Tag: ಕಾರ್ಣಿಕ ನುಡಿ

  • ಕುರುಪಾಂಡವರು ಕಾದಾಡಿ, ಧರ್ಮದ ಜ್ಯೋತಿ ಬೆಳಗಿದರು- ಮೈಲಾರಲಿಂಗನ ಕಾರ್ಣಿಕ ನುಡಿ

    ಕುರುಪಾಂಡವರು ಕಾದಾಡಿ, ಧರ್ಮದ ಜ್ಯೋತಿ ಬೆಳಗಿದರು- ಮೈಲಾರಲಿಂಗನ ಕಾರ್ಣಿಕ ನುಡಿ

    ಚಿಕ್ಕಮಗಳೂರು: ಜಿಲ್ಲೆಯ ಕಡೂರು ತಾಲೂಕಿನ ಬೀರೂರಿನ ಸುಪ್ರಸಿದ್ಧ ಮೈಲಾರಲಿಂಗೇಶ್ವರ ಸ್ವಾಮಿ (Mailaralingeshwara swamy)ಯು ಕಾರ್ಣಿಕದ ಭವಿಷ್ಯ ನುಡಿ ನುಡಿದಿದ್ದು, ಭಕ್ತರು ಉಘೇ ಮೈಲಾರಲಿಂಗ ಎಂದು ಕೈಮುಗಿದಿದ್ದಾರೆ.

    ವಿಜಯದಶಮಿಯ (Vijayadashami) ಮರು ದಿವನ ದೇವಸ್ಥಾನದ ಮುಂಭಾಗದ ಬಿಲ್ಲನ್ನೇರಿ ಬೆಳಗ್ಗಿನ ಜಾವ ಭವಿಷ್ಯವಾಣಿ ನುಡಿದ ಮೈಲಾರಲಿಂಗ ಸ್ವಾಮಿ, ರೈತ ಸಮುದಾಯಕ್ಕೆ ಸಂತಸದ ನುಡಿ ನುಡಿದಿದೆ. ಭೂಮಿಗೆ ವರುಣನ ಸಿಂಚನವಾಯಿತಿ ಅಂದರೆ, ರಾಜ್ಯದಲ್ಲಿ ಮತ್ತೆ ಮಳೆ (Rain) ಬೀಳಲಿದೆ.

    ಈ ಹಿಂದೆ ಸುರಿದ ಮಳೆ ರೈತ ಸಮುದಾಯಕ್ಕೆ ಹೆಚ್ಚು ನೋವು-ನಷ್ಟವನ್ನ ತಂದಿತ್ತು. ಆದರೆ ಈಗ ಬರುವ ಮಳೆ ರೈತರಿಗೆ ಅನುಕೂಲವಾಗಲಿದೆ ಎಂದಿದೆ. ಇನ್ನು ಕುರು ಪಾಂಡವರು ಕಾದಾಡಿದರು. ಅಂದರೆ, ರಾಜ್ಯದಲ್ಲಿ ಚುನಾವಣೆ (Election) ಸಮೀಪಿಸುತ್ತಿದೆ. ಅಧಿಕಾರಕ್ಕಾಗಿ ಎಲ್ಲಾ ರಾಜಕೀಯ ಪಕ್ಷದವರು ಒಬ್ಬರ ಮೇಲೋಬ್ಬರು ಆರೋಪಗೈಯುತ್ತಾ ಅಧಿಕಾರಕ್ಕಾಗಿ ಕಾದಾಡುವರು ಎಂದು ಹೇಳಿದೆ.

    ಧರ್ಮದ ಜ್ಯೋತಿ ಬೆಳಗಿದರು ಅಂದರೆ, ಜನರಿಗೆ ಧಾರ್ಮಿಕ ನಂಬಿಕೆ ಹೆಚ್ಚಾಗಿ, ಜನ ಧರ್ಮದ ಆಧಾರದ ಮೇಲೆ ಚುನಾವಣೆಗೆ ಮತ ನೀಡುವ ಸಾಧ್ಯತೆ ಇದೆ ಎಂದು ಕಾರ್ಣಿಕದ ಭವಿಷ್ಯವಾಣಿಯನ್ನ ಗ್ರಾಮದ ಹಿರಿಯರು ವಿಶ್ಲೇಷಿಸಿದ್ದಾರೆ. ಮೈಲಾರಲಿಂಗನ ಭವಿಷ್ಯವಾಣಿ ಎಂದಿಗೂ ಸುಳ್ಳಾಗುವುದಿಲ್ಲ ಅನ್ನೋದ ಭಕ್ತರ ನಂಬಿಕೆ. ಇದನ್ನೂ ಓದಿ: ಯುವಕನಿಗೆ ರಾಜ್ಯದ ಮುಖ್ಯಮಂತ್ರಿ ಸ್ಥಾನ – ಕಾರ್ಣಿಕ ನುಡಿದ ಗೊರವಯ್ಯ

    ಈ ಹಿಂದೆ ಹೇಳಿದ ಎಲ್ಲಾ ಕಾರ್ಣೀಕದ ನುಡಿಗಳು ಅದೇ ರೀತಿ ನಡೆದಿದೆ. ಹಾಗಾಗಿ ಭಕ್ತರಿಗೆ ಮೈಲಾರಲಿಂಗನ ಕಾರ್ಣಿಕದ ಮೇಲೆ ನಂಬಿಕೆ ಹೆಚ್ಚು. ಅದರಲ್ಲೂ ರೈತರಿಗೆ ಮಳೆಯಿಂದ ಅನುಕೂಲವಿದೆ ಎಂದು ಮೈಲಾರಲಿಂಗ ಭವಿಷ್ಯವಾಣಿ ನುಡಿದಿರೋದು ರೈತ ಸಮುದಾಯಕ್ಕೆ ಸಂತಸ ತಂದಿದೆ.

    Live Tv
    [brid partner=56869869 player=32851 video=960834 autoplay=true]

  • ಮೈಲಾರಲಿಂಗಸ್ವಾಮಿಯ ಕಾರ್ಣಿಕ- ಸರ್ವರು ಎಚ್ಚರದಿಂದಿರಿ ಎಂದು ಭವಿಷ್ಯ

    ಮೈಲಾರಲಿಂಗಸ್ವಾಮಿಯ ಕಾರ್ಣಿಕ- ಸರ್ವರು ಎಚ್ಚರದಿಂದಿರಿ ಎಂದು ಭವಿಷ್ಯ

    ಚಿಕ್ಕಮಗಳೂರು: ಜಿಲ್ಲೆಯ ಕಡೂರು ತಾಲೂಕಿನ ಬೀರೂರಿನ ಸರಸ್ವತಿಪುರಂನಲ್ಲಿ ನೆಲೆಸಿರುವ ಇತಿಹಾಸ ಪ್ರಸಿದ್ಧ ಶ್ರೀ ಮೈಲಾರಲಿಂಗಸ್ವಾಮಿಯ ಕಾರ್ಣಿಕ ಇಂದು ಮುಂಜಾನೆ ಸಂಪನ್ನಗೊಂಡಿದ್ದು, ಕಾರ್ಣಿಕ ನಡೆಯುವಾಗ ಸರ್ವರು ಎಚ್ಚರದಿಂದಿರಿ ಎಂದು ದಶರಥ ಪೂಜಾರರು ಎಚ್ಚರಿಸಿದ್ದಾರೆ.

    ಇಂದು ಬೆಳಗ್ಗಿನ ಜಾವ 5 ಗಂಟೆಗೆ ಸರಸ್ವತಿಪುರಂನ ಮಹಾನವಮಿ ಬಯಲಿನಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಬೆಣ್ಣೆ ಮೆತ್ತಿದ ದೊಡ್ಡಬಿಲ್ಲಯ್ಯನನ್ನ ಏರಿದ ಪೂಜಾರರು ಕಾರ್ಣಿಕದ ನುಡಿಗಳನ್ನಾಡಿದರು. ರಾಷ್ಟ್ರ ಮತ್ತು ರಾಜ್ಯದ ಆಗುಹೋಗುಗಳ ಮೇಲೆ ಶ್ರೀ ಮೈಲಾರಲಿಂಗಸ್ವಾಮಿ ದಶರಥ ಪೂಜಾರರ ಬಾಯಲ್ಲಿ ಬಂದ ಕಾರ್ಣಿಕದ ನುಡಿಗಳನ್ನಾಡಿದ್ದಾರೆ. ಇಟ್ಟ ರಾಮನ ಬಾಣಕ್ಕೆ ಹುಸಿಯಿಲ್ಲ. ಪಂಜರದ ಗಿಳಿಗಳು ಹಾರಿ ಹೋದಾವು. ಕಟ್ಟಿದ ಕೋಟೆ ಪರರದಾಯಿತು. ಉತ್ತಮ ಮಳೆ ಸುರಿಸಿದಾವು. ಸರ್ವರು ಎಚ್ಚರದಿಂದಿರಬೇಕು ಎಂದು ಹೇಳಿದರು.

    ಮಹಾನವಮಿ ಬಯಲಿನಲ್ಲಿ ಮೈಲಾರಲಿಂಗ ಕುಣಿತ ಅದ್ಭುತವಾಗಿರುವುದನ್ನು ನೋಡಲು ಭಕ್ತರು ಸಾವಿರಾರು ಸಂಖ್ಯೆಯಲ್ಲಿ ನಾ ಮುಂದು ತಾ ಮುಂದು ಎನ್ನುತ್ತಿರುತ್ತಾರೆ. ನಂತರ ಮೈಲಾರಲಿಂಗ ಸ್ವಾಮಿ ಪೂಜಾರರನ್ನು ಕಾರ್ಣಿಕ ನುಡಿಯಲು ಪ್ರೇರೆಪಿಸುತ್ತಿದ್ದಂತೆ ಗೊರವಯ್ಯನವರ ಢಮರುಗ ಶಬ್ದ ಎಂತವರನ್ನು ಭಕ್ತಿಯ ಅಲೆಯಲ್ಲಿ ತೇಲಿಸುತ್ತದೆ.

    ಮಹಾನವಮಿ ಬಯಲಿನಲ್ಲಿ ಅಂಬನ್ನು ಮೂರು ಬಾರಿ ಪ್ರದಕ್ಷಿಣೆ ಹಾಕಿ ಜಯಘೋಷ ಮೊಳಗಿಸಿ, ಕಾರ್ಣಿಕ ನುಡಿಯುವ ಸಮಯ ಬಂದಾಗ ಹುಟ್ಟಿದ ಕೂಸು ಸಹ ಅಳು ನಿಲ್ಲಿಸುತ್ತದೆ ಎಂಬ ಮಾತಿದೆ. ಇಲ್ಲಿ ನುಡಿಯುವ ಕಾರ್ಣಿಕ ಕೇಳಲು ಸಾವಿರಾರು ಭಕ್ತರು ಆಗಮಿಸುತ್ತಾರೆ. ಮೈಲಾರಲಿಂಗನ ಕಾರ್ಣಿಕ ಕೇಳಿ ಅಂಬನ್ನು ಹೊಡೆದಾಗ ದಸರಾ ಮುಕ್ತಾಯವಾಗುತ್ತದೆ.