Tag: ಕಾರ್ಡ್

  • ಧರ್ಮಸ್ಥಳ ಉತ್ಕನನ: 2 ಕಾರ್ಡ್‌, ಹರಿದ ರವಿಕೆ ಪತ್ತೆ

    ಧರ್ಮಸ್ಥಳ ಉತ್ಕನನ: 2 ಕಾರ್ಡ್‌, ಹರಿದ ರವಿಕೆ ಪತ್ತೆ

    ಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ಶವ ಹೂತ ಪ್ರಕರಣಕ್ಕೆ (Dharmasthala Mass Burial Case) ಸಂಬಂಧಿಸಿದಂತೆ ಉತ್ಕನನದ ವೇಳೆ ಎರಡು ಕಾರ್ಡ್‌ (Card) ಮತ್ತು ಹರಿದ ರವಿಕೆ (Torn Red Blouse) ಪತ್ತೆಯಾಗಿವೆ.

    ಸ್ಥಳದಲ್ಲಿ ಒಂದು ಪಾನ್ ಕಾರ್ಡ್ ಮತ್ತೊಂದು ಡೆಬಿಡ್ ಕಾರ್ಡ್‌ ಪತ್ತೆಯಾಗಿದೆ. ಸ್ಥಳ ಅಗೆಯುವ ಸಂದರ್ಭ ದೊರೆತ ಎರಡು ಐಡಿ ಕಾರ್ಡ್‌ ಸಿಕ್ಕಿದೆ ಎಂದು ದೂರುದಾರನ ಪರ ವಕೀಲ ಮಂಜುನಾಥ್‌ ಎನ್‌ ಹೇಳಿದ್ದಾರೆ. ಈ ಸಂಬಂಧ ಮಾಧ್ಯಮಗಳಿಗೆ ಎಸ್‌ಐಟಿ ಮೂಲಗಳನ್ನು ಆಧಾರಿಸಿ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

     

    ಹೇಳಿಕೆಯಲ್ಲಿ ಏನಿದೆ?
    ಸೈಟ್ ಸಂಖ್ಯೆ 1 ರಲ್ಲಿ ಸುಮಾರು 2.5 ಅಡಿ ಆಳದಲ್ಲಿ ಹರಿದ ಕೆಂಪು ರವಿಕೆ, ಪ್ಯಾನ್ ಕಾರ್ಡ್ ಮತ್ತು ಎಟಿಎಂ ಕಾರ್ಡ್ ಪತ್ತೆಯಾಗಿದೆ. ಒಂದು ಕಾರ್ಡ್‌ನಲ್ಲಿ ಪುರುಷನ ಹೆಸರು ಇದ್ದರೆ ಇನ್ನೊಂದು ಕಾರ್ಡ್‌ನಲ್ಲಿ ಲಕ್ಷ್ಮಿ ಎಂಬ ಮಹಿಳೆಯ ಹೆಸರು ಇದೆ.

    ಸಾಕ್ಷ್ಯಗಳು ಸಿಕ್ಕಿದ ಕಾರಣ ನಮಗೆ ಹೊಸ ಭರವಸೆ ಮೂಡಿದೆ. ನಾವು ಎಸ್‌ಐಟಿ ಅವರ ಕೆಲಸದಲ್ಲಿ ಸಂಪೂರ್ಣ ನಂಬಿಕೆ ಇಟ್ಟಿದ್ದೇವೆ. ವಿಶೇಷ ತನಿಖಾ ತಂಡ ಶ್ಲಾಘನೀಯ ಕೆಲಸ ಮಾಡುತ್ತಿದೆ.

     

  • ಸ್ವರಾ ಭಾಸ್ಕರ್ ಮತ್ತೊಂದು ಮದುವೆ:  ಆಹ್ವಾನ ಪತ್ರಿಕೆ ವಿಶೇಷತೆ ಏನು?

    ಸ್ವರಾ ಭಾಸ್ಕರ್ ಮತ್ತೊಂದು ಮದುವೆ: ಆಹ್ವಾನ ಪತ್ರಿಕೆ ವಿಶೇಷತೆ ಏನು?

    ತ್ತೀಚೆಗಷ್ಟೇ ನಟಿ ಸ್ವರಾ ಭಾಸ್ಕರ್  (Swara Bhaskar) ಸರಳವಾಗಿ ವಿವಾಹವಾಗಿದ್ದರು. ಅದೊಂದು ಅನ್ಯ ಧರ್ಮೀಯ ಮದುವೆಯಾಗಿದ್ದರಿಂದ ಅತ್ಯಂತ ಸರಳವಾಗಿತ್ತು. ಆದರೆ, ಸ್ವರಾ ಕುಟುಂಬಕ್ಕೆ ಈ ಮದುವೆ (Marriag) ಇಷ್ಟವಾಗಿಲ್ಲ. ಹಾಗಾಗಿ ಅದ್ಧೂರಿಯಾಗಿ ಮತ್ತೆ ಮಗಳ ಮದುವೆ ಮಾಡಲು ಸಿದ್ಧತೆ ನಡೆಸಿದ್ದಾರೆ. ಹೊಸ ರೀತಿಯಲ್ಲಿ ಮದುವೆ ಕಾರ್ಡ್ (Card) ಅನ್ನೂ ಅವರು ರೆಡಿ ಮಾಡಿಕೊಂಡಿದ್ದಾರೆ.

    ಸ್ವರಾ ಭಾಸ್ಕರ್ ಸಮಾಜವಾದಿ ಪಕ್ಷದ ನಾಯಕ ಫಹಾದ್ ಝಿರಾರ್ ಅಹ್ಮದ್ (Fahad Zirar Ahmed) ಅವರನ್ನು ಮದುವೆ ಆಗುವ ಮೂಲಕ ಅಚ್ಚರಿಯ ಸುದ್ದಿಯನ್ನು ನೀಡಿದ್ದರು. ಅನ್ಯ ಧರ್ಮೀಯರನ್ನು ಮದುವೆಯಾದ ಕಾರಣದಿಂದಾಗಿ ಸಾಕಷ್ಟು ಟ್ರೋಲ್ ಗೂ ಅವರು ಗುರಿಯಾಗಿದ್ದರು. ಫಹಾದ್ ಅವರನ್ನು ಮದುವೆಯಾದ ಕಾರಣದಿಂದಾಗಿ ಟೀಕೆಯನ್ನೂ ಅವರು ಎದುರಿಸಬೇಕಾಯಿತು. ಆದರೂ, ಸ್ವರ ತಲೆಕೆಡಿಸಿಕೊಂಡಿಲ್ಲ. ಈ ನಡುವೆ ಮತ್ತೊಂದು ಮದುವೆ ಸಂಭ್ರಮಕ್ಕೆ ಸ್ವರಾ ಕುಟುಂಬ ಸಜ್ಜಾಗಿದೆ. ಇದನ್ನೂ ಓದಿ: ಬ್ಯಾಕ್‌ಲೆಸ್ ಫೋಟೋ ಶೇರ್‌, ಇಂಟರ್‌ನೆಟ್‌ಗೆ ಬೆಂಕಿ ಹಚ್ಚಿದ `ಸಲಾರ್’ ನಟಿ

    ಮಾರ್ಚ್ 15 ಮತ್ತು 16ರಂದು ದೆಹಲಿಯಲ್ಲಿ ಎರಡು ದಿನಗಳ ಕಾಲ ಸ್ವರಾ ಮತ್ತು ಫಹಾದ್ ಮದುವೆ ಸಮಾರಂಭ ಅದ್ಧೂರಿಯಾಗಿ ನಡೆಯಲಿದೆ. ಅದಕ್ಕಾಗಿ ಈಗಿನಿಂದಲೇ ಅವರ ಕುಟುಂಬ ಸಿದ್ಧತೆಯಲ್ಲಿ ತೊಡಗಿದೆ. ಈ ಮದುವೆಯಾಗಿಯೇ ಪ್ರತೀಕ್ ವಿನ್ಯಾಸಗೊಳಿಸಿರುವ ಮದುವೆ ಕಾರ್ಡ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಆಮಂತ್ರಣ ಪತ್ರಿಕೆಯಲ್ಲಿ ನನ್ನ ಮಗಳ ಮದುವೆಗೆ ನಿಮ್ಮ ಉಪಸ್ಥಿತಿ ಇರಲಿ ಎಂದು ಬರೆಯಿಸಲಾಗಿದೆ. ಅಲ್ಲದೇ, ಅಳಿಯನನ್ನು ನಮ್ಮ ಕುಟುಂಬ ಅಭಿನಂದಿಸುತ್ತದೆ ಎಂದೂ ಬರಹ ಇದೆ. ಸ್ವರಾ ಕುಟುಂಬವು ತಮ್ಮ ಆಪ್ತರಿಗೆ ಇದೇ ಮದುವೆಯ ಕಾರ್ಡ್ ಅನ್ನು ನೀಡಿದೆ.

    ಸದಾ ವಿವಾದವನ್ನು ಮೈಮೇಲೆ ಎಳೆದುಕೊಳ್ಳುವ ಸ್ವರಾ, ಮೊನ್ನೆಯಷ್ಟೇ ತಮ್ಮ ಮೊದಲ ರಾತ್ರಿಗಾಗಿ ಸಿದ್ಧವಾಗಿದ್ದ ಮಂಚದ ಫೋಟೋವನ್ನು ಹಂಚಿಕೊಂಡಿದ್ದರು. ಆ ಮಂಚವನ್ನು ಸಿಂಗರಿಸಿದ್ದಕ್ಕಾಗಿ ಅವರ ತಾಯಿಗೆ ಧನ್ಯವಾದಗಳನ್ನೂ ಅವರು ಹೇಳಿದ್ದರು. ಮದುವೆಯ ಮಹತ್ವವನ್ನೂ ಅವರು ಹಂಚಿಕೊಂಡಿದ್ದರು. ಈ ಕಾರಣಕ್ಕಾಗಿ ಮತ್ತೆ ಅವರು ವಿವಾದದ ಕೇಂದ್ರಬಿಂದುವಾಗಿದ್ದರು.

  • ಶೀಘ್ರದಲ್ಲೇ ಎಟಿಎಂಗಳಲ್ಲಿ QR Code ಸ್ಕ್ಯಾನ್ ಮಾಡಿ ಹಣ ಪಡೆಯಿರಿ

    ಶೀಘ್ರದಲ್ಲೇ ಎಟಿಎಂಗಳಲ್ಲಿ QR Code ಸ್ಕ್ಯಾನ್ ಮಾಡಿ ಹಣ ಪಡೆಯಿರಿ

    ಮುಂಬೈ: ಡಿಜಿಟಲೀಕರಣಕ್ಕೆ ಪುಷ್ಠಿ ನೀಡುವ ಮತ್ತೊಂದು ಮಹತ್ವದ ಯೋಜನೆಯನ್ನು ಆರ್‌ಬಿಐ ಶೀಘ್ರದಲ್ಲೇ ಚಾಲ್ತಿಗೆ ತರಲಿದೆ. ಖಾತೆದಾರರು ಎಟಿಎಂಗಳಲ್ಲಿ ಕಾರ್ಡ್‍ಗಳನ್ನು ಬಳಸಿ ಹಣ ಪಡೆಯವ ಸಂಪದ್ರಾಯವಿದೆ. ಅದರ ಬದಲಿಗೆ ಮೊಬೈಲ್‍ಗಳಲ್ಲಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಎಟಿಎಂಗಳಿಂದಲೂ ಹಣವನ್ನು ಪಡೆಯಬಹುದಾದ ಯೋಜನೆ ಕೆಲವೇ ದಿನಗಳಲ್ಲಿ ಬರಲಿದೆ.

    ಡಿಜಿಟಲ್ ಯುಗದಲ್ಲಿ ಎಟಿಎಂಗಳಲ್ಲಿ ಕಾರ್ಡ್ ಇಲ್ಲದೇ ಮೊಬೈಲ್ ಮೂಲಕವಾಗಿ ಅಂದರೆ ಗೂಗಲ್ ಪೇ, ಫೋನ್ ಪೇ, ಪೇಟಿಎಂಗಳನ್ನು ಬಳಸಿಕೊಂಡು ಹಣವನ್ನು ಪಡೆಯಬಹುದಾಗಿದೆ. ಇದರ ಜೊತೆಗೆ ಇದೀಗ ನೂತನ ಯೋಜನೆಯನ್ನು ತರುವ ಆಲೋಚನೆಯನ್ನು ಹೊಂದಿದೆ. ಇದರ ಪ್ರಕಾರವಾಗಿ ಎಟಿಎಂಗಳಲ್ಲಿ ಹಣ ಪಡೆಯಲು ಕಾರ್ಡ್‍ಗಳಿಲ್ಲದೇ ಈ ನೂತನ ಆಯ್ಕೆಯನ್ನು ಒದಗಿಸುವಂತೆ ಬ್ಯಾಂಕ್‍ಗಳು ಹಾಗೂ ಎಟಿಎಂ ಆಪರೇಟರ್‌ಗಳನ್ನು ಆರ್‌ಬಿಐ ಕೇಳಿದೆ. ಈಗಾಗಲೇ ಹಲವು ಬ್ಯಾಂಕ್‍ಗಳು ಮೊಬೈಲ್ ಆ್ಯಪ್‍ಗಳನ್ನು ಉಪಯೋಗಿಸಿಕೊಂಡು ಎಟಿಎಂಗಳಲ್ಲಿ ಡೆಬಿಟ್ ಕಾರ್ಡ್ ಅಥವಾ ಕ್ರೆಡಿಟ್ ಕಾರ್ಡ್ ಇಲ್ಲದೇ ಹಣವನ್ನು ಪಡೆಯುವ ಅವಕಾಶವನ್ನು ಗ್ರಾಹಕರಿಗೆ ನೀಡಿದೆ.

    ಯಾಕೆ ಕ್ಯೂ ಆರ್ ಕೋಡ್?: ಜಾಗತಿಕ ಚಿಪ್‍ಗಳ ಕೊರತೆಯಿಂದಾಗಿ ಕಾರ್ಡ್ ವಿತರಣೆಯ ಸಮಸ್ಯೆಯನ್ನು ಎದುರಿಸುತ್ತಿದೆ. ಇದರಿಂದಾಗಿ ಅನೇಕ ಬಾರಿ ಕಾರ್ಡ್ ವಿತರಣೆಯು ವಿಳಂಬವಾಗುತ್ತದೆ. ಇದರಿಂದಾಗಿ ಮೊಬೈಲ್ ಫೋನ್‍ಗಳಲ್ಲಿ ಕ್ಯೂ ಆರ್ ಕೋಡ್‍ನ್ನು ಬಳಸುವಾಗ ಕಾರ್ಡ್‍ಗಳನ್ನು ಮರುಪಡೆಯಲು ಸಹಾಯವಾಗುತ್ತದೆ.

    ಈ ಹಿಂದೆ ಕಾರ್ಡ್‍ಗಳಲ್ಲಿ ಪಿನ್‍ಕೋಡ್ ಕೋಡ್ ನೀಡದೇ ಎಟಿಎಂ ಮೂಲಕ ಹಣವನ್ನು ಪಡೆಯುವ ಅವಕಾಶವನ್ನು ನೀಡುತ್ತು. ಆದರೆ ಅದು ಅಷ್ಟೊಂದು ಭದ್ರತೆಯನ್ನು ಹೊಂದಿರಲಿಲ್ಲ. ಆದರೆ ನೂತನ ಮೂಬೈಲ್ ಮೂಲಕ ಹಣ ತೆಗೆಯುವ ಆಯ್ಕೆಯು ಹೆಚ್ಚು ಭದ್ರತೆಯನ್ನು ಹೊಂದಿದೆ ಹಾಗೂ ಸುರಕ್ಷತೆಯನ್ನು ಹೊಂದಿದೆ. ಇದನ್ನೂ ಓದಿ: ಜನರ ದುಡ್ಡಲ್ಲಿ ಜನಪ್ರತಿನಿಧಿಗಳ ಜಾತ್ರೆ – ಕಡಿಮೆ ದರದ ಪ್ಲಾನ್ ಇದ್ದರೂ ಸಾವಿರಾರು ರೂ. ಫೋನ್ ಬಿಲ್!

    ಕ್ಯೂಆರ್ ಕೋಡ್‍ಗಳ ಮೂಲಕ ಹಣವನ್ನು ಪಡೆಯುವುದರಿಂದ ಡಿಜಿಟಲ್ ಇಂಡಿಯಾಕ್ಕೆ ಮತ್ತೊಂದು ಶಕ್ತಿ ನೀಡಿದಂತಾಗುತ್ತದೆ. ಕ್ಯೂಆರ್ ಸ್ಕ್ಯಾನ್ ಮಾಡಲು ಬ್ಯಾಂಕುಗಳಿಗೆ ಕಷ್ಟದ ಕೆಲಸವಲ್ಲ. ಈಗ ಇರುವ ಸಾಫ್ಟ್‌ವೇರ್ ಅಪ್‍ಡೇಟ್ ಮಾಡಿದರೆ ಸಾಕಾಗುತ್ತದೆ. ಹೀಗಾಗಿ ಶೀಘ್ರವೇ ಇದು ಜಾರಿಯಾಗುವ ಸಾಧ್ಯತೆಯಿದೆ. ಇದನ್ನೂ ಓದಿ: ಎಸ್‍ಬಿಐನಲ್ಲಿ 10 ಸಾವಿರಕ್ಕೂ ಹೆಚ್ಚು ಹಣ ಡ್ರಾ ಮಾಡಲು OTP ಅಪ್ಲೈ

  • ಮದುವೆ ಕಾರ್ಡ್ ಅಲ್ಲ, ಇದು ಕಲ್ಲಂಗಡಿ ಕಾರ್ಡ್

    ಮದುವೆ ಕಾರ್ಡ್ ಅಲ್ಲ, ಇದು ಕಲ್ಲಂಗಡಿ ಕಾರ್ಡ್

    ಬಳ್ಳಾರಿ: ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ತಮ್ಮ ಮದುವೆಯ ವೆಡ್ಡಿಂಗ್ ಕಾರ್ಡ್ ನಲ್ಲಿ ತಮ್ಮದೇ ಆದ ವಿಶೇಷ ಕಲ್ಪನೆ ಇರುತ್ತದೆ. ಸಾವಿರಾರು ರೂಪಾಯಿ ಖರ್ಚು ಮಾಡಿ ವೆಡ್ಡಿಂಗ್ ಕಾರ್ಡ್ ಮಾಡೋ ಬದಲು ಕಾರ್ಡಿ ಗೊಂದು ಅರ್ಥವಿರಬೇಕೆಂದು ಬಳ್ಳಾರಿಯಲ್ಲಿ ಪ್ರಾಧ್ಯಾಪಕ ತಮ್ಮ ಮದುವೆ ಕಾರ್ಡ್ ನ್ನು ಚಿಕ್ಕದಾಗಿ ಮಾಡಿದ್ದಾರೆ. ಬಳಿಕ ಅದನ್ನು ಕಲ್ಲಂಗಡಿ ಹಣ್ಣಿಗೆ ಅಂಟಿಸಿ ನೀಡುವ ಮೂಲಕ ಬಳ್ಳಾರಿ ಬಿಸಿಲಿಗೆ ಬಳಲಿದ ಜನರನ್ನು ಕೂಲ್ ಕೂಲ್ ಮಾಡಿದ್ದಾರೆ.

    ಖಾಸಗಿ ಕಾಲೇಜಿನ ಪ್ರಾಧ್ಯಾಪಕರಾಗಿರುವ ಸಾಯಿ ಸಂದೀಪ್ ಅವರು ಮದುವೆ ಕಾರ್ಡ್ ಅನ್ನು ಕಲ್ಲಂಗಡಿಯ ಮೇಲೆ ಅಂಟಿಸಿದ್ದಾರೆ. ಇವರ ಮದುವೆ ಮೇ 9ರಂದು ಬಳ್ಳಾರಿಯ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ.

    ನನ್ನ ಮದುವೆ ಕಾರ್ಡ್ ನ್ನು ಡಿಫರೆಂಟಾಗಿ ಮಾಡಬೇಕೆನ್ನುವ ಯೋಚನೆ ಬಂದಾಗ ಈ ಹಣ್ಣಿನ ಐಡಿಯಾ ಬಂತು. ಸಾವಿರಾರು ರೂಪಾಯಿ ಕೊಟ್ಟು ಮದುವೆ ಕಾರ್ಡ್ ಮಾಡಿಸಿದರೂ ಕೊನೆಗೆ ಅದು ಡಸ್ಟ್ ಬಿನ್‍ಗೆ ಸೇರುತ್ತದೆ. ಹೀಗಾಗಿ ನಾನು ನಮ್ಮ ಮದುವೆ ಕಾರ್ಡ್ ನ್ನು ಸಣ್ಣ ಸ್ಟಿಕ್ಕರ್ ಮಾದರಿ ಮಾಡಿಸಿ ಅದನ್ನು ಕಲ್ಲಂಗಡಿ ಹಣ್ಣಿಗೆ ಅಂಟಿಸಿ ನೀಡುತ್ತಿದ್ದೇನೆ ಎಂದು ಹೇಳಿದ್ದಾರೆ. ಸ್ಟಿಕ್ಕರ್ ತೆಗೆದು ಕ್ಯಾಲೆಂಡರ್‌ಗೆ ಅಂಟಿಸಿ ಹಣ್ಣು ತಿಂದು ಹೊಟ್ಟೆ ತಂಪು ಮಾಡಿಕೊಂಡು ಮದುವೆ ಬನ್ನಿ ಎನ್ನುವುದು ಸಾಯಿ ಸಂದೀಪ್ ಉದ್ದೇಶವಾಗಿದೆ.

    ಸಾಯಿ ಸಂದೀಪ್ ಮೇ. 9ರಂದು ಬಳ್ಳಾರಿಯ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ವಧು ತೇಜಸ್ವಿನಿ ಅವರ ಕೈಹಿಡಿಯಲಿದ್ದಾರೆ. ಈಗಾಗಲೇ 600 ಹಣ್ಣುಗಳನ್ನು ಹಂಚಿದ್ದು, ಇನ್ನೂ 200 ಹಣ್ಣು ಹಂಚೋದು ಬಾಕಿ ಇದೆ. ಕಾರ್ಡ್ ಆದರೆ ಸಲೀಸಾಗಿ ತೆಗೆದುಕೊಂಡು ಹೋಗಬಹುದು ಹಣ್ಣನ್ನು ತೆಗೆದು ಕೊಂಡು ಹೋಗುವುದು ಒಂದಷ್ಟು ತೊಂದರೆಯಾಗುತ್ತದೆ ಎಂದು ಸಾಯಿ ಸಂದೀಪ್ ಮನೆಯವರು ಬೇಡವೆಂದಿದ್ದರು. ಆದರೆ ಸ್ನೇಹಿತರು ಸಪೋರ್ಟ್ ಮಾಡಿದ ಹಿನ್ನೆಲೆಯಲ್ಲಿ ತೊಂದರೆಯಾದರೂ ಸರಿ ಇದರಲ್ಲಿ ತೃಪ್ತಿ ಇದೆ ಎಂದು ಕಾರ್ಡ್ ಗಳನ್ನು ಹಂಚುತ್ತಿದ್ದಾರೆ ಎಂದು ವರನ ಸ್ನೇಹಿತ ಪವನ್ ತಿಳಿಸಿದ್ದಾರೆ.