Tag: ಕಾರ್ಮಿಕರ ಸ್ಥಳಾಂತರ

  • ವಲಸೆ ಕಾರ್ಮಿಕರ ಸ್ಥಳಾಂತರಕ್ಕೆ ಕೇಂದ್ರ ಗ್ರೀನ್ ಸಿಗ್ನಲ್

    ವಲಸೆ ಕಾರ್ಮಿಕರ ಸ್ಥಳಾಂತರಕ್ಕೆ ಕೇಂದ್ರ ಗ್ರೀನ್ ಸಿಗ್ನಲ್

    ನವದೆಹಲಿ: ಲಾಕ್‍ಡೌನ್‍ನಿಂದಾಗಿ ಬೇರೆ ಬೇರೆ ರಾಜ್ಯಗಳಲ್ಲಿ ಸಿಲುಕಿರುವ ಕಾರ್ಮಿಕರನ್ನು ಸ್ಥಳಾಂತರಿಸಲು ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ.

    ಕೊರೊನಾ ಲಾಕ್‍ಡೌನ್ ಅವಧಿ ಮುಗಿಯಲು ಕೇವಲ ನಾಲ್ಕು ದಿನಗಳಷ್ಟೇ ಬಾಕಿ ಇದ್ದು, ದಿನ ಕಳೆದಂತೆ ಲಾಕ್‍ಡೌನ್ ನಿಯಮಗಳ ಸಡಿಲಿಕೆ ಮುಂದುವರೆದಿದೆ. ಈ ಮೊದಲು ಬೇರೆ ಬೇರೆ ಜಿಲ್ಲೆಗಳಲ್ಲಿ ಸಿಲುಕಿದ್ದ ವಲಸೆ ಕಾರ್ಮಿಕರನ್ನು, ಅವರ ತವರು ಜಿಲ್ಲೆಗಳಿಗೆ ಕಳುಹಿಸಬಹುದು ಎಂದು ಕೇಂದ್ರ ಸರ್ಕಾರ ತಿಳಿಸಿತ್ತು. ಇವತ್ತು ಇನ್ನೂ ಒಂದು ಹೆಜ್ಜೆ ಮುಂದೆ ಹೋದ ಕೇಂದ್ರ ಸರ್ಕಾರ, ಲಾಕ್‍ಡೌನ್‍ನಲ್ಲಿ ಸಿಲುಕಿದ್ದವರಿಗೆ ಮತ್ತಷ್ಟು ರಿಲೀಫ್ ನೀಡಿದೆ.

    ಲಾಕ್‍ಡೌನ್‍ನಿಂದ ಬೇರೆ ಬೇರೆ ಸ್ಥಳಗಳಲ್ಲಿ ಸಿಲುಕಿದ್ದ ಕಾರ್ಮಿಕರು, ವಿದ್ಯಾರ್ಥಿಗಳು, ಪ್ರವಾಸಿಗರನ್ನು ಅವರ ಸ್ವಸ್ಥಳಗಳಿಗೆ ಕಳುಹಿಸಲು ಇವತ್ತು ಕೇಂದ್ರ ಗೃಹ ಸಚಿವಾಲಯ ಷರತ್ತುಬದ್ಧ ಒಪ್ಪಿಗೆ ನೀಡಿದೆ.

    ಮಾರ್ಗ ಸೂಚಿ: ಬೇರೆ ರಾಜ್ಯಗಳಲ್ಲಿ ಸಿಲುಕಿರುವ ವಲಸೆ ಕಾರ್ಮಿಕರು, ವಿದ್ಯಾರ್ಥಿಗಳು, ಪ್ರವಾಸಿಗರಿಗೆ ತವರು ರಾಜ್ಯಗಳಿಗೆ ಕಳುಹಿಸಲು ಸರ್ಕಾರ ಒಪ್ಪಿಗೆ ಸೂಚಿಸಿದೆ. ತಮ್ಮ ರಾಜ್ಯಗಳಿಗೆ ತೆರಳುವವರು ನೋಡಲ್ ಅಥವಾ ಸಂಬಂಧಿಸಿದ ಅಧಿಕಾರಿಯ ಅನುಮತಿ ಕಡ್ಡಾಯವಾಗಿ ಪಡೆಯಬೇಕು. ಅಂತರ್ ರಾಜ್ಯಗಳ ಪರಸ್ಪರ ಅನುಮತಿಯ ಮೇಲೆ ಈ ಪ್ರಕ್ರಿಯೆ ನಡೆಯಬೇಕು. ಸ್ಥಳಾಂತರಕ್ಕೂ ಮುನ್ನ ಎಲ್ಲರ ಆರೋಗ್ಯ ತಪಾಸಣೆ ನಡೆಸಬೇಕು. ಸರ್ಕಾರ ನಿಗದಿ ಮಾಡಿದ ವಾಹನಗಳಲ್ಲೇ ಕಾರ್ಮಿಕರು ತಮ್ಮ ಊರುಗಳಿಗೆ ಪ್ರಯಾಣಿಸಬೇಕು. ಖಾಸಗಿ ವಾಹನಗ ಬಳಕೆ ಮಾಡುವಂತಿಲ್ಲ.

    ಬಸ್ ಸ್ಯಾನಿಟೈಸ್ ಮಾಡಿ ನಿಯಮಗಳಿಗನುಸಾರವಾಗಿ ಪ್ರಯಾಣಿಕರನ್ನು ಸಾಗಿಸಬೇಕು. ಪ್ರಯಾಣದ ವೇಳೆ ಸಾಮಾಜಿಕ ಅಂತರ ಕಾಪಾಡಿಕೊಳ್ಳುವದರ ಜೊತೆಯಲ್ಲಿ ಮಾಸ್ಕ್ ಧರಿಸಬೇಕು. ಇನ್ನು ತಮ್ಮೂರಗಳಿಗೆ ತೆರಳಿದ್ರೆ ಸ್ಥಳೀಯ ಆರೋಗ್ಯಾಧಿಕಾರಿಗಳ ಸಲಹೆ ಪಡೆದುಕೊಳ್ಳಬೇಕು. ಕ್ವಾರಂಟೈನ್ ಗೆ ಸೂಚಿಸಿದ್ರೆ ಕಡ್ಡಾಯವಾಗಿ ಪಾಲಿಸಬೇಕು.