Tag: ಕಾರ್ತಿ ಚಿದಂಬರಂ

  • ಇವಿಎಂ ಮ್ಯಾನಿಪ್ಯುಲೆಟ್ ಆಗಿದೆ ಅನ್ನೋದಕ್ಕೆ ಸಾಕ್ಷಿಗಳಿಲ್ಲ – ಕಾಂಗ್ರೆಸ್‌ ಸಂಸದ ಕಾರ್ತಿ ಚಿದಂಬರಂ

    ಇವಿಎಂ ಮ್ಯಾನಿಪ್ಯುಲೆಟ್ ಆಗಿದೆ ಅನ್ನೋದಕ್ಕೆ ಸಾಕ್ಷಿಗಳಿಲ್ಲ – ಕಾಂಗ್ರೆಸ್‌ ಸಂಸದ ಕಾರ್ತಿ ಚಿದಂಬರಂ

    – ಇವಿಎಂ ಬಗ್ಗೆ ನನಗೆ ಯಾವುದೇ ಸಂಶಯವಿಲ್ಲ ಎಂದ ಸಂಸದ

    ನವದೆಹಲಿ: ಇವಿಎಂ ಮ್ಯಾನಿಪ್ಯುಲೇಟ್‌ (EVM Manipulate) ಅಥವಾ ಟ್ಯಾಂಪರಿಂಗ್‌ ಆಗಿದೇ ಅನ್ನೋದನ್ನ ಸಾಬೀತುಪಡಿಸಲು ನನ್ನ ಬಳಿ ಯಾವುದೇ ಸಾಕ್ಷಿಗಳಿಲ್ಲ. ಹಾಗಾಗಿ ನನಗೆ ವೈಯಕ್ತಿಕವಾಗಿ ಯಾವುದೇ ರೀತಿಯ ಸಂಶಗಳೂ ಇಲ್ಲ ಎಂದು ಕಾಂಗ್ರೆಸ್‌ ಸಂಸದ ಕಾರ್ತಿ ಚಿದಂಬರಂ (Karti Chidambaram) ಹೇಳಿದ್ದಾರೆ.

    ಒಂದು ದಿನದ ಹಿಂದೆಯಷ್ಟೇ ಕರ್ನಾಟಕ ಗೃಹ ಸಚಿವ ಜಿ. ಪರಮೇಶ್ವರ್‌ ಮಹಾರಾಷ್ಟ್ರ ಚುನಾವಣಾ ಫಲಿತಾಂಶದ ಕುರಿತು ಪ್ರತಿಕ್ರಿಯಿಸುವಾಗ ಇವಿಎಂ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಈ ಬೆನ್ನಲ್ಲೇ ಕಾಂಗ್ರೆಸ್‌ ಸಂಸದರೂ ಆಗಿರುವ ಕಾರ್ತಿ ಚಿದಂಬರಂ ಇದಕ್ಕೆ ವ್ಯತಿರಿಕ್ತವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ: ಭೋವಿ ನಿಗಮ ಹಗರಣದ ತನಿಖೆ ಎದುರಿಸಿದ್ದ ಮಹಿಳೆ ಆತ್ಮಹತ್ಯೆ ಕೇಸ್ – ಸಿಸಿಬಿಗೆ ವರ್ಗಾವಣೆ

    ಇವಿಎಂ ಹ್ಯಾಕ್‌ ಆರೋಪದ ಕುರಿತು ದೆಹಲಿಯಲ್ಲಿ ಮಾತನಾಡಿದ ಕಾರ್ತಿ ಚಿದಂಬರಂ ಅವರು, ನಾನು 2004 ರಿಂದ ಇವಿಎಂಗಳನ್ನು ಬಳಸಿಕೊಂಡು ಚುನಾವಣೆಯಲ್ಲಿ ಭಾಗವಹಿಸುತ್ತಿದ್ದೇನೆ. ನನಗೆ ವೈಯಕ್ತಿಕವಾಗಿ ಯಾವುದೇ ಕೆಟ್ಟ ಅನುಭವವಾಗಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಇವಿಎಂ ಹ್ಯಾಕ್‌ನಿಂದಲೇ ಮಹಾರಾಷ್ಟ್ರ ಕಳೆದುಕೊಂಡಿದ್ದೇವೆ – ಪರಮೇಶ್ವರ್‌

    ಇವಿಎಂ ಮ್ಯಾನಿಪ್ಯುಲೇಟ್‌ ಅಥವಾ ಟ್ಯಾಂಪರಿಂಗ್‌ ಆಗಿದೆ ಅನ್ನೋದನ್ನ ಸಾಬೀತುಪಡಿಸಲು ನನ್ನ ಬಳಿ ಯಾವುದೇ ಸಾಕ್ಷಿಗಳಿಲ್ಲ. ಹಾಗಾಗಿ ನನಗೆ ವೈಯಕ್ತಿಕವಾಗಿ ಯಾವುದೇ ರೀತಿಯ ಸಂಶಗಳಿಲ್ಲ. ಇವಿಎಂಗಳ ಬಗ್ಗೆ ಅಂತಹ ಸಂದೇಹವಿದ್ದರೆ, ಅದನ್ನ ಅವರೇ ಹೇಳಬೇಕು. ಏಕೆಂದರೆ ಇವಿಎಂನಿಂದಲೇ ಚುನಾವಣೆ ಗೆದ್ದಿದ್ದೇವೆ. ಇವಿಎಂನಿಂದಲೇ ಚುನಾವಣೆ ಸೋತಿದ್ದೇವೆ. ಇವಿಎಂ ಮ್ಯಾನಿಪ್ಯುಲೇಟ್‌ ಆಗಿದೆ ಅನ್ನೋದನ್ನ ವೈಜ್ಞಾನಿಕ ಡೇಟಾದೊಂದಿಗೆ ಸಾಬೀತುಪಡಿಸಿದ ಹೊರತು, ನನ್ನ ದೃಷ್ಟಿಕೋನವನ್ನು ನಾನು ಬದಲಾಯಿಸಿಕೊಳ್ಳಲು ಸಿದ್ಧನಿಲ್ಲ ಎಂದಿದ್ದಾರೆ.

    ನಮ್ಮ ಪಕ್ಷದ ಅನೇಕರು ಇವಿಎಂ ಬಗ್ಗೆ ವಿಭಿನ್ನ ದೃಷ್ಟಿಕೋನ ಹೊಂದಿದ್ದಾರೆ ಅನ್ನೋದು ನನಗೆ ತಿಳಿದಿದೆ. ಅದು ಅವರ ವೈಯಕ್ತಿಕ ಅಭಿಪ್ರಾಯ ಆಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಅಂಡಮಾನ್‌ | ಬೋಟ್‌ನಲ್ಲಿ ಸಾಗಿಸ್ತಿದ್ದ 5 ಟನ್‌ ಮಾದಕ ವಸ್ತು ವಶಪಡಿಸಿಕೊಂಡ ಕೋಸ್ಟ್ ಗಾರ್ಡ್‌

    ಪರಮೇಶ್ವರ್‌ ಹೇಳಿದ್ದೇನು?
    ಇವಿಎಂ ಹ್ಯಾಕ್‌ನಿಂದಲೇ (EVM Hack) ಮಹಾರಾಷ್ಟ್ರ ಕಳೆದುಕೊಂಡಿದ್ದೇವೆ ಅನ್ನಿಸುತ್ತಿದೆ. ಸ್ಟ್ರಾಟಜಿ ಮಾಡುವುದರಲ್ಲೂ ನಾವು ಫೇಲ್ ಆಗಿದ್ದೇವೆ. ಮಹಾರಾಷ್ಟ್ರದಲ್ಲಿ (Maharashtra) ನಾವು ಅಗಾಡಿ ಸರ್ಕಾರ ಬರುತ್ತದೆ ಅಂದುಕೊಂಡಿದ್ದೆವು. ಆದರೆ ಎಲ್ಲವೂ ಉಲ್ಟಾ ಆಗಿದೆ. ಅಶೋಕ್ ಗೆಹ್ಲೋಟ್, ಭಗೇಲ್ ಸೇರಿ ಅನುಭವಿ ಸಿಎಂಗಳು ಚರ್ಚೆ ಮಾಡಿದ್ದೇವೆ. ಬಹಳಷ್ಟು ಕಡೆ ಇವಿಎಂ ಮ್ಯಾನಿಪ್ಯುಲೆಟ್ ಮಾಡಿದ್ದಾರೆ ಎಂದು ಚರ್ಚೆ ಆಗಿದೆ. ಆದ್ರೆ ಜಾರ್ಖಂಡ್‌ನಲ್ಲಿ ಯಾಕೆ ಹಾಗಾಗಲಿಲ್ಲ? ಬಿಜೆಪಿಯವರು ಪ್ಲ್ಯಾನ್ ಆಫ್ ಆಕ್ಷನ್ ತರಹ ಇದನ್ನು ಮಾಡ್ತಾರೆ. ನಂಬಿಕೆ ಬರಬೇಕು ಅಂತ ಕೆಲವು ರಾಜ್ಯಗಳಲ್ಲಿ ಇವಿಎಂ ಹ್ಯಾಕ್ ಮಾಡುವುದಿಲ್ಲ. ಇವಿಎಂ ಹ್ಯಾಕ್‌ನಿಂದಲೇ ಮಹಾರಾಷ್ಟ್ರ ಕಳೆದುಕೊಂಡಿದ್ದೇವೆ ಅನ್ನಿಸುತ್ತಿದೆ. ಸ್ಟ್ರಾಟಜಿ ಮಾಡುವುದರಲ್ಲಿ ಕೂಡ ನಾವು ಫೇಲ್ ಆಗಿದ್ದೇವೆ.

    ಇವಿಎಂ ಇರುವ ತನಕ ಅವರೇ ಗೆಲ್ಲುತ್ತಾರೆ ಅನ್ನಿಸುತ್ತದೆ. ಬ್ಯಾಲೆಟ್ ಪೇಪರ್ ಬರಬೇಕು ಅಂತ ನಾವು ಮೊದಲಿನಿಂದಲೂ ಒತ್ತಾಯ ಮಾಡುತ್ತಿದ್ದೇವೆ ಎಂದು ಹೇಳಿದ್ದರು.

  • ಮೋದಿಗೆ ರಾಹುಲ್‌ ಸರಿಸಾಟಿಯಲ್ಲ – ಕಾರ್ತಿ ಚಿದಂಬರಂಗೆ ಶೋಕಾಸ್‌ ನೋಟಿಸ್‌ ಜಾರಿ

    ಮೋದಿಗೆ ರಾಹುಲ್‌ ಸರಿಸಾಟಿಯಲ್ಲ – ಕಾರ್ತಿ ಚಿದಂಬರಂಗೆ ಶೋಕಾಸ್‌ ನೋಟಿಸ್‌ ಜಾರಿ

    ನವದೆಹಲಿ: ಲೋಕಸಭಾ ಚುನಾವಣೆ (Lok Sabha Election) ಹತ್ತಿರ ಬರುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರಿಗೆ ಸರಿಸಾಟಿ ಯಾರು ಇಲ್ಲ ಎಂದ ಚಿದಂಬರಂ ಪುತ್ರ ಕಾರ್ತಿ ಚಿದಂಬರಂ ಅವರಿಗೆ ತಮಿಳುನಾಡು ಕಾಂಗ್ರೆಸ್‌ (Tamil Nadu Congress) ಶೋಕಾಸ್‌ (show cause) ನೋಟಿಸ್‌ ನೀಡಿದೆ.

    ಇದು ಪಕ್ಷದ ಹೇಳಿಕೆಯಲ್ಲ ಇದು ವೈಯಕ್ತಿಕ ಹೇಳಿಕೆ ಎಂದು ಹೇಳುವ ಮೂಲಕ ತಮಿಳುನಾಡು ಕಾಂಗ್ರೆಸ್‌ ಕಾರ್ತಿ ಚಿದಂಬರಂ (Karti Chidambaram) ಹೇಳಿಕೆಯಿಂದ ದೂರ ಉಳಿದಿದೆ.  ಇದನ್ನೂ ಓದಿ: 8‌ ಕೆಜಿ ಬೆಳ್ಳಿ ಪಾದುಕೆ ಹೊತ್ತು 7,200 km ಪಾದಯಾತ್ರೆ – 64ರ ವೃದ್ಧನ ಭಕ್ತಿಗೆ ರಾಮನ ಭಕ್ತರಿಂದ ಮೆಚ್ಚುಗೆ

     

    ಕಾರ್ತಿ ಚಿದಂಬರಂ ಎಐಸಿಸಿ ಸದಸ್ಯರಾಗಿದ್ದು ಹೈಕಮಾಂಡ್‌ ಜೊತೆ ಉತ್ತಮ ಸಂಬಂಧ ಹೊಂದಿದ್ದಾರೆ. ಹೀಗಾಗಿ ಅವರ ವಿರುದ್ಧ ಕ್ರಮಕೈಗೊಳ್ಳುವ ಅಧಿಕಾರ ರಾಜ್ಯ ಕಾಂಗ್ರೆಸ್‌ಗೆ ಇಲ್ಲ ಎಂದು ಪಕ್ಷದ ಮೂಲಗಳು ತಿಳಿಸಿವೆ. ಶೋಕಾಸ್‌ ನೋಟಿಸ್‌ ನೀಡಿದ್ದರೂ ಇಲ್ಲಿಯವರೆಗೆ ತಮಿಳುನಾಡು ಕಾಂಗ್ರೆಸ್‌ ನಾಯಕರು ಯಾರೂ ಸಾರ್ವಜನಿಕವಾಗಿ ಈ ವಿಚಾರದ ಬಗ್ಗೆ ಮಾತನಾಡಿಲ್ಲ.

    ತಮಿಳುನಾಡು ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷ ಹುದ್ದೆಯ ಮೇಲೆ ಕಾರ್ತಿ ಚಿದಂಬರಂ ಕಣ್ಣಿಟ್ಟಿದ್ದಾರೆ. ಪ್ರಸ್ತುತ ಕೆ.ಎಸ್‌ ಅಳಗಿರಿ ತಮಿಳುನಾಡು ಕಾಂಗ್ರೆಸ್‌ ಅಧ್ಯಕ್ಷರಾಗಿದ್ದಾರೆ. 2019ರ ಲೋಕಸಭಾ ಚುನಾವಣೆಗೆ ಮೊದಲು ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಇವರ 3 ವರ್ಷದ ಅವಧಿ ಅಂತ್ಯಗೊಂಡಿದ್ದರೂ ಯಾರು ಪ್ರಬಲ ನಾಯಕರು ಇಲ್ಲದ ಕಾರಣ ಮತ್ತೆ ಅಧ್ಯಕ್ಷರಾಗಿ ಮುಂದುವರಿದಿದ್ದಾರೆ. ಈಗ ಮೋದಿ ಕುರಿತ ನೀಡಿದ ಹೇಳಿಕೆಯಿಂದ ಕಾರ್ತಿ ಚಿದಂಬರಂಗೆ ಹಿನ್ನಡೆಯಾಗಿದೆ. ಇದನ್ನೂ ಓದಿ: ಅಯೋಧ್ಯೆಯ ಸೀತಾಮಾತೆಗೆ ಸೂರತ್‌ನಲ್ಲಿ ಸಿದ್ಧಗೊಂಡಿದೆ ಸ್ಪೆಷಲ್ ಸೀರೆ – ವಿಶೇಷತೆ ಏನು?

    ಕಾರ್ತಿ ಚಿದಂಬರಂ ಹೇಳಿದ್ದೇನು?
    ಸಂದರ್ಶನದಲ್ಲಿ ರಾಹುಲ್ ಗಾಂಧಿ ಪ್ರಬಲ ಪ್ರಧಾನಿ ಅಭ್ಯರ್ಥಿಯಾಗಲಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ರಾಹುಲ್ ಗಾಂಧಿಯಾಗಲಿ ಅಥವಾ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯಾಗಲಿ ನರೇಂದ್ರ ಮೋದಿ ಪ್ರಚಾರ ಕೌಶಲ್ಯಕ್ಕೆ ಸರಿಸಾಟಿಯಲ್ಲ. ನನ್ನ ತಿಳುವಳಿಕೆಯ ಪ್ರಕಾರ ಪ್ರಚಾರ ಕೌಶಲ್ಯದಲ್ಲಿ ಮೋದಿಯನ್ನು ಸೋಲಿಸುವುದು ಸಾಧ್ಯವಿಲ್ಲ ಎಂದಿದ್ದರು.

    ರಾಹುಲ್ ಗಾಂಧಿ ಮೋದಿಗೆ ಸಾಟಿಯಾಗುತ್ತಾರೆಯೇ ಎಂಬ ಪ್ರಶ್ನೆಗೆ ‘ಕಷ್ಟ’ ಎಂದು ಉತ್ತರಿಸಿದ್ದರು. ನಮ್ಮ ಪ್ರಧಾನಿ ಅಭ್ಯರ್ಥಿ ಕುರಿತು ಸಾರ್ವಜನಿಕ ಸಂದೇಶವನ್ನು ಶೀಘ್ರವೇ ನೀಡುವುದು ಅಗತ್ಯವಾಗಿದೆ. ಚುನಾವಣೆಯ ಕೊನೆ ಕ್ಷಣಗಳಲ್ಲಿ ನಮ್ಮ ಭರವಸೆಗಳು ಮತ್ತು ಯೋಜನೆಗಳನ್ನು ಘೋಷಿಸಬಾರದು. ಕನಿಷ್ಠ ನಾಲ್ಕರಿಂದ ಆರು ತಿಂಗಳು ಮೊದಲೇ ಘೋಷಣೆ ಮಾಡಬೇಕು. ಈ ರೀತಿ ಮಾಡಿದಾಗ ನಾವು ಜನರ ಮನಸ್ಸಿಗೆ ಮುಟ್ಟಲು ಸಾಧ್ಯವಾಗುತ್ತದೆ ಎಂದು ಉತ್ತರಿಸಿದ್ದರು.

  • ವೀಸಾ ಹಗರಣ – ನಿರೀಕ್ಷಣಾ ಜಾಮೀನು ಕೋರಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ ಕಾರ್ತಿ ಚಿದಂಬರಂ

    ವೀಸಾ ಹಗರಣ – ನಿರೀಕ್ಷಣಾ ಜಾಮೀನು ಕೋರಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ ಕಾರ್ತಿ ಚಿದಂಬರಂ

    ನವದೆಹಲಿ: ಅಕ್ರಮ ವೀಸಾ ನೀಡಿಕೆ ಆರೋಪದಡಿ ಜಾರಿ ನಿರ್ದೇಶನಾಲಯ (ಇಡಿ) ದಾಖಲಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರೀಕ್ಷಣಾ ಜಾಮೀನು ಕೋರಿ ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

    ಅಕ್ರಮ ವೀಸಾ ನೀಡಿಕೆ ಆರೋಪಕ್ಕೆ ಸಂಬಂಧಿಸಿದಂತೆ ಕಾರ್ತಿ ಚಿದಂಬರಂ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ದೆಹಲಿಯ ವಿಶೇಷ ನ್ಯಾಯಾಲಯ ನಿನ್ನೆ ವಜಾಗೊಳಿಸಿತ್ತು. ಆ ಬಳಿಕ ಇದೀಗ ನಿರೀಕ್ಷಣಾ ಜಾಮೀನು ಕೋರಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಇದನ್ನೂ ಓದಿ: ವೀಸಾ ಹಗರಣ – ಕಾರ್ತಿ ಚಿದಂಬರಂಗೆ ನಿರೀಕ್ಷಣಾ ಜಾಮೀನು ನಿರಾಕರಿಸಿದ ಕೋರ್ಟ್

    ಪಿ. ಚಿದಂಬರಂ ಕೇಂದ್ರ ಗೃಹ ಮಂತ್ರಿಯಾಗಿದ್ದಾಗ 2011ರಲ್ಲಿ 263 ಚೀನಾ ಪ್ರಜೆಗಳಿಗೆ ವೀಸಾ ನೀಡಿದ ಆರೋಪದಲ್ಲಿ ಕಾರ್ತಿ ಚಿದಂಬರಂ ಮತ್ತು ಸಿಎ ಎಸ್.ಭಾಸ್ಕರ್ ರಾಮನ್ ಸೇರಿದಂತೆ ಮತ್ತಿತರ ವಿರುದ್ಧ ಜಾರಿ ನಿರ್ದೇಶನಾಲಯ (ಇಡಿ) ಇತ್ತೀಚೆಗೆ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ದಾಖಲಿಸಿದ ಎಫ್‍ಐಆರ್‌ನ್ನು ಪರಿಗಣಿಸಿದ ಇಡಿ, ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಕಾರ್ತಿ ನಂ.1 ಆರೋಪಿ ಎಂದು ಪ್ರಕರಣ ದಾಖಲಿಸಿಕೊಂಡಿದೆ. ಇದನ್ನೂ ಓದಿ: ಸಿದ್ದರಾಮಯ್ಯ ಹುಚ್ಚ ಆತನಿಗೆ ಯಾವ ಆಸ್ಪತ್ರೆಯಲ್ಲೂ ಔಷಧಿ ಇಲ್ಲ: ಈಶ್ವರಪ್ಪ

  • ವೀಸಾ ಹಗರಣ – ಕಾರ್ತಿ ಚಿದಂಬರಂಗೆ ನಿರೀಕ್ಷಣಾ ಜಾಮೀನು ನಿರಾಕರಿಸಿದ ಕೋರ್ಟ್

    ವೀಸಾ ಹಗರಣ – ಕಾರ್ತಿ ಚಿದಂಬರಂಗೆ ನಿರೀಕ್ಷಣಾ ಜಾಮೀನು ನಿರಾಕರಿಸಿದ ಕೋರ್ಟ್

    ನವದೆಹಲಿ: ವೀಸಾ ನೀಡಿಕೆ ಆರೋಪದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ದಾಖಲಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಸಂಸದ ಕಾರ್ತಿ  ಚಿದಂಬರಂ ಸಲ್ಲಿಸಿದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ದೆಹಲಿಯ ವಿಶೇಷ ನ್ಯಾಯಾಲಯ ವಜಾಗೊಳಿಸಿದೆ.

    ಪಿ. ಚಿದಂಬರಂ ಕೇಂದ್ರ ಗೃಹ ಮಂತ್ರಿಯಾಗಿದ್ದಾಗ 2011ರಲ್ಲಿ 263 ಚೀನಾ ಪ್ರಜೆಗಳಿಗೆ ವೀಸಾ ನೀಡಿದ ಆರೋಪದಲ್ಲಿ ಕಾರ್ತಿ ಚಿದಂಬರಂ ಮತ್ತು ಸಿಎ ಎಸ್.ಭಾಸ್ಕರ್ ರಾಮನ್ ಸೇರಿದಂತೆ ಮತ್ತಿತರ ವಿರುದ್ಧ ಜಾರಿ ನಿರ್ದೇಶನಾಲಯ ಇತ್ತೀಚೆಗೆ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಿತ್ತು. ಆ ಬಳಿಕ ಮೇ 30 ರಂದು ಕಾರ್ತಿ ಚಿದಂಬರಂ ನಿರೀಕ್ಷಣಾ ಜಾಮೀನು ಆದೇಶವನ್ನು ದೆಹಲಿಯ ವಿಶೇಷ ನ್ಯಾಯಾಲಯ ಕಾಯ್ದಿರಿಸಿತ್ತು. ಇದನ್ನೂ ಓದಿ: ಅಪ್ರಾಪ್ತೆಯ ಮೇಲೆ ಗ್ಯಾಂಗ್ ರೇಪ್ ಪ್ರಕರಣ – ಆರೋಪಿಗಳನ್ನು ತಕ್ಷಣ ಬಂಧಿಸುವಂತೆ ಬಿಜೆಪಿ ಆಗ್ರಹ

    ಈ ಅರ್ಜಿಯನ್ನು ವಿಚಾರಣೆಗೆ ಒಳಪಡಿಸಿದ ವಿಶೇಷ ನ್ಯಾಯಾಧೀಶ ಎಂ.ಕೆ ನಾಗಪಾಲ್, ಈ ಅರ್ಜಿಯನ್ನು ಪರಿಗಣಿಸಲು ಸಾಕ್ಷ್ಯಾಧಾರಗಳ ಕೊರತೆ ಇದೆ ಎಂದು ಕಾರ್ತಿಗೆ ಜಾಮೀನು ಮಂಜೂರು ಮಾಡಲು ನಿರಾಕರಿಸಿದರು. ಇದನ್ನೂ ಓದಿ: ಉಡುಪಿಯ ಯುಪಿಸಿಎಲ್‍ಗೆ ಹಸಿರುಪೀಠ ಚಾಟಿ – ಅವಾಂತರಕ್ಕೆ 52 ಕೋಟಿ ರೂ. ದಂಡ

    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ದಾಖಲಿಸಿದ ಎಫ್‍ಐಆರ್‌ನ್ನು ಪರಿಗಣಿಸಿದ ಇಡಿ, ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಕಾರ್ತಿ ನಂ.1 ಆರೋಪಿ ಎಂದು ಪ್ರಕರಣ ದಾಖಲಿಸಿಕೊಂಡಿದೆ.

  • ದಾಳಿ ವೇಳೆ ಸಿಬಿಐ ನನ್ನ ವೈಯಕ್ತಿಕ ದಾಖಲೆಗಳನ್ನು ವಶಪಡಿಸಿಕೊಂಡಿದೆ – ಕಾರ್ತಿ ಚಿದಂಬರಂ ಆರೋಪ

    ದಾಳಿ ವೇಳೆ ಸಿಬಿಐ ನನ್ನ ವೈಯಕ್ತಿಕ ದಾಖಲೆಗಳನ್ನು ವಶಪಡಿಸಿಕೊಂಡಿದೆ – ಕಾರ್ತಿ ಚಿದಂಬರಂ ಆರೋಪ

    ನವದೆಹಲಿ: ಚೀನಾ ದೇಶದ ಪ್ರಜೆಗಳಿಗೆ ವೀಸಾ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯಾ ತನಿಖಾ ದಳದ(ಸಿಬಿಐ) ಅಧಿಕಾರಿಗಳು ತಮ್ಮ ಮನೆ ಹಾಗೂ ಕಚೇರಿ ಮೇಲೆ ದಾಳಿ ನಡೆಸಿದ ಸಮಯದಲ್ಲಿ ಕೆಲವು ಸೂಕ್ಷ್ಮ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ಆರೋಪಿಸಿದ್ದಾರೆ.

    ಈ ಕುರಿತಂತೆ ಲೋಕಸಭೆ ಸ್ಪೀಕರ್‌ಗೆ ಪತ್ರ ಬರೆದಿರುವ ಅವರು, ದಾಳಿ ನಡೆಸಿದ ವೇಳೆ ಕೆಲವು ಸಿಬಿಐನ ಅಧಿಕಾರಿಗಳು ಮಾಹಿತಿ ಮತ್ತು ತಂತ್ರಜ್ಞಾನಕ್ಕಾಗಿ ಸಂಸದೀಯ ಸ್ಥಾಯಿ ಸಮಿತಿಗೆ ಸಂಬಂಧಿಸಿದ ನನ್ನ ಅತ್ಯಂತ ಗೌಪ್ಯ ಮತ್ತು ಸೂಕ್ಷ್ಮ ವೈಯಕ್ತಿಕ ಪುಸ್ತಕಗಳನ್ನು ಮತ್ತು ಪತ್ರಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.

    ನಾನು ತೀವ್ರ ಕಾನೂನುಬಾಹಿರ ಮತ್ತು ಅಸಾಂವಿಧಾನಿಕ ಕ್ರಮಕ್ಕೆ ಬಲಿಯಾಗಿದ್ದೇನೆ. ಕೇಂದ್ರೀಯ ತನಿಖಾ ದಳವು, ನಾನು ಭಾಗಿಯಾಗಿಲ್ಲದ ಭಾರತ ಸರ್ಕಾರದ 11 ವರ್ಷಗಳ ಹಿಂದಿನ ನಿರ್ಧಾರಗಳ ಬಗ್ಗೆ ತನಿಖೆ ನಡೆಸುವ ನೆಪದಲ್ಲಿ ದೆಹಲಿಯಲ್ಲಿರುವ ನನ್ನ ನಿವಾಸದ ಮೇಲೆ ದಾಳಿ ಮಾಡಿದೆ ಎಂದಿದ್ದಾರೆ. ಇದನ್ನೂ ಓದಿ:  ಮದುವೆ ಮನೆಯಲ್ಲೂ MES ಕಿರಿಕ್ – ಕನ್ನಡ ಸಾಂಗ್ ಹಾಕಿದ್ದಕ್ಕೆ ವಧು, ವರ, ಕನ್ನಡಿಗರ ಮೇಲೆ ಹಲ್ಲೆ

    ಲಂಚ ಪಡೆದ ಆರೋಪದಡಿ ದೆಹಲಿ ಸಿಬಿಐ ಪ್ರಧಾನ ಕಚೇರಿಯಲ್ಲಿ ಕಾರ್ತಿ ಅವರನ್ನು ಸತತ ಎರಡನೇ ದಿನಗಳಿಂದ ವಿಚಾರಣೆ ನಡೆಸಲಾಗುತ್ತಿದೆ. ಈ ಮಧ್ಯೆ ತಮ್ಮ ಕರಡು ಟಿಪ್ಪಣಿಗಳು ಮತ್ತು ಪ್ರಶ್ನೆಗಳನ್ನು ಸಿಬಿಐ ವಶಪಡಿಸಿಕೊಂಡಿದೆ ಎಂದು ಸಿಬಿಐ ಅಧಿಕಾರಿಗಳ ವಿರುದ್ಧ ಕಾರ್ತಿ ಚಿದಂಬರಂ ಆರೋಪಿಸಿದ್ದಾರೆ.

    2011ರಲ್ಲಿ ಪಿ. ಚಿದಂಬರಂ ಕೇಂದ್ರ ಗೃಹ ಸಚಿವರಾಗಿದ್ದಾಗ 263 ಚೀನಾ ದೇಶದ ಪ್ರಜೆಗಳಿಗೆ ವೀಸಾ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ವಿದೇಶದಿಂದ ಆಗಮಿಸಿದ ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ಅವರನ್ನು 9 ಗಂಟೆಗಳ ಕಾಲ ಸಿಬಿಐ ಗುರುವಾರ ವಿಚಾರಣೆ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಬಟದ್ರವ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ ಪ್ರಮುಖ ಆರೋಪಿ ಅರೆಸ್ಟ್

    263 ಚೀನಾದ ಕೆಲಸಗಾರರಿಗೆ ವೀಸಾ ಒದಗಿಸಲು ಪಂಜಾಬ್ ನಲ್ಲಿ ವಿದ್ಯುತ್ ಘಟಕವೊಂದನ್ನು ನಿರ್ಮಿಸಿರುವ ವೇದಾಂತ ಗ್ರೂಪ್ ಕಂಪನಿಯ ಉನ್ನತ ಕಾರ್ಯನಿರ್ವಾಹಕರಿಂದ ಕಾರ್ತಿ ಮತ್ತು ಅವರ ಆಪ್ತ ಎಸ್ ಭಾಸ್ಕರರಮಣ್ ಅವರಿಂದ 50 ಲಕ್ಷ ಲಂಚ ಪಡೆದಿದ್ದಾರೆ ಎಂದು ಸಿಬಿಐ ಎಫ್‍ಐಆರ್ ನಲ್ಲಿ ದಾಖಲಿಸಿದೆ. ಆದರೆ, ತಮ್ಮ ಮೇಲಿನ ಎಲ್ಲಾ ಆರೋಪಗಳನ್ನು ಕಾರ್ತಿ ತಳ್ಳಿ ಹಾಕಿದ್ದಾರೆ.

  • ಚೀನಿ ಪ್ರಜೆಗಳಿಗೆ ವೀಸಾ ನೀಡಿದ ಪ್ರಕರಣ- ಕಾರ್ತಿ ಚಿದಂಬರಂಗೆ ಸಿಬಿಐ ಸಮನ್ಸ್

    ಚೀನಿ ಪ್ರಜೆಗಳಿಗೆ ವೀಸಾ ನೀಡಿದ ಪ್ರಕರಣ- ಕಾರ್ತಿ ಚಿದಂಬರಂಗೆ ಸಿಬಿಐ ಸಮನ್ಸ್

    ನವದೆಹಲಿ: ನಿಯಮ ಉಲ್ಲಂಘಿಸಿ ಚೀನಿ ಪ್ರಜೆಗಳಿಗೆ ವೀಸಾ ನೀಡಿರುವ ಪ್ರಕರಣದ ಹಿನ್ನೆಲೆಯಲ್ಲಿ ಇಂದು ವಿಚಾರಣೆಗೆ ಹಾಜರಾಗಲು ಕಾರ್ತಿ ಚಿದಂಬರಂಗೆ ಸಿಬಿಐ ಸಮನ್ಸ್ ನೀಡಿದೆ.

    2011ರಲ್ಲಿ ಪಿ. ಚಿದಂಬರಂ ಅವರು ಗೃಹ ಸಚಿವರಾಗಿದ್ದಾಗ 263 ಚೀನಿ ಪ್ರಜೆಗಳಿಗೆ ವೀಸಾ ನೀಡಿದ್ದ ಹಗರಣದ ತನಿಖೆಗೆ ಸಂಬಂಧಿಸಿ ಚಿದಂಬರ್ ಪುತ್ರ ಹಾಗೂ ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ಅವರನ್ನು ನವದೆಹಲಿಯ ಸಿಬಿಐ ಪ್ರಧಾನ ಕಚೇರಿಯಲ್ಲಿ ವಿಚಾರಣೆಗೆ ಒಳಪಡಿಸಲಾಗುವುದು. ಇದನ್ನೂ ಓದಿ: ಅಮೆರಿಕಾದ ಶಾಲೆಯಲ್ಲಿ ಶೂಟೌಟ್-18 ವಿದ್ಯಾರ್ಥಿಗಳು ಸೇರಿ 21 ಮಂದಿ ದುರ್ಮರಣ

    ಸುಪ್ರೀಂ ಕೋರ್ಟ್ ಮತ್ತು ವಿಶೇಷ ಸಿಬಿಐ ನ್ಯಾಯಾಲಯದ ಅನುಮತಿಯೊಂದಿಗೆ ಯುಕೆ ಮತ್ತು ಯುರೋಪ್ ಪ್ರವಾಸಕ್ಕೆ ತೆರಳಿರುವ ಕಾರ್ತಿ ಚಿದಂಬರಂ ಮಂಗಳವಾರ ವಾಪಸಾಗಿದ್ದಾರೆ. ಈ ಹಿನ್ನೆಲೆಯಲ್ಲಿ ವಿಶೇಷ ಸಿಬಿಐ ನ್ಯಾಯಾಲಯದ ಆದೇಶದ ಪ್ರಕಾರ, ಅವರು ಹಿಂದಿರುಗಿದ 16 ಗಂಟೆಗಳ ಒಳಗೆ ಸಿಬಿಐ ವಿಚಾರಣೆಗೆ ಒಳಪಡಬೇಕು ಎಂದು ಆದೇಶಿಸಲಾಗಿದೆ. ಇದನ್ನೂ ಓದಿ: ಹುಳ ಬಿದ್ದ ಅಕ್ಕಿ ಬಳಸಿ ಮಕ್ಕಳಿಗೆ ಬಿಸಿಯೂಟ – ಸ್ಥಳೀಯರ ಆಕ್ರೋಶ

  • ನನ್ನ ಹೆಸರಿನಲ್ಲಿ ಎಫ್‌ಐಆರ್ ಇಲ್ಲದಿದ್ದರೂ ಸಿಬಿಐ ದಾಳಿ ನಡೆಸಿದೆ: ಪಿ. ಚಿದಂಬರಂ

    ನನ್ನ ಹೆಸರಿನಲ್ಲಿ ಎಫ್‌ಐಆರ್ ಇಲ್ಲದಿದ್ದರೂ ಸಿಬಿಐ ದಾಳಿ ನಡೆಸಿದೆ: ಪಿ. ಚಿದಂಬರಂ

    ಚೆನ್ನೈ: ಕಾಂಗ್ರೆಸ್ ಹಿರಿಯ ನಾಯಕ ಪಿ. ಚಿದಂಬರಂ ಹಾಗೂ ಅವರ ಪುತ್ರ ಕಾರ್ತಿ ಚಿದಂಬರಂ ಅವರ ದೆಹಲಿ ಹಾಗೂ ಚೆನ್ನೈನಲ್ಲಿರುವ ಮನೆಗಳಲ್ಲಿ ಕೇಂದ್ರೀಯ ತನಿಖಾ ದಳ(ಸಿಬಿಐ) ಮಂಗಳವಾರ ಬೆಳ್ಳಂಬೆಳಗ್ಗೆ ಶೋಧ ಕಾರ್ಯ ನಡೆಸಿದೆ. ಈ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿದ ಪಿ. ಚಿದಂಬರಂ, ನನ್ನ ಹೆಸರಿನಲ್ಲಿ ಎಫ್‌ಐಆರ್ ದಾಖಲಾಗಿಲ್ಲ. ಆದರೂ ಸಿಬಿಐ ದಾಳಿ ನಡೆಸಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕಾರ್ತಿ ಚಿದಂಬರಂಗೆ ಬೆಳ್ಳಂಬೆಳಗ್ಗೆ ಶಾಕ್ – ಮನೆ ಸೇರಿ 7 ಕಡೆ ಸಿಬಿಐ ದಾಳಿ

    ಮಂಗಳವಾರ ಬೆಳಗ್ಗೆ ಸಿಬಿಐ ತಂಡ ಚೆನ್ನೈನಲ್ಲಿರುವ ನನ್ನ ನಿವಾಸ ಹಾಗೂ ದೆಹಲಿಯಲ್ಲಿರುವ ನನ್ನ ಅಧಿಕೃತ ನಿವಾಸವನ್ನು ಶೋಧಿಸಿವೆ. ಸಿಬಿಐ ತಂಡ ನನಗೆ ಎಫ್‌ಐಆರ್ ತೋರಿಸಿದೆ. ಆದರೆ ಅದರಲ್ಲಿ ನನ್ನ ಹೆಸರಿನಲ್ಲಿ ಯಾವುದೇ ಆರೋಪಗಳಿಲ್ಲ. ಶೋಧ ತಂಡಕ್ಕೆ ದಾಳಿಯಲ್ಲಿ ಯಾವುದೇ ವಸ್ತುಗಳು ಸಿಕ್ಕಿಲ್ಲ. ಅವರ ದಾಳಿ ಕುತೂಹಲ ಮೂಡಿಸಿತ್ತು ಎಂದು ಪಿ. ಚಿದಂಬರಂ ಟ್ವೀಟ್‌ನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಫ್ಯಾಟ್ ಸರ್ಜರಿಗೆ 1 ಲಕ್ಷ 60 ಸಾವಿರ ಕೊಟ್ಟಿದ್ದರಂತೆ ಚೇತನಾ ರಾಜ್ : ಕುಟುಂಬ ಆರೋಪ

    2010-14 ಅವಧಿಯಲ್ಲಿ ವಿದೇಶೀ ಹಣ ರವಾನೆ ಆರೋಪಕ್ಕೆ ಸಂಬಂಧಿಸಿದಂತೆ ಸಿಬಿಐ ಕಾರ್ತಿ ಚಿದಂಬರಂ ವಿರುದ್ಧ ಹೊಸ ಪ್ರಕರಣ ದಾಖಲಿಸಿಕೊಂಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ದೆಹಲಿ, ಮುಂಬೈ ಹಾಗೂ ತಮಿಳುನಾಡಿನ 7 ಕಡೆಗಳಲ್ಲಿ ದಾಳಿ ನಡೆಸಿದೆ.

  • ಪಿ.ಚಿದಂಬರಂ, ಪುತ್ರ ಕಾರ್ತಿ ವಿರುದ್ಧ ಚಾರ್ಜ್‍ಶೀಟ್ ಸಲ್ಲಿಕೆ

    ಪಿ.ಚಿದಂಬರಂ, ಪುತ್ರ ಕಾರ್ತಿ ವಿರುದ್ಧ ಚಾರ್ಜ್‍ಶೀಟ್ ಸಲ್ಲಿಕೆ

    ನವದೆಹಲಿ: ಮಾಜಿ ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ ಮತ್ತು ಕಾರ್ತಿ ಚಿದಂಬರಂ ವಿರುದ್ಧದ ಐಎನ್‍ಎಕ್ಸ್ ಮೀಡಿಯಾ ಭಷ್ಟಾಚಾರ ಪ್ರಕರಣದ ಚಾರ್ಜ್ ಶೀಟ್‍ನ್ನು ಜಾರಿ ನಿರ್ದೇಶನಾಲಯ ನ್ಯಾಯಾಲಯಕ್ಕೆ ಸಲ್ಲಿಸಿದೆ.

    ವಿಶೇಷ ನ್ಯಾಯಾಧೀಶ ಅಜಯ್ ಕುಮಾರ್ ಕುಹಾರ್ ಎದುರು ಜಾರಿ ನಿರ್ದೇಶನಾಲಯ ಪಾಸ್‍ವರ್ಡ್ ಆಧಾರಿತ ಇ-ಚಾರ್ಜ್‍ಶೀಟ್ ನ್ನು ಸಲ್ಲಿಕೆ ಮಾಡಿದೆ. ಲಾಕ್‍ಡೌನ್ ಹಿನ್ನೆಲೆಯಲ್ಲಿ ನ್ಯಾಯಾಲಯದ ಕಾರ್ಯಗಳು ಸ್ಥಗಿತಗೊಂಡಿವೆ. ನ್ಯಾಯಾಲಾಯ ಆರಂಭವಾದ ಕೂಡಲೇ ಆರೋಪ ಪಟ್ಟಿಯನ್ನು ದಾಖಲೆಗಳಲ್ಲಿ ಸಲ್ಲಿಸುವಂತೆ ಸೂಚಿಸಿದೆ. ಆರೋಪ ಪಟ್ಟಿಯಲ್ಲಿ ಪಿ.ಚಿದಂಬರಂ, ಪುತ್ರ ಕಾರ್ತಿ ಚಿದಂಬರಂ, ಚಾರ್ಟೆಟ್ ಅಕೌಂಟಂಟ್ ಎಸ್.ಎಸ್. ಭಾಸ್ಕರರಾಮನ್ ಸೇರಿದಂತೆ ಹಲವರ ಹೆಸರುಗಳಿವೆ ಎಂದು ವರದಿಯಾಗಿದೆ.

    2019 ಆಗಸ್ಟ್ 21ರಂದು ಐಎನ್‍ಎಕ್ಸ್ ಮೀಡಿಯಾ ಭ್ರಷ್ಟಾಚಾರ ಪ್ರಕರಣದಲ್ಲಿ ಪಿ.ಚಿದಂಬರಂ ಸಿಬಿಐನಿಂದ ಬಂಧನಕ್ಕೊಳಕ್ಕಾಗಿದ್ದರು. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಅಕ್ಟೋಬರ್ 16ರಂದು ಚಿದಂಬರಂ ಅವರನ್ನ ಬಂಧಿಸಿತ್ತು. ಸುಪ್ರೀಂಕೋರ್ಟ್ 2019 ಅಕ್ಟೋಬರ್ 22ರಂದು ಸಿಬಿಐ ಸಲ್ಲಿಸಿದ್ದ ಪ್ರಕರಣದಲ್ಲಿ ಜಾಮೀನು ನೀಡಿತ್ತು. ಡಿಸೆಂಬರ್ 4ರಂದು ಇಡಿ ಪ್ರಕರಣದಲ್ಲಿ ಜಾಮೀನು ಪಡೆದು ಪಿ.ಚಿದಂಬರಂ ಹೊರ ಬಂದಿದ್ದಾರೆ.

  • ಪೊಲೀಸರು ಎನ್‍ಕೌಂಟರ್ ಮಾಡಿದ್ದು ಸರಿ: ಅತ್ಯಾಚಾರ ಆರೋಪಿಯ ತಂದೆ

    ಪೊಲೀಸರು ಎನ್‍ಕೌಂಟರ್ ಮಾಡಿದ್ದು ಸರಿ: ಅತ್ಯಾಚಾರ ಆರೋಪಿಯ ತಂದೆ

    ಹೈದರಾಬಾದ್: ಹೈದರಾಬಾದ್ ಪಶುವೈದ್ಯೆಯ ಮೇಲೆ ಅತ್ಯಾಚಾರ ಎಸಗಿ, ಕೊಲೆಗೈದಿದ್ದ ಆರೋಪಿಗಳನ್ನು ಪೊಲೀಸರು ಎನ್‍ಕೌಂಟರ್ ಮಾಡಿದ್ದಕ್ಕೆ ಅನೇಕರು ವಿರೋಧಿಸುತ್ತಿದ್ದಾರೆ. ಆದರೆ ಆರೋಪಿಗಳ ಪೈಕಿ ಓರ್ವನ ತಂದೆ, ಪೊಲೀಸರು ಮಾಡಿದ್ದನ್ನು ನಾನು ಸ್ವೀಕರಿಸುತ್ತೇನೆ ಎಂದು ಹೇಳಿದ್ದಾರೆ.

    ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಪೊಲೀಸರು ಏನು ಮಾಡಿದ್ದಾರೋ ಅದನ್ನು ನಾನು ಒಪ್ಪುತ್ತೇನೆ. ಆರೋಪಿಗಳಿಗೆ ಸಾರ್ವಜನಿಕವಾಗಿ ಶಿಕ್ಷೆ ಕೊಡಬೇಕು, ಗಲ್ಲಿಗೆ ಏರಿಸಬೇಕು ಎಂಬ ಮಾತುಗಳು ಕೇಳಿ ಬಂದಿದ್ದವು. ಹೀಗಾಗಿ ಪೊಲೀಸರು ನಾಲ್ವರನ್ನೂ ಎನ್‍ಕೌಂಟರ್ ಮಾಡಿದ್ದಾರೆ ಎನ್ನುವುದು ನಮಗೆ ತಿಳಿದಿದೆ. ಆದರೆ ಅನೇಕ ಅತ್ಯಾಚಾರ ಪ್ರಕರಣದಲ್ಲಿ ಪೊಲೀಸರು ಏಕೆ ಅದೇ ರೀತಿ ಮಾಡುವುದಿಲ್ಲ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಎನ್‍ಕೌಂಟರ್ ಮಾಡುವ ಮೊದಲು ನೋಡಲು ಅವಕಾಶ ನೀಡಬೇಕಿತ್ತು: ಆರೋಪಿ ತಂದೆ

    ಆದರೆ ಆರೋಪಿ ಚೆನ್ನಕೇಶವುಲು ಪತ್ನಿ ಪ್ರತಿಕ್ರಿಯಿಸಿ, ಪತಿಯನ್ನು ಕೊರೆದೊಯ್ದು ಹತ್ಯೆಗೈದವರನ್ನೂ ಕೊಲೆ ಮಾಡಿ. ಪತಿ ಇಲ್ಲದೆ ನಾನು ಹೇಗೆ ಬದುಕಲಿ. ನಾನು ಕೂಡ ಸಾಯುತ್ತೇನೆ ಎಂದು ಹೇಳಿದ್ದಾಳೆ.

    ಇದೇ ವಿಚಾರವಾಗಿ ಟ್ವೀಟ್ ಮಾಡಿರುವ ಕಾರ್ತಿ ಚಿದಂಬರಂ, ಅತ್ಯಾಚಾರವು ಘೋರ ಅಪರಾಧ. ಇಂತಹ ಪ್ರಕರಣಗಳು ಕಾನೂನಿನ ನಿಬಂಧನೆಗಳ ಅಡಿಯಲ್ಲೇ ಇತ್ಯರ್ಥವಾಗಬೇಕು. ಈ ದುಷ್ಕೃತ್ಯದ ಆರೋಪಿಗಳ ಬಗ್ಗೆ ಬಗ್ಗೆ ನನಗೆ ಯಾವುದೇ ಅನುಕಂಪವಿಲ್ಲ. ಎನ್‍ಕೌಂಟರ್ ನಮ್ಮ ವ್ಯವಸ್ಥೆಗೆ ಕಳಂಕವಾಗಿದೆ. ತ್ವರಿತ ನ್ಯಾಯದ ಪ್ರಚೋದನೆಯನ್ನು ನಾನು ಅರ್ಥಮಾಡಿಕೊಂಡಿದ್ದರೂ, ಇದು ಸರಿಯಾದ ಮಾರ್ಗವಲ್ಲ ಎಂದು ಬರೆದುಕೊಂಡಿದ್ದಾರೆ.

    ಕಾರ್ತಿ ಚಿದಂಬರಂ ಹೇಳಿಕೆ ಬಗ್ಗೆ ಭಾರೀ ಟೀಕೆ ವ್ಯಕ್ತವಾಗಿದೆ. ಅತ್ಯಾಚಾರಿಗಳನ್ನು ಅಷ್ಟೇ ಅಲ್ಲ ಭ್ರಷ್ಟ ರಾಜಕಾರಣಿಗಳನ್ನು ಎನ್‍ಕೌಂಟರ್ ಮಾಡಬೇಕು ಎಂದು ನೆಟ್ಟಿಗರೊಬ್ಬರು ಕಿಡಿಕಾರಿದ್ದಾರೆ. ಮತ್ತೊಬ್ಬರು ರಿಟ್ವೀಟ್ ಮಾಡಿ, ರಾಜಕಾರಣಿಯಾಗಿ ನೀವು ಹೇಳುತ್ತಿರುವುದು ಎಷ್ಟು ಸರಿ? ನಿಮ್ಮ ಕುಟುಂಬದವರಿಗೆ ಈ ರೀತಿ ಆಗಿದ್ದರೆ ಸುಮ್ಮನಿರುತ್ತಿದ್ದಿರಾ ಎಂದು ಪ್ರಶ್ನಿಸಿದ್ದಾರೆ.

  • ಪಶುವೈದ್ಯೆ ಅತ್ಯಾಚಾರಿಗಳನ್ನು ಎನ್‍ಕೌಂಟರ್ ಮಾಡಿದ್ದು ಸರಿಯಲ್ಲ: ಕಾರ್ತಿ ಚಿದಂಬರಂ

    ಪಶುವೈದ್ಯೆ ಅತ್ಯಾಚಾರಿಗಳನ್ನು ಎನ್‍ಕೌಂಟರ್ ಮಾಡಿದ್ದು ಸರಿಯಲ್ಲ: ಕಾರ್ತಿ ಚಿದಂಬರಂ

    ನವದೆಹಲಿ: ಹೈದರಾಬಾದ್ ಪಶುವೈದ್ಯೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ, ಕೊಲೆಗೈದಿದ್ದ ಆರೋಪಿಗಳನ್ನು ಎನ್‍ಕೌಂಟರ್ ಮಾಡಿದ್ದಕ್ಕೆ ದೇಶದಲ್ಲಿ ಖುಷಿ ವ್ಯಕ್ತವಾಗಿದೆ. ಪೊಲೀಸರ ಕಾರ್ಯಕ್ಕೆ ಭಾರೀ ಮಟ್ಟದಲ್ಲಿ ಶ್ಲಾಘನೆ ವ್ಯಕ್ತವಾಗಿದೆ. ಈ ಮಧ್ಯೆ ಕೆಲವರು ಎನ್‍ಕೌಂಟರ್ ಬಗ್ಗೆ ಅಪಸ್ವರ ಎತ್ತಿದ್ದಾರೆ. ಕಾಂಗ್ರೆಸ್ ಮುಖಂಡ ಕಾರ್ತಿ ಚಿದಂಬರಂ ಕೂಡ ಎನ್‍ಕೌಂಟರ್ ಮಾಡಿದ್ದು ಸರಿಯಲ್ಲ ಎಂದು ಹೇಳಿದ್ದಾರೆ.

    ಶಾದ್‍ನಗರದ ಚಟಾನ್‍ಪಲ್ಲಿ ಬ್ರಿಡ್ಜ್ ಮೇಲೆ ಆರೋಪಿಗಳು ಪರಾರಿಗೆ ಯತ್ನಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ನಾಲ್ವರು ಅತ್ಯಾಚಾರಿಗಳ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ. ತೀವ್ರ ಗಾಯಗೊಂಡ ಇವರನ್ನು ಆಸ್ಪತ್ರೆಗೆ ದಾಖಲು ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಇದನ್ನೂ ಓದಿ: ಎನ್‍ಕೌಂಟರ್ ‘ಯೋಜಿತ ಕೊಲೆ’, ಅಂಗಾಂಗಳ ಮೇಲೆ ಶೂಟ್ ಮಾಡಿದ್ದು ಯಾಕೆ – 4 ಪ್ರಶ್ನೆ ಮುಂದಿಟ್ಟ ಮಾನವಹಕ್ಕುಗಳ ಸಂಸ್ಥೆ

    ಈ ಕುರಿತು ಟ್ವೀಟ್ ಮಾಡಿರುವ ಕಾರ್ತಿ ಚಿದಂಬರಂ, ಅತ್ಯಾಚಾರವು ಘೋರ ಅಪರಾಧ. ಇಂತಹ ಪ್ರಕರಣಗಳು ಕಾನೂನಿನ ನಿಬಂಧನೆಗಳ ಅಡಿಯಲ್ಲೇ ಇತ್ಯರ್ಥವಾಗಬೇಕು. ಈ ದುಷ್ಕೃತ್ಯದ ಆರೋಪಿಗಳ ಬಗ್ಗೆ ಬಗ್ಗೆ ನನಗೆ ಯಾವುದೇ ಅನುಕಂಪವಿಲ್ಲ. ಎನ್‍ಕೌಂಟರ್ ನಮ್ಮ ವ್ಯವಸ್ಥೆಗೆ ಕಳಂಕವಾಗಿದೆ. ತ್ವರಿತ ನ್ಯಾಯದ ಪ್ರಚೋದನೆಯನ್ನು ನಾನು ಅರ್ಥಮಾಡಿಕೊಂಡಿದ್ದರೂ, ಇದು ಸರಿಯಾದ ಮಾರ್ಗವಲ್ಲ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ತೆಲಂಗಾಣ ಎನ್‍ಕೌಂಟರ್: ಕೇಜ್ರಿವಾಲ್, ಶಶಿ ತರೂರ್, ಮನೇಕಾ ಗಾಂಧಿ ಅಪಸ್ವರ

    ಕಾರ್ತಿ ಚಿದಂಬರಂ ಹೇಳಿಕೆ ಬಗ್ಗೆ ಭಾರೀ ಟೀಕೆ ವ್ಯಕ್ತವಾಗಿದೆ. ಅತ್ಯಾಚಾರಿಗಳನ್ನು ಅಷ್ಟೇ ಅಲ್ಲ ಭ್ರಷ್ಟ ರಾಜಕಾರಣಿಗಳನ್ನು ಎನ್‍ಕೌಂಟರ್ ಮಾಡಬೇಕು ಎಂದು ನೆಟ್ಟಿಗರೊಬ್ಬರು ಕಿಡಿಕಾರಿದ್ದಾರೆ. ಮತ್ತೊಬ್ಬರು ರಿಟ್ವೀಟ್ ಮಾಡಿ, ರಾಜಕಾರಣಿಯಾಗಿ ನೀವು ಹೇಳುತ್ತಿರುವುದು ಎಷ್ಟು ಸರಿ? ನಿಮ್ಮ ಕುಟುಂಬದವರಿಗೆ ಈ ರೀತಿ ಆಗಿದ್ದರೆ ಸುಮ್ಮನಿರುತ್ತಿದ್ದಿರಾ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: 2008 ವಾರಂಗಲ್ ಎನ್‌ಕೌಂಟರ್‌ನಂತೆ ದಿಶಾ ‘ಹತ್ಯಾಚಾರಿ’ಗಳ ಹುಟ್ಟಡಗಿಸಿದ ವಿ.ಸಿ ಸಜ್ಜನರ್

    ಕಾಂಗ್ರೆಸ್ ವಕ್ತಾರ ಸಂಜಯ್ ಝಾ ಬಾಳೆ ಹಣ್ಣು ಫೋಟೋ ಟ್ವೀಟ್ ಮಾಡಿ, ಬನಾನಾ ರಿಪಬ್ಲಿಕ್‌ ಆಗುತ್ತಿರುವುದಕ್ಕೆ ಅಭಿನಂದನೆಗಳು ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಉನ್ನಾವೋ ಕೇಸ್, ಹೈದರಾಬಾದ್ ಭಯಾನಕ ಹಾಗೂ ಎನ್‍ಕೌಂಟರ್ ಎಂದು ಹ್ಯಾಷ್ ಟ್ಯಾಗ್ ಹಾಕಿಕೊಂಡಿದ್ದಾರೆ. ಅವರ ಟ್ವೀಟ್‍ಗೆ ಭಾರೀ ಟೀಕೆ ವ್ಯಕ್ತವಾಗಿದೆ.