Tag: ಕಾರ್ಮಿಕ ಸಚಿವ

  • ಯಾರೇ ಕೂಗಾಡಲಿ ಊರೇ ಹೋರಾಡಲಿ ನೆಮ್ಮದಿಗೆ ಭಂಗವಿಲ್ಲ ಅಂದ್ರು ಹೆಬ್ಬಾರ್!

    ಯಾರೇ ಕೂಗಾಡಲಿ ಊರೇ ಹೋರಾಡಲಿ ನೆಮ್ಮದಿಗೆ ಭಂಗವಿಲ್ಲ ಅಂದ್ರು ಹೆಬ್ಬಾರ್!

    ಕಾರವಾರ: ಚುನಾವಣಾ ದಿನಾಂಕ ಹತ್ತಿರಬರುತ್ತಿದ್ದಂತೆಯೇ ರಜಕೀಯ ನಾಯಕರು ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಅಂತೆಯೇ ಇದೀಗ ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ (Shivaram Hebbar) ಅವರು ಹಾಡಿನ ಮೂಲಕ ಎಚ್ಚರಿಕೆಯೊಂದನ್ನು ನೀಡಿದ್ದಾರೆ.

    ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡದಲ್ಲಿ ನಡೆದ ಬಿಜೆಪಿ ಬೃಹತ್ ಸಮಾವೇಶದಲ್ಲಿ ಸಂಪತ್ತಿಗೆ ಸವಾಲು ಚಿತ್ರಗೀತೆಯ ಹಾಡಿನ ಮೂಲಕವೇ ಶಿವರಾಂ ಹೆಬ್ಬಾರ್ ತಮ್ಮ ಭಾಷಣ ಆರಂಭಿಸಿದರು. ಈ ಮೂಲಕ ತಾವು ಯಾವುದಕ್ಕೂ ತಲೆಕೆಡಿಸಿಕೊಳ್ಳಲ್ಲ ಎಂದು ಪರೋಕ್ಷವಾಗಿ ಟಾಂಗ್ ನೀಡಿದರು. ಇದನ್ನೂ ಓದಿ: ಸಿದ್ದರಾಮಯ್ಯರನ್ನ ಹರಕೆ ಕುರಿ ಮಾಡ್ಬೇಡಿ: ನಿಖಿಲ್ ಸಲಹೆ

    ಯಾರೇ ಕೂಗಾಡಲಿ ಊರೇ ಹೋರಾಡಲಿ ನೆಮ್ಮದಿಗೆ ಭಂಗವಿಲ್ಲ ಹಾಡು ಹೇಳಿ ಎಚ್ಚರಿಕೆ ನೀಡಿದರು. ಮುಂಡಗೋಡಿನ ಜನ ನನ್ನ ಜೊತೆ ಇರುವವರೆಗೂ ತಾವು ಯಾವುದಕ್ಕೂ ತಲೆ ಕೆಡಿಸಿಕೊಳಲ್ಲ. ಯಾರು ಏನೆ ಅಂದ್ರೂ ತಲೆ ಕೆಡಿಸಿಕೊಳಲ್ಲ. ಗೆಲುವು ನಂದೇ ಎಂಬ ಸಂದೇಶವನ್ನು ಸಾರಿದರು.

     

  • ಕೊಟ್ರೆ ಬೇರೆ ಖಾತೆ ಕೊಡಿ ಇಲ್ದೆ ಹೋದ್ರೆ ರಾಜೀನಾಮೆ ತಗೊಳ್ಳಿ- ಸಿಎಂ ಎದುರು ಸಚಿವ ಅಳಲು

    ಕೊಟ್ರೆ ಬೇರೆ ಖಾತೆ ಕೊಡಿ ಇಲ್ದೆ ಹೋದ್ರೆ ರಾಜೀನಾಮೆ ತಗೊಳ್ಳಿ- ಸಿಎಂ ಎದುರು ಸಚಿವ ಅಳಲು

    ಬೆಂಗಳೂರು: ಐಎಎಸ್ ಅಧಿಕಾರಿಯ ವರ್ತನೆಗೆ ಬೇಸತ್ತ ಸಚಿವರೊಬ್ಬರು ಕೊಟ್ರೆ ಬೇರೆ ಖಾತೆ ಕೊಡಿ ಇಲ್ಲದೇ ಹೋದ್ರೆ ರಾಜೀನಾಮೆ ತೆಗೆದುಕೊಳ್ಳಿ ಅಂತ ಹೇಳಿದ್ದಾರೆ.

    ಐಎಎಸ್ ಅಧಿಕಾರಿ ಆದಿತ್ಯ ಬಿಸ್ವಾಸ್ ಅವರ ಆಡಳಿತಕ್ಕೆ ಬೇಸತ್ತು ಕಾರ್ಮಿಕ ಸಚಿವ ವೆಂಕಟರಮಣಪ್ಪ ಅವರು ಇದೀಗ ಖಾತೆ ಬದಲಾವಣೆಗೆ ಪಟ್ಟು ಹಿಡಿದಿದ್ದಾರೆ ಎಂಬುದಾಗಿ ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಲಭಿಸಿದೆ.

    ಆದಿತ್ಯ ಬಿಸ್ವಾಸ್ ನನ್ನ ಮಾತಿಗೆ ಬೆಲೆ ಕೊಡಲ್ಲ. ನನ್ನ ವಿರುದ್ಧ ಕೆಲಸ ಮಾಡುತ್ತಾರೆ. ನನ್ನ ಇಲಾಖೆಯಲ್ಲಿ ಏನು ನಡೆಯುತ್ತಿದೆ ಅನ್ನೋದೇ ನನಗೆ ಗೊತ್ತಾಗುತ್ತಿಲ್ಲ. ನನ್ನ ಮಾತಿಗೆ ಬೆಲೆ ಇಲ್ಲದ ಮೇಲೆ ಈ ಖಾತೆ ಇದ್ದರೆಷ್ಟು ಬಿಟ್ಟರೆಷ್ಟು. ಹೀಗಾಗಿ ನನ್ನ ಖಾತೆ ಬದಲಾವಣೆ ಮಾಡಿ, ಇಲ್ಲವೇ ರಾಜೀನಾಮೆ ತೆಗೆದುಕೊಳ್ಳಿ ಅಂತ ಕಾರ್ಮಿಕ ಸಚಿವರು ಸಿಎಂ ಕುಮಾರಸ್ವಾಮಿ ಮುಂದೆ ತನ್ನ ಅಳಲು ತೋಡಿಕೊಂಡಿಕೊಂಡಿದ್ದಾರೆ ಎನ್ನಲಾಗಿದೆ.

    ನನ್ನ ಖಾತೆಯೇ ನನಗೆ ಮರೆತು ಹೋಗಿದೆ. ಎಲ್ಲಾ ಟೆಂಡರ್ ಗಳನ್ನು ಅವರೇ ಕರೆಯುತ್ತಾರೆ. ಗುತ್ತಿಗೆ ಆಧಾರದ ಮೇಲೆ ಅವರೆ ಉದ್ಯೋಗ ನೇಮಕಾತಿ ಮಾಡಿಕೊಳ್ಳುತ್ತಾರೆ. ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಳ್ಳುತ್ತಾರೆ. ಇಷ್ಟೆಲ್ಲ ಇದ್ದ ಮೇಲೆ ನನಗೆ ಸಚಿವ ಸ್ಥಾನ ಯಾಕೆ ಅಂತ ಪ್ರಶ್ನಿಸಿದ ಸಚಿವರು, ಕೇವಲ ಸಹಿ ಹಾಕಿಕೊಂಡು ಕೂರಲು ಸಾಧ್ಯವಿಲ್ಲ. ಈ ಬಾರಿಯ ಸಚಿವ ಸಂಪುಟ ವಿಸ್ತರಣೆಯಲ್ಲಿ ಖಾತೆ ಬದಲಾವಣೆ ಮಾಡಿ ಅಂತ ವೆಂಕಟರಮಣಪ್ಪ ಬಿಗಿ ಪಟ್ಟು ಹಿಡಿದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಗ್ರಾಮಸ್ಥರಿಗೆ 2ಲಕ್ಷ ಆಮಿಷ- ರೊಚ್ಚಿಗೆದ್ದವರ ಲಕ್ಷ್ಯ ತಪ್ಪಿಸಲು ಭಾರತ ಮಾತೆಗೆ ಜೈ ಅಂತ ಕಾರು ಏರಿ ಹೊರಟೇ ಬಿಟ್ಟ ಸಂತೋಷ್ ಲಾಡ್!

    ಗ್ರಾಮಸ್ಥರಿಗೆ 2ಲಕ್ಷ ಆಮಿಷ- ರೊಚ್ಚಿಗೆದ್ದವರ ಲಕ್ಷ್ಯ ತಪ್ಪಿಸಲು ಭಾರತ ಮಾತೆಗೆ ಜೈ ಅಂತ ಕಾರು ಏರಿ ಹೊರಟೇ ಬಿಟ್ಟ ಸಂತೋಷ್ ಲಾಡ್!

    ಧಾರವಾಡ: ಚುನಾವಣಾ ಪ್ರಚಾರಕ್ಕೆಂದು ಕಲಘಟಗಿ ತಾಲೂಕಿನ ಸಲಕಿನಕೊಪ್ಪ ಗ್ರಾಮಕ್ಕೆ ತೆರಳಿದ್ದ ವೇಳೆ ಸಾರ್ವಜನಿಕರೇ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರಿಗೆ ಘೇರಾವ್ ಹಾಕಿದ ಘಟನೆ ನಡೆದಿದೆ.


    ಅಭಿವೃದ್ಧಿ ಕಾರ್ಯ ಮಾಡದ ಸಂತೋಷ್ ಲಾಡ್ ಅವರನ್ನು ಸಾರ್ವಜನಿಕರು ಲೆಫ್ಟ್ ರೈಟ್ ತರಾಟೆಗೆ ತೆಗೆದುಕೊಂಡಿದ್ದಾರೆ. 10 ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಗರಡಿ ಮನೆ ವಿಚಾರವಾಗಿ ಗ್ರಾಮಸ್ಥರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಗ್ರಾಮದಲ್ಲಿ ನಡೆದ ಕೆಲ ಅಭಿವೃದ್ಧಿ ಕಾಮಗಾರಿಗಳೂ ಕಳಪೆಯಾಗಿದ್ದು, ಗ್ರಾಮಸ್ಥರ ಪ್ರಶ್ನೆಗೆ ಲಾಡ್ ಕಂಗಾಲಾಗಿದ್ದಾರೆ. ಈ ವೇಳೆ ಲಾಡ್ ಅವರು ಗ್ರಾಮಸ್ಥರಿಗೆ ಎರಡು ಲಕ್ಷ ರೂಪಾಯಿಯ ಆಮಿಷ ಒಡ್ಡಿದ್ದಾರೆ. ನೀತಿ ಸಂಹಿತೆ ಜಾರಿಯಲ್ಲಿರುವಾಗಲೇ ರಾಜಾರೋಷವಾಗಿ ಆಮಿಷ ಒಡ್ಡಿದ್ದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಲಾಡ್ ಅವರನ್ನು ಮತ್ತಷ್ಟು ತರಾಟೆಗೆ ತೆಗೆದುಕೊಂಡರು. ಇದರಿಂದ ಕಕ್ಕಾಬಿಕ್ಕಿಯಾದ ಕಾರ್ಮಿಕ ಸಚಿವ ಜನರ ಲಕ್ಷ್ಯ ತಪ್ಪಿಸಲು ಭಾರತ ಮಾತೆಗೆ ಜೈ ಎಂದು ಕಾರು ಏರಿ ಅಲ್ಲಿಂದ ಕಾಲ್ಕಿತ್ತರು.