Tag: ಕಾರ್ಗಿಲ್ ವಿಜಯ್ ದಿವಸ್

  • Kargil Vijay Diwas: ಹುತಾತ್ಮ ಯೋಧರಿಗೆ ರಾಜನಾಥ್‌ ಸಿಂಗ್‌ ನಮನ

    Kargil Vijay Diwas: ಹುತಾತ್ಮ ಯೋಧರಿಗೆ ರಾಜನಾಥ್‌ ಸಿಂಗ್‌ ನಮನ

    ನವದೆಹಲಿ: ಪಾಕ್‌ ವಿರುದ್ಧ 1999ರ ಕಾರ್ಗಿಲ್‌ ಯುದ್ಧದಲ್ಲಿ ಭಾರತದ ವಿಜಯಕ್ಕಾಗಿ ಬಲಿದಾನಗೈದ ಹುತಾತ್ಮ ಯೋಧರಿಗೆ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ (Rajnath Singh) ನಮನ ಸಲ್ಲಿಸಿದ್ದಾರೆ.

    1999ರ ಜುಲೈ 26 ರಂದು ಲಡಾಖ್‌ನ ಕಾರ್ಗಿಲ್‌ನ ಹಿಮಾವೃತ ಶಿಖರಗಳ ಮೇಲೆ ಸುಮಾರು ಮೂರು ತಿಂಗಳ ಕಾಲ ಪಾಕಿಸ್ತಾನ ಮತ್ತು ಭಾರತದ ನಡುವೆ ಯುದ್ಧ ನಡೆಯಿತು. ಕೊನೆಗೆ ಭಾರತ ಜಯ ಸಾಧಿಸಿತು. ಇದನ್ನೂ ಓದಿ: ರಾಹುಲ್ ಗಾಂಧಿ ಒಬಿಸಿಗಳ ಪಾಲಿನ 2ನೇ ಅಂಬೇಡ್ಕರ್ – `ಕೈʼ ಮುಖಂಡ ಉದಿತ್ ರಾಜ್ ಬಣ್ಣನೆ

    ಪಾಕಿಸ್ತಾನದ ವಿರುದ್ಧ ಭಾರತ ಸಾಧಿಸಿದ ವಿಜಯದ ನೆನಪಿಗಾಗಿ ಈ ದಿನವನ್ನು ‘ಕಾರ್ಗಿಲ್ ವಿಜಯ್ ದಿವಸ್’ (Kargil Vijay Diwas) ಎಂದು ಆಚರಿಸಲಾಗುತ್ತದೆ.

    ಕಾರ್ಗಿಲ್ ವಿಜಯ್ ದಿವಸದಂದು, ನಮ್ಮ ರಾಷ್ಟ್ರದ ಗೌರವವನ್ನು ರಕ್ಷಿಸುವಲ್ಲಿ ಅಸಾಧಾರಣ ಧೈರ್ಯ, ದೃಢನಿಶ್ಚಯ ಪ್ರದರ್ಶಿಸಿದ ನಮ್ಮ ಧೈರ್ಯಶಾಲಿಗಳಿಗೆ ಹೃತ್ಪೂರ್ವಕ ಗೌರವಗಳನ್ನು ಸಲ್ಲಿಸುತ್ತೇನೆ ಎಂದು ರಾಜನಾಥ್‌ ಸಿಂಗ್‌ ತಿಳಿಸಿದ್ದಾರೆ. ಇದನ್ನೂ ಓದಿ: ಸೋನ್‌ಪ್ರಯಾಗ್ ಬಳಿ ಭೂಕುಸಿತ – ಕೇದಾರನಾಥ ಯಾತ್ರೆ ತಾತ್ಕಾಲಿಕ ಸ್ಥಗಿತ

    ಕಾರ್ಗಿಲ್ ಯುದ್ಧದ ಸಮಯದಲ್ಲಿ ಅವರ ಅತ್ಯುನ್ನತ ತ್ಯಾಗವು ನಮ್ಮ ಸಶಸ್ತ್ರ ಪಡೆಗಳ ಅಚಲವಾದ ದೃಢಸಂಕಲ್ಪದ ಶಾಶ್ವತ ಜ್ಞಾಪನೆಯಾಗಿದೆ. ಭಾರತವು ಅವರ ಸೇವೆಗೆ ಸದಾ ಋಣಿಯಾಗಿರುತ್ತದೆ ಎಂದು ಹೇಳಿದ್ದಾರೆ.

  • ಪ್ರಧಾನಿ ಮೋದಿಯಿಂದ ಕ್ಷುಲ್ಲಕ ರಾಜಕಾರಣ: ಖರ್ಗೆ ಕಿಡಿ

    ಪ್ರಧಾನಿ ಮೋದಿಯಿಂದ ಕ್ಷುಲ್ಲಕ ರಾಜಕಾರಣ: ಖರ್ಗೆ ಕಿಡಿ

    ನವದೆಹಲಿ: ಕಾರ್ಗಿಲ್ ವಿಜಯ್ ದಿವಸ್‌ (Kargil Vijay Diwas) ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಕ್ಷುಲ್ಲಕ ರಾಜಕಾರಣ ಮಾಡುತ್ತಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ವಾಗ್ದಾಳಿ ನಡೆಸಿದ್ದಾರೆ.

    ಶುಕ್ರವಾರ ಡ್ರಾಸ್‌ನಲ್ಲಿರುವ ಕಾರ್ಗಿಲ್ ಯುದ್ಧ ಸ್ಮಾರಕದಲ್ಲಿ ಹುತಾತ್ಮ ಯೋಧರಿಗೆ ನಮನ ಸಲ್ಲಿಸಿದ ಬಳಿಕ ಮೋದಿ ಅಗ್ನಿಪಥ್‌ ಯೋಜನೆ ಕುರಿತು ವಿಪಕ್ಷಗಳ ಟೀಕೆಗೆ ಟಾಂಗ್‌ ಕೊಟ್ಟಿದ್ದರು. ಸೇನೆಯನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದರು. ಮೋದಿ ಹೇಳಿಕೆಗೆ ಖರ್ಗೆ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಪಾಕ್ ದುಸ್ಸಾಹಸ ಮೆರೆದಾಗಲೆಲ್ಲಾ ಸೋಲು ಕಂಡಿದೆ: ಕಾರ್ಗಿಲ್‌ನಲ್ಲಿ ಮೋದಿ ಭಾಷಣ

    ಕಾರ್ಗಿಲ್ ವಿಜಯ್ ದಿವಸ್‌ನಲ್ಲಿ ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸುವಂತಹ ಸಂದರ್ಭಗಳಲ್ಲಿಯೂ ಪ್ರಧಾನಿ ನರೇಂದ್ರ ಮೋದಿಯವರು ಕ್ಷುಲ್ಲಕ ರಾಜಕಾರಣ ಮಾಡುತ್ತಿರುವುದು ಅತ್ಯಂತ ದುರದೃಷ್ಟಕರ ಮತ್ತು ಶೋಚನೀಯವಾಗಿದೆ ಎಂದು ಖರ್ಗೆ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ. ಈ ಹಿಂದೆ ಯಾವ ಪ್ರಧಾನಿಯೂ ಇದನ್ನು ಮಾಡಿಲ್ಲ ಎಂದು ಕುಟುಕಿದ್ದಾರೆ.

    ತಮ್ಮ ಸರ್ಕಾರವು ಸೇನೆಯ ಆಜ್ಞೆಯ ಮೇರೆಗೆ ಅಗ್ನಿಪಥ ಯೋಜನೆಯನ್ನು ಜಾರಿಗೆ ತಂದಿದೆ ಎಂಬ ಪ್ರಧಾನ ಮಂತ್ರಿಯ ಹೇಳಿಕೆಯು ಶುದ್ಧ ಸುಳ್ಳು. ನಮ್ಮ ವೀರ ಸಶಸ್ತ್ರ ಪಡೆಗಳಿಗೆ ಕ್ಷಮಿಸಲಾಗದ ಅವಮಾನ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: Kargil Vijay Diwas: ದೇಶಕ್ಕಾಗಿ ಬಲಿದಾನಗೈದ ಯೋಧರಿಗೆ ಪ್ರಧಾನಿ ಮೋದಿ ನಮನ

    ಮೋದಿ ಜೀ, ನೀವು ಸುಳ್ಳುಗಳನ್ನು ಹಬ್ಬಿಸುತ್ತಿದ್ದೀರಿ! ಮಾಜಿ ಸೇನಾ ಮುಖ್ಯಸ್ಥ (ನಿವೃತ್ತ) ಜನರಲ್ ಎಂಎಂ ನರವಾಣೆ ಅವರು ‘ಅಗ್ನಿಪಥ್‌ ಯೋಜನೆ’ಯಲ್ಲಿ 75% ನೇಮಕಾತಿಗಳನ್ನು ಖಾಯಂಗಾಗಿ ತೆಗೆದುಕೊಳ್ಳಬೇಕಾಗಿತ್ತು. 25% ಜನರನ್ನು 4 ವರ್ಷಗಳ ನಂತರ ಕೈಬಿಡಲಾಯಿತು ಎಂದು ದಾಖಲೆಯಲ್ಲಿ ಹೇಳಿದ್ದಾರೆ. ಆದರೆ ಮೋದಿ ಸರ್ಕಾರ ಇದಕ್ಕೆ ವ್ಯತಿರಿಕ್ತವಾಗಿದೆ. ಬಲವಂತವಾಗಿ ಈ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿತು ಎಂದು ಖರ್ಗೆ ಟೀಕಿಸಿದ್ದಾರೆ.

    ಮಾಜಿ ಸೇನಾ ಮುಖ್ಯಸ್ಥ (ನಿವೃತ್ತ) ಜನರಲ್ ಎಂಎಂ ನರವಾಣೆ ತಮ್ಮ ಪುಸ್ತಕದಲ್ಲಿ, ‘ಅಗ್ನಿಪಥ್ ಯೋಜನೆ’ಯು ಸೇನೆಗೆ ಮತ್ತು ನೌಕಾಪಡೆ ಹಾಗೂ ವಾಯುಸೇನೆಗೆ ಆಘಾತಕಾರಿಯಾಗಿದೆ ಎಂದು ಹೇಳಿರುವುದಾಗಿ ವರದಿಗಳು ಬಂದಿವೆ ಎಂದು ಖರ್ಗೆ ತಿಳಿಸಿದ್ದಾರೆ.

  • Kargil Vijay Diwas: ದೇಶಕ್ಕಾಗಿ ಬಲಿದಾನಗೈದ ಯೋಧರಿಗೆ ಪ್ರಧಾನಿ ಮೋದಿ ನಮನ

    Kargil Vijay Diwas: ದೇಶಕ್ಕಾಗಿ ಬಲಿದಾನಗೈದ ಯೋಧರಿಗೆ ಪ್ರಧಾನಿ ಮೋದಿ ನಮನ

    ನವದೆಹಲಿ: ಕಾರ್ಗಿಲ್ ಯುದ್ಧ ಸ್ಮಾರಕಕ್ಕೆ ಶುಕ್ರವಾರ ಬೆಳಗ್ಗೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಯೋಧರಿಗೆ ನಮನ ಸಲ್ಲಿಸಿದರು.

    ಕಾರ್ಗಿಲ್‌ ವಿಜಯ ದಿವಸ್‌ನ (Kargil Vijay Diwas) 25ನೇ ವಾರ್ಷಿಕೋತ್ಸವದ ಸ್ಮರಣಾರ್ಥ ಲಡಾಖ್‌ನಲ್ಲಿರುವ ಡ್ರಾಸ್‌ಗೆ ಪ್ರಧಾನಿ ತೆರಳಿದ್ದರು. ಪ್ರಧಾನಿ ಭೇಟಿಗೆ ಮುನ್ನ ದ್ರಾಸ್‌ನಲ್ಲಿರುವ ಕಾರ್ಗಿಲ್ ಯುದ್ಧ ಸ್ಮಾರಕದಲ್ಲಿ ಭದ್ರತಾ ಉದ್ದೇಶಗಳಿಗೆ ಅನುಗುಣವಾಗಿ ವ್ಯವಸ್ಥೆಗಳನ್ನು ಮಾಡಲಾಗಿತ್ತು. ಇದನ್ನೂ ಓದಿ: ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಗೆ ಯತ್ನ – ಆರೋಪಿಗೆ ಗುಂಡೇಟು ಕೊಟ್ಟ ಲೇಡಿ ಪಿಎಸ್‌ಐ

    ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ನಾಯಕರು ಸಹ ಕಾರ್ಗಿಲ್ ಯುದ್ಧದಲ್ಲಿ ಮಡಿದ ಸೈನಿಕರಿಗೆ ಶ್ರದ್ಧಾಂಜಲಿ ಅರ್ಪಿಸಿದರು.

    ಕಾರ್ಗಿಲ್ ಯುದ್ಧವು 25 ವರ್ಷಗಳ ಹಿಂದೆ ಅಂದರೆ 1999 ರ ಜುಲೈ 26 ರಂದು ಅಧಿಕೃತವಾಗಿ ಕೊನೆಗೊಂಡಿತ್ತು. ಈ ದಿನವನ್ನು ಕಾರ್ಗಿಲ್ ವಿಜಯ್ ದಿವಸ್ ಎಂದು ಆಚರಿಸಲಾಗುತ್ತದೆ. ಲಡಾಖ್‌ನ ಕಾರ್ಗಿಲ್ ಜಿಲ್ಲೆಯಲ್ಲಿ ಪಾಕಿಸ್ತಾನದ ವಿರುದ್ಧ ಭಾರತದ ವಿಜಯವನ್ನು ಈ ದಿನ ಸ್ಮರಿಸಲಾಗುತ್ತದೆ. ದೇಶಕ್ಕಾಗಿ ಯೋಧರ ಬಲಿದಾನವನ್ನು ನೆನಪಿಸಿಕೊಳ್ಳಲಾಗುತ್ತದೆ. ಇದನ್ನೂ ಓದಿ: ದರ್ಶನ್ ಬಿಡುಗಡೆಗಾಗಿ ಚಂಡಿಕಾ ಯಾಗ ಮಾಡಿದ ಪತ್ನಿ ವಿಜಯಲಕ್ಷ್ಮಿ

  • ಪಾಕ್ ಆಕ್ರಮಿತ ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿಯೇ ಇರುತ್ತೆ: ರಾಜನಾಥ್ ಸಿಂಗ್

    ಪಾಕ್ ಆಕ್ರಮಿತ ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿಯೇ ಇರುತ್ತೆ: ರಾಜನಾಥ್ ಸಿಂಗ್

    ಶ್ರೀನಗರ: ಪಾಕ್ ಆಕ್ರಮಿತ ಕಾಶ್ಮೀರ(ಪಿಒಕೆ) ಭಾರತದ ಅವಿಭಾಜ್ಯ ಅಂಗವಾಗಿಯೇ ಇರುತ್ತದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದರು.

    ಜಮ್ಮುವಿನಲ್ಲಿ ನಡೆದ ‘ಕಾರ್ಗಿಲ್ ವಿಜಯ್ ದಿವಸ್’ ಕಾರ್ಯಕ್ರಮಕ್ಕೆ ರಾಜನಾಥ್ ಸಿಂಗ್ ಆಗಮಿಸಿದ್ದರು. ಈ ವೇಳೆ ವೇದಿಕೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪಿಒಕೆ ಕುರಿತು ಸಂಸತ್ತಿನಲ್ಲಿ ಅಂಗೀಕರಿಸಿದ ನಿರ್ಣಯಕ್ಕೆ ನಾವು ಬದ್ಧರಾಗಿದ್ದೇವೆ. ಪಿಒಕೆ ಭಾರತದ ಅವಿಭಾಜ್ಯ ಅಂಗವಾಗಿದೆ ಮತ್ತು ಅದು ಯಾವಾಗಲೂ ಉಳಿಯುತ್ತದೆ. ಬಾಬಾ ಅಮರನಾಥ(ಶಿವನ ರೂಪ) ಮತ್ತು ಶಾರದಾ ಆರ್ಶಿವಾದ ಭಾರತದ ಮೇಲೆ ಇರಲು ಯಾವ ಶಕ್ತಿ ನಮ್ಮನ್ನು ನಿಯಂತ್ರಣ ಮಾಡಲು ಸಾಧ್ಯ ಎಂದು ಪ್ರಶ್ನೆ ಮಾಡಿದರು. ಇದನ್ನೂ ಓದಿ: ಯಕ್ಷಗಾನದ ಭಾಗವತಿಕೆ ಮೂಲಕ ರಾಷ್ಟ್ರಪತಿಗೆ ಸ್ವಾಗತ ಕೋರಿದ ಬಾಲೆ

    J&K is integral part of India, says Rajnath Singh on 'Kargil Vijay Divas' - The Hindu

    ಸಮರ್ಥ ಮತ್ತು ಆತ್ಮವಿಶ್ವಾಸದ ನವ ಭಾರತದ ಮೇಲೆ ದುಷ್ಟಕಣ್ಣುಗಳನ್ನು ಹಾಕುವ ಯಾರಿಗಾದರೂ ಸೂಕ್ತವಾದ ಪ್ರತ್ಯುತ್ತರವನ್ನು ನೀಡಲು ಸಜ್ಜಾಗುತ್ತಿದೆ. ಭಾರತವನ್ನು ಜಾಗತಿಕ ಮಹಾಶಕ್ತಿಯನ್ನಾಗಿ ಮಾಡುವುದು ಮಡಿದ ನಮ್ಮ ವೀರರಿಗೆ ಸೂಕ್ತವಾದ ಗೌರವವಾಗಿದೆ ಎಂದು ಕರೆ ಕೊಟ್ಟರು.

    ಭಾನುವಾರ ಜಮ್ಮುವಿನಲ್ಲಿ ಕಾರ್ಗಿಲ್ ವಿಜಯ್ ದಿವಸ್ ಅಂಗವಾಗಿ ಸ್ಮರಣಾರ್ಥ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ರಾಜನಾಥ್ ಸಿಂಗ್ ಅವರು ಭಾಗಿಯಾಗಿದ್ದು, ಸ್ವಾತಂತ್ರ್ಯದ ನಂತರ ದೇಶ ಸೇವೆಯಲ್ಲಿ ಪ್ರಾಣವನ್ನು ಅರ್ಪಿಸಿದ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಸಶಸ್ತ್ರ ಪಡೆಗಳ ಸಿಬ್ಬಂದಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಇದನ್ನೂ ಓದಿ:  ಬಿಗಿ ಭದ್ರತೆ ನಡೆದ ಮೊದಲ ಅಗ್ನಿಪಥ್ ಏರ್‌ಫೋರ್ಸ್ ನೇಮಕಾತಿ ಪರೀಕ್ಷೆ

    Live Tv
    [brid partner=56869869 player=32851 video=960834 autoplay=true]

  • ಕಾರ್ಗಿಲ್ ವಿಜಯ್ ದಿವಸ್ ಆಚರಣೆಗೆ ಸೇನೆ ಸಿದ್ಧತೆ

    ಕಾರ್ಗಿಲ್ ವಿಜಯ್ ದಿವಸ್ ಆಚರಣೆಗೆ ಸೇನೆ ಸಿದ್ಧತೆ

    ನವದೆಹಲಿ: ನಾಳೆಯಿಂದ ಮೂರು ದಿನಗಳ ಕಾಲ ಲಡಾಖ್‍ನ ದ್ರಾಸ್‍ನಲ್ಲಿರುವ ಕಾರ್ಗಿಲ್ ಯುದ್ಧ ಸ್ಮಾರಕದಲ್ಲಿ ಕಾರ್ಗಿಲ್ ವಿಜಯ್ ದಿವಸ್ ಆಚರಣೆಗೆ ಭಾರತೀಯ ಸೇನೆ ಸಿದ್ಧತೆ ನಡೆಸಿದೆ.

    ಪ್ರಮುಖ ಪರ್ವತಾರೋಹಿ, ಪದ್ಮಭೂಷಣ ಪುರಸ್ಕೃತರಾದ ಬಚ್ಚೇಂದ್ರಿಪಾಲ್ ನೇತೃತ್ವದಲ್ಲಿ ಕಳೆದ ಐದು ತಿಂಗಳಿಂದ ಸುದೀರ್ಘ ಹಿಮಾಲಯ ಯಾತ್ರೆ ನಡೆಸಿರುವ 50 ವರ್ಷ ದಾಟಿದ 12 ಮಹಿಳೆಯರ ತಂಡ ಪ್ರಮುಖ ಆಕರ್ಷಣೆ ಆಗಲಿದೆ. ವಿಜಯ್ ದಿವಸ್ ಭಾಗವಾಗಿ ಫಿಟ್@50ಪ್ಲಸ್ ಹೆಸರಿನಲ್ಲಿ ಅರುಣಾಚಲದ ಪಾಂಗ್-ಸೌ ಕಣಿವೆಯಲ್ಲಿ ಈ ಯಾತ್ರೆ ಶುರುವಾಗಿತ್ತು. ಒಟ್ಟು 37 ಪರ್ವತಗಳನ್ನು ದಾಟಿ, 4,977 ಕಿ.ಮೀ ಪ್ರಯಾಣಿಸಿರುವ ಅವರು ನಾಳೆ ಬೆಳಗ್ಗೆ ದ್ರಾಸ್ ತಲುಪಲಿದ್ದಾರೆ. ನಾಳಿದ್ದು ಈ ತಂಡವನ್ನು ಗೌರವಿಸಲಾಗುತ್ತದೆ. ಇದನ್ನೂ ಓದಿ: ಗಿಲ್, ಧವನ್ ಧಮಾಕ – ವಿಂಡೀಸ್ ವಿರುದ್ಧ ಭಾರತಕ್ಕೆ ರೋಚಕ ಜಯ

    1999ರಲ್ಲಿ ಕಾರ್ಗಿಲ್‍ಗೆ ಪಾಕಿಸ್ತಾನ ಸೇನೆ ಎಂಟ್ರಿ ಕೊಟ್ಟಿತ್ತು. ಭಾರತೀಯ ಸೇನೆ ಆಪರೇಷನ್ ವಿಜಯ್ ಕೈಗೊಂಡಿತ್ತು. ಮೇ ಯಿಂದ ಜುಲೈವರೆಗೂ ಈ ಯುದ್ಧ ನಡೆದಿತ್ತು. ಭಾರತೀಯ ಸೇನಾ ಪಡೆ ವಿರೋಚಿತ ಗೆಲುವು ಸಾಧಿಸಿತ್ತು. ಭಾರತದ 527 ಯೋಧರು ಹುತಾತ್ಮರಾಗಿದ್ದರು. ಇದನ್ನೂ ಓದಿ: ತೃಣಮೂಲ ಶಾಸಕ ಪಾರ್ಥ ಚಟರ್ಜಿ ಆಪ್ತೆ ಮನೆ ಮೇಲೆ ಇಡಿ ರೇಡ್ – 20 ಕೋಟಿ ವಶ

    Live Tv
    [brid partner=56869869 player=32851 video=960834 autoplay=true]

  • ದೇಶ ರಕ್ಷಣೆ ಮಾಡಿದ ಯೋಧರ ಸಾಹಸಗಾಥೆ ಯುವ ಪೀಳಿಗೆಗೆ ಸ್ಪೂರ್ತಿ – ಕಾರ್ಗಿಲ್ ಹುತಾತ್ಮರಿಗೆ ಸಿಎಂ ನಮನ

    ದೇಶ ರಕ್ಷಣೆ ಮಾಡಿದ ಯೋಧರ ಸಾಹಸಗಾಥೆ ಯುವ ಪೀಳಿಗೆಗೆ ಸ್ಪೂರ್ತಿ – ಕಾರ್ಗಿಲ್ ಹುತಾತ್ಮರಿಗೆ ಸಿಎಂ ನಮನ

    ಬೆಂಗಳೂರು: ಇಡೀ ದೇಶ ರಕ್ಷಣೆ ಮಾಡಿದ ಯೋಧರ ಸಾಹಸಗಾಥೆ ಯುವ ಪೀಳಿಗೆಗೆ ಎಂದಿಗೂ ಸ್ಪೂರ್ತಿ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಕಾರ್ಗಿಲ್ ಹುತಾತ್ಮರಿಗೆ ನಮನ ಸಲ್ಲಿಸಿದ್ದಾರೆ.

    ಇಂದು ಕಾರ್ಗಿಲ್ ವಿಜಯ್ ದಿವಸ್. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಮಿಲಿಟರಿ ಸ್ಮಾರಕದಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಕಾರ್ಗಿಲ್ ಹುತಾತ್ಮರಿಗೆ ನಮನ ಸಲ್ಲಿಸಿದ್ದಾರೆ. ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯಿಂದ ಕಾರ್ಗಿಲ್ ವಿಜಯ್ ದಿವಸ್ ಹಿನ್ನೆಲೆಯಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸಿಎಂ ಯಡಿಯೂರಪ್ಪ ಅವರಿಗೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಸಾಥ್ ನೀಡಿದ್ದರು.

    ಕಾರ್ಗಿಲ್ ವಿಜಯ್ ದಿವಸ್ ಉದ್ದೇಶಿಸಿ ಮಾತನಾಡಿದ ಸಿಎಂ ಯಡಿಯೂರಪ್ಪ, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯಿಂದ ಆಯೋಜಿಸಿರುವ ಕಾರ್ಗಿಲ್ ವಿಜಯ್ ದಿವಸ್‍ನಲ್ಲಿ ಹೆಮ್ಮೆಯಿಂದ ಪಾಲ್ಗೊಂಡಿದ್ದೇನೆ. ಭಾರತ ಮಾತೆಯ ರಕ್ಷಣೆಗಾಗಿ ತಮ್ಮ ಜೀವವನ್ನೇ ಸಮರ್ಪಿಸಿಕೊಂಡ ಭಾರತೀಯ ಯೋಧರ ಶೌರ್ಯ ಮತ್ತು ತ್ಯಾಗಕ್ಕೆ ಸದಾ ಕೃತಜ್ಞರಾಗಿದ್ದೇವೆ ಎಂದರು.

    ನಮ್ಮ ದೇಶದ ಅವಿಭಾಜ್ಯ ಅಂಗವಾದ ಜಮ್ಮು ಮತ್ತು ಕಾಶ್ಮೀರದಲ್ಲಿನ ಕಾರ್ಗಿಲ್ ಪ್ರದೇಶವನ್ನು ಪಾಕಿಸ್ತಾನದ ಸೇನಾ ಪಡೆಗಳು 1999ರಲ್ಲಿ ಆಕ್ರಮಿಸಿಕೊಂಡಿದ್ದವು. ಆಗ ನಮ್ಮ ಯೋಧರು 1999 ರ ಮೇ 5 ರಿಂದ ಜುಲೈ 26 ವರೆಗೆ ಸತತ ಹೋರಾಟ ನಡೆಸಿ ಈ ಪ್ರದೇಶವನ್ನು ವಶಪಡಿಸಿಕೊಂಡರು. ಕೊನೆಗೆ ಶತ್ರುಗಳನ್ನು ಹಿಮ್ಮೆಟ್ಟಿಸಿ ನಮ್ಮ ಯೋಧರು ವಿಜಯಿಯಾದರು ಎಂದು ಕಾರ್ಗಿಲ್ ಯುದ್ಧದ ಬಗ್ಗೆ ಮಾತನಾಡಿದರು.

    ಕರ್ನಾಟಕದ 16 ಸೈನಿಕರು ಸೇರಿದಂತೆ ಒಟ್ಟು 527 ಸೈನಿಕರು ತಮ್ಮ ಪ್ರಾಣವನ್ನು ಬಲಿಕೊಟ್ಟಿದ್ದಾರೆ. ಇಡೀ ದೇಶ ರಕ್ಷಣೆ ಮಾಡಿದ ಯೋಧರ ಸಾಹಸಗಾಥೆ ಯುವ ಪೀಳಿಗೆಗೆ ಎಂದಿಗೂ ಸ್ಪೂರ್ತಿ. ಪ್ರವಾಹ, ಭೂಕಂಪ, ಸುನಾಮಿಯಂತ ವಿಪತ್ತಿನಲ್ಲಿ ನಾಡಿನ ರಕ್ಷಣೆಗೆ ಧಾವಿಸುವ ಯೋಧರ ಸಾಹಸ ಅನುಕರಣೀಯ. ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಯೋಧರ ಕುಟುಂಬದೊಂದಿಗೆ ನಾವಿದ್ದೇವೆ. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಕೆಚ್ಚೆದೆಯ ಯೋಧರ ಪರಂಪರೆಯನ್ನು ಮುಂದುವರಿಸುವ ಪಣ ತೊಡೋಣ ಎಂದು ಸಿಎಂ ಯಡಿಯೂರಪ್ಪ ಹೇಳಿದರು.

  • 21ನೇ ವರ್ಷದ ಕಾರ್ಗಿಲ್ ವಿಜಯ್ ದಿವಸ್ ಆಚರಣೆ

    21ನೇ ವರ್ಷದ ಕಾರ್ಗಿಲ್ ವಿಜಯ್ ದಿವಸ್ ಆಚರಣೆ

    ನವದೆಹಲಿ: ಇಂದು ದೇಶಾದ್ಯಂತ ಕಾರ್ಗಿಲ್ ವಿಜಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ಕಾರ್ಗಿಲ್ ಯುದ್ಧದಲ್ಲಿ ಮಡಿದ ಸೈನಿಕರಿಗೆ ಭಾರತೀಯರು ಗೌರವ ಸಲ್ಲಿಸುತ್ತಿದ್ದಾರೆ.

    ಜುಲೈ 26 ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧ ಭಾರತೀಯ ಸೈನಿಕರು ವಿಜಯಪತಾಕೆಯನ್ನು ಹಾರಿಸಿದ ದಿನವಾಗಿದೆ. ಅಂದರೆ 1999ರ ಜುಲೈ 26ರಂದು 60 ದಿನಗಳ ಕಾರ್ಗಿಲ್ ಕದನ ಅಂತ್ಯವಾಗಿತ್ತು. ಪಾಕ್ ಮೇಲೆ ಭಾರತೀಯ ಯೋಧರು ವಿಜಯ ಸಾಧಿಸಿದ ಸ್ಮರಣಾರ್ಥ ಇಂದು ದೇಶದೆಲ್ಲೆಡೆ ‘ಕಾರ್ಗಿಲ್ ವಿಜಯ್ ದಿವಸ್’ ಆಚರಣೆ ಮಾಡಲಾಗುತ್ತಿದೆ.

    https://twitter.com/adgpi/status/1287199749561409536

    ಭಾರತೀಯ ಸೈನ್ಯದ ಶೌರ್ಯ, ಸೈನಿಕರ ಸಾಹಸವನ್ನು ಜಗತ್ತಿಗೆ ಪರಿಚಯಿಸಿದ್ದು, ಕಾರ್ಗಿಲ್ ಯುದ್ಧ. ಹೀಗಾಗಿ ಪ್ರತಿ ವರ್ಷ ಜುಲೈ 26ರಂದು ಸಂಭ್ರಮದಿಂದ ಭಾರತೀಯರು ಆಚರಿಸುತ್ತಾರೆ. ಭಾರತೀಯರು ಸೋಶಿಯಲ್ ಮೀಡಿಯಾದ ಮೂಲಕ ಕಾರ್ಗಿಲ್ ಯುದ್ಧದಲ್ಲಿ ಮಡಿದ ಸೈನಿಕರಿಗೆ ಗೌರವ ಸಲ್ಲಿಸುತ್ತಿದ್ದಾರೆ.

    ಏನಿದು ಕಾರ್ಗಿಲ್ ವಿಜಯ್ ದಿವಸ್?
    1999ರ ಮೇ ಮತ್ತು ಜುಲೈನ 2 ತಿಂಗಳುಗಳ ನಡುವೆ ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆದ ಯುದ್ಧವೇ ಕಾರ್ಗಿಲ್ ಯುದ್ಧ. ಈ ಯುದ್ಧದಲ್ಲಿ ಪಾಕಿಸ್ತಾನದ ಸೈನಿಕರು ಅಕ್ರಮವಾಗಿ ಕಾಶ್ಮೀರದ ಕಾರ್ಗಿಲ್ ಸೇರಿದಂತೆ ಬಹುತೇಕ ಅಂತರಾಷ್ಟ್ರೀಯ ಗಡಿ ನಿಯಂತ್ರಣ ರೇಖೆಯ ಭಾಗಗಳನ್ನು ಆಕ್ರಮಿಸಿಕೊಂಡಿದ್ದರು.

    ಪಾಕ್ ಸೈನಿಕರು ಅಕ್ರಮವಾಗಿ ಆಕ್ರಮಿಸಿಕೊಂಡಿದ್ದ ಕಾರ್ಗಿಲ್ ವಿಭಾಗವನ್ನು ಪುನಃ ಕೈವಶ ಮಾಡಿಕೊಳ್ಳಲು ಭಾರತ ‘ಆಪರೇಷನ್ ವಿಜಯ’ ಎಂಬ ಕಾರ್ಯಾಚರಣೆಯನ್ನು ನಡೆಸಿ ಜುಲೈನ 26ರಂದು ಯಶಸ್ವಿಯಾಗಿ ತನ್ನ ತೆಕ್ಕೆಗೆ ತೆಗೆದುಕೊಂಡಿತ್ತು. ಕಾರ್ಗಿಲ್ ಯುದ್ಧದಲ್ಲಿ ಸುಮಾರು 527 ಸೈನಿಕರು ದೇಶಕ್ಕಾಗಿ ತಮ್ಮ ಬಲಿದಾನವನ್ನೇ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಅಂದಿನಿಂದ ಜುಲೈ 26ರಂದು ಕಾರ್ಗಿಲ್ ಹೋರಾಟದಲ್ಲಿ ವೀರಮರಣನ್ನಪ್ಪಿದ ಯೋಧರಿಗೆ ಗೌರವ ಸಲ್ಲಿಸಲು ಈ ವಿಜಯ್ ದಿವಸ್ ಅನ್ನು ಆಚರಣೆ ಮಾಡುತ್ತಾ ಸೇನೆ ಬರುತ್ತಿದೆ.

  • ಕಾರ್ಗಿಲ್ ವಿಜಯೋತ್ಸವ ಆಚರಿಸುತ್ತಾ ಪಾಕಿಗೆ ಖಡಕ್ ಎಚ್ಚರಿಕೆ ಕೊಟ್ಟ ಭಾರತೀಯ ಸೇನೆ

    ಕಾರ್ಗಿಲ್ ವಿಜಯೋತ್ಸವ ಆಚರಿಸುತ್ತಾ ಪಾಕಿಗೆ ಖಡಕ್ ಎಚ್ಚರಿಕೆ ಕೊಟ್ಟ ಭಾರತೀಯ ಸೇನೆ

    ಶ್ರೀನಗರ: ಭಾರತದ ಗಡಿ ನಿಯಂತ್ರಣ ರೇಖೆಯಲ್ಲಿ ಉಗ್ರರು ನುಸುಳಲು ಮುಂದುವರಿಸಿದರೆ ಅದಕ್ಕೆ ತಕ್ಕ ಉತ್ತರ ಕೊಡುತ್ತೇವೆ, ಶವಗಳನ್ನು ವಾಪಸ್ ಪಡೆಯಲು ಸಿದ್ಧರಾಗಿರಿ ಎಂದು ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

    ಕಾರ್ಗಿಲ್ ವಿಜಯ್ ದಿವಸ್ ಹಿನ್ನೆಲೆ ಮಾಧ್ಯಮಗಳ ಜೊತೆ ಮಾತನಾಡಿದ ರಾವತ್ ಅವರು, ಯಾವುದೇ ದುಸ್ಸಾಹಸ ಮಾಡಲು ಪ್ರಯತ್ನಿಸದಿರಿ, ಭಾರತದ ಗಡಿಯೊಳಗೆ ನುಗ್ಗಲು ಪ್ರಯತ್ನಿಸಿದರೆ ಅದಕ್ಕೆ ತಕ್ಕ ಉತ್ತರ ಕೊಡಲು ಗಡಿಯಲ್ಲಿ ನಮ್ಮ ಸೇನೆ ಸದಾ ತಯಾರಾಗಿರುತ್ತದೆ. ಒಂದು ವೇಳೆ ದುಸ್ಸಾಹಸ ಮಾಡಿ, ಗಡಿಯಲ್ಲಿ ನುಸುಳಲು ಯತ್ನಿಸಿದರೆ, ಶವಗಳನ್ನು ಎಣಿಸಿ, ವಾಪಸ್ ನಿಮ್ಮ ದೇಶಕ್ಕೆ ತೆಗೆದುಕೊಂಡು ಹೋಗಬೇಕಾಗುತ್ತೆ ಎಂದು ಪಾಕಿಸ್ತಾನಕ್ಕೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ಇದನ್ನೂ ಓದಿ:ವಿಶೇಷ ಫೋಟೋ, ವಿಡಿಯೋದೊಂದಿಗೆ ಕಾರ್ಗಿಲ್ ವಿಜಯೋತ್ಸವ ನೆನೆದ ಮೋದಿ

    ಪುಲ್ವಾಮ ದಾಳಿಗೆ ನಾವು ಹೊಣೆಯಲ್ಲ ಎಂಬ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೇಳಿಕೆಗೆ ತಿರುಗೇಟು ನೀಡಿ, ನಮಗೆ ಸತ್ಯ ಏನೆಂದು ತಿಳಿದಿದೆ. ಹೀಗಾಗಿ ನಾವು ಈ ರೀತಿ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡುವುದಿಲ್ಲ. ನಿಜಾಂಶ ಏನೆಂದು ನಮಗೂ ಹಾಗೂ ನಮ್ಮ ಸಂಸ್ಥೆಗೂ ತಿಳಿದಿದೆ. ಪುಲ್ವಾಮದಲ್ಲಿ ಏನಾಯ್ತು ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಮ್ಮ ಗುಪ್ತಚರ ಇಲಾಖೆ ಕಲೆಹಾಕಿದೆ. ಇಷ್ಟನ್ನು ಮಾತ್ರ ನಾನು ಹೇಳಲು ಇಚ್ಛಿಸುತ್ತೇನೆ ಎಂದು ಮಾತಿನ ಚಾಟಿ ಬೀಸಿದ್ದಾರೆ.

    ನೆರೆಯ ಪಾಕಿಸ್ತಾನಕ್ಕೆ ಭಾರತೀಯ ಸೇನೆಯ ಮುಖ್ಯಸ್ಥರು ಎಚ್ಚರಿಕೆ ನೀಡುತ್ತಿರುವುದು ಇದೇ ಮೊದಲ ಬಾರಿ ಅಲ್ಲ. ಈ ಹಿಂದೆ ಕೂಡ ಭಾರತದ ಜೊತಗೆ ದುಸ್ಸಾಹಸ ಮೆರೆಯಲು ಬರಬೇಡಿ ಎಂದು ಎಚ್ಚರಿಕೆ ನೀಡಿದ್ದರು. ಅಲ್ಲದೆ ಪಾಕ್ ತನ್ನ ಹದ್ದುಮೀರಿದರೆ ಅದಕ್ಕೆ ತಕ್ಕ ಪ್ರತ್ಯತ್ತರವನ್ನು ನೀಡಬೇಕಾಗುತ್ತದೆ ಎಂದು ತಿಳಿಸಿದ್ದರು. ಇದನ್ನೂ ಓದಿ:ಕಾರ್ಗಿಲ್ ವಿಜಯೋತ್ಸವ – ದೇಶದೆಲ್ಲೆಡೆ ಮುಗಿಲು ಮುಟ್ಟಲಿದೆ ಸಂಭ್ರಮ

    ನಾವು ಎಚ್ಚರಿಕೆ ನೀಡಿದ್ದರೂ ಪಾಕಿಸ್ತಾನ ಸೈನ್ಯ ಭಾರತದ ಮೇಲೆ ದ್ವೇಷಕಾರುತ್ತ ಯುದ್ಧ, ದಾಳಿಗಳನ್ನು ಮಾಡುವ ಕುತಂತ್ರ ಮಾಡುತ್ತಲೇ ಇದೆ. ಉಗ್ರರಿಗೆ ನೆಲೆ ನೀಡಿ, ಭಾರತದೊಳಗೆ ನುಸುಳಲು, ದುಷ್ಕೃತ್ಯ ಮೆರೆಯಲು ಸಹಾಯ ಮಾಡುತ್ತಿದೆ. ಆದ್ರೆ ನಮ್ಮ ಯೋಧರು ದೇಶ ರಕ್ಷಣೆಗಾಗಿ ದೃಢವಾಗಿ ನಿಂತಿದ್ದಾರೆ. ದುಸ್ಸಾಹಸಕ್ಕೆ ತಕ್ಕ ತಿರುಗೇಟು ನೀಡುವುದಂತೂ ನಿಶ್ಚಿತ, ಅದರಲ್ಲಿ ಯಾವುದೇ ಅನುಮಾನ ಬೇಡ. ಸದ್ಯ ಗಡಿಯಲ್ಲಿ ಯಾರು ಒಳನುಸುಳಲು ಪ್ರಯತ್ನಿಸಿಲ್ಲ. ಎಲ್ಲ ಸರಿಯಾಗಿದೆ ಎಂದು ಹೇಳಿದ್ದಾರೆ.

    ದೇಶದೆಲ್ಲೆಡೆ 20ನೇ ವರ್ಷದ ಕಾರ್ಗಿಲ್ ವಿಜಯೋತ್ಸವ ಆಚರಿಸಲಾಗುತ್ತಿದೆ. ಈ ಹೆಮ್ಮೆಯ ದಿನವನ್ನು ನೆನೆದು ಪ್ರಧಾನಿ ಮೋದಿ ಸೇರಿದಂತೆ ಅನೇಕ ಗಣ್ಯರು ಯೋಧರ ಶೌರ್ಯ, ತ್ಯಾಗ, ಬಲಿದಾನಕ್ಕೆ ಸಲಂ ಎಂದಿದ್ದಾರೆ.

  • ಅದ್ಧೂರಿ ಕಾರ್ಗಿಲ್ ವಿಜಯೋತ್ಸವ- ಎರಡು ಸೇತುವೆ ಲೋಕಾರ್ಪಣೆ

    ಅದ್ಧೂರಿ ಕಾರ್ಗಿಲ್ ವಿಜಯೋತ್ಸವ- ಎರಡು ಸೇತುವೆ ಲೋಕಾರ್ಪಣೆ

    ನವದೆಹಲಿ: ಯೋಧರು ಕಾರ್ಗಿಲ್ ವಿಜಯೋತ್ಸವವವನ್ನು ಅದ್ಧೂರಿಯಾಗಿ ಆಚರಿಸುತ್ತಿದ್ದಾರೆ. ವಿಜಯೋತ್ಸವದ ಅಂಗವಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಜಮ್ಮು ಕಾಶ್ಮೀರದ ಕಾರ್ಗಿಲ್ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿದ್ದು, ಇದೇ ವೇಳೆ ಪರ್ವತಗಳಿಗೆ ಸಂಪರ್ಕ ಕಲ್ಪಿಸುವ ಎರಡು ಸೇತುವೆಗಳನ್ನು ಉದ್ಘಾಟಿಸಲಿದ್ದಾರೆ.

    ಆಪರೇಷನ್ ವಿಜಯ್‍ನ 20ನೇ ವರ್ಷಾಚರಣೆ ಹಿನ್ನೆಲೆ ಶನಿವಾರ ಜಮ್ಮು ಕಾಶ್ಮೀರದಲ್ಲಿರುವ ಕಾರ್ಗಿಲ್ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿ ರಾಜನಾಥ್ ಸಿಂಗ್ ಗೌರವ ಸಲ್ಲಿಸಿದರು. 1999ರಲ್ಲಿ ನಡೆದ ಕಾರ್ಗಿಲ್ ಯುದ್ಧದಲ್ಲಿ ಪಾಕ್ ಸೈನಿಕರು ಹಾಗೂ ಉಗ್ರರ ಒಳನುಸುಳುವಿಕೆ ವಿರುದ್ಧ ನಡೆದ ಯುದ್ಧದಲ್ಲಿ ಭಾರತ ಜಯಗಳಿಸಿತ್ತು.

    ಯುದ್ಧ ಸ್ಮಾರಕಕ್ಕೆ ಗೌರವ ಸಲ್ಲಿಸಿದ ನಂತರ ಬಾರ್ಡರ್ ರೋಡ್ಸ್ ಆರ್ಗನೈಸೇಶನ್ ಕಥುವಾ ಜಿಲ್ಲೆಯ ಉಝ್ ಹಾಗೂ ಸಂಬ ಜಿಲ್ಲೆಯ ಬಸಂತರ್‍ನಲ್ಲಿ ನಿರ್ಮಿಸಿರುವ ಎರಡು ಸೇತುವೆಗಳನ್ನು ರಾಷ್ಟ್ರಕ್ಕೆ ಸಮರ್ಪಣೆ ಮಾಡಲಿದ್ದಾರೆ. ಉಝ್ ಸೇತುವೆ 1 ಕಿ.ಮೀ ಉದ್ದವಿದ್ದು, ಬಸಂತರ್ ಸೇತುವೆ 617.4 ಕಿ.ಮೀ.ಉದ್ದವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    1999ರಲ್ಲಿ ಭಾರತೀಯ ಸೇನೆ ಅಕ್ರಮವಾಗಿ ಒಳ ನುಸುಳುತ್ತಿದ್ದ ಪಾಕಿಸ್ತಾನ ಸೈನಿಕರು ಹಾಗೂ ಉಗ್ರರ ವಿರುದ್ಧ ಹೋರಾಡಿ, ಶ್ರೀನಗರದ ಲೇಹ್ ಹೆದ್ದಾರಿಯನ್ನು ಗಮನದಲ್ಲಿರಿಸಿಕೊಂಡು ಪಾಕಿಸ್ತಾನ ಆಕ್ರಮಿಸಿದ್ದ ಹಲವು ಪರ್ವತ ಶಿಖರಗಳನ್ನು ವಶಪಡಿಸಿಕೊಂಡಿತ್ತು.

    ಜು.14ರ ಭಾರತದ ವಿಜಯ ದಿನದಂದು ರಾಜನಾಥ್ ಸಿಂಗ್ ಅವರು ದೆಹಲಿಯ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಭೆಟಿ ನೀಡಿ, ‘ವಿಜಯ ಜ್ವಾಲೆ’ಯನ್ನು ಹೊತ್ತಿಸಿದ್ದರು. ಜ್ವಾಲೆಯು ಜು.26 ರಂದು ಡ್ರಾಸ್ ತಲುಪಲಿದ್ದು, ಸುಮಾರು 9 ಪಟ್ಟಣಗಳು ಹಾಗೂ ನಗರಗಳನ್ನು ಹಾದು ಹೋಗಲಿದೆ. ನಂತರ ಕಾರ್ಗಿಲ್‍ಗೆ ತಲುಪಿ ಶಾಶ್ವತ ವಿಜಯ ಜ್ವಾಲೆ ಬಳಿ ವಿಲೀನಗೊಳಿಸಲಾಗುತ್ತದೆ.

    ವಿಜಯ ದಿನವನ್ನು ಭಾರತೀಯ ಸೇನೆ ವಿಜೃಂಭಣೆಯಿಂದ ಆಚರಿಸುತ್ತಿದ್ದು, ಈ ಮೂಲಕ ಆಪರೇಷನ್ ವಿಜಯ್‍ನಲ್ಲಿ ಭಾಗವಹಿಸಿದ ಯೋಧರಿಗೆ ನಮನ ಸಲ್ಲಿಸಲಾಗುತ್ತಿದೆ. ಆಪರೇಷನ್ ವಿಜಯ್‍ನ್ನು ‘ರಿಮೆಂಬರ್, ರೀಜಾಯ್ಸ್ ಆಂಡ್ ರಿನ್ಯೂ(ನೆನಪಿಡಿ, ಹೆಮ್ಮೆಪಡಿ ಮತ್ತು ನವೀಕರಿಸಿ)’ ಎಂಬ ಘೋಷವಾಕ್ಯದೊಂದಿಗೆ ಆಚರಿಸಲಾಗುತ್ತಿದೆ. ಅಲ್ಲದೆ, ಸೈನ್ಯದ ಮೂರು ಬೆಟಾಲಿಯನ್‍ಗಳು ಅಸಾಧ್ಯವಾಗದ ಸ್ಥಿಯಲ್ಲಿ ಹೋರಾಡಿದ ಶಿಖರಗಳಿಗೆ ದಂಡಯಾತ್ರೆ ಕೈಗೊಳ್ಳುತ್ತಿವೆ.

    ಕಾರ್ಗಿಲ್ ವಿಜಯ ದಿನದ ಅಂಗವಾಗಿ ಇಂಡೋ ಟಿಬೇಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಮತ್ತು ಬಿಎಸ್‍ಎಫ್ ಯೋಧರ ತಂಡಗಳು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೋಂಡಿದ್ದು, ಸೈನಿಕರು, ಪೊಲೀಸ್ ಹಾಗೂ ಅರೆಸೇನಾ ಪಡೆಗಳ ಧೈರ್ಯದ ಕಥೆಗಳನ್ನು ಪ್ರದರ್ಶಿಸಲಿವೆ. ಹೀಗಾಗಿ ವಿವಿಧ ಕಾರ್ಯಕ್ರಮಗಳನ್ನು ಸೇನೆ ಹಾಕಿಕೊಂಡಿದ್ದು, ಕಾರ್ಗಿಲ್ ವಿಜಯ ದಿನದ ಬಳಿ ಸಾವನ್ನಪ್ಪಿದ ಸೈನಿಕರ ಕುಟುಂಬ ಸದಸ್ಯರನ್ನು ಗೌರವಿಸಲಾಗುತ್ತಿದೆ.

    ಕಾರ್ಯಕ್ರಮಗಳ ಭಾಗವಾಗಿ ರಕ್ತದಾನ ಶಿಬಿರ, ಆರೋಗ್ಯ ಶಿಬಿರ, ಪ್ರೇರಣೆ ನೀಡುವ ಉಪನ್ಯಾಸ, ಶಾಲಾ ಮಕ್ಕಳಿಗೆ ಕಾರ್ಗಿಲ್ ಪ್ರದೇಶದ ಶೈಕ್ಷಣಿ ಪ್ರವಾಸವನ್ನು ಏರ್ಪಡಿಸಲಾಗಿದೆ. ಅಲ್ಲದೆ, ಕಾರ್ಗಿಲ್ ವಿಜಯದ ಕುರಿತು ರಕ್ಷಣಾ ಸಚಿವಾಲಯದಿಂದ ನಿರ್ಮಿಸಿದ 7 ನಿಮಿಷಗಳ ಕಿರು ಚಿತ್ರ, ಫೋಟೊ ಗ್ಯಾಲರಿ, ಸೈನಿಕರ ಶೌರ್ಯ ಬಿಂಬಿಸುವ ಚಿತ್ರಗಳನ್ನು ಪ್ರದರ್ಶಿಸಲಾಗುತ್ತಿದೆ. ಈ ಎಲ್ಲ ಕಾರ್ಯಕ್ರಮಗಳು ಜು.27ರ ವರೆಗೆ ನಡೆಯಲಿವೆ ಎಂದು ಇಂಡೋ ಟಿಬೇಟಿಯನ್ ಬಾರ್ಡರ್ ಪೊಲೀಸ್(ಐಟಿಬಿಪಿ) ವಕ್ತಾರ ವಿವೇಕ್ ಪಾಂಡೆ ತಿಳಿಸಿದ್ದಾರೆ.

  • ಕಾರ್ಗಿಲ್ ವಿಜಯ್ ದಿವಸ್ – ಏಷ್ಯಾದ ಅತಿದೊಡ್ಡ ನೌಕೆ ವೀಕ್ಷಿಸಿದ ವಿದ್ಯಾರ್ಥಿಗಳು

    ಕಾರ್ಗಿಲ್ ವಿಜಯ್ ದಿವಸ್ – ಏಷ್ಯಾದ ಅತಿದೊಡ್ಡ ನೌಕೆ ವೀಕ್ಷಿಸಿದ ವಿದ್ಯಾರ್ಥಿಗಳು

    ಕಾರವಾರ: ಕಾರ್ಗಿಲ್ ವಿಜಯ್ ದಿವಸದ ಆಚರಣೆಯ ಅಂಗವಾಗಿ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಅರಗಾದಲ್ಲಿರುವ ಕದಂಬ ನೌಕಾನೆಲೆಯಲ್ಲಿ ಇಂದು ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ನೌಕ ಹಡಗುಗಳನ್ನು ವೀಕ್ಷಿಸಲು ಅವಕಾಶ ಮಾಡಿಕೊಡಲಾಯಿತು.

    ಜಿಲ್ಲೆಯ ಜನರಲ್ಲದೇ ಹೊರರಾಜ್ಯದ ಜನರು ಇಂದು ಕಾರವಾರದ ಕದಂಬ ನೌಕಾನೆಲೆಗೆ ಆಗಮಿಸಿ ಐ.ಎನ್.ಎಸ್. ವಿಕ್ರಮಾದಿತ್ಯ ಹಾಗೂ ಸುವರ್ಣ ಯುದ್ಧ ನೌಕೆಯನ್ನು ವೀಕ್ಷಿಸುವ ಮೂಲಕ ಕಣ್ತುಬಿಂಕೊಂಡರು.

    ಪ್ರತಿ ವರ್ಷದಲ್ಲಿ ಒಂದು ಬಾರಿ ಮಾತ್ರ ಸಾರ್ವಜನಿಕರಿಗೆ ಏಷ್ಯಾದ ಅತಿದೊಡ್ಡ ಹಡಗು ವಿಕ್ರಮಾದಿತ್ಯ ಹಾಗೂ ನೌಕಾನೆಲೆಯನ್ನು ನೋಡಲು ಅವಕಾಶ ಕಲ್ಪಿಸಲಾಗುತ್ತದೆ. ಇಂದು ಒಂದೇ ದಿನದಲ್ಲಿ 15 ಸಾವಿರಕ್ಕೂ ಹೆಚ್ಚು ಜನರು ನೌಕಾನೆಲೆಗೆ ಭೇಟಿ ನೀಡಿದರು.