Tag: ಕಾರ್ತಿಕ ಅತ್ತಾವರ್

  • ಅನುಕ್ತ: ಥ್ರಿಲ್ಲರ್ ಜಾಡಿನಲ್ಲೂ ಇದೆ ಕ್ಯೂಟ್ ಲವ್ ಸ್ಟೋರಿ!

    ಅನುಕ್ತ: ಥ್ರಿಲ್ಲರ್ ಜಾಡಿನಲ್ಲೂ ಇದೆ ಕ್ಯೂಟ್ ಲವ್ ಸ್ಟೋರಿ!

    ಶ್ವತ್ಥ್ ಸ್ಯಾಮುಯಲ್ ನಿರ್ದೇಶನ ಮಾಡಿರೋ ಅನುಕ್ತ ಚಿತ್ರದ ಸುತ್ತ ಹರಡಿಕೊಂಡಿರೋ ಸುದ್ದಿಗಳು, ಆ ಕಾರಣದಿಂದಲೇ ಹುಟ್ಟಿಕೊಂಡಿರೋ ನಿರೀಕ್ಷೆಗಳೇನೂ ಕಡಿಮೆಯಿಲ್ಲ. ಇದೊಂದು ಕರಾವಳಿ ಪ್ರದೇಶದಲ್ಲಿ ಜರುಗೋ ಕ್ರೈಂ ಥ್ರಿಲ್ಲರ್ ಎಂಬುದೂ ಸೇರಿದಂತೆ ಒಂದಷ್ಟು ವಿಚಾರಗಳು ಈಗಾಗಲೇ ಹೊರ ಬಿದ್ದಿವೆ.

    ಆದರೆ ಅನುಕ್ತದ ಒಡಲಲ್ಲಿ ಹೇಳದೇ ಉಳಿದ, ಹೇಳಲಾಗದ ಅದೆಷ್ಟೋ ವಿಚಾರಗಳಿದ್ದಾವೆ. ಅನುಕ್ತ ಚಿತ್ರದಲ್ಲಿ ಕರಾವಳಿಯ ಪ್ರದೇಶದಷ್ಟೇ ಫ್ರೆಶ್ ಆದೊಂದು ಕ್ಯೂಟ್ ಲವ್ ಸ್ಟೋರಿಯೂ ಇದೆ. ಇಡೀ ಸಿನಿಮಾದ ಕಥೆ ಎಷ್ಟು ಭಿನ್ನವಾಗಿದೆಯೋ ಈ ಪ್ರೇಮ ಕಥೆಯನ್ನೂ ಅಷ್ಟೇ ವಿಶಿಷ್ಟವಾಗಿ ರೂಪಿಸಲಾಗಿದೆಯಂತೆ. ನಾಯಕ ಕಾರ್ತಿಕ್ ಅತ್ತಾವರ್ ಮತ್ತು ನಾಯಕಿ ಸಂಗೀತಾ ಭಟ್ ಕ್ಯೂಟ್ ಜೋಡಿಗಳಾಗಿ ಎಲ್ಲರೂ ಮುದಗೊಳ್ಳುವಂತೆ ನಟಿಸಿದ್ದಾರೆ.

    ಹರೀಶ್ ಬಂಗೇರಾ ನಿರ್ಮಾಣ ಮಾಡಿರೋ ಈ ಚಿತ್ರದ ಪ್ರಧಾನ ಆಕರ್ಷಣೆಗಳಲ್ಲಿ ಈ ಕ್ಯೂಟ್ ಲವ್ ಸ್ಟೋರಿಯೂ ಪ್ರಧಾನ ಪಾತ್ರ ವಹಿಸುತ್ತದೆ. ಒಟ್ಟಾರೆಯಾಗಿ ಸಸ್ಪೆನ್ಸ್ ಥ್ರಿಲ್ಲರ್, ಕಾಮಿಡಿ, ಮಾಸ್ ಮತ್ತು ಪ್ರೀತಿ ಸೇರಿದಂತೆ ಎಲ್ಲಾ ವರ್ಗದ ಪ್ರೇಕ್ಷಕರನ್ನೂ ತೃಪ್ತಿ ಪಡಿಸುವಂತೆ ಅನುಕ್ತ ಮೂಡಿ ಬಂದಿದೆ. ಬಿಡುಗಡೆಯ ಹೊಸ್ತಿಲಲ್ಲಿರೋ ಅನುಕ್ತದಲ್ಲಿ ಹೆಸರಿಗೆ ತಕ್ಕಂತೆ ಹೇಳಿಕೊಳ್ಳಲಾಗದ ಅನೇಕ ವಿಚಾರಗಳಿವೆ. ಅದೇನೆಂಬುದು ಬಯಲಾಗಲು ದಿನಗಳಷ್ಟೇ ಬಾಕಿ ಉಳಿದಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಹಳೇ ಮನೆಯಲ್ಲಿರುತ್ತಾ ಅನುಕ್ತ ರಹಸ್ಯ?

    ಹಳೇ ಮನೆಯಲ್ಲಿರುತ್ತಾ ಅನುಕ್ತ ರಹಸ್ಯ?

    ಬೆಂಗಳೂರು: ಹರೀಶ್ ಬಂಗೇರಾ ನಿರ್ಮಾಣದಲ್ಲಿ ಮೂಡಿ ಬಂದಿರುವ ಅನುಕ್ತ ಚಿತ್ರ ಫೆಬ್ರವರಿ ಒಂದರಂದು ಅದ್ಧೂರಿಯಾಗಿ ತೆರೆ ಕಾಣಲಿದೆ. ಬಿಡುಗಡೆಗೆ ಕಡೇ ಕ್ಷಣಗಳು ಶುರುವಾಗಿರುವಾಗಲೇ ಈ ಸಿನಿಮಾ ಬಗೆಗಿನ ಕುತೂಹಲ ಮತ್ತಷ್ಟು ಹೆಚ್ಚಾಗುತ್ತಲೇ ಸಾಗುತ್ತಿದೆ. ಇದಕ್ಕೆ ಕಾರಣವಾಗಿರೋದು ಅನುಕ್ತಾ ಬಗ್ಗೆ ಹರಡಿಕೊಳ್ಳುತ್ತಿರೋ ಕೆಲ ಇಂಟರೆಸ್ಟಿಂಗ್ ವಿಚಾರಗಳು!

    ಇದು ವರ್ತಮಾನದಲ್ಲಿ ಭೂತಕಾಲದ ರಹಸ್ಯ ಅನಾವರಣಗೊಳ್ಳೋ ವಿಚಾರವನ್ನೂ ಒಳಗೊಂಡಿದೆ. ಇದರ ಒಂದಷ್ಟು ಭಾಗಗಳ ಚಿತ್ರೀಕರಣ ಅಖಂಡ ಐನೂರು ವರ್ಷಗಳಷ್ಟು ಪುರಾತನ ಬಂಗಲೆಯಲ್ಲಿ ನಡೆದಿದೆಯಂತೆ. ಆ ಮನೆ ಇಡೀ ಚಿತ್ರದ ಕೇಂದ್ರಬಿಂದು. ಹೇಳಲಾಗದ ಸತ್ಯಗಳೆಲ್ಲವೂ ಅಲ್ಲಿಯೇ ಅನಾವರಣವಾಗುತ್ತಾ? ಅಷ್ಟಕ್ಕೂ ಅಂಥಾ ಭೀಕರ ಸತ್ಯವೇನೆಂಬುದಕ್ಕೆ ದಿನದೊಪ್ಪತ್ತಿನಲ್ಲಿ ಉತ್ತರ ಸಿಗಲಿದೆ.

    ಅನುಕ್ತ ಕ್ರೈಂ ಥ್ರಿಲ್ಲರ್ ಕಥೆ ಹೊಂದಿದೆ ಅನ್ನೋದಷ್ಟೇ ಗೊತ್ತಿದೆ. ಆದರೆ ಅದು ಯಾವ ಬಗೆಯದ್ದೆಂಬ ಬಗ್ಗೆ ಚಿತ್ರತಂಡ ಸಣ್ಣ ಸುಳಿವನ್ನೂ ಬಿಟ್ಟು ಕೊಟ್ಟಿಲ್ಲ. ಆದರೆ, ಈವರೆಗೆ ಕನ್ನಡದಲ್ಲಿ ನೋಡಿರದಂಥಾ ರೀತಿಯಲ್ಲಿ ಅನುಕ್ತದ ದೃಶ್ಯಾವಳಿಗಳು ತೆರೆದು ಕೊಳ್ಳೋದಂತೂ ಗ್ಯಾರಂಟಿ. ನಾಯಕನಾಗಿಯೂ ನಟಿಸಿರುವ ಕಾರ್ತಿಕ್ ಅತ್ತಾವರ್ ಆ ರೀತಿಯಲ್ಲಿ ಕಥೆ ಬರೆದಿದ್ದಾರೆ. ನಿರ್ದೇಶಕ ಅಶ್ವತ್ಥ್ ಸ್ಯಾಮುಯಲ್ ಅದಕ್ಕೆ ಸರಿಯಾಗಿ ದೃಶ್ಯ ಕಟ್ಟಿದ್ದಾರೆ.

    ಈಗ ದೊಡ್ಡ ಮಟ್ಟದಲ್ಲಿ ಎಲ್ಲರನ್ನೂ ಮುಟ್ಟಿರೋ ಈ ಚಿತ್ರ ಅದಕ್ಕೆ ಮಿಗಿಲಾದ ನಿಗೂಢಗಳನ್ನ ತನ್ನೊಳಗೆ ಬಚ್ಚಿಟ್ಟುಕೊಂಡಿದೆ. ಈಗೆದ್ದಿರೋ ಅಲೆಯೇ ಮಹಾ ಗೆಲುವೊಂದರ ಸೂಚನೆ ನೀಡುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಅನುಕ್ತ ಟ್ರೈಲರ್ ನೋಡಿ ದರ್ಶನ್ ಹೇಳಿದ್ದೇನು?

    ಅನುಕ್ತ ಟ್ರೈಲರ್ ನೋಡಿ ದರ್ಶನ್ ಹೇಳಿದ್ದೇನು?

    ಬೆಂಗಳೂರು: ಅನುಕ್ತ ಚಿತ್ರ ಇದೇ ಫೆಬ್ರವರಿ ಒಂದರಂದು ರಾಜ್ಯಾದ್ಯಂತ ತೆರೆ ಕಾಣಲು ರೆಡಿಯಾಗಿದೆ. ಚಿತ್ರೀಕರಣ ಆರಂಭವಾದಾಗಿನಿಂದ ಈವರೆಗೂ ಈ ಸಿನಿಮಾ ಒಂದಲ್ಲ ಒಂದು ಕಾರಣದಿಂದ ಸದಾ ಸುದ್ದಿ ಕೇಂದ್ರದಲ್ಲಿದೆ. ಇದರ ಪ್ರೋಮೋ, ಟೀಸರ್, ಟ್ರೈಲರ್ ಮತ್ತು ಹಾಡುಗಳು ಚಿತ್ರರಂಗದ ಮಂದಿಯನ್ನೂ ಕೂಡಾ ಸೆಳೆದುಕೊಂಡಿದೆ. ಅನೇಕ ನಟ ನಟಿಯರು ಈ ಬಗ್ಗೆ ಸಕಾರಾತ್ಮಕವಾಗಿಯೇ ಮಾತಾಡಿದ್ದಾರೆ. ಇದೀಗ ಅನುಕ್ತದ ಟ್ರೈಲರ್ ನೋಡಿ ಖುಷಿಗೊಂಡಿರೋ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡಾ ಚಿತ್ರದ ಬಗ್ಗೆ ಭರವಸೆಯ ಮಾತುಗಳನ್ನಾಡಿದ್ದಾರೆ.

    ತಾವು ಅದೆಷ್ಟೇ ಬ್ಯುಸಿಯಾಗಿದ್ದರೂ ಹೊಸಬರ, ಹೊಸತನದ ಪ್ರಯೋಗಗಳಿಗೆ ಸದಾ ಬೆನ್ನೆಲುಬಾಗಿ ನಿಲ್ಲೋದು ದರ್ಶನ್ ಅವರ ಸ್ಪೆಷಾಲಿಟಿ. ಅವರು ಸದಾ ಈ ಬಗ್ಗೆ ಒಂದು ಕಣ್ಣಿಟ್ಟೇ ಇರುತ್ತಾರೆ. ಅದೇ ರೀತಿ ಅವರು ಅನುಕ್ತ ಚಿತ್ರದ ಪ್ರೋಮೋದಿಂದ ಹಿಡಿದು ಹಾಡುಗಳ ವರೆಗೆ ಎಲ್ಲವನ್ನೂ ಗಮನಿಸಿಕೊಂಡೇ ಬಂದಿದ್ದರಂತೆ.

    ಕನ್ನಡ ಚಿತ್ರರಂಗದಲ್ಲಿ ಕಮರ್ಶಿಯಲ್ ಚಿತ್ರಗಳ ಜೊತೆಗೇ ಕಮರ್ಶಿಯಲ್ ಮೆಥಡ್ಡಿನಲ್ಲಿಯೇ ಇಂಥಾ ಹೊಸಾ ಪ್ರಯತ್ನಗಳೂ ಆಗುತ್ತಿರಬೇಕು ಅಂದಿರೋ ದರ್ಶನ್ ಅವರಿಗೆ ಆರಂಭದಲ್ಲಿ ಅನುಕ್ತದ ಅರ್ಥವೇ ಸಿಕ್ಕಿರಲಿಲ್ಲವಂತೆ. ಅದೊಂದು ಸಂಸ್ಕೃತ ಪದ ಅಂದುಕೊಂಡಿದ್ದ ಅವರಿಗೆ ಅದರ ಅರ್ಥವನ್ನು ಚಿತ್ರತಂಡವೇ ಹೇಳಿದೆ. ಒಟ್ಟಾರೆಯಾಗಿ ಇದೊಂದು ಒಳ್ಳೆ ಪ್ರಯತ್ನ, ಯಶ ಸಿಗಲಿ ಅಂತ ದರ್ಶನ್ ಹಾರೈಸಿದ್ದಾರೆ.

    ದರ್ಶನ್ ಅವರ ಈ ಮಾತುಗಳೇ ಬಿಡುಗಡೆಯ ಹೊಸ್ತಿಲಲ್ಲಿರೋ ಈ ಚಿತ್ರದ ತಂಡಕ್ಕೆ ಮತ್ತಷ್ಟು ಭರವಸೆ ತುಂಬಿದೆ. ಮತ್ತಷ್ಟು ಪ್ರೇಕ್ಷಕರು ಅನುಕ್ತದತ್ತ ಆಕರ್ಷಿತರಾಗುವಂತೆಯೂ ಮಾಡಿರೋದು ಸುಳ್ಳಲ್ಲ!

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಕಣ್ಣಾರೆ ಕಂಡರೂ ಮಾತಲ್ಲಿ ಹೇಳಲಾಗದ ಸತ್ಯವೇ ಅನುಕ್ತ!

    ಕಣ್ಣಾರೆ ಕಂಡರೂ ಮಾತಲ್ಲಿ ಹೇಳಲಾಗದ ಸತ್ಯವೇ ಅನುಕ್ತ!

    ಗಂತೂ ಟೈಟಲ್ಲುಗಳಿಂದಲೇ ಕ್ರೇಜ್ ಹುಟ್ಟು ಹಾಕೋ ಜಮಾನ ಶುರುವಾಗಿದೆ. ಒಂದು ಹಂತದಲ್ಲಿ ಚಿತ್ರ ವಿಚಿತ್ರ ಶೀರ್ಷಿಕೆಗಳ ಟ್ರೆಂಡ್ ಒಂದು ಹುಟ್ಟಿಕೊಂಡಿತ್ತು. ಆದರೀಗ ಅರ್ಥಪೂರ್ಣ ಟೈಟಲ್ ಗಳ ಪರ್ವ ಹುಟ್ಟಿಕೊಂಡಿದೆ. ಹೊಸಾ ವರ್ಷಾರಂಭದಲ್ಲಿಯೇ ಹೊಸಾ ಆವೇಗಕ್ಕೆ ಕಾರಣವಾಗಿರೋ ಅನುಕ್ತ ಕೂಡಾ ಅದೇ ಸಾಲಿನಲ್ಲಿ ಬಿಡುಗಡೆಗೆ ತಯಾರಾಗಿರುವ ಚಿತ್ರ.

    ಅಶ್ವತ್ಥ್ ಸ್ಯಾಮುಯಲ್ ನಿರ್ದೇಶನ ಮಾಡಿರೋ ಈ ಚಿತ್ರವನ್ನು ಕರಾವಳಿಯವರೇ ಆದ ಹರೀಶ್ ಬಂಗೇರಾ ನಿರ್ಮಾಣ ಮಾಡಿದ್ದಾರೆ. ಕಾರ್ತಿಕ್ ಅತ್ತಾವರ್, ಸಂತೋಷ್ ಕುಮಾರ್ ಕೊಂಚಾಡಿ ಜೊತೆ ಸೇರಿ ಕಥೆ ಬರೆದಿದ್ದಾರೆ. ಯಶೋಧೆ ಧಾರಾವಾಹಿ ಖ್ಯಾತಿಯ ಕಾರ್ತಿಕ್ ಅವರೇ ಈ ಸಿನಿಮಾ ನಾಯಕನಾಗಿಯೂ ನಟಿಸಿದ್ದಾರೆ. ಸಂಗೀತಾ ಭಟ್ ನಾಯಕಿಯಾಗಿ ನಟನೆಗೆ ಅವಕಾಶವಿರೋ ಸವಾಲಿನಂಥಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

    ಹಾಗಾದರೆ ಅನುಕ್ತ ಅಂದರೇನು ಎಂಬ ಪ್ರಶ್ನೆ ಕಾಡುತ್ತದೆ. ಇದಕ್ಕೆ ಹೇಳಲಾಗದ್ದು ಎಂಬಂಥಾ ಉತ್ತರವೂ ಸಿಗುತ್ತದೆ. ಈ ಬಗ್ಗೆ ಚಿತ್ರದ ನಿರ್ದೇಶಕರಾದ ಅಶ್ವತ್ಥ್ ಸ್ಯಾಮುಯಲ್ ಒಂದಷ್ಟು ವಿಚಾರಗಳನ್ನೂ ಹಂಚಿಕೊಂಡಿದ್ದಾರೆ. ಅವರು ಹೇಳೋ ಪ್ರಕಾರವಾಗಿ ನೋಡಿದರೆ, ಅನುಕ್ತ ಅಂದರೆ ಕಣ್ಣಿಗೆ ಕಾಣಿಸಿದರೂ ಮಾತಲ್ಲಿ ಹೇಳಲಾರದ ಸತ್ಯವೇ ಅನುಕ್ತ.

    ಹಾಗೆ ಕಣ್ಣಿಗೆ ಕಂಡೂ ಮಾತಲ್ಲಿ ಹೇಳಲಾಗದ, ನೋಡಿಯಷ್ಟೇ ಅನುಭವಿಸಬೇಕಾದ ಅದೆಷ್ಟೋ ವಿಚಾರಗಳು ಈ ಚಿತ್ರದಲ್ಲಿವೆಯಂತೆ. ಕರಾವಳಿಯ ಸಮೃದ್ಧ ಬದುಕಿನ ಅನಾವರಣದ ಜೊತೆಗೇ ಹೊಸಾ ಥರದ ಕ್ರೈಂ ಥ್ರಿಲ್ಲರ್ ಕಥೆ ಹೇಳ ಹೊರಟಿರೋ ಈ ಸಿನಿಮಾ ಇಷ್ಟರಲ್ಲಿಯೇ ಬಿಡುಗಡೆಯಾಗಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv