Tag: ಕಾರ್ತಿಕ್ ಜಯರಾಮ್

  • ಫ್ಯಾಷನ್ ಡಿಸೈನರ್ ಅಪರ್ಣಾ ಸಮಂತಾ ಜೊತೆ ಜೆಕೆ ಎಂಗೇಜ್

    ಫ್ಯಾಷನ್ ಡಿಸೈನರ್ ಅಪರ್ಣಾ ಸಮಂತಾ ಜೊತೆ ಜೆಕೆ ಎಂಗೇಜ್

    ಸ್ಯಾಂಡಲ್‌ವುಡ್ ನಟ ಕಾರ್ತಿಕ್ ಜಯರಾಮ್ (Karthik Jayram) ಅಲಿಯಾಸ್ ಜೆಕೆ ಅವರು ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ. ಹುಟ್ಟುಹಬ್ಬದ ದಿನವೇ ಜೆಕೆ(Jk) ಎಂಗೇಜ್ ಆಗಿರುವ ವಿಚಾರವು ಅಧಿಕೃತವಾಗಿ ರಿವೀಲ್ ಆಗಿದೆ. ಈ ಕುರಿತ ಮಾಹಿತಿ ಇಲ್ಲಿದೆ ನೋಡಿ.

    ಕಿರುತರೆಯ ಅಶ್ವಿನಿ ನಕ್ಷತ್ರ, ಬಿಗ್ ಬಾಸ್ (Bigg Boss Kannada) ರಿಯಾಲಿಟಿ ಶೋ ಮೂಲಕ ಅಪಾರ ಅಭಿಮಾನಿಗಳ ಮನಗೆದ್ದ ನಟ ಜೆಕೆ ಅವರು ಹಿರಿತೆರೆಯಲ್ಲಿ ಕೂಡ ಛಾಪೂ ಮೂಡಿಸಿದ್ದಾರೆ. ಹಿಂದಿ ಟಿವಿ ಕಿರುತೆರೆಯಲ್ಲಿ ಸಹ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇದೀಗ ಜೆಕೆ ತಮ್ಮ ಖಾಸಗಿ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಇದನ್ನೂ ಓದಿ:ಜನಪ್ರಿಯ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಸಮಂತಾ ನಂ 1

    ಒಂದು ವರ್ಷದಿಂದ ತಮ್ಮ ಡೇಟಿಂಗ್ ಸುದ್ದಿ ಬಗ್ಗೆ ಜೆಕೆ ಅವರು ನಿರಾಕರಿಸಿದ್ದರು. ಇದೀಗ ಜೆಕೆ ಎಂಗೇಜ್ ಆಗಿರುವ ಬಗ್ಗೆ ಅಧಿಕೃತ ಅಪ್‌ಡೇಟ್ ಸಿಕ್ಕಿದೆ. ಸೆಲೆಬ್ರಿಟಿ ಫ್ಯಾಷನ್ ಡಿಸೈನರ್ (Fashion Designer) ಅಪರ್ಣಾ ಸಮಂತಾ (Aparna Samantha) ಜೊತೆ ನಟ ಜೆಕೆ ಎಂಗೇಜ್ ಆಗಿದ್ದಾರೆ. ಕಳೆದ ಒಂದು ವರ್ಷದಿಂದ ಒಬ್ಬರನೊಬ್ಬರು ಪ್ರೀತಿಸುತ್ತಿದ್ದಾರೆ. ಈ ಬಗ್ಗೆ ಅಪರ್ಣಾ, ಜೆಕೆ ಬರ್ತ್‌ಡೇ (ಮೇ1)ರಂದು ವಿಶ್ ಮಾಡುವ ಮೂಲಕ ಎಂಗೇಜ್ ಆಗಿರುವ ಬಗ್ಗೆ ಸುಳಿವು ನೀಡಿದ್ದಾರೆ.

     

    View this post on Instagram

     

    A post shared by Aparnna Samanta (@aparnna.samanta16)

    ಸದ್ಯ ಈ ಪೋಸ್ಟ್ ನೋಡಿರುವ ಅಭಿಮಾನಿಗಳು ಜೆಕೆಗೆ ಕಾಮೆಂಡ್ ಮಾಡಿ ನೀವಿಬ್ಬರೂ ಬೆಸ್ಟ್ ಜೋಡಿ, ಮದುವೆ ಯಾವಾಗ ಎಂದು ಪ್ರಶ್ನೆ ಮಾಡ್ತಿದ್ದಾರೆ. ತಮ್ಮ ರಿಲೇಶನ್‌ಶಿಪ್- ಮದುವೆ ಬಗ್ಗೆ ನಟ ಜೆಕೆ ಅವರೇ ಅಧಿಕೃತ ಮಾಹಿತಿ ನೀಡುವವರೆಗೂ ಕಾದುನೋಡಬೇಕಿದೆ.

  • ನಟಿ ಮಯೂರಿ ಮಗನ ಜೊತೆ ಸಮಯ ಕಳೆದ ಜೆಕೆ

    ನಟಿ ಮಯೂರಿ ಮಗನ ಜೊತೆ ಸಮಯ ಕಳೆದ ಜೆಕೆ

    ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಮಯೂರಿ ಮಗು ಜೊತೆಗೆ ನಟ ಕಾರ್ತಿಕ್ ಜಯರಾಮ್ ಆಟವಾಡುತ್ತಾ ಕಾಲ ಕಳೆದಿದ್ದಾರೆ.

     

    View this post on Instagram

     

    A post shared by mayuri (@mayurikyatari)

    ಮಯೂರಿ ಅವರ ಮಗ ಆರವ್ ಜೊತೆ ಜೆಕೆ ಖುಷಿಯಾಗಿ ಕಾಲ ಕಳೆದಿದ್ದಾರೆ. ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಅಶ್ವಿನಿ ನಕ್ಷತ್ರ ಧಾರಾವಾಹಿಯಲ್ಲಿ ಜೆಕೆ ಹಾಗೂ ಮಯೂರಿ ಒಟ್ಟಿಗೆ ಕೆಲಸ ಮಾಡಿದ್ದಾರೆ. ವೃತ್ತಿಯನ್ನು ಹೊರತುಪಡಿಸಿ, ವೈಯಕ್ತಿಕ ಜೀವನದಲ್ಲಿ ಕಾರ್ತಿಕ್ ಜಯರಾಮ್ ಹಾಗೂ ಮಯೂರಿ ಆತ್ಮೀಯ ಸ್ನೇಹಿತರಾಗಿದ್ದಾರೆ.

     

    View this post on Instagram

     

    A post shared by mayuri (@mayurikyatari)

    ಮಯೂರಿ ಅವರ ಮಗ ಆರವ್, ಕಾರ್ತಿಕ್ ಜಯರಾಮ್ ಅವರನ್ನು ಜೆಕೆ ಎಂದು ಕರೆದಿದ್ದಾನಂತೆ. ಹೀಗೆಂದು ಮಯೂರಿ ಇನ್‍ಸ್ಟಾಗ್ರಾಮ್‍ನಲ್ಲಿ ಬರೆದುಕೊಂಡು ಜೆಕೆ ಮಗುವನ್ನು ಮುದ್ದಾಡುತ್ತಾ, ಆಟವಾಡುತ್ತಿರುವ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಲಿಂಗಾಯತರ ಧೀಮಂತ ನಾಯಕ ಬಿಎಸ್‍ವೈಯನ್ನು ಸಿಎಂ ಸ್ಥಾನದಿಂದ ಇಳಿಸಬೇಡಿ: ಎಂ.ಬಿ ಪಾಟೀಲ್

     

    View this post on Instagram

     

    A post shared by mayuri (@mayurikyatari)

    ಮಯೂರಿ ಕೆಲವು ದಿನಗಳ ಹಿಂದೆ ಮಗ ಆರವ್ ಫೋಟೋಶೂಟ್ ಮಾಡಿಸಿದ್ದರು. ಈತ ಬಂದ ಮೇಲೆ ನಮ್ಮ ಜೀವನವೇ ಸಂಪೂರ್ಣ ಬದಲಾಗಿದೆ. ಎಂದು ಬರೆದುಕೊಂಡು ಫೋಟೋ ಹಂಚಿಕೊಂಡಿದ್ದರು. ಮಯೂರಿ ತಮ್ಮ ಮಗನ ಜೊತೆಗೆ ಕಾಲ ಕಳೆಯುತ್ತಿರುವ ಸುಂದರ ಕ್ಷಣಗಳ ಫೋಟೋವನ್ನು ಶೇರ್ ಮಾಡುತ್ತಿರುತ್ತಾರೆ. 2020 ಜೂನ್ 12 ರಂದು ತಮ್ಮ ಬಹುಕಾಲದ ಗೆಳೆಯ ಅರುಣ್ ಜೊತೆಗೆ ಮಯೂರಿ ದಾಂಪತ್ಯಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ಮುದ್ದಾದ ಮಗುವಿನ ತಾಯಿಯಾದ ಮಯೂರಿ ಮಗುವಿನ ಆರೈಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.