಜೇಗೌಡ

    ಈ ಕಾಂಗ್ರೆಸ್‍ನವರು ದರಿದ್ರ ನನ್ಮಕ್ಕಳು, ಅವರ ಜೊತೆ ಹೋಗಬಾರದಿತ್ತು: ನಂಜೇಗೌಡ

    ಹಾಸನ: ಹೊಳೆನರಸೀಪುರ ತಾಲೂಕಿನ ಶ್ರೀರಾಮದೇವರಕಟ್ಟೆಯಲ್ಲಿ ನಡೆಯುತ್ತಿರುವ ಜನತಾ ಜಲಧಾರೆ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ವಿರುದ್ಧ ತುರುವೇಕೆರೆ ಕ್ಷೇತ್ರದ ಮಾಜಿ ಶಾಸಕ ನಂಜೇಗೌಡ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.

    ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ರಾಜ್ಯದಲ್ಲಿ ಕುಮಾರಣ್ಣನ ತರ ಮುಖ್ಯಮಂತ್ರಿ ಸಿಗಲ್ಲ ನಿಮಗೆ. ಕುಮಾರಣ್ಣ ಯಾವಾಗಲೂ 25, 50 ಸಾವಿರ ರೂ. ದುಬಾರಿ ಬಟ್ಟೆ ಹಾಕಿಕೊಂಡು ಓಡಾಡಲ್ಲ. ಒಂದು ಶರ್ಟ್, ಒಂದು ಪ್ಯಾಂಟ್, ಒಂದು ಜೊತೆ ಚಪ್ಪಲಿ ಹಾಕಿಕೊಂಡು ಯಾವಾಗಲೂ ರೈತರ ಪರ ಚಿಂತನೆ ಮಾಡುವ ಶಕ್ತಿ ಅವರದ್ದಾಗಿದೆ ಎಂದು ಬಣ್ಣಿಸಿದ್ದಾರೆ. ಇದನ್ನೂ ಓದಿ: ಪಾಲಕ್ಕಾಡ್‍ನಲ್ಲಿ RSS ಮುಖಂಡ ಹತ್ಯೆ

    HDK

    ಕಾಂಗ್ರೆಸ್‍ನವರು ಬರಿ ಹನ್ನೆರಡು, ಹದಿಮೂರು ತಿಂಗಳು ಅಧಿಕಾರಕೊಟ್ಟರು. ಈ ಕಾಂಗ್ರೆಸ್‍ನವರು ದರಿದ್ರ ನನ್ಮಕ್ಕಳು, ಅವರ ಜೊತೆ ಹೋಗಬಾರದಿತ್ತು. ಏನೋ ಪಾಪ ಕುಮಾರಸ್ವಾಮಿಯವರು ಹೋಗಿ ಬಿಟ್ಟರು. ಆ ಬಡ್ಡಿಮಕ್ಕಳು ಆವಾಗ್ಲೆ ಅವರ ಅಧಿಕಾರವನ್ನೇಲ್ಲಾ ಕಿತ್ತುಕೊಂಡುಬಿಟ್ಟರು. ನಮಗೆ ಐದು ವರ್ಷ ಅಧಿಕಾರ ಕೊಟ್ಟಿದ್ದರೆ ರೈತರಪರ ಯಾವ ರೀತಿ ಕೆಲಸ ಮಾಡಬೇಕು ಅನ್ನೋದನ್ನು ತೋರಿಸುತ್ತಿದ್ದರು ಎಂದು ಹೇಳಿದರು. ಇದನ್ನೂ ಓದಿ: ಕಾಂಗ್ರೆಸ್ ನಾಯಕರು ಮೇಕೆದಾಟಿಗೆ ಹೋಗಿ ಬಿರಿಯಾನಿ ತಿಂದು ಬಂದಿದ್ದಾರೆ ಈಗ ಮಹದಾಯಿಗೆ ಹೊರಟಿದ್ದಾರೆ: ಪ್ರಜ್ವಲ್ ರೇವಣ್ಣ ಕಿಡಿ

  • ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ವಿಶ್ವ ಮಾತೃಭಾಷಾ ದಿನ ಕಾರ್ಯಕ್ರಮ

    ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ವಿಶ್ವ ಮಾತೃಭಾಷಾ ದಿನ ಕಾರ್ಯಕ್ರಮ

    ಬೆಂಗಳೂರು: ಕನ್ನಡ ಅಭಿವೃದ್ಧಿ ಪ್ರಧಿಕಾರದಿಂದ ವಿಶ್ವಮಾತೃಭಾಷಾ ದಿನ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಖಾತ್ಯ ವಾಗ್ಮಿ ವೈ.ವಿ.ಗುಂಡೂರಾವ್ ವೀಡಿಯೋ ಕಾನ್ಫರೆನ್ಸ್‍ನಲ್ಲಿ ಮಾತನಾಡಿ, ಭಾಷೆ ಎಂಬುದು ಹೃದಯ ಹಾಗೂ ಕರುಳಿಗೆ ಸಂಬಂಧಿಸಿರುವುದರಿಂದಲೇ ಅದು ನಮ್ಮ ಮಾತೃಭಾಷೆಯಾಗಿದೆ ಎಂದು ತಿಳಿಸಿದರು.

    ಮಾತೃಭಾಷೆಯ ಮೇಲಿನ ಪ್ರೀತಿಯಿಂದ ಅನ್ಯಭಾಷೆಗಳನ್ನು ದ್ವೇಷಿಸುವುದು ಸರಿಯಲ್ಲ. ಮಾತೃಭಾಷೆಗೆ ತಾಯಿ ಸ್ಥಾನ ನೀಡುವುದರ ಮೂಲಕ ಅದಕ್ಕೆ ಪ್ರಥಮ ಆದ್ಯತೆ ನೀಡಬೇಕು. ಉಳಿದ ಭಾಷೆಗಳು ಕುಟುಂಬದ ಇತರ ಸದಸ್ಯರಿದ್ದಂತೆ. ಹೀಗಾಗಿ ಅವುಗಳ ಮೇಲೆಯೂ ನಾವು ಪ್ರೀತಿ ಇಟ್ಟುಕೊಂಡು ಗೌರವಿಸಬೇಕು ಎಂದರು. ಇದನ್ನೂ ಓದಿ: ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇಗುಲದಲ್ಲಿ ಹುಂಡಿ ಕಾಣಿಕೆ ಎಣಿಕೆ-56 ಲಕ್ಷ ಹಣ ಸಂಗ್ರಹ

    ಕನ್ನಡ ನಾಡಿನಲ್ಲಿ ನೆಲೆಸಿರುವ ಎಲ್ಲರು ಕನ್ನಡಿಗರು. ಮಾತೃಭಾಷೆ ಎಂದರೆ ನೆಲದ ಭಾಷೆ ಎಂದು ನಾವು ಅರ್ಥ ಮಾಡಿಕೊಳ್ಳಬೇಕು. ಕನ್ನಡ ಎಂದರೆ ಕೇವಲ ವರ್ಣಮಾಲೆಯಿಂದ ರೂಪಿತವಾದ ಪದಗಳ ಜೋಡಣೆ ಅಲ್ಲ. ಅದು ನಮ್ಮ ಸಂಸ್ಕೃತಿ ಸಾಹಿತ್ಯ ಹಾಗೂ ಬದುಕು. ಭಾಷೆ ಇರುವುದರಿಂದಲೇ ಜನಪದ ಸಾಹಿತ್ಯ ಸೃಷ್ಟಿಯಾಗಲು ಸಾಧ್ಯವಾಗಿದೆ. ತಾಯಿ ಭಾಷೆಗೆ ಎಂದಿಗೂ ಅಗ್ರಸ್ಥಾನ ನೀಡಬೇಕು ಎಂದರು.

    ಅನ್ಯ ಭಾಷೆಗಳು ಉಚ್ವಾಸದಂತೆ ಇದ್ದು ಕನ್ನಡ ನಿಶ್ವಾಸವಾಗಿರಬೇಕು. ಅಂತಹ ಬದ್ಧತೆ ನಮ್ಮಲ್ಲಿರಬೇಕು. ಮಾತನಾಡುವುದನ್ನೇ ಬರೆಯಲು ಹಾಗೂ ಬರೆಯುವುದನ್ನೇ ಮಾತನಾಡಲು ಸಾಧ್ಯವಿರುವ ಸುಂದರ ಭಾಷೆ ನಮ್ಮ ಕನ್ನಡ. ಹೊಸ ಪದಗಳ ಸೃಷ್ಟಿಯ ಮೂಲಕ ಕನ್ನಡ ಭಾಷೆಗೆ ಕೊಡುಗೆ ನೀಡಿ ಭಾಷಾ ಬೆಳವಣಿಗೆಯ ಕಡೆಗೂ ಗಮನ ನೀಡಬೇಕು. ವಿದ್ಯಾರ್ಥಿಗಳ ದೆಸೆಯಿಂದಲೇ ಈ ರೀತಿ ಕನ್ನಡಿಗರು ಯೋಚಿಸುವಂತಾಗಬೇಕು ಎಂದು ಅಭಿಪ್ರಾಯಪಟ್ಟರು. ಇದನ್ನೂ ಓದಿ: ಜಿಲ್ಲಾಧಿಕಾರಿ ಮನೆ ಆವರಣದಲ್ಲಿನ ಶ್ರೀಗಂಧ ಮರ ಕಳ್ಳತನ

    ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಮಾತನಾಡಿ, ತಾಯಿ ನುಡಿಯಲ್ಲಿ ಉಸಿರಾಡಬೇಕು. ವಿಶ್ವ ಮಾತೃಭಾಷಾ ದಿನ ಎಂದು ಇವತ್ತಿನ ದಿನಕ್ಕೆ ಮಾತ್ರ ಕಾರ್ಯಕ್ರಮ ಸಿಮೀತಗೊಳಿಸುವುದು ಬೇಡ. 3 ತಿಂಗಳ ಕಾಲ ಶಾಲೆಗಳಲ್ಲಿ ಕನ್ನಡವನ್ನು ಪಸರಿಸುವ ಕೆಲಸ ಮಾಡಬೇಕು ಎಂದು ಕನ್ನಡ ಜಾಗೃತಿ ಸಮಿತಿ ಸದಸ್ಯರಿಗೆ ಕರೆ ನೀಡಿದರು.

    ಕಾರ್ಯಕ್ರಮದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಸಂತೋಷ್ ಹಾನಗಲ್ ಉಪಸ್ಥಿತರಿದ್ದರು.

  • ಅಧಿಕೃತ ಕಾರ್ಯಕ್ರಮಗಳಲ್ಲಿ ನ್ಯಾಯಾಲಯಗಳಲ್ಲಿ ಡಾ. ಅಂಬೇಡ್ಕರ್ ಭಾವಚಿತ್ರ ಅಳವಡಿಕೆಗೆ ಹೈಕೋರ್ಟ್ ಆದೇಶ

    ಅಧಿಕೃತ ಕಾರ್ಯಕ್ರಮಗಳಲ್ಲಿ ನ್ಯಾಯಾಲಯಗಳಲ್ಲಿ ಡಾ. ಅಂಬೇಡ್ಕರ್ ಭಾವಚಿತ್ರ ಅಳವಡಿಕೆಗೆ ಹೈಕೋರ್ಟ್ ಆದೇಶ

    ನವದೆಹಲಿ: ಅಧಿಕೃತ ಕಾರ್ಯಕ್ರಮಗಳಲ್ಲಿ ರಾಜ್ಯದ ಎಲ್ಲಾ ನ್ಯಾಯಾಲಯಗಳಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರವನ್ನು ಇಡಲು, ಹೈಕೋರ್ಟ್ ಮುಖ್ಯ ನಾಯಮೂರ್ತಿ ರಿತುರಾಜ್ ಅವಸ್ಥಿ ಅವರ ನೇತೃತ್ವದಲ್ಲಿ ಆಡಳಿತಾತ್ಮಕ ಪೂರ್ಣ ನ್ಯಾಯಾಲಯ ಸಭೆ ನಿರ್ಣಯ ಕೈಗೊಂಡಿದೆ.

    ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರವನ್ನು ನ್ಯಾಯಾಲಯದ ಎಲ್ಲಾ ಅಧಿಕೃತ ಕಾರ್ಯಕ್ರಮಗಳಲ್ಲಿ ಇರಿಸಲು ಕರ್ನಾಟಕ ಹೈಕೋರ್ಟ್‍ನ ರಿಜಿಸ್ಟ್ರಾರ್ ಜನರಲ್ ಸುತ್ತೋಲೆ ಹೊರಡಿಸಿದ್ದಾರೆ. ಗಣರಾಜ್ಯೋತ್ಸವದ ಅಂಗವಾಗಿ ರಾಯಚೂರಿನ ಜಿಲ್ಲಾ ನ್ಯಾಯಾಲಯದ ಸಂಕೀರ್ಣದಲ್ಲಿ ಆಯೋಜಿಸಿದ್ದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರ ಇರಿಸುವುದರ ಸುತ್ತ ಉಂಟಾದ ಗೊಂದಲಗಳ ಕುರಿತು ವಕೀಲರು ಹಾಗೂ ಕೆಲ ಸಂಘಟನೆಗಳು ರಾಜ್ಯ ಹೈಕೋರ್ಟ್‍ಗೆ ಮನವಿ ಸಲ್ಲಿಸಿದ್ದು, ಇದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ವರದಿ ಕೇಳಿತ್ತು. ಇದನ್ನೂ ಓದಿ: ಗೋವಾ ಚುನಾವಣೆಯಲ್ಲಿ ಬಿಜೆಪಿ – ಕಾಂಗ್ರೆಸ್ ನೇರ ಪೈಪೋಟಿ: ರಾಹುಲ್ ಗಾಂಧಿ

    ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ನೇತೃತ್ವದಲ್ಲಿ ಶುಕ್ರವಾರ ನಡೆದ ಆಡಳಿತಾತ್ಮಕ ಪೂರ್ಣ ನ್ಯಾಯಾಲಯದ ಸಭೆಯಲ್ಲಿ ಈ ಕುರಿತು ನಿರ್ಣಯ ಕೈಗೊಳ್ಳಲಾಗಿದ್ದು, ರಾಜ್ಯದ ಎಲ್ಲಾ ನ್ಯಾಯಾಲಯಗಳಲ್ಲಿ ಆಯೋಜಿಸಲಾಗುವ ಅಧಿಕೃತ ಕಾರ್ಯಕ್ರಮಗಳಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಭಾವಚಿತ್ರವಿಡಲು ಕ್ರಮ ಕೈಗೊಳ್ಳುವಂತೆ ಆಯಾ ನ್ಯಾಯಾಲಯಗಳ ಮುಖ್ಯಸ್ಥರಿಗೆ ಸೂಚಿಸಲಾಗಿದೆ. ಇದನ್ನೂ ಓದಿ: ಕನ್ನಡದ ಕಬೀರ, ಪದ್ಮಶ್ರೀ ಪುರಸ್ಕೃತ  ಇಬ್ರಾಹಿಂ ಸುತಾರ ನಿಧನ

    ಸುತ್ತೋಲೆಯಲ್ಲಿ ಏನಿದೆ?: ಗಣರಾಜ್ಯೋತ್ಸವ, ಸ್ವಾತಂತ್ರ್ಯೋತ್ಸವ ಹಾಗೂ ಸಂವಿಧಾನ ದಿನ ಸೇರಿದಂತೆ ಎಲ್ಲ ಅಧಿಕೃತ ಕಾರ್ಯಕ್ರಮಗಳಲ್ಲಿ ಅಂಬೇಡ್ಕರ್ ಅವರ ಭಾವಚಿತ್ರವನ್ನು ಹೈಕೋರ್ಟ್‍ನ ಬೆಂಗಳೂರಿನಲ್ಲಿರುವ ಪ್ರಧಾನ ಪೀಠ, ಧಾರವಾಡ ಮತ್ತು ಕಲಬುರ್ಗಿ ಪೀಠಗಳು ಹಾಗೂ ರಾಜ್ಯದ ಎಲ್ಲಾ ಜಿಲ್ಲಾ ಮತ್ತು ತಾಲ್ಲೂಕು ನ್ಯಾಯಾಲಯಗಳಲ್ಲಿ ಇರಿಸಲು ನಿರ್ಧರಿಸಲಾಗಿದೆ ಎಂದು ರಿಜಿಸ್ಟ್ರಾರ್ ಜನರಲ್ ಟಿ.ಜಿ.ಶಿವಶಂಕರೇಗೌಡ ಅವರು ಹೊರಡಿಸಿರುವ ಸುತ್ತೋಲೆಯಲ್ಲಿ ತಿಳಿಸಲಾಗಿದೆ.

    ಈ ಕುರಿತಾಗಿ ಮಾತನಾಡಿದ ಕರ್ನಾಟಕ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಟಿ.ಜಿ.ಶಿವಶಂಕರೇಗೌಡಾ ಅವರು, ಡಾ. ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರವನ್ನು ನ್ಯಾಯಾಂಗ ಇಲಾಖೆಯ ಕಾರ್ಯಕ್ರಮಗಳಲ್ಲಿ ಇಡುವುದಕ್ಕೆ ಸಂಬಂಧಿಸಿದ ಪ್ರಕರಣವು ಪೂರ್ಣ ನ್ಯಾಯಾಲಯದ ಮುಂದೆ ಪರಿಗಣನೆಗೆ ಬಾಕಿ ಇದೆ. ಅನುಮೋದನೆ ದೊರೆತ ಬಳಿಕ ಅಧಿಕೃತವಾಗಿ ಗಾಂಧೀಜಿ ಅವರ ಭಾವಚಿತ್ರದ ಜೊತೆಗೆ ಅಂಬೇಡ್ಕರ್ ಅವರ ಭಾವಚಿತ್ರ ಇಡುವುದು ಕಡ್ಡಾಯವಾಗಲಿದೆ ಎಂದು ಹೇಳಿದ್ದಾರೆ.

    ಸರ್ಕಾರದ ಸುತ್ತೋಲೆಗಳನ್ನು ನ್ಯಾಯಾಂಗ ಅಳವಡಿಸಿಕೊಂಡ ಮೇಲೆ ಅದು ಇಲ್ಲಿಗೆ ಅನ್ವಯಿಸುತ್ತದೆ. ಮುಖ್ಯ ನ್ಯಾಯಮೂರ್ತಿಯವರ ನೇತೃತ್ವದಲ್ಲಿ ಹೈಕೋರ್ಟ್ ಪೂರ್ಣಪೀಠವು ಈ ಪ್ರಕ್ರಿಯೆ ಕೈಗೊಳ್ಳುತ್ತದೆ. ಆನಂತರ ಸಂಬಂಧಪಟ್ಟ ಎಲ್ಲರಿಗೂ ಸುತ್ತೋಲೆಯನ್ನು ಕಳುಹಿಸಿಕೊಡಲಾಗುತ್ತದೆ ಎಂದು ತಿಳಿಸಿದ್ದಾರೆ.

  • ಮುಖ್ಯಮಂತ್ರಿಗಳ ಕಾರ್ಯಕ್ರಮದಲ್ಲಿ ಕನ್ನಡ ಮಾಯ

    ಮುಖ್ಯಮಂತ್ರಿಗಳ ಕಾರ್ಯಕ್ರಮದಲ್ಲಿ ಕನ್ನಡ ಮಾಯ

    ಬೆಂಗಳೂರು: ನಗರದ ರಾಜೀವ್ ಗಾಂಧಿ ಎದೆರೋಗ ಸಂಸ್ಥೆಯ ಮಾಡ್ಯೂಲರ್ ಆಸ್ಪತ್ರೆಯನ್ನು ಸಿಎಂ ಬಸವರಾಜ ಬೊಮ್ಮಾಯಿ ಅವರು ಉದ್ಘಾಟನೆ ಮಾಡಿದರು. ಆರೋಗ್ಯ ಇಲಾಖೆಯ ಈ ಅಧಿಕೃತ ಕಾರ್ಯಕ್ರಮದಲ್ಲಿ ಕನ್ನಡವನ್ನು ಕಡೆಗಣಿಸಲಾಗಿದೆ.

    bommai

    ರಾಜೀವ್ ಗಾಂಧಿ ಆರೋಗ್ಯ ಸಂಸ್ಥೆಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಮಾಡ್ಯೂಲರ್ ಆಸ್ಪತ್ರೆ ಉದ್ಘಾಟನಾ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಕೇಂದ್ರ ಸಚಿವ ಮನ್‌ಸುಖ್ ಮಾಂಡವೀಯ ಆಗಮಿಸಿದ್ದರು. ಈ ವೇಳೆ ಕೋವಿಡ್ ಆಸ್ಪತ್ರೆ ಅಡಿಗಲ್ಲಿನಲ್ಲಿ ಕನ್ನಡದ ಯಾವುದೇ ಬರಹಗಳು ಕಂಡಿಲ್ಲ. ಅಡಿಗಲ್ಲು ಪೂರ್ತಿ ಆಂಗ್ಲ ಪದಗಳಲ್ಲಿ ಬರೆಯಲಾಗಿದೆ. ಅಲ್ಲದೇ ಈ ಹಿಂದೆ ಮೆಟ್ರೋ ಉದ್ಘಾಟನಾ ಕಾರ್ಯಕ್ರದಲ್ಲಿಯೂ ಕನ್ನಡವನ್ನು ಕಡೆಗಣಿಸಲಾಗಿತ್ತು. ಈ ವಿಚಾರ ಬಹಳಷ್ಟು ಟೀಕೆಗಳಿಗೆ ಕಾರಣವಾಗಿತ್ತು. ಇದೀಗ ಸಿಎಂ ಕಾರ್ಯಕ್ರದಲ್ಲಿ ಮತ್ತದೇ ಯಡವಟ್ಟು ಸಂಭವಿಸಿದೆ.  ಇದನ್ನೂ ಓದಿ: ಬೆಂಗಳೂರು ಉಸ್ತುವಾರಿಗಾಗಿ ಸೋಮಣ್ಣ-ಅಶೋಕ್ ಮಧ್ಯೆ ಕೋಲ್ಡ್ ವಾರ್ – ಸಿಎಂಗೆ ಸಂಕಟ

    bommai

    ಮಾಡ್ಯೂಲರ್ ಆಸ್ಫತ್ರೆ ಉದ್ಘಾಟನಾ ಸಮಾರಂಭದಲ್ಲಿ ಕೇಂದ್ರ ಸಚಿವ ಮನ್‌ಸುಖ್ ಮಾಂಡವೀಯ ಮತ್ತು ಬಸವರಾಜ್ ಬೊಮ್ಮಾಯಿ, ಸಚಿವ ಕೆ.ಸುಧಾಕರ್ ಮತ್ತು ಸ್ಥಳೀಯ ಶಾಸಕ ಉದಯ್ ಗರುಡಾಚಾರ್ ಪಾಲ್ಗೊಂಡಿದ್ದರು. ಇದನ್ನೂ ಓದಿ: ಜೆಡಿಎಸ್ ಬಗ್ಗೆ ಮಾತನಾಡದಿದ್ದರೆ ಸಿದ್ದರಾಮಯ್ಯಗೆ ನಿದ್ದೆ ಬರಲ್ಲ: ಹೆಚ್‍ಡಿ ಕುಮಾರಸ್ವಾಮಿ

    bommai

    ಈ ವೇಳೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಬೊಮ್ಮಾಯಿ ಅವರು, ಈ ಮಾಡ್ಯೂಲರ್ ಆಸ್ಪತ್ರೆ ಎಲ್ಲಿ ಬೇಕಾದರೂ ಮಾಡಬಹುದು, ಈ ಥರ ಮಾಡ್ಯುಲ್ ಆಸ್ಪತ್ರೆ ಪ್ರತಿಯೊಂದು ಜಿಲ್ಲೆಯಲ್ಲಿ ಮಾಡುವುದಕ್ಕೆ ಮುಂದಾಗುತ್ತೇವೆ. ಆದರೆ ಸ್ವಲ್ಪ ತೊಂದರೆಯಿಂದ ನರ್ಸ್, ಡಾಕ್ಟರ್ ಮತ್ತೆ ವೈದ್ಯಕೀಯ ಸಿಬ್ಬಂದಿಯನ್ನು ನಿಯೋಜನೆ ಮಾಡಿಕೊಂಡು ಪ್ರತಿಯೊಂದು ಜಿಲ್ಲೆಯಲ್ಲಿ ಮಾಡ್ಯುಲರ್ ಆಸ್ಪತ್ರೆ ನಿರ್ಮಾಣ ಮಾಡುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: ದಕ್ಷಿಣ ಕನ್ನಡದಲ್ಲಿ ನಿಲ್ಲದ ಪುಂಡರ ಕುಚೇಷ್ಟೆ – ಕಾರಿನಲ್ಲಿ ಹೋಗ್ತಿದ್ದ ದಂಪತಿಗೆ ಅಡ್ಡಗಟ್ಟಿ ಧಮ್ಕಿ

    bommai

    ಇದೇ ವೇಳೆ, ಎಲ್ಲಕಿಂತ ಮನುಷ್ಯ ಗುಣ ಉಪಕಾರ ಸ್ಮರಣೆ. ಅವರು ನಮಗೆ ಉಪಕಾರ ಸ್ಮರಣೆ ಮಾಡಿದ್ದರೆ, ನಾವು ಅವರಿಗೆ ಉಪಕಾರ ಸ್ಮರಣೆ ಮಾಡಬೇಕು. ವ್ಯಾಪಾರದಲ್ಲಿ ಬ್ಯಾಲೆನ್ಸ್ ಶೀಟ್ ಇರುತ್ತದೆ. ಅದೇ ರೀತಿ ಮನುಷ್ಯನ ಬದುಕಲ್ಲಿ ಬ್ಯಾಲೆನ್ಸ್ ಶೀಟ್ ಇರುತ್ತದೆ. ತಂದೆ ತಾಯಿ ಗುರುಗಳ ಉಪಕಾರ ಕ್ರೆಡಿಟ್ ಆಗಿರುತ್ತದೆ. ಇದರಿಂದ ನಾವು ಬೆಳೆಯಬೇಕು, ನಾವು ಬೆಳೆದ ನಂತರ ನಾವು ಸಮಾಜಕ್ಕೆ ಡೆಬಿಟ್ ಮಾಡಬೇಕು. ಈ ಸಮಾಜ ದೇವರ ಸೃಷ್ಟಿ, ಅದಕ್ಕೆ ನಾವು ಸೇವೆ ಮಾಡಬೇಕು. ಸಾಧಕನು ಸಾವಿನ ನಂತರವೂ ಬದುಕುವುದು ಅವನ ಸಾಧನೆಯಿಂದ ಅಂತ ವಿವೇಕಾನಂದರು ತಿಳಿಸಿದ್ದಾರೆ. ಇಂತಹ 20 ಮಾಡ್ಯೂಲರ್ ಆಸ್ಪತ್ರೆ ಮಾಡಬೇಕು. ಪ್ರತಿ ಜಿಲ್ಲೆಯಲ್ಲಿ ಇದು ಆಗಬೇಕು. ಪ್ಯಾರಾ ಮೆಡಿಕಲ್ ಸ್ಟಾಫ್ ಸೇರಿದಂತೆ ವೈದ್ಯರ ಅವಶ್ಯಕತೆ ಇದೆ. ಅವಶ್ಯಕತೆ ತುಂಬಿದ ನಂತರ ಇವೆಲ್ಲವನ್ನು ಮಾಡುತ್ತೇವೆ ಎಂದು ನುಡಿದಿದ್ದಾರೆ.

    ಕೇಂದ್ರ ಸಚಿವರಾದ ಮನ್‌ಸುಖ್‌ ಅವರು ಮೋದಿ ಅವರ ಸರ್ಕಾರದಲ್ಲಿ ಆರೋಗ್ಯ ಮಂತ್ರಿಯಾಗಿ ಉತ್ತಮವಾದ ಕೆಲಸ ಮಾಡುತ್ತಿದ್ದಾರೆ. ಕೋವಿಡ್‌ನಂತ ಭೀಕರ ಸಂದರ್ಭದಲ್ಲಿ ಗಟ್ಟಿ ನಿರ್ಧಾರ ಮಾಡಿ ಜನರನ್ನು ಉಳಿಸುವ ಕೆಲಸ ಮಾಡಿದ್ದರು. ಮೋದಿ ಹಾಗೂ ಕೇಂದ್ರ ಸಚಿವರಿಗೆ ಧನ್ಯವಾದಗಳು. ಹುಬ್ಬಳ್ಳಿ ಧಾರವಾಡ ಸೇರಿದಂತೆ ಎಲ್ಲಾ ಕಡೆ ಈ ಕೆಲಸ ಮಾಡಿ, ನಾವು ಜಾಗ ಕೊಡುತ್ತೇವೆ ಎಂದು ಹೇಳಿದ್ದಾರೆ.