Tag: ಕಾರ್ಮಿಕ ಸಚಿವಾಲಯ

  • ಕೆಲಸದ ಒತ್ತಡದಿಂದ 26ರ ಉದ್ಯೋಗಿ ಸಾವು ಪ್ರಕರಣ; ಕಾರ್ಮಿಕ ಸಚಿವಾಲದಿಂದ ವರದಿ ಕೇಳಿದ ಮಾನವ ಹಕ್ಕುಗಳ ಆಯೋಗ

    ಕೆಲಸದ ಒತ್ತಡದಿಂದ 26ರ ಉದ್ಯೋಗಿ ಸಾವು ಪ್ರಕರಣ; ಕಾರ್ಮಿಕ ಸಚಿವಾಲದಿಂದ ವರದಿ ಕೇಳಿದ ಮಾನವ ಹಕ್ಕುಗಳ ಆಯೋಗ

    ಮುಂಬೈ: ಪುಣೆಯ ಕಂಪನಿಯೊಂದರಲ್ಲಿ ಚಾರ್ಟರ್ಡ್‌ ಅಕೌಂಟೆಂಟ್‌ (CA) ಆಗಿ ಕೆಲಸ ಮಾಡುತ್ತಿದ್ದ ಯುವತಿ ಸಾವಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು (NHRC) ಕೇಂದ್ರ ಕಾರ್ಮಿ ಮತ್ತು ಉದ್ಯೋಗ ಸಚಿವಾಲಯದಿಂದ ವಿವರವಾದ ಪ್ರತಿಕ್ರಿಯೆ ನೀಡುವಂತೆ ಕೋರಿದೆ.

    ಅರ್ನ್ಸ್ಟ್ & ಯಂಗ್ (EY) ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ 26 ವರ್ಷ ವಯಸ್ಸಿನ ಉದ್ಯೋಗಿ ಅನ್ನಾ ಸೆಬಾಸ್ಟಿಯನ್ ಪೆರಾಯಿಲ್ (Anna Sebastian Perayil) ಕಳೆದ ಜುಲೈ 26ರಂದು ಸಾವನ್ನಪ್ಪಿದ್ದರು. ಸಾವಿನ ಬಳಿಕ ಕೆಲಸದ ಒತ್ತಡದಿಂದ ನಮ್ಮ ಮಗಳು ದುರಂತ ಸಾವಿಗೀಡಾಗಿದ್ದಾಳೆಂದು ತಾಯಿ ಗಂಭೀರ ಆರೋಪ ಮಾಡಿದ್ದರು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಮಾನವ ಹಕ್ಕುಗಳ ಆಯೋಗವು ಪ್ರಸ್ತುತ ನಡೆಯುತ್ತಿರುವ ತನಿಖೆಯನ್ನು ಒಳಗೊಂಡಂತೆ ಪ್ರಕರಣದ ಸಮಗ್ರ ವರದಿ ನೀಡುವಂತೆ ಕೋರಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಕೇಂದ್ರ ಕಾರ್ಮಿಕ ಸಚಿವ ಮನ್ಸುಖ್ ಮಾಂಡವಿಯಾ ಕಾರ್ಮಿಕ ಸಚಿವಾಲಯವು ಈ ವಿಷಯವನ್ನು ಪರಿಶೀಲಿಸುತ್ತಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: Quad Summit | ಮೋದಿ ದ್ವಿಪಕ್ಷೀಯ ಮಾತುಕತೆ – MQ-9B ಡ್ರೋನ್ ಖರೀದಿ, ರಕ್ಷಣಾತ್ಮಕ ವಿಚಾರಗಳ ಕುರಿತು ಚರ್ಚೆ

    ಮಾನವ ಹಕ್ಕುಗಳ ಆಯೋಗ ಹೇಳುವುದೇನು?
    ಎನ್‌ಎಚ್‌ಆರ್‌ಸಿ ಪ್ರಕಾರ, ಪೆರಾಯಿಲ್ ಅವರ ಸಾವು ಕಳವಳಕಾರಿಯಾಗಿದೆ. ಕಾರ್ಪೋರೇಟ್‌ ಕೆಲಸದ ಸಂಸ್ಕೃತಿಯು ಮಾನಸಿಕ ಮತ್ತು ದೈಹಿಕವಾಗು ಉಂಟು ಮಾಡುವ ಹಾನಿಯ ಬಗ್ಗೆ ಆತಂಕಕಾರಿ ಭಾವನೆ ಮೂಡಿಸುತ್ತದೆ. ಇಂತಹ ಬೆಳವಣಿಗೆಗಳಿಂದ ನಿದ್ರಾಹೀನತೆ ಸೇರಿದಂತೆ ಕಾಯಿಲೆಗಳು ಉಂಟಾಗುವ ಸಾಧ್ಯತೆಗಳಿರುತ್ತವೆ. ಅಲ್ಲದೇ ಕಾರ್ಪೋರೇಟ್‌ ಸಂಸ್ಥೆಗಳು ಅಸಾಧ್ಯ ಗುರಿಗಳತ್ತ ನಿರಂತರ ಅನ್ವೇಷಣೆಯೇ ಇದಕ್ಕೆ ಕಾರಣವಾಗಿದ್ದು ಮಾನವ ಹಕ್ಕುಗಳ ಗಂಭೀರ ಉಲ್ಲಂಘನೆಗಳಿಗೆ ಕಾರಣವಾಗಿದೆ ಎಂದು ಹೇಳಿದೆ. ಇದನ್ನೂ ಓದಿ: ತಿರುಪತಿ ಲಡ್ಡು ವಿವಾದ: ತಿಮ್ಮಪ್ಪನ ಕ್ಷಮೆ ಕೋರಿ 11 ದಿನಗಳ ಉಪವಾಸ ಕೈಗೊಂಡ ಪವನ್ ಕಲ್ಯಾಣ್

    ಈ ಘಟನೆ ಬೆನ್ನಲ್ಲೇ ಮಾನವ ಹಕ್ಕುಗಳ ಆಯೋಗವು, ಕಾರ್ಪೋರೇಟ್‌ ಸಂಸ್ಥೆಗಳಲ್ಲಿ ಕಾರ್ಯಸ್ಥಳದ ಸುರಕ್ಷತೆ ಕಾಯ್ದುಕೊಳ್ಳು ವಿಶೇಷ ತಂಡವೊಂದನ್ನ ರಚಿಸಿದೆ. ಇದು ಕಾರ್ಮಿಕ ಶಾಸನಗಳು ಹಾಗೂ ನಿಬಂಧನೆಗಳನ್ನು ಪರಿಶೀಲಿಸಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಶಿಫಾರಸು ಮಾಡಲಿದೆ. ಖಾಸಗಿ ವಲಯದ ಉದ್ಯೋಗಿಗಳಿಗೆ ಕೆಲಸ ಸಮಯ, ಸುರಕ್ಷತಾ ಕ್ರಮಗಳ ಕುರಿತು ವಿಶೇಷ ಮಾನದಂಡಗಳನ್ನು ರೂಪಿಸಲು ಶಿಫಾರಸು ಮಾಡಲಿದೆ ಎಂದು ಎನ್‌ಹೆಚ್‌ಆರ್‌ಸಿ ಹೇಳಿದೆ. ಇದನ್ನೂ ಓದಿ: ಹಗಲು, ರಾತ್ರಿಯೆನ್ನದೇ ದುಡಿಮೆ.. ಕೆಲಸದ ಒತ್ತಡದಿಂದ 26ರ ಉದ್ಯೋಗಿ ಸಾವು!

    ಏನಿದು ಘಟನೆ?
    ಕಂಪನಿಯೊಂದರಲ್ಲಿ ಚಾರ್ಟರ್ಡ್‌ ಅಕೌಂಟೆಂಟ್‌ ಆಗಿ ಕೆಲಸ ಮಾಡುತ್ತಿದ್ದ ಯುವತಿ ಸಾವು ಭಾರಿ ಆಕ್ರೋಶ ಕಾರಣವಾಗಿದೆ. ಕೆಲಸದ ಒತ್ತಡದಿಂದ ಮಗಳು ದುರಂತ ಸಾವಿಗೀಡಾಗಿದ್ದಾಳೆಂದು ತಾಯಿ ಗಂಭೀರ ಆರೋಪ ಮಾಡಿದ್ದರು. 26 ವರ್ಷದ ಅನ್ನಾ ಸೆಬಾಸ್ಟಿಯನ್‌ ಪೆರಾಯಿಲ್‌, ಕೆಲಸಕ್ಕೆ ಸೇರಿದ 4 ತಿಂಗಳಲ್ಲೇ ಸಾವನ್ನಪ್ಪಿದ್ದರು. ನನ್ನ ಮಗಳಿಗೆ ಕೆಲಸದ ಒತ್ತಡ ಹೆಚ್ಚಿತ್ತು. ಹೀಗಾಗಿ ಅವಳು ಮೃತಪಟ್ಟಿದ್ದಾಳೆಂದು ಆಕೆಯ ತಾಯಿ ಆರೋಪಿಸಿದ್ದರು. ಮಗಳ ಸಾವಿನ ಬಗ್ಗೆ ಕಂಪನಿಗೆ ಮೃತ ಯುವತಿ ತಾಯಿ ಬರೆದಿರುವ ಪತ್ರ ಮನಕಲಕುವಂತಿತ್ತು. ಅನ್ನಾ ಸೆಬಾಸ್ಟಿಯನ್‌ ಸಾವಿನ ವಿಚಾರವನ್ನು ಕೇಂದ್ರ ಕಾರ್ಮಿಕ ಸಚಿವಾಲಯ ಗಂಭೀರವಾಗಿ ಪರಿಗಣಿಸಿ ಸಾವಿನ ಕುರಿತ ದೂರನ್ನು ಕೈಗೆತ್ತಿಕೊಂಡಿದ್ದು, ಸೂಕ್ತ ತನಿಖೆ ನಡೆಸುವುದಾಗಿ ತಿಳಿಸಿದೆ.

  • ನಿತ್ಯ 12 ಗಂಟೆ ಕೆಲಸ, ವಾರದಲ್ಲಿ 3 ದಿನ ರಜೆ – ಜುಲೈ 1ರಿಂದ ಹೊಸ ಕಾರ್ಮಿಕ ಸಂಹಿತೆ?

    ನಿತ್ಯ 12 ಗಂಟೆ ಕೆಲಸ, ವಾರದಲ್ಲಿ 3 ದಿನ ರಜೆ – ಜುಲೈ 1ರಿಂದ ಹೊಸ ಕಾರ್ಮಿಕ ಸಂಹಿತೆ?

    ನವದೆಹಲಿ: ವೇತನ, ಸಾಮಾಜಿಕ ಭದ್ರತೆ, ಕೈಗಾರಿಕಾ ಸಂಬಂಧಗಳು ಮತ್ತು ಔದ್ಯೋಗಿಕ ಸುರಕ್ಷತೆ ದೃಷ್ಟಿಯಿಂದ ಕೇಂದ್ರ ಸರ್ಕಾರವು ಹೊಸ ಕಾರ್ಮಿಕ ಸಂಹಿತೆಗಳನ್ನು ಜಾರಿಗೊಳಿಸುವ ನಿರೀಕ್ಷೆ ಇದೆ. ಮುಂದಿನ ತಿಂಗಳ ಜುಲೈ 1ರಿಂದಲೇ ಈ ಸಂಹಿತೆ ಜಾರಿಗೆ ಬರುವ ಸಾಧ್ಯತೆ ಇದೆ ಎಂದು ಸರ್ಕಾರಿ ಮೂಲಗಳು ತಿಳಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

    ಹೊಸ ವೇತನ ಸಂಹಿತೆಯು ಉದ್ಯೋಗಿಗಳ ಕೆಲಸದ ಸಮಯ, ವೇತನ ಪುನರ್‌ರಚನೆ, ಪಿಎಫ್, ಗ್ರ್ಯಾಚುಟಿ ಕೊಡುಗೆಯಲ್ಲಿ ಬದಲಾವಣೆ ತರಲಿದೆ ಎಂದು ವರದಿಗಳು ಹೇಳುತ್ತಿವೆ. ಆದರೆ ಈ ಬಗ್ಗೆ ಕೇಂದ್ರ ಸರ್ಕಾರ ಹಾಗೂ ಕಾರ್ಮಿಕ ಸಚಿವಾಲಯ ಯಾವುದೇ ಅಧಿಕೃತ ಪ್ರಕಟಣೆ ನೀಡಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿವೆ. ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರ 90ರ ದಶಕದಲ್ಲಿಯೇ ಅಗ್ನಿಪಥ್ ಜಾರಿಗೆ ತರಲು ಚಿಂತಿಸಿತ್ತು: ಉಮೇಶ್ ಕತ್ತಿ ಹೊಸ ಬಾಂಬ್

    ಕೈಗೆ ಕಡಿಮೆ ಸಂಬಂಳ, ಪಿಎಫ್ ಹೆಚ್ಚಳ: ಹೊಸ ಸಂಹಿತೆಗಳು ಜಾರಿಗೆ ಬಂದರೆ, ನೌಕರರ ಕೈಗೆ ಸಿಗುವ ಸಂಬಳದ ಮೊತ್ತ ಕಡಿಮೆಯಾಗಲಿದ್ದು, ಭವಿಷ್ಯ ನಿಧಿ (PF) ಖಾತೆಗೆ ಜಮೆ ಆಗುವ ಮೊತ್ತ ಹೆಚ್ಚಳವಾಗಲಿದೆ. ಎಲ್ಲ ಬಗೆಯ ಭತ್ಯೆಗಳು ನೌಕರರ ಒಟ್ಟು ವೇತನದ ಶೇ.50ರಷ್ಟನ್ನು ಮೀರುವಂತಿಲ್ಲ. ಅಂದರೆ ಒಟ್ಟು ವೇತನದಲ್ಲಿ ಶೇ.50ರಷ್ಟು ಭಾಗವು ಮೂಲ ವೇತನ ಆಗಿರಬೇಕು. ಪಿಎಫ್ ಖಾತೆಗೆ ವರ್ಗಾವಣೆ ಆಗುವ ಮೊತ್ತವನ್ನು ನೌಕರರ ಮೂಲವೇತನದ ಆಧಾರದಲ್ಲಿ ಲೆಕ್ಕ ಹಾಕಲಾಗುತ್ತದೆ. ಇದನ್ನೂ ಓದಿ: ಕ್ರೆಡಿಟ್‌, ಡೇಬಿಟ್‌ ಕಾರ್ಡ್‌ ಬಳಕೆದಾರರಿಗೆ ಜುಲೈ 1 ರಿಂದ ಸಿಗಲಿದೆ ಗುಡ್‌ನ್ಯೂಸ್‌

    12 ಗಂಟೆ ಕೆಲಸ: ಹೊಸ ಕರಡು ನಿಯಮ ಪ್ರಕಾರ, ಕೆಲಸದ ಸಮಯವನ್ನು ಕಡಿತಗೊಳಿಸಲಾಗುವುದು. ವಾರದಲ್ಲಿ ನಾಲ್ಕು ದಿನ ಕೆಲಸ ಇರಲಿದ್ದು, ನಾಲ್ಕು ದಿನವೂ 12 ಗಂಟೆಗಳು ಮಾತ್ರ ಕೆಲಸ ಇರಲಿದೆ. ಆದರೆ ಕಾರ್ಮಿಕ ಸಚಿವಾಲಯವು ವಾರದಲ್ಲಿ 48 ಗಂಟೆಗಳ ಕೆಲಸ ಅಗತ್ಯವಾಗಿ ಮಾಡಬೇಕಿದೆ ಎಂದು ಸ್ಪಷ್ಟಪಡಿಸಿದೆ.

    ರಜೆಯ ಅವಧಿಯಲ್ಲಿ ಬದಲಾವಣೆ: ಸರ್ಕಾರಿ ಇಲಾಖೆಗಳು ಈಗ 1 ವರ್ಷದಲ್ಲಿ 30 ರಜೆಗಳನ್ನು ಅನುಮತಿಸುತ್ತವೆ. ರಕ್ಷಣಾ ನೌಕರರಿಗೆ ವರ್ಷದಲ್ಲಿ 60 ರಜೆಗಳನ್ನು ಪಡೆಯುತ್ತಾರೆ. ಆದರೆ ಹೊಸ ನೀತಿಯ ಪ್ರಕಾರ ರಜೆ ಅವಧಿಯೂ ಹೆಚ್ಚಾಗಲಿದೆ. 20 ವರ್ಷಗಳ ಸೇವೆ ಸಲ್ಲಿಸಿದ ನೌಕರರು ವೇತನ ಸಹಿತ ರಜೆಯನ್ನೂ ಪಡೆದುಕೊಳ್ಳಬಹುದು ಎಂದು ಹೇಳಲಾಗಿದೆ.

    ಇಲ್ಲಿಯವರೆಗೆ 23 ರಾಜ್ಯಗಳು ಈ ಅಧಿನಿಯಮವನ್ನು ಪ್ರಕಟಿಸಿವೆ.

    Live Tv