Tag: ಕಾರ್ಯಕರ್ತ

  • ಸಚಿವರಿಂದ ನನಗೆ ಕಿರುಕುಳ – ಬಿಜೆಪಿ ಕಾರ್ಯಕರ್ತ ಆತ್ಮಹತ್ಯೆಗೆ ಶರಣು

    ಸಚಿವರಿಂದ ನನಗೆ ಕಿರುಕುಳ – ಬಿಜೆಪಿ ಕಾರ್ಯಕರ್ತ ಆತ್ಮಹತ್ಯೆಗೆ ಶರಣು

    ಕಲಬುರಗಿ: ಸಚಿವ ಶರಣಪ್ರಕಾಶ್ ಪಾಟೀಲ್ ಅವರಿಂದ ಕಿರುಕುಳಕ್ಕೊಳಗಾಗಿರುವುದಾಗಿ ಆರೋಪಿಸಿ ಬಿಜೆಪಿ (BJP) ಕಾರ್ಯಕರ್ತ (Activist) ಆತ್ಮಹತ್ಯೆಗೆ (Suicide) ಶರಣಾಗಿರುವ ಘಟನೆ ಕಲಬುರಗಿ (Kalaburagi) ಜಿಲ್ಲೆಯ ಚಿಂಚೋಳಿ (Chincholi) ತಾಲೂಕಿನ ಶಿರೋಳ್ಳಿ ಗ್ರಾಮದಲ್ಲಿ ನಡೆದಿದೆ.

    ಶಿವಕುಮಾರ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಬಿಜೆಪಿ ಕಾರ್ಯಕರ್ತ. ನನ್ನ ಸಂಬಂಧಿ ನರಸಪ್ಪ ಎಂಬವರ ಹೊಲಕ್ಕೆ ಹೋಗಿ ಕೈ ಕಾರ್ಯಕರ್ತರು ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ಕಾಂಗ್ರೆಸ್ (Congress) ಕಾರ್ಯಕರ್ತರ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದೇನೆ ಎಂದು ಆತ್ಮಹತ್ಯೆಗೂ ಮುನ್ನ ಶಿವಕುಮಾರ್ ಮೂರು ಆಡಿಯೋದಲ್ಲಿ ಹೇಳಿದ್ದಾರೆ. ಇದನ್ನೂ ಓದಿ: ಯಾವುದೇ ಅಪರಾಧ ಮಾಡಿಲ್ಲ, ಹಾಗಾಗಿ ಟ್ರಬಲ್ ಇಲ್ಲ: ಡಿಕೆ ಸುರೇಶ್

    ಆತ್ಮಹತ್ಯೆಗೂ ಮುನ್ನ ಮೂರು ಆಡಿಯೋ (Audio) ರೆಕಾರ್ಡ್ ಮಾಡಿರುವ ಶಿವಕುಮಾರ್ ತನ್ನ ಸಾವಿಗೆ ಸಚಿವ ಶರಣಪ್ರಕಾಶ್ ಪಾಟೀಲ್ ನೇರ ಕಾರಣ ಎಂದು ಆರೋಪಿಸಿದ್ದಾರೆ. ನಾನು ಹಿಂದೂ ಹುಲಿಯಾಗಿದ್ದೇನೆ, ಹಿಂದೂ ಹುಲಿಯಾಗಿಯೇ ಸಾಯುತ್ತೇನೆ. ಹಿಂದೂ ಧರ್ಮದ ಬಗ್ಗೆ ಎಲ್ಲಿಯೂ ಮಾತನಾಡಬಾರದು. ಮಾತಾಡಿದರೆ ಇವರಿಗೆ ಬೆಂಕಿ ಬಿಳುತ್ತದೆ. ಹಾಗಾಗಿ ನನ್ನ ಸಾವಿಗೆ ಕಾಂಗ್ರೆಸ್ ಕಾರ್ಯಕರ್ತರು, ಸಚಿವ ಶರಣಪ್ರಕಾಶ್ ಪಾಟೀಲ್ (Sharanprakash Patil) ಕಾರಣ ಎಂದು ಆರೋಪಿಸಿ ಆಡಿಯೋ ರೆಕಾರ್ಡ್ ಮಾಡಿ ಕಳುಹಿಸಿದ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಜೆಡಿಎಸ್‌ನಿಂದ ಸಿಎಂ ಇಬ್ರಾಹಿಂ ಉಚ್ಛಾಟನೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ದಯವಿಟ್ಟು ರಾಜೀನಾಮೆ ವಾಪಸ್ ಪಡೆಯಿರಿ- ಬಿಜೆಪಿ ಕಾರ್ಯಕರ್ತರಲ್ಲಿ ರೇಣುಕಾಚಾರ್ಯ ಮನವಿ

    ದಯವಿಟ್ಟು ರಾಜೀನಾಮೆ ವಾಪಸ್ ಪಡೆಯಿರಿ- ಬಿಜೆಪಿ ಕಾರ್ಯಕರ್ತರಲ್ಲಿ ರೇಣುಕಾಚಾರ್ಯ ಮನವಿ

    ಬೆಂಗಳೂರು: ಬಿಜೆಪಿ ಯುವ ಮೋರ್ಚಾ ಸದಸ್ಯ ಪ್ರವೀಣ್ ಕುಮಾರ್ ನೆಟ್ಟಾರು ಹತ್ಯೆ ಬಳಿಕ ಕಾರ್ಯಕರ್ತರು ಸರ್ಕಾರದ ವಿರುದ್ಧ ರೊಚ್ಚಿಗೆದ್ದಿದ್ದು, ನಮ್ಮ ಪಕ್ಷದಲ್ಲಿಯೇ ನಮಗೆ ರಕ್ಷಣೆ ಇಲ್ಲ ಎಂದು ಹೇಳಿ ರಾಜೀನಾಮೆ ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಶಾಸಕ ಎಂ.ಪಿ ರೇಣುಕಾಚಾರ್ಯ ಇದೀ ಪಕ್ಷದ ಕಾರ್ಯಕರ್ತರಲ್ಲಿ ಮನವಿ ಮಾಡಿದ್ದಾರೆ.

    ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ರೇಣುಕಾಚಾರ್ಯ, ಎಬಿವಿಪಿ ಯುವಕರು, ಹಿಂದೂ ಸಂಘಟನೆಗಳು, ಪಕ್ಷದ ಕಾರ್ಯಕರ್ತರಲ್ಲಿ ಕಳಕಳಿಯ ಮನವಿ ಮಾಡುತ್ತೇನೆ. ಪ್ರವೀಣ್ ಹತ್ಯೆ ಮಾಡಿದವರಿಗೆ ಕ್ರಮ ಕೈಗೊಳ್ಳುತ್ತೇವೆ. ಈಗಾಗಲೇ ಪ್ರವೀಣ್ ಹತ್ಯೆ ಪ್ರಕರಣ ರಾಷ್ಟ್ರೀಯ ತನಿಖಾ ತಂಡಕ್ಕೆ ವಹಿಸಿದ್ದಾರೆ. ಇದನ್ನೂ ಓದಿ: ಯಾರೋ ಇಬ್ಬರು ರಾಜೀನಾಮೆ ನೀಡ್ತಾರೆ ಅಂದಾಕ್ಷಣ ಪಕ್ಷವೇ ಮುಳುಗಿ ಹೋಗಲ್ಲ: ಸಂಸದ ಸಿದ್ದೇಶ್ವರ

    ಕಳೆದ ಮೂರ್ನಾಲ್ಕು ದಿನದಿಂದ ಮುಖ್ಯಮಂತ್ರಿಗಳು ನೋವಿನಲ್ಲಿದ್ದಾರೆ. ಯಾರೂ ಕೂಡ ಆತ್ಮಸ್ಥೈರ್ಯ ಕಳೆದುಕೊಳ್ಳಬೇಡಿ. ಕಾಂಗ್ರೆಸ್ ಸರ್ಕಾರ ಇದ್ದಾಗ ಮೂವತ್ತಕ್ಕೂ ಹೆಚ್ಚು ಹಿಂದುಗಳ ಹತ್ಯೆಯಾಗಿದೆ. ಕಳೆದ ಮೂರ್ನಾಲ್ಕು ದಿನದಿಂದ ಸಿಎಂ ಕಣ್ಣೀರು ಹಾಕುತ್ತಿದ್ದಾರೆ. ನಾನು ರಾಜೀನಾಮೆ ಕೊಡುತ್ತೇನೆ ಎಂದು ಹೇಳಿದಾಗ ನೀವು ಸರ್ಕಾರದ ಒಂದು ಭಾಗ ನೀವು ನಮ್ಮ ಜೊತೆ ಗಟ್ಟಿಯಾಗಿ ನಿಲ್ಲಬೇಕು ಎಂದು ಮುಖ್ಯಮಂತ್ರಿ ಹೇಳಿದ್ದಾರೆ.

    ಸಂಘಪರಿವಾರದವರು, ಮುಖಂಡರು ರಾಜೀನಾಮೆ ಕೊಡಬಾರದೆಂದು ಹೇಳಿದ್ದಾರೆ. ಯಾರು ಸಮಾಜಘಾತುಕ ಶಕ್ತಿಗಳಿದ್ದಾರೋ ಅವರಿಗೆ ಉತ್ತರಪ್ರದೇಶದ ಮಾದರಿಯಲ್ಲಿ ಕ್ರಮ ಜರುಗಿಸಲಾಗುವುದು. ಸಮಾಜಘಾತುಕ ಶಕ್ತಿಗಳನ್ನು ಎನ್ಕೌಂಟರ್ ಮಾಡುವುದರ ಜೊತೆಗೆ ಅವರ ಕುಟುಂಬದ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಬೇಕು.

    “ಕಾರ್ಯಕರ್ತರೆ ಪಕ್ಷದ ಶಕ್ತಿ” ನಾನು ಕಾರ್ಯಕರ್ತರಲ್ಲಿ ಅತ್ಯಂತ ವಿನಯದಿಂದ ಮನವಿ ಮಾಡುತ್ತೇನೆ. ರಾಜೀನಾಮೆಯನ್ನು ವಾಪಸ್ ಪಡೆಯಬೇಕು, ನಾವು ನಿಮ್ಮೊಂದಿಗಿದ್ದೇವೆ ಎಂದು ಮನವಿ ಮಾಡುತ್ತೇನೆ ಎಂದು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸಾವಿನಲ್ಲಿಯೂ ಸಾರ್ಥಕತೆ ಮೆರೆದ ಆರ್‌ಎಸ್‌ಎಸ್ ಕಾರ್ಯಕರ್ತ

    ಸಾವಿನಲ್ಲಿಯೂ ಸಾರ್ಥಕತೆ ಮೆರೆದ ಆರ್‌ಎಸ್‌ಎಸ್ ಕಾರ್ಯಕರ್ತ

    ಬೆಳಗಾವಿ: ಕುಂದಾನಗರಿಯ ಹನುಮಾನ ನಗರದ ಆರ್‌ಎಸ್‌ಎಸ್ ಕಾರ್ಯಕರ್ತರೊಬ್ಬರು ಸಾವಿನಲ್ಲಿಯೂ ಸಾರ್ಥಕತೆ ಮೆರೆದಿದ್ದು, ತಮ್ಮ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ.

    ನಗರದ ಮಹಾಬಳೇಶ್ವರ ನಗರದ ನಿವಾಸಿ ಉಮೇಶ ಬಸವಣ್ಣಿ ದಂಡಗಿ ಎಂಬುವವರ ಮಿದುಳು ನಿಷ್ಕ್ರಿಯಗೊಂಡಿತ್ತು. ಇದರಿಂದ ಆತನ ಕುಟುಂಬಸ್ಥರು ಅಂಗಾಗ ದಾನ ಮಾಡಲು ಮುಂದಾಗಿದ್ದಾರೆ. ಈ ಮೂಲಕ ನಾಲ್ವರ ಜೀವ ಉಳಿಸಿ ಅಂಧರಿಬ್ಬರ ಬಾಳಿಗೆ ಬೆಳಕಾಗಿದ್ದಾರೆ. ಇದನ್ನೂ ಓದಿ: ಫ್ಯಾನ್ಸ್ ಒತ್ತಾಯದ ಮೇರೆಗೆ ವಿಷ್ಣುದಾದ ಇತಿಹಾಸ ಬರೆದ ಮೂವೀ ರೀ-ರಿಲೀಸ್ 

     ನಿನ್ನೆ ತಡರಾತ್ರಿ ಮನೆಯಲ್ಲಿ ಆಕಸ್ಮಿಕವಾಗಿ ಬಿದ್ದು ತಲೆಗೆ ಗಂಭೀರ ಗಾಯವಾಗಿತ್ತು. ಈ ವೇಳೆ ಅವರನ್ನು ಬೆಳಗಾವಿಯ ಕೆಎಲ್‍ಇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಕೊನೆಯುಸಿರೆಳೆದಿದ್ದಾರೆ. ಈ ವೇಳೆ ಅವರ ಅಂಗಾಂಗಗಳನ್ನು ಝೀರೋ ಟ್ರಾಫಿಕ್‍ನಲ್ಲಿ ರವಾನೆ ಮಾಡಲಾಗಿದೆ. ಇದನ್ನೂ ಓದಿ: ಅಪ್ಪು ಹುಟ್ಟು ಹಬ್ಬಕ್ಕೆ ನೇತ್ರದಾನದ ವಾಗ್ದಾನ

    ಕೆಎಲ್‍ಇ ಆಸ್ಪತ್ರೆಯಲ್ಲೇ ಇರುವ ರೋಗಿಗೆ ಹೃದಯ ದಾನ ಮಾಡಿದ್ದಾರೆ. ಕೆಎಲ್‍ಇ ಆಸ್ಪತ್ರೆಯಿಂದ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಝೀರೋ ಟ್ರಾಫಿಕ್‍ನಲ್ಲಿ ತೆರಳಿ ವಿಮಾನದ ಮೂಲಕ ಬೆಂಗಳೂರಿಗೆ ಲಿವರ್ ರವಾನೆ ಮಾಡಲಾಗಿದೆ. ಧಾರವಾಡದ ಎಸ್‍ಡಿಎಂ ಆಸ್ಪತ್ರೆಗೆ ಒಂದು ಕಿಡ್ನಿ, ಹುಬ್ಬಳ್ಳಿ ತತ್ವದರ್ಶ ಆಸ್ಪತ್ರೆಗೆ ಮತ್ತೊಂದು ಕಿಡ್ನಿಯನ್ನು ಅಂಬುಲೆನ್ಸ್ ಮೂಲಕ ರವಾನೆ ಮಾಡಲಾಗಿದೆ. ಝೀರೋ ಟ್ರಾಫಿಕ್‍ನಲ್ಲಿಯೇ ಧಾರವಾಡ, ಹುಬ್ಬಳ್ಳಿಗೆ ಎರಡು ಪ್ರತ್ಯೇಕ ಅಂಬುಲೆನ್ಸ್‌ಗಳಲ್ಲಿ ಕಿಡ್ನಿ ರವಾನೆ ಮಾಡಲಾಯಿತು.

  • ದೇವರಹಿಪ್ಪರಗಿ ಬಿಜೆಪಿ ಶಾಸಕನ ಜೊತೆಗೆ ವಾಗ್ವಾದ – ನಮಗೆ ಸ್ಪಂದಿಸ್ತಿಲ್ಲ ಎಂದು ಕಾರ್ಯಕರ್ತರ ಆಕ್ರೋಶ

    ದೇವರಹಿಪ್ಪರಗಿ ಬಿಜೆಪಿ ಶಾಸಕನ ಜೊತೆಗೆ ವಾಗ್ವಾದ – ನಮಗೆ ಸ್ಪಂದಿಸ್ತಿಲ್ಲ ಎಂದು ಕಾರ್ಯಕರ್ತರ ಆಕ್ರೋಶ

    ವಿಜಯಪುರ: ದೇವರಹಿಪ್ಪರಗಿ ಮತಕ್ಷೇತ್ರದ ಬಿಜೆಪಿಯಲ್ಲಿ ಆಂತರಿಕ ಕಲಹ ಸ್ಫೋಟವಾಗಿದೆ.

    ದೇವರಹಿಪ್ಪರಗಿ ಕ್ಷೇತ್ರದ ಬಿಜೆಪಿ ಶಾಸಕ ಸೋಮನಗೌಡ ಪಾಟೀಲ್ ಸಾಸನೂರ ಹಾಗೂ ಬಿಜೆಪಿ ಮಂಡಳ ಉಪಾಧ್ಯಕ್ಷ ಹಾಗೂ ಶಾಸಕರ ಬೆಂಬಲಿಗರ ನಡುವೆ ನಡುರಸ್ತೆಯಲ್ಲೆ ವಾಗ್ವಾದ ನಡೆದಿದೆ. ಮಂಗಳವಾರ ಸಂಜೆ ಈ ಘಟನೆ ನಡೆದಿದೆ. ಇದನ್ನೂ ಓದಿ: ಮಂಗಳೂರು ಕಾಂಗ್ರೆಸ್ ಸಭೆಯಲ್ಲಿ ಹೈಡ್ರಾಮಾ – ಸದಸ್ಯರನ್ನೇ ಹೊರಹಾಕಿದ ನಾಯಕರು

    ವಾಗ್ವಾದದ ನಂತರ ಕೈ ಕೈ ಮೀಲಾಯಿಸೋ ಹಂತಕ್ಕೂ ಹೋಗಿದೆ. ಶಾಸಕ ಸೋಮನಗೌಡ ಸ್ಥಳೀಯ ಬಿಜೆಪಿ ಕಾರ್ಯಕರ್ತರನ್ನು ಪರಿಗಣನೆಗೆ ತೆಗೆದುಕೊಳ್ಳುತ್ತಿಲ್ಲ. ನಮ್ಮ ಕರೆಗಳನ್ನು ಸ್ವೀಕರಿಸಲ್ಲ ಎಂದು ಮುತ್ತುರಾಜ ಆರೋಪ ಮಾಡಿದ್ದಾನೆ. ಬಿಜೆಪಿ ಮಂಡಲ ಉಪಾಧ್ಯಕ್ಷ ಮುತ್ತುರಾಜ ಹಾಲಿಹಾಳನ ಈ ಮಾತಿಗೆ ಶಾಸಕರ ಬೆಂಬಲಿಗರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆಗ ಪರಸ್ಪರ ಮಾತಿನ ಚಕಮಕಿ, ವಾಗ್ವಾದ ನಡೆದಿದೆ.

    ಕೆಲಕಾಲ ಸಹನೆ ಕಳೆದುಕೊಂಡ ಶಾಸಕ ಸೋಮನಗೌಡ ಪಾಟೀಲ್ ಸಾಸನೂರ ಕೂಡ ವಾಗ್ವಾದಕ್ಕೆ ಇಳಿದಿದ್ದಾರೆ. ನಂತರ ಪರಿಸ್ಥಿತಿಯನ್ನು ಸ್ಥಳದಲ್ಲಿದ್ದ ಮುಖಂಡರು ತಿಳಿಗೊಳಿಸಿದ್ದಾರೆ. ಇದನ್ನೂ ಓದಿ: ಮುದ್ದಿನ ಮಗಳು ಸಮನ್ವಿಯ ಲಾಸ್ಟ್ ಕಿಸ್ ಹಂಚಿಕೊಂಡ ನಟಿ ಅಮೃತಾ

  • ಬೆಲೆ ಏರಿಕೆಗೆ ಬಿಜೆಪಿ ಕಾರ್ಯಕರ್ತನಿಂದಲೇ ಆಕ್ರೋಶ- ಬೂತ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ

    ಬೆಲೆ ಏರಿಕೆಗೆ ಬಿಜೆಪಿ ಕಾರ್ಯಕರ್ತನಿಂದಲೇ ಆಕ್ರೋಶ- ಬೂತ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ

    – ಬಿಜೆಪಿ ಕಾರ್ಯಕರ್ತನಿಂದಲೇ ಬಿಜೆಪಿಗೆ ಮುಖಭಂಗ

    ಶಿವಮೊಗ್ಗ: ಬೆಲೆ ಏರಿಕೆ ಖಂಡಿಸಿ ಬಿಜೆಪಿ ಬೂತ್ ಅಧ್ಯಕ್ಷ ಶೇಖರ್ ಅವರು ನಾಮಫಲಕ ತಿರಸ್ಕಾರ ಮಾಡಿ, ಸ್ಥಳದಲ್ಲೇ ಪಕ್ಷಕ್ಕೆ ರಾಜೀನಾಮೆ ನೀಡಿದ ಘಟನೆ ನಡೆದಿದೆ. ಈ ಮೂಲಕ ಬಿಜೆಪಿ ಕಾರ್ಯಕರ್ತರಿಂದಲೇ ಪಕ್ಷಕ್ಕೆ ಮುಖಭಂಗ ಆದಂತಾಗಿದೆ.

    ನಗರದ ಅಶೋಕನಗರದಲ್ಲಿ ಬಿಜೆಪಿ ವತಿಯಿಂದ ವಾರ್ಡ್ ಅಧ್ಯಕ್ಷರ ಮನೆ ಬಾಗಿಲಿಗೆ ತೆರಳಿ ನಾಮಫಲಕವನ್ನು ವಿತರಿಸುವ ಕಾರ್ಯಕ್ರಮ ನಡೆಯುತ್ತಿತ್ತು. ವಾರ್ಡ್ ನಂ.26ರ ಬೂತ್ ಸಂಖ್ಯೆ 199ರ ಅಧ್ಯಕ್ಷರಾಗಿದ್ದ ಶೇಖರ್ ಅವರ ಮನೆಗೆ ನಾಮಫಲಕವನ್ನು ನೀಡುವ ಉದ್ದೇಶದಿಂದ ಬಿಜೆಪಿ ಮುಖಂಡರು ತೆರಳಿದ್ದರು. ಈ ಸಮಯದಲ್ಲಿ ನಾಮಫಲಕವನ್ನು ತಿರಸ್ಕಾರ ಮಾಡುವುದರ ಜೊತೆಗೆ ನಾಮಫಲಕ ನೀಡಲು ಬಂದವರ ಕೈಗೆ ಸ್ಥಳದಲ್ಲಿಯೇ ರಾಜೀನಾಮೆ ಪತ್ರವನ್ನು ಶೇಖರ್ ನೀಡಿದ್ದಾರೆ. ಇದರಿಂದ ಬಿಜೆಪಿ ಮುಖಂಡರಿಗೆ ಇರುಸು-ಮುರುಸು ಉಂಟಾಗಿದೆ. ಇದನ್ನೂ ಓದಿ: ಮೈಸೂರಲ್ಲಿ ನಡೆದ ಗ್ಯಾಂಗ್‍ರೇಪ್ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು: ಸಿ.ಟಿ ರವಿ

    ಘಟನೆಗೆ ಸಂಭಂದಿಸಿದಂತೆ ಪ್ರತಿಕ್ರಿಯೆ ನೀಡಿರುವ ಶೇಖರ್, ಬಿಜೆಪಿ ಅಧಿಕಾರಕ್ಕೆ ಬರುವ ಮೊದಲು ಜನಸಾಮಾನ್ಯರಿಗೆ ಅಭಿವೃದ್ಧಿಯ ವಿಷಯವಾಗಿ ನೂರಾರು ಭರವಸೆಗಳನ್ನು ನೀಡಿದ್ದರು. ಆದರೆ ಅಧಿಕಾರಕ್ಕೆ ಬಂದ ನಂತರ ಬಿಜೆಪಿ ತನ್ನ ಹೇಳಿಕೆಗೆ ವ್ಯತಿರಿಕ್ತ ಎನ್ನುವ ಹಾಗೆ ಪೆಟ್ರೋಲ್, ಡೀಜಲ್, ಅಡುಗೆ ಅನಿಲ, ಸೇರಿದಂತೆ ದಿನಸಿ ವಸ್ತುಗಳ ಬೆಲೆ ಗಗನಕ್ಕೇರಿಸಿದೆ. ಈ ಕಾರಣ ನಾವು ಜನರ ಮಧ್ಯದಲ್ಲಿ ಪಕ್ಷದ ಪರವಾಗಿ ಮಾತನಾಡಲು ಹೋದಾಗ ನಾವು ಜನರಿಗೆ ಉತ್ತರ ನೀಡಲು ಕಷ್ಟವಾಗುತ್ತಿದೆ. ಅದೆಷ್ಟೋ ಬಾರಿ ಜನರಿಂದ ಅವಮಾನಕ್ಕೆ ಒಳಗಾಗಬೇಕಾಗಿದೆ. ಈ ಕಾರಣಕ್ಕೆ ನಾನು ಬಿಜೆಪಿ ಸದಸ್ಯತ್ವ ಹಾಗೂ ಬೂತ್ ಅಧ್ಯಕ್ಷ ಸ್ಥಾನಕ್ಕೆ ಬಹಿರಂಗವಾಗಿ ಜನರ ಎದುರಲ್ಲೇ ರಾಜೀನಾಮೆ ನೀಡುತ್ತಿರುವುದಾಗಿ ಪತ್ರದಲ್ಲಿ ತಿಳಿಸಿದ್ದಾರೆ.

  • ಕಾರ್ಯಕರ್ತನ ಕೈಯಲ್ಲಿ ಶೂ ಧರಿಸಿಕೊಂಡ ಸಿದ್ದರಾಮಯ್ಯ

    ಕಾರ್ಯಕರ್ತನ ಕೈಯಲ್ಲಿ ಶೂ ಧರಿಸಿಕೊಂಡ ಸಿದ್ದರಾಮಯ್ಯ

    ಚಿಕ್ಕಬಳ್ಳಾಪುರ: ಕಾಂಗ್ರೆಸ್ ಕಾರ್ಯಕರ್ತರೊಬ್ಬರನಿಂದ ಮಾಜಿ ಸಿಎಂ ಸಿದ್ದರಾಮಯ್ಯಗೆ ಶೂ ತೊಡಿಸಿದ ಘಟನೆ ಚಿಕ್ಕಬಳ್ಳಾಪುರ ನಗರ ಹೊರವಲಯದ ಹಾರೋಬಂಡೆ ಬಳಿಯ ಸಾಯಿಬಾಬಾ ಮಂದಿರದ ಬಳಿ ನಡೆಯಿತು.

    ಬಾಗೇಪಲ್ಲಿಗೆ ಆಗಮಿಸುತ್ತಿದ್ದ ಸಿದ್ದರಾಮಯ್ಯ, ಕಾಂಗ್ರೆಸ್ ಮುಖಂಡ ಜಿ.ಎಚ್.ನಾಗರಾಜ್ ನಿರ್ಮಾಣ ಮಾಡಿರೋ ಸಾಯಿಬಾಬಾ ಮಂದಿರಕ್ಕೆ ಭೇಟಿ ನೀಡಿ ದರ್ಶನ ಪಡೆದರು. ಈ ವೇಳೆ ಕಾರಿನಿಂದ ಆಗಮನದ ವೇಳೆ ಶೂ ತೆಗೆಯಲು ಕಷ್ಟಪಡುತ್ತಿದ್ದ ಸಿದ್ದರಾಮಯ್ಯರನ್ನ ಕಂಡ ಕಾಂಗ್ರೆಸ್ ಕಾರ್ಯಕರ್ತ ನಾರಾಯಣಸ್ವಾಮಿ ಎಂಬವರು ಶೂ ತೆಗೆದು ಸಹಾಯ ಮಾಡಿದರು.

    ಇನ್ನೂ ದರ್ಶನ ಪಡೆದು ಹಿಂದಿರುಗುವಾಗ ಸಹ ಶೂ ಹಾಕಿಕೊಳ್ಳಲು ಕಷ್ಟಪಡ್ತಿದ್ದ ಸಿದ್ದರಾಮಯ್ಯರನ್ನ ಕಂಡು ಮತ್ತೆ ಶೂ ಧಾರಣೆ ಮಾಡಿ ನಾರಾಯಣಸ್ವಾಮಿ ಸಹಾಯ ಮಾಡಿದ್ರು. ಇದ್ರಿಂದ ಸಿದ್ದರಾಯಮ್ಯನವರು ಸಹ ಕೊಂಚ ಕಸಿವಿಸಿಗೊಂಡರು.

    ಕ್ಷೇತ್ರದ ಶಾಸಕ ಎಸ್‍ಎನ್ ಸುಬ್ಬಾರೆಡ್ಡಿ ಆಯೋಜಿಸಿದ್ದ ಪುಡ್ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭಾರತದಲ್ಲಿ ಎರಡು ವ್ಯಾಕ್ಸಿನ್ ಇದೆ ಯಾವಾದಾದ್ರೂ ಪಡೆದುಕೊಳ್ಳಿ, ಸ್ಪುಟನಿಕ್ ಫೈಜರ್ ಸಹ ದೇಶಕ್ಕ ತರಿಸಿಕೊಳ್ಳಲು ಪ್ರಯತ್ನ ನಡೆಸಲಾಗುತ್ತಿದೆ. 136 ಕೋಟಿ ಇರುವ ದೇಶ 100 ಕೋಟಿ ಜನರಿಗೆ ವ್ಯಾಕ್ಸಿನ್ ಮಾಡಿದರೆ ಕೊರೊನಾಗೆ ತಡೆ ಯೊಡ್ಡಬಹುದು. ಆದರೆ ಪ್ರಧಾನಮಂತ್ರಿ ನರೇಂದ್ರಮೋದಿ ಭಾರತದ ಜನರಿಗೆ ವ್ಯಾಕ್ಸಿನ್ ಮಾಡುವ ಬದಲು ಬೇರೆ ದೇಶದ ಜನರಿಗೆ ಆರೂವರೆ ಕೋಟಿ ಲಸಿಕೆ ಕಳುಹಿಸಿದ್ದಾರೆ. ವ್ಯಾಕ್ಸಿನ್ ಕಾರ್ಯ ವೇಗ ಮಾಡಬೇಕಾದ ಯಡಿಯೂರಪ್ಪ ನಿದ್ದೆ ಮಾಡುತ್ತಿದ್ದಾರೆ. ವ್ಯಾಕ್ಸಿನ್ ಕೊಡೋ ಕೆಲಸ ಮಾಡುತ್ತಿಲ್ಲ ಎಂದು ಆಡಳಿತ ಸರ್ಕಾರದ ವಿರುದ್ಧವಾಗಿ ಕಿಡಿಕಾರಿದ್ದಾರೆ. ಇದನ್ನೂ ಓದಿ: ಯಡಿಯೂರಪ್ಪ ಅವರದ್ದು ರಾಕ್ಷಸ ಸರ್ಕಾರ, ಪಕೋಡ ಮಾರೋಣ ಅಂದ್ರೆ ಎಣ್ಣೆ ರೇಟ್ ಜಾಸ್ತಿ: ಸಿದ್ದರಾಮಯ್ಯ

    ಕಾಗೋಡು ತಿಮ್ಮಪ್ಪನವರಿಗೆ ವ್ಯಾಕ್ಸಿನ್ ಸಿಕ್ಕಿಲ್ಲ. ವ್ಯಾಕ್ಸಿನ್ ಪಡೆಯಲು ಬಂದವರನ್ನ ವಾಪಾಸ್ ಕಳುಹಿಸಿದ್ದಾರೆ. ನರೇಂದ್ರ ಮೋದಿ ಸುಳ್ಳುಗಾರ ಅವರಷ್ಟು ಸುಳ್ಳು ಹೇಳೋ ಪ್ರಧಾನಿ ಬೇರೆ ಯಾರೂ ಇಲ್ಲ ಅಚ್ಚೇ ದಿನ್ ಬರುತ್ತೆ ಅಂದ್ರಿ? ಎಲ್ಲಿ ಅಚ್ಛೆ ದಿನ್? ಎಂದು ಅಂತ ವಾಗ್ದಾಳಿ ಮಾಡಿದ್ದಾರೆ. ಇದನ್ನೂ ಓದಿ: ಓಲಗವಿಲ್ಲ, ಸಂಬಂಧಿಕರಿಲ್ಲ- 500 ರೂಪಾಯಿಯಲ್ಲಿ ಸಿಂಪಲ್ ಮದುವೆ

  • ನಮ್ಮ ಹುಡುಗ, ದೂರದ ಸಂಬಂಧಿ- ಕಪಾಳಮೋಕ್ಷ ವಿಚಾರಕ್ಕೆ ಡಿಕೆಶಿ ಸ್ಪಷ್ಟನೆ

    ನಮ್ಮ ಹುಡುಗ, ದೂರದ ಸಂಬಂಧಿ- ಕಪಾಳಮೋಕ್ಷ ವಿಚಾರಕ್ಕೆ ಡಿಕೆಶಿ ಸ್ಪಷ್ಟನೆ

    ಬೆಂಗಳೂರು: ಹುಡುಗ ನಮ್ಮವನಾಗಿದ್ದು, ನನಗೆ ಆತ ದೂರದ ಸಂಬಂಧಿ ಎಂದು ಜೆಡಿಎಸ್ ಕಾರ್ಯಕರ್ತನಿಗೆ ಕಪಾಳ ಮೋಕ್ಷ ಮಾಡಿರುವ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.

    ನಗರದಲ್ಲಿ ಈ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಆ ಹುಡುಗ ನಮ್ಮ ಹುಡುಗ. ನನಗೆ ದೂರದ ಸಂಬಂಧಿ. ನನ್ನ ಹೆಗಲ ಮೇಲೆ ಕೈ ಹಾಕೋಕೆ ಬಂದ. ಯಾರಾದ್ರು ನೋಡಿದ್ರೆ ಏನ್ ಅನ್ನುತ್ತಾರೆ ಹೇಳಿ. ಅದಕ್ಕೆ ಸ್ವಲ್ಪ ಜೋರಾಗಿ ಹೊಡೆದಿದ್ದೇನೆ ಎಂದರು.

    ಅವರು ನಮ್ಮ ಮನೆ ಹುಡಗರು ಇರಲಿ. ನಾನು ಬೈದ್ರೆ ಅವನು ಬೈಕೋತಾನೆ, ಅವನು ಬೈದ್ರೆ ನಾನು ಬೈದುಕೊಳ್ತೀನಿ. ಅದು ನನ್ನ ಅವನ ಸಂಬಂಧ. ಅವನು ಕೈಹಾಕಲಿಲ್ಲ ಅಂದ್ರೆ ಕೈ ಏಕೆ ಮೇಲೆ ಬಂತು?. ಈಗ ಯಾಕೆ ಅವನ ಮೇಲೆ ಚರ್ಚೆ ಮಾಡಲಿ ಎಂದು ಹೇಳಿದರು. ಇದನ್ನೂ ಓದಿ: ರಾಜಕೀಯ ಕ್ಷೇತ್ರದಲ್ಲಿರುವ ನಾವು ಯಾರ ಬಗ್ಗೆಯೂ ವೈಯಕ್ತಿಕವಾಗಿ ಮಾತನಾಡಲ್ಲ: ಕಟೀಲ್

    ನಮ್ಮ ಹುಡುಗರು. ನಾವು ತಪ್ಪು ಮಾಡುತ್ತೇವೆ, ಅವರೂ ತಪ್ಪು ಮಾಡುತ್ತಾರೆ. ನಿಮಗೇನು ಖುಷಿಗೆ ತೋರಿಸುತ್ತಿದ್ದೀರಾ. ಅವನನ್ನು ಲೀಡರ್ ಮಾಡಿ. ಅವನಿಗೂ ಮುಂದಿನ ಚುನಾವಣೆಗೆ ಟಿಕೆಟ್ ಸಿಗುವಂತೆ ಮಾಡಿ ಎಂದು ಗರಂ ಆದರು.

    ಆಗಿದ್ದೇನು..?
    ಕೆ.ಎಂ ದೊಡ್ಡಿಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಸಂಸದ ಜಿ. ಮಾದೇಗೌಡ ಅವರ ಆರೋಗ್ಯ ವಿಚಾರಿಸಲು ಡಿಕೆಶಿ ಬಂದಿದ್ದರು. ಈ ವೇಳೆ ಆಸ್ಪತ್ರೆಯ ಒಳಗಡೆಗೆ ಬರುವ ಸಂದರ್ಭದಲ್ಲಿ ಕಾರ್ಯಕರ್ತರೊಬ್ಬರು ಡಿಕೆಶಿ ಹೆಗಲ ಮೇಲೆ ಕೈ ಹಾಕಲು ಪ್ರಯತ್ನಿಸಿದರು. ಕೂಡಲೇ ಕಾರ್ಯಕರ್ತನ ತಲೆಯ ಮೇಲೆ ಪಟಾರ್ ಎಂದು ಡಿಕೆ ಶಿವಕುಮಾರ್ ಹೊಡೆದಿದ್ದರು. ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿತ್ತು. ಇತ್ತ ಈ ವಿಚಾರಕ್ಕೆ ಬಿಜೆಪಿ ಭಾರೀ ಟೀಕೆ ವ್ಯಕ್ತಪಡಿಸಿತ್ತು. ಇದನ್ನೂ ಓದಿ: ಡಿಕೆಶಿಯವರೇ, ನೀವು ರಾಜಕಾರಣಿಯೋ ಅಥವಾ ರೌಡಿಯೋ – ಬಿಜೆಪಿ ಟಾಂಗ್

  • ಕಾಮನ್ ಸೆನ್ಸ್ ಇಲ್ಲವಾ? – ಬೆಂಬಲಿಗನ ತಲೆಗೆ ಡಿಕೆಶಿ ಏಟು

    ಕಾಮನ್ ಸೆನ್ಸ್ ಇಲ್ಲವಾ? – ಬೆಂಬಲಿಗನ ತಲೆಗೆ ಡಿಕೆಶಿ ಏಟು

    ಮಂಡ್ಯ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಹೆಗಲ ಮೇಲೆ ಕೈ ಹಾಕಿಕೊಳ್ಳಲು ಬಂದ ಕಾರ್ಯಕರ್ತನ ತಲೆಗೆ ಬಾರಿಸಿರುವ ಘಟನೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕೆ.ಎಂ.ದೊಡ್ಡಿಯಲ್ಲಿ ಜರುಗಿದೆ.

    ಕೆ.ಎಂ.ದೊಡ್ಡಿಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಸಂಸದ ಜಿ.ಮಾದೇಗೌಡ ಅವರ ಆರೋಗ್ಯವನ್ನು ವಿಚಾರಿಸಲು ಡಿ.ಕೆ.ಶಿವಕುಮಾರ್ ಬಂದಿದ್ದರು. ಈ ವೇಳೆ ಆಸ್ಪತ್ರೆಯ ಒಳಗಡೆಗೆ ಬರುವ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತ ಡಿ.ಕೆ.ಶಿವಕುಮಾರ್ ಹೆಗಲ ಮೇಲೆ ಕೈ ಹಾಕಲು ಪಯತ್ನಿಸಿದರು. ಕೂಡಲೇ ಕಾರ್ಯಕರ್ತನ ತಲೆಯ ಮೇಲೆ ಪಟಾರ್ ಎಂದು ಡಿ.ಕೆ.ಶಿವಕುಮಾರ್ ಹೊಡೆದರು. ಇದನ್ನೂ ಓದಿ: ಮುಂದಿನ ಸರ್ಕಾರ ಜೆಡಿಎಸ್ ಸರ್ಕಾರ : ನಿಖಿಲ್ ಕುಮಾರಸ್ವಾಮಿ

    ತಲೆಯ ಮೇಲೆ ಹೊಡೆದ ಬಳಿಕ ನಿನಗೆ ಕಾಮನ್ ಸೆನ್ಸ್ ಇಲ್ಲವಾ? ಹೆಗಲ ಮೇಲೆ ಕೈ ಹಾಕ್ತಿಯಲ್ಲ ಎಂದು ಡಿಕೆಶಿ ಗದರಿದರು. ಡಿಕೆಶಿ ಅವರ ಈ ವರ್ತನೆಗೆ ಏಟು ತಿಂದ ಕಾರ್ಯಕರ್ತನಲ್ಲದೇ ಸುತ್ತಮುತ್ತ ಇದ್ದವರು ಸಹ ತಬ್ಬಿಬ್ಬಾದರು. ನಂತರ ವೀಡಿಯೋ ಮಾಡುತ್ತಿದ್ದವರಿಗೆ ವಿಡಿಯೋ ಡಿಲೀಟ್ ಮಾಡಿ ಎಂದು ಸಹ ಡಿ.ಕೆ.ಶಿವಕುಮಾರ್ ಹೇಳಿದರು. ಇದನ್ನೂ ಓದಿ: ಬೇಕಾದ್ರೆ ನನಗೊಂದು ಕಲ್ಲಿನ ಹಾರ ಹಾಕಿ, ಸುಗಂಧರಾಜ ಹಾರ ಬೇಡ : ಡಿಕೆಶಿ

  • ಬಾಂಬ್ ತಯಾರಿಕೆ ವೇಳೆ ಸ್ಫೋಟ- ಟಿಎಂಸಿ ಕಾರ್ಯಕರ್ತನ ಸಾವು

    ಬಾಂಬ್ ತಯಾರಿಕೆ ವೇಳೆ ಸ್ಫೋಟ- ಟಿಎಂಸಿ ಕಾರ್ಯಕರ್ತನ ಸಾವು

    ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯ ಶಮಶೇರ ಗಂಜ್ ವ್ಯಾಪ್ತಿಯಲ್ಲಿ ಟಿಎಂಸಿ (ತೃಣಮೂಲ ಕಾಂಗ್ರೆಸ್) ಕಾರ್ಯಕರ್ತನೋರ್ವ ಬಾಂಬ್ ತಯಾರಿಕೆ ವೇಳೆ ಸಾವನ್ನಪ್ಪಿದ್ದಾನೆ. ಕಾರ್ಯಕರ್ತನ ಮನೆಯ ಮೇಲೆ ಬಾಂಬ್ ತಯಾರಿಸುವ ಸ್ಫೋಟಕ ವಸ್ತು ಸ್ಫೋಟಗೊಂಡಿದೆ.

    40 ವರ್ಷದ ಕಬೀರ್ ಮೃತ ಟಿಎಂಸಿ ಕಾರ್ಯಕರ್ತ. ಈ ಘಟನೆಯಲ್ಲಿ ಕಾರ್ಯಕರ್ತನ 10 ವರ್ಷದ ಮಗ ಸಹ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾನೆ. ಘಟನೆಗೂ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಟಿಎಂಸಿ ಸ್ಪಷ್ಟನೆ ನೀಡಿದೆ.

    ಪ್ರಾಥಮಿಕ ತನಿಖೆಯಲ್ಲಿ ಮೃತ ಕಬೀರ್ ತನ್ನ ಮನೆಯ ಮೇಲೆ ದೇಶಿ ಬಾಂಬ್ ಗಳ ತಯಾರಿಕೆಯಲ್ಲಿ ತೊಡಗಿಕೊಂಡಿರೋದು ಖಚಿತವಾಗಿದೆ. ಈ ವೇಳೆ ಒಂದು ಬಾಂಬ್ ಕೆಳಗೆ ಬಿದ್ದು ಸ್ಫೋಟಗೊಂಡಿದ್ದರಿಂದ ಕಬೀರ್ ಗಂಭೀರವಾಗಿ ಗಾಯಗೊಂಡಿದ್ದನು. ಈ ವೇಳೆ ಅಲ್ಲಿಯೇ ಇದ್ದ ಆತನ ಮಗ ಸಹ ಗಾಯಗೊಂಡಿದ್ದಾನೆ. ಪ್ರಕರಣದ ತನಿಖೆ ಆರಂಭಿಸಲಾಗಿದ್ದು, ಇದುವರೆಗೂ ಯಾರನ್ನೂ ಬಂಧಿಸಿಲ್ಲ ಎಂದು ಉಪ ವಿಭಾಗೀಯ ಪೊಲೀಸ್ ಅಧಿಕಾರಿ ಪ್ರಸನ್‍ಜೀತ್ ಬ್ಯಾನರ್ಜಿ ತಿಳಿಸಿದ್ದಾರೆ.

    ಮೃತ ಕಬೀರ್ ಸ್ಥಳೀಯ ಬೀಡಿ ಕಾರ್ಖಾನೆಯಲ್ಲಿ ಕೆಲಸ ಮಾಡಿಕೊಂಡಿದ್ದನು. ಶನಿವಾರ ರಾತ್ರಿ ಸುಮಾರು 9 ಗಂಟೆಗೆ ಸ್ಫೋಟದ ಸದ್ದು ಕೇಳಿಸಿದಾಗ ನಾವೆಲ್ಲ ಅವನ ಮನೆಗೆ ಹೋಗಿ ನೋಡಿದಾಗ ಕಬೀರ್ ರಕ್ತದ ಮಡುವಿನಲ್ಲಿ ಬಿದ್ದಿದ್ದನು ಎಂದು ಸ್ಥಳೀಯರು ಹೇಳಿದ್ದಾರೆ. ರಾತ್ರಿ ಊಟದ ಬಳಿಕ ಕಬೀರ್ ಮನೆಯ ಮೇಲೆ ಹೋದನು. ಆತ ಮೇಲೆ ಹೋದ ಕೆಲ ಸಮಯದಲ್ಲಿ ಸ್ಫೋಟವಾಯ್ತು ಎಂದು ಕಬೀರ್ ತಾಯಿ ಹೇಳಿದ್ದಾರೆ.

    ಕಬೀರ್ ಈ ಹಿಂದೆ ಹಲವು ಬಾರಿ ಬಂಧನಕ್ಕೊಳಗಾಗಿದ್ದು, ಅಪರಾಧ ಹಿನ್ನೆಲೆಯುಳ್ಳಿ ವ್ಯಕ್ತಿ. ಸ್ಫೋಟದ ಬಳಿಕ ಕಬೀರ್ ಕುಟುಂಬಸ್ಥರು ಸಾಕ್ಷ್ಯ ನಾಶಕ್ಕೆ ಮುಂದಾಗಿದ್ದಾರೆ. ಇನ್ನು ಮೃತ ಕಬೀರ್ ತಾಯಿ, ಮಗನ ಮೇಲಿನ ಎಲ್ಲ ಆರೋಪಗಳನ್ನು ತಳ್ಳಿ ಹಾಕಿದ್ದಾರೆ. ನಮ್ಮ ಮನೆಯ ಮೇಲೆ ಯಾರೋ ಬಾಂಬ್ ಎಸೆದಿದ್ದಾರೆ ಎಂದು ಕಬೀರ್ ತಾಯಿ ಅನುಮಾನ ವ್ಯಕ್ತಪಡಿಸಿದ್ದಾರೆ.

    ಈ ಕುರಿತು ಪ್ರತಿಕ್ರಿಯಿಸಿರುವ ಟಿಎಂಸಿ ವಕ್ತಾರ ಗೌತಮ್ ಘೋಷ್, ನಮ್ಮ ಪಕ್ಷಕ್ಕೂ ಈ ಘಟನೆಗೂ ಯಾವುದೇ ಸಂಬಂಧವಿಲ್ಲ. ನಿಷ್ಪಕ್ಷವಾಗಿ ತನಿಖೆ ನಡೆಸುವಂತೆ ಪೊಲೀಸರ ಬಳಿ ಮನವಿ ಮಾಡಿಕೊಳ್ಳಲಾಗಿದೆ ಎಂದಿದ್ದಾರೆ. ಈ ಘಟನೆಗೂ ಮುನ್ನ ಜುಲೈ 3ರಂದು ಶಮಶೇರ್ ಗಂಜ್ ಬಳಿಯಲ್ಲಿ ಬಾಂಬ್ ತಯಾರಿಕೆ ವೇಳೆ ಸ್ಫೋಟಗೊಂಡು ಇಬ್ಬರು ಸಾವನ್ನಪ್ಪಿದ್ದರು.

  • 3-4 ತಿಂಗ್ಳಲ್ಲಿ ಸರ್ಕಾರ ಪತನವಾದ್ರೆ ಸ್ವಾಮೀಜಿಗೆ ಹೆಬ್ಬೆರಳು ದಾನ ಮಾಡ್ತೇನೆ- ಬಿಜೆಪಿ ಕಾರ್ಯಕರ್ತ

    3-4 ತಿಂಗ್ಳಲ್ಲಿ ಸರ್ಕಾರ ಪತನವಾದ್ರೆ ಸ್ವಾಮೀಜಿಗೆ ಹೆಬ್ಬೆರಳು ದಾನ ಮಾಡ್ತೇನೆ- ಬಿಜೆಪಿ ಕಾರ್ಯಕರ್ತ

    ಮಂಡ್ಯ: ಕೋಡಿ ಮಠದ ಶ್ರೀಗಳ ಹೇಳಿಕೆ ಖಂಡಿಸಿ ಮಂಡ್ಯ ಬಿಜೆಪಿ ಕಾರ್ಯಕರ್ತ ಶಿವಕುಮಾರ್ ಆರಾಧ್ಯ ಅವರು ಸವಾಲು ಹಾಕಿದ್ದಾರೆ.

    ನಿಮ್ಮ ಭವಿಷ್ಯ ನಿಜವಾದರೆ ಹೆಬ್ಬೆರಳು ಕಟ್ ಮಾಡಿಕೊಂಡು ನಿಮ್ಮ ಪಾದಕ್ಕೆ ಅರ್ಪಿಸುತ್ತೇನೆ. ಒಂದು ವೇಳೆ ಸರ್ಕಾರ ಅವಧಿ ಪೂರ್ಣಗೊಳಿಸಿದರೆ ಶ್ರೀಗಳು ನನ್ನನ್ನು ಮಠದ ಶಿಷ್ಯನಾಗಿ ಸ್ವೀಕರಿಸುವಂತೆ ಆಗ್ರಹಿಸಿದ್ದಾರೆ.

    ಕಾರ್ಯಕರ್ತನ ಸವಾಲೇನು..?
    ನಿನ್ನೆ ಕೋಡಿ ಮಠದ ಸ್ವಾಮಿಗಳು ಇನ್ನು 3-4 ತಿಂಗಳಲ್ಲಿ ಬಿಜೆಪಿ ಸರ್ಕಾರ ಪತನವಾಗುತ್ತದೆ ಎಂದು ಹೇಳಿದರು. ಒಂದು ವೇಳೆ 3-4 ತಿಂಗಳಲ್ಲಿ ಬಿಜೆಪಿ ಸರ್ಕಾರ ಪತನವಾದರೆ ಹಿಂದೆ ಏಕಲವ್ಯ ದ್ರೋಣಾಚಾರ್ಯರಿಗೆ ತನ್ನ ಬಲಗೈ ಹೆಬ್ಬೆರಳನ್ನು ಯಾವ ರೀತಿ ದಾನವಾಗಿ ನೀಡಿದ್ದಾನೋ ಅದೇ ರೀತಿ ನನ್ನ ಬಲಗೈ ಹೆಬ್ಬೆರಳನ್ನು ಸ್ವಾಮೀಜಿಗಳಿಗೆ ದಾನವಾಗಿ ಕೊಡುತ್ತೇನೆ. ಒಂದು ವೇಳೆ ಬಿಜೆಪಿ ಪೂರ್ಣಾವಧಿ ಸರ್ಕಾರ ಮಾಡಿದರೆ ಬೇರೇನೂ ಬೇಡ ನಿಮ್ಮ ಶಿಷ್ಯನಾಗಿ ನನ್ನನ್ನು ಸ್ವೀಕರಿಸಬೇಕಾಗಿ ಸ್ವಾಮೀಜಿ ಹಾಗೂ ಮಠದ ಭಕ್ತನಾಗಿ ಮನವಿ ಮಾಡಿಕೊಂಡರು.

    ಶ್ರೀಗಳು ಹೇಳೀದ್ದೇನು..?
    ಗುರುವಾರ ಹಾವೇರಿಯಲ್ಲಿ ಮಾತನಾಡಿ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ, ಬಿಎಸ್‍ವೈ ಸರ್ಕಾರದ ಪತನದ ಮುನ್ಸೂಚನೆ ನೀಡಿದ್ದರು. ಮಧ್ಯಂತರ ಚುನಾವಣೆ ಸನಿಹ ಬಂದಿದೆ ಎಂಬ ವಿಚಾರ ಕೇಳಿದಾಗ ಮೈತ್ರಿ ಸರ್ಕಾರ 14 ತಿಂಗಳಿಗೆ ಪತನವಾಗಿದೆ. ಇನ್ನೂ ಕಾಲಾವಕಾಶ ಇದೆ ಕಾದು ನೋಡಿ. 18 ತಿಂಗಳ ನಂತರ ಮತ ಭಿಕ್ಷೆ ಎಂದು ನಾನು ಚುನಾವಣೆ ಪೂರ್ವದಲ್ಲಿ ಹೇಳಿದ್ದೆ. ಈಗ 14, 15 ತಿಂಗಳು ಮುಗಿದಿದೆ, ಇನ್ನೂ ಮೂರು ನಾಲ್ಕು ತಿಂಗಳು ಕಾದು ನೋಡಿ ಎಂದು ಕೋಡಿಹಳ್ಳಿ ಮಠದ ಶ್ರೀ ಭವಿಷ್ಯ ಹೇಳಿದ್ದರು.