Tag: ಕಾರ್ಮಿಕ ಸಚಿವ ವೆಂಕಟರಮಣಪ್ಪ

  • ವಿಧಾನಸೌಧದ ಗೇಟ್ ಬಳಿ ಹಣ ಸಿಕ್ಕ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್

    ವಿಧಾನಸೌಧದ ಗೇಟ್ ಬಳಿ ಹಣ ಸಿಕ್ಕ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್

    ಬೆಂಗಳೂರು: ವಿಧಾನಸೌಧ ಪ್ರವೇಶದ ಗೇಟ್ ಬಳಿ 25.76 ಲಕ್ಷ ರೂ. ಹಣ ಸಿಕ್ಕ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್ ಸಿಕ್ಕಿದೆ. ಟೈಪಿಸ್ಟ್ ಮೋಹನ್ ಬಳಿ ಸಿಕ್ಕ ಹಣದ ಹಿಂದೆ ಮತ್ತೊಬ್ಬ ಸಚಿವರ ಕೈವಾಡವಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಮಿಕ ಸಚಿವ ವೆಂಕಟರಮಣಪ್ಪ ಆಪ್ತ ಸಹಾಯಕ ಕೃಷ್ಣಮೂರ್ತಿ ಎಂಬವರಿಗೆ ವಿಧಾನಸೌಧ ಪೊಲೀಸರು ನೋಟಿಸ್ ಜಾರಿ ಮಾಡಿದ್ದು, ವಿಚಾರಣೆ ವೇಳೆ ಟೈಪಿಸ್ಟ್ ಮೋಹನ್ ಕೃಷ್ಣಮೂರ್ತಿ ಅವರ ಬಗ್ಗೆ ಮಾಹಿತಿ ನೀಡಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ಲಭಿಸಿದೆ. ಹಣ ಯಾರಿಗೆ ಸಂಬಂಧಿಸಿದ್ದು ಹಾಗೂ ಯಾವ ಕಾರಣಕ್ಕೆ ಹಣ ತರಲಾಗಿತ್ತು ಎಂಬ ಬಗ್ಗೆ ಉತ್ತರ ನೀಡುವಂತೆ ಕೃಷ್ಣ ಅವರಿಗೆ ನೋಟಿಸ್‍ನಲ್ಲಿ ಪೊಲೀಸರು ಮಾಹಿತಿ ಕೇಳಿದ್ದಾರೆ.

    ಸದ್ಯ ಪೊಲೀಸರು ನೋಟಿಸ್ ನೀಡಿರುವ ಹಿನ್ನೆಲೆಯಲ್ಲಿ ಸಚಿವ ವೆಂಕಟರಮಣಪ್ಪ ಅವರ ಕೈವಾಡ ಇದೆಯಾ ಎಂಬ ಅನುಮಾನಕ್ಕೆ ಕಾರಣವಾಗಿದೆ. ಈ ಹಿಂದೆ ಕೃಷ್ಣಮೂರ್ತಿ ಅವರು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಸೇರಿದಂತೆ ಹಲವರ ಬಳಿ ಆಪ್ತ ಸಹಾಯಕರಾಗಿ ಕಾರ್ಯನಿರ್ವಹಿಸಿದ್ದಾರೆ. ಸಚಿವ ವೆಂಕಟರಮಣಪ್ಪ ಅವರ ಎಲ್ಲಾ ಕಾರ್ಯಗಳನ್ನು ಅವರ ಪುತ್ರ ನೋಡಿಕೊಳ್ಳುತ್ತಿದ್ದು, ಈ ಹಣವನ್ನು ಅವರಿಗೆ ತಲುಪಿಸಲು ತಂದಿದ್ದರು ಎನ್ನಲಾಗಿದೆ.

    ಇಂದು ಪೊಲೀಸರ ವಿಚಾರಣೆಯಲ್ಲಿ ಟೈಪಿಸ್ಟ್ ಮೋಹನ್ ವಿಚಾರಣೆಯನ್ನು ವಿಧಾನಸಭೆ ಪೊಲೀಸರು ನಡೆಸಿದ್ದರು. ಈ ವಿಚಾರಣೆಯಲ್ಲಿ ಮೋಹನ್ ಸಚಿವರ ಆಪ್ತ ಸಹಾಯಕರ ಹೆಸರು ಬಾಯ್ಬಿಟ್ಟಿದ್ದಾನೆ. ಈ ಹಿಂದೆ ವಿಧಾನಸಭೆಯಲ್ಲಿ ಹಣದ ಹೊಳೆ ಹರಿಯುತ್ತಿದೆ ಎಂದು ಸಿಎಂ ಕುಮಾರಸ್ವಾಮಿ ಅವರು ಹೇಳಿದ್ದರು. ಅಲ್ಲದೇ ಇದಕ್ಕೆ ಕಡಿವಾಣ ಹಾಕುವುದಾಗಿ ಎಚ್‍ಡಿಕೆ ಆಶ್ವಾಸನೆ ನೀಡಿದ್ದರು. ಆದರೆ ಸದ್ಯ ಅವರ ಸರ್ಕಾರದ ಸಚಿವರ ಆಪ್ತ ಸಹಾಯಕರ ಹೆಸರು ಪ್ರಕರಣದಲ್ಲಿ ಕೇಳಿ ಬಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕೇಂದ್ರ ಕಾರ್ಮಿಕ ಭವನಕ್ಕೆ ಸಚಿವರ ದಿಢೀರ್ ಭೇಟಿ – ಅಧಿಕಾರಿಗಳು ಕಂಗಾಲು

    ಕೇಂದ್ರ ಕಾರ್ಮಿಕ ಭವನಕ್ಕೆ ಸಚಿವರ ದಿಢೀರ್ ಭೇಟಿ – ಅಧಿಕಾರಿಗಳು ಕಂಗಾಲು

    ಬೆಂಗಳೂರು: ಕಾರ್ಮಿಕ ಸಚಿವ ವೆಂಕಟರಮಣಪ್ಪ ಅವರು ಇಂದು ದಿಢೀರ್ ಆಗಿ ಕೇಂದ್ರ ಕಾರ್ಮಿಕಭವನಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದರು.

    ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾರ್ಮಿಕ ಇಲಾಖೆಯಲ್ಲಿ ಕೆಲ ಹೊಸ ವ್ಯವಸ್ಥೆಗಳನ್ನು ಮಾಡಬೇಕು. ಅಲ್ಲದೇ ವೇಗದ ಕಾರ್ಯಕ್ಕೆ ಚುರುಕು ಮುಟ್ಟಿಸಬೇಕು ಎಂದು ದಿಢೀರ್ ಭೇಟಿ ಮಾಡಿ ಪರಿಶೀಲನೆ ನಡೆಸಿದ್ದೇನೆ. ಯಾವ ಕೆಲಸ ನಡೆಯಬೇಕಿದೆ. ಯಾವೆಲ್ಲ ಕೆಲಸಗಳನ್ನು ಅರ್ಥದಲ್ಲೇ ನಿಲ್ಲಿಸಲಾಗಿದೆ. ಕಾರ್ಮಿಕರಿಗೆ ಏನು ಅನುಕೂಲವಾಗಿದೆ ಎಂದು ಮಾಹಿತಿ ಪಡೆಯಲು ಆಗಮಿಸಿದ್ದಾಗಿ ತಿಳಿಸಿದರು.

    ಇದೇ ವೇಳೆ ಕಾರ್ಮಿಕಭವನದ ಕೆಲ ಕುಂದುಕೊರತೆಗಳು ಗಮನಕ್ಕೆ ಬಂದಿರುವುದಾಗಿ ತಿಳಿಸಿದ ಅವರು, ಅಧಿಕಾರಿಗಳ ಹಾಜರಾತಿ, ಮೂಮೆಂಟ್ ಬುಕ್ ನಲ್ಲಿ ಸರಿಯಾಗಿ ಮಾಹಿತಿ ನೀಡಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದರು. ಅಲ್ಲದೇ ಬಾಲ ಕಾರ್ಮಿಕರ ಬಳಕೆ ಕುರಿತು ಮಾಹಿತಿ ಪಡೆದು, ಬಾಲ ಕಾರ್ಮಿರನ್ನು ಎಲ್ಲಯಾದರೂ ದುಡಿಮೆ ಮಾಡಿಕೊಳ್ಳುವ ಕುರಿತು ತಿಳಿದು ಬಂದರೆ ಕಠಿಣ ಕ್ರಮಕೈಗೊಳ್ಳುವುದಾಗಿ ತಿಳಿಸಿದರು.

    ಆಯುಕ್ತೆ ಇರುಸು ಮುರುಸು: ತಮ್ಮ ದಿಢೀರ್ ಭೇಟಿ ವೇಳೆ ಸಚಿವರು ಕಾರ್ಮಿಕ ಭವನದ ಶೌಚಾಲಯಕ್ಕೂ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಶೌಚಾಲಯದ ಅವ್ಯವಸ್ಥೆ ಕಂಡು ಕಾರ್ಮಿಕ ಇಲಾಖೆ ಆಯುಕ್ತೆ ಚೈತ್ರಗೆ ಪುರುಷರ ಶೌಚಾಲಯ ದರ್ಶನ ಮಾಡಿಸಿದರು. ದೂರದಲ್ಲಿದ್ದ ಆಯುಕ್ತೆ ಚೈತ್ರರವರನ್ನು ಕರೆದು ಏನು ಪರಿಸ್ಥಿತಿ ಎಂದು ಪ್ರಶ್ನಿಸಿ ಶೌಚಲಯಕ್ಕೆ ಹೋಗಲು ಹೇಳಿದರು. ಇದರಿಂದ ಕೆಲ ಸಮಯ ಆಯುಕ್ತೆ ಚೈತ್ರಾ ಇರುಸು ಮುರುಸುಗೊಂಡರು. ಇನ್ನು ಇದಕ್ಕೂ ಮೊದಲು ಕಚೇರಿ ಬಂದಾಗ ಅಲ್ಲಿರುವ ನೌಕರರನ್ನು ಗುರುತು ಹಿಡಿಯಲಿಲ್ಲ. ಆಗ ಸಚಿವರು ತಮ್ಮ ರೀತಿಯಲ್ಲಿ ಮಾತನಾಡಿದ ವೇಳೆ ನೌಕರರು ಅವರ ಗುರುತು ಹಿಡಿದರು.

    ಅಧಿಕಾರಿ ಸಸ್ಪೆಂಡ್: ಇದೇ ವೇಳೆ ಕೆಲಸದ ಸಮಯದಲ್ಲಿ ಸೂಕ್ತ ಕಾರಣವಿಲ್ಲದೇ ಗೈರುಹಾಜರಾಗಿದ್ದ ಕಾರ್ಮಿಕ ಇಲಾಖೆಯ ಇನ್ಸ್ ಪೆಕ್ಟರ್ ನಾಗರಾಜಯ್ಯ ರನ್ನು ಅಮಾನತು ಮಾಡುವಂತೆ ಸಚಿವರು ಆಯುಕ್ತೆಗೆ ಆದೇಶ ನೀಡಿದರು. ಬಳಿಕ ಕಚೇರಿ ಸಮಯದಲ್ಲಿ ಆಫೀಸ್ ಕೆಲಸ ಬಿಟ್ಟು ಬಿಟ್ಟು ಬೇರೆಡೆ ಹೋಗಿದ್ದು ಕುರಿತು ವಿಚಾರಣೆ ನಡೆಸಿದರು. ಬಳಿಕ ಹಾಜರಾತಿ ಇಲ್ಲದ ಅಧಿಕಾರಿಗಳನ್ನು ಸಸ್ಪೆಂಡ್ ಮಾಡುವಂತೆ ಸೂಚನೆ ನೀಡಿದರು.