Tag: ಕಾರ್ಪೋರೇಷನ್

  • ಉದ್ದೇಶಪೂರ್ವಕವಾಗಿ ಬಿಬಿಎಂಪಿ ಬಿಜೆಪಿಯ ವೋಟ್ ಡಿಲೀಟ್ ಮಾಡಿದೆ: ಅಶೋಕ್

    ಉದ್ದೇಶಪೂರ್ವಕವಾಗಿ ಬಿಬಿಎಂಪಿ ಬಿಜೆಪಿಯ ವೋಟ್ ಡಿಲೀಟ್ ಮಾಡಿದೆ: ಅಶೋಕ್

    ಬೆಂಗಳೂರು: ಬಿಬಿಎಂಪಿ ಅಧಿಕಾರಿಗಳು ಉದ್ದೇಶ ಪೂರ್ವಕವಾಗಿ ಪ್ರತಿ ಬೂತ್‍ನಲ್ಲಿಯೂ 50ರಿಂದ 60 ಜನರ ಹೆಸರು ಮತಪಟ್ಟಿಯಿಂದ ಡಿಲೀಟ್ ಮಾಡಿದ್ದಾರೆ ಎಂದು ಬಿಜೆಪಿ ಮುಖಂಡ ಆರ್.ಅಶೋಕ್ ಆರೋಪಿಸಿದ್ದಾರೆ.

    ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪತ್ನಿಯ ಹೆಸರು ಇದ್ದರೆ ಪತಿಯ ಹೆಸರು ಇಲ್ಲ. ಪತಿಯ ಹೆಸರು ಇದ್ದರೆ ಪತ್ನಿಯ ಹೆಸರು ಇರಲ್ಲ. ಮತದಾರರ ಹೆಸರನ್ನು ಯಾಕೆ ತಗೆದು ಹಾಕಲಾಗಿದೆ ಎಂದು ಪಾಲಿಕೆಯವರು ಉತ್ತರ ಕೊಡಬೇಕು ಎಂದು ಆಗ್ರಹಿಸಿದರು.

    ಬಿಜೆಪಿಗೆ ಮತ ಹಾಕುತ್ತಾರೆ ಮತದಾರ ಪಟ್ಟಿಯಿಂದ ಅನೇಕರ ಹೆಸರು ತೆಗೆದು ಹಾಕಿದ್ದಾರೆ. ಅಮೆರಿಕದಿಂದ ಬಂದವರು ಮತದಾನ ಮಾಡಲು ಅವಕಾಶ ಸಿಗದೇ ಕಣ್ಣೀರು ಹಾಕಿದ್ದಾರೆ. ಇದು ಪಾಲಿಕೆ ಎಸಗಿದ ಲೋಪವಾಗಿದೆ. ಈ ಮೂಲಕ ಬೆಂಗಳೂರಿನಲ್ಲಿ 2 ಲಕ್ಷ ವೋಟ್ ಮಿಸ್ ಆಗಿವೆ. ಈ ಬಗ್ಗೆ ತನಿಖೆ ನಡೆಸುವಂತೆ ಚುನಾವಣೆ ಆಯೋಗವನ್ನು ಒತ್ತಾಯಿಸುತ್ತೆವೆ. ತಪ್ಪಿತ್ತಸ್ಥರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು. ಇದರಲ್ಲಿ ಕಾರ್ಪೋರೇಷನ್ ಅಧಿಕಾರಿಗಳು ಶಾಮೀಲಾಗಿದ್ದಾರೆ. ಮುಂದೆ ಹೀಗೆ ಆಗದಂತೆ ಎಚ್ಚರವಹಿಸಬೇಕು ಎಂದರು.

    ಒಂದು ಸಮುದಾಯದ ಮೇಲೆ ಗುರಿ ಇಟ್ಟುಕೊಂಡು ಈ ರೀತಿಯ ಕೆಲಸ ಮಾಡಲಾಗಿದೆ. ಮಾರ್ಚ್ 16ರಂದು ನೀಡಿದ ಪಟ್ಟಿಯಲ್ಲಿ ಮತದಾರರ ಹೆಸರು ಇತ್ತು. ನಿನ್ನೆಯ ಪಟ್ಟಿಯಲ್ಲಿ ಬಹುತೇಕರ ಹೆಸರು ಡಿಲೀಟ್ ಮಾಡಿದ್ದಾರೆ ಇದಕ್ಕೆ ಪಾಲಿಕೆ ಅಧಿಕಾರಿಗಳೇ ಕಾರಣ. ಮತದಾರರ ಪಟ್ಟಿಯಿಂದ ಈ ಬಾರಿ ಕೈಬಿಟ್ಟಿದ್ದವರು ವಿಧಾನಸಭಾ ಚುನಾವಣೆಯಲ್ಲಿ ವೋಟ್ ಮಾಡಿದ್ದಾರೆ. ಈಗ ಅದು ಹೇಗೆ ಡಿಲೀಟ್ ಆಯಿತು? ಬೇಕಾದರೆ ಮತದಾರ ಪಟ್ಟಿಯಿಂದ ಹೆಸರು ಕೈಬಿಟ್ಟವರನ್ನು ಕರೆದುಕೊಂಡು ಬರುತ್ತೇನೆ. ಇದೇ ಕಾರಣಕ್ಕೆ ಈ ಬಾರಿ ಮತದಾನ ಪ್ರಮಾಣ ಕಡಿಮೆಯಾಗಿದೆ ಎಂದು ಹೇಳಿದರು.

    ಮೊದಲ ಹಂತದ ಚುನಾವಣೆಯಲ್ಲಿ ಅತಿ ಉತ್ಸಾಹದಿಂದ ಜನರು ವೋಟ್ ಮಾಡಿದ್ದಾರೆ. ವೃದ್ಧರೂ, ಗರ್ಭಿಣಿಯರು, ಮಾತೆಯರು, ಮತದಾನದ ಹಬ್ಬದಲ್ಲಿ ಭಾಗವಹಿಸಿದ್ದರು. ಮತದಾನ ಮಾಡಿದ ಎಲ್ಲರಿಗೂ ಬಿಜೆಪಿ ಕಡೆಯಿಂದ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

  • ಲೀವ್ ಲೆಟರ್ ತರದಿದ್ದಕ್ಕೆ 10ರ ಬಾಲಕಿಗೆ ಥಳಿಸಿದ್ದ ಶಿಕ್ಷಕ ಅಮಾನತು

    ಲೀವ್ ಲೆಟರ್ ತರದಿದ್ದಕ್ಕೆ 10ರ ಬಾಲಕಿಗೆ ಥಳಿಸಿದ್ದ ಶಿಕ್ಷಕ ಅಮಾನತು

    ಮುಂಬೈ: ಎರಡು ದಿನದ ರಜಾ ಅರ್ಜಿಯನ್ನು ತರದಕ್ಕೆ 10 ವರ್ಷದ ಬಾಲಕಿಗೆ ಚೆನ್ನಾಗಿ ಥಳಿಸಿದ್ದ ಮುಂಬೈ ಶಾಲೆಯೊಂದರ ತರಗತಿ ಶಿಕ್ಷಕರೊಬ್ಬರು ಅಮಾನತುಗೊಂಡಿದ್ದಾರೆ.

    ಈ ಘಟನೆ ನಗರದ ಮುನ್ಸಿಪಲ್ ಕಾರ್ಪೋರೇಷನ್ ನಡೆಸಲ್ಪಡುವ ಸಾಯಿ ಜೀವನ್ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ನಡೆದಿದೆ. ಘಟನೆಯಿಂದ ಅಮನಾತಾದ ಶಿಕ್ಷಕನನ್ನು ಶ್ರೀಕೃಷ್ಣ ಕೆಂಜಾಲೆ ಎಂದು ಗುರುತಿಸಲಾಗಿದೆ.

    ಏನಿದು ಘಟನೆ?: 5ನೇ ತರಗತಿಯಲ್ಲಿ ಓದುತ್ತಿದ್ದ ಬಿಹಾದ ಮೂಲದ ವಿದ್ಯಾರ್ಥಿನಿ ಹೊಟ್ಟೆ ನೋವು ಅಂತ ಎರಡು ದಿನ ಶಾಲೆಗೆ ಹೋಗಿರಲಿಲ್ಲ. ಆದ್ರೆ ರಜೆ ಕಳೆದು ಶಾಲೆಗೆ ಹೋಗಬೇಕಿದ್ರೆ ಆಕೆ ರಜೆಯ ಅರ್ಜಿಯನ್ನು ತೆದುಕೊಂಡು ಹೋಗಲು ಮರೆತಿದ್ದಳು. ಇದರಿಂದ ಸಿಟ್ಟುಗೊಂಡ ಶಿಕ್ಷಕ ಆಕೆಗೆ ಶಿಕ್ಷೆಯಾಗಿ ಚೆನ್ನಾಗಿ ಥಳಿಸಿದ್ದಾರೆ. ಪರಿಣಾಮ ಬಾಲಕಿಯ ಬಲಗೈಯಲ್ಲಿ ಬಾಸುಂಡೆ ಬಂದಿದೆ.

    ಬುಧವಾರ ಈ ಘಟನೆ ನಡೆದಿದ್ದು, ಬಾಲಕಿಯ ತಂದೆ ಕಟ್ಟಡ ಕಾರ್ಮಿಕರಾಗಿದ್ದು ಈ ವಿಚಾರವನ್ನು ಪಾಲಿಕೆ ಸದಸ್ಯ ರಾಹುಲ್ ಜಾಧವ್ ಅವರಿಗೆ ತಿಳಿಸಿದ್ದಾರೆ. ಕೂಡಲೇ ಜಾಧವ್ ಅವರು ಪುಣೆ ನಗರಾಯುಕ್ತರಿಗೆ ವಿಷಯ ತಿಳಿಸುತ್ತಾರೆ. ಜಾಧವ್ ಮಾಹಿತಿಯಂತೆ ಅವರು ಚಿಕಾಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆದ್ರೆ ಘಟನೆಯ ಬಗ್ಗೆ ಬಾಲಕಿ ಅಥವಾ ಆಕೆಯ ತಂದೆ ಯಾವುದೇ ದೂರು ದಾಖಲಿಸಿಲ್ಲ ಎಂಬುದಾಗಿ ವರದಿಯಾಗಿದೆ.

    ಸದ್ಯ ಬಾಲಕಿ ನಗರದ ಯಶ್ವಂತ್ ರಾವ್ ಚೌಹಾಣ್ ಮೆಮೊರಿಯಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿದ್ದಾಳೆ. ಇನ್ನು ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳುತ್ತೇನೆ. ಅಷ್ಟಕ್ಕೂ ಈ ಘಟನೆ ನಡೆದ ದಿನ ಪ್ರಾಂಶುಪಾಲರು ಗೈರಾಗಿದ್ದರು. ಸದ್ಯ ಪ್ರಕರಣ ಸಂಬಂಧ ಶಿಕ್ಷಕನನ್ನು ಶಾಲೆಯಿಂದ ಅಮಾನತು ಮಾಡಿದ್ದೇವೆ ಅಂತ ಶಿಕ್ಷಣಾಧಿಕಾರಿ ಬಿ ಎಸ್ ಅವಾರಿ ತಿಳಿಸಿದ್ದಾರೆ.