Tag: ಕಾರ್ಬೆವಾಕ್ಸ್

  • ಆಗಸ್ಟ್ 12 ರಿಂದ ಕೋವಿಡ್ ಬೂಸ್ಟರ್ ಆಗಿ ವಯಸ್ಕರಿಗೆ ಸಿಗಲಿದೆ ಕಾರ್ಬೆವಾಕ್ಸ್

    ಆಗಸ್ಟ್ 12 ರಿಂದ ಕೋವಿಡ್ ಬೂಸ್ಟರ್ ಆಗಿ ವಯಸ್ಕರಿಗೆ ಸಿಗಲಿದೆ ಕಾರ್ಬೆವಾಕ್ಸ್

    ನವದೆಹಲಿ: ಕೊರೊನಾ ವೈರಸ್ ವಿರುದ್ಧ ಭಾರತದ ಹೋರಾಟಕ್ಕೆ ಉತ್ತೇಜನ ನೀಡುವ ಸಲುವಾಗಿ, ಕೋವಿಶೀಲ್ಡ್ ಅಥವಾ ಕೋವಾಕ್ಸಿನ್‌ನ 2 ಡೋಸ್ ಪಡೆದ ವಯಸ್ಕರಿಗೆ ಸರ್ಕಾರ ಜೈವಿಕ ಇ ಕಾರ್ಬೆವಾಕ್ಸ್ ನೀಡಲು ಒಪ್ಪಿಗೆ ನೀಡಿದೆ. ಇದು ಆಗಸ್ಟ್ 12 ರಿಂದ ಜಾರಿಗೆ ಬರಲಿದೆ.

    ಈ ನಿರ್ಧಾರದ ಬಗ್ಗೆ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ತಿಳಿಸಿದ್ದು, ಕೋವಿಡ್-19 ವಿರುದ್ಧ ಭಾರತದ ಹೋರಾಟಕ್ಕೆ ಮತ್ತಷ್ಟು ಶಕ್ತಿ ನೀಡಲು ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ 18 ವರ್ಷ ಮೇಲ್ಪಟ್ಟವರಿಗೆ ಕೋವಿಶೀಲ್ಡ್ ಅಥವಾ ಕೋವಾಕ್ಸಿನ್‌ನ 2 ಡೋಸ್ ಪಡೆದು 6 ಅಥವಾ 26 ವಾರಗಳಾಗಿದ್ದರೆ, ಬೂಸ್ಟರ್ ಡೋಸ್ ಆಗಿ ಕಾರ್ಬೆವಾಕ್ಸ್ ನೀಡಲು ಅನುಮೋದಿಸಿದೆ. ಈ ಕ್ರಮ ಆಗಸ್ಟ್ 12 ರಿಂದ ಪ್ರಾರಂಭವಾಗಲಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಚೀನಾದಲ್ಲಿ ಮತ್ತೊಂದು ಮಾರಕ ವೈರಸ್ ಪತ್ತೆ – ಶೇ.40 ರಿಂದ 70ರಷ್ಟು ಮರಣ ಸಾಧ್ಯತೆ

    ಭಾರತ ಇದೇ ಮೊದಲ ಬಾರಿಗೆ ಕೋವಿಡ್ ವಿರುದ್ಧದ ಪ್ರಾಥಮಿಕ ಲಸಿಕೆಗಳಿಗಿಂತ ಭಿನ್ನವಾದ ಬೂಸ್ಟರ್ ಡೋಸ್ ನೀಡಲು ಅನುಮತಿ ನೀಡಿದೆ. ಕಾರ್ಬೆವಾಕ್ಸ್ ಅನ್ನು ಆಗಸ್ಟ್ 12ರಿಂದ ಬೂಸ್ಟರ್ ಡೋಸ್ ಆಗಿ ವಯಸ್ಕರು ಪಡೆಯಬಹುದು. ಇದನ್ನೂ ಓದಿ: ರಾಜ್ಯದಲ್ಲಿಂದು 1,680 ಮಂದಿಗೆ ಕೊರೊನಾ – ಐವರು ಸಾವು

    Live Tv
    [brid partner=56869869 player=32851 video=960834 autoplay=true]

  • ಕೋವಿಡ್-19 ಲಸಿಕೆ ಕಾರ್ಬೆವಾಕ್ಸ್ ಬೆಲೆ 250 ರೂ.ಗೆ ಇಳಿಕೆ

    ಕೋವಿಡ್-19 ಲಸಿಕೆ ಕಾರ್ಬೆವಾಕ್ಸ್ ಬೆಲೆ 250 ರೂ.ಗೆ ಇಳಿಕೆ

    ಹೈದರಾಬಾದ್: ಲಸಿಕೆ ಮತ್ತು ಔಷಧಿಯ ಸಂಸ್ಥೆ ಬಯಾಲಾಜಿಕಲ್ ಇ. ಲಿಮಿಟೆಡ್ ಅಭಿವೃದ್ಧಿಪಡಿಸಿರುವ ಕೊರೊನಾ ಲಸಿಕೆ ಕಾರ್ಬೆವಾಕ್ಸ್‌ನ ಬೆಲೆಯನ್ನು ಡೋಸ್‍ಗೆ 250 ರೂ. ನಿಗದಿಪಡಿಸಲಾಗಿದೆ.

    ಈ ಹಿಂದೆ ಖಾಸಗಿ ಲಸಿಕಾ ಕೇಂದ್ರಗಳಲ್ಲಿ ಕಾರ್ಬೆವಾಕ್ಸ್ ಬೆಲೆ 840 ರೂ. ಇತ್ತು. ಇದೀಗ ಲಸಿಕೆ ತಯಾರಿಕಾ ಸಂಸ್ಥೆ ಈ ಬೆಲೆಯನ್ನು 250 ರೂ.ಗೆ ಇಳಿಸಿದೆ. ಇದೀಗ ಟ್ಯಾಕ್ಸ್ ಮತ್ತು ಲಸಿಕೆ ನೀಡಿದ ಶುಲ್ಕ ಸೇರಿ 400 ರೂ.ಗಳಿಗೆ ಲಸಿಕೆಯನ್ನು ಪಡೆಯಬಹುದಾಗಿದೆ. ಇದನ್ನೂ ಓದಿ: ಬೆಂಗಳೂರು ನಗರ ಪೊಲೀಸ್‌ ಆಯುಕ್ತರಾಗಿ ಪ್ರತಾಪ್‌ ರೆಡ್ಡಿ ನೇಮಕ

    ಈ ಹಿಂದೆ ಲಸಿಕೆಯ ಟ್ಯಾಕ್ಸ್ ಮತ್ತು ಲಸಿಕೆ ನೀಡಿದ ಶುಲ್ಕ ಸೇರಿ ಒಟ್ಟು 900 ರೂ. ಆಗಿತ್ತು. ಇದೀಗ ಈ ಬೆಲೆ 400 ರೂ.ಗಳಿಗೆ ಇಳಿಕೆ ಕಂಡಿದೆ. ಈಗಾಗಲೇ 5 ರಿಂದ 12 ವರ್ಷದ ಮಕ್ಕಳಿಗೆ ಕಾರ್ಬೆವಾಕ್ಸ್ ತುರ್ತು ಬಳಕೆಗೆ (EUA) ಅವಕಾಶ ನೀಡಿದೆ. ಇದನ್ನೂ ಓದಿ: ಚಿಕ್ಕಬಳ್ಳಾಪುರದಲ್ಲಿ ಪದೇ ಪದೇ ಭೂಕಂಪನ – ಬಾಗೇಪಲ್ಲಿ ತಾಲೂಕಿನ ಹಲವೆಡೆ ಭೀಕರ ಶಬ್ದ

    ಮಾರ್ಚ್ 2022ರ ಬಳಿಕ 12 ರಿಂದ 14 ವರ್ಷದ ಮಕ್ಕಳಿಗೆ ಕಾರ್ಬೆವಾಕ್ಸ್ ಲಸಿಕೆಯನ್ನು ನೀಡಲಾಗುತ್ತಿದೆ ಈಗಾಗಲೇ ಸರ್ಕಾರಿ ಲಸಿಕಾ ಕೇಂದ್ರಗಳಲ್ಲಿ 145 ರೂ.ಗಳನ್ನು ನಿಗದಿಪಡಿಸಲಾಗಿದೆ. ಟೆಕ್ಸಾಸ್ ಚಿಲ್ಡ್ರನ್ ಮತ್ತು ಬೇಲರ್ ಕಾಲೇಜ್ ಆಫ್ ಮೆಡಿಸಿನ್ ಸಹಯೋಗದೊಂದಿಗೆ ಬಯಾಲಾಜಿಕಲ್ ಇ. ಲಿಮಿಟೆಡ್ ಕಾರ್ಬೆವಾಕ್ಸ್ ಲಸಿಕೆಯನ್ನು ಅಭಿವೃದ್ಧಿಪಡಿಸಿದೆ.